ಒಂದೊಳ್ಳೆ ಮಾತು
ಜಗಜ್ಜನನಿ ದುರ್ಗಾದೇವಿಯ ಮೊದಲನೇ ಸ್ವರೂಪವನ್ನು ಶೈಲಪುತ್ರಿ ಕರೆಯುತ್ತಾರೆ. ಎಂದು ಪರ್ವತರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿದ ಕಾರಣ ಇವಳಿಗೆ ಶೈಲಪುತ್ರಿ ಎಂಬ ಹೆಸರಾಯಿತು. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈ ಯಲ್ಲಿ ಕಮಲ ಪುಷ್ಪ ಸುಶೋಭಿತವಾಗಿದೆ. ಇವಳೇ ನವದುರ್ಗೆಯರಲ್ಲಿ ಮೊದಲನೆಯವ ಳಾಗಿದ್ದಾಳೆ.
ಪೂರ್ವಜನ್ಮದಲ್ಲಿ ಪ್ರಜಾಪತಿ ದಕ್ಷನ ಮಗಳ ಹೆಸರು ‘ಸತಿ’ ಆಗಿತ್ತು. ಸತಿಯ ವಿವಾಹ ಶಂಕರ ನೊಡನೆ ಆಗಿತ್ತು. ದಕ್ಷ ಪ್ರಜಾಪತಿ ಒಂದು ದೊಡ್ಡ ಯಜ್ಞಕಾರ್ಯ ಮಾಡಿದನು. ಇದರಲ್ಲಿ ಅವರವರ ಯಜ್ಞಭಾಗವನ್ನು ಪಡೆಯಲು ಶಿವನ ಹೊರತಾಗಿ ಎಲ್ಲಾ ದೇವತೆ ಗಳನ್ನು ಆಮಂತ್ರಿಸಿದ್ದನು.
ತನ್ನ ತಂದೆ ಇಷ್ಟು ದೊಡ್ಡ ಯಜ್ಞಕಾರ್ಯವನ್ನು ಮಾಡಿಸುತ್ತಿದ್ದಾರೆ, ತಾನು ಅಲ್ಲಿಗೆ ಹೋಗ ಬೇಕು ಎಂದು ಸತಿಗೆ ಆಸೆಯಾಗಿ ಅದನ್ನು ಶಿವನ ಬಳಿ ಕೇಳಿದಳು. ಆಗ ಶಿವನು, “ದೇವೀ, ಪ್ರಜಾಪತಿ ದಕ್ಷನಿಗೆ ಯಾವುದೋ ಕಾರಣಕ್ಕೆ ನನ್ನ ಮೇಲೆ ಕೋಪ ಇದೆ. ಅವನು ಮಾಡುವ ಯಜ್ಞದಲ್ಲಿ ಎಲ್ಲಾ ದೇವತೆಗಳನ್ನು ಆಮಂತ್ರಿಸಿ ಅವರವರ ಯಜ್ಞ ಭಾಗವನ್ನು ಅರ್ಪಿಸು ವನು. ಆದರೆ ನಮ್ಮನ್ನು ಉದ್ದೇಶಪೂರ್ವಕವಾಗಿ ಕರೆದಿಲ್ಲ ಹಾಗೂ ಯಾವುದೇ ಸೂಚನೆ ಯನ್ನು ಕೊಟ್ಟಿಲ್ಲ.
ಇದನ್ನೂ ಓದಿ: Roopa Gururaj Column: ಕುಮಾರವ್ಯಾಸ ಭಾರತವನ್ನು ರಚಿಸಲು ನೆರವಾದ ಅಶ್ವತ್ಥಾಮ
ಇಂಥ ಸ್ಥಿತಿಯಲ್ಲಿ ನೀನು ನೀವೂ ಬರೆಯಬಹುದು ಬೇಡ, ಸರಿಯಲ್ಲ’ ಎಂದು ಶಿವನು ಎಷ್ಟೇ ಹೇಳಿದರೂ ಕೇಳದ ಸತಿ, ಅಂತೂ ಇಂತೂ ಶಿವನ ಅನುಮತಿ ಪಡೆದು ಹೊರಟಳು. ಸತಿ ಬಹಳ ಉತ್ಸಾಹದಿಂದ ತಂದೆಯ ಮನೆಗೆ ಬಂದಳು. ಆದರೆ ಅಲ್ಲಿ ಅವಳನ್ನು ಆದರ ದಿಂದ ಕರೆಯಲೂ ಇಲ್ಲ, ಪ್ರೀತಿಯಿಂದ ಮಾತನಾಡಿಸಲೂ ಇಲ್ಲ. ಇಷ್ಟಲ್ಲದೆ ಸಭೆಗೆ ಬಂದ ಎಲ್ಲರೂ ಅವಳ ಮುಖ ನೋಡಿ ಬೇರೆ ಕಡೆಗೆ ತಿರುಗುತ್ತಿದ್ದರು. ತಾಯಿ ಮಾತ್ರ ಓಡೋಡಿ ಬಂದು ಮಗಳನ್ನು ಪ್ರೀತಿಯಿಂದ ಅಪ್ಪಿಕೊಂಡಳು.
ಅಕ್ಕ-ತಂಗಿಯರಿಗೆ ಸತಿಯ ಬಗ್ಗೆ ತಿರಸ್ಕಾರ, ವ್ಯಂಗ್ಯಭಾವ ಇತ್ತು. ಅದನ್ನು ಕಂಡು ಸತಿಯ ಮನಸ್ಸಿಗೆ ಬಹಳ ದುಃಖವಾಯಿತು. ಸಭೆಯಲ್ಲಿ ಎಲ್ಲಾ ಕಡೆಯೂ ಶಿವನ ಬಗ್ಗೆ ತೋರುವ ತಿರಸ್ಕಾರವನ್ನು ಗಮನಿಸಿದಳು. ತಂದೆಯಾದ ದಕ್ಷನು ಅವಳ ಬಗ್ಗೆ ಅವಮಾನಕರ ಮಾತನಾಡಿದನು. ಕೇಳದೆ ಯಾಕಾದರೂ ಬಂದೆನೋ..’ ಎಂದು ಹಲುಬಿದ ಸತಿಯ ಹೃದಯ ಕ್ಷೋಭೆ, ದುಃಖ, ಕ್ರೋಧದಿಂದ ತುಂಬಿತು.
ಪತಿಯ ಮಾತು ಕೇಳದೆ ಬಂದು ದೊಡ್ಡ ತಪ್ಪು ಮಾಡಿದೆ ಎಂದು ಅರಿವಾಯಿತು. ಅವಳು ತನ್ನ ಪತಿ ಶಿವನಿಗೆ ಆದ ಅವಮಾನವನ್ನು ಸಹಿಸದಾದಳು. ಆಕೆ ತನ್ನ ಆ ರೂಪವನ್ನು ಅಂದರೆ ಸತಿಯ ದೇಹವನ್ನು ಅ ಇದ್ದ ಯೋಗಾಗ್ನಿಯಲ್ಲಿ ಸುಟ್ಟು ಭಸ್ಮ ಮಾಡಿಕೊಂಡಳು.
ಈ ದುಃಖದ ಸಂಗತಿಯನ್ನು ಕೇಳಿದ ಶಿವನು ಕ್ರುದ್ಧನಾಗಿ ತನ್ನ ಗಣಗಳನ್ನು ಕಳುಹಿಸಿ ದಕ್ಷಯಜ್ಞವನ್ನು ಪೂರ್ಣವಾಗಿ ಧ್ವಂಸ ಮಾಡಿಸಿದನು. ಸತಿಯು ಯೋಗಾಗ್ನಿಯಿಂದ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನಿಗೆ ಪುತ್ರಿಯ ರೂಪದಲ್ಲಿ ಅವತರಿಸಿದಳು. ಲೋಕದಲ್ಲಿ ಅವಳು ಶೈಲಪುತ್ರಿ ಎಂದೇ ಪ್ರಖ್ಯಾತಳಾದಳು.
ಸತಿಗೆ ಅವಮಾನ ಮಾಡಿದ ತಕ್ಷಣ ಯಜ್ಞವೇ ಶಿವನ ಕೋಪಾಗ್ನಿಗೆ ಆಹುತಿಯಾಗಿ ನಿರ್ನಾಮ ವಾಯಿತು. ಶ್ರೀ ಶಕ್ತಿಯ ಸಂಕೇತವಾದ ಅವಳನ್ನು ಅವಮಾನಿಸಿ ಯಾರೂ ಬದುಕಿನಲ್ಲಿ ಔನ್ನತ್ಯ ಸಾಧಿಸಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳೂ ಅಷ್ಟೇ, ತಮ್ಮ ಅಸ್ತಿತ್ವಕ್ಕೆ, ಆತ್ಮಾಭಿಮಾನಕ್ಕೆ ಚ್ಯುತಿ ಉಂಟಾಗುವ ಜಾಗಗಳಲ್ಲಿ ಅದನ್ನು ಸಹಿಸಿಕೊಳ್ಳದೆ ಪ್ರತಿಭಟಿಸುವ ಮನೋಧರ್ಮವನ್ನು ನಾವು ಅವರಲ್ಲಿ ಹುಟ್ಟು ಹಾಕಬೇಕು. ತಂದೆ-ತಾಯಿ ಮನೆಯವ ರಿಂದ ಅಂಥ ಬೆಂಬಲ ದೊರೆತಾಗ ಯಾವ ಹೆಣ್ಣುಮಗಳೂ ಕೆಟ್ಟ ಮನಸ್ಥಿತಿಗಳ ಕ್ರೌರ್ಯಕ್ಕೆ ಬಲಿಯಾಗದೆ ತಮ್ಮ ಆತ್ಮ ಬಲದಿಂದ ಬದುಕುವ ದಾರಿ ಕಂಡುಕೊಳ್ಳುತ್ತಾರೆ.