ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಪುರಿ ಜಗನ್ನಾಥ ಸ್ವಾಮಿಯ ಅಪೂರ್ವ ದೇವಾಲಯ

ಪುರಿ ಜಗನ್ನಾಥ ದೇವಾಲಯವು ವಿಷ್ಣುವಿನ ಒಂದು ರೂಪವಾದ ಜಗನ್ನಾಥ ದೇವರು ಮತ್ತು ಅವನ ಇಬ್ಬರು ಸಹೋದರರಾದ ಬಲರಾಮ ಮತ್ತು ಸುಭದ್ರರಿಗೆ ಸಮರ್ಪಿತವಾದ ದೇವಾಲಯ. ಪ್ರಪಂಚ ದಲ್ಲೇ ಅತ್ಯಂತ ದೊಡ್ಡದಾದ ಪುರಿ ಜಗನ್ನಾಥ್ ಅಡುಗೆ ಮನೆಯ ವಿಶೇಷ ನೀವು ತಿಳಿಯಬೇಕು. ಬರೋ ಬ್ಬರಿ 1000 ಬಾಣಸಿಗರಿಂದ ಇಲ್ಲಿಯ ಅಡುಗೆ ತಯಾರಾಗತ್ತೆ. ಕಟ್ಟಿಗೆ ಒಲೆಯ ಮೇಲೆಯೇ ಮಹಾಪ್ರಸಾದ ಮಾಡುವುದು ಇಲ್ಲಿಯ ನಿಯಮ. ಅಲ್ಲಿ ಅಡುಗೆಗೆ ಬಳಸುವ ಕಟ್ಟಿಗೆ ಸಾಮಾನ್ಯದಲ್ಲ

ಒಂದೊಳ್ಳೆ ಮಾತು

rgururaj628@gmail.com

ಪುರಿ ಜಗನ್ನಾಥ ದೇವಾಲಯವು ವಿಷ್ಣುವಿನ ಒಂದು ರೂಪವಾದ ಜಗನ್ನಾಥ ದೇವರು ಮತ್ತು ಅವನ ಇಬ್ಬರು ಸಹೋದರರಾದ ಬಲರಾಮ ಮತ್ತು ಸುಭದ್ರರಿಗೆ ಸಮರ್ಪಿತವಾದ ದೇವಾಲಯ. ಪ್ರಪಂಚ ದಲ್ಲೇ ಅತ್ಯಂತ ದೊಡ್ಡದಾದ ಪುರಿ ಜಗನ್ನಾಥ್ ಅಡುಗೆ ಮನೆಯ ವಿಶೇಷ ನೀವು ತಿಳಿಯಬೇಕು. ಬರೋಬ್ಬರಿ 1000 ಬಾಣಸಿಗರಿಂದ ಇಲ್ಲಿಯ ಅಡುಗೆ ತಯಾರಾಗತ್ತೆ. ಕಟ್ಟಿಗೆ ಒಲೆಯ ಮೇಲೆಯೇ ಮಹಾಪ್ರಸಾದ ಮಾಡುವುದು ಇಲ್ಲಿಯ ನಿಯಮ. ಅಲ್ಲಿ ಅಡುಗೆಗೆ ಬಳಸುವ ಕಟ್ಟಿಗೆ ಸಾಮಾನ್ಯ ದಲ್ಲ. ಸ್ವತಃ ರಥೋತ್ಸವದ ಕಟ್ಟಿಗೆ ಇದಾಗಿದ್ದು, ಪ್ರತಿ ಬಾರಿಯೂ ಇಲ್ಲಿ ಹೊಸದೊಂದು ರಥ ನಿರ್ಮಾಣ ವಾಗಬೇಕೆಂಬ ನಿಯಮವಿದೆ.

ಹಳೆಯ ರಥದ ಕಟ್ಟಿಗೆಯನ್ನ ಅಡಿಗೆಗೆ ಬಳಿಸಬೇಕೆಂಬ ನಿಯಮ ಸಹ ಮೊದಲಿಂದಲೂ ಇದೆ. ಇಲ್ಲಿ ಅದೆಷ್ಟೇ ಭಕ್ತಾದಿಗಳು ಬಂದರೂ ಒಂದಿಷ್ಟು ಕಮ್ಮಿಯಾಗದಂತೆ ಒಂದಿಷ್ಟೂ ಉಳಿಯದೆ ಇರುವುದು ಆಶ್ಚರ್ಯ ಮತ್ತು ಪವಾಡವೇ ಎನ್ನಬಹುದು.

ಇಲ್ಲಿ ಜಗನ್ನಾಥ ಸ್ವಾಮಿಗೆ 56 ಬಗೆಯ ಬಕ್ಷ ಭೋಜನದ ನೈವೇದ್ಯವನ್ನ 6 ಮುಹೂರ್ತದಲ್ಲಿ ಸಮರ್ಪಿಸಲಾಗತ್ತೆ. ಅದು ಸಹ ಮಣ್ಣಿನ ಮಡಿಕೇಯಲ್ಲೇ ನಿತ್ಯ 56 ಬಗೆಯ ವಿಧ ಎಂಬುದಕ್ಕೂ ಒಂದು ಹಿನ್ನೆಲೆ ಇದೆ. ಶ್ರೀಕೃಷ್ಣ ವೃಂದಾವನದಲ್ಲಿ ಇದ್ದಾಗ ದಿನಕ್ಕೆ 8 ಬಾರಿಯಂತೆ ಆಹಾರ ಸ್ವೀಕರಿಸುತ್ತಿದ್ದನಂತೆ. ಜನರಿಗಾಗಿ ಗೋವರ್ಧನ ಗಿರಿ ಪರ್ವತ ಎತ್ತಿ ಹಿಡಿದಾಗ 7 ದಿನ ಪವಾಸವಿದ್ದ ಕಾರಣ ಆ 7 ದಿನದ ದಿನಕ್ಕೆ 8 ರಂತೆ 56 ಬಗೆಯ ಭಕ್ಷ್ಯ ನೈವೇದ್ಯ ಮಾಡಲಾಗತ್ತೆ. ಇದರಲ್ಲಿ ಎಲ್ಲಾ ಸಾತ್ವಿಕ ಆಹಾರವಿದ್ದು ಈರುಳ್ಳಿ ಬೆಳ್ಳುಳ್ಳಿ ನಿಷಿದ್ಧವಾಗಿರತ್ತೆ. ಈ ಬೃಹದಾಕಾರದ ಅಡುಗೆ ಮನೆ ಯಲ್ಲಿ ಗಂಗೆ ಮತ್ತು ಯಮುನೆ ಎಂಬ ಎರಡು ಭಾವಿಗಳಿದ್ದು ಅಡುಗೆಗೆ ಅದೇ ಭಾವಿಯಿಂದ ನೀರು ಬಳಿಸುವುದು ಇಲ್ಲಿಯ ನಿಯಮ.

ಇದನ್ನೂ ಓದಿ: Roopa Gururaj Column: ಅಹಂಭಾವವಿಲ್ಲದ ಸತ್ಕಾರ್ಯಕ್ಕೆ ಹೆಚ್ಚು ಬೆಲೆ

ಅಡುಗೆ ಮನೆಯ ಮೇಲ್ವಿಚಾರಣೆಯಾಗಿ ಸ್ವತಃ ಮಹಾಲಕ್ಷ್ಮೀಯೇ ವೀಕ್ಷಿಸಿಸುತ್ತಿರುತ್ತಾಳೆ ಎನ್ನುವ ನಂಬಿಕೆ ಸಹ ಇದೆ. ಅಡುಗೆ ನಿಯಮದಲ್ಲಿ ಏನಾದರೂ ವ್ಯತ್ಯಾಸವಾದಲ್ಲಿ ಶ್ವಾನವೊಂದು ಅಡುಗೆ ಮನೆ ಪ್ರವೇಶ ಮಾಡತ್ತೆಯಂತೆ. ಅಲ್ಲಿಗೆ ಏನೋ ವ್ಯತ್ಯಾಸವಾಗಿದೆ ಎಂದರ್ಥ ತಪ್ಪಿಗಾಗಿ ಮಾಡಿದ ಅಡಿಗೆಯನ್ನೆಲ್ಲ ಭೂಮಿಯಲ್ಲಿ ಹೂಳಲಾಗತ್ತೆ. ಮತ್ತೊಂದು ಬಾರಿ ಅಡಿಗೆ ಮಾಡಲಾಗತ್ತೆ.

ಇನ್ನೊಂದು ವಿಶೇಷವೆಂದರೆ ಇಲ್ಲಿ ಮಡಿಕೆಯ ಮೇಲೆ ಮಡಿಕೆಯಂತೆ ಒಂದರಮೇಲೊಂದು ಮೂರು ಮಡಿಕೆ ಇಟ್ಟು ಅಡುಗೆ ಮಾಡಲಾಗತ್ತೆ. 3 ಮಡಿಕೆಯಲ್ಲೂ ಒಂದೇ ಸಮಯಕ್ಕೆ ಆಹಾರ ಸಿದ್ದವಾಗಿರತ್ತೆ. ಅಡುಗೆಗೆ ಸಾಮಾನ್ಯವಾದ ಸ್ವಾದವಿದ್ದರೂ ದೇವರ ನೈವೇದ್ಯದ ನಂತರ ಗಮಗಮಿ ಸುತ್ತ ಅಪರಿಮಿತವಾದ ರುಚಿಯಿಂದ ಕೂಡಿರುತ್ತೆ ಎನ್ನಲಾಗುತ್ತದೆ. ಅಡುಗೆ ಮನೆಯಲ್ಲಿ 750 ಒಲೆಗಳಿದ್ದು ಈ ಅಗ್ನಿಯು ಯಾವತ್ತೂ ಆರುವುದಿಲ್ಲ ನಿರಂತರವಾಗಿ ಅಡಿಗೆ ಆಗುತ್ತಲೇ ಇರತ್ತೆ ಎನ್ನಲಾಗತ್ತೆ. ಇಲ್ಲಿರುವ ಅಗ್ನಿಯನ್ನ ವೈಷ್ಣವ ಅಗ್ನಿ ಅಂತ ಹೇಳಲಾಗತ್ತೆ.

ನಿತ್ಯ ಬರೋಬ್ಬರಿ 50 ಸಾವಿರದಿಂದ 1 ಲಕ್ಷ ಜನರು ಸ್ವಾಮಿಯ ಪ್ರಸಾದ ಸೇವಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗ್ತಾರೆ. ಇನ್ನೂ ರಥೋತ್ಸವ ಸಮಯದಲ್ಲಿ 15 ಲಕ್ಷದವರೆಗೂ ಜನಸೇರಿರುತ್ತಾರೆ ಎಂದು ಹೇಳಲಾಗತ್ತೆ. ಇಲ್ಲಿಯ ಪ್ರಸಾದವಾಗಿ ಅನ್ನ ಜೊತೆಗೆ ಗಟ್ಟಿ ಬೇಳೆ, ಪುಳಿಯೋಗರೆ , ಒಂದು ತರಹದ ಪಲ್ಯ ಮತ್ತು ಚಟ್ನಿ, ಸಿಹಿ ಪೊಂಗಲ್, ದಾಲ್ ಕಿಚ್ಚಡಿ ರಸ್ಮಲೈ, ಹೋಳಿಗೆ ತರಹದ ಒಂದು ಸಿಹಿ ತಿಂಡಿ ಇದಿಷ್ಟು ದಿನ ನಿತ್ಯದ ಪ್ರಸಾದದ ವಿಶೇಷ.

ಇಂತಹ ಅಪರೂಪದ ದೇವಾಲಯಕ್ಕೆ ಖಂಡಿತ ಭೇಟಿ ಕೊಟ್ಟು ಅಲ್ಲಿನ ಪ್ರಸಾದವನ್ನು ಸ್ವೀಕರಿಸಿ ಪುರಿ ಜಗನ್ನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ಭಾರತದ ದೇವಾಲಯಗಳ ಐತಿಹ್ಯವನ್ನು ನಮ್ಮ ಮಕ್ಕಳಿಗೂ ತಿಳಿಸಬೇಕು.

ರೂಪಾ ಗುರುರಾಜ್

View all posts by this author