ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ಸ್ಯಾಡ್‌ ಸಾಂಗ್‌ - ಶೋಕ ಗೀತೆ, ಐಟಂ ಸಾಂಗ್-ಶಾಖ ಗೀತೆ

ಈ ವಾರ ಬಿಡುಗಡೆ ಆಗಿರುವ ಸಿನಿಮಾಗಳಲ್ಲಿ ‘ಹೆಗ್ಗಣ ಮುದ್ದು’ ಕೂಡಾ ಒಂದು. ಇದರ ವಿಶೇಷತೆ ಅಂದ್ರೆ ಇದು ಡಾಲಿ ಧನಂಜಯ ನಿರ್ಮಾಣದ ಚಿತ್ರ. ಆದರೆ ಈ ಬಾರಿ ಧನಂಜಯ ಅವರು ಈ ಚಿತ್ರಕ್ಕೆ ಪ್ರಚಾರವನ್ನೇ ಮಾಡದೇ ಇರೋದು ಇನ್ನೂ ವಿಶೇಷ. ಸಿನಿಮಾ ಮಾಡಿದವರಿಗೆ ಹೆಗ್ಗಣ ಮುದ್ದು, ಸುಮ್ಮನೆ ನಾವೇ ನಮ್ಮ ಸಿನಿಮಾ ಬಗ್ಗೆ ಹೇಳಿಕೊಳ್ಳೋದ್ಯಾಕೆ ಅಂತ ಅವರು ಸುಮ್ಮನಾಗಿಲ್ಲ. ಅವರ ಕಳೆದ ಚಿತ್ರ ‘ಮದರ್ ಪ್ರಾಮಿಸ್’ ಚಿತ್ರದ ಸಂದರ್ಭದಲ್ಲಿ ಡಾಲಿ ತಮ್ಮ ಅಸಮಾಧಾನ ತೋಡಿಕೊಂಡಿ ದ್ದರು.

ತುಂಟರಗಾಳಿ

ಸಿನಿಗನ್ನಡ

ಈ ವಾರ ಬಿಡುಗಡೆ ಆಗಿರುವ ಸಿನಿಮಾಗಳಲ್ಲಿ ‘ಹೆಗ್ಗಣ ಮುದ್ದು’ ಕೂಡಾ ಒಂದು. ಇದರ ವಿಶೇಷತೆ ಅಂದ್ರೆ ಇದು ಡಾಲಿ ಧನಂಜಯ ನಿರ್ಮಾಣದ ಚಿತ್ರ. ಆದರೆ ಈ ಬಾರಿ ಧನಂಜಯ ಅವರು ಈ ಚಿತ್ರಕ್ಕೆ ಪ್ರಚಾರವನ್ನೇ ಮಾಡದೇ ಇರೋದು ಇನ್ನೂ ವಿಶೇಷ. ಸಿನಿಮಾ ಮಾಡಿದವರಿಗೆ ಹೆಗ್ಗಣ ಮುದ್ದು, ಸುಮ್ಮನೆ ನಾವೇ ನಮ್ಮ ಸಿನಿಮಾ ಬಗ್ಗೆ ಹೇಳಿಕೊಳ್ಳೋದ್ಯಾಕೆ ಅಂತ ಅವರು ಸುಮ್ಮನಾಗಿಲ್ಲ. ಅವರ ಕಳೆದ ಚಿತ್ರ ‘ಮದರ್ ಪ್ರಾಮಿಸ್’ ಚಿತ್ರದ ಸಂದರ್ಭದಲ್ಲಿ ಡಾಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು.

ಅವರ ಚಿತ್ರಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ ಅಂತ ಬೇಸರಗೊಂಡಿದ್ದ ಅವರು ಹಿಂಗೇ ಆದ್ರೆ ಇನ್ನು ಮುಂದೆ ನಾನು ಸಿನಿಮಾ ನಿರ್ಮಾಣ ಮಾಡಲ್ಲ. ನನ್ನ ಮುಂದಿನ ಚಿತ್ರ ‘ಹೆಗ್ಗಣ ಮುದ್ದು’ ನನ್ನ ನಿರ್ಮಾಣದ ಕೊನೇ ಚಿತ್ರ ಆದರೂ ಆಗಬಹುದು ಅಂತ ಹೇಳಿದ್ದರು ಡಾಲಿ. ಈಗ ತಮ್ಮ ಸೋ ಕಾಲ್ಡ ಕೊನೆಯ ಚಿತ್ರಕ್ಕೆ ಅವರು ಬಂಡವಾಳ ಹಾಕಿದ್ದಾರೆಯೇ ಹೊರತು, ಸಿನಿಮಾದ ಬಂಡವಾಳ ಏನು ಅನ್ನೋದನ್ನ ಪ್ರೇಕ್ಷಕರೇ ಡಿಸೈಡ್ ಮಾಡಲಿ ಎಂಬಂತೆ ಪ್ರಚಾರವನ್ನೇ ಮಾಡಿಲ್ಲ.

ಆದರೆ ಈ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿಯ ಮಧ್ಯೆ ಒಂದು ಸರಳ ಸುಂದರ ಸಾಂಸಾರಿಕ ಚಿತ್ರ ಅನ್ನೋ ಮಾತು ಹೆಗ್ಗಣ ಮುದ್ದು ಚಿತ್ರವನ್ನು ಮೊದಲ ದಿನ ನೋಡಿದ ಪ್ರೇಕ್ಷಕರಿಂದ ಬರ್ತಾ ಇದೆ.

ಪೂರ್ಣಚಂದ್ರ ಮತ್ತು ಅದಿತಿ ಸಾಗರ್ ಅವರ ಅಭಿನಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಈ ಚಿತ್ರ ಮದರ್ ಪ್ರಾಮಿಸ್‌ನಂತೆ ಆಗದೆ ಡಾಲಿ ಧನಂಜಯ ಅವರಿಗೆ ಜಯ ತಂದುಕೊಡಲಿ, ಅವರು ಇನ್ನಷ್ಟು ಸಿನಿಮಾಗಳನ್ನು ನಿರ್ಮಿಸುವಂತಾಗಲಿ ಅನ್ನೋದೇ ಕನ್ನಡ ಚಿತ್ರ ಪ್ರೇಮಿಗಳ ಹಾರೈಕೆ.

ಇದನ್ನೂ ಓದಿ: Hari Paraak Column: ʼಟಿಕೆಟ್‌ʼ ಸೇಲ್‌ ಆಗಲಿಲ್ಲ-ಯಶ್‌

ಲೂಸ್‌ ಟಾಕ್-ನರೇಂದ್ರ ಮೋದಿ

ಅಲ್ಲಾ ಸಾರ್ ವಿದೇಶ ಪ್ರವಾಸ ಅಂದ್ರೆ ಯಾವಾಗ್ಲೂ ರೆಡಿ ಇರ್ತೀರಾ, ಆದ್ರೆ ಕಾವೇರಿ ವಿವಾದದ ವಿಷಯದಲ್ಲಿ ಇ ಇರೋ ನಮ್ಮ ಕರ್ನಾಟಕಕ್ಕೆ ಒಂದ್ಸಲ ಬಂದು ಹೋಗೋಕಾಗ್ಲಿಲ್ವ?

- ಅದನ್ನೇ ನಾನು ಹೇಳ್ತಿರೋದು ಕರ್ನಾಟಕನೂ ಫಾರಿನ್ನಲ್ಲಿ ಇದ್ದಿದ್ರೆ ಬರ್ತಾ ಇದ್ದೆ. ನಾನು ಎಲ್ಲಿ ಹೋದ್ರೂ, ಪಾಸ್‌ಪೋರ್ಟ್ ಯೂಸ್ ಮಾಡ್ಕೊಂಡೇ ಹೋಗೋದು.

ನೀವು ಹಿಂಗೇ ಅಂತಾ ಇರಿ, ನಿಮ್ಮ ಕಟೌಟ್ ಹಾಕ್ಕೊಂಡ್ ಖುಷಿ ಪಡ್ತಾ ಇದ್ದ ಕನ್ನಡಿಗರೆಲ್ಲ ಈಗ ನಿಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಕೂಡ ಅಪ್‌ನೇ ಪಾಸ್ ಇಸ್ಕೊಳ್ಳೋದೂ ಬೇಡ ಅಂತಿದಾರೆ.

- ಇದೆಲ್ಲ ಸ್ವಲ್ಪ ದಿನ ಅಷ್ಟೆ, ನೋಡ್ತಾ ಇರಿ. ದೀಸ್ ಡೇಸ್ ವಿಲ್ ಪಾಸ್ ಅವೇ. ನೀವು ಕನ್ನಡಿಗರು ವಿಶಾಲ ಹೃದಯಿಗಳು. ಪಾಸ್‌ಪೋರ್ಟ್ ಸೈಜ್ ಏನು, ಲೈಫ್‌ ಸೈಜ್ ಫೋಟೋ ನೇ ಹಾಕ್ಕೊತೀರ.

ಏನೋಪಾ, ಸರಿ, ಈಗ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಗೆ ಜ್ವರ ಬಂದಿದೆಯಂತೆ. ಆಮೇಲೆ ಆ ಸಿಂಪಥಿ ಮೇಲೆ, ಕಾವೇರಿ ವಿಷಯದಲ್ಲಿ ಅವರಿಗೆ ಜ್ವರ ಬಂತು ಅಂತ ನಮಗೆ ಬರೆ ಹಾಕ್‌ಬೇಡಿ ಅಷ್ಟೆ.

- ಹಂಗೆಲ್ಲಾ ಏನು ಮಾಡಲ್ಲ, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕೋಕಾಗುತ್ತಾ? ಅದನ್ನ ಎತ್ತಿನ ಹೊಳೆ ವಿಷಯ ಬಂದಾಗ ನೋಡೋಣ ಬಿಡಿ. ಆದ್ರೂ, ನೀವು ಯಾರಾದ್ರೂ ನೀರು ಕೇಳಿದಾಗ ಇ ಅನ್ನೋದು ಸರೀನಾ?

ಅಯ್ಯೋ, ಅನುಭವದ ಮಾತು ಸರ್, ಹಿಂಗೇ, ಸಾಮೀ, ನೀರು ಕೊಡಿ ಅಂತ ಕೇಳ್ಕೊಂಡ್ ಬಂದ ದಂಡುಪಾಳ್ಯ ಗ್ಯಾಂಗ್ ನವರು ಇಲ್ಲಿ ಏನ್ ಮಾಡಿದ್ರು ಅಂತ ನಿಮಗೆ ಗೊತ್ತಿಲ್ವಾ?

- ಮನೆ ಗೇಟ್ ತೆಗೆದು ನೀರು ಕೊಟ್ರೆ ಹಂಗ್ ಮಾಡಿದ್ರು, ಇಲ್ಲಿ ಅಣೆಕಟ್ಟಿನ ಗೇಟ್ ತೆಗೆದು ನೀರು ಕೊಟ್ರೆ ಏನಾಗಬಹುದು ಅಂತ?

ಅದ್ಸರಿ, ಹೋಗ್ಲಿ, ಈ ಪಾಕಿಸ್ತಾನದ ವಿರುದ್ದ ಏನಾದ್ರೂ ಸೀರಿಯಸ್ ಆಕ್ಷನ್ ತಗೊತೀರಾ ಇಲ್ಲ ಬರೀ ಚುನಾವಣೆ ಟೈಮಲ್ಲಿ ಮಾತ್ರ ಪಾಕ್ ಜಪ ಮಾಡ್ತೀರಾ?

- ನೀವು ನನ್ನ ಸರಿಯಾಗಿ ‘ಫಾಲೋ’ ಮಾಡ್ತಿಲ್ಲ ಅನ್ಸುತ್ತೆ. ಭಯೋತ್ಪಾದನೆಯನ್ನ ನಾವು ಸಹಿಸೊಲ್ಲ ಅಂತ ಟ್ವೀಟ್ ಮಾಡ್ತಾ ಇರ್ತೀನಲ್ಲ?

ನೆಟ್‌ ಪಿಕ್ಸ್

ಖೇಮು ದೊಡ್ಡ ಸನ್ಯಾಸಿ ಆಗಿದ್ದ. ಎಲ್ಲವನ್ನೂ ತೊರೆದು ಸೀದಾ ಹಿಮಾಲಯಕ್ಕೆ ಹೋಗಿ ಸೆಟಲ್ ಆಗಿದ್ದ. ಅಲ್ಲಿನ ಬೆಟ್ಟದ ತುದಿಯಲ್ಲಿ ಕೊರೆಯುವ ಚಳಿಯಲ್ಲಿ ಪುಟ್ಟ ಗುಡಿಸಲನ್ನು ಕಟ್ಟಿಕೊಂಡು ಅ ವಾಸ ಮಾಡುತ್ತಿದ್ದ, ಅವನಿಗೆ ಅನೇಕ ಭಕ್ತರೂ ಇದ್ದರು. ಅವರಿಗೆಲ್ಲ ತುಂಬಾ ಆಶ್ಚರ್ಯ. ಈ ಖೇಮು ಬಾಬಾ ಸೊಂಟದ ಮೇಲೆ ತುಂಡು ಬಟ್ಟೆ ಕಟ್ಟಿಕೊಂಡು ಈ ಚಳಿಯಲ್ಲಿ ಅದು ಹೇಗೆ ಬದುಕಿರುತ್ತಾರೆ ಅಂತ. ‘ಈ ಚಳಿಯನ್ನು ಹೇಗೆ ತಡೆದುಕೊಳ್ಳುತ್ತೀರಾ’ ಅಂತ ಯಾರಾದ್ರೂ ಕೇಳಿದರೆ ‘ಇದರ ರಹಸ್ಯ, ತುಳಸಿ ಮತ್ತು ಗ್ರೀನ್ ಟೀ’ ಎಂದು ಉತ್ತರ ಹೇಳುತ್ತಿದ್ದ ಖೇಮುಬಾಬಾ.

ಆದರೂ ಬರೀ, ತುಳಸಿ, ಗ್ರೀನ್ ಟೀಯಿಂದ ಅಂಥ ಭಯಂಕರ ಚಳಿಯನ್ನು ತಡೆದುಕೊಳ್ಳುವುದು ಹೇಗೆ ಸಾಧ್ಯ ಅಂತ ಭಕ್ತರಿಗಂತೂ ಮನವರಿಕೆ ಆಗಲಿಲ್ಲ. ಹಾಗಾಗಿ ಭಕ್ತರಿಗೆ ಖೇಮುಬಾಬಾ ಮೇಲೆ ಭಕ್ತಿ ಜಾಸ್ತಿ ಆಗ್ತಾ ಹೋಯಿತು. ಖೇಮುಬಾಬಾ ಇದರಿಂದ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟ. ಅವನ ಹೆಸರು ಎಲ್ಲ ಕಡೆ ಹರಿದಾಡತೊಡಗಿತು. ಹಾಗಾಗಿ ಅದು ಸಹಜವಾಗಿ ಮಾಧ್ಯಮಗಳ ಕಿವಿಗೂ ಬಿತ್ತು. ಇದನ್ನು ಕೇಳಿ ಆಶ್ಚರ್ಯಗೊಂಡ ಪತ್ರಕರ್ತನೊಬ್ಬ, ಖೇಮುಬಾಬಾನ ಸಂದರ್ಶನ ಮಾಡಿ ಈ ರಹಸ್ಯವನ್ನು ತಿಳಿದು ಕೊಳ್ಳಬೇಕೆಂದು ಖೇಮು ಬಳಿ ಬಂದ.

‘ಬಾಬಾ ನಿಮ್ಮ ಸಂದರ್ಶನ ಮಾಡಬೇಕಿತ್ತು’ ಅಂದ. ಸರಿ ಇಬ್ಬರೂ ಮಾತಿಗೆ ಕುಳಿತರು. ಪತ್ರಕರ್ತ ನಿಂದ ಅದೇ ಪ್ರಶ್ನೆ, ‘ಬಾಬಾ, ಈ ಚಳಿಯನ್ನು ನೀವು ಹೇಗೆ ತಡೆದುಕೊಳ್ಳುತ್ತೀರಿ?’ ಖೇಮು ಬಾಬಾನಿಂದ ಅದೇ ಉತ್ತರ ‘ತುಳಸಿ ಮತ್ತು ಗ್ರೀನ್ ಟೀ’.

ಪತ್ರಕರ್ತ ಕೇಳಿದ ‘ಬರೀ, ತುಳಸಿ, ಗ್ರೀನ್ ಟೀಯಿಂದ ಇಂಥ ಭಯಂಕರ ಚಳಿಯನ್ನು ತಡೆದುಕೊಳ್ಳುವುದು ಹೇಗೆ ಸಾಧ್ಯ?’ ಅದಕ್ಕೆ, ಖೇಮು, ಸರಿ ನಿಮಗೆ ಇರೋ ವಿಷ್ಯ ಹೇಳಿಬಿಡ್ತೀನಿ ಎನ್ನುತ್ತಾ ಆ ಕಡೆ ತಿರುಗಿ ಹೇಳಿದ, ‘ತುಳಸಿ ಡಾರ್ಲಿಂಗ್, ಎರಡು ಕಪ್ ಗ್ರೀನ್ ಟೀ ತಗೊಂಡ್ ಬಾ...’

ಲೈನ್‌ ಮ್ಯಾನ್

ಕರ್ನಾಟಕದಲ್ಲಿರುವ ‘ಕೇಜ್ರಿ’ವಾಲ್’ ಅವರ ಸೆಲೆಬ್ರಿಟಿ ಸಂಬಂಧಿಕ ಯಾರು?

- ರಾಹುಲ್ ದ್ರಾವಿಡ್. ಯಾಕಂದ್ರೆ ಅವರೂ ‘ವಾಲ್’ ಅಲ್ವೇ..

ಒಳ್ಳೆ ಮಾತಾಡಿದ್ರೆ- ಗಾಂಧಿ ಬಾತ್

- ಕೆಟ್ಟ ಮಾತಾಡಿದ್ರೆ ಗಂಧೀ ಬಾತ್

ಈ ದೇವಸ್ಥಾನದ ಶಂಖ ಕದ್ದಿದ್ದಾರೆ ಎಂಬ ಆರೋಪದ ಮೇಲೆ ಬಂಧಿತರಾದವರು

- ‘ಶಂಖಿ’ತರು

ಸಾಂಗ್ ಕೆಟಗರಿ

ಸ್ಯಾಡ್ ಸಾಂಗ್ - ಶೋಕ ಗೀತೆ

ಡಿವೋಷನಲ್ ಸಾಂಗ್ - ಶ್ಲೋಕ ಗೀತೆ

ಐಟಂ ಸಾಂಗ್- ಶಾಖ ಗೀತೆ

ಬಾವನ ದುಡ್ಡಲ್ಲೇ ಜೀವನ ಮಾಡುವವನು

- ‘ಬಾವ’ನಾ ಜೀವಿ

ಮಾಧ್ಯಮದಲ್ಲಿ ಪತ್ರಕರ್ತನೊಬ್ಬ ತನ್ನ ಕ್ಷೇತ್ರದಲ್ಲಿ ಮಾಡುವ ಸಾಧಾರಣ ಸಾಧನೆ

- ‘ಮೀಡಿಯಾ’ಕರ್

ಕೆಆರ್‌ಎಸ್‌ನಲ್ಲಿ ಬಳಕೆಗೆ ಯೋಗ್ಯವಲ್ಲದ ವೇಸ್ಟ್ ನೀರೇ ಜಾಸ್ತಿ ಇದೆಯಂತೆ.

- ಬೆಳ್ಳಗಿರುವುದೆಲ್ಲಾ ಹಾಲಲ್ಲ ಕೊಳ್ಳದಲ್ಲಿರುವುದೆ ನೀರಲ್ಲ

ಒಂದು ಹುಡುಗಿಯ ಪ್ರೀತಿಯಲ್ಲಿ ಬಿzಗ ಬರುವ ಪ್ರೇಮ ಜ್ವರಕ್ಕೆ ಹೀಗೂ ಅನ್ನಬಹುದೇ?

- ‘ಹಕ್ಕಿ’ ಜ್ವರ

ಹರಿ ಪರಾಕ್‌

View all posts by this author