‌Prakash Shesharaghavachar Column: ಮನಮೋಹನ್‌ ಸಿಂಗ್‌ ನಿಜಕ್ಕೂ ಕಿಂಗ್‌ ಆಗಿದ್ದರಾ ?

ಮನಮೋಹನ್ ಸಿಂಗ್‌ರವರು ಉತ್ತಮ ಆರ್ಥಿಕ ತಜ್ಞ ಮತ್ತು ದೇಶದ ಅರ್ಥವ್ಯವಸ್ಥೆಗೆ ಹೊಸದಿಕ್ಕು ನೀಡಿದವರು ಎಂಬುದು ನಿರ್ವಿವಾದಿತ ಸಂಗತಿ. ಅವರ ನಿಧನದ ತರುವಾಯ

image-74399ffd-4bd6-44af-8b0e-efbcc7cd3ef2.jpg
Profile Ashok Nayak Jan 3, 2025 10:00 AM
ಪ್ರಕಾಶಪಥ
ಪ್ರಕಾಶ್‌ ಶೇಷರಾಘವಾಚಾರ್
ಮನಮೋಹನ್ ಸಿಂಗ್‌ರವರ ನಿಧನಾ ನಂತರ ಕಾಂಗ್ರೆಸ್‌ನ ರಾಜಕೀಯ ಪ್ರೇರಿತ ನಡೆಯು ಪಕ್ಷದ ಇಬ್ಬಗೆಯ ನೀತಿಯನ್ನು ಎತ್ತಿ ತೋರಿಸಿದೆ. “ಭಾರತಮಾತೆಯ ಮಹಾನ್ ಪುತ್ರ ಹಾಗೂ ಸಿಖ್ ಸಮುದಾಯದ ಮೊದಲಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಿಗಮ್ ಬೋಧ್‌ಘಾಟ್‌ನಲ್ಲಿ ಮಾಡುವಮೂಲಕ ಅವರಿಗೆ ಸಂಪೂರ್ಣ ಅವಮಾನ ಮಾಡಲಾಗಿದೆ" ಎಂದು ರಾಹುಲ್ ಗಾಂಧಿಯವರು ‘ಎಕ್ಸ್’(ಟ್ವಿಟರ್) ಮಾಧ್ಯಮದಲ್ಲಿ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮನಮೋಹನ್ ಸಿಂಗ್‌ರವರಿಗೆ ಸ್ಮಾರಕ ರಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ, ಆದರೆ ಅದಕ್ಕೆ ಸೂಕ್ತ ಸ್ಥಳ ಗುರುತಿಸಲು ಕಾಲಾವಕಾಶ ಬೇಕು. ಆತುರದಲ್ಲಿ ಸಾಧ್ಯವಾಗದ ಕಾರಣ ಸದ್ಯ ಅವರ ಅಂತ್ಯಕ್ರಿಯೆಯನ್ನು ನಿಗಮ್ ಬೋಧ್‌ಘಾಟ್‌ನಲ್ಲಿ ನಡೆಸಲು ಅದು ವಿನಂತಿಸಿತ್ತು. ಆದರೆ ದೆಹಲಿ ವಿಧಾನಸಭಾ ಚುನಾವಣೆಯು ಹತ್ತಿರದಲ್ಲಿಯೇ ಇರುವುದರಿಂದ ಮತ್ತು ಸಿಖ್ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಕಾರಣ, ಸ್ಮಾರಕ ನಿರ್ಮಾಣದ ರಾಜಕೀಯೀಕರಣದಿಂದ ಲಾಭ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಆ ವಿಷಯವನ್ನು ಕಾಂಗ್ರೆಸ್ ವಿವಾದ ಮಾಡುತ್ತಿದೆ.
ಮನಮೋಹನ್ ಸಿಂಗ್‌ರವರು ಉತ್ತಮ ಆರ್ಥಿಕ ತಜ್ಞ ಮತ್ತು ದೇಶದ ಅರ್ಥವ್ಯವಸ್ಥೆಗೆ ಹೊಸದಿಕ್ಕು ನೀಡಿದವರುಎಂಬುದು ನಿರ್ವಿವಾದಿತ ಸಂಗತಿ. ಅವರ ನಿಧನದ ತರುವಾಯ, ಅವರ ಜ್ಞಾನ ಮತ್ತು ಕೊಡುಗೆಯ ಕುರಿತುಪತ್ರಿಕೆಗಳಲ್ಲಿ ಹಾಡಿಹೊಗಳಲಾಗುತ್ತಿದೆ. ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಿದ ಮಾಂತ್ರಿಕ ಎಂದುಬಣ್ಣಿಸಲಾಗುತ್ತಿದೆ. ಮುಂದುವರಿದ ಭಾಗವಾಗಿ ಕಾಂಗ್ರೆಸ್ ನಾಯಕರು ಮತ್ತು ಕೆಲವು ಅಂಕಣಕಾರರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಽಯಲ್ಲಿ ಅವರ ವಿರುದ್ಧ ಬಿಜೆಪಿಯು ನಡೆಸಿದ ಹೋರಾಟ ಮತ್ತು ಮಾಡಿದ ಕಟುಟೀಕೆಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅಂದು ಬಿಜೆಪಿ ವಿರೋಧ ಪಕ್ಷವಾಗಿತ್ತು. ಆದರೆ ಅವರಿಗೆ ಸ್ವಪಕ್ಷೀಯರಿಂದಲೇ ಹತ್ತು ವರ್ಷಗಳವರೆಗೆ ಆದ ಅವಮಾನಗಳ ಪಟ್ಟಿ ತುಂಬಾ ಉದ್ದವಿದೆ.
೨೦೦೪ರಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಅವರು ಪ್ರಧಾನಿ ಪಟ್ಟಕ್ಕೇರಿದರು. ಅದಾಗಲೇ ರಾಜ್ಯಸಭಾಸದಸ್ಯರಾಗಿದ್ದ ಅವರು ಮತ್ತೆ ಚುನಾವಣೆ ಎದುರಿಸಲಿಲ್ಲ. 2009ರಲ್ಲಿ ಪಂಜಾಬಿನಿಂದ ಲೋಕಸಭೆಗೆ ಸ್ಪರ್ಧಿಸಲುಅವರಿಗೆ ಇಚ್ಛೆಯಿತ್ತು; ಆದರೆ ಕಾಂಗ್ರೆಸ್ ಅದಕ್ಕೆ ಸೊಪ್ಪುಹಾಕದೆ, ಅವರು ಮತ್ತೆ ರಾಜ್ಯಸಭೆಯ ದಾರಿಯನ್ನೇಹಿಡಿಯುವಂತೆ ಮಾಡಿತು ಎಂದು ಮನಮೋಹನ್ ಸಿಂಗ್ ರ ಮಾಧ್ಯಮ ಮುಖ್ಯಸ್ಥರಾಗಿದ್ದ ಸಂಜಯ್ ಬಾರುಅವರು ಹೇಳುತ್ತಾರೆ.
ದೇಶದ ಪ್ರಧಾನ ಮಂತ್ರಿಯಾಗಿದ್ದವರು ಚುನಾವಣೆಗೆ ಸ್ಪರ್ಧಿಸಲು ಗಾಂಧಿ ಕುಟುಂಬದ ಅನುಮತಿ ಪಡೆಯಬೇಕಾದ ದಯನೀಯ ಸ್ಥಿತಿಯನ್ನು ಅವರಿಗೆ ತಂದೊಡ್ಡಲಾಗಿತ್ತು. ಇದೆಂಥಾ ದುರದೃಷ್ಟಕರ ಸಂಗತಿಯಲ್ಲವೇ? ಮನಮೋಹನ್‌ರ 10 ವರ್ಷದ ಅಧಿಕಾರಾವಧಿಯಲ್ಲಿ ಜಾರಿಗೆ ತರಲಾದ ಹಲವು ಜನಪರ ಯೋಜನೆಗಳಶ್ರೇಯಸ್ಸನ್ನು ರಾಹುಲ್ ಗಾಂಧಿಯವರಿಗೆ ಅಥವಾ ಸೋನಿಯಾ ನೇತೃತ್ವದ ‘ರಾಷ್ಟ್ರೀಯ ಸಲಹಾ ಮಂಡಳಿ’ಗೆ(ಎನ್‌ಎಸಿ) ಸಲ್ಲಿಸಲಾಗುತ್ತಿತ್ತು. ಸಿಂಗ್‌ರವರು ‘ಉದ್ಯೋಗ ಖಾತರಿ ಯೋಜನೆ’ಯನ್ನು ಜಾರಿಗೆ ತಂದಾಗ, ಕಾಂಗ್ರೆಸ್ಪಕ್ಷವು ಅದರ ಶ್ರೇಯಸ್ಸನ್ನು ರಾಹುಲರಿಗೆ ಸಲ್ಲಿಸಿತು.
ಇದು ಸಿಂಗ್‌ರವರ ಗಮನಕ್ಕೆ ಬಂದಾಗ, “ಎಲ್ಲಾ ಶ್ರೇಯಸ್ಸು ಅವರಿಗೆ ಸಲ್ಲಲಿ, ನನಗೆ ಬೇಡ. ನಾನು ನನ್ನ ಕೆಲಸಮಾಡುತ್ತಿದ್ದೇನೆ" ಎಂದರಂತೆ. ಆದರೆ ರಾಹುಲರು, “ಈ ಯೋಜನೆಯ ಯಶಸ್ಸು ನನ್ನದಲ್ಲ, ಅದು ಪ್ರಧಾನಿಯವರಿಗೆ ಸಲ್ಲಬೇಕು" ಎಂದು ಅಪ್ಪಿತಪ್ಪಿಯೂ ಹೇಳಲಿಲ್ಲ.
ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾದ ಶಾಸಕರು ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವ ಸುಗ್ರೀ ವಾಜ್ಞೆಯು 2013ರಲ್ಲಿ ಜಾರಿಯಾಯಿತು. ಆದರೆ ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ, “ಈ ಸುಗ್ರೀವಾಜ್ಞೆಯು ಸಂಪೂರ್ಣ ಅಸಂಬದ್ಧ, ಇದನ್ನು ಹರಿದು ಬಿಸಾಡಬೇಕು" ಎಂದು ಸರಕಾರದ ವಿರುದ್ಧ ಅಬ್ಬರಿಸಿದರು. ವಿದೇಶ ಪ್ರವಾಸದಲ್ಲಿದ್ದ ಮನಮೋಹನ್‌ರು ಇದರಿಂದಾಗಿ ಇನ್ನಿಲ್ಲದ ಮುಜುಗರಕ್ಕೆ ಒಳಗಾಗ ಬೇಕಾಯಿತು. ಸುಗ್ರೀವಾಜ್ಞೆ ತರಲು ಒಪ್ಪಿಗೆ ನೀಡಿದ್ದ ಸಂಪುಟದ ಒಬ್ಬ ಸದಸ್ಯರೂ ಅವರ ಬೆಂಬಲಕ್ಕೆ ಬರಲಿಲ್ಲ. ಮನಮೋಹನ್‌ರು ನಿಸ್ಸಹಾಯಕರಾಗಿ ತಮಗಾದ ಅಪಮಾನವನ್ನು ಉಸಿರೆತ್ತದೆ ಸಹಿಸಿಕೊಂಡರು.
ಪ್ರಧಾನಿಯಾಗುವ ಕನಸನ್ನು ಹೊತ್ತಿದ್ದ ರಾಹುಲರು, ಮನಮೋಹನ್‌ಸಿಂಗ್‌ರ ಸಂಪುಟದಲ್ಲಿ ಸಚಿವರಾಗಿ ಕೆಲಸಮಾಡಿ ಆಡಳಿತದ ಅನುಭವ ಪಡೆಯುವ ಆಸಕ್ತಿಯನ್ನೇ ತೋರಲಿಲ್ಲ, ಅವರಡಿಯಲ್ಲಿ ಕೆಲಸ ಮಾಡಲು ರಾಹುಲ್ಸಿದ್ಧರಿರಲಿಲ್ಲ. ಆದರೆ ಇಂದು ಅವರನ್ನು ಹಾಡಿ ಹೊಗಳುತ್ತಿದ್ದಾರೆ!
ಸೋನಿಯಾ ಗಾಂಧಿಯವರು, ತಮ್ಮ ಮಾತನ್ನು ಮೀರದ ಮನಮೋಹನ್‌ರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿ ಸರಕಾರವನ್ನು ಹಿಂಬಾಗಿಲಿನಿಂದ ನಿಯಂತ್ರಿಸಲು ರಾಷ್ಟ್ರೀಯ ಸಲಹಾ ಮಂಡಳಿ ರಚಿಸಿ, ಅದರಲ್ಲಿ ಕೈಗೊಂಡ ನಿರ್ಣಯವನ್ನು ಸರಕಾರದ ಮೇಲೆ ಹೇರುತ್ತಿದ್ದರು. ಈ ಸಂವಿಧಾನಬಾಹಿರ ಮಂಡಳಿಯು ಕೇಂದ್ರ ಸರಕಾರದ ನೀತಿ ನಿರೂಪಣೆಯಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿ, ಪ್ರಧಾನಿ ಹುದ್ದೆಯನ್ನು ಗೌಣವಾಗಿಸುವಂತೆ ಮಾಡಿದ ಅಪಕೀರ್ತಿಯು ಸೋನಿಯಾರಿಗೆ ಸಲ್ಲುತ್ತದೆ.
ಪತ್ರಕರ್ತರುಗಳಾದ ವೀರ್ ಸಾಂ, ಬರ್ಖಾದತ್ ಮತ್ತು ದೆಹಲಿಯ ಕಾರ್ಪೊರೇಟ್ ವಲಯದ ದಲ್ಲಾಳಿ ನೀರಾ ರಾಡಿಯ ನಡುವಿನ ಫೋನ್ ಸಂಭಾಷಣೆಯು ಬಯಲಾದಾಗ, ‘ಮನಮೋಹನ್‌ರ ಆಡಳಿತದಲ್ಲಿ ಕೇಂದ್ರಸಚಿವರ ನೇಮಕಾತಿಯನ್ನು ದಲ್ಲಾಳಿಯೊಬ್ಬಳು ನಿಯಂತ್ರಿಸುತ್ತಿದ್ದಳು’ ಎಂಬ ಆಘಾತಕಾರಿ ಸಂಗತಿಯು ದೇಶದಲ್ಲಿತಲ್ಲಣ ಮೂಡಿಸಿತು. ‘ಮನಮೋಹನ್‌ರು ಸೋನಿಯಾರಿಂದ ನೇಮಕವಾಗಿದ್ದ ಪ್ರಧಾನಿ, ಸರಕಾರದ ಪ್ರಮುಖನಿರ್ಧಾರಗಳನ್ನು ಕೈಗೊಳ್ಳುವುದು ನಂ.೧೦ ಜನಪಥ್‌ನಲ್ಲಿ’ ಎಂಬ ದಟ್ಟ ನಂಬಿಕೆಯ ವಾತಾವರಣವೇ ಇದಕ್ಕೆಕಾರಣವಾಗಿತ್ತು. “ಈ ಭಾವನೆ ತಪ್ಪು. ಅಂತಿಮ ನಿರ್ಣಯ ಕೈಗೊಳ್ಳುವವರು ಪ್ರಧಾನಿಗಳು ಮಾತ್ರ" ಎಂದು ಹೇಳುವಮೂಲಕ ಅವರ ಗೌರವ ಕಾಪಾಡುವ ಸಲುವಾಗಿಯಾದರೂ ಅಮ್ಮ-ಮಗ ಸ್ಪಷ್ಟೀಕರಣ ಕೊಡುವ ಗೋಜಿಗೇಹೋಗಲಿಲ್ಲ.
ಸಂಜಯ್ ಬಾರು ಅವರು ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ತಮ್ಮ ಪುಸ್ತಕದಲ್ಲಿ, “ಮನಮೋಹನ್ಸಿಂಗ್‌ರವರಿಗೆ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಳ್ಳುವ ಇಚ್ಛೆಯಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಇದನ್ನು ತಿರಸ್ಕರಿಸಿ ಪಿ.ಚಿದಂಬರಂ ಅವರನ್ನು ಕೂರಿಸಿತು" ಎಂದು ಬರೆದಿದ್ದಾರೆ. ತಮಗೆ ಬೇಕಾದ ಖಾತೆ ಪಡೆಯುವ ಸ್ವಾತಂತ್ರ್ಯವನ್ನು ಸಿಂಗ್ ರವರಿಗೆ ನೀಡದಷ್ಟರ ಮಟ್ಟಿಗಿನ ಉಕ್ಕಿನ ಹಿಡಿತವನ್ನು ಗಾಂಧಿ ಕುಟುಂಬ ಸಾಧಿಸಿತ್ತು.
ಪ್ರಧಾನಿಯವರಿಗೆ ಇದಕ್ಕಿಂತ ಅಪಮಾನ ಮಾಡಲು ಸಾಧ್ಯವಾ? 1991ರಲ್ಲಿ ಮನಮೋಹನ್‌ರಿಗೆ ಹಣಕಾಸುಸಚಿವರಾಗಿ ಇದ್ದ ಸ್ವಾತಂತ್ರ್ಯವು, ಅವರು ದೇಶದ ಪ್ರಧಾನಿಯಾದಾಗ ಇರಲಿಲ್ಲ ಎಂಬುದು ಕಟುಸತ್ಯ. 2011ರಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್‌ರವರು ‘ಇಂಡಿಯಾ ಟಿವಿ’ಯ ರಜತ್ ಶರ್ಮಾರವರ ಕಾರ್ಯಕ್ರಮದಲ್ಲಿ, “ನಾನು ರಾಹುಲ್ ರವರನ್ನು ಪ್ರಧಾನಿಯಾಗಿ ನೋಡಬಯಸುತ್ತೇನೆ" ಎಂಬ ಹೇಳಿಕೆ ನೀಡಿದರು. ಇಂಥ ಹೇಳಿಕೆಯು ಪ್ರಧಾನಿಯವರಿಗೆ ಮಾಡುವ ಅಪಮಾನವಾಗುತ್ತದೆ ಮತ್ತು ಅವರ ಸ್ಥಾನಕ್ಕಿರುವ ಮಹತ್ವವನ್ನು ಕುಗ್ಗಿಸುತ್ತದೆ ಎಂಬ ಲವಲೇಶ ಚಿಂತೆಯೂ ಆಗ ಅವರಲ್ಲಿರಲಿಲ್ಲ ಮತ್ತು ಇಂಥ ಹೇಳಿಕೆಗಳನ್ನು ನೀಡದಂತೆ ಸೋನಿಯಾರು ಕೂಡ ನಿರ್ಬಂಧ ಹೇರಲಿಲ್ಲ. ‘ನಮ್ಮಿಂದ ನೀವು ಪ್ರಧಾನಿ, ನಾವು ಮನಸ್ಸು ಮಾಡಿದ ದಿನ ಬದಲಾವಣೆ ಮಾಡಲಾಗುವುದು’ ಎಂಬ ಸಂದೇಶವನ್ನು ಅಂದು ಸಿಂಗ್‌ರಿಗೆ ಹೈಕಮಾಂಡ್ ರವಾನಿಸಿತ್ತು.
“ಮನಮೋಹನ್ ಸಿಂಗ್‌ರವರು ಮೂರನೆಯ ಅವಧಿಗೂ ತಾವಿರುವ ಸಾಧ್ಯತೆ ಇದೆಯೆಂದು ಹೇಳಿದ್ದಾರೆ" ಎಂಬ ಪತ್ರಿಕಾ ವರದಿಯು 2013ರಲ್ಲಿ ಪ್ರಕಟವಾದಾಗ, ಪಕ್ಷದ ವಕ್ತಾರರಾದ ರಶೀದ್ ಅಲ್ವಿ ಮತ್ತು ರಾಜೀವ್ ಶುಕ್ಲ ಅವರು, “ಜನರು ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಕಾಣಬಯಸುತ್ತಾರೆ" ಎಂದು ಪ್ರತಿಕ್ರಿಯಿಸಿ, ‘ನಮಗಿನ್ನು ನಿಮ್ಮ ಅಗತ್ಯವಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದರು! ಪ್ರಧಾನಿಯಾದವರನ್ನು ಗಾಂಧಿ ಕುಟುಂಬವು ನಡೆಸಿಕೊಂಡ ರೀತಿ ಇಷ್ಟು ಹೀನಾಯವಾಗಿತ್ತು.
ರೈಲ್ವೆ ಸಚಿವ ಪವನ್ ಬನ್ಸಲ್ ಅವರ ಸಂಬಂಧಿ ಸಿಂಗ್ಲಾ, ರೈಲ್ವೆಯ ಉನ್ನತ ಹುದ್ದೆಗಳನ್ನು ಮಾರಾಟ ಮಾಡಿ ಹಣವಸೂಲಿ ಮಾಡುವಾಗ ಸಿಬಿಐ ಕೈಯಲ್ಲಿ ಸಿಕ್ಕಿಬಿದ್ದರು. ಇದೇ ವೇಳೆ, ಕಾನೂನು ಸಚಿವರಾಗಿದ್ದ ಅಶ್ವಿನಿ ಕುಮಾರ್‌ ರವರು ಕಲ್ಲಿದ್ದಲು ಹಗರಣ ವರದಿಯನ್ನು ನಕಲು ಮಾಡಿ ಸಿಕ್ಕಿಬಿದ್ದರು. ಪ್ರಧಾನಿಯವರು ಈ ಸಚಿವದ್ವಯರ ರಾಜೀನಾಮೆಯನ್ನು ಪಡೆದಾಗ, ‘ಸೋನಿಯಾರವರ ಮಧ್ಯಪ್ರವೇಶದಿಂದ ಅವರಿಬ್ಬರು ಕೆಳಗಿಳಿಯಬೇಕಾಯಿತು’ ಎಂಬರ್ಥದ ಸುದ್ದಿ ಬಿತ್ತರಿಸಿ, ‘ಭ್ರಷ್ಟಾಚಾರದ ವಿಷಯದಲ್ಲಿ ಸೋನಿಯಾ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಅವರಿಗೆ ಶ್ರೇಯಸ್ಸನ್ನು ನೀಡಲಾಯಿತು.
1984ರ ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು 2700 ಜನರನ್ನು ಬಲಿಪಡೆದರು, ಗಣನೀಯ ಸಂಖ್ಯೆಯ ಸಿಖ್ಖರ ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸಿದರು. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜೀವ್ ಗಾಂಧಿಯವರು, “ದೊಡ್ಡ ಮರ ಬಿದ್ದಾಗ ಸುತ್ತಮುತ್ತಲಿನ ಭೂಮಿಗೆ ಹಾನಿಯಾಗುವುದು ಸಹಜ" ಎಂದು ಆ ಹತ್ಯಾಕಾಂಡವನ್ನು ಸಮರ್ಥಿಸಿ ಕೊಂಡಿದ್ದು ಸಿಖ್ಖರಿಗೆ ಮಾಡಿದ ಘೋರ ಅಪಚಾರವಲ್ಲವಾ? ಧರ್ಮದ ಬಣ್ಣ ಬಳಿದು ಮನಮೋಹನ್‌ರ ಸ್ಮಾರಕದ ವಿಷಯವನ್ನು ಟೀಕಿಸಿರುವ ರಾಹುಲ್ ಗಾಂಧಿಯವರಿಗೆ, ತಮ್ಮ ಕುಟುಂಬದ ಪಾರಮ್ಯವನ್ನು ತೋರಲೆಂದು ೨೦೦೪ರಿಂದ ೨೦೧೪ರವರೆಗೆ ಮನಮೋಹನ್‌ರಿಗೆ ಅದೆಷ್ಟು ಬಾರಿ ಅವಮಾನ ಮಾಡಲಾಯಿತು ಎಂಬ ಸಂಗತಿ ಮರೆತು ಹೋಗಿದೆ.
ಮನಮೋಹನ್‌ರು ಬದುಕಿದ್ದಾಗ ಅವರನ್ನು ಕೀಲುಬೊಂಬೆಯಂತೆ ನಡೆಸಿಕೊಂಡು ವ್ಯಕ್ತಿತ್ವಕ್ಕೆ ಮಸಿ ಬಳಿಸಿದ್ದು ಸಾಲದು ಎಂಬಂತೆ, ಅವರು ಮೃತಪಟ್ಟ ನಂತರ ದೆಹಲಿ ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ಕೀಳುಮಟ್ಟದ ರಾಜಕೀಯ ಮಾಡಲು ರಾಹುಲರ ನೇತೃತ್ವದ ಕಾಂಗ್ರೆಸ್ ಮುಂದಾಗಿರುವುದು ಅಸಹ್ಯಕರವಾಗಿದೆ. ಮನಮೋಹನ್‌ ರು ಪ್ರಧಾನಿ ಪಟ್ಟದಿಂದ ಇಳಿದ ತರುವಾಯ, “ಇತಿಹಾಸ ನನ್ನನ್ನು ದಯೆಯಿಂದ ನೋಡುತ್ತದೆ" ಎಂದು ಹೇಳಿದ್ದರು. ಭಾರತೀಯ ಸಂಸ್ಕೃತಿಯಲ್ಲಿ, ಮರೆಯಾದವರ ಗುಣಗಾನ ಮಾಡುವರೇ ವಿನಾ, ಅವರ ವೈಫಲ್ಯವನ್ನಾಗಲೀ ಅವಗುಣವನ್ನಾಗಲೀ ಚರ್ಚಿಸುವುದಿಲ್ಲ. ಗಾಂಧಿ ಕುಟುಂಬದವರು ತಮ್ಮ ಪ್ರಾಬಲ್ಯವನ್ನು ನೆನಪಿಸಲು ಒಂದಲ್ಲಾ ಒಂದು ರೀತಿಯಲ್ಲಿ ಉಂಟುಮಾಡುತ್ತಿದ್ದ ಮುಜುಗರವನ್ನು ಸಹಿಸಿಕೊಂಡಿದ್ದ ‘ಸಿಂಗ್’ ನಿಜಕ್ಕೂ ‘ಕಿಂಗ್’ ಆಗಿದ್ದರಾ? ಎಂಬ ಪ್ರಶ್ನೆ ಕಾಡುತ್ತದೆ. ಜತೆಗೆ ಅವರ ನಿಷ್ಠೆಯು ದುರ್ಬಳಕೆಯಾಗಿದ್ದರ ಬಗ್ಗೆ ಸಹಜವಾಗಿ ಅನುಕಂಪ ಮೂಡುತ್ತದೆ.
(ಲೇಖಕರು ಬಿಜೆಪಿಯ ವಕ್ತಾರರು)
ಇದನ್ನೂ ಓದಿ: Prakash Shesharaghavachar Column: ಮಹಿಳಾ ಸುರಕ್ಷತೆ ಮೊದಲ ಆದ್ಯತೆಯಾಗಲಿ
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?