ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಆಪರೇಶನ್‌ ಸಿಂದೂರ್:‌ ಇದು ಮೇಡ್‌ ಇನ್‌ ಇಂಡಿಯಾ !

360 ಡಿಗ್ರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ‘ಡಿ-4’ ರೆಡಾರ್ ಸಾಧನವು, ರೇಡಿಯೋ ತರಂಗ ಹೊಂದಿ ರುವ ಸೆನ್ಸರ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿದೆ. ಇದು ಶತ್ರು ದೇಶದ ಅಷ್ಟ ದಿಕ್ಕುಗಳಲ್ಲಿನ ಡ್ರೋನ್‌ಗಳನ್ನು ದೂರದಿಂದಲೇ ಪತ್ತೆಮಾಡಿ, ಗಡಿ ಯೊಳಗೆ ಪ್ರವೇಶಿಸದಂತೆ ಜಾಮ್ ಮಾಡುತ್ತದೆ. ಭಾರತದ ಮೇಲೆ ಹಾರಿಬರುವ ಶತ್ರುದೇಶದ ಡ್ರೋನ್‌ಗಳ ದಾರಿ ತಪ್ಪಿಸುವ ತಂತ್ರಜ್ಞಾನ ವನ್ನು ಇದರಲ್ಲಿ ಅಳವಡಿಸಲಾಗಿದೆ. ಸಣ್ಣ ಡ್ರೋನ್ ಜತೆಗೆ, ಮಾನವರಹಿತ ದೊಡ್ಡ ಡ್ರೋನ್‌ಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಆಪರೇಶನ್‌ ಸಿಂದೂರ್:‌ ಇದು ಮೇಡ್‌ ಇನ್‌ ಇಂಡಿಯಾ !

ಮೋಹನ್‌ ವಿಶ್ವ ಮೋಹನ್‌ ವಿಶ್ವ May 17, 2025 7:08 AM

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ನೆಲೆಗಳನ್ನು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮೂಲಕ ನಾಶಗೊಳಿಸಿದ ನಂತರ, ಭಾರತದ ದೇಸಿನಿರ್ಮಿತ ಯುದ್ಧಸಾಮಗ್ರಿಗಳ ಪರಾಕ್ರಮವನ್ನು ಜಗತ್ತು ನೋಡಿತು. ಪಾಕಿಸ್ತಾನದ ಅಷ್ಟ ದಿಕ್ಕುಗಳನ್ನು ಟಾರ್ಗೆಟ್ ಮಾಡಿ, ಅವರ ನೆಲೆಗಳ ಮೇಲೆ ದಾಳಿ ನಡೆಸಿದ ಭಾರತೀಯ ಸೈನ್ಯದ ಪರಾಕ್ರಮಕ್ಕೆ ಜಗತ್ತಿನ ಅನೇಕ ದೇಶಗಳು ಮೆಚ್ಚುಗೆ ವ್ಯಕ್ತಪಡಿ ಸಿವೆ. ನಮ್ಮ ಸೈನ್ಯವು ಗಡಿರೇಖೆಯನ್ನು ದಾಟಲಿಲ್ಲ, ಮತ್ತೊಂದೆಡೆ ಭಾರತದ ಗಡಿ ಪ್ರವೇಶಿಸಲು ಪಾಕಿಸ್ತಾನಕ್ಕೆ ಬಿಡಲಿಲ್ಲ. ನಿಖರತೆಯ ಮೂಲಕ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿಯು ‘ಮೇಡ್ ಇನ್ ಇಂಡಿಯಾ’ ಶಸ್ತ್ರಾಸ್ತ್ರಗಳ ಮೇಲಿನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಸಂಪೂರ್ಣ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಮಾತ್ರವಲ್ಲದೆ ರಷ್ಯಾ ಮತ್ತು ಇಸ್ರೇಲಿನ ಪಾಲುದಾರಿಕೆಯಲ್ಲಿ ತಯಾರಾದ ಶಸ್ತ್ರಾಸ್ತ್ರಗಳು ಪಾಕಿಸ್ತಾನದ ಮೂಲೆಮೂಲೆಗೂ ತಲುಪಿವೆ. ಚೀನಾವನ್ನು ಸಂಪೂರ್ಣ ನೆಚ್ಚಿದ್ದ ಪಾಕ್ ಸೇನೆಯ ಅಸಗಳು ಭಾರತದ ಗಡಿಯನ್ನು ಪ್ರವೇಶಿಸಲು ಆಗಲಿಲ್ಲ. ಟರ್ಕಿ ನಿರ್ಮಿತ ಡ್ರೋನ್ ಬಳಸಿ ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯನ್ನು ಛಿದ್ರಗೊಳಿಸುವಲ್ಲಿ ಸ್ವದೇಶಿ ನಿರ್ಮಿತ ರಕ್ಷಾಕವಚಗಳು ಯಶಸ್ವಿ ಯಾಗಿವೆ.

ರಷ್ಯಾ ಮತ್ತು ಭಾರತದ ಜಂಟಿ ಸಹಯೋಗದಲ್ಲಿ ತಯಾರಾಗುತ್ತಿರುವ ‘ಬ್ರಹ್ಮೋಸ್’ ಕ್ಷಿಪಣಿಯು ಉಗ್ರರ ನೆಲೆಗಳನ್ನು ಸರ್ವನಾಶಗೊಳಿಸಿದೆ. “ಬ್ರಹ್ಮೋಸ್ ಕ್ಷಿಪಣಿಯ ತಾಕತ್ತೇ ನೆಂಬುದನ್ನು ಪಾಕಿಸ್ತಾನವನ್ನು ಕೇಳಬೇಕು" ಎಂಬುದಾಗಿ ಯೋಗಿ ಆದಿತ್ಯನಾಥ್ ಹೇಳಿದ ಮಾತು ಅಕ್ಷರಶಃ ಸತ್ಯ. ಉಗ್ರರ ನೆಲೆಗಳು ಸರ್ವನಾಶವಾಗಿರುವ ವಿಡಿಯೋಗಳನ್ನು ನೋಡಿದರೆ, ಈ ಕ್ಷಿಪಣಿಯ ನಿಖರ ದಾಳಿ ಮತ್ತು ಅದರಿಂದುಂಟಾಗುವ ಹಾನಿಯ ಪ್ರಮಾಣ ಎದ್ದು ಕಾಣುತ್ತದೆ.

ಇದನ್ನೂ ಓದಿ: Mohan Vishwa Column: ಹಿಂದೂ ಹಬ್ಬಗಳ ಆರ್ಥಿಕತೆ

ಭಾರತದ ಹಳೆಯ ಸ್ನೇಹಿತನಾಗಿರುವ ರಷ್ಯಾ, ಭಾರತದ ಪ್ರತಿಯೊಂದು ಯುದ್ಧದಲ್ಲೂ ನಮ್ಮ ಸಹಾಯಕ್ಕೆ ನಿಂತಿದೆ. ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯು, ಜಗತ್ತಿನ ಅನೇಕ ದೇಶಗಳು ‘ಮೇಡ್ ಇನ್ ಇಂಡಿಯಾ’ ಅಸ್ತ್ರಗಳ ಕಡೆಗೆ ಮುಖಮಾಡುವಂತೆ ಮಾಡಿದೆ. ಕಳೆದ ಕೆಲವು ವರ್ಷ ಗಳಿಂದ, ಮೋದಿ ನೇತೃತ್ವದ ಕೇಂದ್ರ ಸರಕಾರವು ನಮ್ಮ ಸೈನ್ಯದ ಆಧುನೀಕರಣದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ.

‘ಆತ್ಮನಿರ್ಭರ ಭಾರತ’ದ ಅಡಿಯಲ್ಲಿ ಸ್ವದೇಶಿ ಕಂಪನಿಗಳ ಮೂಲಕ ರಕ್ಷಣಾ ಉಪಕರಣಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ, ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚು ಮಾಡಲಾಗುತ್ತಿದೆ. 2024-25ರಲ್ಲಿ ಭಾರತದಲ್ಲಿ ಉತ್ಪಾದನೆಯಾದ, ದಾಖಲಾರ್ಹ 23622 ಕೋಟಿ ರುಪಾಯಿ ಮೌಲ್ಯದ ರಕ್ಷಣಾ ಉಪಕರಣಗಳು ವಿದೇಶಗಳಿಗೆ ರಫ್ತಾಗಿವೆ.

ಭಾರತದ ‘ಬ್ರಹ್ಮಪುತ್ರಾ’ ಮತ್ತು ರಷ್ಯಾದ ‘ಮಸ್ಕೊವಾ’ ನದಿಗಳ ಹೆಸರುಗಳನ್ನು ಬೆಸೆದು ರೂಪು ಗೊಂಡ ಹೆಸರನ್ನು ಹೊತ್ತಿರುವ ಕ್ಷಿಪಣಿ ‘ಬ್ರಹ್ಮೋಸ್’. ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ವೇಗವಾಗಿ ಚಲಿಸಬಲ್ಲದು. ವೇಗವಾಗಿ ಚಲಿಸುವ ಜಗತ್ತಿನ ಕ್ರೂಸ್ ಕ್ಷಿಪಣಿಗಳಲ್ಲಿ ‘ಬ್ರಹ್ಮೋಸ್’ ಕೂಡ ಒಂದಾಗಿದೆ.

6 R

ಭಾರತದ ‘ಡಿಆರ್‌ಡಿಒ’ ಮತ್ತು ರಷ್ಯಾದ ‘ಎನ್ ಪಿಒಎಂ’ ಸಂಸ್ಥೆಗಳ ಸಹಯೋಗದಲ್ಲಿ ಈ ಕ್ಷಿಪಣಿ ಯನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಯುದ್ಧವಿಮಾನ, ನೌಕಾಪಡೆಯ ಹಡಗು ಮತ್ತು ಭೂಸೇನೆಯ ನೆಲದ ಮೇಲಿನ ವಾಹನಗಳ ಮೂಲಕ ಉಡಾವಣೆ ಮಾಡಬಹುದು. ಈ ಕ್ಷಿಪಣಿ ಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿ ಬಹಳ ವರ್ಷಗಳ ಹಿಂದೆಯೇ ಭಾರತೀಯ ಸೇನೆಗೆ ಅಧಿಕೃತ ವಾಗಿ ಸೇರಿಸಲಾಗಿತ್ತು.

2019ರಲ್ಲಿ, ಈ ಕ್ಷಿಪಣಿ ಕ್ರಮಿಸಬಹುದಾದ ಅಂತರವನ್ನು 450 ಕಿ.ಮೀ.ವರೆಗೂ ವಿಸ್ತರಿಸಲಾಗಿತ್ತು. ‘ಯುದ್ಧವಿಮಾನಗಳಲ್ಲಿ ಇಷ್ಟು ದೂರ ಸಾಗಬಲ್ಲ ಸಾಮರ್ಥ್ಯವಿರುವ ಕ್ಷಿಪಣಿಯನ್ನು ಬಳಸುವ ಜಗತ್ತಿನ ಏಕೈಕ ದೇಶ ಭಾರತ’ ಎಂದು ನಿವೃತ್ತ ಸೇನಾಧಿಕಾರಿಗಳು ಹೇಳಿದ್ದಾರೆ. ಸುಖೋಯ್-30 ಯುದ್ಧವಿಮಾನದಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಿ 450 ಕಿ.ಮೀ.ವರೆಗೆ ಉಡಾವಣೆ ಮಾಡ ಬಹುದಾಗಿದೆ.

ಫಿಲಿಪೈನ್ಸ್ ದೇಶದೊಂದಿಗೆ 2022ರಲ್ಲಿ ಮಾಡಿಕೊಂಡಿದ್ದ 375 ಮಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದದ ಭಾಗವಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡಲಾಗಿದೆ. ಇದನ್ನು ಮತ್ತಷ್ಟು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ 300 ಕೋಟಿ ರುಪಾಯಿ ವೆಚ್ಚದ ನೂತನ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಯಿತು.

ಈ ಘಟಕವು ವರ್ಷಕ್ಕೆ 100-150 ಕ್ಷಿಪಣಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೈದರಾ ಬಾದ್ ಮತ್ತು ತಿರುವನಂತಪುರಂನಲ್ಲಿ ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಘಟಕವು ಈಗಾಗಲೇ ಚಾಲನೆಯಲ್ಲಿದೆ. ಇನ್ನು, ಪಾಕಿಸ್ತಾನದಿಂದ ಹಾರಿಬಂದ ಟರ್ಕಿ ಡ್ರೋನ್ ಗಳನ್ನು ಆಕಾಶದಲ್ಲೇ ಹೊಡೆದುರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಸ್ವದೇಶಿನಿರ್ಮಿತ ಮತ್ತೊಂದು ರಕ್ಷಾಕವಚ ವೆಂದರೆ ‘ಆಕಾಶ್’ ವ್ಯವಸ್ಥೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ‘ಆಕಾಶ್’, ಭಾರತದ ಬಹುಪದರದ ವಾಯುರಕ್ಷಣಾ ವ್ಯವಸ್ಥೆಯ ಒಂದು ಭಾಗ.

ವಿರೋಧಿ ಪಡೆಯ ನಾಲ್ಕು ಟಾರ್ಗೆಟ್‌ಗಳನ್ನು ಏಕಕಾಲಕ್ಕೆ 25 ಕಿ.ಮೀ. ದೂರದಿಂದಲೇ ಉಡಾ ಯಿಸಬಲ್ಲ, ಕಡಿಮೆ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆ ‘ಆಕಾಶ್’. ಆಧುನಿಕ ತಂತ್ರಜ್ಞಾನದ ಬಲದೊಂದಿಗೆ ನೂತನವಾಗಿ ನಿರ್ಮಿಸಲಾಗಿರುವ ಈ ಕ್ಷಿಪಣಿಯಲ್ಲಿ, 70-80 ಕಿ.ಮೀ. ದೂರದ ಟಾರ್ಗೆಟ್ ಅನ್ನು ಉಡಾಯಿಸಬಲ್ಲ ಹಾಗೂ ವಿರೋಧಿ ಪಡೆಯ ಡ್ರೋನ್‌ಗಳ ಸಿಗ್ನಲ್ ಅನ್ನು ಜಾಮ್ ಮಾಡುವ ಸಾಮರ್ಥ್ಯವನ್ನು ಅಳವಡಿಸಲಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ಅತ್ಯಂತ ವೇಗವಾಗಿ ನಿಯೋಜಿಸಬಲ್ಲ ತಂತ್ರಜ್ಞಾನವನ್ನು ‘ಆಕಾಶ್’ನಲ್ಲಿ ಕಾಣಬಹುದು. ಗಡಿಪ್ರದೇಶಗಳಲ್ಲಿ ವೇಗವಾಗಿ ನಿಯೋಜಿಸಲ್ಪಡುವಂತೆ ಇದನ್ನು ಉತ್ಪಾದಿಸ ಲಾಗಿದೆ. ಇಸ್ರೇಲಿನ ‘ಐರನ್ ಡೋಮ್’, ರಾಕೆಟ್‌ಗಳನ್ನು ಮಾತ್ರ ತಡೆಯುವ ತಂತ್ರಜ್ಞಾನವನ್ನು ಹೊಂದಿದೆ. ಆದರೆ ‘ಆಕಾಶ್’ ವ್ಯವಸ್ಥೆಯು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ತಂತ್ರಜ್ಞಾನವನ್ನು ಹೊಂದಿದೆ.

15 ‘ಆಕಾಶ್’ ವ್ಯವಸ್ಥೆಗಳನ್ನು ರಫ್ತು ಮಾಡುವುದಕ್ಕೆ ಸಂಬಂಧಿಸಿ ಭಾರತವು ಅರ್ಮೇನಿಯಾ ದೇಶದೊಂದಿಗೆ 2022ರಲ್ಲಿ ಸಹಿ ಹಾಕಿದೆ. ಬ್ರೆಜಿಲ್ ಮತ್ತು ಈಜಿಪ್ಟ್ ದೇಶಗಳು ಕೂಡ ‘ಆಕಾಶ್’ ವ್ಯವಸ್ಥೆಯ ಖರೀದಿಯಲ್ಲಿ ಆಸಕ್ತಿ ತೋರಿವೆ. ‘ಡಿ-4’ ಎಂಬುದು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಮತ್ತು ‘ಆಪರೇಷನ್ ಸಿಂದೂರ’ದಲ್ಲಿ ಬಳಸಲಾದ ಪ್ರಮುಖ ವಾಯುರಕ್ಷಣಾ ವ್ಯವಸ್ಥೆ. ’ಈಟ್ಞಛಿ ಈಛಿಠಿಛ್ಚಿಠಿ ಈಛಿಠಿಛ್ಟಿ Zb ಈಛಿoಠ್ಟಿಟqs’ ಉದ್ದೇಶದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆಯಿದು.

360 ಡಿಗ್ರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಈ ‘ಡಿ-4’ ರೆಡಾರ್ ಸಾಧನವು, ರೇಡಿಯೋ ತರಂಗ ಹೊಂದಿರುವ ಸೆನ್ಸರ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿದೆ. ಇದು ಶತ್ರು ದೇಶದ ಅಷ್ಟದಿಕ್ಕುಗಳಲ್ಲಿನ ಡ್ರೋನ್‌ಗಳನ್ನು ದೂರದಿಂದಲೇ ಪತ್ತೆಮಾಡಿ, ಗಡಿಯೊಳಗೆ ಪ್ರವೇಶಿಸ ದಂತೆ ಜಾಮ್ ಮಾಡುತ್ತದೆ. ಭಾರತದ ಮೇಲೆ ಹಾರಿಬರುವ ಶತ್ರುದೇಶದ ಡ್ರೋನ್‌ಗಳ ದಾರಿ ತಪ್ಪಿಸುವ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ.

ಸಣ್ಣ ಡ್ರೋನ್ ಜತೆಗೆ, ಮಾನವರಹಿತ ದೊಡ್ಡ ಡ್ರೋನ್‌ಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯ ವನ್ನು ಇದು ಹೊಂದಿದೆ. ದೇಶದ ವಿವಿಧ ಡಿಆರ್ ಡಿಒ ಲ್ಯಾಬ್‌ಗಳು, ಬೆಂಗಳೂರಿನಲ್ಲಿರುವ ಎಲ್‌ಆರ್‌ಡಿಇ, ಹೈದರಾಬಾದ್‌ನಲ್ಲಿರುವ ಇಏಉಖಖ ಮತ್ತು ಡೆಹ್ರಾಡೂನ್ ನಲ್ಲಿರುವ ಐಆರ್‌ಡಿಇ ಸಂಸ್ಥೆಗಳಲ್ಲಿ ಕೈಗೊಳ್ಳಲಾದ ಜಂಟಿ ಸಂಶೋಧನೆಯ ಫಲಶ್ರುತಿಯಾಗಿ ‘ಡಿ-4’ ತಂತ್ರಜ್ಞಾನ ಹೊರಹೊಮ್ಮಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಸದಾ ಭಾರತದೊಂದಿಗೆ ಹೆಗಲುಕೊಟ್ಟಿದೆ. ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ‘ಬರಾಕ್-8’ ಕ್ಷಿಪಣಿ ಮತ್ತು ‘ಸ್ಕೈಸ್ಟ್ರೈಕರ್ ಡ್ರೋನ್’ ಗಳನ್ನು ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ. ಈ ತಂತ್ರಜ್ಞಾನವನ್ನು ಎರಡೂ ದೇಶಗಳು ಕಳೆದ ತಿಂಗಳಷ್ಟೇ ಪರೀಕ್ಷಿಸಿದ್ದವು.

ಪಾಕಿಸ್ತಾನದ ಗ್ರಹಚಾರ ಚೆನ್ನಾಗಿಲ್ಲ, ಈ ಕ್ಷಿಪಣಿಯ ಪರೀಕ್ಷೆಯಾದ ಒಂದು ತಿಂಗಳಲ್ಲಿ ಅದರ ಮೇಲೆ ಪ್ರಯೋಗ ಮಾಡಲಾಯಿತು! ಈ ಕ್ಷಿಪಣಿಯನ್ನು ಭೂಮಿಯಿಂದ ಅಥವಾ ಹಡಗಿನಿಂದ ಉಡಾಯಿಸಬಹುದಾಗಿದೆ. ಮೊಬೈಲ್ ಲಾಂಚರ್ ಬಳಸಿ ಈ ಕ್ಷಿಪಣಿಯನ್ನು ಪ್ರಯೋಗಿಸಬಹು ದಾದ್ದರಿಂದ, ತುರ್ತು ಪರಿಸ್ಥಿತಿಯಲ್ಲಿ ಇದನ್ನು ಗಡಿಭಾಗಕ್ಕೆ ಶೀಘ್ರವಾಗಿ ಕೊಂಡೊಯ್ಯಬಹುದು.

70 ಕಿ.ಮೀ. ದೂರದ ಶತ್ರುವಿನ ಟಾರ್ಗೆಟ್ ಅನ್ನು ಉಡಾಯಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ‘ರಫೇಲ್’ ಯುದ್ಧವಿಮಾನದ ಖರೀದಿ ವೇಳೆ ಕಾಂಗ್ರೆಸ್ಸಿಗರು ಇಲ್ಲಸಲ್ಲದ ರಾಜಕೀಯ ಮಾಡಿದರು. ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು ದೇಶದ ಮೂಲೆಮೂಲೆಗಳಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದರು.

ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದ ನಂತರ ಅವರು ಬಾಯಿಮುಚ್ಚಿದರು. ಸೈನ್ಯದ ಶಕ್ತಿಯನ್ನು ಉಡುಗಿಸುವ ಕೆಲಸವನ್ನು ಕಾಂಗ್ರೆಸ್ ನೆಹರು ಅವರ ಕಾಲದಿಂದಲೂ ಮಾಡಿಕೊಂಡು ಬಂದಿದೆ. ‘ಇಂಡಿಯಾ-ಚೀನಾ, ಭಾಯಿ-ಭಾಯಿ’ ಎಂದು ಹೇಳುವ ಮೂಲಕ ನೆಹರು, ಸೈನ್ಯದ ಮೇಲಿನ ಖರ್ಚನ್ನೇ ಕಡಿಮೆ ಮಾಡಿದ್ದರು. ಅದರ ಪರಿಣಾಮವಾಗಿ 1962ರ ಯುದ್ಧದಲ್ಲಿ ದೊಡ್ಡ ಭೂಭಾಗವನ್ನು ಆಕ್ರಮಿಸಿಕೊಳ್ಳುವಂತಾಯಿತು.

ಮನಮೋಹನ್ ಸಿಂಗ್‌ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ಭಾರತದ ರಕ್ಷಣಾ ವೆಚ್ಚವನ್ನು ಹೆಚ್ಚಿಸಲಿಲ್ಲ, ಆಧುನಿಕ ಯುದ್ಧೋಪಕರಣಗಳನ್ನು ಸೈನ್ಯಕ್ಕೆ ಸೇರಿಸಲಿಲ್ಲ. ರಷ್ಯಾದ ‘ಎಸ್-400’ ವಾಯುರಕ್ಷಣಾ ಕವಚವನ್ನು ಖರೀದಿಸಲು ಭಾರತವು 2022ರಲ್ಲಿ ಮುಂದಾದಾಗ, ಭಾರತದ ಮೇಲೆ ನಿರ್ಬಂಧ ಹೇರಲು ಅಮೆರಿಕ ಸಜ್ಜಾಗಿತ್ತು. ತಕ್ಷಣ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿ, ಅಂದಿನ ಅಧ್ಯಕ್ಷ ಬೈಡನ್ ಜತೆಗೆ ಮಾತನಾಡಿ ನಿರ್ಬಂಧ ಹೇರದಂತೆ ನೋಡಿಕೊಂಡರು.

ನಂತರ ಭಾರತವು ರಷ್ಯಾದಿಂದ ಎರಡು ‘ಎಸ್-400’ ರಕ್ಷಣಾ ವ್ಯವಸ್ಥೆಯನ್ನು ಆಮದು ಮಾಡಿ ಕೊಂಡಿತು. ‘ಆಪರೇಷನ್ ಸಿಂದೂರ್’ ನಂತರ, ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ಡ್ರೋನ್ ದಾಳಿಗಳನ್ನು ತಡೆಯುವಲ್ಲಿ ಈ ರಕ್ಷಣಾ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಿತ್ತು. ಭಾರತೀಯ ಸೇನೆಯ ‘ಸುದರ್ಶನ ಚಕ್ರ’ ಎಂದೇ ಕರೆಯಲ್ಪಡುವ ‘ಎಸ್-400’ ರಕ್ಷಣಾ ವ್ಯವಸ್ಥೆಯು, ಶತ್ರುಗಳ ಶಸ್ತ್ರಾಸ್ತ್ರ ಗಳು ಗಡಿಯೊಳಗೆ ಬರುವುದನ್ನು ತಡೆಯುವಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ

ಒಟ್ಟಾರೆ ಹೇಳುವುದಾದರೆ, ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯು, ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯ ಅಡಿಯಲ್ಲಿ ನಿರ್ಮಾಣವಾದ ‘ಮೇಡ್ ಇನ್ ಇಂಡಿಯಾ’ ಹಣೆಪಟ್ಟಿಯ ರಕ್ಷಣಾ ಉಪಕರಣಗಳ ಶಕ್ತಿಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿತು. ರಕ್ಷಣಾ ಉಪಕರಣಗಳ ಉತ್ಪಾದನೆ ಯಲ್ಲಿ ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿರುವುದನ್ನು ಜಗತ್ತಿಗೇ ಸಾರಿ ಹೇಳಿತು.