Dr Vijay Darda Column: ಚೀನಾ ಮೇಲಿನ ಗೌರವವೇ ಅಥವಾ ರಾಜಕೀಯವೇ ?
ಇದು ಒಂದು ಪ್ರಶ್ನೆಯನ್ನು ಹುಟ್ಟುಹಾಕಿದೆ: ಇದು ನಿಜವಾಗಿಯೂ ಚೀನಾದ ಸ್ಥಾನಮಾನಕ್ಕೆ ನೀಡಿದ ಗೌರವವೇ ಅಥವಾ ಅಮೆರಿಕದ ಹೊಸ ಬಗೆಯ ರಾಜಕೀಯವೇ? ಯಾವುದೇ ವಿದೇಶಿ ಗಣ್ಯರು ಬಂದಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಜವಾಬ್ದಾರಿಯನ್ನು ಉಪಾಧ್ಯಕ್ಷರು, ವಿದೇಶಾಂಗ ಕಾರ್ಯದರ್ಶಿ ಅಥವಾ ಶಿಷ್ಟಾಚಾರದ ಅಧಿಕಾರಿಗೆ ವಹಿಸುವುದು ಅಮೆರಿಕದ ರಾಜತಾಂತ್ರಿಕ ಸಂಪ್ರದಾಯ. ಅಧ್ಯಕ್ಷರು ಅತಿಥಿಗಳನ್ನು ಶ್ವೇತಭವನದ (ವೈಟ್ ಹೌಸ್) ಬರಮಾಡಿಕೊಳ್ಳುತ್ತಾರೆ.
-
ಸಂಗತ
ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗಾಗಿ ಅಮೆರಿಕದ ಅಧ್ಯಕ್ಷೀಯ ಶಿಷ್ಟಾ ಚಾರವನ್ನು ಮುರಿದಿರುವುದು ಸಾಮಾನ್ಯ ಘಟನೆಯಲ್ಲ! ಅಮೆರಿಕ ಈಗ ಚೀನಾದ ಸ್ಥಾನಮಾನ ವನ್ನು ಒಪ್ಪಿಕೊಳ್ಳುತ್ತಿದೆ ಎಂಬುದು ಇದರ ಅರ್ಥವೇ? ಚೀನಾ ನಿಸ್ಸಂದೇಹವಾಗಿ ತನಗಾಗಿ ಒಂದು ಪ್ರಬಲ ಸ್ಥಾನವನ್ನು ನಿರ್ಮಿಸಿಕೊಂಡಿದೆ ಎಂಬುದು ಸತ್ಯ. ಆದರೆ, ಟ್ರಂಪ್‌ಗೇ ಸಹಜವಾಗಿರುವ ಬೇರೆ ಹಿತಾಸಕ್ತಿಗಳೂ ಇದರಲ್ಲಿ ಅಡಕವಾಗಿರುವ ಸಾಧ್ಯತೆ ಇದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್ ಅವರನ್ನು ಸ್ವಾಗತಿಸಲು ಜಾಯಿಂಟ್ ಬೇಸ್ ಆಂಡ್ರ್ಯೂಸ್‌ಗೆ ಆಗಮಿಸಿದಾಗ ಇಡೀ ಜಗತ್ತು ಬೆರಗಾಗಿದ್ದು ತೀರಾ ಸಹಜ! 1962ರ ನಂತರ ಅಮೆರಿಕದ ಅಧ್ಯಕ್ಷರೊಬ್ಬರು ವಿದೇಶಿ ಗಣ್ಯರನ್ನು ಬರಮಾಡಿಕೊಳ್ಳಲು ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿದ್ದು ಇದೇ ಮೊದಲು.
ಇದು ಒಂದು ಪ್ರಶ್ನೆಯನ್ನು ಹುಟ್ಟುಹಾಕಿದೆ: ಇದು ನಿಜವಾಗಿಯೂ ಚೀನಾದ ಸ್ಥಾನಮಾನಕ್ಕೆ ನೀಡಿದ ಗೌರವವೇ ಅಥವಾ ಅಮೆರಿಕದ ಹೊಸ ಬಗೆಯ ರಾಜಕೀಯವೇ? ಯಾವುದೇ ವಿದೇಶಿ ಗಣ್ಯರು ಬಂದಾಗ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಜವಾಬ್ದಾರಿಯನ್ನು ಉಪಾಧ್ಯಕ್ಷರು, ವಿದೇಶಾಂಗ ಕಾರ್ಯದರ್ಶಿ ಅಥವಾ ಶಿಷ್ಟಾಚಾರದ ಅಧಿಕಾರಿಗೆ ವಹಿಸುವುದು ಅಮೆರಿಕದ ರಾಜತಾಂತ್ರಿಕ ಸಂಪ್ರದಾಯ. ಅಧ್ಯಕ್ಷರು ಅತಿಥಿಗಳನ್ನು ಶ್ವೇತಭವನದ (ವೈಟ್ ಹೌಸ್) ಬರಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: Dr Vijay Darda Column: ಮಾರಿಷಸ್ʼನ ಪ್ರತಿ ಉಸಿರಿನಲ್ಲೂ ಕಾಣಿಸಿದ ಪ್ರೀತಿ
ಆದಾಗ್ಯೂ, ಈ ಹಿಂದೆ ಕೆಲವು ಅಪವಾದಗಳಿದ್ದವು. ಉದಾಹರಣೆಗೆ, 1962ರಲ್ಲಿ ಅಂದಿನ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಅಂದಿನ ಬ್ರಿಟಿಷ್ ಪ್ರಧಾನಿ ಹೆರಾಲ್ಡ್ ಮ್ಯಾಕ್‌ಮಿಲನ್ ಅವರನ್ನು ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್‌ನಲ್ಲಿ ಖುದ್ದಾಗಿ ಸ್ವಾಗತಿಸಿದ್ದರು.
ಅಮೆರಿಕ ಮತ್ತು ಬ್ರಿಟನ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ಸ್ನೇಹವನ್ನು ಜಗತ್ತಿಗೆ ಪ್ರದರ್ಶಿಸಲು ಕೆನಡಿ ಹೀಗೆ ಮಾಡಿದ್ದರು ಎಂದು ನಂಬಲಾಗಿದೆ. ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು 1949ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗ ಅಂದಿನ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು ಎಂಬುದನ್ನು ನನ್ನ ಸ್ನೇಹಿತ ಹಾಗೂ ಸಂಸದ ಶಶಿ ತರೂರ್ ಇತ್ತೀಚೆಗೆ ನೆನಪಿಸಿಕೊಂಡಿದ್ದರು.
ಅದೇ ರೀತಿ, 1961ರಲ್ಲಿ ಪಂಡಿತ್ ನೆಹರು ಅಮೆರಿಕಕ್ಕೆ ಭೇಟಿ ನೀಡಿದಾಗ ಜಾನ್ ಎಫ್.ಕೆನಡಿ ಅವರನ್ನು ಬರಮಾಡಿಕೊಂಡಿದ್ದರು. ಪಂಚಶೀಲ ತತ್ವದ ರೂವಾರಿಯಾಗಿದ್ದ ಪಂಡಿತ್ ನೆಹರು ಅಪಾರ ಗೌರವ ಮತ್ತು ಎತ್ತರದ ಸ್ಥಾನಮಾನವನ್ನು ಹೊಂದಿದ್ದರು. ಹಾಗಿದ್ದರೆ ಪ್ರಶ್ನೆ ಏನೆಂದರೆ: ಕ್ಸಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸಲು ಟ್ರಂಪ್ ಶಿಷ್ಟಾಚಾರವನ್ನು ಮುರಿದಿದ್ದೇಕೆ? ಅಮೆರಿಕ ಈಗ ಚೀನಾದ ಸ್ಥಾನಮಾನವನ್ನು ಒಪ್ಪಿಕೊಳ್ಳುತ್ತಿದೆಯೇ? ನೋಡಿ, ಚೀನಾ ನಿಸ್ಸಂದೇಹವಾಗಿ ತನಗಾಗಿ ಒಂದು ಪ್ರಬಲ ಸ್ಥಾನವನ್ನು ನಿರ್ಮಿಸಿಕೊಂಡಿದೆ ಮತ್ತು ಅದನ್ನು ನೇರವಾಗಿ ಒಪ್ಪಿಕೊಳ್ಳಲಿ ಅಥವಾ ಬಿಡಲಿ, ಅಮೆರಿಕಕ್ಕೂ ಈ ವಾಸ್ತವದ ಅರಿವಿದೆ.
ಆದರೆ, ಕೇವಲ ಚೀನಾದ ಸ್ಥಾನಮಾನವನ್ನು ಕಂಡು ಟ್ರಂಪ್ ಕ್ಸಿಯನ್ನು ಸ್ವಾಗತಿಸಿದರು ಎಂದರ್ಥ ವಲ್ಲ. ಟ್ರಂಪ್ ಮೂಲತಃ ಒಬ್ಬ ಉದ್ಯಮಿ ಮತ್ತು ಅವರು ರಾಜಕೀಯವನ್ನೂ ವ್ಯಾಪಾರದ ದೃಷ್ಟಿಕೋನದಿಂದಲೇ ನೋಡುತ್ತಾರೆ. ಕ್ಸಿ ಜಿನ್‌ಪಿಂಗ್‌ಗೆ ಭವ್ಯವಾದ ಸ್ವಾಗತ ಮತ್ತು ಪ್ರಶಂಸೆ ನೀಡಿದರೆ, ಅವರು ಅಮೆರಿಕದ ಕಡೆಗೆ ಸ್ನೇಹದ ಹಸ್ತ ಚಾಚಬಹುದು ಎಂದು ಬಹುಶಃ ಟ್ರಂಪ್ ಭಾವಿಸಿರಬಹುದು. ಅಮೆರಿಕ ಹೊಂದಿರುವ ಅಧಿಕಾರದ ಸ್ಥಾನದಿಂದ ಇಂತಹ ಮನಸ್ಥಿತಿ ಬೆಳೆಯು ವುದು ಸಹಜ; ಪ್ರತಿಯೊಬ್ಬರೂ ತನ್ನ ಸ್ನೇಹಿತರಾಗಲು ಉತ್ಸುಕರಾಗಿzರೆ ಎಂದೇ ಅದು ಭಾವಿಸುತ್ತದೆ. ಆದರೆ ಚೀನಾ ವಿಭಿನ್ನವಾಗಿದೆ.
ಕ್ಸಿ ಜಿನ್‌ಪಿಂಗ್ ಚೀನಾವನ್ನು ವಿಶ್ವದ ಅತಿ ದೊಡ್ಡ ವ್ಯಾಪಾರ ರಾಷ್ಟ್ರವನ್ನಾಗಿ ಸ್ಥಾಪಿಸಿದ್ದು, ಇದೊಂದು ವ್ಯಾಪಾರ ರಾಜತಾಂತ್ರಿಕತೆಯ ಆಟವಾಗಿ ಮಾರ್ಪಟ್ಟಿದೆ. ಆದ್ದರಿಂದ, ಕಾರ್ಯತಂತ್ರದ ನಡೆಗಳಲ್ಲಿ ಯಾರು ಇನ್ನೊಬ್ಬರನ್ನು ಮೀರಿಸುತ್ತಾರೋ ಅವರೇ ಅಂತಿಮವಾಗಿ ಲಾಭ ಗಳಿಸುತ್ತಾರೆ. ಕ್ಸಿ ಜಿನ್‌ಪಿಂಗ್ ಅವರ ಅಮೆರಿಕ ಭೇಟಿಯ ವೀಡಿಯೊಗಳನ್ನು ವೀಕ್ಷಿಸಿ ಇಬ್ಬರೂ ನಾಯಕರ ದೇಹಭಾಷೆಯನ್ನು (body language) ಗಮನಿಸಿದರೆ, ಟ್ರಂಪ್ ಉತ್ಸಾಹಭರಿತರಾಗಿ ಕಂಡರೆ, ಕ್ಸಿ ಜಿನ್‌ಪಿಂಗ್ ಅತ್ಯಂತ ಗಂಭೀರ ಹಾಗೂ ಶಾಂತ ನಡವಳಿಕೆಯನ್ನು ಕಾಯ್ದುಕೊಂಡಿದ್ದರು.
ವಾಸ್ತವವಾಗಿ, ತನ್ನ ಪ್ರಗತಿಯನ್ನು ಕುಂಠಿತಗೊಳಿಸಲು ಅಮೆರಿಕ ಸಾಧ್ಯವಿರುವ ಎಲ್ಲ ಪ್ರಯತ್ನ ಗಳನ್ನೂ ಮಾಡುತ್ತಿದೆ ಎಂದು ಚೀನಾ ನಂಬಿದೆ. ಟ್ರಂಪ್ ಬಲೆ ಹೆಣೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಕ್ಸಿಗೆ ಚೆನ್ನಾಗಿ ತಿಳಿದಿದೆ. ಕ್ಸಿಯನ್ನು ಮೆಚ್ಚಿಸಲು ಟ್ರಂಪ್ ತೈವಾನ್‌ಗೆ ನೀಡಬೇಕಿದ್ದ 14 ಬಿಲಿಯನ್ ಡಾಲರ್ ಮೌಲ್ಯದ ಶಸಾಸ ಪೂರೈಕೆಯ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿ ದಿದ್ದಾರೆ; ಆದರೆ ಅಮೆರಿಕ ತೈವಾನ್‌ಗೆ ಯಾವುದೇ ಸಹಾಯ ಮಾಡುವುದಿಲ್ಲ ಎಂಬ ಸ್ಪಷ್ಟ ಭರವಸೆಯನ್ನು ಚೀನಾ ಬಯಸುತ್ತಿದೆ!
ತೈವಾನ್ ಚೀನಾದ ಸೂಕ್ಷ್ಮ ನರವಾಗಿದೆ ಮತ್ತು ಅಮೆರಿಕ ಆ ನರದ ಮೇಲೆ ತನ್ನ ಹಿಡಿತವನ್ನು ಬಿಗಿಯಾಗಿಡಲು ಬಯಸುತ್ತದೆ. ಚೀನಾ ಕೂಡ ಪ್ರತಿಯೊಂದು ಅವಕಾಶದಲ್ಲೂ ತನ್ನ ಆಕ್ರಮಣ ಕಾರಿ ನಿಲುವನ್ನು ಪ್ರದರ್ಶಿಸಲು ಹಿಂಜರಿಯುತ್ತಿಲ್ಲ. ಅಮೆರಿಕದ ವ್ಯಾಪಾರ ಸಮರಕ್ಕೆ ಅದು ಅಷ್ಟೇ ದೃಢವಾಗಿ ಪ್ರತ್ಯುತ್ತರ ನೀಡಿದೆ.
ವ್ಯಾಪಾರ ಸಮರದ ಮೇಲಿನ ನವೆಂಬರ್ ಗಡುವನ್ನು ಅಮೆರಿಕ ಕೇವಲ ಎರಡು ತಿಂಗಳ ಕಾಲ ವಿಸ್ತರಿಸಿತು. ಆದರೆ ಚೀನಾ ಇದನ್ನು ಕನಿಷ್ಠ ಒಂದು ವರ್ಷದವರೆಗೆ ವಿಸ್ತರಿಸಬೇಕೆಂದು ಬಯಸಿತ್ತು. ಟ್ರಂಪ್ ಅವರ ಅಧಿಕಾರಾವಧಿ ಹೇಗಾದರೂ ಮುಗಿದುಹೋಗಲಿ, ಆ ನಂತರ ಬರುವ ಪರಿಸ್ಥಿತಿ ಯನ್ನು ಆಗಲೇ ಎದುರಿಸೋಣ ಎಂಬುದು ಚೀನಾದ ಲೆಕ್ಕಾಚಾರ!
ಇನ್ನೊಂದೆಡೆ, ಅಪರೂಪದ ಭೂಖನಿಜಗಳ (rare earth minerals) ವಿಚಾರದಲ್ಲಿ ಚೀನಾ ರಿಯಾಯಿತಿ ನೀಡಬೇಕೆಂದು ಅಮೆರಿಕ ಬಯಸುತ್ತಿದೆ, ಆದರೆ ಚೀನಾ ಕೂಡ ತನ್ನ ಮುಷ್ಟಿಯನ್ನು ಸಡಿಲಿಸುತ್ತಿಲ್ಲ. ಯಾವುದೇ ಕಾರಣಕ್ಕೂ ಅಮೆರಿಕದ ಮುಂದೆ ತಲೆಬಾಗಲು ಅದು ಸಿದ್ಧವಿಲ್ಲ. ಹಲವು ಆಂತರಿಕ ಸವಾಲುಗಳ ನಡುವೆಯೂ ತಾನು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿರುವು ದನ್ನು ಚೀನಾ ಅರಿತಿದೆ; ಅಮೆರಿಕವನ್ನು ಎದುರಿಸಿ ನಿಲ್ಲುವುದರಿಂದ ಮಾತ್ರ ಜಾಗತಿಕ ಪ್ರಾಬಲ್ಯ ಸಾಧಿಸಲು ಸಾಧ್ಯ ಎಂಬುದು ಅದಕ್ಕೆ ತಿಳಿದಿದೆ. ಹೀಗಾಗಿ, ಚೀನಾ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ.
ಜಾಗತಿಕ ಮಹಾಶಕ್ತಿಗಳಾದ ಅಮೆರಿಕ ಮತ್ತು ಚೀನಾ, ಕೃತಕ ಬುದ್ಧಿಮತ್ತೆ (ಎಐ) ವಿಚಾರಕ್ಕೆ ಬಂದಾಗ ಒಂದೇ ನಿಲುವಿನಲ್ಲಿ ಇಲ್ಲದಿರುವುದನ್ನು ನೀವು ಗಮನಿಸಿದ್ದೀರಾ? ಕೃತಕ ಬುದ್ಧಿಮತ್ತೆಯು ಕಾಲಕ್ರಮೇಣ ಮಾನವಕುಲವನ್ನೇ ಮೀರಿಸುವುದೇ? ಎಂಬ ಆತಂಕಗಳು ಪ್ರಸ್ತುತ ಹುಟ್ಟಿಕೊಳ್ಳು ತ್ತಿವೆ. ಈ ವಿಷಯದ ಬಗ್ಗೆ ಗಂಭೀರ ಗಮನ ಹರಿಸುವ ಅಗತ್ಯವಿದೆ ಎಂದು ತಜ್ಞರು ವಾದಿಸುತ್ತಾರೆ.
ಕೃತಕ ಬುದ್ಧಿಮತ್ತೆಯು ಯಾವಾಗಲೂ ಮಾನವ ನಿಯಂತ್ರಣದ ಇರಬೇಕು ಎಂದು ಕ್ಸಿ ಜಿನ್‌ಪಿಂಗ್ ಸತತ ವಾಗಿ ಪ್ರತಿಪಾದಿಸುತ್ತಿದ್ದರೆ, ಎಐ ಮಾನವಕುಲವನ್ನು ನಾಶಮಾಡುತ್ತದೆ ಎಂಬ ಭಯವನ್ನು ಟ್ರಂಪ್ ನೇರವಾಗಿ ತಳ್ಳಿಹಾಕಿದ್ದಾರೆ!
ನನ್ನ ಪ್ರಕಾರ, ಕೇವಲ ಈ ಮಹಾಶಕ್ತಿಗಳಷ್ಟೇ ಅಲ್ಲ, ಮಾನವಕುಲದ ಉಳಿವಿಗೆ ಯಾವುದೇ ಬೆದರಿಕೆ ಎದುರಾಗದಂತೆ ನೋಡಿಕೊಳ್ಳಲು ಇಡೀ ಜಗತ್ತೇ ಈ ನಿರ್ಣಾಯಕ ವಿಷಯದಲ್ಲಿ ಒಗ್ಗಟ್ಟಾಗಬೇಕಿದೆ. ಟರ್ಕಿಯ ಅಧ್ಯಕ್ಷ ಎರ್ಡೋಗನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಕಾಶ್ಮೀರ ಕಾರ್ಡ್ ಪ್ರಯೋಗಿಸಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವ್ಯಕ್ತಿ ವಿಚಿತ್ರ. 2024ರಲ್ಲಿ ಬ್ರಿಕ್ಸ್ (BRICS) ಕೂಟಕ್ಕೆ ಸೇರಲು ಪ್ರಯತ್ನಿಸುತ್ತಿದ್ದಾಗ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೌನ ವಹಿಸಿದ್ದರು. ಆದರೆ ಇಸ್ಲಾಮಿಕ್ ಜಗತ್ತಿನ ನಾಯಕನಾಗುವ ಅವರ ಹಂಬಲದಿಂದಾಗಿ ಅವರಿಗೆ ಕಾಶ್ಮೀರದ ಬಗ್ಗೆ ಚುರುಕು ಮುಟ್ಟುತ್ತದೆ.
ಭಾರತೀಯ ಮುಸ್ಲಿಮರ ಜನಸಂಖ್ಯೆಯು ಇಡೀ ಟರ್ಕಿಯ ಜನಸಂಖ್ಯೆಯ ಎರಡರಷ್ಟಿದೆ ಎಂಬುದನ್ನು ಎರ್ಡೋಗನ್ ಏಕೆ ಮರೆಯುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಕಾಶ್ಮೀರದ ಬಗ್ಗೆ ಮಾತನಾಡುವ ಧೈರ್ಯವನ್ನೇ ಮಾಡಬೇಡಿ!