ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು

ನಮ್ಮ ಆಂತರಿಕ ಕಲಹವು ನೂರು ಜನರಿಗೆ ನೂರು ರೀತಿಯ ಪ್ರೇರಣೆಯನ್ನು ನೀಡುತ್ತದೆ. ಇದನ್ನೇ ಹಿರಿಯರು ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ- ‘ಬಾವಿಯನ್ನು ತೋಡಬೇಕು ಎಂದರೆ, ನೂರು ಕಡೆ ಹಳ್ಳಗಳನ್ನು ಇಷ್ಟಿಷ್ಟೇ ಆಳಕ್ಕೆ ತೋಡಿ ಬಿಟ್ಟುಬಿಡುವುದಲ್ಲ, ಬದಲಿಗೆ ಒಂದೇ ಜಾಗದಲ್ಲಿ 100 ಅಡಿ ಯನ್ನು ತೋಡುವುದು’ ಅಂತ. ಆಗ ಶ್ರಮವೂ ಕಡಿಮೆಯಾಗುತ್ತದೆ ಮತ್ತು ಪ್ರಯೋಜನವೂ ದಕ್ಕುತ್ತದೆ.

ಒಂದೊಳ್ಳೆ ಮಾತು

ಹಾಸ್ಟೆಲ್ ಒಂದರಲ್ಲಿ ಪ್ರತಿದಿನವೂ ಚಿತ್ರಾನ್ನವನ್ನೇ ತಿಂದು ತಿಂದು ಬೇಜಾರಾದ 80 ವಿದ್ಯಾರ್ಥಿಗಳು, ಒಂದೊಂದು ದಿನವೂ ಬೇರೆ ಬೇರೆ ತರಹದ ತಿಂಡಿಯನ್ನು ಮಾಡುವಂತೆ ಹಾಸ್ಟೆಲ್‌ನ ವಾರ್ಡನ್‌ಗೆ ಕೋರಿದರು. ಆದರೆ ಮಿಕ್ಕ 20 ಜನರಿಗೆ ಪ್ರತಿದಿನವೂ ಚಿತ್ರಾನ್ನವೇ ಬೇಕಿತ್ತು. ಆಗ ವಾರ್ಡನ್, “ಈಗೊಂದು ಕೆಲಸ ಮಾಡೋಣ. ವೋಟಿಂಗ್ ನಡೆಸಿ, ಯಾರ ಪರವಾಗಿ ಹೆಚ್ಚು ವೋಟ್ ಬರುತ್ತ ದೋ, ಅದರಂತೆ ಮುಂದುವರಿಯೋಣ" ಎಂದು ಹೇಳಿದರು.

ಚಿತ್ರಾನ್ನ ಇಷ್ಟವಿದ್ದ 20 ವಿದ್ಯಾರ್ಥಿಗಳು ಚಿತ್ರಾನ್ನಕ್ಕೇ ವೋಟ್ ಹಾಕಿದರು, ಆದರೆ ಉಳಿದ 80 ಮಂದಿ ವಿದ್ಯಾರ್ಥಿಗಳು ಈ ಕುರಿತು ಗಂಭೀರವಾಗಿ ಆಲೋಚಿಸಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರದೆ, ತಮಗಿಷ್ಟವಾದ ಉಪಾಹಾರಗಳ ಬಗ್ಗೆ ಉಲ್ಲೇಖಿಸತೊಡಗಿದರು. ಅದು ಕೊನೆಗೆ ಜಗಳಕ್ಕೇ ತಿರುಗಿ ಬಿಟ್ಟಿತು. ಆ 80 ಮಂದಿ ತಮ್ಮ ಬುದ್ಧಿಗೆ, ವಿವೇಚನೆಗೆ ಕೆಲಸ ಕೊಡಲೇ ಇಲ್ಲ; ಬದಲಿಗೆ ತಮಗಿಷ್ಟ ವಾಗಿರೋ ಉಪಾಹಾರಗಳಿಗೆ ವೋಟ್ ಮಾಡಲು ಶುರುಮಾಡಿದರು.

ಈ ರೀತಿಯಾಗಿ, ಅವರಲ್ಲಿ 18 ಮಂದಿ ದೋಸೆಗೆ, 16 ಮಂದಿ ಪರೋಟಾಕ್ಕೆ, 14 ಮಂದಿ ರೊಟ್ಟಿಗೆ, ೧೨ ಮಂದಿ ಬ್ರೆಡ್-ಬಟರ್‌ಗೆ, 10 ಮಂದಿ ನೂಡಲ್ಸ್‌ಗೆ, 10 ಮಂದಿ ಇಡ್ಲಿಗೆ ವೋಟ್ ಮಾಡಿದರು! ಈಗ ಯೋಚನೆ ಮಾಡಿ ಅಲ್ಲಿ ಏನಾಗಿರಬಹುದು ಅಂತ! ಆ ಹಾಸ್ಟೆಲ್‌ನ ಮೆಸ್‌ನಲ್ಲಿ ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನ್ನವೇ ಗತಿಯಾಗಿದೆ.

ಇದನ್ನೂ ಓದಿ: Roopa Gururaj Column: ವಿಧಿಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ

ಯಾಕೆಂದರೆ, ಉಳಿದ ಆ 20 ವಿದ್ಯಾರ್ಥಿಗಳು ಒಗ್ಗಟ್ಟಾಗಿದ್ದರು. ಎಲ್ಲಿಯವರೆಗೆ ಆ 80 ಮಂದಿ ದಿಕ್ಕಾಪಾಲಾಗಿದ್ದರೋ, ಅಲ್ಲಿಯವರೆಗೂ ಮಂದಿಯ ಆಟ ನಡೆಯುತ್ತಲೇ ಇತ್ತು. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಕೂಡ ಇಂಥ ಅನೇಕ ವಿಷಯಗಳಿಗೆ ನಾವು ತಲೆ ಕೆಡಿಸಿಕೊಂಡು, ಅನಗತ್ಯವಾಗಿ ಕಡೆಗಣಿಸಲ್ಪಡುತ್ತೇವೆ. ನಮ್ಮಲ್ಲಿ ಎಲ್ಲಿಯವರೆಗೂ ಭೇದಭಾವಗಳಿದ್ದರೆ, ಅಭಿವೃದ್ಧಿಯನ್ನು ನಾವು ಹೊಂದಲು ಎಂದಿಗೂ ಸಾಧ್ಯವಿಲ್ಲ. ಎದುರಿಗಿರುವವರು ಕೂಡ ನಮ್ಮ ದ್ವೇಷವನ್ನು, ಭಿನ್ನಾಭಿಪ್ರಾಯವನ್ನು ಉಪಯೋಗಿಸಿಕೊಳ್ಳುತ್ತಾರೆ, ತಮಗಷ್ಟೇ ಲಾಭ ಮಾಡಿಕೊಳ್ಳುತ್ತಾರೆ.

ನಮ್ಮ ಆಂತರಿಕ ಕಲಹವು ನೂರು ಜನರಿಗೆ ನೂರು ರೀತಿಯ ಪ್ರೇರಣೆಯನ್ನು ನೀಡುತ್ತದೆ. ಇದನ್ನೇ ಹಿರಿಯರು ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ- ‘ಬಾವಿಯನ್ನು ತೋಡಬೇಕು ಎಂದರೆ, ನೂರು ಕಡೆ ಹಳ್ಳಗಳನ್ನು ಇಷ್ಟಿಷ್ಟೇ ಆಳಕ್ಕೆ ತೋಡಿ ಬಿಟ್ಟುಬಿಡುವುದಲ್ಲ, ಬದಲಿಗೆ ಒಂದೇ ಜಾಗದಲ್ಲಿ 100 ಅಡಿಯನ್ನು ತೋಡುವುದು’ ಅಂತ. ಆಗ ಶ್ರಮವೂ ಕಡಿಮೆಯಾಗುತ್ತದೆ ಮತ್ತು ಪ್ರಯೋಜನವೂ ದಕ್ಕುತ್ತದೆ. ಆದರೆ ಸ್ವತಂತ್ರ ಮನೋಭಾವದ ಕೆಲವರಿಗೆ ಈ ಪ್ರಪಂಚದ ರೀತಿ-ರಿವಾಜುಗಳ ಭಾರತೀಯರು’ ಎಂಬ ಹೆಮ್ಮೆಯ ಭಾವದಲ್ಲಿ ಬದುಕಬೇಕು.

ಇಂಥದೊಂದು ಒಗ್ಗಟ್ಟಿಲ್ಲದೆ ನಾವು ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಲು ಸಾಧ್ಯವೇ ಇಲ್ಲ. ನಮ್ಮೊಬ್ಬರಿಂದ ನಿರ್ದಿಷ್ಟ ಕಾರ್ಯಭಾರವು ನೆರವೇರದೆ ಇರಬಹುದು, ಆದರೆ ಅದು ನೆರವೇರಲು ಎಲ್ಲರೂ ಆ ಕಾರ್ಯಭಾರದ ಭಾಗವಾಗಬೇಕು. ನಮ್ಮ ಧರ್ಮದ ಬಗ್ಗೆ, ರಾಷ್ಟ್ರದ ಬಗ್ಗೆ, ಪರಂಪರೆಯ ಬಗ್ಗೆ ನಾವೇ ಒಡಕು ಮಾತುಗಳನ್ನಾಡಿದರೆ, ಬೇರೆಯವರು ಅದನ್ನು ಹಾಳುಗೆಡಹುವು ದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ.

ಆದ್ದರಿಂದಲೇ ಚಿಕ್ಕ ಚಿಕ್ಕ ವಿಚಾರಗಳಿಗೆಲ್ಲ ಜಗಳವಾಡದೆ, ದೇಶಾಭಿಮಾನವನ್ನು ಮೈಗೂಡಿಸಿ ಕೊಂಡು, ಎಲ್ಲರೂ ಒಗ್ಗಟ್ಟಾಗಿ ನಿಂತು ದೇಶದ ಭವಿಷ್ಯಕ್ಕಾಗಿ ದುಡಿಯಬೇಕು. ನಾವೆಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರವೇ ಎಂಥದೇ ದುರ್ಭರ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸುವ ಶಕ್ತಿ ನಮ್ಮ ದೇಶಕ್ಕೆ ದಕ್ಕುತ್ತದೆ.

‘ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು’.

ರೂಪಾ ಗುರುರಾಜ್

View all posts by this author