ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಚಿರಂಜೀವಿ, ಮಹಾತಪಸ್ವಿ ಶ್ರೀ ಪರಶುರಾಮರ ದಿವ್ಯ ಚರಿತ್ರೆ

ಅಂದಿನಿಂದ ಇವರು ‘ಪರಶುರಾಮ’ರೆಂದು ಜಗತ್ಪ್ರಸಿದ್ಧರಾದರು. ಒಮ್ಮೆ ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಛೇದ ಮಾಡಿ, ಬಳಿಕ ತಂದೆಯಿಂದ ವರ ಪಡೆದು ತಾಯಿ ಮತ್ತು ಸಹೋದರರನ್ನು ಮರಳಿ ಬದುಕಿಸುವ ಮೂಲಕ ಅಪ್ರತಿಮ ಮಾತೃ ಮತ್ತು ಪಿತೃ ಭಕ್ತಿಯನ್ನು ಜಗತ್ತಿಗೆ ಸಾರಿದರು. ಆ ಕಾಲದಲ್ಲಿ ಹೈಹಯ ವಂಶದ ಕಾರ್ತ ವೀರ್ಯಾರ್ಜುನ ಎಂಬ ದುಷ್ಟ ದೊರೆ ಸಾವಿರ ತೋಳುಗಳ ಬಲದಿಂದ ಅಹಂಕಾರಿಯಾಗಿದ್ದ

ಚಿರಂಜೀವಿ, ಮಹಾತಪಸ್ವಿ ಶ್ರೀ ಪರಶುರಾಮರ ದಿವ್ಯ ಚರಿತ್ರೆ

-

ಒಂದೊಳ್ಳೆ ಮಾತು

ಸಪ್ತರ್ಷಿಗಳಲ್ಲಿ ಅಗ್ರಗಣ್ಯರಾದ ಜಮದಗ್ನಿ ಮಹರ್ಷಿ ಹಾಗೂ ರೇಣುಕಾ ದೇವಿಯ ಪುತ್ರನಾಗಿ ಜನಿಸಿದ ಪರಶುರಾಮರ ಮೂಲ ಹೆಸರು ‘ರಾಮ’. ಭೃಗು ವಂಶದ ಕುಡಿಯಾದ ಇವರು, ಹುಟ್ಟಿ ನಿಂದಲೇ ಹಣೆಯಲ್ಲಿ ವೈಷ್ಣವ ಚಿಹ್ನೆ ಮತ್ತು ಕೈಯಲ್ಲಿ ಕೊಡಲಿಯ ಗುರುತನ್ನು ಹೊಂದಿದ್ದರು. ಬಾಲ್ಯದಲ್ಲಿಯೇ ಪರಶಿವನನ್ನು ಕುರಿತು ಘೋರ ತಪಸ್ಸು ಆಚರಿಸಿದ ಇವರ ಭಕ್ತಿಗೆ ಮೆಚ್ಚಿದ ಶಿವನು, ತನ್ನ ಅಮೋಘವಾದ ‘ಪರಶು’ ದಯಪಾಲಿಸಿದ. ಜೊತೆಗೆ ಸಮಸ್ತ ಅಸ್ತ್ರ-ಶಸ್ತ್ರ ವಿದ್ಯೆಗಳನ್ನೂ ಧಾರೆಯೆರೆದ.

ಅಂದಿನಿಂದ ಇವರು ‘ಪರಶುರಾಮ’ರೆಂದು ಜಗತ್ಪ್ರಸಿದ್ಧರಾದರು. ಒಮ್ಮೆ ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಛೇದ ಮಾಡಿ, ಬಳಿಕ ತಂದೆಯಿಂದ ವರ ಪಡೆದು ತಾಯಿ ಮತ್ತು ಸಹೋದರರನ್ನು ಮರಳಿ ಬದುಕಿಸುವ ಮೂಲಕ ಅಪ್ರತಿಮ ಮಾತೃ ಮತ್ತು ಪಿತೃ ಭಕ್ತಿಯನ್ನು ಜಗತ್ತಿಗೆ ಸಾರಿದರು. ಆ ಕಾಲದಲ್ಲಿ ಹೈಹಯ ವಂಶದ ಕಾರ್ತ ವೀರ್ಯಾರ್ಜುನ ಎಂಬ ದುಷ್ಟ ದೊರೆ ಸಾವಿರ ತೋಳುಗಳ ಬಲದಿಂದ ಅಹಂಕಾರಿಯಾಗಿದ್ದ. ಒಮ್ಮೆ ಆತ ಜಮದಗ್ನಿ ಆಶ್ರಮಕ್ಕೆ ನುಗ್ಗಿ, ಆಶ್ರಮದ ಕಾಮಧೇನು ವನ್ನು ಬಲವಂತ ವಾಗಿ ಅಪಹರಿಸಿ, ಮಹರ್ಷಿ ಜಮದಗ್ನಿಯನ್ನು ನಿರ್ದಯವಾಗಿ ಕೊಂದನು.

ಪತಿಯ ಅಗಲಿಕೆಯಿಂದ ತಾಯಿ ರೇಣುಕಾ ಮಾತೆ 21 ಬಾರಿ ಎದೆ ಬಡಿದುಕೊಂಡು ರೋಧಿಸಿದಳು. ತಾಯಿಯ ಕಣ್ಣೀರು ಪರಶುರಾಮರ ಎದೆಯಲ್ಲಿ ಜ್ವಾಲಾಮುಖಿಯಂತೆ ಸಿಡಿಯಿತು. ಇದರಿಂದ ಕೆರಳಿದ ಅವರು, ಈ ಭೂಮಿಯಿಂದ ದುಷ್ಟ ಕ್ಷತ್ರಿಯರನ್ನು 21 ಬಾರಿ ನಿರ್ಮೂಲನೆ ಮಾಡುತ್ತೇನೆ ಎಂದು ಘೋರ ಪ್ರತಿe ಮಾಡಿದರು. ತನ್ನ ದಿವ್ಯ ಪರಶುವಿನಿಂದ ಕಾರ್ತವೀರ್ಯಾರ್ಜುನನ ಸಾವಿರ ತೋಳುಗಳನ್ನು ಕತ್ತರಿಸಿ ಸಂಹರಿಸಿದ ಅವರು, 21 ಬಾರಿ ಭೂಪ್ರದಕ್ಷಿಣೆ ಮಾಡಿ ಅಹಂಕಾರಿ ಕ್ಷತ್ರಿಯ ರನ್ನು ಸದೆಬಡಿದರು.

ಇದನ್ನೂ ಓದಿ: Roopa Gururaj Column: ದೇವಕಿ ಅಮ್ಮ: ಕೇರಳದ ವನಮಾತೆಯ ಸ್ಪೂರ್ತಿದಾಯಕ ಕಥೆ

ಭಯಂಕರವಾದ ಕ್ಷತ್ರಿಯ ಸಂಹಾರದ ಬಳಿಕ, ಆ ಪಾಪದ ಪರಿಹಾರಕ್ಕಾಗಿ ತಾವು ಗೆದ್ದ ಇಡೀ ಭೂಮಂಡಲ ವನ್ನೇ ಕಶ್ಯಪ ಮಹರ್ಷಿಗೆ ದಾನ ಮಾಡಿದರು. ತಾವು ದಾನ ನೀಡಿದ ಭೂಮಿಯಲ್ಲಿ ತಾವೇ ವಾಸಿಸಬಾರದೆಂಬ ಋಷಿ ವಾಕ್ಯದಂತೆ, ತಮಗಾಗಿ ಹೊಸ ನಾಡೊಂದನ್ನು ಸೃಷ್ಟಿಸಲು ಸಂಕಲ್ಪ ಮಾಡಿದರು. ಕರಾವಳಿಯ ಗೋಕರ್ಣದ ಬಳಿ ನಿಂತು, ಸಮುದ್ರರಾಜನನ್ನು ಹಿಂದಕ್ಕೆ ಸರಿಯುವಂತೆ ಆಜ್ಞಾಪಿಸಿ, ತಮ್ಮ ಕೈಲಿದ್ದ ದಿವ್ಯ ಪರಶುವನ್ನು ದಕ್ಷಿಣದ ಕಡೆಗೆ ಎಸೆದರು. ಆ ಕೊಡಲಿ ಬಿದ್ದಲ್ಲಿಯ ವರೆಗೆ ಸಮುದ್ರವು ವಿನಯದಿಂದ ಹಿಂದೆ ಸರಿಯಿತು.

ಗೋಕರ್ಣದಿಂದ ಕನ್ಯಾಕುಮಾರಿವ ರೆಗಿನ ಹಚ್ಚಹಸಿರಿನ, ನಯನಮನೋಹರ ಕರಾವಳಿ ತೀರವು ಹೀಗೆ ನಿರ್ಮಾಣವಾಯಿತು. ಇದನ್ನೇ ನಾವು ಇಂದಿಗೂ ‘ಪರಶುರಾಮ ಸೃಷ್ಟಿ’ ಎನ್ನುತ್ತೇವೆ. ಹೊಸ ದಾಗಿ ಸೃಷ್ಟಿಯಾದ ಕರಾವಳಿಯ ಮಣ್ಣು ಉಪ್ಪುಮಯವಾಗಿತ್ತು, ಹಾಗೂ ಕೃಷಿಗೆ ಯೋಗ್ಯವಾಗಿರ ಲಿಲ್ಲ. ಜನವಾಸಕ್ಕೆ ಕಷ್ಟವಾಗಿದ್ದ ಆ ಸಮಯದಲ್ಲಿ, ಪರಶುರಾಮರು ನಾಗರಾಜ ವಾಸುಕಿಯನ್ನು ಪ್ರಾರ್ಥಿಸಿದರು.

ಒಲಿದು ಬಂದ ನಾಗರಾಜನು ತನ್ನ ಪರಿವಾರದೊಡನೆ ಮಣ್ಣಿನ ಉಪ್ಪನ್ನು ಹೀರಿ, ಭೂಮಿಯನ್ನು ಅತಿಶಯವಾಗಿ ಫಲವತ್ತಾಗಿಸಿದ. ಇದಕ್ಕೆ ಕೃತಜ್ಞತೆಯಾಗಿ ನಾಗಗಳೇ ಈ ಭೂಮಿಯ ಮೂಲ ಒಡೆಯರು ಎಂದು ಪರಶುರಾಮರು ವರ ನೀಡಿದರು. ಆದ್ದರಿಂದಲೇ ಕರಾವಳಿಯಲ್ಲಿ ಮನೆಗೊಂದು ನಾಗಬನ, ನಾಗಮಂಡಲ ಹಾಗೂ ಆಶ್ಲೇಷಾಬಲಿ ಯಂತಹ ಆರಾಧನೆಗಳು ಇಂದಿಗೂ ಚಾಲ್ತಿ ಯಲ್ಲಿವೆ. ಹಾಗೆಯೇ, ದುಷ್ಟ ಶಕ್ತಿಗಳಿಂದ ತುಂಬಿದ್ದ ಈ ಹೊಸ ಭೂಮಿಯ ರಕ್ಷಣೆಗಾಗಿ ಪಂಜುರ್ಲಿ, ಗುಳಿಗ, ಕೋಟಿ-ಚೆನ್ನಯ, ಜುಮಾದಿ ಮುಂತಾದ ಶಿವ ಮತ್ತು ದೇವಿಯ ಅಂಶದ ಶಕ್ತಿಗಳನ್ನು ನೇಮಿಸಿದರು.

ನ್ಯಾಯ- ಧರ್ಮದಿಂದ ಇರಬೇಕು, ಕೆಟ್ಟದ್ದನ್ನು ಶಿಕ್ಷಿಸಿ, ಒಳ್ಳೆಯದನ್ನು ರಕ್ಷಿಸಬೇಕು ಎಂದು ‘ಪರಶು ರಾಮನ ಕಟ್ಟಲೆ’ಯನ್ನು ವಿಧಿಸಿದರು. ಇದುವೇ ಇಂದಿನ ತುಳುನಾಡಿನ ದೈವಾರಾಧನೆ ಮತ್ತು ಭೂತಾರಾಧನೆಗೆ ನಾಂದಿಯಾಯಿತು. ಈ ಪವಿತ್ರ ಭೂಮಿಯಲ್ಲಿ ಆಧ್ಯಾತ್ಮವನ್ನು ನೆಲೆ ಗೊಳಿಸಲು ಪರಶುರಾಮರು ಅನೇಕ ಮಹಾನ್ ದೇವಾಲಯಗಳನ್ನು ಸ್ಥಾಪಿಸಿದರು.

ಕರ್ನಾಟಕದ ಕರಾವಳಿ ಯಲ್ಲಿ ಕೊಲ್ಲೂರು, ಉಡುಪಿ, ಕುಕ್ಕೆ ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರ ನಾರಾಯಣ ಮತ್ತು ಗೋಕರ್ಣ ಎಂಬ ಏಳು ‘ಸಪ್ತ ಮುಕ್ತಿ ಸ್ಥಳ’ಗಳನ್ನು ನಿರ್ಮಿಸಿದರು. ಕೇರಳ ದಲ್ಲಿ 108 ಶಿವಾಲಯಗಳು, 108 ದುರ್ಗಾ ದೇವಾಲಯಗಳನ್ನು ಮತ್ತು ಅಯ್ಯಪ್ಪ ಸ್ವಾಮಿಯ ಜೀವನದ 5 ಹಂತಗಳನ್ನು ಪ್ರತಿನಿಧಿಸುವ ಶಬರಿ ಮಲೆ ಸೇರಿದಂತೆ ಪಂಚ ಶಾಸ್ತಾ ಕ್ಷೇತ್ರಗಳನ್ನು ತಮ್ಮ ಕೈಯಾರೆ ಪ್ರತಿಷ್ಠಾಪಿಸಿದರು.

ಗಣೇಶನ ದಂತ ಮುರಿದು ಏಕದಂತನಾಗಲು ಕಾರಣರಾದ, ಮಹಾಭಾರತದ ವೀರರಾದ ಭೀಷ್ಮ, ದ್ರೋಣ ಮತ್ತು ಕರ್ಣರಿಗೆ ಅಸ್ತ್ರವಿದ್ಯೆ ಧಾರೆಯೆರೆದ ಪರಶುರಾಮರು ಸಪ್ತ ಚಿರಂಜೀವಿಗಳಲ್ಲಿ ಒಬ್ಬರು. ಅವರು ಎಸೆದ ಕೊಡಲಿಯು ಇಂದಿಗೂ ಕನ್ಯಾಕುಮಾರಿಯ ಪರಶು ತೀರ್ಥದಲ್ಲಿ ಬಂಡೆಯ ರೂಪದಲ್ಲಿದೆ ಎಂದು ನಂಬ ಲಾಗಿದೆ. ಕಲಿಯುಗದಲ್ಲಿ ಪರಶುರಾಮರು ಇಂದಿಗೂ ಒಡಿಶಾದ ಮಹೇಂದ್ರಗಿರಿ ಪರ್ವತ ದಲ್ಲಿ ಘೋರ ತಪಸ್ಸಿನಲ್ಲಿದ್ದು, ಕಲಿಯುಗದ ಅಂತ್ಯದಲ್ಲಿ ಅವತರಿಸುವ ಕಲ್ಕಿ ದೇವರಿಗೆ ಗುರು ವಾಗಲಿzರೆ ಎಂದು ಪುರಾಣಗಳು ಸಾರುತ್ತವೆ. ಪರಶುರಾಮರ ಕಥೆಯು ಕೇವಲ ಒಂದು ಪೌರಾಣಿಕ ಇತಿಹಾಸವಲ್ಲ; ಅದು ಕರಾವಳಿ ಮತ್ತು ಮಲೆನಾಡಿನ ಜನರ ಸಂಸ್ಕೃತಿ, ಆರಾಧನಾ ಕ್ರಮ, ಮತ್ತು ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ.