ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಸೋಲೋ ಟೇಬಲ್‌ ಥಿಯರಿ

ಜೀವನ ಎಂಬುದು ಒಂದು ದೊಡ್ಡ ಭೋಜನದ ಕೂಟವಿದ್ದಂತೆ. ಇಲ್ಲಿ ಸಾವಿರಾರು ಮೇಜು ಗಳಿವೆ, ಹತ್ತಾರು ಸಾವಿರ ಜನರಿದ್ದಾರೆ. ಆದರೆ, ಹೆಚ್ಚಿನವರು ತಮ್ಮ ಮೇಜಿನ ಸುತ್ತ ಜನರಿಲ್ಲ ದಿದ್ದರೆ ಗಾಬರಿಯಾಗುತ್ತಾರೆ. ‘ಸೋಲೋ ಟೇಬಲ್ ಥಿಯರಿ’ ಈ ಗಾಬರಿಯನ್ನು ಹೋಗಲಾ ಡಿಸಿ, ನಿಮ್ಮ ಒಂಟಿತನವನ್ನೇ ನಿಮ್ಮ ದೊಡ್ಡ ಶಕ್ತಿಯನ್ನಾಗಿ ಪರಿವರ್ತಿಸುವ ಕಲೆಯನ್ನಾ ಗಿಸುತ್ತದೆ

ಸಂಪಾದಕರ ಸದ್ಯಶೋಧನೆ

ಜೀವನ ಎಂಬುದು ಒಂದು ದೊಡ್ಡ ಭೋಜನದ ಕೂಟವಿದ್ದಂತೆ. ಇಲ್ಲಿ ಸಾವಿರಾರು ಮೇಜು ಗಳಿವೆ, ಹತ್ತಾರು ಸಾವಿರ ಜನರಿದ್ದಾರೆ. ಆದರೆ, ಹೆಚ್ಚಿನವರು ತಮ್ಮ ಮೇಜಿನ ಸುತ್ತ ಜನರಿಲ್ಲ ದಿದ್ದರೆ ಗಾಬರಿಯಾಗುತ್ತಾರೆ. ‘ಸೋಲೋ ಟೇಬಲ್ ಥಿಯರಿ’ ಈ ಗಾಬರಿಯನ್ನು ಹೋಗಲಾ ಡಿಸಿ, ನಿಮ್ಮ ಒಂಟಿತನವನ್ನೇ ನಿಮ್ಮ ದೊಡ್ಡ ಶಕ್ತಿಯನ್ನಾಗಿ ಪರಿವರ್ತಿಸುವ ಕಲೆಯನ್ನಾ ಗಿಸುತ್ತದೆ. ನಮ್ಮ ಸಮಾಜದಲ್ಲಿ ಒಬ್ಬರೇ ಕುಳಿತು ಊಟ ಮಾಡುತ್ತಿದ್ದರೆ ಅಥವಾ ಒಬ್ಬರೇ ಪ್ರಯಾಣಿಸುತ್ತಿದ್ದರೆ ಅವರನ್ನು ‘ಪಾಪ, ಅವರಿಗೆ ಯಾರೂ ಇಲ್ಲ’ ಎಂಬ ದೃಷ್ಟಿಯಿಂದ ನೋಡುವ ಸಂಪ್ರದಾಯವಿದೆ. ಆದರೆ ಈ ಸಿದ್ಧಾಂತ ಹೇಳುವುದೇ ಬೇರೆ.

ನಿಮ್ಮ ಟೇಬಲ್‌ನಲ್ಲಿ ನೀವು ಒಬ್ಬರೇ ಕುಳಿತಿದ್ದೀರಿ ಎಂದರೆ ನಿಮಗೆ ಯಾರೂ ಸಿಕ್ಕಿಲ್ಲ ಎಂದರ್ಥವಲ್ಲ. ಬದಲಾಗಿ, ಸರಿ ಇಲ್ಲದ ಅಥವಾ ನಿಮ್ಮ ಮೌಲ್ಯಕ್ಕೆ ಹೊಂದದ ಜನರ ಜತೆ ಕುಳಿತುಕೊಳ್ಳಲು ನೀವು ನಿರಾಕರಿಸಿದ್ದೀರಿ ಎಂದರ್ಥ. ಇದು ‘ರಾಜಿ’ ಮಾಡಿಕೊಳ್ಳದ ಗುಣ ವನ್ನು ಎತ್ತಿ ತೋರಿಸುತ್ತದೆ.

ನೀವು ನಿಮ್ಮ ಸ್ವಂತ ಕಂಪನಿಯನ್ನು ಇಷ್ಟಪಡಲು ಶುರು ಮಾಡಿದಾಗ ಅಚ್ಚರಿಯೊಂದು ಸಂಭವಿಸುತ್ತದೆ. ಯಾವಾಗ ನೀವು ನಿಮ್ಮ ಆಲೋಚನೆಗಳ ಜತೆ, ನಿಮ್ಮ ಪುಸ್ತಕಗಳ ಜತೆ ಅಥವಾ ನಿಮ್ಮ ಮೌನಗಳ ಜತೆ ಸುಖವಾಗಿರುತ್ತೀರೋ, ಆಗ ನೀವು ಹೊರಗಿನ ಪ್ರಶಂಸೆ ಅಥವಾ ಬೆಂಬಲಕ್ಕಾಗಿ ಹಪಹಪಿಸುವುದಿಲ್ಲ.

ನೀವು ‘ಪೂರ್ಣ’ ಎಂದು ನಿಮಗೆ ಅನಿಸಿದಾಗ, ಜಗತ್ತು ನಿಮ್ಮನ್ನು ಒಬ್ಬ ‘ಆಕರ್ಷಕ ವ್ಯಕ್ತಿ’ ಯಾಗಿ ನೋಡಲು ಶುರು ಮಾಡುತ್ತದೆ. ಏಕೆಂದರೆ, ಯಾರು ಇನ್ನೊಬ್ಬರ ಮೇಲೆ ಅವಲಂಬಿ ತರಲ್ಲವೋ ಅವರು ಸ್ವಾಭಾವಿಕವಾಗಿಯೇ ಆಕರ್ಷಕವಾಗಿ ಕಾಣುತ್ತಾರೆ. ಜಗತ್ತು ನಿಮ್ಮನ್ನು ಹುಡುಕಿಕೊಂಡು ನಿಮ್ಮ ಟೇಬಲ್‌ಗೆ ಬರುವಂತಾಗಬೇಕು.

ಇದನ್ನೂ ಓದಿ: Vishweshwar Bhat Column: ಪ್ರಧಾನಿ ಯಾರೇ ಇರಲಿ, ಪತ್ರಿಕಾಗೋಷ್ಠಿ ನಡೆಯೋದೇ ಹೀಗೆ !

ನೀವು ಯಾವಾಗ ಜನರ ಹಿಂದೆ ಬೀಳುವುದನ್ನು ನಿಲ್ಲಿಸಿ, ನಿಮ್ಮ ‘ಸೋಲೋ ಟೇಬಲ್’ ಅನ್ನು ಅಚ್ಚುಕಟ್ಟಾಗಿ ಅಲಂಕರಿಸಿಕೊಳ್ಳುತ್ತೀರೋ (ಅಂದರೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತೀರೋ), ಆಗ ಜನರು ಆ ಟೇಬಲ್‌ನಲ್ಲಿ ಒಂದು ಸೀಟು ಪಡೆಯಲು ಸಾಲು ನಿಲ್ಲುತ್ತಾರೆ. ‌

ನಿಮ್ಮ ಮೌಲ್ಯ ಹೆಚ್ಚಾದಂತೆ, ನೀವು ಜನರ ಬಳಿ ಹೋಗುವ ಅಗತ್ಯವಿರುವುದಿಲ್ಲ; ಜನರೇ ನಿಮ್ಮ ಮೌಲ್ಯವನ್ನು ಗುರುತಿಸಿ ಬರುತ್ತಾರೆ. ಅದಕ್ಕೇ ಹೇಳುವುದು - Build a private life so good that anyone entering it is a privilege, not a necessity. ಬದುಕಿನ ಈ ಪ್ರಯಾಣ ದಲ್ಲಿ ನಾವು ಹುಟ್ಟುವಾಗ ಒಬ್ಬರೇ ಇದ್ದೆವು, ಸಾಯುವಾಗಲೂ ಕೂಡ ಒಬ್ಬರೇ.

ಹೀಗಿರುವಾಗ ನಡುವಿನ ಪಯಣದಲ್ಲಿ ‘ಯಾರೂ ಇಲ್ಲ’ ಎಂದು ಕೊರಗುವುದಕ್ಕಿಂತ, ‘ನಾನೇ ನನಗಿದ್ದೇನೆ’ ಎಂದು ಬೀಗುವುದು ಶ್ರೇಷ್ಠ. ಯಾರು ಬೇಕಾದರೂ ಬಂದು ಕೂರುವ ಕೆಫೆಟೇರಿಯಾ ನಿಮ್ಮ ಬದುಕಾಗಬಾರದು. ನಿಮ್ಮ ಟೇಬಲ್ ಬಳಿ ಯಾರನ್ನು ಕೂರಿಸಿಕೊಳ್ಳ ಬೇಕು ಎಂಬ ’ VIP Access’ ಅಧಿಕಾರ ನಿಮ್ಮ ಕೈಯ ಇರಲಿ.

ಸೋಲೋ ಟೇಬಲ್ ಥಿಯರಿ ಒಂಟಿತನವನ್ನು ಪ್ರೀತಿಸುವುದಲ್ಲ, ಬದಲಾಗಿ ಸ್ವಂತಿಕೆಯನ್ನು ಗೌರವಿಸುವುದು. ನಿಮ್ಮ ಟೇಬಲ್‌ನಲ್ಲಿ ಶಾಂತಿ, ಸಾಧನೆ ಮತ್ತು ಸಮಾಧಾನ ತುಂಬಿರಲಿ. ಆಗ ನೀವು ಒಬ್ಬರೇ ಇದ್ದರೂ ಒಂದು ಸುಂದರ ಸಾಮ್ರಾಜ್ಯದ ಚಕ್ರವರ್ತಿಯಂತೆ ಬದುಕ ಬಹುದು.

ಇಂದಿನ ಜಗತ್ತಿನಲ್ಲಿ ಎಲ್ಲರೂ ಗ್ರೂಪ್ ಫೋಟೋಗಳು, ಪಾರ್ಟಿಗಳ ಚಿತ್ರಗಳನ್ನು ಹಾಕು ತ್ತಿದ್ದರೆ, ಒಬ್ಬರೇ ಇರುವುದು ಅಪರಾಧ ಅಥವಾ ಸೋಲು ಎಂಬಂತೆ ಬಿಂಬಿತವಾಗುತ್ತಿದೆ. ಸೋಲೋ ಟೇಬಲ್ ಥಿಯರಿ ಈ FOMO (Fear Of Missing Out) ಅನ್ನು ಮೆಟ್ಟಿ ನಿಲ್ಲಲು ಕಲಿಸುತ್ತದೆ. ನೀವು ಒಬ್ಬರೇ ಇರುವಾಗ ನೀವು ಯಾವುದೋ ಮೋಜನ್ನು ಕಳೆದುಕೊಳ್ಳು ತ್ತಿಲ್ಲ, ಬದಲಾಗಿ ನಿಮ್ಮನ್ನು ನೀವು ಕಂಡುಕೊಳ್ಳುತ್ತಿದ್ದೀರಿ (JOMO & Joy Of Missing Out ).

ನಿಮ್ಮ ಮೇಜಿನ ಮೇಲೆ ನೀವು ಏನನ್ನು ಇಟ್ಟುಕೊಂಡಿದ್ದೀರಿ ಎಂಬುದು ನಿಮ್ಮ ವ್ಯಕ್ತಿತ್ವ ವನ್ನು ನಿರ್ಧರಿಸುತ್ತದೆ. ಒಬ್ಬರೇ ಕುಳಿತಾಗ ಪುಸ್ತಕ ಹಿಡಿಯುವ ಅಭ್ಯಾಸ, ಹೊಸ ವಿಷಯ ಗಳನ್ನು ಕಲಿಯುವ ಆಸಕ್ತಿ ನಿಮ್ಮ ಟೇಬಲ್ ಅನ್ನು ‘ಸಮೃದ್ಧ’ಗೊಳಿಸುತ್ತದೆ. ದಿನದ ಕೊನೆ ಯಲ್ಲಿ ನಿಮ್ಮ ತಪ್ಪು ಒಪ್ಪುಗಳನ್ನು ನೀವೇ ವಿಶ್ಲೇಷಿಸಿಕೊಳ್ಳುವುದು ಈ ಥಿಯರಿಯ ಒಂದು ಭಾಗ. ಬೇರೆಯವರು ಬಂದು ನಿಮಗೆ ಸರ್ಟಿಫಿಕೇಟ್ ಕೊಡುವ ಅಗತ್ಯ ಇಲ್ಲಿರುವು ದಿಲ್ಲ. ನಿಮ್ಮ ಸುತ್ತ ಹತ್ತು ಜನ ಸಾಮಾನ್ಯರಿಗಿಂತ, ನಿಮ್ಮ ಮೌಲ್ಯಗಳನ್ನು ಗೌರವಿಸುವ ಒಬ್ಬ ವ್ಯಕ್ತಿ ಇದ್ದರೆ ಸಾಕು. ಇಲ್ಲದಿದ್ದರೆ ಆ ಸೀಟು ಖಾಲಿ ಇರುವುದೇ ಲೇಸು.

ವಿಶ್ವೇಶ್ವರ ಭಟ್‌

View all posts by this author