ಶಿಕ್ಷಕರ ದಿನ
ಪವಿತ್ರ ಎನ್.ಆರ್, ಸಾಗರ
ನಾಳೆ (ಸೆ.5) ಶಿಕ್ಷಕರ ದಿನ. ಮನದಲ್ಲಿ ಅರಿವಿನ ಬೆಳಕು ಬಿತ್ತಿ, ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಬಗ್ಗೆ ಒಂದು ಲೇಖನ ಇಲ್ಲಿದೆ.)
ನಮ್ಮ ದೇಶದ ವೈಶಿಷ್ಟ್ಯವೆಂದರೆ ಗುರು ಶಿಷ್ಯ ಪರಂಪರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು- ಶಿಷ್ಯರ ಸಂಬಂಧಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಗುರು ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ. ಅeನವೆಂಬ ಕತ್ತಲೆ ದೂರ ಮಾಡಿ ಜ್ಞಾನವೆಂಬ ಬೆಳಕನ್ನು ತೋರಿಸುವ ಮಾರ್ಗ ದರ್ಶಕ. ಶಿಷ್ಯ ಎಂದರೆ ಕೇವಲ ಶಾಲೆಯ ವಿದ್ಯಾರ್ಥಿಯಲ್ಲ. ಗುರುವಿನಿಂದ ಜ್ಞಾನ, ಸಂಸ್ಕಾರ, ಶಿಸ್ತು, ಮೌಲ್ಯ ಮತ್ತು ಜೀವನದ ಮಾರ್ಗವನ್ನು ಕಲಿಯುವವನು.
ಅನಾದಿ ಕಾಲದ ಭಾರತದಲ್ಲಿ ಗುರುಕುಲ ಪದ್ಧತಿಯಿತ್ತು. ವಿದ್ಯಾರ್ಥಿಗಳು ಗುರುಗಳ ಆಶ್ರಮ ದಲ್ಲಿಯೇ ವಾಸಿಸುತ್ತಿದ್ದರು. ಗುರುಗಳು ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಜೀವನಕ್ಕೆ ಅಗತ್ಯವಾದ ಕೌಶಲ್ಯಗಳು, ನೈತಿಕ ಮೌಲ್ಯಗಳು, ಶಿಸ್ತು, ಸೇವಾಭಾವ ಮತ್ತು ಕರ್ತವ್ಯಪ್ರeಯನ್ನು ಕಲಿಸುತ್ತಿದ್ದರು. ಜೊತೆಗೆ ಬದುಕಿಗೆ ಅಗತ್ಯವಾದ ಸಂಸ್ಕಾರ, ಜೀವನಮೌಲ್ಯ ಮತ್ತು ಸರಿಯಾದ ವ್ಯಕ್ತಿತ್ವವನ್ನು ರೂಪಿಸಲು ಸೂಕ್ತ ಮಾರ್ಗ ದರ್ಶನವನ್ನೂ ನೀಡುತ್ತಿದ್ದರು. ವಿದ್ಯಾರ್ಥಿಗಳು ಗುರುಗಳನ್ನು ಅಪಾರ ಗೌರವದಿಂದ ಕಾಣುತ್ತಿದ್ದರು. ಗುರುಗಳ ಮಾತನ್ನು ಶ್ರದ್ಧೆಯಿಂದ ಕೇಳಿ, ಅವರು ತಿಳಿಸಿದ ಮಾರ್ಗದಲ್ಲಿ ನಡೆದು ಜೀವನ ರೂಪಿಸಿಕೊಳ್ಳುತ್ತಿದ್ದರು.
ಗುರುಕುಲದಲ್ಲಿ ಗುರು ಮತ್ತು ಶಿಷ್ಯರ ನಡುವೆ ಕೇವಲ ಪಾಠದ ಸಂಬಂಧವಿರಲಿಲ್ಲ. ಅದು ಕುಟುಂಬದಂತೆಯೇ ಇತ್ತು. ವಿದ್ಯಾರ್ಥಿಗಳೂ ಗುರುಗಳ ಸೇವೆ ಮಾಡುತ್ತಿದ್ದರು. ಗುರುಗಳ ಆಶ್ರಮದ ಕೆಲಸಗಳಲ್ಲಿ ಭಾಗವಹಿಸುವ ಮೂಲಕ ಅವರು ಸ್ವಾವಲಂಬನೆ ಮತ್ತು ಶ್ರಮದ ಮಹತ್ವವನ್ನು ಕಲಿಯುತ್ತಿದ್ದರು. ಗುರು-ಶಿಷ್ಯರ ನಡುವೆ ಆತ್ಮೀಯತೆ, ಗೌರವ ಮತ್ತು ವೈಯಕ್ತಿಕ ಸಂಬಂಧಕ್ಕೆ ಹೆಚ್ಚಿನ ಮಹತ್ವವಿತ್ತು. ಆ ಕಾಲ ದಲ್ಲಿದ್ದ ಏಕಲವ್ಯ, ಅರ್ಜುನ ಮತ್ತು ದ್ರೋಣಾಚಾರ್ಯರಂತಹ ಪೌರಾಣಿಕ ಕಥೆಗಳು ಗುರು-ಶಿಷ್ಯರ ಸಂಬಂಧದ ಆಳವನ್ನು ತಿಳಿಸುತ್ತವೆ. ಗುರುಗಳ ಮೇಲಿನ ಶ್ರದ್ಧೆ, ವಿಧೇಯತೆ ಮತ್ತು ಕಲಿಯುವ ಆಸಕ್ತಿ ಅಂದಿನ ಶಿಕ್ಷಣದ ಪ್ರಮುಖ ಲಕ್ಷಣಗಳಾಗಿದ್ದವು.
ಇದನ್ನೂ ಓದಿ: Prashanth Kumar Column: ಜಗತ್ತಿಗೆ ಅರಿವಿನ ಬೆಳಕು ಹಂಚುವವರು
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಪ್ರಾರಂಭವಾದ ಮೆಕಾಲೆ ಶಿಕ್ಷಣ ಪದ್ಧತಿಯು ಗುರು-ಶಿಷ್ಯರ ಸಂಬಂಧವು ಸಾಂಪ್ರದಾಯಿಕ ಭಾರತೀಯ ಗುರುಕುಲ ಪದ್ಧತಿಗಿಂತ ಬಹಳ ಭಿನ್ನವಾಗಿತ್ತು. ಥಾಮಸ್ ಬಾಬಿಂಗ್ಟನ್ ಮೆಕಾಲೆಯ ಶಿಕ್ಷಣದ ಪ್ರಭಾವದಿಂದ ಭಾರತದಲ್ಲಿ ಬ್ರಿಟಿಷ್ ಮಾದರಿಯ ಶಾಲಾ ಶಿಕ್ಷಣ ಕ್ರಮೇಣ ಬಲವಾಯಿತು. ಈ ವ್ಯವಸ್ಥೆಯಲ್ಲಿ ಶಿಕ್ಷಣದ ಮುಖ್ಯ ಉದ್ದೇಶ ಆಡಳಿತಕ್ಕೆ ಅಗತ್ಯವಾದ ವಿದ್ಯಾ ವಂತ ಸಿಬ್ಬಂದಿಯನ್ನು ಸಿದ್ಧಪಡಿಸುವುದಾಗಿತ್ತು.
ಈ ಪದ್ಧತಿಯಲ್ಲಿ ಗುರು-ಶಿಷ್ಯರ ಸಂಬಂಧವು ಹೆಚ್ಚು ಶಾಲಾಕೇಂದ್ರಿತ ಮತ್ತು ಔಪಚಾರಿಕವಾಯಿತು. ಶಿಕ್ಷಕರು ನಿಗದಿತ ಪಠ್ಯಕ್ರಮವನ್ನು ಬೋಧಿಸುವವರಾದರು. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠ ಕಲಿಯುವ ವ್ಯವಸ್ಥೆ ರೂಢಿಯಾಯಿತು. ಪರೀಕ್ಷೆ, ಅಂಕ, ಪ್ರಮಾಣಪತ್ರ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯ ದೊರೆಯಿತು. ಇದರಿಂದ ಗುರು-ಶಿಷ್ಯರ ವೈಯಕ್ತಿಕ ಮತ್ತು ಆತ್ಮೀಯ ಸಂಬಂಧ ವು ಕೆಲವು ಮಟ್ಟಿಗೆ ಕಡಿಮೆಯಾಯಿತು.
ಆದರೂ ಈ ಶಿಕ್ಷಣ ಪದ್ಧತಿಯ ಮೂಲಕ ಆಧುನಿಕ ವಿಜ್ಞಾನ, ಇಂಗ್ಲಿಷ್ ಭಾಷೆ, ತಾರ್ಕಿಕ ಚಿಂತನೆ ಮತ್ತು ಆಧುನಿಕ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಅವಕಾಶ ದೊರೆಯಿತು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುರುವು ಶಿಷ್ಯರಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಶಿಸ್ತು ಮತ್ತು ಸಂಸ್ಕಾರಗಳನ್ನು ತನ್ನ ಬೋಧನೆಯಲ್ಲಿ ಕಲಿಸುತ್ತಿದ್ದ.
ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಗೆ ಬೇಕಾಗುವ ಶಿಕ್ಷಣ ಗುರು ನೀಡುತ್ತಿದ್ದ. ಹಾಗಾಗಿ ಶಾಲೆಯು ಒಬ್ಬ ವ್ಯಕ್ತಿಗೆ ಅಗತ್ಯವಾದ ಜ್ಞಾನ ವನ್ನು ನೀಡುವ ಜೊತೆಗೆ ಜೀವನ ಕೌಶಲ್ಯವನ್ನು ಹಾಗೂ ಸಮಾಜಕ್ಕೆ ಬೇಕಾಗುವ ಎಲ್ಲಾ ತರಹದ ವ್ಯಕ್ತಿಗಳನ್ನು ಅಂದರೆ ಸಾಹಿತಿ, ಕಲೆಗಾರ, ಸಮಾಜಸೇವಕ, ವಿಜ್ಞಾನಿ, ವೈದ್ಯ ಮುಂತಾದವರನ್ನು ಸೃಷ್ಟಿಸುವ ಕೇಂದ್ರವಾಯಿತು. ಹೀಗಾಗಿ, ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ಗುರು-ಶಿಷ್ಯರ ಸಂಬಂಧವು ಗುರುಕುಲದ ಆತ್ಮೀಯ ಸಂಬಂಧದಿಂದ ಶಿಕ್ಷಕ-ವಿದ್ಯಾರ್ಥಿ ಎಂಬ ಔಪಚಾರಿಕ ಸಂಬಂಧದತ್ತ ಬದಲಾಯಿತು ಎಂದು ಹೇಳಬಹುದು.
ಕಾಲ ಬದಲಾದಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾಯಿತು. ಶಿಕ್ಷಣದಲ್ಲಿ ಹೊಸ ಪ್ರಯೋಗ, ಪರಿಕಲ್ಪನೆಯ ಶಿಕ್ಷಣವನ್ನು ನೀಡಲು ಪ್ರಾರಂಭವಾಯಿತು. ಒಂದು ಕಡೆ ಸಾಮಾಜಿಕ, ಆರ್ಥಿಕ, ತಂತ್ರಜ್ಞಾನದಲ್ಲಿ ಆದ ಬದಲಾವಣೆಯು ಗುರುಶಿಷ್ಯರ ಸಂಬಂಧದ ಮೇಲೆ ಅಗಾಧ ಪರಿಣಾಮ ಬೀರಲಾ ರಂಭಿಸಿತು. ಇದೆಲ್ಲದರ ಪರಿಣಾಮ ಗುರು-ಶಿಷ್ಯರ ಸಂಬಂಧದಲ್ಲಿ ಮಹತ್ತರ ಬದಲಾವಣೆಯಾಯಿತು.
ಇಂದಿನ ಡಿಜಿಟಲ್ ಶಿಕ್ಷಣ ಯುಗದಲ್ಲಿ ಗುರು ಮತ್ತು ಶಿಷ್ಯರ ಸಂಬಂಧ ಭಿನ್ನವಾಗಿದೆ. ಶಿಕ್ಷಣದಲ್ಲಿ ತಂತ್ರಜ್ಞಾನ, ಆನ್‌ಲೈನ್ ತರಗತಿಗಳು, ಸ್ಮಾರ್ಟ್ʼಫೋನ್, ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಕೆಯಿಂದ ಗುರು-ಶಿಷ್ಯರ ನಡುವಿನ ಸಂವಹನ ಹೊಸ ರೂಪ ಪಡೆದುಕೊಂಡಿದೆ. ಇಂದು ಗುರು ತರಗತಿಯಲ್ಲಿ ನೇರವಾಗಿ ಬೋಽಸುವುದರ ಜೊತೆಗೆ ಆನ್‌ಲೈನ್ ತರಗತಿಗಳು, ವೀಡಿಯೊ ಪಾಠಗಳು, ಇ-ಪುಸ್ತಕಗಳು ಮತ್ತು ವಿವಿಧ ಶಿಕ್ಷಣ ಆಪ್‌ಗಳ ಮೂಲಕ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಲಿಯುವ ಅವಕಾಶ ಪಡೆಯುತ್ತಿದ್ದಾರೆ.
ಡಿಜಿಟಲ ಶಿಕ್ಷಣದಲ್ಲಿ ಗುರು ಕೇವಲ ಪಾಠ ಬೋಧಿಸುವ ವ್ಯಕ್ತಿಯಾಗಿರದೆ, ಮಾರ್ಗದರ್ಶಕ ಮತ್ತು ಸಲಹೆಗಾರನಾಗಿರುತ್ತಾನೆ. ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ಅಪಾರ ಮಾಹಿತಿ ಪಡೆಯ ಬಹುದಾದ್ದರಿಂದ, ಸರಿಯಾದ ಮಾಹಿತಿ ಆಯ್ಕೆ ಮಾಡಲು ಮತ್ತು ಬಳಸಲು ಗುರುಗಳು ಮಾರ್ಗ ದರ್ಶನ ನೀಡುತ್ತಿದ್ದಾರೆ. ಅದೇ ರೀತಿ, ಶಿಷ್ಯ ಕೇವಲ ಗುರು ಹೇಳುವುದನ್ನು ಮಾತ್ರ ಕೇಳುವವ ನಾಗಿರದೆ, ಸ್ವಯಂ ಕಲಿಕೆಯ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾನೆ. ಪ್ರಶ್ನೆ ಕೇಳುವುದು, ಚರ್ಚೆ ಗಳಲ್ಲಿ ಭಾಗವಹಿಸುವುದು ಮತ್ತು ಕಲಿತ ವಿಷಯವನ್ನು ಪ್ರಾಯೋಗಿಕವಾಗಿ ಬಳಸುವುದು ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ.
ಇಂದಿನ ಡಿಜಿಟಲ ಶಿಕ್ಷ ಪದ್ಧತಿಯಲ್ಲಿ ಗುರು ಶಿಷ್ಯರ ಸಂಬಂಧ ಹೆಚ್ಚು ಹೆಚ್ಚು ಔಪಚಾರಿಕವಾಗುತ್ತಿದೆ ಯೆನೋ ಎಂಬ ಭಾವನೆ ಮೂಡುತ್ತಿದೆ. ಕೆಲವು ಮುಖಾಮುಖಿ ಸಂವಹನ ಕಡಿಮೆಯಾಗುವು ದರಿಂದ ಆತ್ಮೀಯತೆ ಕಡಿಮೆಯಾಗುತ್ತಿದೆ. ಗುರು ಶಿಷ್ಯರ ನಡುವಿನ ಗೌರವ, ವಿಶ್ವಾಸ, ಪ್ರೀತಿ ಮತ್ತು ಉತ್ತಮ ಸಂವಹನ ಕಡಿಮೆಯಾಗುತ್ತಿದೆ. ತಂತ್ರಜ್ಞಾನವು ಗುರುವನ್ನು ಬದಲಿಸುವ ಸಾಧನವಾಗು ತ್ತಿರುವುದು ಕಳವಳಕರ ಸಂಗತಿ.
ಇಂದಿನ ಎಐ ಯುಗದಲ್ಲಿ ಗುರು ಮತ್ತು ಶಿಷ್ಯರ ನಡುವೆ ಅಧಿಕಾರದ ಸಂಬಂಧಕ್ಕಿಂತ ಸಹಕಾರದ ಸಂಬಂಧ ಹೆಚ್ಚು ಅಗತ್ಯವಾಗಿದೆ. ಗುರುವು ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಯೂ ಗುರುವಿನ ಅನುಭವ ಮತ್ತು ಜ್ಞಾನವನ್ನು ಗೌರವಿಸಿ, ತಂತ್ರಜ್ಞಾನದ ನೆರವಿನಿಂದ ತನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಮಾನವೀಯ ಸ್ಪರ್ಶ, ಪ್ರೀತಿ, ವಿಶ್ವಾಸ, ಸಹಾನುಭೂತಿ ಮತ್ತು ನೈತಿಕ ಮೌಲ್ಯಗಳನ್ನು ಎಐ ನೀಡಲು ಸಾಧ್ಯವಿಲ್ಲ. ಆದ್ದರಿಂದ ತಂತ್ರಜ್ಞಾನ ಬೆಳೆಯುತ್ತಿದ್ದರೂ ಗುರು-ಶಿಷ್ಯರ ನಡುವಿನ ಮಾನವೀಯ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು.
ಗುರು ಶಿಷ್ಯರ ಸಂಬಂಧದಲ್ಲಿ ಇಷ್ಟೆ ಬೆಳವಣಿಗೆಗಳಾದರೂ ಗುರುವಿಲ್ಲದ ವಿದ್ಯೆ ವಿದ್ಯೆಯೆ ಅಲ್ಲ ಎಂಬ ನಂಬಿಕೆ ಮಾತ್ರ ಬದಲಾಗಿಲ್ಲ. ಹಾಗಾಗಿ ಗುರುಶಿಷ್ಯರ ಸಂಬಂಧ ಹೊಸ ರೀತಿಯ ಸಂಬಂಧ ವಾಗಿ ಬದಲಾಗುವ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ.