Roopa Gururaj Column: ಲಲಿತಾ ಸಹಸ್ರನಾಮದ ಮಹತ್ವ
ಲಲಿತಾ ದೇವಿಯನ್ನು ಲಲಿತಾ ತ್ರಿಪುರ ಸುಂದರಿ ಎಂದು ಸಹ ಹೇಳುತ್ತಾರೆ. ತ್ರಿಪುರ ಸುಂದರಿ ಎಂದರೆ ಮೂರು ಲೋಕಗಳಲ್ಲಿ ಅತ್ಯಂತ ಸುಂದರವಾದವಳು ಎಂದರ್ಥ. ತ್ರಿಪುರ ಅಂದರೆ ಮೂರು ಕಾಲ ಗಳಿಗೆ, ಮೂರು ಸ್ಥಿತಿಗಳಿಗೆ ಮತ್ತು ಮೂರು ಶಕ್ತಿಗಳಿಗೆ ಪ್ರತೀಕವಾದದ್ದು ಎಂದು ಬ್ರಹ್ಮಾಂಡ ಪುರಾಣ ಹೇಳುತ್ತದೆ.

-

ಒಂದೊಳ್ಳೆ ಮಾತು
rgururaj628@gmail.com
ಶ್ರೀ ಲಲಿತಾ ಸಹಸ್ರನಾಮದ ಪಠಣವನ್ನ ನಾವು ಕೇಳಿರುತ್ತೇವೆ. ಹಲವಾರು ಹಿರಿಯರು ದಿನವೂ ಕೂಡ ಭಜನಾ ಮಂಡಳಿಗಳಲ್ಲಿ ಕುಳಿತು ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಇವುಗಳನ್ನು ಹೇಳಿಕೊಳ್ಳುವುದನ್ನೂ ನೋಡಿದ್ದೇವೆ. ಇವೆಲ್ಲ ವಯಸ್ಸಾದ ಮೇಲೆ ಮಾಡು ವಂತಹ ಸ್ತೋತ್ರಗಳು ಎಂದು ಇಂದಿನ ಜನರಿಗೆ ಒಂದು ರೀತಿಯ ಧೋರಣೆ ಬಂದುಬಿಟ್ಟಿದೆ.
ಆದರೆ ಈ ಮಂತ್ರಗಳ ಬಗ್ಗೆ ನಾವು ತಿಳಿದುಕೊಳ್ಳಬೇಕಾದದ್ದು ಬಹಳಷ್ಟು ಇದೆ. ಇದು ಎಲ್ಲಾ ವಯಸ್ಸಿನವರು ಕಲಿತು ಮಾಡಬಹುದಾದ ಪಾರಾಯಣ. ಇದಕ್ಕೆ ಯಾವುದೇ ವಯೋಮಿತಿ ಇಲ್ಲ. ಶ್ರೀಲಲಿತಾದೇವಿ ಸ್ತೋತ್ರವನ್ನು ಪಾರಾಯಣ ಮಾಡಿದರೆ ಸಾಕು ಇಡೀ ಕುಟುಂಬಕ್ಕೆ ದೀರ್ಘಾಯಸ್ಸು ಪ್ರಾಪ್ತಿಯಾಗುವುದರ ಜೊತೆ ನಿಮ್ಮ ಎಲ್ಲ ಕಷ್ಟಗಳು ಪರಿಹಾರವಾಗುತ್ತಾ ಹೋಗುತ್ತದೆ ಎಂದು ಹೇಳುತ್ತವೆ ಶಾಸ್ತ್ರಗಳು.
ಈ ಸೃಷ್ಟಿಗೆ ಮೂಲ ದೇವರು ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಆ ದೇವರನ್ನು ಸಹ ಸೃಷ್ಟಿಸಿ ರುವುದು ಶ್ರೀ ಲಲಿತಾದೇವಿ ಎಂದು ಬ್ರಹ್ಮಾಂಡ ಪುರಾಣ ಹೇಳುತ್ತದೆ. ಆದ್ದರಿಂದಲೇ ಈ ಸೃಷ್ಟಿಗೆ ಮಾತೃ ಸ್ವರೂಪವಾಗಿ ಸಹ ಲಲಿತಾ ದೇವಿಯನ್ನು ಭಾವಿಸುತ್ತೇವೆ. ಆ ದೇವಿಯ ಮಹಾತ್ಮೆಯನ್ನು ತಿಳಿದುಕೊಳ್ಳಲು ಪ್ರಸನ್ನ ಮಾಡಿಕೊಳ್ಳಲು ಲಲಿತ ಸಹಸ್ರನಾಮ ಒಂದು ದೊಡ್ಡ ಸಾಧನೆಯ ಹಾಗೆ ಉಪಯೋಗವಾಗುತ್ತದೆ.
ಲಲಿತಾ ದೇವಿಯನ್ನು ಲಲಿತಾ ತ್ರಿಪುರ ಸುಂದರಿ ಎಂದು ಸಹ ಹೇಳುತ್ತಾರೆ. ತ್ರಿಪುರ ಸುಂದರಿ ಎಂದರೆ ಮೂರು ಲೋಕಗಳಲ್ಲಿ ಅತ್ಯಂತ ಸುಂದರವಾದವಳು ಎಂದರ್ಥ. ತ್ರಿಪುರ ಅಂದರೆ ಮೂರು ಕಾಲ ಗಳಿಗೆ, ಮೂರು ಸ್ಥಿತಿಗಳಿಗೆ ಮತ್ತು ಮೂರು ಶಕ್ತಿಗಳಿಗೆ ಪ್ರತೀಕವಾದದ್ದು ಎಂದು ಬ್ರಹ್ಮಾಂಡ ಪುರಾಣ ಹೇಳುತ್ತದೆ.
ಲಲಿತಾ ಸಹಸ್ರನಾಮವನ್ನು ಪಠನ ಮಾಡಲು ಧ್ಯಾನ, ಅಂಗನ್ಯಾಸ, ಕರನ್ಯಾಸ, ಪಂಚ ಪೂಜಾ ಉತ್ತರ ಭಾಗವನ್ನು ಸಹ ಪಠಿಸಬೇಕು ಎನ್ನುವ ನಿಯಮವನ್ನು ಹಿರಿಯರು ಹೇಳುತ್ತಾರೆ. ಇನ್ನು ಇಷ್ಟೆಲ್ಲಾ ಪಾರಾಯಣ ಮಾಡಲು ಸಮಯವಿಲ್ಲದವರು ಕನಿಷ್ಠ ಪಕ್ಷ ಲಲಿತಾಸಹಸ್ರ ನಾಮವನ್ನಾ ದರೂ ಪಾರಾಯಣ ಮಾಡಿದರೆ ಒಳ್ಳೆಯದು.
ಲಲಿತಾ ದೇವಿಯನ್ನು ಪ್ರಸನ್ನಗೊಳಿಸಲು ಸಾಕ್ಷಾತ್ ದೇವಾನುದೇವತೆಗಳೇ ಈ ಸಹಸ್ರನಾಮ ವನ್ನು ಪಠಿಸುತ್ತಿದ್ದರಂತೆ. ಶ್ರೀ ಲಲಿತಾ ಸಹಸ್ರನಾಮವನ್ನು ಹಯಗ್ರೀವರು ಅಗಸ್ತ್ಯ ಮುನಿಗೆ ಬೋಧಿಸಿದ್ದಾ ರಂತೆ . ಇದನ್ನು ವ್ಯಾಸರು ಬ್ರಹ್ಮಾಂಡ ಪುರಾಣದ ಉತ್ತರಖಂಡದಲ್ಲಿ ರಚಿಸಿದ್ದಾರೆ.
ಲಲಿತಾಸಹಸ್ರನಾಮದಲ್ಲಿ ದೇವಿಯ ಬೀಜಾಕ್ಷರಗಳು ಸೃಷ್ಟಿ ರಹಸ್ಯಗಳು, ಅಷ್ಟ ಕಾರ್ಯಗಳು, ದಶ ಮಹಾವಿದ್ಯೆಗಳಿಗೆ ಸಂಬಂಧಿಸಿದ ಜ್ಞಾನ ಅಡಕವಾಗಿದೆ. ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಮತ್ತೊಂದಿಲ್ಲ. ಇದನ್ನು ಪಠಿಸುವುದರಿಂದ ಅಪಮೃತ್ಯು, ಕಾಲ ಮೃತ್ಯು ನಿವಾರಣೆಯಾಗಿ ದೀರ್ಘಾಯುಷ್ಯವನ್ನು ಹೊಂದಬಹುದು ಎಂದು ಕೂಡ ಜ್ಞಾನಿಗಳು ಹೇಳುತ್ತಾರೆ.
ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯವೂ ಪಠಿಸಬೇಕು. ಒಂದು ವೇಳೆ ನಿತ್ಯ ಪಠಿಸಲು ಸಾಧ್ಯವಾಗದೆ ಇದ್ದಲ್ಲಿ, ಜನ್ಮ ನಕ್ಷತ್ರಗಳಲ್ಲಿ, ನವಮಿಯ ತಿಥಿಗಳಲ್ಲಿ, ಶುಕ್ಲ ಪಕ್ಷದ ಚತುರ್ದಶಿಯ ದಿನ, ಶುಕ್ರವಾರ ದ ದಿನ, ಹುಣ್ಣಿಮೆಯ ದಿನಗಳಲ್ಲಿ ವಿಶೇಷವಾಗಿ ಪಾರಾಯಣ ಮಾಡಬಹುದು. ಲಲಿತಾ ಸಹಸ್ರ ನಾಮವನ್ನು ಸತತವಾಗಿ ಆರು ತಿಂಗಳುಗಳ ಕಾಲ ಭಕ್ತಿ-ಶ್ರದ್ಧೆಯಿಂದ ಪಠಿಸುತ್ತಾರೋ, ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿಯು ಸ್ಥಿರವಾಗಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ.
ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯ ದಿನಕ್ಕೆ ಮೂರು ಬಾರಿಯಂತೆ ಒಂದು ತಿಂಗಳ ಕಾಲ ಯಾರು ಪಠಿಸುವರೋ, ಅಂತವರ ನಾಲಿಗೆಯಲ್ಲಿ ಸರಸ್ವತಿಯು ಯಾವಾಗಲೂ ನೆಲೆಸಿರುತ್ತಾಳೆ ಎಂದು ಕೂಡ ಹೇಳುತ್ತಾರೆ. ಇದರ ಮಹತ್ವವನ್ನು ತಿಳಿದಾಗ ನಾವು ಇವೆಲ್ಲ ವಾಹನ ಪ್ರಸ್ತಾಶ್ರಮಕ್ಕೆ , ಎಂದು ತಳ್ಳಿ ಬಿಡುವ ಮೊದಲು ನಮ್ಮ ಈ ಸನಾತನ ಧರ್ಮದ ಈ ಜ್ಞಾನದ ವರವನ್ನು ಸೂಕ್ತವಾಗಿ ಬಳಸಿ ಕೊಂಡು ಬದುಕನ್ನು ಮತ್ತಷ್ಟು ಹಸನಾಗಿಸಿಕೊಳ್ಳಬಹುದು.
ಎಲ್ಲಕ್ಕಿಂತ ಹೆಚ್ಚಾಗಿ ಈ ಬೀಜ ಮಂತ್ರಗಳ ಪಠಣದಿಂದ ಮನೆಯಲ್ಲಿ ನೆಲೆಸುವ ದೈವಿಕ ಕಂಪನೆಗಳು ಮನೆಯವರೆಲ್ಲ ನಕಾರಾತ್ಮಕ ವಿಚಾರಗಳಿಂದ ಕಾಪಾಡುತ್ತದೆ. ಪಠಿಸುವವರ ಮನಸ್ಸಿಗೆ ನೆಮ್ಮದಿ, ಶಾಂತಿ, ಸಮಾಧಾನ ಎಲ್ಲ ನೀಡುತ್ತಾ ಬದುಕಿನಲ್ಲಿ ಏಳ್ಗೆ ನೀಡುವ ಇಂತಹ ಸದಾಚರಣೆಗಳನ್ನು ಇನ್ನಾದರೂ ನಾವೆಲ್ಲರೂ ಕೈಲಾದಷ್ಟು ಮಾಡಬೇಕು. ನಮ್ಮ ಮಕ್ಕಳನ್ನು ಇದರಲ್ಲಿ ತೊಡಗಿಸಿ ಕೊಳ್ಳಬೇಕು.