ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

ಆಸ್ಟ್ರೇಲಿಯಾ ಇಂದು ವಿಶ್ವದ ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ಇಂಗ್ಲಿಷ್ ಪ್ರಾಬಲ್ಯದ ಈ ನಾಡಿನಲ್ಲಿ ಅರೇಬಿಕ್ ಭಾಷೆ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಹೊರಹೊಮ್ಮಿದೆ ಅಂದರೆ ಅನೇಕರಿಗೆ ಅಚ್ಚರಿಯಾಗಬಹುದು. ಆಸ್ಟ್ರೇಲಿಯಾಕ್ಕೆ ಅರೇಬಿಕ್ ಭಾಷಿಕರ ಆಗಮನವು 19ನೇ ಶತಮಾನದ ಅಂತ್ಯದ ಆರಂಭವಾಯಿತು.

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

-

ಸಂಪಾದಕರ ಸದ್ಯಶೋಧನೆ

ಆಸ್ಟ್ರೇಲಿಯಾ ಇಂದು ವಿಶ್ವದ ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ಇಂಗ್ಲಿಷ್ ಪ್ರಾಬಲ್ಯದ ಈ ನಾಡಿನಲ್ಲಿ ಅರೇಬಿಕ್ ಭಾಷೆ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಹೊರಹೊಮ್ಮಿದೆ ಅಂದರೆ ಅನೇಕರಿಗೆ ಅಚ್ಚರಿಯಾಗಬಹುದು. ಆಸ್ಟ್ರೇಲಿಯಾಕ್ಕೆ ಅರೇಬಿಕ್ ಭಾಷಿಕರ ಆಗಮನವು 19ನೇ ಶತಮಾನದ ಅಂತ್ಯದ ಆರಂಭವಾಯಿತು. ಆಗ ಪ್ರಮುಖವಾಗಿ ಸಿರಿಯಾ ಮತ್ತು ಲೆಬನಾನ್‌ನಿಂದ ಜನರು ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿದ್ದರು. ಇವರನ್ನು ‘ಒಟ್ಟೋಮನ್’ ಪ್ರಜೆಗಳು ಎಂದು ಕರೆಯಲಾಗುತ್ತಿತ್ತು.

ಆದರೆ, 1940ರ ನಂತರ ಈ ಹರಿವು ವೇಗವಾಯಿತು. ಎರಡನೇ ಮಹಾಯುದ್ಧದ ನಂತರ ಆಸ್ಟ್ರೇಲಿ ಯಾಕ್ಕೆ ಹೆಚ್ಚಿನ ಕಾರ್ಮಿಕರ ಅಗತ್ಯವಿದ್ದಾಗ, ಮಧ್ಯಪ್ರಾಚ್ಯದ ದೇಶಗಳಿಂದ ಅನೇಕರು ಅಲ್ಲಿಗೆ ತೆರಳಿ ನೆಲೆಸಿದರು. ಅರೇಬಿಕ್ ಭಾಷಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದ್ದು 1975-1990ರ ಅವಧಿಯಲ್ಲಿ.

ಲೆಬನಾನ್‌ನಲ್ಲಿ ಭೀಕರ ಅಂತರ್ಯುದ್ಧ ನಡೆದಾಗ, ಆಸ್ಟ್ರೇಲಿಯಾ ಸರಕಾರವು ಲೆಬನಾನಿನ ನಿರಾಶ್ರಿತರಿಗೆ ವಿಶೇಷ ವಲಸೆ ಸೌಲಭ್ಯಗಳನ್ನು ನೀಡಿತು. ಸಾವಿರಾರು ಕುಟುಂಬಗಳು ಯುದ್ಧಪೀಡಿತ ಪ್ರದೇಶಗಳಿಂದ ತಪ್ಪಿಸಿಕೊಂಡು ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳಲ್ಲಿ ನೆಲೆಸಿದವು. ಇಂದು ಆಸ್ಟ್ರೇಲಿಯಾದಲ್ಲಿರುವ ಅರೇಬಿಕ್ ಭಾಷಿಕರಲ್ಲಿ ದೊಡ್ಡ ಪಾಲು ಈ ಲೆಬನಾನಿನ ಹಿನ್ನೆಲೆಯನ್ನು ಹೊಂದಿರುವವರದ್ದಾಗಿದೆ.

ಇದನ್ನೂ ಓದಿ: Vishweshwar Bhat Column: ದುರಂತಗಳ ಮೌನಜಾಡು

2017ರ ಸುಮಾರಿಗೆ ಅರೇಬಿಕ್ ಭಾಷಿಕರ ಸಂಖ್ಯೆ ಶೇ. 1.4ಕ್ಕೆ ಏರಲು ಇತ್ತೀಚಿನ ಮಧ್ಯಪ್ರಾಚ್ಯದ ಬಿಕ್ಕಟ್ಟುಗಳೇ ಕಾರಣ. 2003ರ ನಂತರ ಇರಾಕ್ʼನಲ್ಲಿ ಉಂಟಾದ ಅಸ್ಥಿರತೆಯಿಂದಾಗಿ ಸಾವಿರಾರು ಮಂದಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದರು. 2015ರಲ್ಲಿ ಸಿರಿಯಾದಲ್ಲಿ ಉಂಟಾದ ಮಾನವೀಯ ಬಿಕ್ಕಟ್ಟಿಗೆ ಸ್ಪಂದಿಸಿದ ಆಸ್ಟ್ರೇಲಿಯಾ, ಹೆಚ್ಚುವರಿಯಾಗಿ 12000 ಸಿರಿಯನ್ ನಿರಾಶ್ರಿತರಿಗೆ ಆಶ್ರಯ ನೀಡಿತು. ಈ ನಿರಾಶ್ರಿತರು ಹೆಚ್ಚಾಗಿ ಅರೇಬಿಕ್ ಮಾತನಾಡುವವರಾಗಿದ್ದರಿಂದ ಸಹಜವಾಗಿ ಭಾಷಾ ಹರಡುವಿಕೆ ಹೆಚ್ಚಾಯಿತು.

ಅರೇಬಿಕ್ ಭಾಷಿಕರು ಆಸ್ಟ್ರೇಲಿಯಾದಾದ್ಯಂತ ಸಮಾನವಾಗಿ ಹರಡಿಲ್ಲ. ಅವರು ಹೆಚ್ಚಾಗಿ ದೊಡ್ಡ ನಗರಗಳಾದ ಸಿಡ್ನಿ (ವಿಶೇಷವಾಗಿ ಬ್ಯಾಂಕ್ಸ್ʼಟೌನ್ ಮತ್ತು ಕೆಂಟರ್ಬರಿ ಪ್ರದೇಶಗಳು) ಮತ್ತು ಮೆಲ್ಬೋರ್ನ್‌ನಲ್ಲಿ ಕೇಂದ್ರೀಕೃತರಾಗಿzರೆ. ಈ ನಗರಗಳಲ್ಲಿ ಅರೇಬಿಕ್ ಭಾಷೆಯ ಪತ್ರಿಕೆಗಳು, ರೇಡಿಯೋ ಕೇಂದ್ರಗಳು ಮತ್ತು ಟಿವಿ ಚಾನೆಲ್‌ಗಳಿವೆ. ಇಂಥ ಸಮುದಾಯದ ಒಳಗಿನ ವ್ಯವಸ್ಥೆಯು ಅರೇಬಿಕ್ ಭಾಷೆಯು ಮುಂದಿನ ಪೀಳಿಗೆಗೂ ಹರಿಯುವಂತೆ ಮಾಡಿದೆ.

ಅರೇಬಿಕ್ ಇಲ್ಲಿ ಕೇವಲ ವಲಸಿಗರ ಭಾಷೆಯಾಗಿ ಉಳಿಯದೇ, ವಾಣಿಜ್ಯ ಮತ್ತು ಸಾಂಸ್ಕೃತಿಕ ಅಸ್ಮಿತೆ ಯ ಭಾಗವಾಗಿದೆ. ಕೇವಲ ಯುದ್ಧ ಅಥವಾ ಸಂಘರ್ಷದಿಂದ ಮಾತ್ರವಲ್ಲದೇ, ಆರ್ಥಿಕ ಕಾರಣಗಳಿ ಗಾಗಿಯೂ ಅರೇಬಿಕ್ ಭಾಷಿಕರು ಬರುತ್ತಿದ್ದಾರೆ. ಈಜಿ, ಜೋರ್ಡಾನ್ ಮತ್ತು ಯುಎಇ ನಂಥ ದೇಶಗಳಿಂದ ವೈದ್ಯರು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಆಸ್ಟ್ರೇಲಿಯಾಕ್ಕೆ ವಲಸೆ ಹೋಗು ತ್ತಿದ್ದಾರೆ. ‌

ಅಲ್ಲದೇ, ಗಲ್ಫ್ ರಾಷ್ಟ್ರಗಳ ಶ್ರೀಮಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾದ ವಿಶ್ವ ವಿದ್ಯಾಲಯಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇದು ಅರೇಬಿಕ್ ಭಾಷೆಗೆ ಒಂದು ವೃತ್ತಿಪರ ಆಯಾಮ ವನ್ನೂ ನೀಡಿದೆ. ಭಾಷಾ ನಕ್ಷೆಗಳು ಸಾಮಾನ್ಯವಾಗಿ ಇಂಗ್ಲಿಷ್ ಅನ್ನು ಮೊದಲ ಸ್ಥಾನದಲ್ಲಿ ತೋರಿ ಸುತ್ತವೆ. ಆದರೆ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಮನಿಸಿದಾಗ ಮಾತ್ರ ದೇಶದ ನಿಜವಾದ ಮುಖ ಕಾಣಿಸುತ್ತದೆ. ಮ್ಯಾಂಡರಿನ್ ಚೈನೀಸ್ ಎರಡನೇ ಸ್ಥಾನದಲ್ಲಿದೆ.

ಅರೇಬಿಕ್ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ಜನಗಣತಿ ವರದಿಗಳ ಪ್ರಕಾರ, ಮನೆಯಲ್ಲಿ ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆ ಮಾತನಾಡುವವರ ಪ್ರಮಾಣ ಶೇ.20ಕ್ಕಿಂತ ಹೆಚ್ಚಿದೆ. ಇದರಲ್ಲಿ ಅರೇಬಿಕ್ ಪ್ರಮುಖ ಪಾತ್ರ ವಹಿಸುತ್ತಿದೆ. ಯಾವುದೇ ದೇಶದಲ್ಲಿ ಒಂದು ಹೊಸ ಭಾಷೆ ಬೆಳೆದಾಗ ಅಲ್ಲಿ ಸಾಂಸ್ಕೃತಿಕ ಬದಲಾವಣೆಗಳಾಗುತ್ತವೆ.

ಆಸ್ಟ್ರೇಲಿಯಾದ ಆಹಾರ ಪದ್ಧತಿ (ಉದಾಹರಣೆಗೆ ಹಮ್ಮಸ್, ಫಲಾಫಲ್ ಜನಪ್ರಿಯತೆ), ಸಂಗೀತ ಮತ್ತು ಕಲೆಯ ಮೇಲೆ ಅರೇಬಿಕ್ ಸಂಸ್ಕೃತಿಯು ಪ್ರಭಾವ ಬೀರಿದೆ. ಆದರೆ, ಇದು ಸಾಮಾಜಿಕ ಸವಾಲುಗಳನ್ನೂ ತಂದಿದೆ. ಭಾಷಾ ಅಂತರದಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ನಿರಾಶ್ರಿತರು ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ಸರಕಾರವು ಈಗ ಅರೇಬಿಕ್ ಭಾಷಾಂತರಕಾರರನ್ನು ಮತ್ತು ವಿಶೇಷ ಶಿಕ್ಷಣ ಯೋಜನೆಗಳನ್ನು ಹಮ್ಮಿಕೊಂಡಿದೆ. ಭಾರತದಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿದ್ದರೂ, ಅದನ್ನು ಮಾತೃಭಾಷೆಯಾಗಿ ಪಟ್ಟಿ ಮಾಡದಿರುವುದು ಅದರ ವ್ಯಾಪ್ತಿಯನ್ನು ಕಡಿಮೆ ಅಂದಾಜಿಸಿದಂತೆ.