Vishweshwar Bhat Column: ಸುಮೋ ಅಳುವ ಮಗು ಉತ್ಸವ
ನಾಕಿ ಸುಮೋ ಉತ್ಸವದ ಮೂಲವನ್ನು ನೋಡಿದರೆ, ಇದು ಜಪಾನಿನ ಶಿಂಟೋ ಧರ್ಮದ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಪೂರಕ ವಾಗಿದೆ. ಶಿಂಟೋ ಧರ್ಮದಲ್ಲಿ ಮಕ್ಕಳ ಆರೋಗ್ಯ, ಬೆಳವಣಿಗೆ ಮತ್ತು ಸಮೃದ್ಧ ಜೀವನಕ್ಕಾಗಿ ದೇವತೆಗಳನ್ನು ಆರಾಧಿಸುವುದು ಸಾಮಾನ್ಯ. ಜಪಾನಿನ ಅನೇಕ ಮಂದಿರಗಳಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತಿದ್ದರೂ, ಸೇನ್ಸೋಜಿ ದೇವಸ್ಥಾನ (Sensoji Temple) ಮತ್ತು ಶಿತನೋ ಮಿಯಾ ಶ್ರೈನ್ ದೇವಾಲಯಗಳಲ್ಲಿ ನಡೆಯುವ ಉತ್ಸವ ಅತ್ಯಂತ ಜನಪ್ರಿಯವಾಗಿದೆ.


ಇಂಥದೊಂದು ಉತ್ಸವವೂ ಇದೆಯಾ ಎಂದು ಯಾರಿಗಾದರೂ ಆಶ್ಚರ್ಯವಾಗಬಹುದು. ಅದಕ್ಕೆ ಸುಮೋ ಅಳುವ ಮಗು ಉತ್ಸವ ಅಂತಾರೆ. ಇದು ಜಪಾನಿನ ಅನನ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಒಂದು ಅನನ್ಯ ಉತ್ಸವ. ಇದನ್ನು ’ನಾಕಿ ಸುಮೋ’ ಎಂದು ಕರೆಯ ಲಾಗುತ್ತದೆ. ಈ ಉತ್ಸವದಲ್ಲಿ ಕುಸ್ತಿಪಟುಗಳಾದ ಸುಮೋ ಪೈಲ್ವಾನರು ಮಕ್ಕಳನ್ನು ಎತ್ತಿಕೊಂಡು ಅಳಿಸುವ ಪ್ರಯತ್ನ ಮಾಡುತ್ತಾರೆ. ಈ ಸಂಪ್ರದಾಯವು ಶತಮಾನಗಳಿಂದ ನಡೆದು ಬಂದಿದೆ. ನಾಕಿ ಸುಮೋ ಉತ್ಸವದ ಮೂಲವನ್ನು ನೋಡಿದರೆ, ಇದು ಜಪಾನಿನ ಶಿಂಟೋ ಧರ್ಮದ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಪೂರಕ ವಾಗಿದೆ. ಶಿಂಟೋ ಧರ್ಮದಲ್ಲಿ ಮಕ್ಕಳ ಆರೋಗ್ಯ, ಬೆಳವಣಿಗೆ ಮತ್ತು ಸಮೃದ್ಧ ಜೀವನಕ್ಕಾಗಿ ದೇವತೆಗಳನ್ನು ಆರಾಧಿಸುವುದು ಸಾಮಾನ್ಯ. ಜಪಾನಿನ ಅನೇಕ ಮಂದಿರ ಗಳಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತಿದ್ದರೂ, ಸೇನ್ಸೋಜಿ ದೇವಸ್ಥಾನ ( Sensoji Temple) ಮತ್ತು ಶಿತನೋ ಮಿಯಾ ಶ್ರೈನ್ ದೇವಾಲಯಗಳಲ್ಲಿ ನಡೆಯುವ ಉತ್ಸವ ಅತ್ಯಂತ ಜನಪ್ರಿಯ ವಾಗಿದೆ.
ಇದನ್ನೂ ಓದಿ:Vishweshwar Bhat Column: ಇಕಿಗಾಯಿ ಅರಿಯದೇ ಜಪಾನ್ ಸರಿಯಾಗಿ ಅರ್ಥವಾಗುವುದುಂಟೇ ?
ಈ ಉತ್ಸವದ ಪ್ರಮುಖ ಉದ್ದೇಶ ಮಕ್ಕಳ ಆರೋಗ್ಯ ಮತ್ತು ಸುಖ ಸಮೃದ್ಧಿಗಾಗಿ ಆಶೀರ್ವಾದ ಪಡೆ ಯುವುದು. ಜಪಾನಿಯರಲ್ಲಿ ’ಮಗು ಹೆಚ್ಚು ಜೋರಾಗಿ ಅತ್ತರೆ, ಅದಕ್ಕೆ ಹೆಚ್ಚು ಶಕ್ತಿಯಿದೆ’ ಎಂಬ ನಂಬಿಕೆ ಇದೆ. ಇದರಿಂದ ಅಳುವ ಮಗು ಭವಿಷ್ಯದಲ್ಲಿ ಆರೋಗ್ಯವಾಗಿ, ಬುದ್ಧಿವಂತವಾಗಿ ಮತ್ತು ಶಕ್ತಿಯುತವಾಗಿ ಬೆಳೆಯುತ್ತದೆ ಎಂಬ ಭಾವನೆಯಿದೆ.
ಉತ್ಸವದ ಆರಂಭದಲ್ಲಿ ಸುಮೋ ಪೈಲ್ವಾನರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ರಿಂಗ್ಗೆ ( sumo ring) ಪ್ರವೇಶಿಸುತ್ತಾರೆ. ಈ ಪೈಲ್ವಾನರು ಪ್ರತಿ ಮಗುವನ್ನು ಎತ್ತಿಕೊಂಡು ಅದನ್ನು ಜೋರಾ ಗಿ ಅಳಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಪೈಲ್ವಾನರು ಮಕ್ಕಳಿಗೆ ವಿನೋದಪೂರ್ಣ ಮುಖಭಾವ ಗಳನ್ನು ತೋರಿಸುತ್ತಾರೆ ಅಥವಾ ಜೋರಾಗಿ ಗದರುತ್ತಾರೆ, ಬೆದರಿಸುತ್ತಾರೆ. ಆಗ ಮಕ್ಕಳು ಅಳಲು ಆರಂಭಿಸುತ್ತವೆ.
ಪರಸ್ಪರ ಎದುರಾಗಿ ಇಬ್ಬರು ಸುಮೋ ಪೈಲ್ವಾನರು ಎರಡು ಮಕ್ಕಳನ್ನು ತಬ್ಬಿಕೊಂಡು ನಿಲ್ಲುತ್ತಾರೆ. ಯಾವ ಮಗು ಮೊದಲು ಅಥವಾ ಹೆಚ್ಚು ಜೋರಾಗಿ ಅಳುತ್ತದೋ ಅದನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಮಗು ಅಳದೇ ಇದ್ದರೆ, ಸುಮೋ ಕುಸ್ತಿಪಟುಗಳು ಗಟ್ಟಿಯಾಗಿ ಕಿರುಚಾಡಿ ಅಳುವಂತೆ ಮಾಡುತ್ತಾರೆ. ಜಪಾನಿ ಸಂಸ್ಕೃತಿಯಲ್ಲಿ, ಅಳುವ ಶಬ್ದವು ದುಷ್ಟ ಶಕ್ತಿಗಳನ್ನು ದೂರ ಮಾಡುವ ಶಕ್ತಿಯನ್ನೂ ಹೊಂದಿದೆ ಎಂಬ ನಂಬಿಕೆಯೂ ಇದೆ.
ಹಾಗಾಗಿ, ಮಗು ಉಚ್ಚ ಸ್ವರದಲ್ಲಿ ಅಳುವುದರಿಂದ ಅದು ನೆಗಡಿ, ಕೆಟ್ಟ ಶಕ್ತಿಗಳು ಮತ್ತು ಅನಾ ರೋಗ್ಯದಿಂದ ದೂರವಿರುತ್ತದೆ ಎಂದು ಭಾವಿಸಲಾಗುತ್ತದೆ. ಹೀಗಾಗಿ ಮಗು ಅಳಲಾರಂಭಿಸಿದರೆ ಯಾರೂ ತಕ್ಷಣಕ್ಕೆ ಸುಮ್ಮನಿರಿಸಲು ಹೋಗುವುದಿಲ್ಲ. ಅದು ಮಗುವಿನ ಒಳ್ಳೆಯದಕ್ಕೆ ಎಂದು ಭಾವಿಸುತ್ತಾರೆ. ಟೋಕಿಯೋ ನಗರದಲ್ಲಿರುವ ಪ್ರಸಿದ್ಧ ಸೇನ್ಸೋಜಿ ದೇವಸ್ಥಾನಕ್ಕೆ ಸಾವಿರಾರು ಜನರು ಈ ಉತ್ಸವವನ್ನು ವೀಕ್ಷಿಸಲು ಆಗಮಿಸುತ್ತಾರೆ.
ಆ ಪೈಕಿ ಕೆಲವರು ತಮ್ಮ ಮಕ್ಕಳೊಂದಿಗೂ ಆಗಮಿಸುತ್ತಾರೆ. ಪ್ರತಿ ವರ್ಷ ಅಪಾರ ಸಂಖ್ಯೆಯ ಮಕ್ಕಳು ಮತ್ತು ಅವರ ಪೋಷಕರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಉತ್ಸವದ ಅಂಗವಾಗಿ ಮಕ್ಕಳಿಗೆ ರಕ್ಷಾ ತಾಯಿತ ( protective amulet) ನೀಡಲಾಗುತ್ತದೆ. ಇದು ಅವರ ಆರೋಗ್ಯ ಮತ್ತು ಭದ್ರತೆಗೆ ಪ್ರಾರ್ಥನೆ ಸಲ್ಲಿಸುವ ಸಂಕೇತವಾಗಿದೆ. ಯಾವುದೇ ಸಂಪ್ರದಾಯದಂತೆ, ನಾಕಿ ಸುಮೋ ಉತ್ಸವವೂ ಕಾಲಾನುಸಾರ ಸ್ವಲ್ಪ ಬದಲಾಗುತ್ತಿದೆ.
ಪೋಷಕರಿಗೆ ಅವರ ಮಕ್ಕಳ ಭದ್ರತೆಯ ಬಗ್ಗೆ ಭರವಸೆ ನೀಡಲಾಗುತ್ತಿದ್ದು, ಮಕ್ಕಳಿಗೆ ಹಿಂಸೆ ಆಗ ದಂತೆ ಈ ಉತ್ಸವವನ್ನು ಆಯೋಜಿಸುವತ್ತ ಗಮನ ಹರಿಸಲಾಗಿದೆ. ಪೈಲ್ವಾನರು ಮಕ್ಕಳನ್ನು ಎತ್ತಿ ಕೊಳ್ಳುವಾಗ ತಾಯಿ-ತಂದೆಗೂ ಸಮಾಧಾನ ನೀಡುವಂತೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ. ಸುಮೋ ಪೈಲ್ವಾನರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ವಿಚಿತ್ರ ಮುಖಭಾವ ಮಾಡುತ್ತಾ, ಅಳು ಬರುವಂತೆ ಮಾಡುತ್ತಾರೆ. ಅಳುವುದಕ್ಕೆ ಒತ್ತಾಯಿಸಲಾಗದೇ, ಮಕ್ಕಳಿಗೆ ವಿನೋದಪೂರ್ಣ ರೀತಿಯಲ್ಲಿ ಈ ಅನುಭವವನ್ನು ನೀಡುತ್ತಾರೆ. ಇತರ ಯಾವುದೇ ಸಂಸ್ಕೃತಿಯಲ್ಲಿ ಕಂಡುಬರದ ಈ ವಿಶಿಷ್ಟ ಆಚರಣೆಯು ಜಪಾನಿಗೆ ಮಾತ್ರ ಸೀಮಿತವಾಗಿರುವುದು ವಿಶೇಷ.