ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ; ಮನೆಗೆ ಬೆಂಕಿ ಹಚ್ಚಿ, ಲೂಟಿ ಮಾಡಿದ ಇಸ್ಲಾಮಿಕ್ ಗುಂಪು
ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಬಳಿಕ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ದೇಶಾದ್ಯಂತ ನಡೆದ ಅಶಾಂತಿಯ ಹಿನ್ನೆಲೆಯಲ್ಲಿ, ಗುಂಪು ಹಿಂಸಾಚಾರವು ಆತಂಕಕಾರಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಇಬ್ಬರು ಹಿಂದೂ ವ್ಯಕ್ತಿಗಳನ್ನು ಕೊಂದ ಬಳಿಕ ಇದೀಗ ಹಿಂದೂ ಒಡೆತನದ ಮನೆಯನ್ನು ಸುಟ್ಟುಹಾಕಲಾಗಿದೆ.
ಸಾಂದರ್ಭಿಕ ಚಿತ್ರ -
ಢಾಕಾ: ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಬಳಿಕ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ದೇಶಾದ್ಯಂತ ನಡೆದ ಅಶಾಂತಿಯ ಹಿನ್ನೆಲೆಯಲ್ಲಿ, ಗುಂಪು (Bangladesh Unrest) ಹಿಂಸಾಚಾರವು ಆತಂಕಕಾರಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಇಬ್ಬರು ಹಿಂದೂ ವ್ಯಕ್ತಿಗಳನ್ನು ಕೊಂದ ಬಳಿಕ ಇದೀಗ ಹಿಂದೂ ಒಡೆತನದ ಮನೆಯನ್ನು ಸುಟ್ಟುಹಾಕಲಾಗಿದೆ. ವರದಿಗಳ ಪ್ರಕಾರ, ಡಿಸೆಂಬರ್ 27 ರಂದು ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿರುವ ಸಹಾ ಅವರ ನಿವಾಸದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಮನೆಗೆ ಬೆಂಕಿ ಹಚ್ಚಿದ್ದಾರೆ.
ಬೆಂಕಿ ಹಚ್ಚಿದ ವಿಡಿಯೋ
#BreakingNews Cases of attacks on Hindus have reached an alarming level in Bangladesh. On December 27 at 6am, miscreants set fire at homes of Kanti Saha Dumuria village under Pirojpur district. pic.twitter.com/M4s7ROHBSs
— Salah Uddin Shoaib Choudhury (@salah_shoaib) December 28, 2025
ಶಂಕಿತರು ಒಂದು ಕೋಣೆಯೊಳಗೆ ಬಟ್ಟೆಯನ್ನು ಸೇರಿಸಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಕಿ ಇಡೀ ಮನೆಯನ್ನು ಆವರಿಸಿ ಸುಟ್ಟು ಹಾಕಿದೆ. ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿ, ಸಹಾ ಕುಟುಂಬದ ಮನೆಯ ಐದು ಕೊಠಡಿಗಳನ್ನು ಹಿಂದೂ ದ್ವೇಷಿ ಜಿಹಾದಿಗಳು ಸುಟ್ಟುಹಾಕಿದರು. ಬೆಳಗಿನ ಜಾವ ಎಲ್ಲರೂ ಮಲಗಿದ್ದಾಗ ಅವರು ಮನೆಗೆ ಬೆಂಕಿ ಹಚ್ಚಿದರು ಎಂದು ಬಾಂಗ್ಲಾದೇಶದ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ. ಟ್ಟೋಗ್ರಾಮ್‌ನ ರೌಜಾನ್‌ನಲ್ಲಿ, ಜಿಹಾದಿಗಳು ಬೆಳಗಿನ ಜಾವದಲ್ಲಿ ಹಿಂದೂ ಮನೆಗಳಿಗೆ ಅದೇ ರೀತಿ ಬೆಂಕಿ ಹಚ್ಚಿದ್ದರು.
ದೇಶದಲ್ಲಿ ಉಳಿದಿರುವ ಎಲ್ಲಾ ಹಿಂದೂ ಮನೆಗಳನ್ನು ಹೀಗೆಯೇ ಸುಡಲಾಗುತ್ತದೆಯೇ? ಅವರು ಹಿಂದೂಗಳನ್ನು ಜೀವಂತವಾಗಿ ಸುಡಲು ಬಯಸುತ್ತಾರೆ; ಅದಕ್ಕಾಗಿಯೇ ಜನರು ನಿದ್ದೆ ಮಾಡುವಾಗ ಅವರು ಬೆಂಕಿ ಹಚ್ಚುತ್ತಾರೆ. ಯೂನಸ್ ಕೇವಲ ಕೊಳಲು ನುಡಿಸುತ್ತಿದ್ದಾರೆಯೇ?" ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬಾಂಗ್ಲಾದೇಶದ ವಿವಾದಿತ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಗೈದ ಇಬ್ಬರು ಭಾರತಕ್ಕೆ ಪಲಾಯನ?
ಕಳೆದ ವಾರ ಆಗ್ನೇಯ ಬಂದರು ನಗರವಾದ ಚಟ್ಟೋಗ್ರಾಮ್ ಬಳಿಯ ಹಿಂದೂ ಒಡೆತನದ ಮನೆಗೆ ಅಪರಿಚಿತ ದಾಳಿಕೋರರು ಬೆಂಕಿ ಹಚ್ಚಿದ ಘಟನೆಯ ಬಳಿಕ ಇದು ನಡೆದಿದೆ. ಇಡೀ ಕುಟುಂಬ ಮಲಗಿದ್ದಾಗ ದುಷ್ಕರ್ಮಿಗಳು ಅವರ ಮನೆಗೆ ಬೆಂಕಿ ಹಾಕಿದ್ದರು. ಕುಟುಂಬಗಳ ಎಂಟು ಸದಸ್ಯರು ಬಿದಿರಿನ ಬೇಲಿಗಳನ್ನು ಕತ್ತರಿಸಿ ಪರಾರಿಯಾಗುವಲ್ಲಿ ಯಶಸ್ವಿಯಾದರು, ಆದರೆ ಅವರ ಮನೆಯ ವಸ್ತುಗಳು ಮತ್ತು ಸಾಕು ಪ್ರಾಣಿಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದವು. ಅಷ್ಟೇ ಅಲ್ಲದೇ ಬಂಗಾಳಿ ಭಾಷೆಯಲ್ಲಿ ಅವರಿಗೆ ಬೆದರಿಕೆ ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಐದು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಉಳಿದ ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ. ವರದಿಯ ಪ್ರಕಾರ , ಐದು ದಿನಗಳಲ್ಲಿ ರೋಜನ್‌ನ ಮೂರು ಸ್ಥಳಗಳಲ್ಲಿ ಏಳು ಹಿಂದೂ ಕುಟುಂಬಗಳಿಗೆ ಸೇರಿದ ಮನೆಗಳು ಬೆಂಕಿ ಹಚ್ಚಲಾಗಿದೆ.