ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಸಿನೆಮಾ ವೀಕ್ಷಣೆಯ ಹಲವು ಮುಖಗಳು !

ಒಂದಷ್ಟು ತಿಂಗಳುಗಳ ನಂತರ ಮೈಕಿನಲ್ಲಿ ‘ನಮೋ ವೆಂಕಟೇಶ, ನಮೋ ತಿರುಮಲೇಶ’ ಎನ್ನುವ ಹಾಡನ್ನ ಹಾಕುತ್ತಿದ್ದರು. ಅದು ಕೊನೆಯ ಹಾಡು, ನಂತರ ಫಿಲಂ ಶುರು ಎನ್ನುವುದನ್ನು ಕಂಡು ಹಿಡಿದು ಅದನ್ನು ಎಲ್ಲರಿಗೂ ಹೇಳಿಕೊಂಡು ತಿರುಗಿz. ಅಂದಿಗೆ ಗೊತ್ತಾಗಲಿಲ್ಲ, ಆದರೆ ಇಂದಿಗೆ ಅವರು ನೋಡು ತ್ತಿದ್ದ ನೋಟದಲ್ಲಿ ಈ ಸತ್ಯ ಊರಿಗೆ ಗೊತ್ತಿದೆ. ನಿನಗೆ ಇಂದು ಜ್ಞಾನೋದಯ ಆಯ್ತಾ ಎನ್ನುವಂತಿರು ತ್ತಿತ್ತು.

ವಿಶ್ವರಂಗ

mookanahalli@gmail.com

ಮೂರು ದಶಕದಲ್ಲಿ ಬದುಕು, ಜಗತ್ತು ಬದಲಾದ ರೀತಿ, ವೇಗ ಅಚ್ಚರಿ ಹುಟ್ಟಿಸುತ್ತವೆ. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದ ಸರ್ವೀಸ್ ಪ್ರೊವೈಡರ್ಸ್ ಇಂದು ಮಾರುಕಟ್ಟೆ‌ ಯಲ್ಲಿದ್ದಾರೆ. ನಮಗೆ ಬೇಕಾದ ಫಿಲಂ, ಡಾಕ್ಯುಮೆಂಟರಿ, ವೆಬ್ ಸಿರೀಸ್‌ಗಳನ್ನು ನಮಗಿಷ್ಟದ ಸಮಯದಲ್ಲಿ ನೋಡಬಹುದು. ಇಂಥ ಬದಲಾವಣೆ ನೋಡಿದಾಗೆಲ್ಲ ಹಿಂದೆ ಒಂದು ಚಲನಚಿತ್ರ ವೀಕ್ಷಿಸಲು ಎಷ್ಟೆ ಹರಸಾಹಸ ಪಟ್ಟಿzವು ಎನ್ನುವುದು ನೆನಪಾಗಿ, ಇವತ್ತಿನ ದಿನ ನಿಜವೋ ಸುಳ್ಳೋ ಎನ್ನಿಸುತ್ತದೆ.

ಸಿರಾದಿಂದ 16 ಕಿಲೋ ಮೀಟರ್ ದೂರದಲ್ಲಿರುವ ಹೊಸೂರು ಅಮ್ಮನ ತವರು. ನಾನು ಹುಟ್ಟಿ ಬೆಳೆದದ್ದು, ಎರಡನೇ ತರಗತಿಯವರೆಗೆ ಕಲಿತದ್ದು ಆ ಊರಿನಲ್ಲಿ. ಹೀಗಾಗಿ ಬಾಲ್ಯದ ಮೊದಲ ದಿನಗಳ ನೆನಪು ಅಲ್ಲಿಯದು. ಊರಿನ ಮುಂದೆ ಇದ್ದ ಜಾಗದಲ್ಲಿ ಒಂದು ಟೆಂಟ್ ಇತ್ತು. ಅದೇನೂ ಪರ್ಮನೆಂಟ್ ಅಲ್ಲ. ವರ್ಷದಲ್ಲಿ ಒಂದಷ್ಟು ದಿನ ಅಲ್ಲಿ ಟೆಂಟ್ ಹಾಕುತ್ತಿದ್ದರು. ಆ ಟೆಂಟಿನಲ್ಲಿ ಎಲ್ಲರೂ ನೆಲದ ಮೇಲೆ ಕೂರಬೇಕು.

ಕೆಲವರು ಮನೆಯಿಂದ ಚೇರು ತಂದು ಹಾಕಿಕೊಂಡು ಕೂರುತ್ತಿದ್ದರು. ಯಾವ ಸಿನಿಮಾ ಎನ್ನುವುದು ನನಗೆ ನೆನಪಿಲ್ಲ. ಆದರೆ ಸಿನಿಮಾಗೆ ಮುಂಚೆ ‘ಜೈ ಜವಾನ್, ಜೈ ಕಿಸಾನ್’ ಎನ್ನುವ ಘೋಷಣೆ ಯೊಂದಿಗೆ ಬೆಳೆಗಳಿಗೆ ಸಿಂಪಡಿಸುವ ಯಾವುದೋ ಒಂದು ಔಷಧದ ಜಾಹೀರಾತು ನೆನಪಿದೆ. ಹೇಳಿದ ಸಮಯಕ್ಕೆ ಸಿನಿಮಾ ಶುರುವಾದ ನೆನಪಂತೂ ಇಲ್ಲ.

ಏಕೆಂದರೆ ನನಗೆ ಅಂದಿಗೂ, ಇಂದಿಗೂ ಕಾಯುವುದು ಎಂದರೆ ಬಹಳ ಅಲರ್ಜಿ. ಹೀಗಾಗಿ ಜೀವನ ದಲ್ಲಿ ಯಾರನ್ನೂ ಕಾಯಿಸಬಾರದು ಎನ್ನುವ ಪ್ರಮಾಣ ಮಾಡಿಕೊಂಡಿದ್ದೇನೆ. ಅದನ್ನು ಪಾಲಿಸಿ ಕೊಂಡು ಬಂದಿದ್ದೇನೆ. ಜನ ಬಂದು ಟೆಂಟು ಭರ್ತಿಯಾಗುವವರೆಗೂ ಸಿನಿಮಾ ಶುರುವಾಗುತ್ತಿರ ಲಿಲ್ಲ.

ಇದನ್ನೂ ಓದಿ: Rangaswamy Mookanahalli Column: ಇದೊಂದು ನಿರಂತರ ವ್ಯಥೆ, ಬದುಕು ಬದಲಾಗುತ್ತಿರುವ ಕಥೆ !

ಒಂದಷ್ಟು ತಿಂಗಳುಗಳ ನಂತರ ಮೈಕಿನಲ್ಲಿ ‘ನಮೋ ವೆಂಕಟೇಶ, ನಮೋ ತಿರುಮಲೇಶ’ ಎನ್ನುವ ಹಾಡನ್ನ ಹಾಕುತ್ತಿದ್ದರು. ಅದು ಕೊನೆಯ ಹಾಡು, ನಂತರ ಫಿಲಂ ಶುರು ಎನ್ನುವುದನ್ನು ಕಂಡು ಹಿಡಿದು ಅದನ್ನು ಎಲ್ಲರಿಗೂ ಹೇಳಿಕೊಂಡು ತಿರುಗಿz. ಅಂದಿಗೆ ಗೊತ್ತಾಗಲಿಲ್ಲ, ಆದರೆ ಇಂದಿಗೆ ಅವರು ನೋಡುತ್ತಿದ್ದ ನೋಟದಲ್ಲಿ ಈ ಸತ್ಯ ಊರಿಗೆ ಗೊತ್ತಿದೆ. ನಿನಗೆ ಇಂದು ಜ್ಞಾನೋದಯ ಆಯ್ತಾ ಎನ್ನುವಂತಿರುತ್ತಿತ್ತು.

ಆಮೇಲೆ ನಾವು ಬೆಂಗಳೂರಿನ ಸಮೀಪದ ವಿಜಯಪುರದಲ್ಲಿ ಒಂದೆರಡು ವರ್ಷವಿದ್ದೆವು. ಅಲ್ಲಿ ಗೌರಿಶಂಕರ ಎನ್ನುವ ಥಿಯೇಟರಿನಲ್ಲಿ ನೋಡಿದ ಸಿನಿಮಾಗಳ ನೆನಪಿಗಿಂತ ಥಿಯೇಟರಿನ ಚೇರು ಗಳಲ್ಲಿ ಕುಳಿತು ‘ವಾಹ್’ ಎನ್ನಿಸಿದ ನೆನಪುಗಳು ಉಳಿದುಕೊಂಡಿವೆ. ಟೆಂಟಿನಿಂದ ಬಡ್ತಿ ಹೊಂದಿದ್ದು ಸುಲಭವಾಗಿ ಹೇಗೆ ಮರೆಯಲು ಸಾಧ್ಯ? ಆ ನಂತರ ಬೆಂಗಳೂರಿನ ಪೀಣ್ಯಕ್ಕೆ ವಲಸೆ ಬಂದೆವು.

ಅಚ್ಚರಿ ಎನ್ನಿಸುವಂತೆ ಗೆಳೆಯ ಜನಾರ್ದನನ ಮನೆಯಲ್ಲಿ ಟಿವಿ ಇತ್ತು. ನನ್ನ ಪಾಲಿಗೆ ಅದೊಂದು ಅದ್ಭುತ. ಅದಕ್ಕೆ ಮುಂಚೆ ನಮ್ಮ ಹಳ್ಳಿಯ ಅವರಿವರ ಬಾಯಿಯಲ್ಲಿ ‘ಅಮೆರಿಕದಲ್ಲಿ ಮನೆಯಲ್ಲೇ ಕುಳಿತು ಪಿಚ್ಚರ್ ನೋಡುತ್ತಾರಂತೆ’ ಎನ್ನುವ ಮಾತುಗಳನ್ನು ಕೇಳಿದ್ದೆ. ಈಗ ಅದನ್ನು ಜೀವಿಸುವ ಅವಕಾಶ ಸಿಕ್ಕಾಗ ಅಚ್ಚರಿಯಾಗದೆ ಇರುತ್ತದೆಯೇ? ಪ್ರತಿ ಭಾನುವಾರ ರಾತ್ರಿ ಪ್ರಸಾರವಾಗುತ್ತಿದ್ದ ಕನ್ನಡ ಚಲನಚಿತ್ರಕ್ಕೆ ಕಾದು ನೋಡುತ್ತಿದ್ದೆವು.

ವರ್ಷಕೊಮ್ಮೆ ಶಿವರಾತ್ರಿ ಸಮಯದಲ್ಲಿ ‘ಅಕೈ ವಿಸಿಆರ್’ ಬಾಡಿಗೆಗೆ ತರುವುದು ಮತ್ತು ಆದರ ಜತೆಗೆ ಐದಾರು ಸಿನಿಮಾ ಕೂಡ ತರುವುದು ವಾಡಿಕೆಯಾಗಿತ್ತು. ಹೀಗೆ ಒಂದೇ ರಾತ್ರಿ ‘ಬ್ಯಾಕ್-ಟು-ಬ್ಯಾಕ್’ ನೋಡಿದ ಚಿತ್ರಗಳಲ್ಲಿ ‘ತೇಜಾಬ್’ ನೆನಪಿದೆ. ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಸ್ವರ್ಗ ದಿಂದ ಇಳಿದು ಬಂದವರಂತೆ ಅಂದಿಗೆ ನನ್ನ ಕಣ್ಣಿಗೆ ಕಂಡಿದ್ದರು.

ಅದಾದ ಮೇಲೆ ಹೆಚ್ಚು ನೆನಪಲ್ಲಿ ಉಳಿದ ಸಿನಿಮಾ ‘ಈವಿಲ್ ಡೆಡ್’. ಈ ಚಿತ್ರ ನೋಡಿದ ಮೇಲೆ ಒಂದು ವಾರ ಮತ್ತೂ ಆಮೇಲೂ ಒಬ್ಬನೇ ಕತ್ತಲೆ ಕೋಣೆಯೊಳಗೆ ಹೋಗಲು ಭಯವಾಗುತ್ತಿತ್ತು ಎನ್ನುವುದು ಇದು ನೆನಪಲ್ಲಿ ಉಳಿಯಲು ಪ್ರಮುಖ ಕಾರಣ. ಇವತ್ತಿಗೂ ಹಾರರ್ ಸಿನಿಮಾ ಎಂದರೆ ನನಗೆ ಅಲರ್ಜಿ.

ಹೀಗೆ ಹತ್ತಾರು ಜನ ಕಡಿಮೆ ಜಾಗದಲ್ಲಿ ನೆಲದ ಮೇಲೆ ಕೂತು ಒಟ್ಟಾಗಿ ಸಿನಿಮಾ ನೋಡುತ್ತಾ ಇದ್ದದ್ದು ಇಂದಿಗೆ ಮಧುರ ನೆನಪು. ನಂತರದ ದಿನಗಳಲ್ಲಿ ನನ್ನ ಮನೆಗೂ ಟಿವಿ ಬಂದಿತು. ಅಂದಿನ ದಿನದಲ್ಲಿ ರಾಮಾಯಣ ಸೀರಿಯಲ್ ಪ್ರತಿ ಭಾನುವಾರ ಬರುತ್ತಿತ್ತು. ಅದನ್ನು ನೋಡುವ ಸಲುವಾಗಿ ‘ಆಸ್ಕರ್’ ಎನ್ನುವ ಕಪ್ಪು ಬಿಳುಪು ಟಿವಿಯನ್ನು ಅಪ್ಪ ಖರೀದಿಸಿದ್ದರು.

ಅಂದಿಗೆ ಬರುತ್ತಿದ್ದ ದೂರದರ್ಶನದ ಕಾರ್ಯಕ್ರಮಗಳು ಬದುಕಿನ ಎಲ್ಲವೂ ಆಗಿದ್ದವು. ಭಾರತ ಬದಲಾಗಿ ಇಂದಿನ ಭಾರತವಾಗಿ ಹತ್ತಾರು ಚಾನಲ್ ಬಂದು ನಮ್ಮೆಲ್ಲರ ಮನೆಯ ಬಾಗಿಲು ಬಡಿಯು ವಾಗ ನಾನು ದುಬೈನಲ್ಲಿದ್ದೆ. ದುಬೈ ವಾಸ ಕೇವಲ ಮೂರು ತಿಂಗಳದ್ದು ಆದರೂ ಅಲ್ಲಿ ಕೂಡ ಬಹಳಷ್ಟು ಚಾನಲ್‌ಗಳು ಬರುತ್ತಿದ್ದವು.

ಕನ್ನಡ ಕಡಿಮೆ, ಆದರೆ ಮಲಯಾಳಂ ಮತ್ತು ತಮಿಳು ಚಾನಲುಗಳು ಹೇರಳವಾಗಿ ಬರುತ್ತಿದ್ದವು. 99/2000 ಕೂಡ ಇನ್ನೂ ಡಿವಿಡಿ ಯುಗ ಅಂತ ಹೇಳಬಹುದು. ಚಲನಚಿತ್ರಗಳಲ್ಲಿ ವಿಶೇಷ ಆಸಕ್ತಿ ಇರದ ಕಾರಣ ನನಗೆ ಇದರ ಬದಲಾವಣೆ ಅಷ್ಟೇನೂ ತಟ್ಟಲಿಲ್ಲ. ಬಾರ್ಸಿಲೋನಾಗೆ ಬಂದಾಗ 2000ನೇ ಇಸವಿಯಲ್ಲಿ ಇಲ್ಲಿ ಯಾವುದೇ ಭಾರತೀಯ ಚಾನಲ್ ಇರಲಿಲ್ಲ.

ಭಾರತೀಯ ಚಾನಲ್ ಅಥವಾ ಚಲನಚಿತ್ರ ನೋಡಬೇಕೆಂದರೆ ದೊಡ್ಡ ಜರಡಿಯಾಕಾರದ ಆಂಟೆನಾ ಹಾಕಬೇಕಿತ್ತು. ಅದು ಕೂಡ ಬಾರ್ಸಿಲೋನಾದಲ್ಲಿ ಸಿಗುತ್ತಿರಲಿಲ್ಲ. ಇಂಗ್ಲೆಂಡ್ ನಲ್ಲಿ ಒಬ್ಬ ಸರ್ದಾರ್ಜಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ಇದನ್ನ ಸ್ಥಾಪಿಸಲು ಪೂರ್ಣ ಸಾವಿರ ಯುರೋ ಖರ್ಚಾಗುತ್ತಿತ್ತು. ಆಮೇಲೆ ಪ್ರತಿವರ್ಷ 350 ಯುರೋ ಕೊಟ್ಟು ಕಾರ್ಡ್ ರಿನ್ಯೂಯಲ್ ಮಾಡಿಸ ಬೇಕಿತ್ತು.

ಇದೇನೋ ಸುಲಭದ ಕೆಲಸ. ಆದರೆ ಬಿಲ್ಡಿಂಗ್ ಮೇಲೆ ಇಂಥ ಆಂಟೆನಾ ಅಳವಡಿಸಲು ನಾವಿದ್ದ ಅಪಾರ್ಟ್ಮೆಂಟ್ ಕಮ್ಯುನಿಟಿ ಇಂದ ಅನುಮತಿ ಪಡೆಯಬೇಕಿತ್ತು. ಮುಕ್ಕಾಲು ಪಾಲು ಅಪಾರ್ಟ್ಮೆಂಟ್‌ಗಳು ಇದಕ್ಕೆ ಅನುಮತಿ ಕೊಟ್ಟಿರಲಿಲ್ಲ. ಅವರಿಗೆ ‘ಈ ಪಾಕಿಸ್ತಾನಿ ತನ್ನ ದೇಶದ ಜತೆ ಏನೋ ಗುಟ್ಟಾಗಿ ಮಾತನಾಡಲು ಇಂಥ ಆಂಟೆನಾ ಹಾಕಿಸುತ್ತಿzನೆ’ ಎನ್ನುವ ಗುಮಾನಿ.

ಅಯ್ಯಗಳಿರಾ ನಾನು ಪಾಕಿಸ್ತಾನಿಯಲ್ಲ ಎಂದು ವಿಧ ವಿಧವಾಗಿ ಗೋಗರೆದರೂ ನಮ್ಮ ಸ್ಪ್ಯಾನಿಷ ರಿಗೆ ಅದು ಅರ್ಥವಾಗುತ್ತಲೇ ಇರಲಿಲ್ಲ. 2004ರ ಅಂತ್ಯಕ್ಕೆ ಸ್ವಂತ ಮನೆಯನ್ನ ಕೊಂಡೆ. 2005ರಲ್ಲಿ ಮದುವೆ, ರಮ್ಯ ಜತೆಯಾದಳು. ಪ್ಯಾರಾಬೋಲಿಕ್ ಆಂಟೆನಾ ಹಾಕಿಸು ಎನ್ನುವುದು ಅವಳ ಒತ್ತಾಯ.

ಸರಿ ಇಷ್ಟು ದಿನ ಬಾಡಿಗೆ ಮನೆ, ಕಮ್ಯುನಿಟಿಯವರು ಹೇಳಿದ್ದಕ್ಕೆ ತಲೆ ಅಡಿಸಿ ಆಗಿತ್ತು. ಈಗ ಸ್ವಂತ ಮನೆ, ಏನೇ ಆದರೂ ಸರಿ ಈ ಆಂಟೆನಾ ಹಾಕಿಸಿಯೆ ಸರಿ ಎಂದು ನಮ್ಮ ಕಮ್ಯುನಿಟಿ ಪ್ರೆಸಿಡೆಂಟ್ ಅನ್ನು ವಿಚಾರಿಸಿದೆ. ಅವನು ‘ಇಲ್ಲ’ ಅಂತ ಉದ್ದುದ್ದ ಕೈ ಆಡಿಸಿದ. ನಾನು ಬಿಡಲಿಲ್ಲ. ‘ನೆಕ್ಸ್ಟ್ ಮೀಟಿಂಗ್ ನಲ್ಲಿ ವಿಷಯ ಪ್ರಸ್ತಾಪ ಮಾಡು’ ಅಂದ.

ಮುಂದಿನ ಮೀಟಿಂಗ್‌ನಲ್ಲಿ ನಮ್ಮ ಬಿಲ್ಡಿಂಗ್‌ನಲ್ಲಿದ್ದ 36 ಫ್ಲಾಟ್ ಗಳಲ್ಲಿ 34 ಫ್ಲಾಟ್‌ನಲ್ಲಿದ್ದವರು ಸ್ಪ್ಯಾನಿಷರು. ನಾನು ಮತ್ತು ಇನ್ನೊಂದು ಸೌತ್ ಅಮೆರಿಕನ್ ಕುಟುಂಬ ಮಾತ್ರ ವಿದೇಶಿಯರು. ಅದೂ ಹೇಳಿಕೇಳಿ ಮುಕ್ಕಾಲು ಪಾಲು ಅಲ್ಲಿನ ಸ್ಪ್ಯಾನಿಷ್ ನಿವಾಸಿಗಳು ಹಿರಿಯ ನಾಗರಿಕರು. ಬದಲಾವಣೆಗೆ ಬಡಪೆಟ್ಟಿಗೂ ಒಪ್ಪದವರು. ಕೊನೆಗೆ ಮೂರು ತಿಂಗಳ ಹೋರಾಟ ಮಾಡಿ ಲಾಯರ್ ನೋಟಿಸ್ ಕಳಿಸಿ ಆಂಟೆನಾ ಸ್ಥಾಪಿಸಿದೆವು.

ಆಗ ಬರುತ್ತಿದ್ದ ಝೀ ಮೂವೀಸ್ ಮತ್ತು B4U ಮೂವೀಸ್ ನಮ್ಮ ಭಾರತೀಯ ಚಲನಚಿತ್ರದ ಸೋರ್ಸ್ ಆಗಿದ್ದವು. ನಂತರದ ದಿನಗಳಲ್ಲಿ ವೀಕ್ ಎಂಡ್ ಬಂದರೆ ಸಾಕು ಬಾರ್ಸಿಲೋನಾದಿಂದ ‘ಈಜಿ ಜೆಟ್’ ಏರಿ ಇಂಗ್ಲೆಂಡ್‌ನ ಲಂಡನ್ ನಗರವನ್ನ ತಲುಪುತ್ತಿದ್ದೆವು. ಅಲ್ಲಿನ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ ಗುಜರಾತಿ ಹುಡುಗಿಯರು, ಮಹಿಳೆಯರು, ಅಜ್ಜಿಯರು ಸಿನಿಮಾವನ್ನ ಕೇಕೆ ಹಾಕುತ್ತ, ವಿಸಿಲ್ ಹೊಡೆಯುತ್ತ ನೋಡುವುದಕ್ಕೆ ಸಾಕ್ಷಿಯಾದೆವು.

‘ಗಜನಿ’, ‘ರಬ್ ನೇ ಬನಾದಿಯ ಜೋಡಿ’ ಹೀಗೆ ಅಲ್ಲಿ ನೋಡಿದ ಸಿನಿಮಾಗಳ ಲಿಸ್ಟ್ ದೊಡ್ಡದು. ನನಗೆ ಸಿನಿಮಾ ಅಂದರೆ ವಿಶೇಷ ಪ್ರೀತಿಯೇನೂ ಇಲ್ಲ. ಆದರೆ ವಾರ ಪೂರ್ತಿ ಸೋಷಿಯಲ್ ಲೈಫ್ ಇಲ್ಲದ ರಮ್ಯಳಿಗೆ ಈ ಸಿನಿಮಾಗಳು ಲೈಫ್ ಲೈನ್ ಆಗಿದ್ದವು. ಲಂಡನ್ ನಗರದ ಗಲ್ಲಿಗಲ್ಲಿಯನ್ನ ಬಿಡು ಬೀಸಾಗಿಸುತ್ತಿದ ಆ ದಿನಗಳ ನೆನಪು ಸುಖಕರ. ‌

ಮೂರು ದಶಕದಲ್ಲಿ ಬದುಕು, ಜಗತ್ತು ಬದಲಾದ ರೀತಿ, ವೇಗ ಅಚ್ಚರಿ ಹುಟ್ಟಿಸುತ್ತವೆ. ಈಗ ಎಲ್ಲವೂ ಕೈ ಬೆರಳ ತುದಿಯಲ್ಲಿವೆ! ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜತೆಗೆ ಇನ್ನೂ ಅಸಂಖ್ಯಾತ ಸರ್ವೀಸ್ ಪ್ರೊವೈಡರ್ಸ್ ಇಂದು ಮಾರುಕಟ್ಟೆಯಲ್ಲಿದ್ದಾರೆ. ನಮಗೆ ಬೇಕಾದ ಫಿಲಂ, ಡಾಕ್ಯುಮೆಂಟರಿ, ವೆಬ್ ಸಿರೀಸ್, ಇತರ ಏನೇ ಆದರೂ ಎಲ್ಲವನ್ನೂ ನಮಗಿಷ್ಟದ ಸಮಯದಲ್ಲಿ ನಾವು ನೋಡಬಹುದು. ಇಂಥ ಬದಲಾವಣೆ ನೋಡಿದಾಗೆಲ್ಲ ಹಿಂದಿನ ದಿನಗಳಲ್ಲಿ ಒಂದು ಚಲನಚಿತ್ರ ವೀಕ್ಷಿಸಲು ಎಷ್ಟೆ ಹರಸಾಹಸ ಪಟ್ಟಿದ್ದೆವು ಎನ್ನುವುದು ನೆನಪಾಗಿ, ಇವತ್ತಿನ ದಿನ ನಿಜವೋ ಸುಳ್ಳೋ ಎನ್ನುವ ಭಾವನೆ ಬರುತ್ತದೆ.

ಒಟಿಟಿ ಎನ್ನುವುದು ನಾವು ಸಿನಿಮಾ ನೋಡುವ ರೀತಿಯನ್ನು ಬದಲಿಸಿಬಿಟ್ಟಿದೆ. ಇಂದಿಗೆ ಹಲವಾರು ಚಿತ್ರಗಳು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುತ್ತವೆ. ಅವುಗಳು ಥಿಯೇಟರ್ ಗೋಜಿಗೆ ಹೋಗುವುದಿಲ್ಲ. ಇಂದು ಸಮಾಜ ಬದಲಾಗಿದೆ. ನಗರ ಪ್ರದೇಶದಲ್ಲಿ ಹೆಚ್ಚಾಗಿರುವ ಟ್ರಾಫಿಕ್ ಸಮಸ್ಯೆಯಿಂದ ಜನ ದೋಸೆಯನ್ನು ಕೂಡ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿ ತಿನ್ನುವ ಮಟ್ಟಕ್ಕೆ ಬದಲಾಗಿದ್ದಾರೆ.

ಇನ್ನು ಸಿನಿಮಾ ತೀರಾ ಚೆನ್ನಾಗಿದೆ ಎನ್ನುವ ಅಂಶ ತಿಳಿಯದಿದ್ದರೆ ಥಿಯೇಟರಿಗೆ ಹೋಗುವವರ ಸಂಖ್ಯೆ ಕೂಡ ಕುಸಿದಿದೆ. ಕರೋನ ನಂತರ ಮನೆಯೇ ಮಂತ್ರಾಲಯ ಎನ್ನುವ ಮಾತಿಗೆ ಜನ ಹೆಚ್ಚು ಬೆಲೆ ಕೊಡುತ್ತಿದ್ದಾರೆ.

ಇವತ್ತಿಗೆ ಮನೆಯಲ್ಲಿ ಕುಳಿತು ಜಗತ್ತಿನ ಬೇರೆ ಬೇರೆ ಭಾಷೆಯ ಅನೇಕ ಸಿನಿಮಾ, ವೆಬ್ ಸಿರೀಸ್ ಎಲ್ಲವನ್ನೂ ಕನ್ನಡದಲ್ಲಿ ಅಥವಾ ಹಿಂದಿಯಲ್ಲಿ ನೋಡುವ ಅವಕಾಶ ಸೃಷ್ಟಿಯಾಗಿದೆ. ಕೊರಿಯನ್ ಸೀರಿಯಲ್‌ಗಳಿಗೆ ನಮ್ಮ ಯುವಜನತೆ ಮಾರುಹೋಗಿದ್ದಾರೆ. ಇದರ ಜತೆಗೆ ಯೂಟ್ಯೂಬ್ ಎನ್ನುವುದು ಜಗತ್ತನ್ನು ಪುಟಾಣಿ ಹಳ್ಳಿಯನ್ನಾಗಿ ಪರಿವರ್ತಿಸಿದೆ. ಅಲ್ಲಿನ ಶಾರ್ಟ್ ವಿಡಿಯೋಗಳಲ್ಲಿನ ಕಂಟೆಂಟ್ ಆ ಸಮಾಜಕ್ಕೆ ಒಪ್ಪಿತವಾಗಿರುತ್ತದೆ. ಅವುಗಳನ್ನು ಇಲ್ಲಿನ ನಮ್ಮ ಜನ ಯಥಾವತ್ತು ನಕಲು ಮಾಡುತ್ತಿದ್ದಾರೆ.

ನನ್ನ ಆಪ್ತರೊಬ್ಬರ ಜತೆಗಿನ ಮಾತುಕತೆಯಲ್ಲಿ ಅವರೊಂದು ವಿಷಯ ಹೇಳಿದರು. ಒಮ್ಮೆ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಅವರ ಎದುರು ಮಧ್ಯಮ ವರ್ಗದ ಒಂದು ಸಂಸಾರ ಬಂದು ಕುಳಿತರಂತೆ, ಅವರ ಏಳೆಂಟು ವರ್ಷದ ಮಗು ಪೂರ್ಣ ಬ್ರಿಟಿಷ್ ಶೈಲಿಯ ಇಂಗ್ಲಿಷಿನಲ್ಲಿ ಮಾತಾಡು ತ್ತಿತ್ತಂತೆ. ಇವರು ಕುತೂಹಲ ತಾಳಲಾಗದೆ ನೀವು ಬ್ರಿಟನ್ ನಿವಾಸಿಗಳೇ? ಎಂದು ಕೇಳಿದರಂತೆ.

ಅದಕ್ಕವರು, ಇಲ್ಲ ನಾವು ಕೆಂಗೇರಿ ನಿವಾಸಿಗಳು ಎಂದವರು ಮುಂದುವರಿದು ನಮ್ಮ ಮಗಳು ಯೂಟ್ಯೂಬಿನಲ್ಲಿ ನಿತ್ಯ ‘ಪೆಪ್ಪಾ ಪಿಗ್’ ಎನ್ನುವ ವಿಡಿಯೋಗಳನ್ನು ನೋಡುತ್ತಾಳೆ, ಹಾಗಾಗಿ ಅವಳ ಇಂಗ್ಲಿಷ್ ಆ ರೀತಿಯಿದೆ ಎಂದರಂತೆ!

ಮೂರು ದಶಕದ ಹಿಂದೆ ಇಷ್ಟೆ ಬದಲಾವಣೆಯಾಗುತ್ತದೆ ಎಂದು ಯಾರಾದರೂ ಹೇಳಿದ್ದರೆ ಅವರನ್ನು ನಾವು ಹುಚ್ಚ ಎಂದಿರುತ್ತಿದ್ದೆವು. ಮುಂದಿನ ದಶಕಗಳಲ್ಲಿ ಬದುಕು ಯಾವ ರೀತಿ ಬದಲಾಗಬಹುದು? ಶಾಲೆ, ಕಾಲೇಜು, ಸಿನಿಮಾ ಮಂದಿರ, ಬ್ಯಾಂಕು, ಪೋ ಆಫೀಸ್, ಇತರೆ ಆಫೀಸ್ ಇತ್ಯಾದಿ ಯಾವೆ ಇಂದಿಗೆ ನಮ್ಮ ಬದುಕಿನ ಭಾಗವಾಗಿವೆ ಅವೆಲ್ಲವೂ ಮಾಯವಾಗಲಿವೆ. ಎಲ್ಲವೂ ಬೆರಳ ತುದಿಯಲ್ಲಿ, ಡಿಜಿಟಲ್ ಮಯವಾಗಲಿವೆ. ಬದಲಾವಣೆಯ ಜತೆ ಜತೆಗೆ ಹೆಜ್ಜೆ ಹಾಕುವುದೇ ಬದುಕು, ಅಲ್ಲವೇ?

ರಂಗಸ್ವಾಮಿ ಎಂ

View all posts by this author