ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ದಾಖಲೆ ರಹಿತ 8 ಮ್ಯಾಕ್ಸಿ ಕ್ಯಾಬ್ ವಾಹನಗಳ ಬಹಿರಂಗ ಹರಾಜು

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಸೆಕ್ಷನ್ 11(ಎ)(2) ರ ಅನ್ವಯ ಈ ಕ್ರಮ ಕೈಗೊಳ್ಳ ಲಾಗುತ್ತಿದ್ದು, ದೀರ್ಘಕಾಲದಿಂದ ಮಾಲೀಕರು ವಾಹನಗಳನ್ನು ಬಿಡಿಸಿಕೊಂಡು ಹೋಗದ ಹಿನ್ನೆಲೆ ಯಲ್ಲಿ ಸರ್ಕಾರಕ್ಕೆ ಬರಬೇಕಾದ ಬಾಕಿ ತೆರಿಗೆ ಮತ್ತು ದಂಡದ ವಸೂಲಾತಿಗಾಗಿ ಈ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.

ದಾಖಲೆಗಳಿಲ್ಲದೆ ಹಾಗೂ ತೆರಿಗೆ ಪಾವತಿಸದ ಕಾರಣಕ್ಕೆ ಮೋಟಾರು ವಾಹನ ನಿರೀಕ್ಷಕರಿಂದ ಜಪ್ತಿ ಮಾಡಲಾದ ೮ ಮ್ಯಾಕ್ಸಿ ಕ್ಯಾಬ್ ವಾಹನಗಳನ್ನು ಮೇ ೩೦ರಂದು ಬಹಿರಂಗ ಹರಾಜು ಹಾಕಲಾಗುವುದು ಎಂದು ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಬೈರಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಂತಾಮಣಿ: ದಾಖಲೆಗಳಿಲ್ಲದೆ ಹಾಗೂ ತೆರಿಗೆ ಪಾವತಿಸದ ಕಾರಣಕ್ಕೆ ಮೋಟಾರು ವಾಹನ ನಿರೀಕ್ಷಕರಿಂದ ಜಪ್ತಿ ಮಾಡಲಾದ 8 ಮ್ಯಾಕ್ಸಿ ಕ್ಯಾಬ್ ವಾಹನಗಳನ್ನು ಮೇ 30ರಂದು ಬಹಿರಂಗ ಹರಾಜು ಹಾಕಲಾಗುವುದು ಎಂದು ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಬೈರಾ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Chinthamani News: ನೂತನ ಬಿ ಇ ಓ ರವರಿಗೆ ನಿವೃತ್ತ ನೌಕರರ ಸಂಘದ ವತಿಯಿಂದ ಸನ್ಮಾನ

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ(Karnataka Motor Vehicle Tax Act) ಸೆಕ್ಷನ್ 11(ಎ)(2) ರ ಅನ್ವಯ ಈ ಕ್ರಮ ಕೈಗೊಳ್ಳ ಲಾಗುತ್ತಿದ್ದು, ದೀರ್ಘಕಾಲದಿಂದ ಮಾಲೀಕರು ವಾಹನ ಗಳನ್ನು ಬಿಡಿಸಿಕೊಂಡು ಹೋಗದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬರಬೇಕಾದ ಬಾಕಿ ತೆರಿಗೆ ಮತ್ತು ದಂಡದ ವಸೂಲಾತಿಗಾಗಿ ಈ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.

ಎಲ್ಲಾ 8 ವಾಹನಗಳನ್ನು ಸ್ಕ್ರ‍್ಯಾಪ್' ಗುಜರಿ ರೂಪದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಹರಾಜಿನಲ್ಲಿ ಭಾಗವಹಿಸುವವರು ಪ್ರತಿ ವಾಹನಕ್ಕೆ 5000 ಮುಂಗಡ ಪಾವತಿಸಿ ಹರಾಜಿನಲ್ಲಿ ಭಾಗವಹಿಸಬೇಕು.

ಆಸಕ್ತರು ವಾಹನಗಳು ಇರುವ ಸ್ಥಳದಲ್ಲೇ ಪರಿಶೀಲನೆ ನಡೆಸಿ ಹರಾಜಿನಲ್ಲಿ ಭಾಗವಹಿಸಬಹು ದಾಗಿದೆ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.