ವೀಕೆಂಡ್ ವಿತ್ ಮೋಹನ್
camohanbn@gmail.com
ಇಸ್ರೇಲ್ ನಡೆಸಿದ್ದ ಆರು ದಿನಗಳ ಯುದ್ಧದ ಬಗ್ಗೆ ಬಹುತೇಕರಿಗೆ ತಿಳಿದಿದೆ. ಇಸ್ರೇಲ್ ಕೇವಲ ಆರು ದಿನಗಳಲ್ಲಿ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಬಳಸಿಕೊಂಡು 1967ರಲ್ಲಿ ಈಜಿಪ್ಟ್, ಸಿರಿಯಾ ಹಾಗೂ ಜೋರ್ಡನ್ ದೇಶಗಳ ಮೇಲೆ ಯುದ್ಧ ಮಾಡಿ ಇಡೀ ಜಗತ್ತಿಗೆ ತನ್ನ ಸೈನ್ಯದ ಶಕ್ತಿ ಪ್ರದರ್ಶನವನ್ನು ತೋರಿಸಿತ್ತು. ಈ ಯುದ್ಧದಲ್ಲಿ ಇಸ್ರೇಲ್ ಪರವಾಗಿ ಅಮೆರಿಕ ಸಂಪೂರ್ಣವಾಗಿ ನಿಂತಿತ್ತು. ಈ ಯುದ್ಧದ ನಂತರ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಅರಬ್ಬರನ್ನು ಮೀರಿಸಿದ ಹೊಸ ಶಕ್ತಿಯಾಗಿ ಹೊರಹೊಮ್ಮಿತ್ತು.
ಅರಬ್ಬರ ನಾಡಿನ ದೊಡ್ಡ ದೊಡ್ಡ ರಾಜಕೀಯ ನಾಯಕರು ಕೈಚೆಲ್ಲಿ ಕುಳಿತಿದ್ದರು. ಆ ಸಂದರ್ಭ ದಲ್ಲಿ ‘ಪ್ಯಾಲೆಸ್ತೀನ್ ಲಿಬರೇಶನ್ ಸಂಘಟನೆ’ ಹುಟ್ಟಿಕೊಂಡಿತು. 1969ರಲ್ಲಿ ಜೋರ್ಡನ್ ನಲ್ಲಿದ್ದ ಪ್ಯಾಲೆಸ್ತೀನಿಗಳು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆಯಿಡುವ ಸಲುವಾಗಿ ತಮ್ಮ ಸಂಘಟನೆ ಮೂಲಕ ಚಳವಳಿಗಳನ್ನು ಮಾಡಲು ಪ್ರಾರಂಭಿಸಿದ್ದರು. ಜೋರ್ಡನ್ ದೇಶದೊಳಗೆ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದರು.
ಆರು ದಿನಗಳ ಯುದ್ಧದ ಸೋಲಿನಿಂದ ಕೆಂಗೆಟ್ಟಿದಂತಹ ಅರಬ್ಬರ ನಾಡಿನಿಂದ ಸಾವಿರಾರು ಯುವಕರು ಈ ಸಂಘಟನೆಗೆ ಸೇರಿಕೊಂಡರು. ಜಗತ್ತಿನಾದ್ಯಂತ ಹಲವು ಮುಸಲ್ಮಾನರು ಈ ಸಂಘಟನೆಗೆ ಸೇರಿಕೊಂಡರು, 1969ರಲ್ಲಿ ಜೋರ್ಡಾನಿನಲ್ಲಿದ್ದಂತಹ ಪ್ಯಾಲೆಸ್ತೀನಿಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದವು.
ಜೋರ್ಡಾನಿನ ಸೈನ್ಯದ ಸಹಾಯದಿಂದ ಪ್ಯಾಲೆಸ್ತೀನಿ ಪ್ರತ್ಯೇತಕವಾದಿ ಸಂಘಟನೆ ಇಸ್ರೇಲ್ ಸೈನಿಕರ ವಿರುದ್ಧ ಹೋರಾಡಿ ವಿಜಯ ಸಾಧಿಸಿತ್ತು. ಮೊಟ್ಟಮೊದಲ ಬಾರಿಗೆ ಇಸ್ರೇಲ್ ಸೈನ್ಯಕ್ಕೆ ಪ್ಯಾಲೆಸ್ತೀನಿ ಗಳಿಂದ ಹಿನ್ನಡೆಯಾಗಿತ್ತು, ಈ ದಾಳಿಯ ನೇತೃತ್ವವನ್ನು ವಹಿಸಿಕೊಂಡಿದ್ದವನು ಪ್ಯಾಲೆಸ್ತೀನಿ ನಾಯಕ ‘ಯಾಸೀರ್ ಅರಾಫತ್’.
ಇದನ್ನೂ ಓದಿ: Mohan Vishwa Column: ಭಾರತ ಜಪಾನ್ ಮೀರಿಸಿದರೆ ಎಡಚರರಿಗೆ ಉರಿ
ಅರಬ್ಬರು ಮಾಡದ ಕೆಲಸವನ್ನು ಜೋರ್ಡಾನ್ ಸೈನ್ಯದ ನೆರವಿನಿಂದ ‘ಯಾಸಿರ್ ಅರಾಫತ್’ ಮಾಡಿ ದ್ದನು. ಮುಂದಿನ ದಿನಗಳಲ್ಲಿ ‘ಯಾಸಿರ್ ಅರಾಫತ್’ನ ಜನಪ್ರಿಯತೆ ಅರಬ್ಬರಲ್ಲಿ ಹೆಚ್ಚತೊಡಗಿತು. ಅರಾಫತ್- ಪ್ಯಾಲೆಸ್ತೀನಿ ಸಂಘಟನೆಯ ನೂತನ ನಾಯಕನಾಗಿ ಹೊರಹೊಮ್ಮಿದ್ದ, ಆದರೆ ಅರಬ್ಬ ರಲ್ಲಿ ನಿಧಾನವಾಗಿ ಒಗ್ಗಟ್ಟು ಮುರಿದಿತ್ತು.
ಸೌದಿ ಅರೇಬಿಯಾ ಹಾಗೂ ಇರಾನ್ ದೇಶಗಳು ಅಮೆರಿಕ ದೇಶದೊಡನೆ ಕೈ ಜೋಡಿಸಿದ್ದವು. ಇತ್ತ ಜೋರ್ಡಾನ್ ಹಾಗೂ ಈಜಿಪ್ಟ್ ದೇಶಗಳು ನಿಧಾನವಾಗಿ ಅಮೆರಿಕ ದೇಶದೊಡನೆ ಮಾತುಕತೆ ಯಾಡಲು ಪ್ರಾರಂಭಿಸಿದ್ದವು. ಜೋರ್ಡಾನ್ ನಿಧಾನವಾಗಿ ಇಸ್ರೇಲ್ ದೇಶದೊಡನೆ ಮಾತುಕತೆ ಆರಂಭಿಸಿತ್ತು, ಜೋರ್ಡಾನ್‌ನಲ್ಲಿ ನಿಧಾನವಾಗಿ ಮುಸ್ಲಿಂ ದೊರೆ ’ಹುಸೇನ್’ನ ಜನಪ್ರಿಯತೆ ಕುಗ್ಗತೊಡಗಿತು.
ಜೋರ್ಡಾನ್ ಸೈನ್ಯ ಆತನ ಮಾತನ್ನು ಕೇಳಲು ತಯಾರಿರಲಿಲ್ಲ, ಆತನ ವಿರುದ್ಧ ಕೆಲಸ ಮಾಡ ತೊಡಗಿತ್ತು. ಪ್ಯಾಲೆಸ್ತೀನಿ ಸಂಘಟನೆ ಯಾವಾಗ ಬೇಕಾದರೂ ಮಿಂಚಿನ ದಾಳಿಯ ಮೂಲಕ ಕಾರ್ಯಾಚರಣೆ ನಡೆಸಿ ಜೋರ್ಡಾನ್ ಪ್ರಾಂತ್ಯದಲ್ಲಿ ತಾನು ಕೇಳುತ್ತಿರುವ ಪ್ರತ್ಯೇಕ ಪ್ಯಾಲೆಸ್ತೀನಿ ರಾಷ್ಟ್ರವನ್ನು ಪಡೆದು ಬಿಡಬಹುದೆಂಬ ಭಯ ಅವನಿಗಿತ್ತು.
‘ಹುಸೇನ್’ನನ್ನು ಕೊಲ್ಲಲು ಪ್ಯಾಲೆಸ್ತೀನಿಗಳು ಹಲವು ಪ್ರಯತ್ನಗಳನ್ನು ಮಾಡಿದ್ದರು, ಅದೃಷ್ಟವ ಷಾತ್ ಆತನಿಗೆ ಏನೂ ಆಗಲಿಲ್ಲ. ‘ಜೋರ್ಡಾನ್’ ದೇಶದಲ್ಲಿ ಸಣ್ಣದಾದ ಭೂಭಾಗವನ್ನು ಪ್ಯಾಲಿಸ್ತೀನಿಗಳು ವಶಪಡಿಸಿಕೊಂಡು ನಿರಂತರವಾಗಿ ಇಸ್ರೇಲ್ ಮೇಲೆ ಸಣ್ಣ ಪುಟ್ಟ ದಾಳಿಗಳನ್ನು ಮಾಡುತ್ತಿದ್ದರು. ಇದರಿಂದ ಹುಸೇನ್ ತನ್ನ ದೇಶದಲ್ಲಿ ನಿಧಾನವಾಗಿ ತನ್ನ ನೆಲೆಯನ್ನೇ ಕಳೆದು ಕೊಳ್ಳುತ್ತಿದ್ದ.
ತನ್ನ ಸೈನ್ಯದ ಕೆಲವು ಅಧಿಕಾರಿಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದ ‘ಹುಸೇನ್’ ಪ್ಯಾಲೆ ಸ್ತೀನಿಗಳನ್ನು ಬಗ್ಗು ಬಡೆಯಲು ಪಾಕಿಸ್ತಾನದ ಸಹಾಯ ಕೋರಿದ್ದ. ಸೆಪ್ಟೆಂಬರ್ 1970ರಲ್ಲಿ ಪ್ಯಾಲಿ ಸ್ತೀನಿಗಳು ‘ಸ್ವಿಸ್ ಏರ್’ ವಿಮಾನವನ್ನು ಅಪಹರಿಸಿ ಈಜಿಪ್ಟಿನ ಕೈರೋನಲ್ಲಿ ಇಳಿಸಿ, ಪ್ರಯಾಣಿಕ ರನ್ನು ಕೆಳಗಿಳಿಸಿ ಕ್ಯಾಮೆರಾಗಳ ಮುಂದೆ ಇಡೀ ವಿಮಾನಕ್ಕೆ ಬೆಂಕಿ ಹಚ್ಚಿದರು. ಇದಾದ ನಂತರ ಜೋರ್ಡಾನ್ನಿನ ‘ಇಬ್ರಿಡ್’ ಪ್ರಾಂತ್ಯವನ್ನು ಸ್ವತಂತ್ರವೆಂದು ಘೋಷಿಸಿ ಪ್ಯಾಲಿಸ್ತೀನಿ ಭೂಭಾಗ ವೆಂದರು.
ಇನ್ನು ಸುಮ್ಮನಿರುವುದು ಸರಿಯಿಲ್ಲವೆಂದು ‘ಹುಸೇನ್’ ಜೋರ್ಡಾನ್ ದೇಶದಲ್ಲಿ ‘ಮಾರ್ಷಿಯಲ್ ಕಾನೂನು’ ಘೋಷಿಸಿಬಿಟ್ಟನು. 1970ರ ಸೆಪ್ಟೆಂಬರ್ ತಿಂಗಳಲ್ಲಿ ಜೋರ್ಡಾನ್ ಸೈನ್ಯ ಹಾಗೂ ಪಾಕಿಸ್ತಾನದಿಂದ ತರಬೇತಿ ನೀಡಲು ಬಂದಿದ್ದ ’ಜಿಯಾ ಉಲ್ ಹಕ್’ ನೇತೃತ್ವದ ಪಡೆಗಳು ಇರಾನಿ ಸೈನಿಕರೊಂದಿಗೆ ‘ಇಬ್ರಿಡ್’ ನಗರಕ್ಕೆ ಪ್ಯಾಲೆಸ್ತೀನಿಗಳನ್ನು ಸದೆಬಡಿಯಲು ನುಗ್ಗಿದವು. ಇಡೀ ಕಾರ್ಯಾಚರಣೆ ಪಾಕಿಸ್ತಾನದ ಸೇನಾನಾಯಕ ‘ಜಿಯಾ ಉಲ್ ಹಕ್’ ನೇತೃತ್ವದಲ್ಲಿ ನಡೆಯಿತು. ‘ಇಬ್ರಿಡ್’ ಪ್ರಾಂತ್ಯದ ಗಲ್ಲಿ ಗಲ್ಲಿಗಳಲ್ಲಿ ಪ್ಯಾಲಿಸ್ತೀನಿಗಳನ್ನು ಮನಬಂದಂತೆ ಕೊಲ್ಲ ಲಾಯಿತು. ಒಂದು ಅಂದಾಜಿನ ಪ್ರಕಾರ, ಸುಮಾರು 25000 ಪ್ಯಾಲಿಸ್ತೀನಿ ಮುಸಲ್ಮಾನರನ್ನು ಈ ಕಾರ್ಯಾ ಚರಣೆಯಲ್ಲಿ ಕೊಲ್ಲಲಾಗಿದೆ. ಸಿರಿಯಾ ಪ್ಯಾಲೆಸ್ತೀನಿಗಳ ಸಹಾಯಕ್ಕೆ ನಿಲ್ಲಲು ಮುಂದೆ ಬಂದಿತ್ತು.
ಆದರೆ ಇಸ್ರೇಲ್ ಹಾಗೂ ಅಮೆರಿಕ ನೀಡಿದ ಎಚ್ಚರಿಕೆಯಿಂದ ಹಿಂದೆ ಸರಿದು ಪ್ಯಾಲಿಸ್ತೀನಿಗಳಿಗೆ ಸಹಾಯ ಮಾಡಲಿಲ್ಲ. ಪ್ಯಾಲಿಸ್ತೀನಿ ನಾಯಕ ‘ಅರಾಫತ್’ ರೇಡಿಯೋ ಸಂದರ್ಶನದಲ್ಲಿ ಸುಮಾರು 10000 ಪ್ಯಾಲಿಸ್ತೀನಿಗಳು ಮೃತಪಟ್ಟರೆಂದು ಹೇಳಿದ್ದ. ಪಾಕಿಸ್ತಾನದ ‘ಜಿಯಾ ಉಲ್ ಹಕ್’ ಪ್ಯಾಲಿ ಸ್ತೀನಿ ಮುಸಲ್ಮಾನರ ಮೇಲೆ ನಡೆಸಿದ ಈ ಕಾರ್ಯಾಚರಣೆಯನ್ನು ಮುಸಲ್ಮಾನರ ಮೇಲೆ ನಡೆದ ಪ್ರಪಂಚದ ಬಹುದೊಡ್ಡ ನರಮೇಧವೆಂದು ಇಂದಿಗೂ ಹೇಳಲಾಗುತ್ತದೆ.
ವಿಧಿಯಿಲ್ಲದೆ ‘ಯಾಸಿರ್ ಅರಾಫತ್’ ಕದನ ವಿರಾಮ ಘೋಷಿಸಬೇಕಾಯಿತು. ಜೋರ್ಡಾನ್ ಪಡೆಗಳಿಗೆ ಶರಣಾಗಿ ‘ಇಬ್ರಿಡ್’ ಪ್ರಾಂತ್ಯದಿಂದ ತನ್ನ ಹೋರಾಟಗಾರರನ್ನು ವಾಪಸ್ ಕರೆಸಿಕೊಳ್ಳುವ ಪರಿಸ್ಥಿತಿ ಪ್ಯಾಲೆಸ್ತೀನಿಗರಿಗೆ ಎದುರಾಯಿತು. ಜಿಯಾ ಉಲ್ ಹಕ್ ನಡೆಸಿದ ಸೆಪ್ಟೆಂಬರ್ 1970ರ ಕಾರ್ಯಾಚರಣೆ ಪ್ಯಾಲೇಸ್ತೀನಿ ಮುಸಲ್ಮಾನರಲ್ಲಿ ಅದೆಷ್ಟು ಸೇಡಿನ ಮನೋಭಾವನೆಯನ್ನು ಮೂಡಿಸಿತ್ತೆಂದರೆ, ಸೇಡು ತೀರಿಸಿಕೊಳ್ಳಲು ‘ಬ್ಲಾಕ್ ಸೆಪ್ಟೆಂಬರ್’ ಎಂಬ ಉಗ್ರ ಸಂಘಟನೆ ಯೊಂದನ್ನು ಕಟ್ಟಿದರು.
ನಂತರದ ದಿನಗಳಲ್ಲಿ ಜರ್ಮನಿಯ ‘ಮ್ಯುನಿಕ್’ ಒಲಿಂಪಿಕ್‌ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಅಪಹರಣ ಹಾಗೂ ಕೊಲೆಯ ಹೊಣೆಯನ್ನು ಇದೇ ಉಗ್ರ ಸಂಘಟನೆ ಹೊತ್ತಿತ್ತು. 1970ರ ಸೆಪ್ಟೆಂಬರ್ ತಿಂಗಳಲ್ಲಿ ಪ್ಯಾಲಿಸ್ತೀನಿ ಮುಸ್ಲಿಂ ಸಂಘಟನೆಗಳ ಮೇಲೆ ಏಳು ದಿನಗಳ ಕಾಲ ‘ಜಿಯಾ ಉಲ್ ಹಕ್’ ಹಾಗೂ ಜೋರ್ಡಾನ್ ದೊರೆ ‘ಹುಸೇನ್’ ನಡೆಸಿದ ನರಮೇಧದಲ್ಲಿ ಸತ್ತವರ ಸಂಖ್ಯೆ ಇಪ್ಪತ್ತು ವರ್ಷಗಳಲ್ಲಿ ಇಸ್ರೇಲ್ ದಾಳಿಗೆ ತುತ್ತಾಗಿ ಸತ್ತಂತಹ ಪ್ಯಾಲೆಸ್ತೀನಿಗಳಿಗಿಂತಲೂ ಹೆಚ್ಚಿತ್ತೆಂದು ಇಸ್ರೇಲ್ ದೇಶದ ಜನಕರೊಬ್ಬರು ಬಹಿರಂಗವಾಗಿ ಅಂದು ಹೇಳಿದ್ದರು.
1981ರಲ್ಲಿ ಪ್ಯಾಲಿಸ್ತೀನಿ ಮುಸಲ್ಮಾನರ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ‘ಜಿಯಾ ಉಲ್ ಹಕ್’, ಪಾಕಿಸ್ತಾನ ಹಾಗೂ ಇಸ್ರೇಲ್ ಎರಡೂ ದೇಶಗಳ ಸಿದ್ಧಾಂತವೊಂದೇ ಆಗಿದೆ. ಹೇಗೆ ಯಹೂದಿ ಗಳಿಲ್ಲದೆ ಇಸ್ರೇಲ್ ರಾಷ್ಟ್ರವಿಲ್ಲವೋ, ಮುಸಲ್ಮಾನರಿಲ್ಲದೇ ಪಾಕಿಸ್ತಾನವಿಲ್ಲ. ಯಹೂದಿಗಳಿಗಾಗಿ ಇಸ್ರೇಲ್ ಹೇಗೆ ಯಾವ ಮಟ್ಟಕ್ಕಾದರೂ ಹೋಗಿ ತನ್ನವರನ್ನು ಕಾಪಾಡುತ್ತದೆಯೋ, ಮುಸಲ್ಮಾನ ರಿಗಾಗಿ ಪಾಕಿಸ್ತಾನ ಯಾವ ಮಟ್ಟಕ್ಕಾದರೂ ಹೋಗಿ ತನ್ನವರನ್ನು ಕಾಪಾಡುತ್ತದೆಯೆಂದು ತನ್ನ ಪ್ರಜೆಗಳ ಮುಂದೆ ಹೇಳಿದ್ದ.
ಇಸ್ರೇಲ್ ದೇಶದಿಂದ ‘ಜೂಡಾಯಿಸಂ’ ತೆಗೆದರೆ ಹೇಗೆ ಇಡೀ ದೇಶ ತರಗೆಲೆಯಾಗಿ ಉದುರುತ್ತದೆಯೋ, ಪಾಕಿಸ್ತಾನದಿಂದ ‘ಇಸ್ಲಾಂ’ ತೆಗೆದು ಜಾತ್ಯತೀತತೆಯನ್ನು ಪ್ರತಿಪಾದಿಸಿದರೆ ಪಾಕಿಸ್ತಾನ ತರಗೆಲೆಯಂತೆ ಉದುರುವುದು ನಿಶ್ಚಿತವೆಂದು ಹೇಳಿದ್ದನು. ಪ್ಯಾಲಿಸ್ತೇನಿನ ರಸ್ತೆಗಳಲ್ಲಿ ಸಾವಿರಾರು ಮುಸಲ್ಮಾನ ರನ್ನು ಕೊಂದವನಿಗೆ ಅಂದಿನ ಪಾಕಿಸ್ತಾನ ಸರಕಾರ ‘ಮುಂಬಡ್ತಿ’ ನೀಡಿ ಗೌರವಿಸಿತ್ತು, ಮುಸಲ್ಮಾನ್ ರಾಷ್ಟ್ರವೊಂದು ಮುಸಲ್ಮಾನರನ್ನು ಕೊಂದಿದಕ್ಕೆ ದೂಡ್ಡ ಬಹುಮಾನ ನೀಡಿದ ಜಗತ್ತಿನ ಏಕೈಕ ಮುಸಲ್ಮಾನ ರಾಷ್ಟ್ರ ಪಾಕಿಸ್ತಾನ.
ಪಾಕಿಸ್ತಾನದ ಅಂದಿನ ಅಧ್ಯಕ್ಷ ‘ಜುಲಿಕರ್ ಅಲಿ ಭುಟ್ಟೋ’ ಸ್ವತಃ ಈ ನಿರ್ಧಾರವನ್ನು ತೆಗೆದು ಕೊಂಡು ‘ಜಿಯಾ ಉಲ್ ಹಕ್ ’ನನ್ನು ಸೈನ್ಯದ ಮುಖ್ಯಸ್ಥನನ್ನಾಗಿ ನೇಮಿಸಿದ್ದರು. 1976ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಪರಮಾಣು’ ತಂತ್ರಜ್ಞಾನದ ಬಗ್ಗೆ ಬಹುದೊಡ್ಡ ಚರ್ಚೆಗಳು ಆರಂಭವಾಗಿದ್ದವು, ಪಾಕಿಸ್ತಾನವು ಸಹ ಪರಮಾಣು ತಂತ್ರಜ್ಞಾನದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡು ‘ಪರಮಾಣು’ ಬಾಂಬ್ ತಯಾರಿಸುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸುತ್ತಿತ್ತು.
ಅಮೆರಿಕವು ಪಾಕಿಸ್ತಾನದ ಈ ನಡೆಯನ್ನು ಖಂಡಿಸಿ ‘ಇಸ್ಲಾಮಿಕ್ ಬಾಂಬ್’ಎಂದು ಕರೆಯುವ ಮೂಲಕ ಎಚ್ಚರಿಕೆ ನೀಡಿತ್ತು. ಆದರೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಮಂಡಳಿಯ ಅನುಮತಿ ಪಡೆದು ತಾನು ಈ ಕೆಲಸ ಮಾಡುತ್ತಿರುವುದಾಗಿ ಅಂದಿನ ಪಾಕಿಸ್ತಾನದ ಅಧ್ಯಕ್ಷ ‘ಜುಲ್ಫಿಕರ್ ಅಲಿ ಭುಟ್ಟೋ’ ಹೇಳಿದ್ದರು, ಅವರ ಮಾತುಗಳನ್ನು ಪಾಶ್ಚಿಮಾತ್ಯ ದೇಶಗಳು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಇದೇ ಸಮಯದಲ್ಲಿ ಪಾಕಿಸ್ತಾನದ ಸೈನ್ಯದ ಮುಖ್ಯಸ್ಥನಾಗಿದ್ದ ‘ಜನರಲ್ ಟಿಕ್ಕಾ ಖಾನ್’ ನಿವೃತ್ತಿ ಹೊಂದುವವನಿದ್ದ. ಆತನ ಜಾಗಕ್ಕೆ ನೂತನ ಮುಖ್ಯಸ್ಥನನ್ನು ಕೂರಿಸಬೇಕಿತ್ತು. 1947ರ ನಂತರ ಪಾಕಿಸ್ತಾನದ ಇತಿಹಾಸದಲ್ಲಿ ನಡೆದಂತಹ ‘ಸೇನಾ ಮುಖ್ಯಸ್ಥರ’ ಕ್ಷಿಪ್ರ ಕಾರ್ಯಾಚರಣೆಯ ಅರಿವಿದ್ದ ‘ಭುಟ್ಟೋ’ ತಾನು ಹೇಳಿದ ಹಾಗೆ ಕೇಳುವ ವ್ಯಕ್ತಿಯನ್ನು ಆ ಜಾಗಕ್ಕೆ ಕೂರಿಸಬೇಕಿತ್ತು.
‘ಜನರಲ್ ಟಿಕ್ಕಾ ಖಾನ್’ ಬಳಿ ಮಾತನಾಡಿ ಆತನು ಕಳುಹಿಸಿದ ಶಿಫಾರಸ್ಸು ಪಟ್ಟಿಯಲ್ಲಿ ‘ಜಿಯಾ ಉಲ್ ಹಕ್’ನ ಹೆಸರಿಲ್ಲದಿರುವುದನ್ನು ಕಂಡು ‘ಭುಟ್ಟೋ’ಗೆ ಆಶ್ಚರ್ಯವಾಗಿತ್ತು. ಆರು ಜನರ ಹೆಸರನ್ನು ಶಿಫಾರಸ್ಸು ಮಾಡಿದ ಆತ, ‘ಜಿಯಾ ಉಲ್ ಹಕ್’ನ ಹೆಸರನ್ನು ಶಿಫಾರಸ್ಸು ಮಾಡಿರಲಿಲ್ಲ.
ಆದರೆ 1973ರಲ್ಲಿ ’ಜುಲಿಕರ್ ಅಲಿ ಭುಟ್ಟೋ’ ಸರಕಾರದ ಮೇಲೆ ಬೇಹುಗಾರಿಕೆ ನಡೆಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆಡಳಿತವನ್ನು ಸೈನ್ಯದ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಒಂದು ತಂಡದ ಕಾರ್ಯಾಚರಣೆಯನ್ನು ವಿಫಲಗೊಳಿಸುವಲ್ಲಿ ‘ಜಿಯಾ ಉಲ್ ಹಕ್’ ಪ್ರಮುಖ ಪಾತ್ರ ವಹಿಸಿದ್ದರಿಂದ ‘ಭುಟ್ಟೋ’ಗೆ ಆತನ ಮೇಲೆ ಆತ್ಮವಿಶ್ವಾಸ ಹೆಚ್ಚಿತ್ತು.
ಹಾಗಾಗಿ ‘ಭುಟ್ಟೋ’ ಜನರಲ್ ಟಿಕ್ಕಾ ಖಾನ್ ಮಾತಿಗೆ ಮಣೆ ಹಾಕದೆ ‘ಜಿಯಾ ಉಲ್ ಹಕ್’ನನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನಾಗಿ ಘೋಷಿಸಿಬಿಟ್ಟರು. ಸರಿಯಾದ ಸಮಯಕ್ಕೆ ಕಾದು ತನ್ನ ಕಾರ್ಯಾಚರಣೆ ನಡೆಸುವ ನರಿ ಬುದ್ಧಿಯ ಸೇನಾ ಮುಖ್ಯಸ್ಥ ‘ಜಿಯಾ ಉಲ್ ಹಕ್’ನ ಬಗ್ಗೆ ಭುಟ್ಟೋ ಗೆ ಅರಿವಿರಲಿಲ್ಲ. ಮುಂದೆ ಊಸರವಳ್ಳಿಯಂತೆ ಸರಿಯಾದ ಸಮಯಕ್ಕೆ ಕಾಯ್ದು ಜಿಯಾ ಉಲ್ ಹಕ್ ಪಾಕಿಸ್ತಾನದ ಆಡಳಿತವನ್ನು ಸೇನಾ ಕಾರ್ಯಾಚರಣೆಯ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡು ಜುಲ್ಪಕರ್ ಅಲಿ ಭುಟ್ಟೋನನ್ನು ನೇಣಿಗೇರಿಸಿದ.
ಪಾಕಿಸ್ತಾನದ ಸೇನಾ ಮುಖ್ಯಸ್ಥನೊಬ್ಬ ಪ್ಯಾಲೆಸ್ತೀನಿ ಮುಸಲ್ಮಾನರನ್ನು ಬೀದಿ ಬೀದಿಗಳಲ್ಲಿ ಕೊಲ್ಲು ವುದನ್ನು ಪಾಕಿಸ್ತಾನ ಅಂದು ತಡೆಯಬಹುದಾಗಿತ್ತು, ಆದರೆ ತಡೆಯಲಿಲ್ಲ. ಜೋರ್ಡಾನ್ ಸೈನ್ಯಕ್ಕೆ ತರಬೇತಿ ನೀಡಲೆಂದು ಹೋಗಿದ್ದ ತನ್ನ ಸೈನ್ಯಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳಲಿಲ್ಲ. ಪ್ಯಾಲಿ ಸ್ತೀನಿ ಮುಸಲ್ಮಾನರ ಮೇಲೆ ಆತನು ನಡೆಸಿದ ನರಮೇಧಕ್ಕೆ ಮೆಚ್ಚಿ ಆತನಿಗೆ ಮುಂಬಡ್ತಿ ನೀಡಿ, ಮುಂದೆ ಆತನನ್ನು ಪಾಕಿಸ್ತಾನಿ ಸೈನ್ಯದ ’ಮುಖ್ಯಸ್ಥನನ್ನಾಗಿ’ ಮಾಡಿದ್ದರು.