ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಪಾರಿವಾಳಗಳ ರೇಸಿಂಗ್

ಪಾರಿವಾಳಗಳ ರೇಸಿಂಗ್ (Pigeon Racing) ಎಂಬುದು ಕೇವಲ ಒಂದು ಹವ್ಯಾಸವಲ್ಲ, ಇದೊಂದು ಕೋಟ್ಯಂತರ ರುಪಾಯಿಗಳ ವಹಿವಾಟು ನಡೆಯುವ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ರೇಸಿಂಗ್ ಪಾರಿವಾಳವು ಬರೋಬ್ಬರಿ 14-15 ಕೋಟಿ ರುಪಾಯಿ ಗಳಿಗೆ (1.9 ಮಿಲಿಯನ್ ಡಾಲರ್) ಮಾರಾಟವಾಗಿ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು

ಸಂಪಾದಕರ ಸದ್ಯಶೋಧನೆ

ಪಾರಿವಾಳಗಳ ರೇಸಿಂಗ್ (Pigeon Racing) ಎಂಬುದು ಕೇವಲ ಒಂದು ಹವ್ಯಾಸವಲ್ಲ, ಇದೊಂದು ಕೋಟ್ಯಂತರ ರುಪಾಯಿಗಳ ವಹಿವಾಟು ನಡೆಯುವ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ರೇಸಿಂಗ್ ಪಾರಿವಾಳವು ಬರೋಬ್ಬರಿ 14-15 ಕೋಟಿ ರುಪಾಯಿ ಗಳಿಗೆ (1.9 ಮಿಲಿಯನ್ ಡಾಲರ್) ಮಾರಾಟವಾಗಿ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು.

ಸಾಮಾನ್ಯ ಪಾರಿವಾಳಗಳಿಗೂ ಮತ್ತು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗುವ ರೇಸಿಂಗ್ ಪಾರಿವಾಳಗಳಿಗೂ ಇರುವ ವ್ಯತ್ಯಾಸವೇನು? ಅವು ಏಕೆ ಅಷ್ಟು ಬೆಲೆಬಾಳುತ್ತವೆ? ರೇಸಿಂಗ್ ಪಾರಿವಾಳಗಳ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಅವುಗಳ ‘ಹೋಮಿಂಗ್ ಇನ್‌ಸ್ಟಿಂಕ್ಟ್’.

ಸಾವಿರಾರು ಕಿ.ಮೀ. ದೂರದ ಅಪರಿಚಿತ ಜಾಗದಲ್ಲಿ ಇವುಗಳನ್ನು ಬಿಟ್ಟರೂ, ಅತ್ಯಂತ ನಿಖರವಾಗಿ ತಮ್ಮ ಗೂಡಿಗೆ ಇವು ಮರಳಿ ಬರುತ್ತವೆ. ವಿಜ್ಞಾನಿಗಳ ಪ್ರಕಾರ, ಇವು ಭೂಮಿಯ ಕಾಂತೀಯ ವಲಯ (Magnetic Field) ಮತ್ತು ಸೂರ್ಯನ ಸ್ಥಾನವನ್ನು ಬಳಸಿಕೊಂಡು ದಾರಿಯನ್ನು ಪತ್ತೆ ಹಚ್ಚುತ್ತವೆ.

ಇಂಥ ತೀಕ್ಷ್ಣ ಬುದ್ಧಿವಂತಿಕೆ ಇರುವ ಹಕ್ಕಿಗಳನ್ನು ಅಭಿವೃದ್ಧಿಪಡಿಸಲು ದಶಕಗಳ ಕಾಲ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ ಬೇಕಾಗುತ್ತದೆ. ರೇಸಿಂಗ್ ಪಾರಿವಾಳಗಳ ಬೆಲೆ ನಿರ್ಧರಿಸುವಲ್ಲಿ ಅವುಗಳ ‘ವಂಶಾವಳಿ’ ಪ್ರಮುಖ ಪಾತ್ರ ವಹಿಸುತ್ತದೆ. ಕುದುರೆ ಪಂದ್ಯದ (Horse Racing) ರೀತಿಯ ಇಲ್ಲಿಯೂ ಚಾಂಪಿಯನ್ ಪಾರಿವಾಳಗಳ ಮರಿಗಳಿಗೆ ಭಾರಿ ಬೇಡಿಕೆ ಇರುತ್ತದೆ.

ಇದನ್ನೂ ಓದಿ: Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

ಒಂದು ಪಾರಿವಾಳವು ದೊಡ್ಡ ರೇಸ್‌ಗಳನ್ನು ಗೆದ್ದಿದ್ದರೆ, ಅದರ ಮರಿಗಳು ಕೂಡ ಅದೇ ವೇಗ ಮತ್ತು ಶಕ್ತಿಯನ್ನು ಹೊಂದಿರುತ್ತವೆ ಎಂದು ನಂಬಲಾಗುತ್ತದೆ. ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ದೇಶಗಳು ವಿಶ್ವದ ಅತ್ಯುತ್ತಮ ರೇಸಿಂಗ್ ಪಾರಿವಾಳಗಳನ್ನು ಬೆಳೆಸುವಲ್ಲಿ ಪ್ರಸಿದ್ಧವಾಗಿವೆ.

‘ಅರ್ಮಾಂಡೋ’ ಮತ್ತು ‘ನ್ಯೂ ಕಿಮ್’ನಂಥ ಪಾರಿವಾಳಗಳು ಇತಿಹಾಸದ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿವೆ. ಒಂದು ರೇಸಿಂಗ್ ಪಾರಿವಾಳ ವನ್ನು ಸಿದ್ಧಪಡಿಸುವುದು ಸುಲಭದ ಮಾತಲ್ಲ. ಇದಕ್ಕೆ ವರ್ಷಾನುಗಟ್ಟಲೆ ಸಮಯ ಮತ್ತು ಹಣ ವ್ಯಯವಾಗುತ್ತದೆ. ಇವು ಸತತವಾಗಿ 10ರಿಂದ 12 ಗಂಟೆಗಳ ಕಾಲ, ಗಂಟೆಗೆ 80-100 ಕಿ.ಮೀ. ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿರಬೇಕು.

ಇವುಗಳಿಗೆ ಸಾಮಾನ್ಯ ಧಾನ್ಯಗಳ ಜತೆಗೆ ಪ್ರೋಟೀನ್ ಮತ್ತು ವಿಟಮಿನ್ ಸಮೃದ್ಧವಾಗಿರುವ ವಿಶೇಷ ಆಹಾರವನ್ನು ನೀಡಲಾಗುತ್ತದೆ. ರೇಸಿಂಗ್ ಪಾರಿವಾಳಗಳಿಗೆ ನಿಯತವಾಗಿ ಪಶುವೈದ್ಯರಿಂದ ತಪಾ ಸಣೆ ಮಾಡಿಸಲಾಗುತ್ತದೆ. ಈ ಹಂತದಲ್ಲಿ ಆಗುವ ವೆಚ್ಚವೇ ಈ ಪಾರಿವಾಳಗಳ ಮೌಲ್ಯವನ್ನು ಹೆಚ್ಚಿಸುತ್ತದೆ. ಪಾರಿವಾಳಗಳ ಬೆಲೆ ಇಷ್ಟೊಂದು ಗಗನಕ್ಕೇರಲು ಮುಖ್ಯ ಕಾರಣ ಚೀನಾ.

ಹಿಂದೆ ಬೆಲ್ಜಿಯಂ ಈ ಕ್ರೀಡೆಯ ಕೇಂದ್ರವಾಗಿತ್ತು. ಆದರೆ ಚೀನಾದಲ್ಲಿ ಆರ್ಥಿಕತೆ ಬೆಳೆದಂತೆ, ಅಲ್ಲಿನ ಶ್ರೀಮಂತರು ಪಾರಿವಾಳ ರೇಸಿಂಗ್ ಅನ್ನು ಒಂದು ‘ಸ್ಟೇಟಸ್ ಸಿಂಬಲ’ ಆಗಿ ಪರಿಗಣಿಸಲು ಆರಂಭಿಸಿ‌ ದರು. ಚೀನಾದ ಹರಾಜಿನಲ್ಲಿ ಶ್ರೀಮಂತ ಉದ್ಯಮಿಗಳು ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದು ಬಿಡ್ ಮಾಡುವುದರಿಂದ ಬೆಲೆ ಕೋಟಿ ದಾಟುತ್ತದೆ. ಹೂಡಿಕೆಯ ದೃಷ್ಟಿಯಿಂದಲೂ ಇವುಗಳನ್ನು ಖರೀದಿಸಲಾಗುತ್ತದೆ. ಒಂದು ಚಾಂಪಿಯನ್ ಪಾರಿವಾಳವನ್ನು ಖರೀದಿಸಿ ಅದರ ಮೂಲಕ ನೂರಾರು ಮರಿಗಳನ್ನು ಉತ್ಪಾದಿಸಿ ಮಾರಾಟ ಮಾಡುವುದರಿಂದ ಭಾರಿ ಲಾಭ ಗಳಿಸಬಹುದು. ಇಂದಿನ ಪಾರಿವಾಳ ರೇಸಿಂಗ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಪ್ರತಿಯೊಂದು ಪಾರಿವಾಳದ ಕಾಲಿಗೆ ಇಲೆಕ್ಟ್ರಾನಿಕ್ ಟ್ಯಾಗ್ ಕಟ್ಟಲಾಗುತ್ತದೆ. ಅದು ಗೂಡಿಗೆ ಮರಳಿದ ತಕ್ಷಣ ಸಮಯವನ್ನು ಮಿಲಿ ಸೆಕೆಂಡುಗಳಲ್ಲಿ ದಾಖಲಿಸಲಾಗುತ್ತದೆ. ದೊಡ್ಡ ರೇಸ್‌ಗಳಲ್ಲಿ ಗೆಲ್ಲುವ ಪಾರಿವಾಳದ ಮಾಲೀಕರಿಗೆ ಕೋಟ್ಯಂತರ ರುಪಾಯಿಗಳ ಬಹುಮಾನ ದೊರೆಯುತ್ತದೆ. ಈ ಬಹುಮಾನದ ಮೊತ್ತವೇ ಪಾರಿವಾಳಗಳ ಮೌಲ್ಯವನ್ನು ಹೆಚ್ಚಿಸುತ್ತದೆ.

ರೇಸಿಂಗ್ ಸಮಯದಲ್ಲಿ ಪಾರಿವಾಳಗಳು ದೂರದ ಹಾದಿಯನ್ನು ಮಾತ್ರ ಕ್ರಮಿಸುವುದಿಲ್ಲ, ಅವು ಪ್ರಕೃತಿಯ ಅನೇಕ ಸವಾಲುಗಳನ್ನು ಎದುರಿಸುತ್ತವೆ. ಹಾರಾಟದ ಹಾದಿಯಲ್ಲಿ ಹದ್ದುಗಳ ದಾಳಿ ಯಿಂದ ಬದುಕುಳಿಯಬೇಕು. ಅನಿರೀಕ್ಷಿತ ಮಳೆ, ಗಾಳಿ ಮತ್ತು ಗುಡುಗುಗಳನ್ನು ಎದುರಿಸಿ ದಾರಿ ತಪ್ಪದೇ ಬರಬೇಕು. ಇಷ್ಟೆಲ್ಲ ಅಪಾಯ ದಾಟಿ ಗೆದ್ದು ಬರುವ ಪಾರಿವಾಳವು ‘ಸೂಪರ್ ಅಥ್ಲೀಟ್’ ಎಂದು ಪರಿಗಣಿಸಲ್ಪಡುತ್ತದೆ, ಹಾಗಾಗಿ ಅದರ ಬೆಲೆ ಹೆಚ್ಚಿರುತ್ತದೆ. ರೇಸಿಂಗ್ ಪಾರಿವಾಳಗಳು ಬೆಲೆ ಬಾಳಲು ಅವುಗಳ ಅಸಾಧಾರಣ ಜೈವಿಕ ಗುಣ ಲಕ್ಷಣಗಳು ಮತ್ತು ಜಾಗತಿಕ ಮಾರುಕಟ್ಟೆ ಯಲ್ಲಿನ ಬೇಡಿಕೆ ಮುಖ್ಯ ಕಾರಣ.

ವಿಶ್ವೇಶ್ವರ ಭಟ್‌

View all posts by this author