Ramanand Sharma Column: ಅಮೆರಿಕ ವಲಸೆ ನೀತಿ: ಡೊನಾಲ್ಡ್‌ ಟ್ರಂಪ್‌ ಈಗ ಖಳನಾಯಕರೇ ?

ಹತ್ತು ರಾಷ್ಟ್ರಗಳ ‘ಬ್ರಿಕ್ಸ್’ ಸಂಘಟನೆಯ ಪ್ರತ್ಯೇಕ ಕರೆನ್ಸಿ ಪ್ರಸ್ತಾವದ ವಿರುದ್ಧ ಅಮೆರಿಕದ ಕಡೆಯಿಂದ ನೇರ ಎಚ್ಚರಿಕೆ ಹೊಮ್ಮಿದ್ದು, ಈ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಮೌನಕ್ಕೆ ಶರಣಾಗಿವೆ. ಪರ್ಯಾಯ ಕರೆನ್ಸಿ ರೂಪಿಸಿದರೆ ಬ್ರಿಕ್ಸ್ ರಾಷ್ಟ್ರಗಳ ಸರಕುಗಳ ಮೇಲೆ ಶೇ.100 ರಷ್ಟು ಸುಂಕವನ್ನು ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧಮಕಿ ಹಾಕಿದ್ದು, ಬ್ರಿಕ್ಸ್ ರಾಷ್ಟ್ರಗಳ ಮುಂದಿನ ಕಾರ್ಯತಂತ್ರವಿನ್ನೂ ರೂಪಿತವಾಗಬೇಕಿದೆ

Ramanand Sharma Column 030225
Profile Ashok Nayak Feb 3, 2025 8:58 AM

ದೃಷ್ಟಿಕೋನ

ರಮಾನಂದ ಶರ್ಮಾ

ಅಮೆರಿಕ ಸೀನಿದರೆ ಜಗತ್ತಿನಾದ್ಯಂತ ನೆಗಡಿಯಾಗುತ್ತದೆ. ಅಮೆರಿಕದಲ್ಲಿ ಏನೇ ಆಗಲಿ, ಜಗತ್ತಿನಾ ದ್ಯಂತ ಅದರ ಪರಿಣಾಮ ಕಂಡುಬರುತ್ತದೆ.

‘ಜಗತ್ತಿನ ದೊಡ್ಡಣ್ಣ’ ಎಂಬ ಹಣೆಪಟ್ಟಿ ಹೊತ್ತಿರುವ ಅಮೆರಿಕವು ಇಂದು ಆಲೋಚಿಸುವುದನ್ನು ಜಗತ್ತು ನಾಳೆ ಆಲೋಚಿಸುತ್ತದೆ ಎಂಬ ಮಾತು ಸತ್ಯ. ಅದರಲ್ಲೂ ಆರ್ಥಿಕ ವಿಷಯಗಳಲ್ಲಿ ಅಮೆರಿ ಕವು ಜಗತ್ತನ್ನೇ ನಿಯಂತ್ರಿಸುತ್ತದೆ. ಜಾಗತಿಕ ವ್ಯಾಪಾರದಲ್ಲಿ ಹಾಗೂ ವಿದೇಶಿ ವಿನಿಮಯ ಮಾರು ಕಟ್ಟೆಯಲ್ಲೂ ಅಮೆರಿಕದ ಡಾಲರ್ ‘ಅಗ್ರಗಣ್ಯ ಕರೆನ್ಸಿ’ ಆಗಿದ್ದು, ಅಮೆರಿಕದ ಪ್ರತಿಯೊಂದು ನಡೆ ಗೂ ಈ ವಲಯಗಳು ತೀವ್ರವಾಗಿ ಸ್ಪಂದಿಸುತ್ತವೆ.

ಇದೇ ರೀತಿಯಲ್ಲಿ, ಅಮೆರಿಕದ ವಿದೇಶಾಂಗ, ರಾಜಕೀಯ, ರಕ್ಷಣಾ ಮತ್ತು ವಲಸೆ ನೀತಿಗಳು ಕೂಡ ಜಗತ್ತನ್ನು ನಡುಗಿಸುತ್ತವೆ. ಹತ್ತು ರಾಷ್ಟ್ರಗಳ ‘ಬ್ರಿಕ್ಸ್’ ಸಂಘಟನೆಯ ಪ್ರತ್ಯೇಕ ಕರೆನ್ಸಿ ಪ್ರಸ್ತಾವದ ವಿರುದ್ಧ ಅಮೆರಿಕದ ಕಡೆಯಿಂದ ನೇರ ಎಚ್ಚರಿಕೆ ಹೊಮ್ಮಿದ್ದು, ಈ ರಾಷ್ಟ್ರಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಜಾಣಮೌನಕ್ಕೆ ಶರಣಾಗಿವೆ. ಪರ್ಯಾಯ ಕರೆನ್ಸಿ ರೂಪಿಸಿದರೆ ಬ್ರಿಕ್ಸ್ ರಾಷ್ಟ್ರಗಳ ಸರಕುಗಳ ಮೇಲೆ ಶೇ.100ರಷ್ಟು ಸುಂಕವನ್ನು ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧಮಕಿ ಹಾಕಿದ್ದು, ಬ್ರಿಕ್ಸ್ ರಾಷ್ಟ್ರಗಳ ಮುಂದಿನ ಕಾರ್ಯತಂತ್ರವಿನ್ನೂ ರೂಪಿತವಾಗಬೇಕಿದೆ.

ಇದನ್ನೂ ಓದಿ: Dr Parinita Ravi Column: ಸೂರ್ಯನೆಡೆ ಮುನ್ನುಗ್ಗಲು ಮಕ್ಕಳಿಗೆ ಹೇಳಬೇಕಾಗಿಲ್ಲ

ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಟ್ರಂಪ್ ಅವರು ವಲಸೆ ಮತ್ತು ಸುಂಕದ ವಿಚಾರದಲ್ಲಿ ಮಾಡಿರುವ ಎರಡು ಘೋಷಣೆಗಳು ಜಗತ್ತನ್ನು ತಲ್ಲಣಗೊಳಿಸಿವೆ. ಈವರೆಗೆ ಇದ್ದ, ಅಮೆರಿಕದಲ್ಲಿ ಹುಟ್ಟಿದ ಮಾತ್ರಕ್ಕೆ ಅಲ್ಲಿನ ನಾಗರಿಕರಾಗುವ ‘ಜನ್ಮದತ್ತ ಪೌರತ್ವ’ದ ಹಕ್ಕನ್ನು ಹಿಂತೆಗೆದುಕೊಳ್ಳುವ ಟ್ರಂಪ್ ಅವರ ನಿರ್ಧಾರವು ಫೆಬ್ರವರಿ 28ರೊಳಗೆ ಹೆರಿಗೆ ಮಾಡಿಸಿಕೊಳ್ಳಲು ಹಲವು ಗರ್ಣಿಣಿಯರು ಅಮೆರಿಕದ ಆಸ್ಪತ್ರೆಗಳಿಗೆ ದೌಡಾಯಿಸುವಂತೆ ಮಾಡಿದೆಯಂತೆ.

ಅಮೆರಿಕದಲ್ಲಿ ನೀಡಲಾಗುವ ಪೌರತ್ವವು ಅಕ್ರಮ ವಲಸಿಗರಿಗಲ್ಲ ಎಂದು ಟ್ರಂಪ್ ಗುಡುಗಿದ್ದಾರೆ. ಗುಲಾಮರ ಮಕ್ಕಳಿಗೆ ಪ್ರಯೋಜನ ನೀಡುವ ಉದಾತ್ತ ಉದ್ದೇಶದೊಂದಿಗೆ ಜನ್ಮದತ್ತ ಪೌರತ್ವದ ಸೌಲಭ್ಯ ನೀಡಲಾಗಿತ್ತು. ಅಂದು ಮಾಡಿದ ನೀತಿಯ ಮೇಲೆ ಸದ್ಯ ವಿಶ್ವದ ಇತರ ದೇಶಗಳಿಂದ ಬಂದು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸುವ ಜನರಿಗೆ ಪೌರತ್ವ ನೀಡುವ ಉದ್ದೇಶ ಅಲ್ಲಿರಲಿಲ್ಲ; ಇದೇ ನೀತಿಯನ್ನಾಧರಿಸಿ ಜಗತ್ತಿನ ಜನರು ಬಂದು ಅಮೆರಿಕದಲ್ಲಿ ನೆಲೆಸುವುದಕ್ಕೆ ಅವಕಾಶ ನೀಡು ವುದಿಲ್ಲ.

ನೀತಿಯಲ್ಲಿ ಅವಕಾಶ ಕಲ್ಪಿಸಿರುವ ಅರ್ಹರಿಗೆ ಮತ್ತು ಅವರ ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾ ಗುವುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಹೊಸ ವಲಸೆ ನೀತಿಯಿಂದ ತಪ್ಪಿಸಿಕೊಳ್ಳಲು, ಗಡಿ ಪಾರಾಗುವುದರಿಂದ ಬಚಾವಾಗಲು ಅಮೆರಿಕದಲ್ಲಿ ಅರೆಕಾಲಿಕ ಉದ್ಯೋಗದಲ್ಲಿರುವ ವಲಸೆ ವಿದ್ಯಾರ್ಥಿಗಳು ಉದ್ಯೋಗವನ್ನು ಬಿಡುತ್ತಿದ್ದಾರಂತೆ. ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುವ ಬಹುತೇಕ ವಿದ್ಯಾರ್ಥಿಗಳು ತಮ್ಮ ವೆಚ್ಚವನ್ನು ಸರಿದೂಗಿಸಿಕೊಳ್ಳಲು ಅಲ್ಲಿ ಅರೆಕಾಲಿಕ ಉದ್ಯೋಗ ಮಾಡುವುದು ತೀರಾ ಸಾಮಾನ್ಯ.

ಇವು ಅನಧಿಕೃತ ಉದ್ಯೋಗಗಳಾಗಿದ್ದು, ಅವರು ಅಪಾಯದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯಿದೆ. ಮುಂಬರುವ ವಲಸೆ ನೀತಿಯಲ್ಲಿ, ಅಮೆರಿಕದಲ್ಲಿರುವ ಅಕ್ರಮ ವಲಸಿಗರನ್ನು ಹೊರಗಟ್ಟುವ ಮತ್ತು ಆ ನಿಟ್ಟಿನಲ್ಲಿ ವಲಸೆ ನೀತಿಯನ್ನು ಮಾರ್ಪಡಿಸುವ ಉದ್ದೇಶವನ್ನು ಟ್ರಂಪ್ ಹೊಂದಿದ್ದಾರೆ.

ಅಮೆರಿಕದ ಜನಸಂಖ್ಯೆಯಲ್ಲಿ ಸುಮಾರು ಶೇ.14.01ರಷ್ಟು ವಲಸಿಗರಿದ್ದಾರೆ. ಟ್ರಂಪ್‌ರ ಉದ್ದೇಶವು ಇಂಥವರ ನಿದ್ರೆಗೆಡಿಸಿದ್ದು, ಮುಂದಿನ ದಿನಗಳನ್ನು ಅವರು ಆತಂಕದಿಂದಲೇ ನೋಡುತ್ತಿದ್ದಾರೆ. ‘ಟ್ರಂಪ್ ಎಂದರೆ ಬಿಜಿನೆಸ್’ ಎನ್ನುವಂತೆ ಅಕ್ರಮ ವಲಸಿಗರನ್ನು ಹೊರಹಾಕುವ ಕೆಲಸವನ್ನು ಟ್ರಂಪ್ ಅಧಿಕಾರ ಸ್ವೀಕಾರದ ಮೊದಲ ದಿನದಿಂದಲೇ ಆರಂಭಿಸಿದ್ದಾರಂತೆ.

ಅಮೆರಿಕದಲ್ಲಿರುವ ಸುಮಾರು 7500 ಅಕ್ರಮ ಭಾರತೀಯ ವಲಸಿಗರನ್ನು ಭಾರತಕ್ಕೆ ಮರಳಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮಾತುಕತೆ ನಡೆಸಿದ್ದಾರೆ. ಈ ಮೊದಲು ಫಾರಿನ್ ಸರಕು ಗಳ ‘ಕ್ರೇಜ್’ ಹೊಂದಿದ್ದ ಭಾರತೀಯರು ಕಳೆದ 2-3 ದಶಕಗಳಿಂದ ‘ಫಾರಿನ್ ಕ್ರೇಜಿ’ ಆಗಿದ್ದಾರೆ. ಯಾವುದಾದರೂ ಹೊರದೇಶಕ್ಕೆ ಹೋಗಿ ಸೆಟ್ಲ್ ಆಗಬೇಕು ಎಂಬ ಅದಮ್ಯ ಬಯಕೆ ನಮ್ಮಲ್ಲಿ ಬಹು ತೇಕರಿಗಿದೆ. ಕೇರಳಿಗರು ಸದಾ ಮಧ್ಯಪ್ರಾಚ್ಯ ದೇಶಗಳತ್ತ ನೋಡುತ್ತಿದ್ದರೆ, ತಮಿಳರು ಸಿಂಗಾಪುರ, ಅಮೆರಿಕ, ಆಸ್ಟ್ರೇಲಿಯಾದತ್ತ ಕಣ್ಣು ನೆಟ್ಟಿರುತ್ತಾರೆ.

ತೆಲುಗರು ಅಮೆರಿಕದತ್ತ ನೆಟ್ಟ ದೃಷ್ಟಿಯನ್ನು ಬದಲಿಸುವುದಿಲ್ಲ ಎನ್ನಲಾಗುತ್ತದೆ. ಗುಜರಾತಿಗಳು ಇಂಗ್ಲೆಂಡ್ ಮತ್ತು ಅಮೆರಿಕಕ್ಕೆ, ಪಂಜಾಬಿಗಳು ಕೆನಡಾಕ್ಕೆ ಮತ್ತು ಕನ್ನಡಿಗರು ಮಧ್ಯಪ್ರಾಚ್ಯ, ಅಮೆ ರಿಕ, ಆಸ್ಟ್ರೇಲಿಯಾಕ್ಕೆ ವಿಮಾನ ಹತ್ತಲು ಕಾಯುತ್ತಿರುತ್ತಾರೆ. ಅಮೆರಿಕದ ಜನಸಂಖ್ಯೆ 340.01 ಮಿಲಿ ಯನ್. ಇದರಲ್ಲಿ ಸುಮಾರು 47.8 ಮಿಲಿಯನ್ (ಶೇ.14.70ರಷ್ಟು) ವಲಸಿಗರಿದ್ದಾರೆ.

ಇದು ಯಾವುದೇ ರಾಷ್ಟ್ರವು ಆತಂಕದಿಂದ ನೋಡಬಹುದಾದ ಸಂಖ್ಯೆ. 2024ರಲ್ಲಿ ಸುಮಾರು 2.80 ಮಿಲಿಯ್ ವಲಸಿಗರು ಅಮೆರಿಕವನ್ನು ಸೇರಿಕೊಂಡಿದ್ದಾರೆ. ಒಟ್ಟು ವಲಸಿಗರಲ್ಲಿ ಶೇ.23ರಷ್ಟು ಮೆಕ್ಸಿ ಕೋದವರಾದರೆ, ಶೇ.6ರಷ್ಟು ಭಾರತೀಯರು ಮತ್ತು ಶೇ.5ರಷ್ಟು ಚೀನಿಯರು ಎನ್ನಲಾಗುತ್ತದೆ. ಅಮೆ ರಿಕದಲ್ಲಿ 5.40 ಮಿಲಿಯನ್ ಭಾರತೀಯರಿದ್ದು, ಇದು ಅಮೆರಿಕದ ಒಟ್ಟು ಜನಸಂಖ್ಯೆಯ ಶೇ. 1.6 ರಷ್ಟು ಭಾಗ ಎನ್ನಲಾಗುತ್ತದೆ.

ಇವರ ಪೈಕಿ 725000 ವಲಸಿಗರಿಗೆ ಸರಿಯಾದ ದಾಖಲೆಗಳೇ ಇಲ್ಲ ಎಂಬುದು ಗಮನಿಸಬೇಕಾದ ಸಂಗತಿ. ವಿಶೇಷವೆಂದರೆ, ಅಮೆರಿಕದ ಆಡಳಿತ ವ್ಯವಸ್ಥೆಯ ಪ್ರಮುಖ ಹುದ್ದೆಗಳಲ್ಲಿ ಭಾರತೀಯರೂ ಇದ್ದಾರೆ. ಪ್ರತಿದಿನ ಸುಮಾರು 2200 ವಲಸಿಗರು ಅಮೆರಿಕಕ್ಕೆ ಬರುತ್ತಾರಂತೆ, ತಾಸಿಗೆ 10ರಂತೆ ಭಾರತೀಯರು ಅಮೆರಿಕವನ್ನು ಸೇರಲು ಯತ್ನಿಸುತ್ತಿದ್ದಾರಂತೆ.

2024ರಲ್ಲಿ 90,415 ಭಾರತೀಯರು ಮೆಕ್ಸಿಕೋ ಮತ್ತು ಕೆನಡಾ ಗಡಿಯ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದು ಇವರಲ್ಲಿ ಸುಮಾರು ಅರ್ಧದಷ್ಟು ಮಂದಿ ಗುಜರಾತಿಗಳಂತೆ. ಈ ಅಂಕಿ-ಅಂಶಗಳನ್ನೆಲ್ಲ ನೋಡಿದಾಗ ಅಮೆರಿಕವು ವಲಸಿಗರ ದೇಶ ಎಂದು ಕೆಲವರು ಆಡಿಕೊಳ್ಳು ವುದನ್ನು ಸತ್ಯಕ್ಕೆ ದೂರ ಎನ್ನಲಾಗದು.

ಬದುಕಿನ ಬಂಡಿ ನಡೆಸಲು ಜನರು ಒಂದೂರಿನಿಂದ ಇನ್ನೊಂದೂರಿಗೆ ಹೋಗುವಂತೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವುದು ಮತ್ತು ನೆಮ್ಮದಿಯ ಬದುಕಿಗೆ ಆ ಸ್ಥಳವು ಸರಿಯೆ ನಿಸಿದಾಗ ಅಲ್ಲಿಯೇ ಕಾಯಮ್ಮಾಗಿ ತಳವೂರುವುದು ಲಾಗಾಯ್ತಿನಿಂದ ಇರುವ ಪರಿಪಾಠ. ಇದು ಇತ್ತೀಚೆಗೆ ತೀರಾ ಸಾಮಾನ್ಯವಾಗಿದೆಯಷ್ಟೇ. ಕೆಲವರು ಗುಣಮಟ್ಟದ/ಹೊಸ ರೀತಿಯ ಬದುಕಿ ಗೆಂದು, ತೊಡಕು ಮತ್ತು ಜಂಜಾಟಗಳಿಲ್ಲದ ನೆಮ್ಮದಿಯ ಜೀವನ ನಡೆಸಲೆಂದು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿರುವ ಪಾಶ್ಚಾತ್ಯ ರಾಷ್ಟ್ರಗಳಿಗೆ, ಅದರಲ್ಲೂ ಮುಖ್ಯವಾಗಿ ಅಮೆರಿಕಕ್ಕೆ ಹೀಗೆ ವಲಸೆ ಹೋಗಲು ಹಾತೊರೆಯುತ್ತಾರೆ.

ಇಂದಿನ ಯುವಜನಾಂಗ, ನಿರ್ದಿಷ್ಟವಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ, ಅಲ್ಲಿಯೇ ಉದ್ಯೋಗ ಹಿಡಿದು ಶತಾಯಗತಾಯ ಅಲ್ಲಿಯೇ ತಳವೂರುತ್ತಾರೆ. ಕೆಲವರು ಸ್ಥಳೀಯ ರನ್ನು ಮದುವೆಯಾಗಿ ಅಲ್ಲಿನ ಪೌರತ್ವ ಪಡೆದಿರುವುದನ್ನು ಅಲ್ಲಗಳೆಯಲಾಗದು. ಈ ರೀತಿಯ ವಲಸೆಯು ಅಮೆರಿಕಕ್ಕೆ ಭಾರವಾಗಿದೆ. ಅಮೆರಿಕವು ತನ್ನ ಉದಾರ ವಲಸೆನೀತಿಯನ್ನು ರೂಪಿಸು ವಾಗ, ದುಡಿಯುವ ಸ್ಥಳೀಯ ಕೈಗಳ, ಅರ್ಹರ, ಉದ್ಯಮಿಗಳ ಮತ್ತು ವ್ಯವಹಾರಸ್ಥರ ಕೊರತೆ ಅಲ್ಲಿತ್ತು.

ಕಾಲಾನಂತರದಲ್ಲಿ, ಸ್ಥಳೀಯರು ಕ್ರಮೇಣ ಮೈಕೊಡವಿಕೊಂಡು ಎದ್ದಿದ್ದರ ಪರಿಣಾಮ ಅವರ ದನಿ ಮಾರ್ದನಿಸತೊಡಗಿದೆ. ಇದರ ಶೃತಿಯನ್ನು ಸರಿಯಾಗಿ ಗ್ರಹಿಸಿದ ಡೊನಾಲ್ಡ್ ಟ್ರಂಪ್ ಅವರ Make Amerika Great Again - MAGA ಚುನಾವಣಾ ಘೋಷಣೆಯಲ್ಲಿ ವಲಸೆನೀತಿಯ ಮಾರ್ಪಾ ಡಿಗೆ ಒತ್ತು ನೀಡಲಾಗಿತ್ತು ಮತ್ತು ಇದು ಯುವಜನರನ್ನು ಬಹುವಾಗಿ ಆಕರ್ಷಿಸಿತ್ತು. ಟ್ರಂಪ್‌ರ ಪ್ರತಿ ಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಈ ನಿಟ್ಟಿನಲ್ಲಿ ದೃಢವಾಗಿ ಮಾತನಾಡದಿದ್ದುದೇ ಅವರ ಸೋಲಿಗೆ ಕಾರಣವಾಯಿತು ಎಂಬ ವಿಶ್ಲೇಷಕರ ಅಭಿಮತದಲ್ಲಿ ತಥ್ಯವಿಲ್ಲದಿಲ್ಲ.

ಅಮೆರಿಕದಲ್ಲಿರುವ ಒಟ್ಟು ವಲಸಿಗರಲ್ಲಿ ಮೆಕ್ಸಿಕನ್ನರ ನಂತರ ಭಾರತೀಯರ ಸಂಖ್ಯೆಯೇ ಹೆಚ್ಚು ಇದ್ದು, ನಿರೀಕ್ಷೆಯಂತೆ ಭಾರತದಲ್ಲಿದ್ದುಕೊಂಡು ಅಮೆರಿಕದ ಕನಸು ಕಾಣುವವರಲ್ಲಿನ ತಳಮಳ ಕೊಂಚ ಹೆಚ್ಚಿದೆ, ಈ ಕನಸು ಭಗ್ನವಾಗಬಹುದೇ ಎಂಬ ಜಿಜ್ಞಾಸೆಯೂ ಶುರುವಾಗಿದೆ. ಸದ್ಯಕ್ಕೆ ಟ್ರಂಪ್‌ರ ವಲಸೆನೀತಿಯು ಕೇವಲ ಅಕ್ರಮ ವಲಸಿಗರನ್ನು ಟಾರ್ಗೆಟ್ ಮಾಡಿದ್ದು ಸ್ವಲ್ಪ ನಿರಾಳತೆ ಕಾಣುತ್ತಿದೆ. ಆದರೆ ಇದು ಹೀಗೇ ಇರುತ್ತದೆ ಎನ್ನಲಾಗುವುದಿಲ್ಲ.

ದೇಶದಲ್ಲಿ ‘ಇಂಪೋರ್ಟ್ ಟ್ಯಾಕ್ಸ್’ ವಿಧಿಸುವಂಥ ಕ್ರಾಂತಿಕಾರಕ ಚಿಂತನೆಯಲ್ಲಿರುವ ಟ್ರಂಪ್, ವಲಸೆ ನೀತಿಯಲ್ಲಿ ವಲಸೆಯನ್ನೇ ನಿಯಂತ್ರಿಸಿಬಿಟ್ಟರೆ? ಹಲವು ಕಟ್ಟುಪಾಡುಗಳಿಗೆ ತಳಕುಹಾಕಿದರೆ? ಎಂಬ ಭಯವು ಭಾರತದಲ್ಲಿದ್ದುಕೊಂಡು ಅಮೆರಿಕದ ಕನಸು ಕಾಣುತ್ತಿರುವವರನ್ನೂ, ಅಮೆರಿಕ ದಲ್ಲಿರುವ ಭಾರತೀಯ ವಲಸಿಗರನ್ನೂ ಆವರಿಸಿದೆ. ಹೀಗಾಗಿ ಕೆಲವರು ಡೊನಾಲ್ಡ್ ಟ್ರಂಪ್‌ರನ್ನು ಖಳನಾಯಕನಂತೆ ನೋಡುತ್ತಿದ್ದಾರೆ!‌

ಟ್ರಂಪ್‌ರ ನಿಲುವಿನಲ್ಲಿ ಮೇಲ್ನೋಟಕ್ಕೆ ತಪ್ಪನ್ನು ಹುಡುಕಬಹುದಾದರೂ, ವಾಸ್ತವದಲ್ಲಿ ಅದು ಸರಿಯಾದ ನಿಲುವು ಎನ್ನಬಹುದು. ಯಾವ ದೇಶವೂ ವ್ಯಾಪಾರ, ಉದ್ಯಮ, ಉದ್ಯೋಗ ಮತ್ತು ಸಂಸ್ಕೃತಿಯ ದೃಷ್ಟಿಯಲ್ಲಿ ತನ್ನ ದೇಶವನ್ನು ಮತ್ತು ದೇಶಸ್ಥರನ್ನು ಕಡೆಗಣಿಸಿ, ಪ್ರಜೆಗಳ ಹಿತಾಸಕ್ತಿ ಯನ್ನು ಬದಿಗೊತ್ತಿ ಆಡಳಿತವನ್ನು ನಡೆಸಲಾಗದು.

ಇತ್ತೀಚೆಗೆ ಅಮೆರಿಕದಲ್ಲಿ ಉದ್ಯೋಗಗಳು ವಲಸಿಗರ ಪಾಲಾಗುತ್ತಿವೆ ಮತ್ತು ವಲಸಿಗರನ್ನು ನೇಮಿಸಿ ಕೊಂಡರೆ ಕಂಪನಿಗಳಿಗೆ ‘ಸಿಟಿಸಿ’ ( cost to company) ಕಡಿಮೆಯಾಗುತ್ತಿದೆ, ಈ ಕಾರಣಕ್ಕಾಗಿ ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ದೂರೂ ಇದೆಯಂತೆ. ಬಹುಶಃ ಇದನ್ನು, ಕರ್ನಾಟಕ ದಲ್ಲಿನ ಕಟ್ಟಡ ಕಾಮಗಾರಿಗಳಿಗೆ ಹೊರರಾಜ್ಯಗಳಿಂದ ಬಂದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪರಿಸ್ಥಿತಿಗೆ ಹೋಲಿಸಬಹುದೇನೋ? ನೈತಿಕವಾಗಿ ನಾವು ಟ್ರಂಪ್‌ರ ವಲಸೆನೀತಿಯನ್ನು ವಿರೋಧಿ ಸುವ ಸ್ಥಿತಿಯಲ್ಲಿಲ್ಲ.

ಒಂದು ಹಳ್ಳಿಯ ಅಂಗನವಾಡಿಗೆ ಪಕ್ಕದ ಹಳ್ಳಿಯ ಶಿಕ್ಷಕಿಯೊಬ್ಬರನ್ನು ನೇಮಿಸಿದಾಗ, ಮಣ್ಣಿನ ಮಕ್ಕಳ ಹೆಸರಿನಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿ ಆ ಶಿಕ್ಷಕಿಯನ್ನು ವಾಪಸ್ ಕಳಿಸಿದ ಉದಾ ಹರಣೆ ನಮ್ಮಲ್ಲಿರುವಾಗ, ದೇಶದಲ್ಲಿ ಪ್ರತಿ ರಾಜ್ಯವೂ ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು ಎಂಬ ಕಾನೂನನ್ನು ಮಾಡುವಾಗ, local is vocal ಎನ್ನುವಾಗ, ಆತ್ಮನಿರ್ಭರತೆಯ ಉತ್ತುಂಗದಲ್ಲಿರುವಾಗ, ‘ಮೇಕ್ ಇನ್ ಇಂಡಿಯಾ’ ಎಂದು ಬೊಬ್ಬಿಡುವಾಗ, ಬೆಂಗಳೂರಿನಲ್ಲಿ ವಲಸಿಗರ ಶೀತಲ ಯುದ್ಧವನ್ನು ಕಾಣುವಾಗ ಮತ್ತು ಅದಕ್ಕೆ ಸಾಕಷ್ಟು ಬೆಂಬಲ ಗೋಚರಿಸುವಾಗ, ‘ಅಮೆರಿಕವು ಅಮೆರಿಕನ್ನರಿಗೆ ಮಾತ್ರ’ ಎಂಬ ಟ್ರಂಪ್ ಅವರ ನಿಲುವನ್ನು ತಪ್ಪು ಹೆಜ್ಜೆ ಎಂದು ವಿರೋಧಿಸಲಾದೀತೇ?

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?