Roopa Gururaj Column: ಕಥಾ ಸರಿತ್ಸಾಗರ: ಸೌಂದರ್ಯದ ಜೊತೆಗೆ ಬುದ್ದಿವಂತಿಕೆಗೆ ಹೆಸರಾದ ಉಪಕೋಶೆ
ಪತಿ ಊರಲ್ಲಿಲ್ಲದ ಸಮಯವನ್ನು ಹೊಂಚುಹಾಕಿ, ಪಾಟಲೀಪುತ್ರ ನಗರದ ಅತ್ಯಂತ ಪ್ರಭಾವಿ ವ್ಯಕ್ತಿ ಗಳಾಗಿದ್ದ ರಾಜಪುರೋಹಿತ, ಪ್ರಧಾನ ದಂಡಾಧಿಕಾರಿ ಹಾಗೂ ಮಹಾವರ್ತಕ ಈ ಮೂವರೂ ಆಕೆಯ ಮೇಲೆ ದೃಷ್ಟಿ ನೆಟ್ಟರು. ಆಕೆಯ ಮನೆಗೆ ಬಂದು ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಾ, ತಮ್ಮ ಇಚ್ಛೆಗೆ ಒಪ್ಪದಿದ್ದರೆ ಅಪವಾದ ಹೊರಿಸಿ ಸಮಾಜದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕತೊಡಗಿದರು.
-
ಒಂದೊಳ್ಳೆ ಮಾತು
ಪಾಂಡಿತ್ಯಕ್ಕೆ ಹೆಸರಾಗಿದ್ದ ಮಹಾ ವಿದ್ವಾಂಸ ವರರುಚಿಯ ಪತ್ನಿ ಉಪಕೋಶೆ. ಆಕೆ ಕೇವಲ ಅದ್ಭುತ ಲಾವಣ್ಯವತಿಯಷ್ಟೇ ಅಲ್ಲ, ಧರ್ಮನಿಷ್ಠೆ ಮತ್ತು ತೀಕ್ಷ್ಣ ಬುದ್ಧಿ ವಂತಿಕೆಗೆ ಹೆಸರಾಗಿದ್ದಳು. ಒಮ್ಮೆ ವರರುಚಿಯು ಉನ್ನತ ವಿದ್ಯಾಭ್ಯಾಸ ಮತ್ತು ರಾಜಕಾರ್ಯಗಳಿಗಾಗಿ ದೂರದ ಹಿಮಾಲಯಕ್ಕೆ ತೆರಳಬೇಕಾ ಯಿತು.
ಪತಿ ಊರಲ್ಲಿಲ್ಲದ ಸಮಯವನ್ನು ಹೊಂಚುಹಾಕಿ, ಪಾಟಲೀಪುತ್ರ ನಗರದ ಅತ್ಯಂತ ಪ್ರಭಾವಿ ವ್ಯಕ್ತಿ ಗಳಾಗಿದ್ದ ರಾಜಪುರೋಹಿತ, ಪ್ರಧಾನ ದಂಡಾಧಿಕಾರಿ ಹಾಗೂ ಮಹಾವರ್ತಕ ಈ ಮೂವರೂ ಆಕೆಯ ಮೇಲೆ ದೃಷ್ಟಿ ನೆಟ್ಟರು. ಆಕೆಯ ಮನೆಗೆ ಬಂದು ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಾ, ತಮ್ಮ ಇಚ್ಛೆಗೆ ಒಪ್ಪದಿದ್ದರೆ ಅಪವಾದ ಹೊರಿಸಿ ಸಮಾಜದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕತೊಡಗಿದರು.
ಅಧಿಕಾರ ಮತ್ತು ಹಣದ ಮದದಲ್ಲಿದ್ದ ಆ ಪ್ರಭಾವಿಗಳನ್ನು ಸಮಾಜದ ಮುಂದೆ ಬೆತ್ತಲು ಮಾಡಬೇಕೆಂದು ಉಪಕೋಶೆ ನಿಶ್ಚಯಿಸಿದಳು. ಅವರೆಲ್ಲರ ಕಾಮದ ದೌರ್ಬಲ್ಯವನ್ನೇ ತನ್ನ ರಕ್ಷಣಾ ಅಸ್ತ್ರವನ್ನಾಗಿಸಿ ಕೊಂಡಳು. ಒಂದು ದಿನ ರಾತ್ರಿ, ಮೂವರಿಗೂ ಬೇರೆ ಬೇರೆ ಗಳಿಗೆಗಳಲ್ಲಿ ತನ್ನ ಮನೆಗೆ ಬರುವಂತೆ ರಹಸ್ಯವಾಗಿ ಆಹ್ವಾನವಿತ್ತಳು. ಮೊದಲು ರಾಜಪುರೋಹಿತನು ಬಂದನು. ಆತ ಒಳಗೆ ಬಂದು ಸರಸವಾಡಲು ಮುಂದಾದ ಕ್ಷಣವೇ, ಬಾಗಿಲು ಬಡಿಯುವ ಶಬ್ದವಾಯಿತು. ಉಪಕೋಶೆ ಗಾಬರಿಯಾದಂತೆ ನಟಿಸಿ, ಅಯ್ಯೋ, ನನ್ನ ಪತಿಯ ಸ್ನೇಹಿತರು ಬಂದಂತಿದೆ! ನೀವು ಗೌರವಾನ್ವಿತ ಪುರೋಹಿತರು, ಈ ಸ್ಥಿತಿಯಲ್ಲಿ ಕಂಡರೆ ನಿಮ್ಮ ಮರ್ಯಾದೆ ಹೋಗುತ್ತದೆ.
ಇದನ್ನೂ ಓದಿ: Roopa Gururaj Column: ಕಥಾಸರಿತ್ಸಾಗರ: ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯ ಕಥೆ
ದಯವಿಟ್ಟು ಈ ದೊಡ್ಡ ಮರದ ಪೆಟ್ಟಿಗೆಯೊಳಗೆ ಅಡಗಿ ಕುಳಿತುಕೊಳ್ಳಿ ಎಂದು ಹೇಳಿ ಆತನನ್ನು ಪೆಟ್ಟಿಗೆಗೆ ತಳ್ಳಿ ಬೀಗ ಹಾಕಿದಳು! ಸ್ವಲ್ಪ ಹೊತ್ತಿನಲ್ಲಿ ಪ್ರಧಾನ ದಂಡಾಧಿಕಾರಿ ಬಂದನು. ಆತನ ಸರದಿ ಬಂದಾಗಲೂ ಮತ್ತೊಮ್ಮೆ ಕೃತಕವಾಗಿ ಬಾಗಿಲು ತಟ್ಟಿಸಿ, ಆತನನ್ನೂ ಬೆದರಿಸಿ ನಮ್ಮ ವಿಳಾಸ ಎರಡನೆಯ ಪೆಟ್ಟಿಗೆಯಲ್ಲಿ ಕೂಡಿಹಾಕಿದಳು.
ತಡ ರಾತ್ರಿ ಬಂದ ಮಹಾವರ್ತಕನಿಗೂ ಇದೇ ಗತಿ ತಂದು ಮೂರನೆಯ ಪೆಟ್ಟಿಗೆಯೊಳಗೆ ಕೂಡಿ ಬೀಗ ಜಡಿದಳು. ಮಾರನೆಯ ದಿನ ಬೆಳಿಗ್ಗೆ, ಉಪಕೋಶೆಯು ರಾಜ ನಂದನ ಆಸ್ಥಾನಕ್ಕೆ ತೆರಳಿದಳು. ಪ್ರಭು, ನನ್ನ ಪತಿ ದೇಶಾಂತರ ಹೋದಾಗಿನಿಂದ ನಮ್ಮ ಮನೆಯಲ್ಲಿದ್ದ ವಂಶಪಾರಂಪರ್ಯದ ಮೂರು ಬೃಹತ್ ಪೆಟ್ಟಿ ಗೆಗಳಲ್ಲಿ ಅಡಗಿಸಿಟ್ಟಿದ್ದ ಬೆಲೆಬಾಳುವ ನಿಧಿಯ ಮೇಲೆ ಯಾರೋ ದುಷ್ಟರ ಕಣ್ಣು ಬಿದ್ದಿದೆ. ನನಗೆ ರಕ್ಷಣೆ ಇಲ್ಲವಾಗಿದೆ; ದಯವಿಟ್ಟು ಆ ಪೆಟ್ಟಿಗೆಗಳನ್ನು ನಿಮ್ಮ ಸಭೆಗೆ ತರಿಸಿ, ಸಾರ್ವಜನಿಕವಾಗಿ ಮಾರಾಟ ಮಾಡಿ ಆ ಹಣವನ್ನು ನನಗೆ ಕೊಡಿಸಿ ಎಂದು ವಿನಂತಿಸಿದಳು.
ರಾಜಾಜ್ಞೆಯಂತೆ ಭಟರು ಆ ಮೂರು ಭಾರ ವಾದ ಪೆಟ್ಟಿಗೆಗಳನ್ನು ಹೊತ್ತು ತಂದು ತುಂಬಿದ ರಾಜ ಸಭೆಯ ನಡುವೆ ಇಟ್ಟರು. ಎಲ್ಲ ಪ್ರಮುಖ ಮಂತ್ರಿ ಗಳು, ವಿದ್ವಾಂಸರು ನೆರೆದಿದ್ದ ಆ ಸಭೆಯಲ್ಲಿ, ಉಪ ಕೋಶೆಯ ಕೋರಿಕೆಯಂತೆ ಪೆಟ್ಟಿಗೆಗಳ ಬೀಗಗಳನ್ನು ತೆರೆಯಲಾಯಿತು. ಪೆಟ್ಟಿಗೆಗಳು ತೆರೆದ ಕ್ಷಣವೇ, ಇಡೀ ನಗರಕ್ಕೆ ನ್ಯಾಯ, ಧರ್ಮ ಮತ್ತು ಸದಾಚಾರ ಬೋಧನೆ ಮಾಡುತ್ತಿದ್ದ ನಗರ ಪುರೋಹಿತ, ನ್ಯಾಯಾಧೀಶ ಮತ್ತು ವರ್ತಕರು, ಕಪ್ಪುಮಸಿಯ ನಡುವೆ ಮುಖ ಮುಚ್ಚಿಕೊಂಡು ನಡುಗುತ್ತಾ ಹೊರಬಂದರು!
ಅವರನ್ನು ಕಂಡ ಇಡೀ ಸಭೆ ಆಘಾತ ಮತ್ತು ನಗೆಯ ಅಲೆಯೊಳಗೆ ಮುಳುಗಿತು. ಸ್ತ್ರೀಯ ಪಾವಿತ್ರ್ಯ ವನ್ನು ಭಂಗಮಾಡಲು ಹೋದ ಆ ಕಾಮು ಕರ ನಿಜವಾದ ಮುಖವಾಡ ರಾಜನ ಎದುರೇ ಕಳಚಿ ಬಿದ್ದಿತು. ಅವರ ಲಜ್ಜೆಗೆಟ್ಟ ನಡವಳಿಕೆಯನ್ನು ಕಂಡು ಕುಪಿತನಾದ ರಾಜನು ಅವರಿಗೆ ಕಠಿಣ ಶಿಕ್ಷೆ ವಿಧಿಸಿ, ಉಪಕೋಶೆಯ ಅದ್ಭುತ ಚಾತುರ್ಯ, ಧರ್ಮನಿಷ್ಠೆ ಮತ್ತು ಧೈರ್ಯವನ್ನು ತುಂಬು ಹೃದಯದಿಂದ ಶ್ಲಾಘಿಸಿ ಸನ್ಮಾನಿಸಿದನು.
ಸಮಾಜದಲ್ಲಿ ಉನ್ನತ ಸ್ಥಾನ, ಅಧಿಕಾರ ಅಥವಾ ಸೋಗಲಾಡಿತನದ ಮುಖವಾಡ ಹೊತ್ತ ವ್ಯಕ್ತಿಗಳು ಎದುರಾದಾಗ ಹೆದರಿ ಕುಸಿಯಬಾರದು. ಆಪತ್ತಿನ ಸಮಯದಲ್ಲಿ ಗಾಬರಿಯಾಗದೆ ಸಮಾಧಾನದ ಮನಸ್ಸಿನಿಂದ ಯೋಚಿಸಿದರೆ, ಕೆಟ್ಟವರ ಕುತಂತ್ರ ವನ್ನು ಅವರಿಗೇ ತಿರುಗಿಸಬಹುದು. ಇಂದಿನ ದಿನ ಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ಎಲ್ಲಿ ಹೋದರೂ ಅಲ್ಲಿ ಅವರನ್ನು ನಯವಾದ ಮಾತು ಗಳಿಂದ, ಅಥವಾ ಅಧಿಕಾರದಿಂದ ದಾರಿ ತಪ್ಪಿಸುವ ಹಲವಾರು ರೀತಿಯ ಜನ ನಮ್ಮ ಸುತ್ತಲೂ ಇರುತ್ತಾರೆ. ಧೈರ್ಯ ಕಳೆದುಕೊಳ್ಳದೆ ಅಂತಹ ಸಂದರ್ಭದಲ್ಲಿ ನಿಭಾಯಿಸಲು ನಮ್ಮ ಮಕ್ಕಳನ್ನು ನಾವು ಆತ್ಮಸ್ಥೈ ರ್ಯದಿಂದ ಬೆಳೆಸಬೇಕು.