ಪ್ರಸ್ತುತ
ಪ್ರವೀಣ್ʼಕುಮಾರ್, ಪಾರ್ಣಕಜೆ
ಒಮ್ಮೆ ಯೋಚಿಸಿ. ಭಾರತವು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಮುನ್ನಡೆಯುತ್ತಿದ್ದರೂ, ನಮ್ಮ ದೇಶದ ಮೂಲಭೂತ ಸಾಮಾಜಿಕ ಸಮಸ್ಯೆಗಳು ಮಾತ್ರ ಇನ್ನೂ ಹಾಗೆಯೇ ಉಳಿದಿವೆ. ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಂಟಿಯಾಗಿ ಬಿಡುಗಡೆ ಮಾಡಿರುವ ಹೊಸ ಸಮೀಕ್ಷಾ ವರದಿ (Progress on Drinking Water, Sanitation and Hygiene in Schools 2015-2025 ) ಇದಕ್ಕೆ ಒಂದು ಹೊಸ ಕೈಗನ್ನಡಿಯಾಗಿದೆ.
ಈ ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 5 ಕೋಟಿ ಶಾಲಾ ಮಕ್ಕಳಿಗೆ ಇಂದಿಗೂ ಸರಿಯಾದ ಶೌಚಾಲಯ ಮತ್ತು ನೈರ್ಮಲ್ಯ ವ್ಯವಸ್ಥೆ ದೊರೆಯುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಗಳು ಕಳೆದಿದ್ದರೂ, ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಇಂತಹ ಹೀನಾಯ ಮತ್ತು ಕನಿಷ್ಠ ಸೌಲಭ್ಯಗಳೂ ಇಲ್ಲದ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡಬೇಕಾಗಿರುವುದು ಅತ್ಯಂತ ದುರದೃಷ್ಟಕರ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ.
ಇದನ್ನೂ ಓದಿ: Dr Vijay Darda Column: ಚೀನಾ ಮೇಲಿನ ಗೌರವವೇ ಅಥವಾ ರಾಜಕೀಯವೇ ?
ಶಾಲೆಗಳಲ್ಲಿ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯು ಮಕ್ಕಳ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಸೋಂಕುಗಳು, ಹೊಟ್ಟೆನೋವು ಹಾಗೂ ಇತರೆ ಅನಾ ರೋಗ್ಯ ಸಮಸ್ಯೆಗಳಿಂದ ಮಕ್ಕಳು ಆಗಾಗ್ಗೆ ಶಾಲೆಗೆ ಗೈರುಹಾಜರಾಗುತ್ತಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಯುರಿನರಿ ಇನ್ ಫೆಕ್ಷನ್‌ಗೆ ತುತ್ತಾಗುವುದು ಸಾಮಾನ್ಯ.
ಪ್ರೌಢಾವಸ್ಥೆಗೆ ಬಂದ ನಂತರ ಸೂಕ್ತ ಶೌಚಾಲಯಗಳಿಲ್ಲದೆ ಶಿಕ್ಷಣವನ್ನೇ ಅರ್ಧಕ್ಕೆ ಮೊಟಕುಗೊಳಿ ಸುವ ಆತಂಕಕಾರಿ ಪರಿಸರ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಮುಂದುವರಿದಿದೆ. ಇದು ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಪ್ರಗತಿಗೆ ದೊಡ್ಡ ಹಿನ್ನಡೆ. ಕಲ್ಲು-ಮಣ್ಣಿನ ಸ್ಮಾರಕಗಳಿಗಿಂತ ನಮ್ಮ ನಾಡಿನ ಹಸಿವು ನೀಗಿಸುವ, eನ ನೀಡುವ ಮಕ್ಕಳ ಭವಿಷ್ಯ ಅತ್ಯಂತ ಮುಖ್ಯ. ಪ್ರಾಮುಖ್ಯತೆಯನ್ನು ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಶೌಚಾಲಯದಂತಹ ಮೂಲಭೂತ ಹಕ್ಕುಗಳಿಗೆ ನೀಡಬೇಕಿದೆ. ಹೊಣೆ ಗಾರಿಕೆ ಕೇವಲ ಆಡಳಿತ ಯಂತ್ರಕ್ಕೆ ಮಾತ್ರವಲ್ಲ, ಬದಲಿಗೆ ಇಡೀ ದೇಶದ ಸಮಾಜದ ಮೇಲಿದೆ.