Hari Paraak Column: ನಾಣ್ಯ ಸಂಗ್ರಹ ಮಾಡೋ ಹವ್ಯಾಸ- ಚಿಲ್ರೆ ಶೋಕಿ
ನೀಡಿದ್ದಾರೆ. ಈ ಮೂಲಕ ಅವರು ಶಾಂತಿಮಂತ್ರದ ಬಟನ್ ಅನ್ನು ಪ್ರೆಸ್ ಮಾಡಿದ್ದಾರೆ. ಕಳೆದ ಬಾರಿ ತಮ್ಮ ಮಾತಿನಿಂದಲೇ ಸದ್ದು ಮಾಡಿದ್ದ ಅವರು ಈಗ ರಾಮರಸ ಚಿತ್ರದ ಹಾಡು ಬಿಡುಗಡೆ ಮಾಡುತ್ತೇನೆ ಬನ್ನಿ ಎಂದಿದ್ದಾರೆ. ಅಲ್ಲದೆ ಮತ್ತೊಮ್ಮೆ ಎಲ್ಲ ಮಾಧ್ಯಮದವರ ಕ್ಷಮೆಯಾಚಿಸಿ ವಿಡಿಯೋ ಮಾಡಿ ಕಳಿಸಿzರೆ. ಅವತ್ತು ಯೋಚಿಸಿ ಮಾತಾಡಿದ್ದಿದ್ದರೆ ಇಂದು ಅವರಿಗೆ ಕ್ಷಮೆಯಾಚಿಸುವ ಪರಿಸ್ಥಿತಿ ಬರ್ತಾ ಇರಲಿಲ್ಲ ಅನ್ನೋದೇನೋ ನಿಜ
-
ತುಂಟರಗಾಳಿ
ಸಿನಿಗನ್ನಡ
ನಿರ್ಮಾಪಕ ಕಮ್ ನಿರ್ದೇಶಕ ಗುರುದೇಶಪಾಂಡೆ ಈಗ ಮತ್ತೊಮ್ಮೆ ಮಾಧ್ಯಮದವರ ಪಾಲಿಗೆ ಸಖ ಆಗಿದ್ದಾರೆ. ಇತ್ತೀಚೆಗೆ ತಾನೇ ರಾಮರಸ ಚಿತ್ರದ ಪತ್ರಿಕಾಗೋಷ್ಠಿ ಒಂದರಲ್ಲಿ ನನಗೆ ಟಿವಿ, ಪೇಪರ್ ಯಾವುದೂ ಬೇಡ, ಯೂಟ್ಯೂಬರ್ಗಳು, ಸೋಷಿಯಲ್ ಮೀಡಿಯಾಗಳೇ ಸಾಕು ಅಂದಿದ್ದ ಅವರು ಈಗ ಯೂಟರ್ನ್ ಹೊಡೆದು ಮತ್ತೊಂದು ಪ್ರೆಸ್ಮೀಟ್ ಕರೆದು ಎಲ್ಲ ಪ್ರೆಸ್ನವರಿಗೂ ಆಹ್ವಾನ ನೀಡಿದ್ದಾರೆ. ಈ ಮೂಲಕ ಅವರು ಶಾಂತಿಮಂತ್ರದ ಬಟನ್ ಅನ್ನು ಪ್ರೆಸ್ ಮಾಡಿದ್ದಾರೆ.
ಕಳೆದ ಬಾರಿ ತಮ್ಮ ಮಾತಿನಿಂದಲೇ ಸದ್ದು ಮಾಡಿದ್ದ ಅವರು ಈಗ ರಾಮರಸ ಚಿತ್ರದ ಹಾಡು ಬಿಡುಗಡೆ ಮಾಡುತ್ತೇನೆ ಬನ್ನಿ ಎಂದಿದ್ದಾರೆ. ಅಲ್ಲದೆ ಮತ್ತೊಮ್ಮೆ ಎಲ್ಲ ಮಾಧ್ಯಮದವರ ಕ್ಷಮೆಯಾಚಿಸಿ ವಿಡಿಯೋ ಮಾಡಿ ಕಳಿಸಿzರೆ. ಅವತ್ತು ಯೋಚಿಸಿ ಮಾತಾಡಿದ್ದಿದ್ದರೆ ಇಂದು ಅವರಿಗೆ ಕ್ಷಮೆಯಾಚಿಸುವ ಪರಿಸ್ಥಿತಿ ಬರ್ತಾ ಇರಲಿಲ್ಲ ಅನ್ನೋದೇನೋ ನಿಜ. ಆದರೆ ಈಗ ಆಗಿದ್ದು ಆಗಿಹೋಯ್ತು ಅಂತನೋ ಅಥವಾ ಆಗಿದ್ದು ಆಗ್ಲಿ ಅಂತಾನೋ ಒಟ್ಟಿನಲ್ಲಿ ಅವರು ಮತ್ತೆ ಬಿಳಿ ಬಾವುಟ ಹಾರಿಸಿ ಸಂಧಾನಕ್ಕೆ ಮುಂದಾಗಿದ್ದಾರೆ.
ಈ ಮೂಲಕ ಮಾಧ್ಯಮದವರನ್ನು ಸಮಾಧಾನ ಮಾಡುತ್ತಿದ್ದಾರೆ. ಆದರೆ ಕಳೆದ ಬಾರಿ ಪತ್ರಿಕೋಗೋಷ್ಠಿಗೆ ಬಾರದೇ ಇದ್ದ ಚಿತ್ರದ ನಿರ್ದೇಶಕ ಗಿರಿರಾಜ್ ಅವರಿಂದಲೇ ಅಷ್ಟೆ ಅವಾಂತರ ನಡೆದಿದ್ದು. ಮುಂದಿನ ಪ್ರೆಸ್ಮೀಟ್ ಗಳಿಗೆ ಅವರು ಬರ್ತಾರೆ ಅಂತ ಗುರುದೇಶಪಾಂಡೆ ಹೇಳಿದ್ದರು. ಈಗ ರಾಮರಸ ಚಿತ್ರದ ಮುಂದಿನ ಪ್ರೆಸ್ಮೀಟ್ಗಾದ್ರೂ ಗಿರಿರಾಜ್ ಅವರು ಬರ್ತಾರಾ, ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡ್ತಾರಾ ಅಥವಾ ಮತ್ತೆ ಗೈರು ಹಾಜರಾಗುವ ಮೂಲಕ ಗುರು ದೇಶಪಾಂಡೆ ಮತ್ತು ಮಾಧ್ಯಮದವರ ಮಧ್ಯೆ ಮತ್ತೆ ಹುಳಿರಸ ಹಿಂಡುವ ಕೆಲಸ ಮಾಡ್ತಾರಾ ಅನ್ನೋದು ಸದ್ಯದ ಪ್ರಶ್ನೆ.
ಲೂಸ್ ಟಾಕ್ –ಸ್ಯಾಂಡಲ್ʼವುಡ್ ಡೈರೆಕ್ಟರ್
ಏನ್ ಸಾರ್ ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?
- ಅಯ್ಯೋ, ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀ.
ರೀ, ಅದು ಬರದಿಂದ ಅಲ್ಲ, ಭರದಿಂದ
- ರೀ ಸ್ವಾಮಿ ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ ಅದಕ್ಕೇ ಬರದಿಂದ ಸಾಗುತ್ತಿದೆ ಅಂತ ಹೇಳಿದ್ದು.
ಓ ಹಂಗೆ, ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ಥಾನಕ್ಕೆ ಹೋಗಿದ್ದಾಗ, ನಮ್ ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು ಮಾಡಿದ್ರು ಅಂತಿದ್ರಿ?
- ಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆ ದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ.
ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್ಡೈರೆಕ್ಟ್ ಆಗಿ ಮಾತಾಡ್ತಾ ಇದ್ದೀರ?
- ಏನ್ ಮಾಡೋದು ನಮ್ಮ ನಿರ್ಮಾಪಕರು ಏರಿಯಲ್ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ.. ಕಲೆ ಒಳ್ಳೆಯದೇ ನಿಜ, ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?
ಆದ್ರೂ 15 ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?
- ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದಮೇಲೆ ಯಶಸ್ವಿ 10ನೇ ದಿನ, 15 ದಿನ ಅಂತ ಹಾಕ್ಕೊತಾರಲ್ಲ, ಹಂಗೇ ನಾವು ಅಮೋಘ 15 ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿದ್ದೀವಿ.
(ಕಾಲ್ಪನಿಕ ಸಂದರ್ಶನ)
ಇದನ್ನೂ ಓದಿ: Hari Paraak Column: ದನಗಳಿಗೆ ಚಿಕಿತ್ಸೆ ಮಾಡೋ ಪಶುವೈದ್ಯ- ದನವಂತ್ರಿ
ನೆಟ್ ಪಿಕ್ಸ್
ಖೇಮು ಹುಟ್ಟಾ ಕುರುಡ. ಅದ್ರ ಜೊತೆಗೆ ಹುಟ್ಟಾ ಕುಡುಕ. ಊರಲ್ಲಿರೋ ಎಲ್ಲಾ ಬಾರುಗಳು, ಪಬ್ಬುಗಳು ಅವನಿಗೆ ಚೆನ್ನಾಗಿ ಗೊತ್ತಿದ್ದವು. ಕುರುಡನಾದ್ರೂ ಹೋದ ಕಡೆಯ ಹುಡುಗಿಯರನ್ನ ಪಟಾಯಿಸಿ ಪ್ಲೇಬಾಯ್ ಎನಿಸಿಕೊಂಡಿದ್ದ. ಹೀಗಿದ್ದ ಖೇಮು ಒಂದಿನ ಒಂದು ಹೊಸ ಪಬ್ಬಿಗೆ ಹೋದ. ಖೇಮುಗೆ ಒಂದು ಸ್ಪೆಷಲ್ ಕಲೆ ಇತ್ತು. ಏನಂದ್ರೆ ಅಲ್ಲಿ ಕುಡಿಯುವಾಗ ತಿನ್ನೋಕೆ ಅಂತ ಫುಡ್ ತರಿಸುವಾಗ ಅವನು ಆ ಡಿಷ್ ನಲ್ಲಿ ಅದ್ದಿ ತೆಗೆದ ಸ್ಪೂನ್ ಅನ್ನು ಮೂಸಿ ನೋಡಿ ಅದು ಯಾವ ಡಿಷ್ ಎಂದು ಕಂಡುಹಿಡಿದು ಆರ್ಡರ್ ಮಾಡುತ್ತಿದ್ದ. ಅಂದು ಕೂಡಾ ಒಂದು ಹೊಸ ಪಬ್ಬಿಗೆ ಹೋಗಿದ್ದರಿಂದ ವೈಟರ್ನ ಕರೆದು, ಡ್ರಿಂಕ್ಸ್ ಹೇಳಿದ.
ಸೈಡ್ ಡಿಶ್ ಏನು ಕೊಡ್ಲಿ ಅಂತ ಅವನು ಕೇಳಿದಾಗ, ಖೇಮು ಹೇಳಿದ, ನೀವು ತಯಾರಿಸಿದ ಡಿಶ್ನಲ್ಲಿ ಇಟ್ಟಿರೋ ಸ್ಪೂನ್ ತಗೊಂಡ್ ಬಾ. ಸ್ಮೆಲ್ ನೋಡಿ ಹೇಳ್ತೀನಿ ಅಂದ. ವೈಟರ್ ಗೆ ಆಶ್ಚರ್ಯ ಆದ್ರೂ,. ಸರಿ ಅಂತ ಒಳಗೆ ಹೋಗಿ ಒಂದು ಸ್ಪೂನ್ ತಗೊಂಡ್ ಬಂದು ಕೊಟ್ಟ. ಖೇಮು ಅದನ್ನು ಮೂಸಿ ನೋಡಿ, ಸರಿ ಈ ಚೈನೀಸ್ ಶೆಜ್ವಾನ್ ಫುಡ್ ಚಿಕನ್ ಚೆನ್ನಾಗಿರುತ್ತೆ, ಒಂದ್ ಪ್ಲೇಟ್ ತಗೊಂಡ್ ಬಾ ಅಂದ. ವೈಟರ್ ಗೆ ಆಶ್ಚರ್ಯ ಆಯ್ತು. ಸರಿ ಒಂದು ಪ್ಲೇಟ್ ಅದೇ ಚಿಕನ್ ತಂದುಕೊಟ್ಟ.
ಖೇಮು ಮುಂದಿನ ಬಾರಿ ಇನ್ನೊಂದು ಡಿಶ್ ಆರ್ಡರ್ ಮಾಡುವಾಗ ಮತ್ತೆ ಸ್ಪೂನ್ ತಗೊಂಡ್ ಬಾ ಅಂದ. ಈ ಬಾರಿ ಅವನನ್ನು ಆಟ ಆಡಿಸಬೇಕು ಅಂತ ಡಿಸೈಡ್ ಮಾಡಿದ ವೈಟರ್, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು ಕರೆದು, ಈ ಸ್ಪೂನ್ ಅನ್ನು ನಿನ್ನ ಬಾಯಲ್ಲಿ ಒಂದು ಸಲ ಚೀಪಿ, ಆಮೇಲೆ ಅದನ್ನು ನಿನ್ನ ಲಿಪ್ಸ್ಟಿಕ್ಗೆ ಒರೆಸಿ ಕೊಡು ಅಂದ. ಹೆಂಡ್ತಿ ಯಾಕೆ ಅಂದ್ಳು. ಸುಮ್ನೆ ಹೇಳಿದಷ್ಟು ಮಾಡು ಅಂತ ಮಾಡಿಸಿ ಆ ಸ್ಪೂನ್ ಅನ್ನು ತಗೊಂಡ್ ಬಂದು ಖೇಮುಗೆ ಕೊಟ್ಟ. ಖೇಮು ಅದನ್ನು ಮೂಸಿ ನೋಡಿ ಹೇಳಿದ ಓ, ಲಿಂಡಾ ಈವಾಗ ನಿಮ್ ಹೋಟ್ಲಲ್ಲಿ ಕೆಲ್ಸ ಮಾಡ್ತಾ ಇದ್ದಾಳಾ?
ಲೈನ್ ಮ್ಯಾನ್
ಅವ್ನು- ಮಗಾ, ಅವ್ಳು ನನ್ ಪ್ರಪೋಸಲ್ ರಿಜೆಕ್ಟ್ ಮಾಡಿಬಿಟ್ಲು. ಹೇಗಾದ್ರೂ ಹೆಲ್ಪ ಮಾಡೋ
- ಇವ್ನು- ಸಾರಿ, ನಿಮ್ಮಿಬ್ಬರ ‘ಇಂಟರ್ನಲ್ ಅಫೇರ್ಸ್’ನಲ್ಲಿ ನಾನು ತಲೆ ಹಾಕಲ್ಲ. ಕಾಂಟ್ರವರ್ಸಿ ಆಗ್ಬಿಡುತ್ತೆ.
‘ಒಳ್ಳೆ’ ‘ಟೀ’ ಮಾಡೋನು ನಮ್ಮ ದೇಶದ ‘ಆಸ್ತಿ’.
- ’Proper-tea’ ‘ಲಿವಿಂಗ್ ಟುಗೆದರ್’ನಲ್ಲಿರೋ ಸ್ನೇಹಿತರನ್ನು ನೋಡಿ ನಾನೂ ಮದ್ವೆ ಆಗಲ್ಲ ಅಂತ ಡಿಸೈಡ್ ಮಾಡೋದು.
- ‘ಸಹ’ವಾಸ’ ದೋಷ
ಗಾಂಧಿನಗರದ ದುರಂತ
- ಕೆಲವು ಸಿನಿಮಾಗಳು ಬಿಡುಗಡೆ ಆಗಿದ್ದು ಗೊತ್ತಾಗೋದು, ಸಕ್ಸಸ್ ಮೀಟ್ ಕರೆದಾಗಲೇ.
ಸೋಡಾಬುಡ್ಡಿಗಳ ಸಮಸ್ಯೆ
- ಹಾಕ್ಕೊಂಡ್ರೆ ಪ್ರಪಂಚಕ್ಕೆ ಅವರು ಚೆನ್ನಾಗ್ ಕಾಣಲ್ಲ, ತೆಗೆದ್ರೆ ಅವರಿಗೆ ಪ್ರಪಂಚ ಚೆನ್ನಾಗ್ ಕಾಣಲ್ಲ.
ಹಳೆಯಕಾಲದ ನಾಣ್ಯಗಳನ್ನು ಸಂಗ್ರಹ ಮಾಡುವ ಹವ್ಯಾಸ - ಚಿಲ್ರೆ ಶೋಕಿ. ನಂಬರ್ ಒನ್ ಹೀರೋ ಆಗಿರೋನ ಮೊಬೈಲ್ ನಂಬರ್ ತಗೊಳ್ಳೋಕೆ ಹೋಗಿ ನಿಮ್ಮ ನಂಬರ್ ಹೇಳಿ ಅಂದ್ರೆ ಯಶಸ್ಸಿನ ಗುಂಗಿನಲ್ಲಿ ಅವನು ಹೇಳೋದು
- ಒನ್. ಕಟಿಂಗ್ ಶಾಪ್ನಲ್ಲಿ ನೆಲದ ಮೇಲೆ ಬಿದ್ದ ಕತ್ತರಿಸಿದ ಕೂದಲ ರಾಶಿ
- ಕೂದಲ ಸಂಗಮ.
ಆಸ್ಪತ್ರೆಗೆ ಹೋಗದೇ ಮನೆಯ ಆಗುವ ಹೆರಿಗೆ
- ಹೋಮ್ ಡೆಲಿವರಿ.
ಪೊಲೀಸರೇ ಹೆಚ್ಚಾಗಿ ಇರುವ ಜಾಗ
- ಪೊಲೀಸ್ ‘ಬೆಲ್ಟ್ʼ