ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಶಾಂತಿಯ ಗೀತೆಗಳು ಮತ್ತು ಅಣ್ವಸ್ತ್ರ ಪರೀಕ್ಷೆ !

ಕೇವಲ ಒಂದು ವಾರದಲ್ಲಿ ಗಾಜಾದಲ್ಲಿ ನೂರಕ್ಕೂ ಹೆಚ್ಚು ಜನರು ಇಸ್ರೇಲ್‌ನ ದಾಳಿಗೆ ಬಲಿಯಾಗಿ ದ್ದಾರೆ. ಟ್ರಂಪ್ ಬಹಿರಂಗವಾಗಿ ಇಸ್ರೇಲ್‌ನ ಪರ ನಿಂತು, ಹಮಾಸ್‌ನವರಿಗೆ ನೀವು ನನ್ನ ಮಾತು ಕೇಳದಿದ್ದರೆ ಇನ್ನಷ್ಟು ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಟ್ರಂಪ್ ಹೇಳುವ ಶಾಂತಿ ಯಾವ ತರಹದ ಶಾಂತಿ ಎಂದು ಯಾರಿಗಾದರೂ ಆಶ್ಚರ್ಯ ವಾಗುತ್ತದೆ. ಅವರು ಹಾಡುವ ಶಾಂತಿಗೀತೆಯಲ್ಲಿ ಕೇವಲ ಹಿಂಸೆಯ ಸ್ವರವಷ್ಟೇ ಕೇಳಿಸುತ್ತಿದೆ!

ಸಂಗತ

ರಷ್ಯಾ ಅಣ್ವಸ್ತ್ರ ಕ್ಷಿಪಣಿಗಳನ್ನು ತಯಾರು ಮಾಡಿದೆ. ಹೀಗಾಗಿ ಟ್ರಂಪ್ ಮತ್ತೊಮ್ಮೆ ಅಮೆರಿಕ ದಲ್ಲಿ ಅಣ್ವಸ್ತ್ರ ಪರೀಕ್ಷೆ ಮಾಡುವುದಾಗಿ ಘೋಷಿಸಿದ್ದಾರೆ. ಯಾವುದೇ ದೇಶದ ಬಳಿ ಇರುವು ದಕ್ಕಿಂತ ಹೆಚ್ಚು ಅಣ್ವಸ್ತ್ರ ಅಮೆರಿಕದ ಬಳಿ ಇರಬೇಕು ಎಂದು ಟ್ರಂಪ್ ಹಟಕ್ಕೆ ಬಿದ್ದಿದ್ದಾರೆ.

ನಿಮ್ಮ ನಿಜವಾದ ಮುಖವನ್ನು ಬಚ್ಚಿಡಲು ನೀವು ಎಷ್ಟೇ ಪ್ರಯತ್ನಪಟ್ಟರೂ ಒಂದಲ್ಲಾ ಒಂದು ದಿನ ಅದು ಬೆಳಕಿಗೆ ಬಂದೇ ಬರುತ್ತದೆ ಎಂಬರ್ಥದ ಹಳೆಯ ಗಾದೆಯೊಂದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಷಯದಲ್ಲೂ ಈಗ ಅದೇ ಆಗಿದೆ. ಅವರ ನಿಜವಾದ ಮುಖ ಹೊರ ಬಂದಿದೆ. ಈವರೆಗೂ ಅವರು ಶಾಂತಿಯ ಗೀತೆಗಳನ್ನು ಹಾಡುತ್ತಿದ್ದರು. ತಾನು ಈ ಜಗತ್ತು ಕಂಡ ಅತಿ ದೊಡ್ಡ ಶಾಂತಿದೂತ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಯಾವಾಗ ರಷ್ಯಾ ಅಣ್ವಸ್ತ್ರ ಕ್ಷಿಪಣಿಯ ಪರೀಕ್ಷೆ ನಡೆಸಿತೋ ಆಗ ಧಿಗ್ಗನೆ ಎದ್ದು ಕುಳಿತ ಟ್ರಂಪ್, ತಾವೂ ಅಮೆರಿಕದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವುದಾಗಿ ಬಹಿರಂಗವಾಗಿ ಘೋಷಿಸಿ, ಅದರ ಆದೇಶಕ್ಕೆ ಸಹಿಯನ್ನೂ ಹಾಕಿದರು!

ಎಂಬಲ್ಲಿಗೆ, ಅವರ ಶಾಂತಿಗೀತೆ ಬರೀ ಪ್ರಹಸನ ಎಂಬುದು ಸಾಬೀತಾಯಿತು. ಟ್ರಂಪ್ ಬಹಳ ದಿನಗಳಿಂದ ಜಗತ್ತಿನ ನಾನಾ ಕಡೆ ಯುದ್ಧಗಳನ್ನು ನಿಲ್ಲಿಸುತ್ತೇನೆ ಎಂದು ಓಡಾಡುತ್ತಿದ್ದಾರೆ. ಎಲ್ಲಾ ಕಡೆ ಶಾಂತಿ ನೆಲೆಸುವಂತೆ ಮಾಡುವುದು ನನ್ನ ಗುರಿ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಅನೇಕ ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ತಪ್ಪಿಸಿದ್ದು ನಾನೇ ಎಂದು ಹತ್ತಾರು ಸಲ ಅವರು ಹೇಳಿಕೊಂಡಿದ್ದರೂ, ಅದು ಸುಳ್ಳೆಂಬುದು ಸಾಬೀತಾಗಿದೆ. ಅದೇ ರೀತಿ, ಕಾಂಗೋ ಮತ್ತು ರ‍್ವಾಂಡಾ ನಡುವೆ ಯುದ್ಧ ನಿಲ್ಲಿಸಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಆದರೆ ಆ ಎರಡು ದೇಶಗಳ ನಡುವೆ ಯುದ್ಧ ನಿಂತೇ ಇಲ್ಲ. ಇನ್ನು, ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆಯೂ ತಾನೇ ಯುದ್ಧ ನಿಲ್ಲಿಸಿದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಆದರೆ, ನಿಜವಾಗಿ ಆ ಎರಡು ದೇಶಗಳ ನಡುವೆ ಯುದ್ಧವೇ ನಡೆಯುತ್ತಿರಲಿಲ್ಲ!

ಅವರ ನಡುವೆ ಕೇವಲ ನೀರಿನ ಜಗಳ ನಡೆಯುತ್ತಿತ್ತು. ಅದೇ ರೀತಿ, ಸರ್ಬಿಯಾ ಮತ್ತು ಕೊಸೊವೊ ನಡುವೆ ಯುದ್ಧ ನಿಲ್ಲಿಸಿದ್ದೇನೆಂದು ಟ್ರಂಪ್ ಹೇಳಿದ್ದು, ವಾಸ್ತವವಾಗಿ ಅಲ್ಲೂ ಯುದ್ಧ ನಡೆಯು ತ್ತಿರಲಿಲ್ಲ ಮತ್ತು ತ್ವೇಷಮಯ ಪರಿಸ್ಥಿತಿ ಈಗಲೂ ಮುಂದುವರಿದಿದೆ.

ಇದನ್ನೂ ಓದಿ: Dr Vijay Darda Column: ನಮ್ಮೊಳಗಿನ ಭಯವನ್ನು ಗೆದ್ದರೆ ಜಗತ್ತನ್ನೇ ಗೆಲ್ಲಬಹುದು !

ಇನ್ನು, ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವೆ ಗಡಿ ಸಂಘರ್ಷವಿದೆ. ಅದಕ್ಕಾಗಿ ಯುದ್ಧ ಕೂಡ ನಡೆಯುತ್ತಿದ್ದು, ಅದಿನ್ನೂ ನಿಂತಿಲ್ಲ. ಇಸ್ರೇಲ್ ಮತ್ತು ಹಮಾಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೂ ಹಮಾಸ್ ಮೇಲೆ ಇಸ್ರೇಲ್ ಈಗಲೂ ದಾಳಿ ನಡೆಸುತ್ತಲೇ ಇದೆ.

ಕೇವಲ ಒಂದು ವಾರದಲ್ಲಿ ಗಾಜಾದಲ್ಲಿ ನೂರಕ್ಕೂ ಹೆಚ್ಚು ಜನರು ಇಸ್ರೇಲ್‌ನ ದಾಳಿಗೆ ಬಲಿಯಾಗಿ ದ್ದಾರೆ. ಟ್ರಂಪ್ ಬಹಿರಂಗವಾಗಿ ಇಸ್ರೇಲ್‌ನ ಪರ ನಿಂತು, ಹಮಾಸ್‌ನವರಿಗೆ ನೀವು ನನ್ನ ಮಾತು ಕೇಳದಿದ್ದರೆ ಇನ್ನಷ್ಟು ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಟ್ರಂಪ್ ಹೇಳುವ ಶಾಂತಿ ಯಾವ ತರಹದ ಶಾಂತಿ ಎಂದು ಯಾರಿಗಾದರೂ ಆಶ್ಚರ್ಯ ವಾಗುತ್ತದೆ. ಅವರು ಹಾಡುವ ಶಾಂತಿಗೀತೆಯಲ್ಲಿ ಕೇವಲ ಹಿಂಸೆಯ ಸ್ವರವಷ್ಟೇ ಕೇಳಿಸುತ್ತಿದೆ!

ಆದರೆ ಟ್ರಂಪ್ ಅವರ ನಿಜವಾದ ಬಣ್ಣವನ್ನು ಬಯಲು ಮಾಡಿದ್ದು ರಷ್ಯಾದ ಒಂದೇ ಒಂದು ನಡೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇತ್ತೀಚೆಗೆ ವಿಶೇಷವಾದ ಅಣ್ವಸ್ತ್ರ ಕ್ಷಿಪಣಿಯೊಂದರ ಪ್ರಯೋಗ ನಡೆಸಿದರು. ಅದು ನಿರಂತರವಾಗಿ 15 ತಾಸುಗಳ ಕಾಲ ಆಕಾಶದಲ್ಲಿ ಸಂಚರಿಸಿತ್ತು. ದಾರಿಯ ನಡುವೆ ಹಲವಾರು ಬಾರಿ ತನ್ನ ದಿಕ್ಕುಗಳನ್ನು ಬದಲಿಸಿತ್ತು. ಈ ಕ್ಷಿಪಣಿ ಅಣ್ವಸ್ತ್ರ ಸಿಡಿ ತಲೆಗಳನ್ನು ಕೂಡ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಇದು ಎಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ ಅಂದರೆ, ಜಗತ್ತಿನಲ್ಲಿರುವ ಎಲ್ಲಾ ರೀತಿಯ ರಾಡಾರ್‌ಗಳ ಕಣ್ಣನ್ನೂ ತಪ್ಪಿಸಿ ಅದೃಶ್ಯವಾಗಿ ಹಾರಾಟ ನಡೆಸುತ್ತದೆ. ಹೀಗಾಗಿ ಇದನ್ನು ಯಾರೂ ಹೊಡೆದುರುಳಿಸಲು ಸಾಧ್ಯವೇ ಇಲ್ಲ. ವಾಸ್ತವವಾಗಿ 2018ರಲ್ಲೇ ರಷ್ಯಾ ತಾನು ಇಂತಹ ದ್ದೊಂದು ಕ್ಷಿಪಣಿಯನ್ನು ತಯಾರಿಸುತ್ತಿರುವುದಾಗಿ ಘೋಷಿಸಿತ್ತು.

2023ರಲ್ಲಿ ಈ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ ಎಂದು ಪುಟಿನ್ ಘೋಷಣೆ ಕೂಡ ಮಾಡಿದ್ದರು. ಆದರೆ, ಪಾಶ್ಚಾತ್ಯ ದೇಶಗಳು ಅದನ್ನು ಒಪ್ಪಿರಲಿಲ್ಲ. ಪುಟಿನ್ ಸುಳ್ಳು ಹೇಳಿ ಎಲ್ಲರನ್ನೂ ಹೆದರಿಸು ತ್ತಿದ್ದಾರೆ ಎಂದು ಹೇಳಿದ್ದವು. ಈಗ ರಷ್ಯಾ ಬಹಿರಂಗವಾಗಿಯೇ ಅದರ ಪರೀಕ್ಷೆ ನಡೆಸಿದೆ.

ಅಮೆರಿಕ ಮತ್ತು ಇತರ ಪಾಶ್ಚಾತ್ಯ ದೇಶಗಳು, ಅದರಲ್ಲೂ ನ್ಯಾಟೋ ದೇಶಗಳು ಕಂಗಾಲಾಗಿವೆ. ಶಸ್ತ್ರಾಸ್ತ್ರಗಳ ರೇಸ್‌ನಲ್ಲಿ ರಷ್ಯಾ ತನ್ನನ್ನು ಹಿಂದೆಹಾಕಿ ಮುಂದೆ ಓಡುವುದನ್ನು ಅಮೆರಿಕ ಹೇಗೆ ತಾನೇ ಸಹಿಸಿಕೊಳ್ಳುತ್ತದೆ? ಆದ್ದರಿಂದಲೇ ಡೊನಾಲ್ಡ್ ಟ್ರಂಪ್ ತಕ್ಷಣ ಕಾರ್ಯಪ್ರವೃತ್ತರಾಗಿ ಅಮೆರಿಕದ ಯುದ್ಧ ಇಲಾಖೆಗೆ ತಾನು ಅಣ್ವಸ್ತ್ರ ಪರೀಕ್ಷೆ ನಡೆಸಲು ಆದೇಶ ನೀಡಿದ್ದೇನೆ ಎಂದು ಪ್ರಕಟಿಸಿದರು.

ಅದರ ಜೊತೆಗೆ, ಜಗತ್ತಿನ ಬೇರಾವುದೇ ದೇಶದಲ್ಲಿ ಇರುವುದಕ್ಕಿಂತ ಹೆಚ್ಚು ಅಣ್ವಸ್ತ್ರ ಅಮೆರಿಕದ ಬಳಿಯಿದೆ ಎಂದು ಜಂಭವನ್ನೂ ಕೊಚ್ಚಿಕೊಂಡರು. ತಾನು ಅಧಿಕಾರ ನಡೆಸಿದ ಮೊದಲ ಅವಧಿ ಯಲ್ಲೇ ಈ ಸಾಧನೆ ಮಾಡಿರುವುದಾಗಿಯೂ ಹೇಳಿಕೊಂಡರು. ಆದರೆ ಅವರ ಮಾತು ಕೇಳಿದರೆ ತಕ್ಷಣ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ: ಅಮೆರಿಕದ ಬಳಿ ಜಗತ್ತಿನ ಬೇರಾವುದೇ ದೇಶಕ್ಕಿಂತ ಹೆಚ್ಚು ಅಣ್ವಸ್ತ್ರಗಳು ಇರುವುದಾದರೆ ಈಗ ಅವುಗಳ ಪರೀಕ್ಷೆ ನಡೆಸುವುದರ ಅಗತ್ಯವಾದರೂ ಏನಿದೆ? ಸತ್ಯ ಏನೆಂದರೆ, ಅಮೆರಿಕದಲ್ಲಿ ಅತಿಹೆಚ್ಚು ಅಣ್ವಸ್ತ್ರಗಳ ಸಂಗ್ರಹ ಇದೆ ಎಂಬ ಅವರ ಮಾತು ನಿಜವಲ್ಲ. 2022ರಲ್ಲಿ ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಒಂದು ವರದಿ ಬಿಡುಗಡೆ ಮಾಡಿತ್ತು.

ಅದರಲ್ಲಿ, ರಷ್ಯಾ ಬಳಿ ೫೯೭೭ ಅಣ್ವಸ್ತ್ರ ಸಿಡಿತಲೆಗಳು, ಅಮೆರಿಕದ ಬಳಿ ೫೪೨೮, ಚೀನಾ ಬಳಿ ೩೫೦, ಫ್ರಾನ್ಸ್ ಬಳಿ ೨೯೦, ಬ್ರಿಟನ್ ಬಳಿ ೨೨೫ ಅಣ್ವಸ್ತ್ರ ಸಿಡಿತಲೆಗಳು ಇವೆ ಎಂದು ಹೇಳಿತ್ತು. ಪಾಕಿಸ್ತಾನದ ಬಳಿ ೧೬೫, ಭಾರತದ ಬಳಿ ೧೬೦, ಇಸ್ರೇಲ್ ಬಳಿ ೯೦ ಮತ್ತು ಉತ್ತರ ಕೊರಿಯಾ ಬಳಿ ೨೦ ಅಣ್ವಸ್ತ್ರ ಗಳಿವೆ ಎಂದೂ ತಿಳಿಸಿತ್ತು.

ಬಹುಶಃ ಈ ವರದಿ ಟ್ರಂಪ್‌ಗೆ ತಲೆನೋವು ತಂದಿರಲಿಕ್ಕೆ ಸಾಕು. ನಮ್ಮ ಬಳಿ ಇರುವುದಕ್ಕಿಂತ ಹೆಚ್ಚು ಅಣ್ವಸ್ತ್ರಗಳು ಪುಟಿನ್ ಬಳಿ ಇರಲು ಹೇಗೆ ಸಾಧ್ಯ ಎಂದು ಅವರು ಚಿಂತಿತರಾಗಿರಬೇಕು. ಬಹುಶಃ ಅದೇ ಕಾರಣದಿಂದಲೇ, ಹೊಸ ಹೊಸ ಅಣ್ವಸ್ತ್ರಗಳನ್ನು ತಯಾರಿಸಿ ಇಟ್ಟುಕೊಳ್ಳುವ ಉದ್ದೇಶದಿಂದ ಅವರು ಅಣ್ವಸ್ತ್ರ ಪರೀಕ್ಷೆಗೆ ಆದೇಶ ನೀಡಿದ್ದಾರೆ.

ಟ್ರಂಪ್ ಅಶ್ವಮೇಧಕ್ಕೆಂದು ಕಳುಹಿಸಿದ ಕುದುರೆಯನ್ನು ಪುಟಿನ್ ಕಟ್ಟಿ ಹಾಕಿದ್ದಾರೆ. ಅದು ಟ್ರಂಪ್‌ ಗೂ ಗೊತ್ತಿದೆ. ಸದ್ಯಕ್ಕೆ ಅವರ ಕೈಲಿ ಏನೂ ಮಾಡಲು ಸಾಧ್ಯವಿಲ್ಲ. ಟ್ರಂಪ್ ಎಷ್ಟೇ ಶಕ್ತಿಶಾಲಿ ಯಾಗಿರಲಿ ಅಥವಾ ಎಷ್ಟೇ ಮಹತ್ವಾಕಾಂಕ್ಷಿಯಾಗಿರಲಿ, ಅವರು ಉಕ್ರೇನ್‌ಗೆ ಅಮೆರಿಕದ ಅತ್ಯಾಧು ನಿಕ ಕ್ಷಿಪಣಿಗಳನ್ನು ಪೂರೈಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅಮೆರಿಕವೇನಾದರೂ ಹಸ್ತಕ್ಷೇಪ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಪುಟಿನ್ ನೇರಾನೇರ ಎಚ್ಚರಿಕೆ ನೀಡಿದ್ದಾರೆ.

ಅದೇ ವೇಳೆ, ಅವರು ರಷ್ಯಾದ ಅಣ್ವಸ್ತ್ರ ನೀತಿಯನ್ನೂ ಪರಿಷ್ಕರಿಸಿದ್ದಾರೆ. ಹೊಸ ಅಣ್ವಸ್ತ್ರ ನೀತಿ ಯಡಿ, ಅಮೆರಿಕವೇನಾದರೂ ಉಕ್ರೇನ್‌ಗೆ ಮಾರಕ ಕ್ಷಿಪಣಿಗಳನ್ನು ಪೂರೈಕೆ ಮಾಡಿದರೆ ಮತ್ತು ಅವುಗಳನ್ನು ರಷ್ಯಾ ಮೇಲೆ ಉಕ್ರೇನ್ ಪ್ರಯೋಗಿಸಿದರೆ ಅಮೆರಿಕದ ಮೇಲೂ ಮಾಸ್ಕೋ ದಾಳಿ ನಡೆಸಬಹುದು ಎಂಬ ಅಂಶ ಸೇರಿಸಿದ್ದಾರೆ. ಅಲ್ಲದೆ, ರಷ್ಯಾ ಮೇಲೆ ಕ್ಷಿಪಣಿ, ಡ್ರೋನ್ ಅಥವಾ ಯಾವುದೇ ರೀತಿಯ ವಾಯುದಾಳಿ ನಡೆದರೆ ನಾವು ಅಣ್ವಸ್ತ್ರಗಳನ್ನು ಪ್ರಯೋಗಿಸುವ ಎಲ್ಲಾ ಹಕ್ಕು ಉಳಿಸಿಕೊಂಡಿದ್ದೇವೆ ಎಂದೂ ಆ ನೀತಿಯಲ್ಲಿ ಹೇಳಿದ್ದಾರೆ.

ಹೀಗೆ ಯುದ್ಧ ನೀತಿಯನ್ನು ಪರಿಷ್ಕರಿಸಿದ ಬೆನ್ನಲ್ಲೇ ಪುಟಿನ್ ಅಣ್ವಸ್ತ್ರ ಕ್ಷಿಪಣಿಯ ಪರೀಕ್ಷೆ ನಡೆಸಿ ದ್ದಾರೆ. ಇದು ಟ್ರಂಪ್‌ಗೆ ನಡುಕ ಹುಟ್ಟಿಸಿದೆ. ಮುಖದಲ್ಲಿ ಅವರು ಎಷ್ಟೇ ಧೈರ್ಯ ತಂದುಕೊಂಡು ಮಾತನಾಡಿದರೂ, ರಷ್ಯಾದ ಧೈರ್ಯಶಾಲಿ ನಡೆಯ ಎದುರು ಟ್ರಂಪ್ ಅಸಹಾಯಕರಾಗಿದ್ದಾರೆ.

ಈಗಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಯಾವುದೇ ದೇಶ ಕೂಡ ವಾಸ್ತವವಾಗಿ ಅಣ್ವಸ ದಾಳಿ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಯಾರು ಅಣ್ವಸ ದಾಳಿ ನಡೆಸಿದರೂ ಇಡೀ ಜಗತ್ತು ನಾಶ ವಾಗುತ್ತದೆ. ಎಲ್ಲರೂ ತಮ್ಮಲ್ಲಿರುವ ಅಣ್ವಸ್ತ್ರಗಳನ್ನು ಝಳಪಡಿಸುತ್ತಿರುವುದು ತಮ್ಮ ಶಕ್ತಿಯನ್ನು ಬೇರೆಯವರ ಎದುರು ಪ್ರದರ್ಶಿಸುವುದಕ್ಕಾಗಿ ಮತ್ತು ಯಾರೂ ನಮ್ಮ ಮೇಲೆ ದಾಳಿ ನಡೆಸದೆ ಇರಲಿ ಎಂಬ ಭಯದ ಕಾರಣಕ್ಕಾಗಿ. ಆದರೆ ಈ ಪ್ರದರ್ಶನ ತಂತ್ರವೇ ಟ್ರಂಪ್ ಅವರ ನಿಜವಾದ ಬಣ್ಣವನ್ನು ಸಂಪೂರ್ಣ ಬಯಲು ಮಾಡಿದೆ. ಅವರೆಷ್ಟು ಟೊಳ್ಳು ಮನುಷ್ಯ ಎಂಬುದು ಈಗ ಜಗತ್ತಿಗೇ ಗೊತ್ತಾಗಿದೆ.

ಅವರ ಶಾಂತಿಗೀತೆ ಬರೀ ಬುರುಡೆ ಎಂಬುದೂ ಎಲ್ಲರಿಗೂ ಮನವರಿಕೆಯಾಗಿದೆ. ಅವರ ಮುಖವಾಡ ಇನ್ನೊಮ್ಮೆ ಕಳಚಿ ಬಿದ್ದಿದೆ. ಅದರಿಂದ ಕೇವಲ ಟ್ರಂಪ್‌ರ ಮುಖ ಮಾತ್ರವಲ್ಲ, ಜಗತ್ತಿಗೇ ಶಸ್ತ್ರಾಸ್ತ್ರ ಗಳ ಡೀಲರ್‌ನಂತೆ ವರ್ತಿಸುವ ಅಮೆರಿಕದ ನಿಜವಾದ ಬಣ್ಣ ಕೂಡ ಬಯಲಾಗಿದೆ.

ಮುಗಿಸುವ ಮುನ್ನ

ಇತ್ತೀಚೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ವರದಿ ನಮಗೆ ಆಘಾತ ವನ್ನೇನೂ ತಂದಿಲ್ಲವಾದರೂ, ಆತಂಕವನ್ನಂತೂ ಉಂಟುಮಾಡಿದೆ. ಭಾರತದಲ್ಲಿ ಯಾವ ನದಿಯೂ ಶುದ್ಧವಾಗಿಲ್ಲ, ಎಲ್ಲಾ ನದಿಗಳೂ ಮಲಿನವಾಗಿವೆ ಎಂಬುದು ನಮಗೆ ಗೊತ್ತಿರುವ ಸಂಗತಿಯೇ ಆಗಿತ್ತು. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಸ ವರದಿಯು, ೫೪ ಮಲಿನ ನದಿಗಳನ್ನು ಹೊಂದಿರುವ ಮಹಾರಾಷ್ಟ್ರ ಈ ಪಟ್ಟಿಯಲ್ಲಿ ದೇಶಕ್ಕೇ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದೆ. ನಾನು ರಾಜ್ಯಸಭೆಯ ಪರಿಸರ ಸಮಿತಿಗೆ ಸದಸ್ಯನಾಗಿದ್ದಾಗ ನಮ್ಮ ಸಮಿತಿಯು ದೇಶಾ ದ್ಯಂತ ಸಂಚರಿಸಿ ನದಿಗಳ ಗುಣಮಟ್ಟವನ್ನು ಪರೀಕ್ಷಿಸಿ ಸರ್ಕಾರಕ್ಕೊಂದು ವರದಿ ಸಲ್ಲಿಕೆ ಮಾಡಿತ್ತು. ಅದರಲ್ಲಿ, ನಮ್ಮ ದೇಶದ ನದಿಗಳು ಬಹಳ ಶೋಚನೀಯ ಸ್ಥಿತಿಯಲ್ಲಿವೆ. ನಗರ ಪ್ರದೇಶಗಳಲ್ಲಿರುವ ನಾಲೆಗಳು ಕೂಡ ದುಸ್ಥಿತಿಯಲ್ಲಿವೆ ಎಂದು ಹೇಳಲಾಗಿತ್ತು.

ಅಂದಿನಿಂದ ಈವರೆಗೆ ಪರಿಸ್ಥಿತಿ ಯಾವ ರೀತಿಯಲ್ಲೂ ಸುಧಾರಿಸಿಲ್ಲ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ನದಿಗಳನ್ನು ಉಳಿಸಲು ವಿಶೇಷ ಗಮನ ನೀಡುವ ಅಗತ್ಯವಿದೆ. ನದಿಯೊಂದು ಸತ್ತರೆ ಅದರ ಪಾತ್ರದ ಅಷ್ಟೂ ಪರಿಸರ, ಜೀವವೈವಿಧ್ಯ ಹಾಗೂ ಬದುಕು ನಾಶ ವಾಗುತ್ತದೆ ಎಂದು ಹೇಳಲಾಗುತ್ತದೆ. ನದಿಗಳನ್ನು ರಕ್ಷಿಸಲು ನಾವು ನಮ್ಮ ವೈಯಕ್ತಿಕ ಸಾಮರ್ಥ್ಯ ದಲ್ಲಿ ಏನಾದರೂ ಮಾಡುತ್ತಿದೇವಾ? ಎಲ್ಲರೂ ಗಂಭೀರವಾಗಿ ಯೋಚನೆ ಮಾಡಬೇಕಾದ ಸಂಗತಿ ಯಿದು.

ಡಾ.ವಿಜಯ್‌ ದರಡಾ

View all posts by this author