ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಹೊಸ ರೀತಿಯ ಬರಹಗಾರ: ನ್ಯೂ ಟೈಪ್‌ -ರೈಟರ್

ಹಾಗೆಯೇ ‘ಗರುಡ ಗಮನ ವೃಷಭ ವಾಹನ’ ಸಿನಿಮಾಕ್ಕೂ ಆಸ್ಕರ್ ಬರುತ್ತೆ ಅನ್ನೋ ಲೆವೆಲ್ಲಿನ ಮಾತುಗಳು ಕೇಳಿಬಂದಿದ್ದವು. ಆದರೆ ಅಂಥದ್ದೇನೂ ಆಗಲಿಲ್ಲ. ಆದರೆ ಕಾಂತಾರ ಬೇರೆಯದ್ದೇ ಲೆವೆಲ್ಲಿನ ಹವಾ ತೋರಿಸುತ್ತಿದೆ. ತನ್ನ ಹಿಂದೆ ಬಿಡುಗಡೆ ಆದ ಅನೇಕ ಚಿತ್ರಗಳ ಹವಾ ಕಡಿಮೆ ಮಾಡುವ ಮಟ್ಟಕ್ಕೆ ಕಾಂತಾರ ಸದ್ದು ಮಾಡುತ್ತಿದೆ.

ತುಂಟರಗಾಳಿ

ಸಿನಿಗನ್ನಡ

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ ಚಾಪ್ಟರ್-1’ ಸಿನಿಮಾ ಸೌಂಡು ಮಾಡುತ್ತಿದೆ. ಈ ಸಿನಿಮಾನಾ ನೋಡಿದವರೆ ‘ಐ ಲೈಕ್ ಇಟ್ ಕಾಂತಾರಾ’ ಅನ್ನುತ್ತಿದ್ದಾರೆ. ಅನೇಕ ಪ್ರೇಕ್ಷಕರು ಈ ಚಿತ್ರದ ದೈವವನ್ನು ಅನುಕರಣೆ ಮಾಡುವ ಮಟ್ಟಕ್ಕೆ ಈ ಚಿತ್ರ ಸಂಚಲನ ಸೃಷ್ಟಿ ಮಾಡಿದೆ. ಹಾಗೆ ನೋಡಿದರೆ ಈ ಸಿನಿಮಾ ಇಷ್ಟ ಆಗಿಲ್ಲ ಅನ್ನೋವ್ರು ಯಾರಾದ್ರೂ ಒಬ್ರಾದ್ರೂ ಕಾಣ್ತಾರಾ ಅನ್ನೋ ಲೆವೆಲ್ಲಿಗೆ ಜನ ಇದನ್ನು ಇಷ್ಟಪಟ್ಟಿದ್ದಾರೆ.

ಸಿನಿಮಾದ ಜತೆಗೆ ರಿಶಬ್ ಶೆಟ್ಟಿ ಅವರ ಅಭಿನಯಕ್ಕೂ ಜನ ಫುಲ್ ಮಾರ್ಕ್ಸ್‌ ಕೊಡ್ತಾ ಇದ್ದಾರೆ. ಇದು ಮಾಮೂಲಿಯಾಗಿ ಶೆಟ್ಟರ ಬಳಗದ ಸಿನಿಮಾ ರಿಲೀಸ್ ಆದಾಗ ಕಂಡು ಬರೋ ‘ಫೇಕ್ ಹೈಪ್’ ಅಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. ಯಾಕಂದ್ರೆ ಮಾಮೂಲಿಯಾಗಿ ಕರಾವಳಿ ಕಡೆಯವರ ಸಿನಿಮಾ ರಿಲೀಸ್ ಆದಾಗ ಅವರ ಕಡೆಯವರ ಹಾವಳಿ ಜಾಸ್ತಿನೇ ಇರುತ್ತೆ. ಈ ಹಿಂದೆ ಕೂಡಾ ರಿಷಬ್ ಶೆಟ್ಟಿ ಅವರ ‘ಹೀರೋ’, ‘ಹರಿಕಥೆ ಅಲ್ಲ ಗಿರಿಕಥೆ’ಯಂಥ ಸಿನಿಮಾಗಳಿಗೂ ಎಲ್ಲಾ ಕಡೆ ಅಬ್ಬರದ ಮಾತೇ ಕೇಳಿಬಂದಿತ್ತು. ಆದರೆ ಆ ಸಿನಿಮಾ ಕಚ್ಚಿಕೊಳ್ಳಲಿಲ್ಲ. ಹಾಗೆಯೇ ‘ಗರುಡ ಗಮನ ವೃಷಭ ವಾಹನ’ ಸಿನಿಮಾಕ್ಕೂ ಆಸ್ಕರ್ ಬರುತ್ತೆ ಅನ್ನೋ ಲೆವೆಲ್ಲಿನ ಮಾತುಗಳು ಕೇಳಿಬಂದಿದ್ದವು. ಆದರೆ ಅಂಥದ್ದೇನೂ ಆಗಲಿಲ್ಲ. ಆದರೆ ಕಾಂತಾರ ಬೇರೆಯದ್ದೇ ಲೆವೆಲ್ಲಿನ ಹವಾ ತೋರಿಸುತ್ತಿದೆ. ತನ್ನ ಹಿಂದೆ ಬಿಡುಗಡೆ ಆದ ಅನೇಕ ಚಿತ್ರಗಳ ಹವಾ ಕಡಿಮೆ ಮಾಡುವ ಮಟ್ಟಕ್ಕೆ ಕಾಂತಾರ ಸದ್ದು ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಜಾಕ್‌ಪಾಟ್ ಹೊಡೆದಿದೆ. ಕಾಂತಾರದ ಸದ್ದು ಭಾರತದ ತುಂಬ ಕೇಳುವಂತಾಗಲಿ.

ಇದನ್ನೂ ಓದಿ: Hari Paraak Column: POK - ಪಾಕ್‌ ಅಕ್ಯುಪೈಡ್‌ ಕಪ್

ಲೂಸ್ ಟಾಕ್‌ -ನರೇಂದ್ರ ಮೋದಿ

ಮೊನ್ನೆ ಪತ್ರಕರ್ತರು ಮೈಕ್ ಹಿಡ್ಕೊಂಡ್ ಬಂದಾಗ ನೀವು ‘ಓ ಮೈ ಗಾಡ್’ ಅಂದಿದ್ದು ಯಾಕೆ?

- ಏನಿಲ್ಲ, ಅಕ್ಷಯ್ ಕುಮಾರ್‌ದು ‘ಓ ಮೈ ಗಾಡ್’ ಸಿನಿಮಾ ನೆನಪಾಯ್ತು ಅಷ್ಟೇ.

ನಿಮ್ ಸುತ್ತ ಟೆರರಿಸ್ಟ್ ಗಳು ಬಂದ್ರೂ 56 ಇಂಚಿನ ಎದೆ ಅಡಲ್ಲ ಅಂತಾರೆ, ಆದ್ರೆ ಜರ್ನಲಿ‌ಸ್ಟ್‌ ಗಳು ಬಂದ್ರೆ ಯಾಕೆ ಹಿಂಗೆ?

- ಹಂಗೇನಿಲ್ಲ, ಮೊನ್ನೆ ಪಂಜಾಬ್‌ನಲ್ಲಿ ರೈತರಿಗೂ ಹೆದರ್ಕೊಂಡು ವಾಪಸ್ ಬಂದಿದ್ನಲ್ಲ.

ಓ ಹೌದಲ್ವಾ, ಅದ್ಸರಿ, ನೀವ್ ಯಾಕೆ ಜರ್ನಲಿಸ್ಟುಗಳು ಬಂದ್ರೆ ಭಯ ಪಡೋದು?

- ಹಂಗೇನಿಲ್ಲ, ಫೋಟೋ ಜರ್ನಲಿಸ್ಟ್‌ ಗಳು ಬಂದ್ರೆ ನೀಟಾಗಿ ಪೋಸ್ ಕೊಡ್ತೀನಲ್ಲ.

ರಾಹುಲ್ ಗಾಂಧಿ ಯಾವ್ದೋ ಕ್ಲಬ್ಬಿಗೆ ಹೋಗಿದ್ರಂತಲ್ಲ, ಅದರ ಬಗ್ಗೆ ನಿಮ್ಮ ಅಭಿಪ್ರಾಯ?

- ನನ್ನ ವಿಷ್ಯ ಮಾತಾಡ್ತಾ ಇದ್ರಿ, ಈಗ ಇದ್ದಕ್ಕಿದ್ದಂಗೆ ಎರಡೂ ವಿಷ್ಯ ಯಾಕ್ರೀ ಕ್ಲಬ್ ಮಾಡ್ತೀರಾ?

ಸರಿ,. ಹೋಗ್ಲಿ ಬಿಡಿ, ನಿಮ್ಮ ಬಗ್ಗೆನೇ ಕೇಳ್ತೀನಿ, ಅಚ್ಛೇ ದಿನ್ ಯಾವಾಗ್ ಬರುತ್ತೆ?

- ಹ್ಹೆ, ಹ್ಹೆ, ರಾಹುಲ್ ಗಾಂಧಿ ವಿಷ್ಯನೇ ಮಾತಾಡೋಣ್ವಾ?

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮುಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಂಗಾಗಿ ಗೆಳೆಯರ ಜತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂಥ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು ಸೋಮು ಜತೆಗೆ ಮೊದಲ ಬಾರಿ ಜಂಗಲ್ ಸಫಾರಿ ಹೊರಟಿದ್ದ. ಸೋಮು ಸ್ವಲ್ಪ ದಡ್ಡ. ಜತೆಗೆ, ಸ್ಲೋ ಕೂಡ ಆಗಿದ್ರಿಂದ, ಖೇಮು ಹೆಚ್ಚು ಹುಷಾರಾಗಿದ್ದು, ಕಾಡಿನಲ್ಲಿ ಸಿಗೋ ಪ್ರಾಣಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಯೋಜನೆ ಹಾಕ್ಕೊಂಡು ಸೋಮುವನ್ನು ಕರ್ಕೊಂಡು ಹೊರಟ.

ಇಬ್ಬರೂ ಜಂಗಲ್ ಸಫಾರಿ ಹೊರಟ್ರು. ಹೋಗುವಾಗ ಖೇಮು, “ನಾನು ಮುಂದೆ ಹೋಗ್ತೀನಿ, ನಂಗೆ ಯಾವುದಾದ್ರೂ ಪ್ರಾಣಿ ಕಾಣಿಸಿದ್ರೆ ಎಚ್ಚರಿಕೆ ಕೊಡ್ತೀನಿ" ಅಂತ ಹೇಳಿದ. ಸರಿ ಅಂತ ಇಬ್ಬರೂ ಹೊರಟರು. ಈ ಬಾರಿ ಯಾಕೋ ಯಾವ ಕಾಡುಪ್ರಾಣಿಗಳೂ ಕಾಣಿಸಲಿಲ್ಲ. ಕಾಡಿನ ಒಳಗೆ ಸ್ವಲ್ಪ ದೂರ ಹೋದ ಮೇಲೆ, ಖೇಮುಗೆ ಇದ್ದಕ್ಕಿದ್ದಂತೆ ಸೈಡಿನ ಪೊದೆಯಿಂದ ಒಂದು ಚಿರತೆ ನುಗ್ಗಿ ಬರ್ತಾ ಇದ್ದಿದ್ದು ಕಾಣಿಸಿತು.

ಕೂಡಲೇ, “ಚಿರತೆ, ಓಡು" ಅಂತ ಕೂಗಿ ಓಡಿ ತಪ್ಪಿಸಿಕೊಂಡ ಖೇಮು. ಆದರೆ ಸೋಮು ಮಾತ್ರ ಅ ನಿಂತಿದ್ದ. ಚಿರತೆ ಅವನ ಮೇಲೆ ಅಟ್ಯಾಕ್ ಮಾಡಿತು. ಅಷ್ಟರಲ್ಲಿ ಖೇಮು ವಾಪಸ್ ಬಂದು ತನ್ನ ಬಳಿ ಇದ್ದ ದೊಡ್ಡ ಕುಡುಗೋಲು ತೋರಿಸಿ ಚಿರತೆಯನ್ನು ಹೇಗೋ ಹೆದರಿಸಿ ಓಡಿಸಿದ. ಆಮೇಲೆ ಸೋಮು ಕಡೆ ನೋಡಿ, “ನಿಂಗೇನ್ ಬುದ್ಧಿ ಇದ್ಯಾ? ಚಿರತೆ, ಓಡು ಅಂತ ನಾನು ಎಚ್ಚರಿಕೆ ಕೊಟ್ರೂ ನೀನ್ಯಾಕೆ ಇಲ್ಲೇ ನಿಂತಿದ್ದೆ, ಚಿರತೆ ಬಂದಿದ್ದು ಕಾಣಿಸಲಿಲ್ವಾ ನಿಂಗೆ?" ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ “ಚಿರತೆ ಏನೋ ಕಾಣಿಸ್ತು. ಆದ್ರೆ, ನೀನು ‘ಚಿರತೆ, ಓಡು’ ಅಂತ ಎಚ್ಚರಿಕೆ ಕೊಟ್ಟಿದ್ದು ಚಿರತೆಗೆ ಅಂದ್ಕೊಂಡು ಸುಮ್ನೆ ಇz್ದೆ".

ಲೈನ್‌ಮ್ಯಾನ್

ಜೀವನದಲ್ಲಿ ನಗು ಅನ್ನೋದೇ ಇಲ್ಲದಿದ್ರೆ ಏನಾಗುತ್ತೆ?

- ನಾಲ್ಕ ಜನ ನನ್ನ ನೋಡಿ ನಗ್ತಾರೆ ಅನ್ನೋ ಭಯ ಇರಲ್ಲ

ಹೊಸ ರೀತಿಯ ಬರಹಗಾರರು ಬೇಕು ಅಂದ್ರೆ ಏನ್ ಮಾಡಬೇಕು?

- ‘ನ್ಯೂ ಟೈಪ್-ರೈಟರ್’ ತರಬೇಕು

ಯಾರಿಗೂ ಗೊತ್ತಾಗದ ಹಾಗೆ ಮೆಲ್ಲಗೆ ಟೇಬಲ್ ಕೆಳಗಿಂದ ಹುಡುಗಿ ಕಾಲು ಟಚ್ ಮಾಡೋನು

- ‘ಜೆಂಟಲ್‌’ಮ್ಯಾನ್

ಎಷ್ಟೋ ಜನ ಬಿಜೆಪಿಯವರಿಗೇ ಬಜೆಟ್ ಅಂದ್ರೇನೇ ಇಷ್ಟ ಆಗಲ್ಲ

- ಯಾಕಂದ್ರೆ ಅವರಿಗೆ ಕಾಂಗ್ರೆಸ್ ಸಿಂಬಲ್ ‘ಕರ’ ಅಂದ್ರೆ ಆಗಲ್ಲ.

ಕ್ಲೀನ್ ಹ್ಯಾಂಡ್ ಗಂಡಸು ಅಂದ್ರೆ ಯಾರು?

- ರಕ್ಷಾಬಂಧನದ ದಿನ ಯಾವ ಹುಡುಗಿನೂ ರಾಖಿ ಕಟ್ಟದೆ ಕೈ ಖಾಲಿ ಇರೋನು.

ಮೆಳ್ಳೆಗಣ್ಣಿನ ದೃಷ್ಟಿ ದೋಷಕ್ಕೆ ಏನಂತಾರೆ ?

- ‘ಕಾರ್ನರ್’ ‘ಸೈಟ್’

ಕೊಹ್ಲಿನ ಕ್ಯಾಪ್ಟನ್ಸಿಯಿಂದ ಇಳಿಸಿ ಗಂಗೂಲಿ ಮಾಡ್ತಾ ಇರೋದೇನು ?

- ‘ಹೊಸ’ದಾದ’ ಕ್ರಾಂತಿ

ದಾರಿಯಲ್ಲಿ ಒಂಟಿಯಾಗಿ ಹೋಗ್ತಾ ಇದ್ದ ಆಮೆ ಮೇಲೆ ಮೂರ್ನಾಲ್ಕು ಬಸವನ ಹುಳುಗಳು ದಾಳಿ ಮಾಡಿದ್ವು. ಅವುಗಳ ವಿರುದ್ಧ ಕಂಪ್ಲೇಂಟ್ ಕೊಡೋಣ ಅಂತ ಆಮೆ ಪೊಲೀಸ್ ಸ್ಟೇಷನ್‌ಗೆ ಹೋಯ್ತು. ಅಲ್ಲಿ ಪೊಲೀಸ್ ಅಧಿಕಾರಿ ಕೇಳಿದ “ನಿನ್ನ ಮೇಲೆ ಅಟ್ಯಾಕ್ ಮಾಡಿದ ಯಾರನ್ನಾದ್ರೂ ನೀನು ಗುರುತು ಹಿಡಿಯೋಕೆ ಸಾಧ್ಯನಾ?".

- ಅದಕ್ಕೆ ಆಮೆ ಹೇಳ್ತು, “ಇಲ್ಲ, ಅದೆ ಎಷ್ಟು - ಆಗಿ ಆಯ್ತು ಅಂದ್ರೆ, ನಂಗೆ ಏನೂ ಗೊತ್ತೇ ಆಗ್ಲಿಲ್ಲ".

ಡೊಳ್ಳು ಹೊಟ್ಟೆಯ ರಾಜಕಾರಣಿಗಳು ಹೊಟ್ಟೆಗೇನ್ ತಿಂತಾರೆ?

- ‘ಓಟ್ಸ್’

ಹರಿ ಪರಾಕ್‌

View all posts by this author