ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pavan Kumar Shirva Column: ಚಕ್ರವರ್ತಿ ಬಲೀಂದ್ರ ಭೂಲೋಕಕ್ಕೆ ಬರುವ ದಿನ

ಬಲಿಪಾಡ್ಯಮಿಯಂದು, ತುಳಸಿಕಟ್ಟೆಯ ಬಳಿ ಗೋಮಯದಿಂದ ಏಳು ಸುತ್ತಿನ ಕೋಟೆಯನ್ನು ಕಟ್ಟ ಲಾಗುತ್ತದೆ. ಈ ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. ಮನೆಬಾಗಿಲಿನ ಹೊಸ್ತಿಲನ್ನು ದಾಟಿ ಯಾವುದೇ ದುಷ್ಟ ಶಕ್ತಿಗಳು ಒಳಗೆ ಪ್ರವೇಶಿಸದಂತೆ, ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ.

ಚಕ್ರವರ್ತಿ ಬಲೀಂದ್ರ ಭೂಲೋಕಕ್ಕೆ ಬರುವ ದಿನ

-

Ashok Nayak Ashok Nayak Oct 23, 2025 7:19 AM

ತನ್ನಿಮಿತ್ತ

ಪವನ್‌ ಕುಮಾರ್‌ ಶಿರ್ವ

ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸವು ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ. ಕರ್ನಾಟಕದಲ್ಲಿ ದೀಪಾವಳಿಯನ್ನು ಮೂರು ದಿನ ಆಚರಿಸುವುದು ವಾಡಿಕೆ. ಇದರಲ್ಲಿ, ಮೊದಲ ದಿನ ನರಕ ಚತುರ್ದಶಿ, ಎರಡನೇ ದಿನ ಅಮಾವಾಸ್ಯೆ ಹಾಗೂ ಮೂರನೆಯ ದಿನ ಬಲಿಪಾಡ್ಯಮಿ ಆಗಿರುತ್ತದೆ.

ಬಲಿಪಾಡ್ಯಮಿಯಂದು ಆರಂಭಗೊಳ್ಳುವ ಕಾರ್ತಿಕ ಮಾಸವು, ಲಕ್ಷ ದೀಪೋತ್ಸವವು ಕೊನೆಯಾಗು ವವರೆಗೂ ಬೆಳಗುವಂಥ ಕಾಲಘಟ್ಟವಾಗಿರುತ್ತದೆ. ಬಲಿಪಾಡ್ಯಮಿಯ ದಿನದಂದು ಬಲೀಂದ್ರನನ್ನು ಪೂಜಿಸುವ ಪದ್ಧತಿಯಿದೆ. ಬಲಿಯು ಸದ್ಗುಣಶೀಲ ರಾಜನಾಗಿದ್ದು, ತನ್ನ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಆದರೆ, ಆತನ ಸುತ್ತಮುತ್ತಲಿನ ಜನರು ರಾಕ್ಷಸ ಪ್ರವೃತ್ತಿಯನ್ನು ಹೊಂದಿ ದವರಾಗಿದ್ದರು.

ಅವರಿಂದ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದಕ್ಕೆ ಬಲಿಯು ಪರೋಕ್ಷವಾಗಿ ಕಾರಣ ನಾಗಿದ್ದ. ಈ ದುಷ್ಟರ ಸಂಹಾರಕ್ಕಾಗಿ ವಿಷ್ಣುವು ವಾಮನ ಅವತಾರವನ್ನು ತಾಳಿ ಭೂಮಿಗೆ ಬರುತ್ತಾನೆ ಹಾಗೂ ರಾಜ ಬಲಿಯ ಬಳಿ ಬಂದು ದಾನವನ್ನು ಕೇಳುತ್ತಾನೆ. ಕೊಡುಗೈ ದೊರೆಯಾದ ಬಲಿಯು ವಾಮನನಿಗೆ, “ನಿನಗೆ ಏನು ಬೇಕೋ ಕೇಳು" ಎನ್ನುತ್ತಾನೆ.

ಇದನ್ನೂ ಓದಿ: Deepavali Pooje: ಅಮಾವಾಸ್ಯೆಯಂದೇ ಧನಲಕ್ಷ್ಮೀ ಪೂಜೆ ಏಕೆ ಮಾಡಬೇಕು?

ಆಗ ವಾಮನ, “ನನಗೆ ಮೂರು ಹೆಜ್ಜೆಗಳನ್ನಿಡುವಷ್ಟು ಜಾಗವನ್ನು ಕೊಡು" ಎಂದು ಕೇಳುತ್ತಾನೆ. ಅಂತೆಯೇ ದಾನ ಸಿಕ್ಕಾಗ, ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಲೋಕವನ್ನೇ ಆಕ್ರಮಿಸಿ, ಎರಡನೇ ಹೆಜ್ಜೆಯಿಂದ ಆಕಾಶವನ್ನೂ ಆಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿಡಲೆಂದು ಪ್ರಶ್ನಿಸಿದಾಗ, ತನ್ನ ತಲೆಯನ್ನೇ ತೋರುತ್ತಾನೆ ಬಲಿ. ಆಗ ವಾಮನನು ಬಲಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳ ಲೋಕಕ್ಕೆ ತಳ್ಳುತ್ತಾನೆ.

ಬಲಿಪಾಡ್ಯಮಿಯಂದು, ತುಳಸಿಕಟ್ಟೆಯ ಬಳಿ ಗೋಮಯದಿಂದ ಏಳು ಸುತ್ತಿನ ಕೋಟೆಯನ್ನು ಕಟ್ಟಲಾಗುತ್ತದೆ. ಈ ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. ಮನೆಬಾಗಿಲಿನ ಹೊಸ್ತಿಲನ್ನು ದಾಟಿ ಯಾವುದೇ ದುಷ್ಟ ಶಕ್ತಿಗಳು ಒಳಗೆ ಪ್ರವೇಶಿಸದಂತೆ, ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ.

ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡು ತ್ತಾರೆ. ತುಳುನಾಡು ಮತ್ತು ಕರಾವಳಿಯ ಸುತ್ತಮುತ್ತಲ ಪ್ರದೇಶದಲ್ಲಿ ಬಲೀಂದ್ರನನ್ನು ರಚಿಸಿ, ತುಳಸಿಕಟ್ಟೆಯ ಸಮೀಪ ನಿಲ್ಲಿಸಿ, “ಬಲೀಂದ್ರ ಬಲೀಂದ್ರ, ಕೂ ಕೂ ಬಲೀಂದ್ರ" ಎಂದು ಮೂರು ಬಾರಿ ಕರೆದು ಪೂಜೆ ಮಾಡಿ ಪಾತಾಳಲೋಕಕ್ಕೆ ಕಳುಹಿಸಿಕೊಡುವ ಸಂಪ್ರದಾಯವನ್ನು ಪಾಲಿಸು ತ್ತಾರೆ.

ಮಲೆನಾಡಿನಲ್ಲಿ ಬಲಿಪಾಡ್ಯಮಿಯಂದು ಬೆಳಗ್ಗೆಯೇ ದನದ ಕೊಟ್ಟಿಗೆಯನ್ನು ತೊಳೆದು, ಸಗಣಿ ಯಿಂದ ಗಣಪತಿಯನ್ನು ಮಾಡಿ ಹೂವಿನಿಂದ ಸಿಂಗರಿಸುತ್ತಾರೆ. ಕಂಚಿಕಡ್ಡಿ, ಬ್ರಹ್ಮದಂಡೆ ಗಿಡಗಳನ್ನು ತಂದು ಜಡೆಯಂತೆ ಹೆಣೆದು, ಕೊಟ್ಟಿಗೆಯಲ್ಲಿನ ಸಗಣಿ ಬೆನಕನ ಪಕ್ಕದಲ್ಲಿ ಇಡುತ್ತಾರೆ. ಎಲ್ಲಾ ಹಸುಗಳ ಮೈತೊಳೆದು ಹೂಹಾರ ಹಾಕಿ ಪೂಜಿಸುತ್ತಾರೆ. ಹಣ್ಣು ತುಂಬಿದ ಎಡೆಯನ್ನು ನೈವೇದ್ಯ ಮಾಡುತ್ತಾರೆ.

(ಲೇಖಕರು ಚಿಂತಕರು)