ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಮನಸ್ಸು ಒಮ್ಮೆ ನಿರ್ಧಾರ ಮಾಡಿದರೆ ದೇಹ ಬಾಗಲೇಬೇಕು

ದಿನವೂ ನಮ್ಮ ದೇಹಕ್ಕೆ ವ್ಯಾಯಾಮ ಬೇಕು, ಅಂದುಕೊಂಡದ್ದನ್ನು ಸಾಧಿಸಲು ಪರಿಶ್ರಮ ಪಡಬೇಕು ಎಂದು ಗೊತ್ತಿದ್ದರೂ ನೆಪಗಳನ್ನು ಹೂಡುತ್ತಾ ಅದನ್ನು ಮುಂದೂಡುತ್ತಾ ಹೋಗುತ್ತೇವೆ. ಕಾರಣ ಮನಸ್ಸು ‘ಇದು ಆಗುವುದಿಲ್ಲ’ ಎಂದು ಆಗಲೇ ನಿರ್ಧರಿಸಿರುತ್ತದೆ. ಆದರೆ ಬೆಳಗ್ಗೆ ಎದ್ದ ಕೂಡಲೇ ‘ಇಂದು ಇಷ್ಟು ಕೆಲಸಗಳನ್ನು ನಾನು ಮಾಡಲೇಬೇಕು’ ಎಂದು ಗಟ್ಟಿಯಾಗಿ ನಿರ್ಧಾರ ಮಾಡಿ ಒಂದು ಕಡೆ ಬರೆದಿಡಿ.

ಒಂದೊಳ್ಳೆ ಮಾತು

ಒಂದು ಸಣ್ಣ ಹಳ್ಳಿಯಲ್ಲಿ ಇಬ್ಬರು ಗೆಳೆಯರಿದ್ದರು-ಅವರು ವರ್ಷದ 10 ಅರ್ಜುನ್ ಮತ್ತು 6 ವರ್ಷದ ರೋಹನ್. ಎಳೆಯ ಮನಸ್ಸುಗಳಿಗೆ ಸದಾ ಒಟ್ಟಿಗೆ ಆಟ ವಾಡುವ, ಜತೆಯಾಗಿ ಓಡಾಡುವ ಹಂಬಲ. ಅಂದು ಶಾಲೆಗೆ ರಜ. ಇಬ್ಬರೂ ಒಟ್ಟಿಗೆ ಊಟ ಮಾಡಿದರು, ಒಟ್ಟಿಗೆ ಆಟವಾಡಿದರು, ಹೊಟ್ಟೆ ನೋಯುವವರೆಗೂ ನಕ್ಕರು ಮತ್ತು ಮಧ್ಯಾಹ್ನದ ನಂತರ ಊರು ಸುತ್ತಲು ಹೊರಟರು.

ಅಂದು ಮಧ್ಯಾಹ್ನ, ಹೊಲಗಳನ್ನು ದಾಟಿ ಓಡುತ್ತಿರುವಾಗ ಅವರಿಗೇ ತಿಳಿಯದಂತೆ ಒಂದು ದುರಂತ ಸಂಭವಿಸಿತು. ‘ನನ್ನನ್ನು ಹಿಡಿ’ ಎಂದು ತಮಾಷೆಗೆ ಚಿಕ್ಕ ಹುಡುಗ ರೋಹನ್ ಅನ್ನು ಕಿಚಾ ಯಿಸಿ ಓಡುತ್ತಿದ್ದ ಅರ್ಜುನ್, ಆ ಹೊಲದಲ್ಲಿದ್ದ ನೆಲಬಾವಿಗೆ ಅರಿವಿರದೆ ಬಿದ್ದುಬಿಟ್ಟನು. ಅವ ನಿಗೋ ಈಜು ಬರುತ್ತಿರಲಿಲ್ಲ.

ಬಾವಿಗೆ ಬಿದ್ದ ಭಯಕ್ಕೆ ಜೋರಾಗಿ ಕಿರುಚಾಡಲು ಆರಂಭಿಸಿದನು. ಒಂದೊಂದು ಕ್ಷಣವೂ ಅವನಿಗೆ ನೀರಿನ ಒಳಗೆ ಜಾರಿಹೋದಂಥ ಅನುಭವವಾಗಿ ಭಯದಿಂದ ಸಹಾಯಕ್ಕಾಗಿ ಕೂಗಲು ಆರಂಭಿಸಿ ದನು. ಅವನ ಹಿಂದೆಯೇ ಓಡಿಬರುತ್ತಿದ್ದ ಪುಟ್ಟ ರೋಹನ್‌ಗೆ ನಡೆದದ್ದನ್ನು ನೋಡಿ ಹೃದಯವೇ ನಿಂತಹಾಗಾಯಿತು. ಅವನ ಪುಟ್ಟ ಮನಸ್ಸಿಗೆ ಆ ಕ್ಷಣಕ್ಕೆ ಏನೂ ತೋಚಲಿಲ್ಲ.

ಎಷ್ಟು ಸಹಾಯಕ್ಕೆ ಕೂಗಿದರೂ ಸುತ್ತಲೂ ಯಾರೂ ಇರಲಿಲ್ಲ. ಮಧ್ಯಾಹ್ನದ ಆ ಹೊತ್ತಿನಲ್ಲಿ ಆ ಹೊಲದಲ್ಲಿ ಇದ್ದದ್ದು ಇವರಿಬ್ಬರು ಮಾತ್ರ. ನೀರು ಸೇದಲು ಅ ಒಂದು ಹಗ್ಗ ಮತ್ತು ಬಕೆಟ್ ಅನ್ನು ಬಾವಿಯ ಪಕ್ಕ ಇರಿಸಲಾಗಿತ್ತು. ತಕ್ಷಣವೇ ರೋಹನ್ ಯೋಚಿಸದೆ, ಅದನ್ನು ಕೆಳಗೆ ಎಸೆದನು.

ಇದನ್ನೂ ಓದಿ: Roopa Gururaj Column: ವರ್ಷದಲ್ಲಿ ಎರಡೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇವಿ

“ಅರ್ಜುನ್, ಅದನ್ನು ಹಿಡಿದುಕೊ!" ಎಂದು ಕೂಗಿ ಹೇಳಿ ಅಳುತ್ತಲೇ ಆ ಹಗ್ಗದ ಮತ್ತೊಂದು ತುದಿಯನ್ನು ಹಿಡಿದುಕೊಂಡನು. ಅ ಪುಟ್ಟ ಹುಡುಗನ ನಡುಗುವ ತೋಳುಗಳು ಮತ್ತು ಸೆಳೆಯುವ ಸ್ನಾಯುಗಳು ತಮ್ಮೆ ಪರಿಶ್ರಮವನ್ನು ಹಾಕಿ ಅವಡುಗಚ್ಚಿ, ಕೈ ಬೊಬ್ಬೆ ಬಂದರೂ ಶತಾಯಗತಾಯ ಬಿಡದೆ, ಹತ್ತು ವರ್ಷದ ತನ್ನ ಗೆಳೆಯನನ್ನು ಅಂತೂ ಇಂತೂ ಮೇಲೆ ಎಳೆದು ತಂದನು.

ಅರ್ಜುನ್ ಮೇಲೆ ಬರುವ ಹೊತ್ತಿಗೆ ಸಂಪೂರ್ಣವಾಗಿ ನಿತ್ರಾಣನಾದ್ದ ರೋಹನ್ ಅಲ್ಲಿ ಕುಸಿದು ಬಿದ್ದನು. ಅವನನ್ನು ಎತ್ತಿಕೊಂಡು ಹೇಗೋ ಆ 10 ವರ್ಷದ ಹುಡುಗ ಹಳ್ಳಿಗೆ ಬಂದು ಎಲ್ಲರನ್ನೂ ಕೂಗಿ ಕರೆದು, ಅವನಿಗೊಂದಿಷ್ಟು ಉಪಚಾರ ಸಿಗುವಂತೆ ನೋಡಿಕೊಂಡನು. ಸ್ವಲ್ಪ ಹೊತ್ತಿನ ನಂತರ ರೋಹನ್ ಕೂಡ ಚೇತರಿಸಿಕೊಂಡನು.

ನಡೆದದ್ದನ್ನೆ ಕೇಳಿದ ಮೇಲೆ ಆ ಹಳ್ಳಿಯ ವರಿಗೆ ಒಂದು ವಿಷಯವಂತೂ ಅರ್ಥವೇ ಆಗಲಿಲ್ಲ. ಆರು ವರ್ಷದ ಈ ಪುಟ್ಟ ಪೋರ, 10 ವರ್ಷದ ಹುಡುಗನನ್ನು ಹೇಗೆ ಮೇಲೆ ಎಳೆದದ್ದು? ಅದಾವ ದೇವರು ಇವನ ಮೈಮೇಲೆ ಬಂದಿತ್ತು? ಎಂದು ತಮ್ಮ ತಮ್ಮಲ್ಲೇ ಮಾತನಾಡಿ ಕೊಳ್ಳಲು ಪ್ರಾರಂಭಿಸಿದರು.

ಇದನ್ನೇ ಗಮನಿಸುತ್ತಿದ್ದ ಆ ಊರಿನ ಹಿರಿಯಜ್ಜ ನಗುತ್ತಾ ಎಲ್ಲರಿಗೂ ಒಂದು ಮಾತು ಹೇಳಿದ- “ಸದ್ಯ ನೀವು ಯಾರೂ ಹತ್ತಿರದಲ್ಲಿ ಇರಲಿಲ್ಲ. ಇದ್ದಿದ್ದರೆ ‘ನಿನ್ನ ಕೈಲಾಗದು’ ಎಂದು ಹೇಳಿ ಅ ಪುಟ್ಟ ಹುಡುಗನ ಆತ್ಮಸ್ಥೈರ್ಯವನ್ನು ಹಾಳು ಮಾಡುತ್ತಿದ್ದಿರಿ. ಆ ಪುಟ್ಟ ಹುಡುಗನಿಗೆ ತನ್ನ ಸ್ನೇಹಿತನನ್ನು ಹೇಗಾದರೂ ಮಾಡಿ ಬದುಕಿಸಿಕೊಳ್ಳುವುದೊಂದೇ ತಲೆಯಲ್ಲಿ ಇದ್ದ ವಿಷಯ.

ಇದು ತನಗೆ ಸಾಧ್ಯವೇ ಇಲ್ಲವೇ ಎಂದು ಅವನು ಯೋಚಿಸಲೇ ಇಲ್ಲ. ಮನಸ್ಸಿಗೆ ಇರುವ ಶಕ್ತಿಯ ಮುಂದೆ ದೇಹವು ಕೂಡ ಬಾಗಲೇಬೇಕು ಇಲ್ಲಿಯೂ ಅದೇ ಆಗಿದೆ. ಇದು ಸಾಧ್ಯವಿಲ್ಲ ಎಂದು ಅವನಿಗೆ ಗೊತ್ತೇ ಇರಲಿಲ್ಲ. ಆದ್ದರಿಂದಲೇ ಅವನು ಇಂಥ ಪವಾಡವನ್ನು ಮಾಡಿ ತೋರಿಸಿದ್ದಾನೆ". ನಿಜವೇ ಅಲ್ಲವೇ! ದಿನವೂ ನಮ್ಮ ದೇಹಕ್ಕೆ ವ್ಯಾಯಾಮ ಬೇಕು, ಅಂದುಕೊಂಡದ್ದನ್ನು ಸಾಧಿಸಲು ಪರಿಶ್ರಮ ಪಡಬೇಕು ಎಂದು ಗೊತ್ತಿದ್ದರೂ ನೆಪಗಳನ್ನು ಹೂಡುತ್ತಾ ಅದನ್ನು ಮುಂದೂಡುತ್ತಾ ಹೋಗುತ್ತೇವೆ.

ಕಾರಣ ಮನಸ್ಸು ‘ಇದು ಆಗುವುದಿಲ್ಲ’ ಎಂದು ಆಗಲೇ ನಿರ್ಧರಿಸಿರುತ್ತದೆ. ಆದರೆ ಬೆಳಗ್ಗೆ ಎದ್ದ ಕೂಡಲೇ ‘ಇಂದು ಇಷ್ಟು ಕೆಲಸಗಳನ್ನು ನಾನು ಮಾಡಲೇಬೇಕು’ ಎಂದು ಗಟ್ಟಿಯಾಗಿ ನಿರ್ಧಾರ ಮಾಡಿ ಒಂದು ಕಡೆ ಬರೆದಿಡಿ. ಆಶ್ಚರ್ಯವೆನಿಸುವಂತೆ ಆ ದಿನ ಮುಗಿಯುವುದರ ಒಳಗೆ ಅದರಲ್ಲಿ ಬಹುತೇಕ ಕೆಲಸಗಳನ್ನು ಮಾಡಿ ಮುಗಿಸಿರುತ್ತೀರಿ.

ಮನಸ್ಸಿಗೆ ಇರುವ ಶಕ್ತಿ ಅಂಥದ್ದು. ನಾವು ಮನಸ್ಸು ಮಾಡಿದರೆ ನಮ್ಮ ಕೈಲಾಗದ ಕೆಲಸ ಯಾವುದೂ ಇಲ್ಲ. ಮನಸ್ಸಿನ ಶಕ್ತಿಯು, ದೇಹದ ಶಕ್ತಿಗಿಂತ ಮಿಗಿಲು. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಕಲೆ ನಮಗೆ ತಿಳಿದಿರಬೇಕು ಅಷ್ಟೇ.

ರೂಪಾ ಗುರುರಾಜ್

View all posts by this author