ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಗುರುವಿನ ಅಗತ್ಯ

ನಿಮ್ಮ ನಿರ್ದಿಷ್ಟ ಅವಶ್ಯಕತೆಗೆ ಅನುಗುಣವಾಗಿ ಅವರು ನಿಮಗೆ ಮಾರ್ಗದರ್ಶನ ನೀಡು ತ್ತಾರೆ. ಅದೇ ರೀತಿಯಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ತರಬೇತುದಾರರು, ಮಾರ್ಗದರ್ಶಕರು ಮತ್ತು ಸಹಾಯ ಕರು ಇದ್ದಾರೆ. ಭಾರತದಲ್ಲಿ, ಅಂಥ ಶಿಕ್ಷಕರು, ತಜ್ಞರು ಮತ್ತು ಮಾರ್ಗದರ್ಶಕರನ್ನು ಗುರುಗಳು ಎಂದು ಕರೆಯುತ್ತಾರೆ.

ಗುರುವಿನ ಅಗತ್ಯ

ಸಂಪಾದಕರ ಸದ್ಯಶೋಧನೆ

ಇತ್ತೀಚೆಗೆ ನಾನು ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಯಲ್ಲಿ ಒಂದು ಪುಸ್ತಕವನ್ನು ಖರೀದಿಸಿ, ವಿಮಾನ ಪ್ರಯಾಣದುದ್ದಕ್ಕೂ ಅದನ್ನು ಓದುತ್ತಿದ್ದೆ. ರಾಧಾಕೃಷ್ಣ ಪಿಳ್ಳೈ ಅವರು ಬರೆದ Chanakya In Daily Life ಎಂಬುದು ಕೃತಿಯ ಶೀರ್ಷಿಕೆ. ಚಾಣಕ್ಯನ ನೀತಿ ಮತ್ತು ಸಿದ್ಧಾಂತ ದೈನಂದಿನ ಜೀವನದಲ್ಲಿ ಎಷ್ಟು ಪ್ರಸ್ತುತ ಮತ್ತು ದಿನನಿತ್ಯ ಅವನ್ನು ಹೇಗೆ ಸಮ ರ್ಪಕವಾಗಿ ಬಳಸಬಹುದು ಎಂಬುದನ್ನು ಲೇಖಕರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ವೈಯಕ್ತಿಕ ತರಬೇತುದಾರನ ಪರಿಕಲ್ಪನೆಯು ಕ್ರೀಡಾ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಯಾವುದೇ ಯಶಸ್ವಿ ಕ್ರೀಡಾಪಟುವಿಗೆ ಅವನ/ಅವಳ ವೈಯಕ್ತಿಕ ತರಬೇತುದಾರನ ಪ್ರಾಮು ಖ್ಯವೇನು ಎಂಬುದು ಗೊತ್ತು. ನೀವು ಜಿಮ್‌ಗೆ ಹೋದರೆ, ವೈಯಕ್ತಿಕ ತರಬೇತುದಾರರು ನಿಮ್ಮ ಪ್ರಗತಿಯನ್ನು ವೇಗಗೊಳಿಸಲು ಸಹಾಯ ಮಾಡಬಹುದು.

ಇದನ್ನೂ ಓದಿ: Vishweshwar Bhat Column: ನೆಹರು- ವಾಜಪೇಯಿ ಸ್ನೇಹ

ನಿಮ್ಮ ನಿರ್ದಿಷ್ಟ ಅವಶ್ಯಕತೆಗೆ ಅನುಗುಣವಾಗಿ ಅವರು ನಿಮಗೆ ಮಾರ್ಗದರ್ಶನ ನೀಡು ತ್ತಾರೆ. ಅದೇ ರೀತಿಯಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ತರಬೇತುದಾರರು, ಮಾರ್ಗದರ್ಶಕರು ಮತ್ತು ಸಹಾಯಕರು ಇzರೆ. ಭಾರತದಲ್ಲಿ, ಅಂಥ ಶಿಕ್ಷಕರು, ತಜ್ಞರು ಮತ್ತು ಮಾರ್ಗದರ್ಶಕರನ್ನು ಗುರುಗಳು ಎಂದು ಕರೆಯುತ್ತಾರೆ.

ವ್ಯಾಪಾರ ತರಬೇತುದಾರರು, ರಾಜಕೀಯ ಮಾರ್ಗದರ್ಶಕರು ಮತ್ತು ತಾಂತ್ರಿಕ ಸಲಹೆ ಗಾರರು ಇದ್ದಾರೆ. ಭಾರತದಲ್ಲಿ ನಮಗೆ ಆಧ್ಯಾತ್ಮಿಕ ಗುರುಗಳೂ ಇದ್ದಾರೆ. ಹಾಗಾದರೆ ಈ ಜನರ ಪಾತ್ರವೇನು? ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡಲು ಮತ್ತು ಮಾರ್ಗ ದರ್ಶನ ನೀಡಲು ಇವರು ಬೇಕು. ಚಂದ್ರಗುಪ್ತ ಮೌರ್ಯ ಚಾಣಕ್ಯನಿಂದ ವೈಯಕ್ತಿಕ ಮಾರ್ಗದರ್ಶನವನ್ನು ಪಡೆಯದಿದ್ದರೆ, ಅವನು ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ ನಾಗುತ್ತಿರಲಿಲ್ಲ.

ಹಾಗಾದರೆ ಪ್ರಶ್ನೆಯೆಂದರೆ, ನಿಮ್ಮ ವೈಯಕ್ತಿಕ ಗುರುವನ್ನು ನೀವು ಹೇಗೆ ಕಂಡು ಹಿಡಿ ಯುತ್ತೀರಿ? ಈ ಗುರುಗಳ ಬಗ್ಗೆ ಚಾಣಕ್ಯ ಹೇಳಿದ ಮಾತುಗಳಿಂದ ಆರಂಭಿಸೋಣ. ಒಬ್ಬ ರಾಜನು ರಾಜನಾಗುತ್ತಾನೆ, ಏಕೆಂದರೆ ಅವನು ಗುರುವಿನ ಮಾರ್ಗದರ್ಶನಕ್ಕೆ ಬದ್ಧ ನಾಗಿರುತ್ತಾನೆ.

ಒಬ್ಬ ರಾಜನ ಸ್ವಂತ ಮಗು ಸಿಂಹಾಸನವನ್ನೇರಲು ಅರ್ಹನಾದರೆ, ಅವನಿಗೆ ರಾಜ, ನೀತಿ ವಿಜ್ಞಾನದಲ್ಲಿ ತರಬೇತಿ ನೀಡಲು ತಜ್ಞರನ್ನು ನೇಮಿಸುತ್ತಾನೆ. ಅದೇ ರೀತಿ, ಇಂದಿನ ಜಗತ್ತಿ ನಲ್ಲಿ, ಮಗು ಕಲಿಯಲು ಸಿದ್ಧವಾದಾಗ, ಪೋಷಕರು ಅವನಿಗೆ ಉತ್ತಮ ಶಿಕ್ಷಣ, ಉತ್ತಮ ಶಾಲೆ ಮತ್ತು ಅಗತ್ಯವಿದ್ದರೆ ಖಾಸಗಿ ಕೋಚಿಂಗ್ ತರಗತಿಗಳನ್ನು ಒದಗಿಸಲು ಪ್ರಯತ್ನಿಸು ತ್ತಾರೆ. ಅಲ್ಲದೆ, ಮಗುವಿಗೆ ಕ್ರೀಡೆ, ವಿದೇಶಿ ಭಾಷೆಗಳು, ಕಲೆಗಳು ಮುಂತಾದ ಇತರ ಕ್ಷೇತ್ರ ಗಳಲ್ಲಿ ಆಸಕ್ತಿ ಇದ್ದಾಗ, ಅವುಗಳನ್ನು ಕಲಿಯಲು ಸಂಬಂಧಿತ ಸಂಸ್ಥೆಗಳಿಗೆ ಕಳುಹಿಸ ಲಾಗುತ್ತದೆ.

ಏನೇ ಇರಲಿ, ನಮ್ಮಲ್ಲಿ ಉತ್ತಮ ಮಾರ್ಗದರ್ಶಕ, ತರಬೇತಿದಾರ, ಗುರುವಿರುವುದು ಬಹಳ ಮುಖ್ಯ ಎಂದು ಚಾಣಕ್ಯ ಹೇಳುತ್ತಾನೆ. ನಮ್ಮ ವೃತ್ತಿಜೀವನಕ್ಕಾಗಿ ನಾವು ಆಯ್ಕೆ ಮಾಡಿದ ನಿರ್ದಿಷ್ಟ ಕ್ಷೇತ್ರವಿದ್ದರೂ, ನಾವೆಲ್ಲರೂ ಏಕಕಾಲದಲ್ಲಿ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇವೆ. ಏಕೆಂದರೆ ನಮ್ಮ ಕೆಲಸದ ಹೊರತಾಗಿ, ನಮ್ಮ ಇತರ ಸಮಯವನ್ನು ಕಳೆಯಲು ಇಷ್ಟಪಡುವ ಆಸಕ್ತಿಯ ವಿಷಯ ಗಳನ್ನು ಕಲಿಯಲು ಹಂಬಲಿಸುತ್ತೇವೆ.

ನೀವು ಕಂಪನಿಯಲ್ಲಿ ಸಾಫ್ಟ್‌ ವೇರ್ ಎಂಜಿನಿಯರ್ ಆಗಿದ್ದರೆ, ಅದು ನಿಮ್ಮ ಕೆಲಸದ ಕ್ಷೇತ್ರ ವಾಗಿದೆ. ಆದರೆ ಅದರ ಹೊರತಾಗಿ, ನೀವು ಈಜು, ಪಿಯಾನೋ ನುಡಿಸುವಿಕೆ ಅಥವಾ ಟ್ರೆಕಿಂಗ್‌ನಲ್ಲಿ ಆಸಕ್ತಿ ಹೊಂದಿರಬಹುದು. ನೀವು ಪ್ರವೇಶಿಸುವ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಸಾಧಕರಾಗಲು ಯೋಚಿಸಬೇಕು. ಆದ್ದರಿಂದ, ನೀವು ಸಾಫ್ಟ್‌ ವೇರ್ ಎಂಜಿನಿಯರ್ ಆಗಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿದ್ದರೆ, ಒಳ್ಳೆಯದೇ. ಆದರೆ ಅಷ್ಟಕ್ಕೇ ಸಂತೃಪ್ತ ರಾಗಬಾರದು.

ಪಿಯಾನೋವಾದಕರಾಗಿ ತರಬೇತಿ ಪಡೆದರೆ, ಅಷ್ಟಕ್ಕೇ ಸುಮ್ಮನಾಗಬಾರದು. ಅಲ್ಲಿಯೂ ಶ್ರೇಷ್ಠತೆ ಪಡೆಯಲು ಶ್ರಮಿಸಬೇಕು. ಸಾಫ್ಟ್‌ ವೇರ್ ಕೆಲಸದ ಮಧ್ಯೆ ಟ್ರೆಕಿಂಗ್ ಅಭಿರುಚಿ ಹೊಂದಿದ್ದರೆ, ಮೌಂಟ್ ಎವರೆ ಏರುವ ಬಗ್ಗೆಯೂ ಕನಸು ಕಾಣಬೇಕು.