ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ

ಕರ್ನಾಟಕಕ್ಕೆ ಹೋಲಿಸಿದರೆ, ದೇಶದ ಇತರೆ ಭಾಗದಲ್ಲಿ ಇಲ್ಲಿಗಿಂತ ಹೆಚ್ಚು ಪ್ರಮಾಣದಲ್ಲಿ ದಾಳಿಗಳಾಗು ತ್ತಿವೆ. ಆದರೆ ಅಲ್ಲೆಲ್ಲಿಯೂ ಸ್ಥಗಿತವಾಗದ ಸಫಾರಿ, ಬಂಡೀಪುರ ಹಾಗೂ ನಾಗರಹೊಳೆ ಯಲ್ಲಿ ಮಾತ್ರ ಏಕಾಗಿದೆ? ಸಂಘರ್ಷ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕಂಡುಕೊಳ್ಳ ಬೇಕಿದೆಯೇ ಹೊರತು, ಸಫಾರಿ ಸ್ಥಗಿತಗೊಳಿಸುವುದು ಪರಿಹಾರವಲ್ಲ.

ವೈಲ್ಡ್‌ʼಲೈಫ್ ಟೂರಿಸಂ ವನ್ಯಜೀವಿ ಸಂರಕ್ಷಣೆಗೆ ಪೂರಕ: ತಜ್ಞರ ಮಾತು

ಹುಲಿ ದಾಳಿಯ ನೆಪದಲ್ಲಿ ಸಫಾರಿ ನಿರ್ಬಂಧಿಸಿರುವ ಅರಣ್ಯ ಇಲಾಖೆಯ ತೀರ್ಮಾನಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಫಾರಿಯನ್ನು ಬಳಸಿಕೊಂಡೇ ಅರಣ್ಯವನ್ನು ಹೆಚ್ಚಿಸಬಹುದು ಎನ್ನುವ ಆಯಾಮದಲ್ಲಿ ನಮ್ಮ ಸರಕಾರಗಳು ಆಲೋಚನೆ ಮಾಡಬೇಕಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ವನ್ಯಜೀವಿ ತಜ್ಞರ ಪ್ರಕಾರ, ಮಾನವ-ಹುಲಿ ಸಂಘರ್ಷಕ್ಕೆ ಸಫಾರಿ ಸ್ಥಗಿತವೇ ಪರಿಹಾರವಲ್ಲ. ಈ ಸಂಘರ್ಷ ಕೇವಲ ಬಂಡೀಪುರ ಹಾಗೂ ನಾಗರಹೊಳೆಗೆ ಸೀಮಿತವಾಗಿಲ್ಲ. ಥಡೋಬ, ಕಾರ್ಬೆಟ್ ಸೇರಿದಂತೆ ಹುಲಿಗಳ ಸಂಖ್ಯೆ ಹೆಚ್ಚಿರುವ ಕಡೆ ಈ ರೀತಿಯ ದಾಳಿಗಳು ನಡೆದಿವೆ.

ಕರ್ನಾಟಕಕ್ಕೆ ಹೋಲಿಸಿದರೆ, ದೇಶದ ಇತರೆ ಭಾಗದಲ್ಲಿ ಇಲ್ಲಿಗಿಂತ ಹೆಚ್ಚು ಪ್ರಮಾಣದಲ್ಲಿ ದಾಳಿಗಳಾಗುತ್ತಿವೆ. ಆದರೆ ಅಲ್ಲೆಲ್ಲಿಯೂ ಸ್ಥಗಿತವಾಗದ ಸಫಾರಿ, ಬಂಡೀಪುರ ಹಾಗೂ ನಾಗರಹೊಳೆ ಯಲ್ಲಿ ಮಾತ್ರ ಏಕಾಗಿದೆ? ಸಂಘರ್ಷ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿದೆಯೇ ಹೊರತು, ಸಫಾರಿ ಸ್ಥಗಿತಗೊಳಿಸುವುದು ಪರಿಹಾರವಲ್ಲ.

ಇದನ್ನೂ ಓದಿ: Safari restrictions: ಸಫಾರಿ ನಿರ್ಬಂಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ !

ವಾಸ್ತವವನ್ನು ಅರಿಯದೇ ಕೇವಲ ಅಧಿಕಾರಿಗಳ ಮಾತು ಕೇಳಿ ಅರಣ್ಯ ಸಚಿವರು ತೆಗೆದುಕೊಳ್ಳುವ ತೀರ್ಮಾನಗಳಿಂದ ಅಭಯಾರಣ್ಯ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ ಬೀಳುತ್ತದೆ ಎನ್ನುವುದು ವಾಸ್ತವ.

ಹಾಗೇ ನೋಡಿದರೆ, ಅರಣ್ಯ ಸಂರಕ್ಷಣೆ, ಹುಲಿ-ಆನೆಗಳನ್ನು ಉಳಿಸಿ ‘ಬೆಳೆಸುವ’ ಬಗ್ಗೆ ನಗರದಲ್ಲಿ ಕುಳಿತು, ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳಿಗೂ, ಅರಣ್ಯದ ಆಚೀಚೆ ರೈತರು, ಕಾಡಂಚಿನಲ್ಲಿ ಜೀವನ ಸಾಗಿಸುತ್ತಿರುವ ಜನರ ಭಾವನೆಗಳಿಗೂ ಭಾರಿ ವ್ಯತ್ಯಾಸವಿದೆ.

ಅರಣ್ಯದಂಚಿನಲ್ಲಿರುವ ಸಮಸ್ಯೆಗಳನ್ನು ಮೀರಿ, ಅರಣ್ಯ, ಪ್ರಾಣಿಗಳ ಮೇಲೆ ಸ್ಥಳೀಯರಿಗೆ ಕಾಳಜಿ ಮೂಡಬೇಕೆಂದರೆ ಅಲ್ಲಿ ಪ್ರವಾಸೋದ್ಯಮ ಹೆಚ್ಚಾಗಿ, ಅಲ್ಲಿರುವವರಿಗೆ ಉದ್ಯೋಗ ಹಾಗೂ ಆರ್ಥಿಕ ಭದ್ರತೆ ಒದಗಿಸಬೇಕು. ಆಗ ಮಾತ್ರ ವನ್ಯಜೀವಿ ಸಂರಕ್ಷಣೆ ಎನ್ನುವುದು ಲಾಭದಾಯಕ ಉದ್ಯಮ ವಾಗುತ್ತದೆ.

ವನ್ಯಜೀವಿ ಸಂರಕ್ಷಣೆಯಿಂದ ಲಾಭವಾಗುವ ಕ್ಷೇತ್ರವಿದ್ದರೆ ಅದು ಪ್ರವಾಸೋದ್ಯಮ ಮಾತ್ರ. ಆದ್ದರಿಂದ ಪ್ರವಾಸೋದ್ಯಮವನ್ನೇ ಬಳಸಿಕೊಂಡು ವನ್ಯಜೀವಿ ಸಂರಕ್ಷಣೆಯನ್ನು ವೈಜ್ಞಾನಿಕ ವಾಗಿ ಮಾಡಬೇಕಿದೆ ಎನ್ನುವುದು ವನ್ಯಜೀವಿ ಸಂರಕ್ಷಕರ ಅಭಿಪ್ರಾಯವಾಗಿದೆ.

ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯಬೇಕಿದೆ: ಹಾಗೇ ನೋಡಿದರೆ, ಆರ್ಥಿಕ ದೃಷ್ಟಿಯಿಂದ ಹುಲಿಗಳು ಯಾರಿಗೂ ಬೇಡವಾಗಿದೆ. ನಗರದಲ್ಲಿ ಕೂತಿರುವ ಆಫ್ರಿಕಾದಂತಹ ದೇಶಗಳಲ್ಲಿ ಈ ಮಾದರಿಯ ಕ್ರಮ ಯಶಸ್ವಿಯಾಗಿದೆ. ಭಾರತದಲ್ಲಿಯೂ ಇದು ಸಾಧ್ಯವೇ ಎನ್ನುವುದನ್ನು ನೋಡ ಬೇಕಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಕಾಡು ಹಾಗೂ ಕಾಡು ಪ್ರಾಣಿಗಳ ಸಂರಕ್ಷಣೆ ಕೇವಲ ಕಾನೂನು ಅಥವಾ ಕಾವಲು ವ್ಯವಸ್ಥೆಯಿಂದ ಸಾಧ್ಯವಿಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಯೋಜನೆಗಳನ್ನು ಕೈಗೆತ್ತಿಕೊಂಡಾಗ ಮಾತ್ರ ಮಾನವ -ಕಾಡುಪ್ರಾಣಿಗಳ ಸಂಘರ್ಷವನ್ನು ನಿಯಂತ್ರಿಸದವರು ಹುಲಿಯನ್ನು ಸಂರಕ್ಷಿಸಬೇಕು ಎಂದು ಹೇಳಬಹುದು. ಆದರೆ ಕಾಡಂಚಿನಲ್ಲಿ ರುವ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳು ಬೇಕಾಗಿಲ್ಲ. ಆದರೆ ರೈತರಿಗೆ ಕೃಷಿಗಿಂತ ವನ್ಯಜೀವಿ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಲಾಭವಾಗುತ್ತದೆ ಎನ್ನುವುದಾದರೆ, ಖಂಡಿತ

ವಾಗಿಯೂ ವನ್ಯಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದ್ದರಿಂದ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಅಭಯಾರಣ್ಯಗಳ ಪಕ್ಕದ ಜಮೀನುಗಳಲ್ಲಿ ವೈಲ್ಡ್ ಲೈಫ್ ಟೂರಿಸಂಗೆ ಪೂರಕವಾಗಿ ಖಾಸಗಿ ಅರಣ್ಯಗಳನ್ನು ರೈತರ ಸಹಕಾರದೊಂದಿಗೆ ಬೆಳೆಸಿ, ಇದರ ಲಾಭವನ್ನು ರೈತರಿಗೆ ಸಿಗುವಂತೆ ಮಾಡಬೇಕಿದೆ. ‌ಬಹುದು. ಆದರೆ ಸ್ಥಳೀಯರು ಅವರ ಜಮೀನುಗಳ ಮೇಲೆ ದಾಳಿ, ದನ-ಕರುಗಳ ಮೇಲೆ ದಾಳಿ ಮಾಡಿ ದಾಗ ಸಹಜವಾಗಿಯೇ ವಿರೋಧ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಈ ವಿರೋಧ ತಗ್ಗಿಸುವ ನಿಟ್ಟಿನಲ್ಲಿ ಹಾಗೂ ಸ್ಥಳೀಯರಿಗೆ ಆರ್ಥಿಕವಾಗಿ ಸಹಾಯವಾಗುವ ರೀತಿಯ ಕ್ರಮ ಗಳನ್ನು(ವ್ಯವಸ್ಥೆಯನ್ನು) ಸರಕಾರ ಗಳು ಆಲೋಚಿಸಬೇಕು.

ಇದಕ್ಕಾಗಿ ವನ್ಯಜೀವಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಜತೆಜತೆಗೆ ಸ್ಥಳೀಯರಿಗೂ ಆರ್ಥಿಕವಾಗಿ ಲಾಭವಾಗುವಂತೆ ಮಾಡಿದರೆ ಆಗ ಸಹಜವಾಗಿಯೇ, ಜನರು ಅರಣ್ಯ ಹಾಗೂ ಕಾಡು ಪ್ರಾಣಿಗಳ ವಿಷಯದಲ್ಲಿ ವಿಶೇಷ ಆಸಕ್ತಿ ತೋರಿಸುತ್ತಾರೆ.

ವನ್ಯಜೀವಿ ಟೂರಿಸಂ ಆದ್ಯತೆಯಾಗಲಿ

ಕರ್ನಾಟಕದಲ್ಲಿ ದೇವಾಲಯ ಟೂರಿಸಂ, ಆಧ್ಯಾತ್ಮ ಟೂರಿಸಂ ಸೇರಿದಂತೆ ವಿವಿಧ ರೀತಿಯ ಸರ್ಕೀಟ್‌ಗಳ ಮೂಲಕ ಪ್ರವಾಸೋದ್ಯಮ ವೃದ್ಧಿಗೆ ಕ್ರಮ ವಹಿಸಲಾಗುತ್ತದೆ. ಆದರೆ ವೈಲ್ಡ್‌ಲೈಫ್ ಟೂರಿಸಂ ವಿಷಯದಲ್ಲಿ ಹೆಚ್ಚು ಆಸಕ್ತಿ ನೀಡುತ್ತಿಲ್ಲ. ಮುಂದಿನ ದಿನದಲ್ಲಿ ಇತರೆ ಪ್ರವಾಸೋ‌ ದ್ಯಮಕ್ಕೆ ಬಜೆಟ್‌ನಲ್ಲಿ ಹಣ ವ್ಯಯಿಸುವಂತೆ ವನ್ಯಜೀವಿ ಟೂರಿಸಂಗೆ ಒತ್ತು ನೀಡುವುದಕ್ಕೂ ಹೆಚ್ಚುವರಿ ಅನುದಾನಗಳನ್ನು ಮೀಸಲಿಡಲಿ. ಅರಣ್ಯ ಇಲಾಖೆಯವರು ಅವೈಜ್ಞಾನಿಕ ಯೋಜನೆ ಗಳನ್ನು ಕೈಗೆತ್ತಿ ಕೊಳ್ಳುವ ಬದಲು ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ದೊರೆಯುವಂತೆ, ಹೆಚ್ಚುವರಿ ಲಾಭವಾಗುವಂತಹ ಯೋಜನೆಗಳನ್ನು ಹಾಕಿಕೊಂಡರೆ ಕಾಡು ಪ್ರಾಣಿಗಳಿಗೆ ಹಾಗೂ ಜನರಿಗೆ ಅನುಕೂಲವಾಗಲಿದೆ ಎನ್ನುವ ಸಲಹೆಗಳನ್ನು ತಜ್ಞರು ನೀಡಿದ್ದಾರೆ.

ರಂಜಿತ್​ ಎಚ್​ ಅಶ್ವತ್ಥ್

View all posts by this author