ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸನ್ಯಾಸಿಯ ಮಾತಿನಿಂದ ಪಾಠ ಕಲಿತ ರಾಜ

ಅಧಿಕಾರಕ್ಕೆ ಬೇಕಾಗಿರುವುದು ಅಹಂಕಾರವಲ್ಲ. ತನ್ನ ಮಗುವಿಗೆ ಏನು ಬೇಕು, ಏನು ಬೇಡ ಎಂಬುದನ್ನು ಒಬ್ಬ ತಾಯಿಯು ಹೇಗೆ ಅರ್ಥಮಾಡಿಕೊಳ್ಳುತ್ತಾಳೋ ಹಾಗೆಯೇ ಪ್ರಜೆಗಳ ವಿಷಯದಲ್ಲೂ ಆ ರೀತಿಯ ವಾತ್ಸಲ್ಯ ನಿನಗೆ ಇರಬೇಕು; ಆಗ ಮಾತ್ರ ನೀನು ರಾಜನಾಗಿದ್ದಕ್ಕೂ ಸಾರ್ಥಕ. ಆಗ ನಿಜವಾಗಿ ರಾಜನೆನಿಸಿಕೊಳ್ಳುವ ಯೋಗ್ಯತೆ ನಿನಗೆ ಬರುತ್ತದೆ" ಎಂದು ಹೇಳಿದ.

Roopa Gururaj Column: ಸನ್ಯಾಸಿಯ ಮಾತಿನಿಂದ ಪಾಠ ಕಲಿತ ರಾಜ

-

ಒಂದೊಳ್ಳೆ ಮಾತು

ಒಬ್ಬ ರಾಜನು ಬೇಟೆಯಾಡಲೆಂದು ತನ್ನ ಸೈನ್ಯದೊಂದಿಗೆ ಕಾಡಿಗೆ ಬಂದ. ಬೇಸಗೆಯ ಕಾಲವಾದ್ದರಿಂದ ಇಡೀ ಕಾಡು ಒಣಗಿ ಹೋಗಿತ್ತು. ಅಬ್ಬ ಸನ್ಯಾಸಿ, ಮರ-ಗಿಡಗಳ ಬುಡ ವನ್ನು ಕೆದಕುತ್ತಲಿದ್ದ. ಬಿಸಿಲಿನ ತಾಪದಿಂದ ಅವನ ಮೈಯಿಂದ ಬೆವರು ಸುರಿದು ಹೋಗು ತ್ತಿತ್ತು. ಆದರೂ ಕೆಲಸ ಮಾಡುತ್ತಿದ್ದ. ಇದನ್ನು ಗಮನಿಸಿದ ರಾಜ, “ತಾವು ಇಲ್ಲಿ ಏನು ಮಾಡುತ್ತಿದ್ದೀರಿ?" ಎಂದ. “ಈಗ ಬೇಸಗೆ ಯಾದ್ದರಿಂದ ಗಿಡದ ಬುಡವನ್ನು ಬಿಡಿಸುತ್ತಿರುವೆ; ಮುಂದೆ ಮಳೆ ಬಂದಾಗ ನೀರು ಹಾಗೇ ನಿಲ್ಲಲು ಸುಲಭವಾಗುತ್ತದೆ" ಎಂದ ಸನ್ಯಾಸಿ.

ಆಗ ರಾಜ, “ಹೀಗೆ ಮಾಡು ಅಂತ ನಿಮಗೆ ಈ ಕಾಡಿನ ಗಿಡ ಕೇಳಿತೇ?" ಎಂದು ಹಾಸ್ಯ ಮಾಡಿದ. ಆಗ ಸನ್ಯಾಸಿ ನಗುತ್ತಾ, “ಕೇಳಲಿಕ್ಕೆ ಅವಕ್ಕೆ ಬಾಯಿ ಎಲ್ಲಿದೆ?" ಎಂದ. ರಾಜನಿಗೆ ಸನ್ಯಾಸಿಯ ಮಾತು ತಮಾಷೆಯೆನಿಸಿ, “ತಾವು ಧ್ಯಾನ, ತಪಸ್ಸು ಮಾಡಿಕೊಂಡಿರುವುದನ್ನು ಬಿಟ್ಟು ಇಂಥ ಬೇಡದ ಕೆಲಸವನ್ನು ಈ ಬಿಸಿಲಿನಲ್ಲಿ ಯಾಕೆ ಮಾಡುತ್ತಿರುವಿರೋ?" ಎಂದು ಕುಹಕವಾಡಿದ.

ತಕ್ಷಣ ಅವನನ್ನು ದೃಷ್ಟಿಸಿ ನೋಡುತ್ತಾ ಸನ್ಯಾಸಿಯು, “ನಿಜವಾಗಿಯೂ ನೀನು ರಾಜ ನೇನಾ?" ಎಂದ ವಿಚಲಿತನಾಗದೆ. ಸನ್ಯಾಸಿಯ ಮಾತಿನಿಂದ ರಾಜ ಬಹಳವಾಗಿ ಕೋಪ ಗೊಂಡು, “ನನ್ನನ್ನೇ ಅವಮಾನಿಸುವೆಯ, ನಿನಗೆಷ್ಟು ಧೈರ್ಯ? ಸೈನಿಕರೇ ಇವನನ್ನು ಬಂಧಿಸಿ" ಎಂದು ಆಜ್ಞಾಪಿಸಿದ.

ಇದನ್ನೂ ಓದಿ: Roopa Gururaj Column: ತುಕಾರಾಮರು ನಿಜವಾಗಿಸಿದ, ಚಿನ್ನದ ಪಾತ್ರೆಯ ದಾನ

ಆದರೂ ಸನ್ಯಾಸಿ ಧೃತಿಗೆಡದೆ, “ನಿನ್ನ ಈ ನಡವಳಿಕೆಯಿಂದಲೇ, ನೀನು ರಾಜನಲ್ಲ ಎಂಬು ದನ್ನು ಮತ್ತೆ ನಿರೂಪಿಸಿಬಿಟ್ಟೆ" ಎಂದು ನಗುತ್ತಾ ಹೇಳಿದ. ಈಗ ರಾಜನಿಗೆ ಕೋಪ ಇನ್ನಷ್ಟು ಜಾಸ್ತಿಯಾಗಿ, “ಈ ಸೈನ್ಯ, ಕುದುರೆ, ಪರಿವಾರ, ವೈಭವ ಎಲ್ಲವನ್ನೂ ನೋಡಿ ಕೂಡಾ ನನ್ನನ್ನು ರಾಜನಲ್ಲ ಎಂದು ಹೇಳುತ್ತಿರುವಿಯ? ನಿನಗೆಷ್ಟು ಸೊಕ್ಕು? ನನಗೆ ಬರುತ್ತಿರುವ ಕೋಪಕ್ಕೆ ನಿನ್ನನ್ನು ಕೊಂದು ಹಾಕಿಬಿಡಬೇಕೆನಿಸುತ್ತಿದೆ" ಎಂದ.

ಆಗ ಸನ್ಯಾಸಿ ಇನ್ನಷ್ಟು ಶಾಂತನಾಗಿ, “ಸಾಯಿಸು. ನಿನ್ನ ಕೈಲಿ ಆಗುವುದು ಅದೊಂದೇ ತಾನೇ?!" ಎಂದ. ಈಗ ರಾಜ ಯೋಚನೆಗೆ ಬಿದ್ದ, ‘ಈ ಸನ್ಯಾಸಿ ಯಾವುದಕ್ಕೂ ಹೆದರುವವ ನಲ್ಲ. ನಾನು ಕೇಳಿದ್ದಕ್ಕೆ ಶಾಂತ ರೀತಿಯ ಉತ್ತರಿಸುತ್ತಿದ್ದಾನೆ ಎಂದರೆ ಇದರಲ್ಲಿ ಏನೋ ಮರ್ಮವಿರಲೇಬೇಕು" ಎಂದುಕೊಂಡ.

ನಂತರ ಆತ ಸನ್ಯಾಸಿಯ ಹತ್ತಿರಕ್ಕೆ ಬಂದು, “ನಿಜವಾಗಿಯೂ ನೀನು ಸಾಯಲು ತಯಾರಿ ದ್ದೀಯಾ?" ಎಂದು ಪ್ರಶ್ನಿಸಿದ. “ಅದೇ ಆಗಬೇಕೆಂದಿದ್ದರೆ ಅದನ್ನು ತಪ್ಪಿಸಲು ಯಾರಿಂದ ಲೂ ಸಾಧ್ಯವಿಲ್ಲ" ಎಂದು ನಗುತ್ತಾ ಹೇಳಿದ ಸನ್ಯಾಸಿ. ಈಗ ಅಸಹಾಯಕನಾದ ರಾಜ ಅವನನ್ನು ಕೇಳಿದ: “ನಿನ್ನ ಪ್ರಕಾರ ನಾನು ರಾಜನೆಂದೆನಿಸಿಕೊಳ್ಳಲು ಹೇಗೆ ಇರಬೇಕು?".

ಅದಕ್ಕೆ ಸನ್ಯಾಸಿ, “ನೀನು ನನ್ನನ್ನು ಏನು ಕೇಳಿದೆ ಹೇಳು? ಮರ ಕೇಳದಿದ್ದರೂ ಅದರ ಬುಡವನ್ನು ಏಕೆ ಬಿಡಿಸುತ್ತಿರುವೆ ಎಂದೆಯಲ್ಲವೇ? ನಾನು ಈ ಕಾಡ ಅಲೆಯುವವನು. ದಿನಾ ನೋಡುತ್ತಿರುವ ನನಗೆ ಯಾವ ಗಿಡಕ್ಕೆ ಏನು ಬೇಕು ಎಂದು ಅರ್ಥವಾಗುತ್ತದೆ. ರಾಜನಾದ ನಿನ್ನ ಬಳಿ ನೀರು, ಆಹಾರ ಎಲ್ಲವೂ ಇದ್ದರೂ, ಆಯಾಸಗೊಂಡ ನನ್ನನ್ನು ನೋಡಿ ‘ಕೆಲಸ ಮಾಡಿ ದಣಿದಿದ್ದಾನೆ.

ಇವನಿಗೆ ಸ್ವಲ್ಪ ಸಹಾಯ ಮಾಡೋಣ ಅಥವಾ ನೀರು-ಆಹಾರ ಏನಾದರೂ ಬೇಕಾ ವಿಚಾರಿಸೋಣ’ ಎಂದು ಕೂಡಾ ಅನಿಸಲ್ಲಿಲ್ಲವಲ್ಲ. ನಿನಗೆ ಅಷ್ಟೂ ಅರ್ಥವಾಲಿಲ್ಲ ವೆಂದರೆ, ನೀನು ಪ್ರಜೆಗಳ ಬೇಕು-ಬೇಡಗಳನ್ನು, ಕಷ್ಟ-ನಷ್ಟಗಳನ್ನು ಹೇಗೆ ಅರ್ಥಮಾಡಿ ಕೊಳ್ಳುವೆ? ಅಧಿಕಾರ ಇರುವುದು ಸರಿಯೇ! ಆದರೆ ಅದನ್ನು ನಿಭಾಯಿಸುವುದಕ್ಕೆ ಅಂತಃ ಕರಣ, ಕರ್ತವ್ಯಪ್ರಜ್ಞೆ ಇರಬೇಕು.

ಅಧಿಕಾರಕ್ಕೆ ಬೇಕಾಗಿರುವುದು ಅಹಂಕಾರವಲ್ಲ. ತನ್ನ ಮಗುವಿಗೆ ಏನು ಬೇಕು, ಏನು ಬೇಡ ಎಂಬುದನ್ನು ಒಬ್ಬ ತಾಯಿಯು ಹೇಗೆ ಅರ್ಥಮಾಡಿಕೊಳ್ಳುತ್ತಾಳೋ ಹಾಗೆಯೇ ಪ್ರಜೆಗಳ ವಿಷಯದಲ್ಲೂ ಆ ರೀತಿಯ ವಾತ್ಸಲ್ಯ ನಿನಗೆ ಇರಬೇಕು; ಆಗ ಮಾತ್ರ ನೀನು ರಾಜನಾ ಗಿದ್ದಕ್ಕೂ ಸಾರ್ಥಕ. ಆಗ ನಿಜವಾಗಿ ರಾಜನೆನಿಸಿಕೊಳ್ಳುವ ಯೋಗ್ಯತೆ ನಿನಗೆ ಬರುತ್ತದೆ" ಎಂದು ಹೇಳಿದ.

ಇದು ನಿಜವೇ ಅಲ್ಲವೇ? ಅಧಿಕಾರದ ಜತೆಗೆ ಸಹಾನುಭೂತಿ ಇದ್ದಾಗಲೇ ನಮ್ಮಲ್ಲಿ ಸಂಪೂ ರ್ಣತೆ ಕೆನೆಗಟ್ಟುವುದು. ಮತ್ತೊಬ್ಬರ ಬಗ್ಗೆ ಸಹಾನುಭೂತಿ, ಗೌರವ ಇಲ್ಲದಿದ್ದಾಗ ಎಂಥ ಅಧಿಕಾರವೂ ನಮ್ಮನ್ನು ಜನರ ದೃಷ್ಟಿಯಲ್ಲಿ ಗೌರವಯುತರನ್ನಾಗಿ ಮಾಡಲು ಸಾಧ್ಯವಿಲ್ಲ.