ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Vishweshwar Bhat Column: ಲವ್‌ ಹೋಟೆಲ್

ಜಪಾನಿನ ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿಯ ಮಿಶ್ರಣದಂತಿರುವ ಲವ್ ಹೋಟೆಲ್ಸ್‌ ದಂಪತಿ ಗಳಿಗೆ ಸ್ವಾತಂತ್ರ್ಯ ಮತ್ತು ಖಾಸಗಿತನವನ್ನು ಒದಗಿಸುವ ಮೂಲಕ ವಿಶಿಷ್ಟ ಸ್ಥಾನವನ್ನು ಹೊಂದಿವೆ. ಇವು ಆ ದೇಶದ ಸಂಸ್ಕೃತಿಯ ಒಂದು ವಿಭಿನ್ನ ಮುಖವನ್ನು ತೆರೆದಿಡುತ್ತವೆ. ಅಷ್ಟಕ್ಕೂ ಲವ್ ಹೋಟೆಲ್ಸ್ ಎಂದರೇನು? ಹುಡುಗ-ಹುಡುಗಿಗೆ, ದಂಪತಿಗಳಿಗೆ ಒಟ್ಟಿಗೆ ಕೆಲಕಾಲ ಏಕಾಂತದಲ್ಲಿ ಕಳೆಯುವ ಬಯಕೆ ಯಾದರೆ, ಯಾವ ಹೋಟೆಲುಗಳೂ ರೂಮುಗಳನ್ನು ಕೊಡುವುದಿಲ್ಲ. ಆದರೆ ಲವ್ ಹೋಟೆಲ್ ಇರು ವುದು ಅವರಿಗಾಗಿಯೇ. ಲವ್ ಹೋಟೆಲುಗಳಿಗೆ ಯಾರು ಬೇಕಾದರೂ ಹೋಗಬಹುದು

‌Vishweshwar Bhat Column: ಲವ್‌ ಹೋಟೆಲ್

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಪಾನಿನಲ್ಲಿ ಇಂಥದ್ದೊಂದು ಹೋಟೆಲ್ ಇದ್ದಿರಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಹಾಗೆ ನೋಡಿದರೆ, ಆ ಥರದ ಹೋಟೆಲ್ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಇದ್ದಂತಿಲ್ಲ. ಅದು ಜಪಾನಿನಲ್ಲಿ ಲವ್ ಹೋಟೆಲ್ಸ್ ( Love Hotels) ಎಂಬ ವಿಶಿಷ್ಟ ಹೋಟೆಲ್. ಈ ಹೋಟೆಲ್‌ ಗಳು ವಿಶೇಷ ವಾಗಿ ಖಾಸಗಿ ಕ್ಷಣಗಳನ್ನು ಬಯಸುವವರಿಗೆ ಮೀಸಲಾದ ಹೋಟೆಲ್. ‌ಜಪಾನಿನ ಪ್ರಾಚೀನ ಮತ್ತು ಆಧು ನಿಕ ಸಂಸ್ಕೃತಿಯ ಮಿಶ್ರಣದಂತಿರುವ ಲವ್ ಹೋಟೆಲ್ಸ್‌ ದಂಪತಿ ಗಳಿಗೆ ಸ್ವಾತಂತ್ರ್ಯ ಮತ್ತು ಖಾಸಗಿ ತನವನ್ನು ಒದಗಿಸುವ ಮೂಲಕ ವಿಶಿಷ್ಟ ಸ್ಥಾನವನ್ನು ಹೊಂದಿವೆ.

ಇವು ಆ ದೇಶದ ಸಂಸ್ಕೃತಿಯ ಒಂದು ವಿಭಿನ್ನ ಮುಖವನ್ನು ತೆರೆದಿಡುತ್ತವೆ. ಅಷ್ಟಕ್ಕೂ ಲವ್ ಹೋಟೆಲ್ಸ್ ಎಂದ ರೇನು? ಹುಡುಗ-ಹುಡುಗಿಗೆ, ದಂಪತಿಗಳಿಗೆ ಒಟ್ಟಿಗೆ ಕೆಲಕಾಲ ಏಕಾಂತದಲ್ಲಿ ಕಳೆಯುವ ಬಯಕೆ ಯಾದರೆ, ಯಾವ ಹೋಟೆಲುಗಳೂ ರೂಮುಗಳನ್ನು ಕೊಡುವುದಿಲ್ಲ. ಆದರೆ ಲವ್ ಹೋಟೆಲ್ ಇರುವುದು ಅವರಿ ಗಾಗಿಯೇ. ಲವ್ ಹೋಟೆಲುಗಳಿಗೆ ಯಾರು ಬೇಕಾದರೂ ಹೋಗಬಹುದು. ‌

ಇದನ್ನೂ ಓದಿ: Vishweshwar Bhat Column: ಬೆನ್ನೆಟ್-ಕೋಲಮನ್‌ ಯಾರು ?

ಸಾಮಾನ್ಯವಾಗಿ, ಯುವ ದಂಪತಿಗಳು ಅಥವಾ ದಾಂಪತ್ಯ ಜೀವನದ ಹೊರಗಿರುವವರೂ ಖಾಸಗಿ ಯಾಗಿ ಸಮಯ ಕಳೆಯಲು ಬಯಸುವವರಿಗೆ ಲವ್ ಹೋಟೆಲುಗಳು ಅವಕಾಶವನ್ನು ಕಲ್ಪಿಸಿ ಕೊಡುತ್ತವೆ. ಲವ್ ಹೋಟೆಲುಗಳನ್ನು ಇಪ್ಪತ್ತನೇ ಶತಮಾನದಲ್ಲಿ ಆರಂಭಿಸಲಾಯಿತು. ಈ ಕ್ಷೇತ್ರದ ಜನಪ್ರಿಯತೆಯ ಮೂಲವನ್ನು 1960ರ ದಶಕದಲ್ಲಿ ಕಾಣಬಹುದು, ಅದರಲ್ಲಿ ಟೋಕಿಯೋ ಮತ್ತು ಓಸಾಕಾ ಪಟ್ಟಣಗಳಲ್ಲಿ ಈ ರೀತಿಯ ಹೋಟೆಲ್‌ಗಳು ಹೆಚ್ಚು ಕಂಡುಬಂದವು.

‘ಲವ್ ಹೋಟೆಲ್’ ಹೆಸರಿನ ಮೂಲ ಓಸಾಕಾದ ಹೋಟೆಲ್ ಲವ್. ಈ ಹೋಟೆಲ್‌ ಗಳು ಸಂಪೂರ್ಣ ವಾಗಿ ದಂಪತಿಗಳಿಗೆ ಮೀಸಲಾಗಿತ್ತು. ನಂತರ ಇದನ್ನು ಅವಿವಾಹಿತರಿಗೂ ವಿಸ್ತರಿಸಲಾಯಿತು. ನಗರೀಕರಣದ ಒತ್ತಡದ ಬದುಕಿನಲ್ಲಿರುವವರ ಆಸೆ ಪೂರೈಸುವ ದೃಷ್ಟಿಯಿಂದ ಆರಂಭವಾದ ಈ ಹೋಟೆಲುಗಳನ್ನು ಜಪಾನಿನ ಸಮಾಜ ಒಪ್ಪಿಕೊಂಡಿದೆ.

ಲವ್ ಹೋಟೆಲ್ ಗಳು ಬಾಹ್ಯವಾಗಿ ಮತ್ತು ಅಂತರಂಗದ ದೃಷ್ಟಿಯಿಂದ ಅಂದವಾಗಿದ್ದು, ರೊಮ್ಯಾಂಟಿಕ್ ಅಥವಾ ವಿನೋದಾತ್ಮಕ ವಾತಾವರಣವನ್ನು ನೀಡಲು ವಿಶೇಷವಾಗಿ ವಿನ್ಯಾಸ ಗೊಳಿಸಲಾಗಿದೆ. ಅಲ್ಲಿನ ಕೋಣೆಗಳು ವಿಭಿನ್ನ ಥೀಮ್ ಗಳಿಗೆ ಹೊಂದಿಕೊಳ್ಳುತ್ತವೆ. ಒಂದೊಂದು ಕೋಣೆ ಒಂದೊಂದು ರೀತಿಯ ವಿನ್ಯಾಸವನ್ನು ಹೊಂದಿರುತ್ತದೆ.

ದಂಪತಿಗಳಿಗೆ ಗರಿಷ್ಠ ಖಾಸಗಿತನ ನೀಡುವುದು ಉದ್ದೇಶ. ಹೋಟೆಲ್‌ಗೆ ಪ್ರವೇಶ ಮತ್ತು ಪಾವತಿ ವ್ಯವಸ್ಥೆಗಳು ಅನಾಮಧೇಯವಾಗಿರಲು ಅನುಕೂಲ ಮಾಡಿಕೊಡಲಾಗಿದೆ. ಸ್ಕ್ರೀನ್‌ಗಳು, ಹಾಟ್ ಟಬ್‌ಗಳು, ಹೈ-ಟೆಕ್ ಎಂಟರ್‌ಟೈನ್‌ಮೆಂಟ್ ಸಿಸ್ಟಮ್, ಮಸಾಜ್ ಚೇರುಗಳು ಮತ್ತು ವಿಶೇಷವಾದ ಪ್ಲೇ ಎಕ್ವಿಪ್‌ಮೆಂಟ್ ( play equipment) ಕೂಡ ಲಭ್ಯವಿರುತ್ತವೆ. ಈ ಲವ್ ಹೋಟೆಲ್‌ಗಳಲ್ಲಿ ಕೋಣೆ ಬಾಡಿಗೆ ಪ್ರಕ್ರಿಯೆ ಬಹಳ ಸರಳವಾಗಿದೆ.

ಫೋನ್ ಅಥವಾ ವೆಂಡಿಂಗ್ ಮಷಿನುಗಳ ಮೂಲಕವೂ ಕೋಣೆಯನ್ನು ಕಾದಿರಿಸಬಹುದು. ಕೈ ಗೆಟ ಕುವ ದರದಲ್ಲಿ ಐಷಾರಾಮಿ ಕೋಣೆಗಳೂ ಲಭ್ಯ. ಬಹುತೇಕ ಹೋಟೆಲ್‌ಗಳಲ್ಲಿ ಸ್ವಯಂಚಾಲಿತ ಡಿಸ್‌ಪ್ಲೇ ಬೋರ್ಡ್ ಇರುತ್ತವೆ, ಅದರಲ್ಲಿ ಲಭ್ಯವಿರುವ ಕೋಣೆಗಳ ಫೋಟೋ ಮತ್ತು ಬೆಲೆ ವಿವರ ಗಳನ್ನು ನೋಡಬಹುದು. ಈ ಡಿಸ್‌ಪ್ಲೇನಲ್ಲಿ ಕೋಣೆ ಆಯ್ಕೆ ಮಾಡಬಹುದು.

ಲವ್ ಹೋಟೆಲುಗಳಿಗೆ ಸಂಗಾತಿಯಿಲ್ಲದೇ ವಿಶ್ರಾಂತಿಗೂ ಹೋಗಬಹುದು, ರಾತ್ರಿ ತಂಗಲೂ ಹೋಗ ಬಹುದು. ಜಪಾನ್‌ನಲ್ಲಿ ಮನೆಯ ಗಾತ್ರ ಸಾಮಾನ್ಯವಾಗಿ ಚಿಕ್ಕದಾಗಿದ್ದು, ಕುಟುಂಬದ ಎಲ್ಲ ಸದಸ್ಯರು ಒಂದೇ ಕೋಣೆಯಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದರಿಂದಾಗಿ ದಂಪತಿಗಳಿಗೆ ಏಕಾಂತ ಅಥವಾ ಖಾಸಗಿಯಾಗಿ ಕಳೆಯಲು ಕಡಿಮೆ ಜಾಗವಿರುವುದರಿಂದ ಲವ್ ಹೋಟೆಲ್ ಹೆಚ್ಚು ಜನ ಪ್ರಿಯವಾಗಲು ಕಾರಣ.

ಲವ್ ಹೋಟೆಲ್ ಗಳು ಸಮಾಜದ ಬದಲಾದ ಅಭಿರುಚಿಗಳನ್ನು ಪ್ರತಿನಿಽಸುವ ಸಂಕೇತಗಳಂತೆ ತೋರುತ್ತವೆ. ಜಪಾನಿನಲ್ಲಿ ಸಂಬಂಧಗಳನ್ನು ನವೀಕರಿಸಲು, ಖಾಸಗಿಯಾಗಿ ಸಮಯ ಕಳೆಯಲು ಈ ರೀತಿಯ ಹೋಟೆಲ್‌ಗಳು ವೇದಿಕೆಯನ್ನು ಒದಗಿಸುತ್ತವೆ. ಪ್ರವಾಸಿಗರು ಸಹ ವಿಶೇಷ ಅನುಭವ ಕ್ಕಾಗಿ ಈ ಹೋಟೆಲ್‌ಗಳಿಗೆ ಹೋಗುವುದುಂಟು.