ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೆಐಐಟಿ ಮತ್ತು ಕೆಐಎಸ್‌ಎಸ್ ಸಂಸ್ಥೆಗಳ ಮಹತ್ವದ ಪಾತ್ರ

ಕೌಶಲಯುತ ಶಿಕ್ಷಣವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿವೆ ಎಂಬುದಕ್ಕೆ ಈ ಎರಡೂ ಸಂಸ್ಥೆಗಳು ಉತ್ತಮ ಉದಾಹರಣೆಯಾಗಿವೆ. ಇಂಥ ದೂರ ದೃಷ್ಟಿಯ ಪರಿಕಲ್ಪನೆ ಸಾಕಾರವಾಗುವಲ್ಲಿ ಈ ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಕಾಳಜಿಯ ಪಾತ್ರ ಮಹತ್ವದಾಗಿದೆ. ಜೀವನೋಪಾಯ ಮತ್ತು ಶಿಕ್ಷಣ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ.

ಸಾಧನಾಪಥ

ಡಾ.ಅಚ್ಯುತ ಸಮಂತ

ವಿಶ್ವವಿದ್ಯಾಲಯಗಳು ಜೀವನೋಪಾಯವನ್ನು ಕಲ್ಪಿಸುವ ಪ್ರಮುಖ ಎಂಜಿನ್‌ಗಳಾಗಬೇಕು. ಇದನ್ನು ಒಡಿಶಾದ Kalinga Institute of Industrial Technology (PæIIq) ಮತ್ತು Kalinga Institute of Social Sciences (ಕೆಐಎಸ್‌ಎಸ್) ಸಂಸ್ಥೆಗಳು ಸಾಬೀತುಪಡಿಸಿವೆ.

ಕೌಶಲಯುತ ಶಿಕ್ಷಣವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿವೆ ಎಂಬುದಕ್ಕೆ ಈ ಎರಡೂ ಸಂಸ್ಥೆಗಳು ಉತ್ತಮ ಉದಾಹರಣೆಯಾಗಿವೆ. ಇಂಥ ದೂರ ದೃಷ್ಟಿಯ ಪರಿಕಲ್ಪನೆ ಸಾಕಾರವಾಗುವಲ್ಲಿ ಈ ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಕಾಳಜಿಯ ಪಾತ್ರ ಮಹತ್ವದಾಗಿದೆ. ಜೀವನೋಪಾಯ ಮತ್ತು ಶಿಕ್ಷಣ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಆದರೆ ಜೀವನೋಪಾಯದ ಮೇಲಿನ ಶಿಕ್ಷಣ ಸಂಸ್ಥೆಗಳ ಪ್ರಭಾವವನ್ನು ಸರಿಯಾಗಿ ಅಂದಾಜು ಮಾಡಲಾಗುತ್ತಿಲ್ಲ.

ಕೆಲವೇ ಕೆಲವು ಸಂಸ್ಥೆಗಳಷ್ಟೇ ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿವೆ. ಈ ವಿಷಯದಲ್ಲಿ ಒಡಿಶಾದ ಕೆಐಐಟಿ ಮತ್ತು ಕೆಐಎಸ್ಎಸ್ ಸಂಸ್ಥೆಗಳು ಮಾತ್ರ ವಿಭಿನ್ನವಾಗಿ ಗುರುತಿಸಿಕೊಂಡಿವೆ. ಉತ್ತಮ ಶೈಕ್ಷಣಿಕ ವಲಯವು ದೊಡ್ಡ ಪ್ರಮಾಣದ ಜೀವನೋಪಾಯ ಪರಿವರ್ತನೆಗೆ ಹೇಗೆ ಕಾರಣವಾಗ ಬಹುದು ಎಂಬುದನ್ನು ಕೆಐಐಟಿ ಮತ್ತು ಕೆಐಎಸ್‌ಎಸ್ ತೋರಿಸುತ್ತಿವೆ. ಈ ಸಂಸ್ಥೆಗಳು ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆಯಲ್ಲದೆ, ಉತ್ತಮ ಕೌಶಲಯುತ ಶಿಕ್ಷಣವನ್ನು ಆರ್ಥಿಕ ಸಬಲೀಕರಣದೊಂದಿಗೆ ಸಂಯೋಜಿಸಿವೆ. ಈ ಮೂಲಕ ಉದ್ಯಮಶೀಲತೆಯ ಬೆಳವಣಿಗೆ ಮತ್ತು ಸ್ವಾವಲಂಬನೆಗೂ ವೇಗ ನೀಡಿವೆ.

ಇದನ್ನೂ ಓದಿ: G N Bhat Column: ತಾಳಮದ್ದಳೆ ಅರ್ಥಧಾರಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ

ವಿಶ್ವವಿದ್ಯಾಲಯಗಳೂ ಪ್ರಬಲ ಆರ್ಥಿಕ ಎಂಜಿನ್‌ಗಳಾಗಿರಬಹುದು, ಒಂದಿಡೀ ಪ್ರದೇಶದ ಜೀವನೋಪಾಯದ ಮೇಲೆ ಅವು ಪ್ರತ್ಯಕ್ಷವಾಗಿ ಪ್ರಭಾವ ಬೀರುತ್ತದೆ ಎಂಬುದನ್ನು ಕೆಐಐಟಿ ಸಾಧಿಸಿ ತೋರಿಸಿದೆ. ಈ ವಿಶ್ವವಿದ್ಯಾಲಯವು 20 ಸಾವಿರಕ್ಕೂ ಹೆಚ್ಚು ಅಧ್ಯಾಪಕರು ಮತ್ತು ಸಿಬ್ಬಂದಿಗಳನ್ನು ಹೊಂದಿದ್ದು, ತನ್ಮೂಲಕ ಒಡಿಶಾ ರಾಜ್ಯವು ದೇಶದ ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತರಲ್ಲಿ ಒಂದಾಗಿದೆ ಎಂಬುದು ಹೆಮ್ಮೆಯ ವಿಷಯ. ಅಲ್ಲದೆ ಶೈಕ್ಷಣಿಕ ಕ್ಯಾಂಪಸ್‌ನಲ್ಲಿ ಒಪ್ಪಂದದ ಉದ್ಯೋಗವನ್ನೂ ನೀಡಿದ್ದರಿಂದ ಈ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

ಇದು ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಸ್ಥಿರ ಆದಾಯದ ಮೂಲಗಳನ್ನು ಹುಡುಕಿ ಕೊಟ್ಟಿದೆ. ಇದರಿಂದ ಆ ಕುಟುಂಬಗಳಲ್ಲೂ ನೆಮ್ಮದಿ ಮೂಡಿದೆ. ಆದರೂ, ನಿಜವಾದ ಪರಿಣಾಮವು ನೇರ ಉದ್ಯೋಗವನ್ನೂ ಮೀರಿ ವಿಸ್ತರಿಸುತ್ತದೆ.

40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಐಐಟಿಯಲ್ಲಿದ್ದು, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಪರಿಸರ ವ್ಯವಸ್ಥೆಯನ್ನು ಅದು ಸೃಷ್ಟಿಸಿದೆ. ಹಾಸ್ಟೆಲ, ಸಾರಿಗೆ ಸೇವೆ, ಫುಡ್ ವೆಂಡರ್‌ಗಳು, ಲಾಂಡ್ರಿ ಗಳು, ಪುಸ್ತಕ ಮಳಿಗೆಗಳು ಮತ್ತು ಮೊಬೈಲ್ ರಿಪೇರಿ ಅಂಗಡಿಗಳಂಥ ಸಾವಿರಾರು ವ್ಯವಹಾರಗಳು ವಿಶ್ವವಿದ್ಯಾಲಯವನ್ನು ಅವಲಂಬಿಸಿವೆ.

BLDG

ರಿಯಲ್ ಎಸ್ಟೇಟ್ ಬೆಳವಣಿಗೆಗೂ ಕೆಐಐಟಿ ಮತ್ತು ಕೆಐಎಸ್‌ಎಸ್ ಸಂಸ್ಥೆಗಳು ಕಾರಣವಾಗಿದ್ದು, ಸ್ಥಳೀಯ ಆಸ್ತಿ ಮಾಲೀಕರು ಮತ್ತು ಬಿಲ್ಡರ್‌ಗಳಿಗೆ ಜೀವನೋಪಾಯದ ಅವಕಾಶಗಳನ್ನು ಅವು ಒದಗಿಸಿವೆ ಹಾಗೂ ಬಾಡಿಗೆ (Rent) ಆರ್ಥಿಕತೆಯನ್ನು ಸೃಷ್ಟಿಸಿವೆ.

ಉದ್ಯೋಗದ ಮೇಲೆ ಕೆಐಐಟಿಯ ಬಲವಾದ ಗಮನವು ವಿದ್ಯಾರ್ಥಿಗಳು ಉದ್ಯಮಕ್ಕೆ ನೆರವಾಗು ವಂಥ ಕೌಶಲಗಳೊಂದಿಗೆ ಸಜ್ಜುಗೊಂಡಿರುವುದನ್ನು ಖಚಿತಪಡಿಸುತ್ತದೆ, ಇದು ಕಾರ್ಯಪಡೆಯ ಸುಗಮ ಪರಿವರ್ತನೆಗೆ ಅನುಕೂಲ ಮಾಡಿಕೊಟ್ಟಿದೆ.

ಸಾಂಪ್ರದಾಯಿಕ ಉದ್ಯೋಗದ ಹೊರತಾಗಿ, ಹಾಲಿ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಉದ್ಯೋಗಗಳನ್ನು ಹುಡುಕುವ ಬದಲು ಉದ್ಯೋಗಾವಕಾಶಗಳನ್ನು ಸ್ವತಃ ಹುಟ್ಟುಹಾಕುವಂತಾ ಗುವುದಕ್ಕೆ ಪ್ರೋತ್ಸಾಹಿಸುವ ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಕೆಐಐಟಿ ಪೋಷಿಸುತ್ತಾ ಬಂದಿದೆ.

ಕೆಐಐಟಿ-ಟಿಬಿಐ (ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್) ನೂರಾರು ಸ್ಟಾರ್ಟ್-ಅಪ್‌ಗಳಿಗೆ ಆಧಾರವಾಗಿದೆ. ಅವುಗಳಲ್ಲಿನ ತಂತ್ರಜ್ಞಾನ, ಕೃಷಿ ಮತ್ತು ಸಾಮಾಜಿಕ ಉದ್ಯಮ ವಲಯಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸಿದೆ. ಕೆಐಐಟಿ ಸಂಸ್ಥೆಯು ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಕೌಶಲವನ್ನು ಬೆಂಬಲಿಸಿದರೆ, ಕೆಐಎಸ್‌ಎಸ್ ಸಂಸ್ಥೆಯು ತಳಮಟ್ಟದಲ್ಲಿ ಶಿಕ್ಷಣ ಆಧಾರಿತ ಜೀವನೋಪಾಯ ಪರಿವರ್ತನೆಯ ಮಾದರಿಯಾಗಿದೆ.

40000 ಸಂಖ್ಯೆಯ ಬುಡಕಟ್ಟು ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ಮತ್ತು ವಸತಿ ಸೌಲಭ್ಯ ವನ್ನು ಒದಗಿಸುವ ಮೂಲಕ, ಕೆಐಎಸ್‌ಎಸ್ ಅತ್ಯಂತ ಅಂಚಿನಲ್ಲಿರುವ ಸಮುದಾಯಗಳು ಆರ್ಥಿಕ ಶಕ್ತಿಯನ್ನು ಪಡೆಯುವಂತಾಗುವುದನ್ನು ಖಚಿತಪಡಿಸುತ್ತದೆ. ಅನೇಕ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಲು ಮುಂದಾಗಿ ದ್ದಾರೆ.

ಶಿಕ್ಷಣ ವ್ಯವಸ್ಥೆಗೆ ಸಮರ್ಥವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಒಡ್ಡಿಕೊಂಡಿರುವುದರಿಂದಾಗಿ ಬುಡಕಟ್ಟು ಯುವಕರು ಎಡಪಂಥೀಯ ಉಗ್ರಗಾಮಿ ಗುಂಪುಗಳಿಗೆ ಸೇರುವುದು ಕಡಿಮೆ ಆಗಿದೆ. ಇಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಉದ್ಯಮಿ ಗಳು ಅಥವಾ ಸರಕಾರಿ ಉದ್ಯೋಗಿಗಳಾಗಿ ತಮ್ಮ ಹಳ್ಳಿಗಳಿಗೆ ಮರಳುತ್ತಾರೆ.

ತಂತಮ್ಮ ಸಮುದಾಯಗಳಲ್ಲಿ ಇವರೆಲ್ಲ ಆರ್ಥಿಕ ಬೆಳವಣಿಗೆಗೆ ಇಂಬುಕೊಡುತ್ತಾರೆ. ಇದು, ಶಿಕ್ಷಣ ಸಂಸ್ಥೆಯೊಂದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜೀವನೋಪಾಯವನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಜೀವನೋಪಾಯದ ಮೇಲೆ ಕೆಐಐಟಿ ಮತ್ತು ಕೆಐಎಸ್‌ಎಸ್ ಸಂಸ್ಥೆಗಳು ಬೀರಿರುವ ಪ್ರಭಾವವು ಅವುಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳನ್ನೂ ಮೀರಿ ವಿಸ್ತರಣೆಯಾಗಿದೆ. ಈ ವಿಶ್ವವಿದ್ಯಾಲ ಯಗಳಿಂದಾಗಿ ಭಾರತ ಮತ್ತು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಒಳಹರಿವು ಹೆಚ್ಚಿದೆ. ಇದು ಶೈಕ್ಷಣಿಕ ಪ್ರವಾಸೋದ್ಯಮದಲ್ಲಿನ ಪ್ರಮಾಣ ಏರಿಕೆಯಾಗಲು ಕಾರಣವಾಗಿದೆ. ಇಲ್ಲಿಗೆ ಪೋಷಕರು ಭೇಟಿ ನೀಡುತ್ತಾರೆ, ಸಂಶೋಧಕರು ಬರುತ್ತಾರೆ, ಸಮ್ಮೇಳನದಲ್ಲಿ ಭಾಗವಹಿಸುವವರು ಭೇಟಿ ನೀಡುತ್ತಾರೆ.

ಆತಿಥ್ಯ, ಆಹಾರ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಸಾಕಷ್ಟು ವ್ಯವಹಾರ ನಡೆಯುತ್ತದೆ. ಕೆಐಐಟಿಯಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳು, ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ಕಾಲ ಕಾಲಕ್ಕೆ ನಡೆಯುತ್ತವೆ. ಇವು ಕೂಡ ಉದ್ಯೋಗವನ್ನು ಸೃಷ್ಟಿಸು ತ್ತವೆ, ಇವೆಂಟ್ ಮ್ಯಾನೇಜ್‌ಮೆಂಟ್, ಭದ್ರತೆ, ಆತಿಥ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಸಾವಿರಾರು ತಾತ್ಕಾ ಲಿಕ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ನಾವು ಭವಿಷ್ಯವನ್ನು ನೋಡಿದರೆ, ಕೆಐಐಟಿ ಮತ್ತು ಕೆಐಎಸ್‌ಎಸ್ ಸಂಸ್ಥೆಗಳ ಸಾಧ್ಯತೆಯ ಮಾದರಿ ಗಳು ಉದಾಹರಣೆಯಾಗಿ ನಿಲ್ಲುತ್ತವೆ. ಶಿಕ್ಷಣವು ಸಹಾನುಭೂತಿ ಮತ್ತು ದೂರದೃಷ್ಟಿ ಯೊಂದಿಗೆ ನೀಡಲ್ಪಟ್ಟರೆ ಜೀವನೋಪಾಯ ಮತ್ತು ಆರ್ಥಿಕ ಸಮೃದ್ಧಿಗೆ ಅತ್ಯಂತ ಸುಸ್ಥಿರ ತಳಹದಿಯಾಗಿ ಅದು ಪರಿಣಮಿಸುತ್ತದೆ ಎಂಬುದನ್ನೂ ಈ ಸಂಸ್ಥೆಗಳು ಮನದಟ್ಟು ಮಾಡಿಕೊಟ್ಟಿವೆ.

(ಲೇಖಕರು ಕೆಐಐಟಿ ಮತ್ತು ಕೆಐಎಸ್‌ಎಸ್ ಸಂಸ್ಥೆಗಳ

ಸಂಸ್ಥಾಪಕರು ಹಾಗೂ ಮಾಜಿ ಸಂಸದರು)