ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chinthamani News: ನೂತನ ಬಿ ಇ ಓ ರವರಿಗೆ ನಿವೃತ್ತ ನೌಕರರ ಸಂಘದ ವತಿಯಿಂದ ಸನ್ಮಾನ

ನೂತನ ಬಿಇಒ ರವರು ಈ ಹಿಂದೆ ಚಿಂತಾಮಣಿ ತಾಲೂಕಿನ ವಿವಿಧಡೆಗಳಲ್ಲಿ ಕೆಲಸ ಮಾಡಿದ್ದಾರೆ ಬಹಳಷ್ಟು ಸೇವೆಗೈದು ಒಳ್ಳೆಯ ಹೆಸರು ಪಡೆದಿದ್ದಾರೆಂದು ಹೇಳಿದರು. ಇವರು ತಾಲೂಕಿನ ಪ್ರತಿ ಶಾಲೆಗೂ ಭೇಟಿ ನೀಡಿ ಸೂಕ್ತ ಸಲಹೆ ಸೂಚನೆ ಮಾರ್ಗದರ್ಶನ ನೀಡಿ ಎಸ್ ಎಸ್ ಎಲ್ ಸಿ ಯಲ್ಲಿ ಇನ್ನೂ ಹೆಚ್ಚಿನ ಫಲಿತಾಂಶ ಬರುವಂತೆ ಪ್ರಯತ್ನಿಸುತ್ತಾರೆಂಬ ಭರವಸೆಯನ್ನು ವ್ಯಕ್ತಪಡಿಸಿದರು

ನೂತನ ಬಿ ಇ ಓ ರವರಿಗೆ ನಿವೃತ್ತ ನೌಕರರ ಸಂಘದ ವತಿಯಿಂದ ಸನ್ಮಾನ

-

Profile
Ashok Nayak May 21, 2026 12:52 AM

ಚಿಂತಾಮಣಿ: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಎ ಸಿ. ನಾರಾಯಣಸ್ವಾಮಿ ರವರನ್ನು ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ ಮಾತನಾಡಿ, ಶ್ರೀಯುತರು ನಮ್ಮ ತಾಲೂಕಿಗೆ ಬಿ ಇ ಓ ಆಗಿ ಬಂದಿರುವುದು ನಮ್ಮೆಲ್ಲರ ಅದೃಷ್ಟವಾಗಿದೆ ಎಂದು ಹೇಳಿದರು. ಇವರ ಸೇವಾ ಅವಧಿಯಲ್ಲಿ ಸಾಕಷ್ಟು ಶೈಕ್ಷಣಿಕ ಪ್ರಗತಿಯಾಗುವುದೆಂಬ ಆಶಾ ಭಾವನೆ ಹೊಂದಿರುವುದಾಗಿ ತಿಳಿಸಿ ಶುಭ ಹಾರೈಸಿದರು. 

ಇದನ್ನೂ ಓದಿ: Chikkaballapur News: ಕೋಡಿಹಳ್ಳಿ ಚಂದ್ರಶೇಖರ್ ಬಣದ ಕೆಐಎಡಿಬಿ ರೈತಪರ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಮಠದ ಅಭಯ

ಕಾರ್ಯದರ್ಶಿ ಎಸ್.ಆಂಜಪ್ಪ ಮಾತನಾಡಿ ನೂತನ ಬಿಇಒ ರವರು ಈ ಹಿಂದೆ ಚಿಂತಾಮಣಿ ತಾಲೂಕಿನ ವಿವಿಧಡೆಗಳಲ್ಲಿ ಕೆಲಸ ಮಾಡಿದ್ದಾರೆ ಬಹಳಷ್ಟು ಸೇವೆಗೈದು ಒಳ್ಳೆಯ ಹೆಸರು ಪಡೆದಿದ್ದಾರೆಂದು ಹೇಳಿದರು. ಇವರು ತಾಲೂಕಿನ ಪ್ರತಿ ಶಾಲೆಗೂ ಭೇಟಿ ನೀಡಿ ಸೂಕ್ತ ಸಲಹೆ ಸೂಚನೆ ಮಾರ್ಗದರ್ಶನ ನೀಡಿ ಎಸ್ ಎಸ್ ಎಲ್ ಸಿ ಯಲ್ಲಿ ಇನ್ನೂ ಹೆಚ್ಚಿನ ಫಲಿತಾಂಶ ಬರುವಂತೆ ಪ್ರಯತ್ನಿಸುತ್ತಾರೆಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಸನ್ಮಾನವನ್ನು ಸ್ವೀಕರಿಸಿದ ಬಿ ಇ ಓ n ಮಾತನಾಡಿ, ಎಲ್ಲರ ಸಹಕಾರದೊಂದಿಗೆ ತಾಲೂಕಿನಲ್ಲಿ ಹೆಚ್ಚಿನ ರೀತಿಯಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನುಡಿದರು. ತನ್ನನ್ನು ಸನ್ಮಾನಿಸಿದ ನಿವೃತ್ತ ನೌಕರರ ಸಂಘಕ್ಕೆ ಧನ್ಯವಾದಗಳು ಸಲ್ಲಿಸಿದರು.