ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahally Column: ಟ್ರಂಪಾಘಾತಕ್ಕೆ ಕರಗಿದ ಅಮೆರಿಕನ್‌ ಡ್ರೀಮ್‌ !

ಯಶಸ್ಸು ಯೋಗ್ಯರನ್ನು ಹುಡುಕಿಕೊಂಡು ಬೀದಿಬೀದಿ ಅಲೆಯುತ್ತಿರುತ್ತದೆ, ಹೀಗಾಗಿ ಅದಕ್ಕೆ ಪರ್ಮನೆಂಟ್ ಅಡ್ರೆಸ್ ಇಲ್ಲ. ಈ ಕಾರಣದಿಂದ ಹುಡುಕಿಕೊಂಡು ಹೋಗುವು ದಾದರೂ ಎಲ್ಲಿಗೆ? ಅದಕ್ಕೇ, ಹುಡುಕಿಕೊಂಡು ಹೋದವರಿಗೆ ಯಶಸ್ಸು ದಕ್ಕುವುದಿಲ್ಲ. ಕುಳಿತಲ್ಲಿಗೆ ಅದನ್ನು ನಾವು ಬರಮಾಡಿಕೊಳ್ಳಬೇಕು. ಆದರೆ ನಾವು ಅದನ್ನು ಹುಡುಕಿ ಕೊಂಡು ಯುರೋಪು, ಅಮೆರಿಕ ಎಂದು ಹೊರಟು ಬಿಡುತ್ತೇವೆ.

ವಿಶ್ವರಂಗ

ಮಾರುಕಟ್ಟೆಗೆ ಪದಾರ್ಥ ಅಥವಾ ಸೇವೆ ಮುಖ್ಯವಾಗುತ್ತದೆಯೇ ಹೊರತು ವ್ಯಕ್ತಿ ಯಲ್ಲ! ವ್ಯಕ್ತಿಯೇ ಮುಖ್ಯವಲ್ಲ ಎಂದ ಮೇಲೆ ವ್ಯಕ್ತಿಯ ಜಾತಿ, ಧರ್ಮ, ಲಿಂಗ, ಭಾಷೆ ಹೀಗೆ ಬೇರೆ ಅಂಶಗಳೂ ಮುಖ್ಯವಾಗುವುದಿಲ್ಲ. ನಮ್ಮಲ್ಲಿ ಶಕ್ತಿಯಿದ್ದರೆ ಕುಳಿತ ಜಾಗದಿಂದ ಜಗತ್ತು ನಮ್ಮ ಕಡೆಗೆ ನೋಡುವಂತೆ, ಬರುವಂತೆ ಮಾಡಬಹುದು.

ಈ ಯಶಸ್ಸು ಅಂತ ನಾವು ಏನು ಕರೆಯುತ್ತೇವೆ ಅದು ನಿರ್ಭಾವುಕ ಕಣ್ರೀ. ಅದು ಜಾತಿ, ಮತ, ಧರ್ಮ, ಬಡವ, ಶ್ರೀಮಂತ, ಹೆಣ್ಣು, ಗಂಡು, ಚಿಕ್ಕವಯಸ್ಸು, ಹಿರಿಯ ಇತ್ಯಾದಿ ಯಾವುದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅದರ ಕಣ್ಣಿಗೆ ಕಾಣುವುದು ಒಂದೇ ಒಂದು ಅಂಶ. ಅದೇನು ಗೊತ್ತಾ? ಶ್ರದ್ಧೆ ಮತ್ತು ತನ್ಮಯತೆಯಿಂದ ಕೆಲಸ ಮಾಡುವುದು. ಅಂಥವ ರನ್ನು ಈ ಯಶಸ್ಸು ಹುಡುಕಿಕೊಂಡು ಹೋಗುತ್ತದೆ. ಇದಿಲ್ಲದವರು ಯಶಸ್ಸನ್ನು ಹುಡುಕಿ ಕೊಂಡು ಹೋಗುತ್ತಾರೆ.

ಯಶಸ್ಸು ಯೋಗ್ಯರನ್ನು ಹುಡುಕಿಕೊಂಡು ಬೀದಿಬೀದಿ ಅಲೆಯುತ್ತಿರುತ್ತದೆ, ಹೀಗಾಗಿ ಅದಕ್ಕೆ ಪರ್ಮನೆಂಟ್ ಅಡ್ರೆಸ್ ಇಲ್ಲ. ಈ ಕಾರಣದಿಂದ ಹುಡುಕಿಕೊಂಡು ಹೋಗುವು ದಾದರೂ ಎಲ್ಲಿಗೆ? ಅದಕ್ಕೇ, ಹುಡುಕಿಕೊಂಡು ಹೋದವರಿಗೆ ಯಶಸ್ಸು ದಕ್ಕುವುದಿಲ್ಲ. ಕುಳಿತಲ್ಲಿಗೆ ಅದನ್ನು ನಾವು ಬರಮಾಡಿಕೊಳ್ಳಬೇಕು. ಆದರೆ ನಾವು ಅದನ್ನು ಹುಡುಕಿ ಕೊಂಡು ಯುರೋಪು, ಅಮೆರಿಕ ಎಂದು ಹೊರಟುಬಿಡುತ್ತೇವೆ.

ನೀವು ಪ್ರಕೃತ್ತಿಯನ್ನು ಒಮ್ಮೆ ಗಮನಿಸಿ ನೋಡಿ. ಪ್ರಕೃತ್ತಿ ಎಲ್ಲರ ಬಗ್ಗೆಯೂ ಸಮಭಾವ ವನ್ನು ಹೊಂದಿದೆ. ಅದು ನ್ಯೂಟ್ರಲ. ಇದು ಹೆಚ್ಚು, ಇದು ಕಡಿಮೆ ಎನ್ನುವ ಭೇದಭಾವ ವನ್ನು ಅದು ಮಾಡುವುದಿಲ್ಲ. ಈ ಹೆಚ್ಚು ಕಡಿಮೆಯ ಆಟವನ್ನು ನಾವು ಮನುಷ್ಯರು ನಮ್ಮ ಅನುಕೂಲಕ್ಕೆ ಸೃಷ್ಟಿಸಿಕೊಂಡಿದ್ದೇವೆ.

ಇದನ್ನೂ ಓದಿ: Rangaswamy Mookanahalli Column: ಚಿಂತನೆ ಬದಲಾಗದೆ, ತಲೆಮಾರಿನ ಹೆಸರು ಬದಲಾದರೆ ಸಾಕೇ ?

ಇದನ್ನು ಶತಮಾನಗಳಿಂದ ಮಾಡುತ್ತ ಬಂದ ಕಾರಣ ಇದನ್ನು ನಿಜವೆಂದು ಕೂಡ ನಂಬುತ್ತೇವೆ. ಆದರೆ ಸತ್ಯ ಬೇರೆಯಿದೆ. ನಾವು ನಮ್ಮ ಮನಸ್ಸನ್ನು ಮುಕ್ತವಾಗಿ ಇರಿಸಿ ಕೊಂಡು ‘ಪ್ರಯತ್ನ ಮಾಡೋಣ’ ಎನ್ನುವ ಮನೋಭಾವ ಬೆಳಸಿಕೊಳ್ಳುತ್ತ ಹೋದರೆ ಯಾವುದೂ ಅಸಾಧ್ಯವಲ್ಲ.

ಮಾರುಕಟ್ಟೆಗೆ ಪದಾರ್ಥ, ಉತ್ಪನ್ನ ಅಥವಾ ಸೇವೆ ಮುಖ್ಯವಾಗುತ್ತದೆಯೇ ಹೊರತು ವ್ಯಕ್ತಿ ಯಲ್ಲ! ವ್ಯಕ್ತಿಯೇ ಮುಖ್ಯವಲ್ಲ ಎಂದ ಮೇಲೆ ವ್ಯಕ್ತಿಯ ಜಾತಿ, ಧರ್ಮ, ಲಿಂಗ, ಭಾಷೆ ಹೀಗೆ ಬೇರೆ ಹತ್ತಾರು ಅಂಶಗಳು ಕೂಡ ಮುಖ್ಯವಾಗುವುದಿಲ್ಲ. ಇದರ ಜತೆಗೆ ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವು ಇರುವ ಜಾಗ ಕೂಡ ಅಷ್ಟೊಂದು ಪ್ರಾಮುಖ್ಯವನ್ನು ಪಡೆದುಕೊಳ್ಳುವು ದಿಲ್ಲ.

ನಮ್ಮಲ್ಲಿ ನಿಜವಾದ ಶಕ್ತಿಯಿದ್ದರೆ ಇಂದು ಕುಳಿತ ಜಾಗದಿಂದ ಜಗತ್ತು ನಮ್ಮ ಕಡೆಗೆ ನೋಡುವಂತೆ, ಬರುವಂತೆ ಮಾಡಬಹುದು. ಈ ಮಾತುಗಳು ಸತ್ಯ ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಕಾಣಬಹುದು. ಕೇವಲ ಮತ್ತು ಕೇವಲ ತಮ್ಮ ಶಕ್ತಿ ಮತ್ತು ಸಾಮರ್ಥ್ಯದ ಮೂಲಕ ಜಗತ್ತಿನ ಇತರ ಭಾಗದಲ್ಲಿ ಉತ್ತಮ ಬದುಕು ಕಟ್ಟಿಕೊಂಡಿರುವ ಭಾರತೀಯ ಮೂಲದ ಸಿಇಓಗಳಿರಬಹುದು, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬಂದು ವ್ಯಾಪಾರ ಮಾಡಿ ಸಿರಿವಂತರಾಗಿರುವ ಅನೇಕ ವ್ಯಾಪಾರಸ್ಥರಿರಬಹುದು, ಊರಿನಿಂದ ಊರಿಗೆ ಬಂದು ಬದುಕು ಕಟ್ಟಿಕೊಂಡಿರುವ ಜನರಿರಬಹುದು, ಇವರೆಲ್ಲರಲ್ಲೂ ಕಾಣುವ ಸಾಮಾನ್ಯ ಗುಣ ಮುಂದಕ್ಕೆ ಹೋಗುವುದು, ಪ್ರಯತ್ನ ಪಡುವುದು.

R M 2309

ಇದನ್ನೇ ಇನ್ನಷ್ಟು ವಿಸ್ತರಿಸಿ ನೋಡುವುದಾದರೆ ಅಮೆರಿಕ ದೇಶದಲ್ಲಿನ ಸಂಸ್ಥೆಗಳಿಗೆ ಭಾರತೀಯ ಮೂಲದವನು, ಆತನ ಜಾತಿ, ಧರ್ಮ, ಲಿಂಗ ಯಾವುದೂ ಮುಖ್ಯವಾಗಲಿಲ್ಲ. ಅವರಿಗೆ ವ್ಯಕ್ತಿಯಲ್ಲಿನ ಶಕ್ತಿ ಮಾತ್ರ ಮುಖ್ಯವಾಯ್ತು. ಅಮೆರಿಕ ಎನ್ನುವ ಅಮೆರಿಕ ಈ ಮಟ್ಟಕ್ಕೆ ಬೆಳೆದು ನಿಂತಿರುವುದು ವಲಸಿಗರಿಂದ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಟ್ರಂಪ್ ಎರಡನೇ ಬಾರಿ ಅಧಿಕಾರ ಹಿಡಿದ ನಂತರ ಅಲ್ಲಿನ ವಾತಾವರಣ ಬದಲಾಗಿ ಬಿಟ್ಟಿದೆ.

ಭಾರತೀಯರನ್ನು ಟ್ರಂಪ್ ಟಾರ್ಗೆಟ್ ಮಾಡುತ್ತಿದ್ದಾರೆ. ಅವರ ತೆರಿಗೆ ನೀತಿಗಳು ಇಂದಿಗೆ ಎಲ್ಲರಿಗೂ ಗೊತ್ತಾಗಿವೆ. ಪ್ರತಿದಿನವೂ ಸಂಚಲನ ಸೃಷ್ಟಿ ಮಾಡುತ್ತಿರಬೇಕು, ಜಗತ್ತನ್ನು ಹೆಬ್ಬೆರಳ ತುದಿಯಲ್ಲಿ ಕುಣಿಸುತ್ತಿರಬೇಕು ಎನ್ನುವ ಮನೋಭಾವದ ಟ್ರಂಪ್ ಹೊಸ ವರಸೆ ಶುರು ಮಾಡಿದ್ದಾರೆ.

ಭಾರತೀಯ ವಲಸಿಗರು ಕೆಲಸ ಮಾಡಲು ಅತ್ಯವಶ್ಯಕವಾಗಿ ಬೇಕಾಗುವ ಎಚ್ 1ಬಿ ವೀಸಾದ ಶುಲ್ಕವನ್ನು ಒಂದು ಲಕ್ಷ ಡಾಲರಿಗೆ ಏರಿಸಿzರೆ. ಅಮೆರಿಕನ್ನರಿಗೆ ಕೆಲಸ ಉಳಿದುಕೊಳ್ಳಬೇಕು ಎನ್ನುವುದು ಪ್ರಮುಖ ಕಾರಣ. ಎರಡನೆಯ ಕಾರಣ ದೇಶದ ಭದ್ರತೆ ದೃಷ್ಟಿಯಿಂದ ಎಂದು ಹೇಳಿದ್ದಾರೆ.

ಒಟ್ಟಾರೆ ಟ್ರಂಪ್ ‘ಅಮೆರಿಕ -’ ಎನ್ನುವ ನಿಲುವನ್ನು ಮುಂದಿಟ್ಟು ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿದ್ದಾರೆ. ಅದು ಹೇಗೆಂದರೆ ಈ ಬದಲಾವಣೆ 2025ರ ಸೆಪ್ಟೆಂಬರ್ 21ರಿಂದ ಜಾರಿ ಯಾಗುತ್ತದೆ ಎಂದಿದ್ದಾರೆ. ಎಚ್ -1ಬಿ ವೀಸಾ ವಿತರಣೆಯ 70ಕ್ಕೂ ಹೆಚ್ಚು ಪ್ರತಿಶತ ಭಾರತೀ ಯರ ಪಾಲಾಗುತಿತ್ತು. ಈ ವೀಸಾ ಅಡಿಯಲ್ಲಿ ಮೂರು ವರ್ಷ ಕೆಲಸ ಮಾಡುವ ಅವಕಾಶ ವಿತ್ತು.

ಇದನ್ನು ಮತ್ತೆ ಮೂರು ವರ್ಷಕ್ಕೆ ವಿಸ್ತರಿಸಲು ಕೂಡ ಅವಕಾಶ ವಿತ್ತು. ಇದೀಗ ಈ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕವನ್ನು ಟ್ರಂಪ್ ಸಾಹೇಬರು ವಿಧಿಸಿದ್ದಾರೆ. ಇವತ್ತಿನ ದಿನದಲ್ಲಿ 2 ರಿಂದ 4 ಸಾವಿರ ಡಾಲರಿನಲ್ಲಿ ಮುಗಿದು ಹೋಗುತ್ತಿದ್ದ ಕೆಲಸಕ್ಕೆ ಇನ್ನು ಮುಂದೆ ಒಂದು ಲಕ್ಷ ಡಾಲರ್ ಖರ್ಚಾಗುತ್ತದೆ.

ಮುಂದಿನ ದಿನಗಳಲ್ಲಿ ಇದರಿಂದ ಭಾರತೀಯರ ಪಾಲಿಗೆ ಎಚ್-1ಬಿ ವೀಸಾ ಮುಚ್ಚಿದಂತಾ ಗಿದೆ. ಕಳೆದ ಮೂರು ದಶಕದ ಹಿಂದೆ ಇಲ್ಲಿನ ಬದುಕಿಗೂ, ಅಲ್ಲಿನ ಬದುಕಿಗೂ ವ್ಯತ್ಯಾಸ ವಿತ್ತು. ಹೀಗಾಗಿ ಅಲ್ಲಿಗೆ ಹೋಗುವುದರಲ್ಲಿ ಅರ್ಥವಿತ್ತು. ಇವತ್ತಿನ ಕಾಲಘಟ್ಟದಲ್ಲಿ ಭಾರತ ದಲ್ಲಿ ಕೂಡ ಹೇರಳ ಅವಕಾಶಗಳಿವೆ. ನಿಜ ಹೇಳಬೇಕೆಂದರೆ ಇಲ್ಲಿನ ವಾತಾವರಣ, ಊಟ, ಬಂಧು- ಬಳಗವನ್ನು ಬಿಟ್ಟು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ಕಷ್ಟ ವಿರಲಿ, ಸುಖವಿರಲಿ ತಕ್ಷಣ ಸ್ಪಂದಿಸುವರ ಸಂಖ್ಯೆ ಕೂಡ ಅಲ್ಲಿ ಕಡಿಮೆ.

ಅಲ್ಲಿಗೆ ಹೋದ ಮರುಗಳಿಗೆ ಸಾಲದ ಖಾತೆ ಶುರುವಾಗುತ್ತದೆ. ಅಲ್ಲಿಗೆ ಹೋದ ತಿಂಗಳಲ್ಲಿ ಕಾರು ಕೊಳ್ಳಬೇಕು ವಿಧಿಯಿಲ್ಲ, ಆದರೆ ಮನೆ? ಮನೆ ಕೊಳ್ಳುವುದು ಅದರಲ್ಲೂ ಸಾಲದಲ್ಲಿ ಮನೆ ಕೊಳ್ಳುವುದು ಉತ್ತಮ ನಿರ್ಧಾರವಲ್ಲ ಎನ್ನುವ ಮಾತನ್ನು ನಾನು ಎಡೆ ಉಲ್ಲೇಖಿಸು ತ್ತಿರುತ್ತೇನೆ. ಆದರೆ ಅಮೆರಿಕ ತಲುಪಿದ ತಕ್ಷಣ ಜನರು ಯೋಚಿಸುವ ರೀತಿಯೇ ಬದಲಾಗಿ ಬಿಡುತ್ತದೆ. ಏಕೆಂದರೆ ಅಲ್ಲಿ ಸಾಲ ಮಾಡುವುದು ಜೀವನದ ಒಂದು ಅವಿಭಾಜ್ಯ ಅಂಗ. ಸಾಲ ಮಾಡಿಲ್ಲದವವನ್ನು ಅಲ್ಲಿ ಪೆದ್ದ ಎಂದು ಪರಿಗಣಿಸಲಾಗುತ್ತದೆ.

ಅಲ್ಲಿನ ಸಮಾಜ ನಿಂತಿರುವುದೇ ಸಾಲದ ಮೇಲೆ. ಸಾಲವಿಲ್ಲದಿದ್ದರೆ ಅಂದರೆ ಕ್ರೆಡಿಟ್ ಹಿಸ್ಟರಿ ಇಲ್ಲದಿದ್ದರೆ ನಿಮ್ಮನ್ನು ಅಲ್ಲಿ ವಿಚಿತ್ರ ಪ್ರಾಣಿಯಂತೆ ಕಾಣಲಾಗುತ್ತದೆ. ಹೀಗಾಗಿ ಸಾಲ ಮಾಡಲೇಬೇಕು ಎನ್ನುವುದು ಆ ದೇಶದ ಅಲಿಖಿತ ನಿಯಮ. ಅಲ್ಲದೆ ಅಲ್ಲಿನ ಹಣಕಾಸು ತಜ್ಞರು ಹೇಳುವ ಕಥೆ ಬೇರೆ ಮಟ್ಟದ್ದು; ಸಾಹುಕಾರನಾದವನು ಸಾಲವನ್ನು ಹೇಗೆ ಬಳಸಿ ಕೊಳ್ಳುತ್ತಾನೆ, ಹೇಗೆ ಮತ್ತಷ್ಟು ಸಾಹುಕಾರನಾಗುತ್ತಾನೆ ಎನ್ನುವುದನ್ನು ವರ್ಣರಂಜಿತವಾಗಿ ಹೇಳುತ್ತಾರೆ.

ಒಂದು ಮನೆಯನ್ನು ಕೊಳ್ಳುವುದರ ಮೂಲಕ ಶುರುವಾದ ಕಥೆ, ಹೇಗೆ ಹತ್ತು, ಇಪ್ಪತ್ತು ಮನೆಯನ್ನು ಕೊಂಡೆ, ಹೇಗೆ ಲಕ್ಷಾಂತರ ಡಾಲರ್ ಗಳಿಸುತ್ತಿದ್ದೇನೆ ಎನ್ನುವುದರ ಮೂಲಕ ಕೊನೆಯಾಗುತ್ತದೆ. ಬಾಡಿಗೆ ಕಟ್ಟುವುದು ದಂಡ, ಹಣ ಪೋಲಾಗುತ್ತದೆ ಎಂದು ನಂಬಿಸ ಲಾಗುತ್ತದೆ.

ಗ್ರಾಹಕನ ತಲೆಗೆ ಮಿಲಿಯನ್ ಡಾಲರಿನ ಸಾಲವನ್ನು ಸರಾಗವಾಗಿ ಕಟ್ಟಲಾಗುತ್ತದೆ. ಟ್ರಂಪ್ ಅಧಿಕಾರಕ್ಕೆ ಬರುವ ಮುನ್ನ ಇದ್ದ ಮನೆಯ ಬೆಲೆಯಲ್ಲಿ 10 ರಿಂದ 30 ಪ್ರತಿಶತ ರಾಜ್ಯದಿಂದ ರಾಜ್ಯಕ್ಕೆ ಕುಸಿತವಾಗಿದೆ. ಅಂದರೆ ಕಳೆದ ನಾಲ್ಕೈದು ವರ್ಷದ ಹಿಂದೆ ಮನೆ ಕೊಂಡವರ ಮುಖಬೆಲೆ ಕುಸಿತವಾಗಿದೆ. ಅಲ್ಲದೆ ಅಂದಿನ ಬಡ್ಡಿದರಕ್ಕೂ ಇಂದಿಗೂ ಆಲ್‌ಮೋಸ್ಟ್ ದುಪ್ಪಟ್ಟಾಗಿದೆ.

2021ರಲ್ಲಿ ಸರಿಸುಮಾರು 3 ಪ್ರತಿಶತವಿದ್ದ ಗೃಹಸಾಲದ ಬಡ್ಡಿ ದರ ಇವತ್ತಿಗೆ 7 ಪ್ರತಿಶತದ ವರೆಗೂ ಹೋಗಿದೆ. ಅಂದರೆ ಮಾಸಿಕ ಐದು ಸಾವಿರ ಡಾಲರ್ ಕಂತು ಕಟ್ಟುತ್ತಿದ್ದವರು ಇವತ್ತಿಗೆ ಹತ್ತು ಸಾವಿರ ಡಾಲರಿಗೂ ಹೆಚ್ಚು ಕಂತಿನ ಹಣವನ್ನು ಕಟ್ಟಬೇಕಾಗುತ್ತದೆ. ಈ ರೀತಿ ಬಡ್ಡಿದರ ಏರಲು ಕೂಡ ಅವರ ವಿತ್ತೀಯ ನೀತಿ ಕಾರಣ. ಗೊತ್ತುಗುರಿಯಿಲ್ಲದೆ ಡಾಲರನ್ನು ಮುದ್ರಿಸಿದ ಫಲವಾಗಿ ಹಣದುಬ್ಬರ ಹೆಚ್ಚಾಗಿದೆ.

ಅಮೆರಿಕದ ಸಾಲ ತೀರಿಸಲಾಗದ ಮಟ್ಟಕ್ಕೆ ಹೋಗಿ ಕುಳಿತಿದೆ. ಅಸಲಿನ ವಿಷಯ ಪಕ್ಕಕ್ಕಿಡಿ, 2025ರಲ್ಲಿ ಅವರು ಸಾಲದ ಮೇಲಿನ ಬಡ್ಡಿ ಲೆಕ್ಕದಲ್ಲಿ ನೀಡಬೇಕಾದ ಹಣದ ಮೊತ್ತವೇ 1 ಟ್ರಿಲಿಯನ್ ಡಾಲರನ್ನು ಮೀರಿಸಿದೆ. ಇದು ಎಷ್ಟು ದೊಡ್ಡ ಮೊತ್ತ ಎಂದು ಅರ್ಥವಾಗ ಬೇಕೆ? ಭಾರತದ ಒಂದು ವರ್ಷದ ಎಲ್ಲಾ ಸರಕು ಮತ್ತು ಸೇವೆಯ ಒಟ್ಟು ಮೌಲ್ಯದ 25 ಪ್ರತಿಶತ! ಹೀಗಾಗಿ ಸಾಧ್ಯವಾದ ಕಡೆಯ ಹಣವನ್ನು ಟ್ರಂಪ್ ಎತ್ತುತ್ತಿದ್ದಾರೆ.

ಇದರ ಜತೆಗೆ ‘ಗೋಲ್ಡನ್ ಕಾರ್ಡ್’ ಎನ್ನುವ ಹೊಸ ಪರವಾನಗಿ ಕೂಡ ನೀಡಲು ಆ ದೇಶ ಬಯಸಿದೆ. ಒಬ್ಬ ವ್ಯಕ್ತಿಗೆ ಹತ್ತು ಲಕ್ಷ ಡಾಲರ್ ಶುಲ್ಕವನ್ನು ವಿಧಿಸಲಾಗಿದೆ. ಉದ್ದಿಮೆದಾರ ರಿಗೆ ಇದು ದುಪ್ಪಟ್ಟು. ಹಣವಿದ್ದವರು, ವ್ಯಾಪಾರ ಮಾಡಬಯಸುವವರು ನಮ್ಮಲ್ಲಿಗೆ ಬನ್ನಿ ಎನ್ನುವುದು ಟ್ರಂಪ್ ಉವಾಚ. ಆದರೆ ಅವರ ದೇಶವನ್ನು ಕಟ್ಟಿದ್ದು ಸಾಮಾನ್ಯ ವಲಸಿಗ ಎನ್ನುವುದನ್ನು ಅವರು ಮರೆತಿದ್ದಾರೆ. ಅದು ಮುಂಬರುವ ವರ್ಷಗಳಲ್ಲಿ ಅಮೆರಿಕಕ್ಕೆ ಗೊತ್ತಾಗುತ್ತದೆ.

ಟ್ರಂಪ್ ಹುಚ್ಚಾಟಕ್ಕೆ ಲಕ್ಷಾಂತರ ಭಾರತೀಯ ಕುಟುಂಬಗಳಲ್ಲಿ ನಿನ್ನೆಯಿಂದಲೇ ತಲ್ಲಣ ಶುರುವಾಗಿತ್ತು. ಒಮ್ಮೆಲೇ ಹೊಸ ಕಾನೂನು ಎನ್ನುವ ವಿಚಾರವನ್ನು ಹೆಚ್ಚಿನ ವಿವರಣೆ ಯಿಲ್ಲದೆ ಹಂಚಿಕೊಂಡ ಕಾರಣ ಲಕ್ಷಾಂತರ ಕುಟುಂಬಗಳು ಶುಕ್ರವಾರದ ರಾತ್ರಿಯನ್ನು ನಿದ್ದೆಯಿಲ್ಲದೆ ಕಳೆದಿವೆ. ಆ ನಂತರದ ದಿನಗಳಲ್ಲಿ ಈ ವಿಚಾರವಾಗಿ ಒಂದಷ್ಟು ನಿಖರತೆಗಳು ಹೊರಬಂದಿವೆ. ಈ ರೀತಿಯ ಹೊಸ ವೀಸಾ ಕಾನೂನು ಈಗ ಇರುವವರಿಗೆ ಅನ್ವಯ ವಾಗುವುದಿಲ್ಲ.

ಅದೇನಿದ್ದರೂ ಹೊಸದಾಗಿ ವೀಸಾಗೆ ಅರ್ಜಿ ಹಾಕುವವರಿಗೆ ಮಾತ್ರ ಎನ್ನಲಾಗಿದೆ. ಹೀಗಿದ್ದೂ ಇದು ಭಾರತೀಯರಿಗೆ ನೋವು ನೀಡುವುದು ಖಚಿತ. ಹೊಸದಾಗಿ ಅಮೆರಿಕದ ಕನಸು ಕಟ್ಟಿಕೊಂಡವರಿಗೆ ಇದರಿಂದ ತೊಂದರೆಯಾಗುತ್ತದೆ. ಜತೆಗೆ ಅಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಹೋದವರಿಗೆ ವಿದ್ಯಾಭ್ಯಾಸ ಮುಗಿದ ನಂತರ ಕೆಲಸ ಸಿಗುವುದಿಲ್ಲ ಎನ್ನುವುದು ಇದರಿಂದ ಖಚಿತವಾಗಿದೆ.

ಹೀಗಾಗಿ ಹಣ, ವೇಳೆ ವ್ಯಯಮಾಡಿ ಅಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಇದು ಹಿನ್ನಡೆ. ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಲಕ್ಷಾಂತರ ರುಪಾಯಿ ಸಾಲ ಮಾಡಿದ್ದ ಪೋಷಕರ ಪಾಲಿಗೂ ಇದು ಕಹಿಸುದ್ದಿಯಾಗಲಿದೆ.

ಅಮೆರಿಕದಲ್ಲಿ ಜೀವನ ಮಾಡುತ್ತಿದ್ದಾರೆ, ಅಲ್ಲಿ ಹಣವನ್ನು ಗಳಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಭಾರತೀಯರು ಕೂಡ ಹಣವಂತರು ಎನ್ನುವುದು ತಪ್ಪು ಕಲ್ಪನೆ. ಮೊದಲೇ ಹೇಳಿದಂತೆ ಅಲ್ಲಿಗೆ ಹೋದ ಮೇಲೆ ಜೀವನಶೈಲಿ ಬದಲಾಗಿ ಹೋಗುತ್ತದೆ. ಅಲ್ಲಿ ದುಡಿಯುವ ವೇತನ ಅಲ್ಲಿನ ಜೀವನಶೈಲಿಗೆ ಸರಿಯಾಗಿ ಬಿಡುತ್ತದೆ.

‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎನ್ನುವ ಮಾತಿನಂತೆ ಇಲ್ಲಿ ಕುಳಿತು ನೋಡುವವರಿಗೆ ಅದೇನೋ ಭ್ರಾಮಕ ಲೋಕದಂತೆ ಕಾಣುತ್ತದೆ. ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಕೆಲಸಕ್ಕೆ ಹೋಗುವುದು ತಪ್ಪು ಎನ್ನುವುದು, ಅಥವಾ ಬೇಡ ಎನ್ನುವುದು ಈ ಬರಹದ ಉದ್ದೇಶವಲ್ಲ.

ನಾವು ಎಲ್ಲಿಗೇ ಹೋಗಲಿ ನಮ್ಮ ಮೂಲವನ್ನು ನಾವು ಮರೆಯುವುದು ಬೇಡ ಎನ್ನುವುದು ಉದ್ದೇಶ. ಇವತ್ತಿಗೆ ಟ್ರಂಪ್ ತಮ್ಮ ಹೊಸ ಕಾನೂನಿನ ಇಂಟರ್‌ಪ್ರಿಟೇಷನ್ ಹೀಗಿದೆ ಎಂದರು. ಅದರಿಂದ ಲಕ್ಷಾಂತರ ಕುಟುಂಬಗಳು ನಿಟ್ಟಿಸಿರುಬಿಟ್ಟವು. ಆಕಸ್ಮಾತ್ ಹೊಸ ವೀಸಾ ನೀತಿ ಎಲ್ಲರಿಗೂ ಅನ್ವಯವಾಗುತ್ತದೆ ಎಂದಿದ್ದರೆ? ಅದೆಷ್ಟೇ ಸಿರಿತನವಿರಲಿ, ಅವಕಾಶಗಳಿರಲಿ ಅದು ನಮ್ಮ ದೇಶವಲ್ಲ. ಕಷ್ಟವೋ ಸುಖವೋ ನಮ್ಮ ದೇಶ ನಮ್ಮದು.

ನಿಜವಾಗಿ ಹೇಳಬೇಕೆಂದರೆ ಅಲ್ಲಿ ಸಂಪಾದಿಸುವ ಹಣದ 25 ಪ್ರತಿಶತ ಹಣದಲ್ಲಿ ಭಾರತ ದಲ್ಲಿ ಅದಕ್ಕಿಂತ ಉತ್ತಮ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಯೋಚಿಸುತ್ತಾ ನಮ್ಮ ದೇಶವನ್ನು ಇನ್ನಷ್ಟು ಉತ್ತಮವಾಗಿಟ್ಟುಕೊಳ್ಳುವ ಹೊಣೆಯನ್ನು ನಾವೆಲ್ಲರೂ ಹೊರ ಬೇಕಿದೆ.

ರಂಗಸ್ವಾಮಿ ಎಂ

View all posts by this author