ಸಂಪಾದಕರ ಸದ್ಯಶೋಧನೆ
‘ಮೊದಲು ನಗುವ ನಿಯಮ’ (The Rule of Laughing First) ಬಗ್ಗೆ ಕೇಳಿದ್ದೀರಾ? ಇದು ಹಾಸ್ಯ ಸಾಹಿತ್ಯ, ಭಾಷಾ ಚಮತ್ಕಾರ ಹಾಗೂ ಮಾನವನ ಸಂಭಾಷಣಾ ಮನೋವಿಜ್ಞಾನದ ಸ್ವಾರಸ್ಯಕರ ವಾದ ಮತ್ತು ವಿಡಂಬನಾತ್ಮಕವಾದ ಪರಿಕಲ್ಪನೆಯಾಗಿದೆ. ಹದಿನೆಂಟನೇ ಮತ್ತು ಹತ್ತೊಂಬತ್ತನೇ ಶತಮಾನದ ಇಂಗ್ಲಿಷ್ ವ್ಯಂಗ್ಯ ಸಾಹಿತ್ಯದಲ್ಲಿ, ವಿಶೇಷವಾಗಿ ಜೊನಾಥನ್ ಸ್ವಿಪ್ಟ್, ಥಾಮಸ್ ಶೆರಿಡನ್ ಹಾಗೂ ಚಾರ್ಲ್ಸ್ ವೆಸ್ಟ್‌ಮ್ಯಾಕೋಟ್ ಅವರ ‘ದಿ ಪನ್‌ಸ್ಟರ್ಸ್ ಪಾಕೆಟ್-ಬುಕ್’ನಂತಹ ಕೃತಿಗಳಲ್ಲಿ ಈ ನಿಯಮವನ್ನು ಶ್ಲೇಷಕಾರರ (Punsters) ಪರಮೋಚ್ಚ ರಕ್ಷಣಾ ಕವಚವೆಂದು ಬಣ್ಣಿಸಲಾಗಿದೆ.
ಸಭೆಯೊಂದರಲ್ಲಿ ತಾನು ಹೇಳಿದ ಹಾಸ್ಯ, ಶ್ಲೇಷೆ ಅಥವಾ ಜೋಕ್ ಎದುರಿದ್ದವರಿಗೆ ತಕ್ಷಣ ಅರ್ಥ ವಾಗದಿದ್ದಾಗ ಅಥವಾ ಅದು ಸಂಪೂರ್ಣವಾಗಿ ‘ಫ್ಲಾಪ್’ ಆದಾಗ ಉಂಟಾಗುವ ನೀರವ ಮುಜುಗರ ದಿಂದ ಪಾರಾಗಲು ರೂಪಿಸಲಾದ ಅತ್ಯಂತ ಚತುರ ಸಾಮಾಜಿಕ ತಂತ್ರವಿದು. ಈ ನಿಯಮದ ಮೂಲ ತತ್ವ ಅತ್ಯಂತ ಸರಳ ಹಾಗೂ ಪರಿಣಾಮಕಾರಿಯಾಗಿದೆ.
‘ನೀವು ಯಾವುದೇ ಶ್ಲೇಷೆ, ಚಮತ್ಕಾರಿಕ ಮಾತು ಅಥವಾ ಹಾಸ್ಯವನ್ನು ಹೇಳಿದ ತಕ್ಷಣ, ಸಭಿಕರು ನಗುತ್ತಾರೋ ಇಲ್ಲವೋ ಎಂಬುದನ್ನು ಕಾಯದೆ, ನೀವೇ ಮೊದಲು ಅತ್ಯಂತ ಗಟ್ಟಿಯಾಗಿ, ಆತ್ಮವಿಶ್ವಾಸದಿಂದ ನಗಬೇಕು.’ ಸಾಮಾನ್ಯವಾಗಿ ಹಾಸ್ಯ ಹೇಳುವವನು ತಾನು ಗಂಭೀರವಾಗಿದ್ದು ಇತರರನ್ನು ನಗಿಸಬೇಕು ಎಂಬುದು ಸಾಂಪ್ರದಾಯಿಕ ನಿಯಮ.
ಇದನ್ನೂ ಓದಿ: Vishweshwar Bhat Column: ಕಾಫ್ಕಾಯೆಸ್ಕ್ ಎಂದರೇನು ?
ಆದರೆ ಶ್ಲೇಷಕಾರನಿಗೆ ಈ ನಿಯಮ ತದ್ವಿರುದ್ಧವಾಗಿ ಅನ್ವಯಿಸುತ್ತದೆ. ಏಕೆಂದರೆ ಶ್ಲೇಷೆ ಎಂಬುದು ಕೇವಲ ಹಾಸ್ಯವಲ್ಲ, ಅದೊಂದು ಬೌದ್ಧಿಕ ಸವಾಲು. ಅದನ್ನು ಹೇಳಿದವನೇ ಮೊದಲು ನಗುವ ಮೂಲಕ ತನ್ನ ಮಾತಿನಲ್ಲಿ ಒಂದು ದೊಡ್ಡ ಗಹನವಾದ ಅರ್ಥವಿದೆ ಎಂಬ ಸಂದೇಶವನ್ನು ವಾತಾವರಣಕ್ಕೆ ಬಿತ್ತುತ್ತಾನೆ.
ಸಾಮಾಜಿಕ ಮನೋವಿeನದ ದೃಷ್ಟಿಯಿಂದ ಪರಿಶೀಲಿಸಿದಾಗ, ಈ ನಿಯಮವು ಮಾನವನ ಹಿಂಡು ಮನಸ್ಥಿತಿ (Herd Mentality) ಮತ್ತು ಸಾಮಾಜಿಕ ಅನುಕರಣೆಯನ್ನು ಅತ್ಯಂತ ಜಾಣ್ಮೆಯಿಂದ ಬಳಸಿ ಕೊಳ್ಳುತ್ತದೆ. ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಅತ್ಯಂತ ಆತ್ಮವಿಶ್ವಾಸದಿಂದ ಮತ್ತು ಗಟ್ಟಿಯಾಗಿ ನಕ್ಕಾಗ, ಸುತ್ತಲಿನ ಜನರಲ್ಲಿ ಒಂದು ರೀತಿಯ ಮಾನಸಿಕ ತಳಮಳ ಅಥವಾ ಅಂಜಿಕೆ ಶುರುವಾಗು ತ್ತದೆ.
‘ಇಲ್ಲಿ ಯಾವುದೋ ಆಳವಾದ ಶಬ್ದ ಚಮತ್ಕಾರವಿದೆ, ಅದು ನನಗೆ ಮಾತ್ರ ಅರ್ಥವಾಗಿಲ್ಲವೇನೋ, ನಾನು ಗಂಭೀರವಾಗಿ ಕುಳಿತರೆ ನನ್ನನ್ನು ಮೂರ್ಖ ಅಥವಾ ಅಶಿಕ್ಷಿತ ಎಂದು ಭಾವಿಸಿಯಾರೇನೋ’ ಎಂಬ ಕೀಳರಿಮೆ ಸಭಿಕರಲ್ಲಿ ಉಂಟಾಗುತ್ತದೆ.
ತಮ್ಮ ಮುಜುಗರವನ್ನು ಮುಚ್ಚಿಕೊಳ್ಳಲು ಮತ್ತು ತಾವು ಕೂಡ ಬುದ್ಧಿವಂತರೆಂದು ತೋರಿಸಿ ಕೊಳ್ಳಲು ಅವರು ಕೂಡ ಆ ನಗುವಿಗೆ ಧ್ವನಿಗೂಡಿಸಿ ನಗಲಾರಂಭಿಸುತ್ತಾರೆ. ಈ ತಂತ್ರವು ಹಾಸ್ಯ ಹೇಳಿದವನಿಗೆ ಒಂದು ಮಾನಸಿಕ ಮತ್ತು ನೈತಿಕ ಮೇಲುಗೈಯನ್ನು ಒದಗಿಸುತ್ತದೆ.
ಯಾವುದೇ ಒಂದು ಸಭೆಯಲ್ಲಿ ನೀರವ ಮೌನ ಆವರಿಸುವುದು ಸಂಭಾಷಣೆಯ ಅತ್ಯಂತ ಅಪಾಯಕಾರಿ ಕ್ಷಣ. ಆ ಮೌನವನ್ನು ಹಾಸ್ಯ ಹೇಳಿದವನೇ ತನ್ನ ಅಟ್ಟಹಾಸದಿಂದ ಮುರಿದು ಹಾಕಿದಾಗ, ಪರಿಸ್ಥಿತಿಯ ಸಂಪೂರ್ಣ ನಿಯಂತ್ರಣ ಅವನ ಕೈಗೆ ಬರುತ್ತದೆ. ಆತನ ಮುಖದಲ್ಲಿನ ವಿಜಯೋಸದ ನಗು ಎದುರಿಗಿರುವವರ ತಾರ್ಕಿಕ ವಿಮರ್ಶಾ ಶಕ್ತಿಯನ್ನು ಮಂಕಾಗಿಸುತ್ತದೆ.
ಜೋಕ್ ಕಳಪೆಯಾಗಿದ್ದರೂ ಸಹ, ಹೇಳಿದವನ ಉತ್ಸಾಹ ಮತ್ತು ನಗುವಿನ ವೇಗವೇ ಆ ಕಳಪೆತನ ವನ್ನು ಮುಚ್ಚಿಹಾಕಿ ಅದಕ್ಕೊಂದು ಕೃತಕ ಪ್ರಖರತೆಯನ್ನು ತಂದುಕೊಡುತ್ತದೆ. ‘ದಿ ಪನ್‌ಸ್ಟರ್ಸ್ ಪಾಕೆಟ್-ಬುಕ್’ ಕೃತಿಯಲ್ಲಿ ಈ ನಿಯಮಕ್ಕೆ ಪೂರಕವಾಗಿ ಮುಖಭಾವದ ನಾಟಕೀಯತೆ ಹೇಗಿರ ಬೇಕು ಎಂಬುದನ್ನು ಬಹಳ ವಿವರವಾಗಿ ವಿವರಿಸಲಾಗಿದೆ.
ಶ್ಲೇಷೆಯನ್ನು ಉದುರಿಸಿದ ಕ್ಷಣದ ಕಣ್ಣುಗಳನ್ನು ಮಿಟುಕಿಸುವುದು, ಪಕ್ಕದಲ್ಲಿದ್ದವರ ಭುಜ ತಟ್ಟುವುದು, ಹೊಟ್ಟೆ ಹುಣ್ಣಾಗುವಂತೆ ನಟಿಸುವುದು ಮತ್ತು ‘ಅರ್ಥವಾಯಿತೇ?’ ಎಂಬಂತೆ ವಿಚಿತ್ರ ಮುಖಭಾವ ತೋರುವುದು ಈ ನಿಯಮದ ಅವಿಭಾಜ್ಯ ಅಂಗಗಳಾಗಿವೆ. ಇಂಥ ಅತಿಯಾದ ನಟನೆಯು ಸಭಿಕರ ಮೇಲೆ ಮಾನಸಿಕ ಒತ್ತಡವನ್ನು ಹೇರುತ್ತದೆ. ಜೋಕ್ ಅರ್ಥವಾಗದಿದ್ದರೂ ಸಹ, ಈ ಸನ್ನಿವೇಶದ ವಿಲಕ್ಷಣತೆಗೆ ಜನರು ಮರುಳಾಗಿ ನಗಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ.
ಒಂದು ವೇಳೆ ಸಭೆಯಲ್ಲಿ ಯಾರಾದರೂ ಒಬ್ಬ ಧೈರ್ಯಶಾಲಿ ಅಥವಾ ಹಠಮಾರಿ ವ್ಯಕ್ತಿ ಮುಖ ಗಂಟಿಕ್ಕಿಕೊಂಡು, ‘ಇದರಲ್ಲಿ ನಗುವಂಥದ್ದು ಏನಿದೆ? ನನಗಂತೂ ಅರ್ಥವಾಗಲಿಲ್ಲ’ ಎಂದು ನೇರವಾಗಿ ಪ್ರಶ್ನಿಸಿದರೆ, ಅದಕ್ಕೂ ಈ ನಿಯಮದಲ್ಲಿ ಪರಿಹಾರವಿದೆ. ಆಗ ಹಾಸ್ಯ ಹೇಳಿದವನು ತನ್ನ ನಗುವನ್ನು ತಕ್ಷಣ ನಿಲ್ಲಿಸಬಾರದು. ಬದಲಿಗೆ ಎದುರಾಳಿಯ ಕಡೆಗೆ ಅತ್ಯಂತ ಕರುಣಾಜನಕ ಹಾಗೂ ಅನುಕಂಪದ ನೋಟವನ್ನು ಬೀರಬೇಕು.