Hari Paraak Column: POK - ಪಾಕ್ ಅಕ್ಯುಪೈಡ್ ಕಪ್
ಒಂದು ಕಾಲದಲ್ಲಿ ‘ಇಂಡಸ್ಟ್ರಿ ಆಳುವಂಥ ಆಳು’ ಅಂತ ಹೆಸರು ಮಾಡಿದ್ದ ಈ ಆಸಾಮಿ, ಈಗ ಆಲ್ ಮೋಸ್ಟ್ ಸೆಕ್ಸ್ ಸಿನಿಮಾ ಎನ್ನುವಂಥ ಸಿನಿಮಾಗಳನ್ನು ಮಾಡ್ತಾ ಇದ್ದಾರೆ. ಎಳೆ ವಯಸ್ಸಿನ ಹುಡುಗಿ ಯರ ಅಂಗಾಂಗಗಳನ್ನೇ ಬಂಡವಾಳವಾಗಿ ಇಟ್ಕೊಂಡು ತಲೆ-ಬುಡ ಇಲ್ಲದ ಕಥೆ ಮಾಡಿ ಮೈ ತೋರಿಸೋ ಸಿನಿಮಾ ಮಾಡ್ತಾ ಇದ್ದಾರೆ.

-

ತುಂಟರಗಾಳಿ
ಸಿನಿಗನ್ನಡ
ಕಾಂತಾರ ಪಾರ್ಟ್ 1’ ಸಿನಿಮಾ ದೊಡ್ಡ ಸದ್ದು ಮಾಡುತ್ತಿದೆ. ಎಂದಿನಂತೆ ಬಹುತೇಕರು ‘ಸೂಪರ್’ ಅಂತಿದ್ದರೆ, ಕೆಲವರು ‘ಮಾಮೂಲು’ ಅಂತ ಮೂಗು ಮುರಿಯುತ್ತಿದ್ದಾರೆ. ಏನೇ ಆದ್ರೂ ಬಾಲಿವುಡ್ ಮಂದಿ ಕೂಡಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಕಾಂತಾರ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಅನೇಕ ಸಿನಿಮಾ ಮಂದಿ ಈ ಚಿತ್ರವನ್ನು ಮೆಚ್ಚಿ ಹೊಗಳುತ್ತಿದ್ದಾರೆ. ಅವರಲ್ಲಿ ಪರಭಾಷೆಯವರೂ ಇದ್ದಾರೆ ಅನ್ನೋದು ವಿಶೇಷ. ಈ ಸಾಲಿನಲ್ಲಿ ಅಂದಕಾಲತ್ತಿಲ್ ಗ್ರೇಟ್ ಡೈರೆಕ್ಟರ್ ರಾಮ್‌ಗೋಪಾಲ್ ವರ್ಮಾ ಕೂಡಾ ಇದ್ದಾರೆ.
‘ದೇಶದ ಎಲ್ಲ ಸಿನಿಮಾ ಮೇಕರ್ಸ್ ಗೂ ನಾಚಿಕೆ ಆಗಬೇಕು, ಹಾಗಿದೆ ಕಾಂತಾರ’ ಅಂತ ಹೇಳಿದ್ದಾರೆ ವರ್ಮಾ. ಈ ಸಿನಿಮಾ ಚೆನ್ನಾಗಿದ್ರೆ ಇತರ ಮೇಕರ್ಸ್‌ಗೆ ಯಾಕೆ ನಾಚಿಕೆ ಆಗಬೇಕು ಅಂತ ಅವರು ಹೇಳಿಲ್ಲ. ಆದರೆ ಒಂದು ಮಾತಂತೂ ನಿಜ. ಬೇರೆ ಯಾರಿಗೆ ಆಗದೇ ಇದ್ರೂ ರಾಮ್‌ಗೋಪಾಲ್ ವರ್ಮಾ ಅವರಿಗಂತೂ ನಾಚಿಕೆ ಆಗಲೇ ಬೇಕು.
ಒಂದು ಕಾಲದಲ್ಲಿ ‘ಇಂಡಸ್ಟ್ರಿ ಆಳುವಂಥ ಆಳು’ ಅಂತ ಹೆಸರು ಮಾಡಿದ್ದ ಈ ಆಸಾಮಿ, ಈಗ ಆಲ್ ಮೋಸ್ಟ್ ಸೆಕ್ಸ್ ಸಿನಿಮಾ ಎನ್ನುವಂಥ ಸಿನಿಮಾಗಳನ್ನು ಮಾಡ್ತಾ ಇದ್ದಾರೆ. ಎಳೆ ವಯಸ್ಸಿನ ಹುಡುಗಿ ಯರ ಅಂಗಾಂಗಗಳನ್ನೇ ಬಂಡವಾಳವಾಗಿ ಇಟ್ಕೊಂಡು ತಲೆ-ಬುಡ ಇಲ್ಲದ ಕಥೆ ಮಾಡಿ ಮೈ ತೋರಿಸೋ ಸಿನಿಮಾ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ ತಮ್ಮ ಸೋಷಿಯಲ್ ಮೀಡಿಯಾ ಪೇಜು ಗಳಲ್ಲೂ ತಮ್ಮ ಹೀರೋಯಿನ್‌ಗಳೊಡನೆ, ಅಷ್ಟೇ ಅಲ್ಲದೆ ಪೋರ್ನ್ ಸ್ಟಾರ್‌ಗಳೊಡನೆ ಅಸಹ್ಯ, ಅಸಭ್ಯವಾಗಿ ಇರುವಂಥ ಫೊಟೋಗಳನ್ನು ಹಾಕಿ ವಿಕೃತಿ ಪ್ರದರ್ಶನ ಮಾಡ್ತಾ ಇದ್ದಾರೆ ವರ್ಮಾ.
ಹಾಗಾಗಿ ಎಳೆ ವಯಸ್ಸಿನಲ್ಲಿ ಒಳ್ಳೊಳ್ಳೆ ಸಿನಿಮಾ ಮಾಡಿ ‘ಸತ್ಯ’ದರ್ಶನ ಮಾಡಿಸಿದ್ದ ವರ್ಮಾ ಈಗ ತಮ್ಮ ‘ಕಂಪನಿ’ ಬದಲಾಯಿಸಿಕೊಂಡು ‘ರಂಗೀಲಾ’ ಆಟಗಳನ್ನು ಆಡ್ತಾ ಇರೋದನ್ನು ನೋಡಿ ದಾಗ ಖಂಡಿತಾ ಕಾಂತಾರ ಸಿನಿಮಾ ನೋಡಿ ವರ್ಮಾ ಅಂಥವರಿಗೆ ನಾಚಿಕೆ ಆಗಬೇಕು ಅಂದ್ರೆ ಅದರಲ್ಲಿ ತಪ್ಪೇನಿಲ್ಲ ಬಿಡಿ.
ಇದನ್ನೂ ಓದಿ: Hari Paraak Column: ಕಾಸ್ಟ್ಲೀ ಕಾಂತಾರ: ವೋ ಸೆಪʼರೇಟುʼ, ಯೇ ಸೆಪʼರೇಟುʼ
ಲೂಸ್ ಟಾಕ್ -ಮೊಹ್ಸೀನ್ ನಕ್ವಿ
ಏನ್ ಸರ್, ಇಂಡಿಯಾದವರಿಗೆ ಗೆದ್ರೂ ಕಪ್ ಕೊಡಲ್ಲ ಅಂದುಬಿಟ್ರಲ್ಲ?
- ಮತ್ತೆ, ಆಟ ಆಡಿದ ಮೇಲೆ ಕುಲುಕೋಕೆ ಕೈ ಕೊಡದೇ ಇರೋರ ಕೈಗೆ, ಕಪ್ ಯಾಕೆ ಕೊಡಬೇಕು? ಕಪ್ಪಾ? ನಿಮಗೇಕೆ ಕೊಡಬೇಕು ಕಪ್ಪಾ?
ಅವ್ರು ಕೈ ಕುಲುಕಲಿಲ್ಲ ಅಂತ ಇಷ್ಟೊಂದು ಮುಲುಕ್ತೀರಲ್ಲ, ನೀವು ಕಪ್ ಕೊಡಲ್ಲ ಅಂದಿದ್ದಕ್ಕೆ ಇಂಡಿಯನ್ ಪ್ಲೇಯರ್ಸ್ ರಿಯಾಕ್ಷನ್ ಏನಿತ್ತು?
- ಏನೋ ಗೊತ್ತಿಲ್ಲ. ಆದ್ರೂ ಕೆಲವರು, ನಖ್ವಿ ಕಪ್ ಕೊಡಲ್ಲ ಅಂದಿದ್ದಕ್ಕೆ ನಾವೆಲ್ಲ ನಕ್ವಿ ಅಂತ ಆಡಿಕೊಳ್ತಾ ಇದ್ರಂತೆ.
ರಾಜಕೀಯನ ಆಟದಲ್ಲಿ ಮಿಕ್ಸ್ ಮಾಡೋದು ಸರಿನಾ?
- ನೀವೇ ಶುರು ಮಾಡಿದ್ದು. ಈಗ ಈ ಕಪ್ ಕಾಶ್ಮೀರ ಇದ್ದಂಗೆ. ಸದ್ಯಕ್ಕೆ ಈ ಏಷ್ಯಾ ಕಪ್, POK ಅಂದ್ರೆ ಪಾಕ್ ಆಕ್ಯುಪೈಡ್ ಕಪ್ ಇದ್ದಂಗೆ.
ಹೋಗ್ಲಿ, ನಿಮ್ಮ ಕೈಯಿಂದ ಕಪ್ ತಗೊಳ್ಳಲ್ಲ ಅಂದ ಸೂರ್ಯಕುಮಾರ್ ಯಾದವ್‌ಗೆ ಏನ್
ಹೇಳ್ತೀರಾ?
- ಜಮೀರ್ ಅಹ್ಮದ್ ಸ್ಟೈಲಲ್ಲಿ, ‘ಏನಪ್ಪಾ ಸೂರ್ಯ, ನಿಂಗೆ ದೇವ್ರು ಒಳ್ಳೇದ್ ಮಾಡ್ತದಾ, ಥೂ ನಿನ್ ಜನ್ಮಕ್ಕೆ’ ಅಂತ ಬೈಬೇಕು ಅನ್ನಿಸುತ್ತೆ.
ಅಷ್ಟೇ ಮಾಡೋಕಾಗೋದು ನಿಮ್ ಕೈಲಿ ಪಾಪ, ಆದ್ರೂ ಇಷ್ಟೊಂದ್ ಹಠ ಸರೀನಾ.. ಎಲ್ಲದಕ್ಕೂ ಒಂದ್ ಲಿಮಿಟ್ ಇರುತ್ತೆ ಅಲ್ವಾ?
- ಹೌದು ಖಓ ಈಸ್ ದ ಲಿಮಿಟ್
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಒಂದಿನ ಕಾರ್‌ನಲ್ಲಿ ಒಬ್ಬ ವ್ಯಕ್ತಿ ತುಂಬಾ - ಆಗಿ ಹೋಗ್ತಾ ಇದ್ದ. ಹೈವೇನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದ್ರು. ‘ಯಾಕೆ ಓವರ್ ಸ್ಪೀಡಿಂಗ್ ಮಾಡ್ತಾ ಇದ್ದೀರಾ?’ ಅಂತ ಕೇಳಿದ್ದಕ್ಕೆ ಆತ ‘ನನ್ನ ಕೆಲಸಕ್ಕೆ ಲೇಟ್ ಆಗ್ತಾ ಇದೆ, ಅದಕ್ಕೆ - ಆಗಿ ಹೋಗ್ತಾ ಇz’ ಅಂದ. ‘ಏನಂಥ ಅರ್ಜೆಂಟ್ ಕೆಲ್ಸ? ಎಲ್ಲಿ ಕೆಲ್ಸ ಮಾಡೋದು ನೀನು? ಏನು ನಿನ್ನ ಕೆಲ್ಸ?’ ಅಂತ ಕೇಳಿದ್ರು ಪೊಲೀಸ್.
ಅದಕ್ಕೆ ಆ ವ್ಯಕ್ತಿ ‘ನಾನು ಜಂಬೋ ಸರ್ಕಸ್ ನಲ್ಲಿ ಕೆಲ್ಸ ಮಾಡ್ತಾ ಇರೋದು, ಅಲ್ಲಿ ನಾನು ಬ್ಯಾಲೆ ನ್ಸಿಂಗ್ ಕೆಲ್ಸ ಮಾಡ್ತೀನಿ. ಒಂದ್ ೨೦ ರಿಂಗ್‌ಗಳನ್ನ ಗಾಳಿಯಲ್ಲಿ ಎಸೆದು, ಅವು ಕೆಳಗೆ ಬರ್ತಾ ಇದ್ದ ಹಾಗೆ ಹಿಡಿಯುತ್ತಾ, ಮತ್ತೆ ಕೈಯಲ್ಲಿರೋದನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆ ಮಾಡೋದು ನನ್ನ ಕೆಲಸ’ ಅಂದ.

ಅದಕ್ಕೆ ಪೊಲೀಸ್ ಇಪೆಕ್ಟರ್ ‘ನಿನ್ನ ನಂಬೋದು ಹೆಂಗೆ? ಎಲ್ಲಿ, ಒಂದ್ಸಲ ಇಲ್ಲೇ ಮಾಡಿ ತೋರಿಸು’ ಅಂದ. ಅದಕ್ಕೆ ಆ ವ್ಯಕ್ತಿ, ‘ಇಲ್ಲ ರಿಂಗ್‌ಗಳೆ ಅ ಸರ್ಕಸ್‌ನಲ್ಲಿ ಇರ್ತಾವೆ. ನನ್ನತ್ರ ಇರಲ್ಲ’ ಅಂದ. ಹೀಗೆ ಪೊಲೀಸ್ ಮತ್ತು ಆ ವ್ಯಕ್ತಿ ಮಧ್ಯೆ ಸಂಭಾಷಣೆ ನಡೆಯುತ್ತಿರುವಾಗ ಅಲ್ಲಿಗೆ ಖೇಮು ಕಾರಲ್ಲಿ ಬಂದ. ಖೇಮು ಸಂಜೆ ಹೊತ್ತಿಗೇ ಕುಡಿದು ಫುಲ್ ಟೈಟ್ ಆಗಿದ್ದ.
ಪೊಲೀಸ್ ಅವನನ್ನು ನೋಡಿ, ಕೈ ತೋರಿಸಿ ಗಾಡಿ ನಿಲ್ಲಿಸಿ, ‘ಇವ್ರದ್ದು ಮುಗಿದ ಮೇಲೆ ನಿಮ್ಮನ್ನ ಚೆಕ್ ಮಾಡ್ತೀನಿ, ಗಾಡಿ ಸೈಡಿಗೆ ಹಾಕಿ’ ಅಂತ ಹೇಳಿದ. ಸರಿ, ಇವರಿಬ್ಬರೂ ಮಾತಾಡ್ತಾ ಇರೋದನ್ನ ಮೊದಲೇ ಗಮನಿಸಿದ್ದ ಖೇಮು, ಅ ಸೈಡಲ್ಲಿ ನಿಂತುಕೊಂಡ. ಪೊಲೀಸ್ ಮತ್ತೆ ಆ ಮೊದಲನೇ ವ್ಯಕ್ತಿಯ ಬಳಿ ಹೋದ. ಆ ವ್ಯಕ್ತಿ ರಿಂಗ್ ಇಲ್ಲ ಅಂದಿದ್ದಕ್ಕೆ, ‘ಸರಿ ನನ್ನ ಕಾರ್‌ನಲ್ಲಿ ಒಂದಷ್ಟು ರಿಂU ಇzವೆ, ಅವುಗಳನ್ನೇ ಎಸೆದು, ಹಿಡಿದು ಬ್ಯಾಲೆ ಮಾಡಿ ತೋರಿಸು’ ಅಂದ ಪೊಲೀಸ್.
ಆ ವ್ಯಕ್ತಿ ಒಪ್ಪಿಕೊಂಡು ಪೊಲೀಸ್ ತಂದುಕೊಟ್ಟ ಆ ರಿಂಗ್‌ಗಳನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆ ಮಾಡಿ ತೋರಿಸಿದ. ಅದನ್ನು ನೋಡಿ ಪೊಲೀಸ್ ಗೆ ಅವನು ಸರ್ಕಸ್‌ನಲ್ಲಿ ಕೆಲಸ ಮಾಡ್ತಾನೆ ಅಂತ ನಂಬಿಕೆ ಬಂತು. ಸರಿ, ನೀನಿನ್ನು ಹೊರಡು ಅಂತ ಅವನನ್ನು ಕಳಿಸಿದ. ಇದನ್ನು ನೋಡಿದ ಖೇಮು, ತನ್ನ ಕಾರನ್ನು ಅ ಬಿಟ್ಟು, ಸೀದಾ ಹೋಗಿ ಪೊಲೀಸ್ ಗಾಡಿಯಲ್ಲಿ ಕುಳಿತುಬಿಟ್ಟ.
ಪೊಲೀಸ್‌ಗೆ ಆಶ್ಚರ್ಯ ಆಯ್ತು. ‘ಯಾಕೆ ನೀನೇ ಬಂದು ಪೊಲೀಸ್ ಕಾರಲ್ಲಿ ಕೂತೆ?’ ಅಂತ ಕೇಳಿದ್ದಕ್ಕೆ ಖೇಮು ಹೇಳಿದ ‘ಅಯ್ಯೋ, ಅಷ್ಟೆ ರಿಂಗ್ ಎಸೆದು ಹಿಡಿದು ಬ್ಯಾಲೆ ಮಾಡಿ ತೋರಿಸಿ, ನಾನು ಕುಡಿದಿಲ್ಲ ಅಂತ ಪ್ರೂವ್ ಮಾಡೋಕೆ ನನ್ ಕೈಲಾಗಲ್ಲ, ನಾನೇ ಹೇಳ್ತಾ ಇದ್ದೀನಿ, ಫುಲ್ ಟೈಟಾ ಗಿದ್ದೀನಿ. ಅರೆ ಮಾಡಿ ನನ್ನ’.
ಲೈನ್ ಮ್ಯಾನ್
ಮತ್ತೆ ಮತ್ತೆ ದೇಶದ್ರೋಹಿ ಕೆಲಸ ಮಾಡಲು ‘ಪ್ರಯತ್ನ’ ಮಾಡುವವನು
- ‘ಟ್ರೈ’ಟರ್
ಕರಾಟೆ ಕಲಿತ ಹುಡುಗಿ
- ಹೊಡೆದಾಡುವಾ ಕಾಮನಬಿಲ್ಲು
ಎಣ್ಣೆ ಹೊಡೆಯುವ ಪಂಜಾಬಿ ಹುಡುಗಿ
- ಪಂಜಾಬಿ ‘ಕುಡಿ’
ಸಣ್ಣ ಪುಟ್ಟ ಸಾಲ ಕೊಡುವ ಕೆಲಸ ಮಾಡುವವನ ಮಾತು
- ಕಾಯಕವೇ ಕೈಸಾಲ
ಹಳಸಿದ ಆಹಾರ ತಿಂದು ಗಟ್ಟಿಮುಟ್ಟಾಗಿರುವವನ ಮಾತು
- ‘ಬೂ’ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ
ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?
- ಯಾಕಂದ್ರೆ ಅವು ‘ಬಾಲಾ’ಪರಾಧಿಗಳು
ಹಿಂದೂ ರುದ್ರಭೂಮಿಯಲ್ಲಿ ಬಿಬಿಎಂಪಿ ಕಚೇರಿ
- ಇವರು ಜನಗಳನ್ನಷ್ಟೇ ಅಲ್ಲ, ಹೆಣಗಳನ್ನೂ ‘ಬದುಕೋಕೆ ಬಿಡಲ್ಲ’
ಕವಿ ಆಗಿ 14 ವರ್ಷ ಅನುಭವ ಇರೋನ ಸಾಧನೆ
- ಕ‘ವನವಾಸ’
ಸಾರಿಗೆ ಗಾದೆ
- ಬಾಯಿ ಬಿಟ್ಟು ಕೇಳದೇ ಇದ್ರೆ, ಬಿಎಂಟಿಸಿ ಡ್ರೈವರ್ರೂ ಸ್ಟಾಪ್ ಕೊಡಲ್ಲ
ಬೆಳೆಗೆ ಸರಿಯಾದ ಬೆಲೆ ಸಿಗದ ರೈತನ ಸಂಕಟ
- ‘ಮಂಡಿ’ ನೋವು