ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಬದುಕಿನಲ್ಲಿ ಸದಾ ಉಳಿಯುವ ʼರಾಮನಾಮʼ

ಭಕ್ತನು, “ಹಾಗಿದ್ದರೆ ನನಗೂ ಶ್ರೀರಾಮದರ್ಶನ ಸಾಧ್ಯವಿದೆಯೇ?" ಎಂದು ಕೇಳುತ್ತಾನೆ. ತುಳಸೀ ದಾಸರು, “ಯಾಕಿಲ್ಲ? ನಿನಗೂ ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ ಸುಲಭವಾಗಿಯೂ ಇದೆ. ನೀನು ಈ ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಒಂದೊಳ್ಳೆ ಮಾತು

ಒಮ್ಮೆ ಭಕ್ತನೊಬ್ಬ ಗೋಸ್ವಾಮಿ ತುಳಸೀದಾಸರನ್ನು ಕೇಳುತ್ತಾನೆ, “ನೀವು ಇಷ್ಟೆ ರಾಮನಾಮ ಜಪ, ಅವನ ಗುಣಗಾನ ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ ಶ್ರೀರಾಮನ ದರ್ಶನ ಆಗಿದೆಯೇ?" ಅದಕ್ಕೆ ತುಳಸೀದಾಸರು, “ಖಂಡಿತವಾಗಿಯೂ ಆಗಿದೆ!" ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು, “ಹಾಗಿದ್ದರೆ ನನಗೂ ಶ್ರೀರಾಮದರ್ಶನ ಸಾಧ್ಯವಿದೆಯೇ?" ಎಂದು ಕೇಳುತ್ತಾನೆ. ತುಳಸೀ ದಾಸರು, “ಯಾಕಿಲ್ಲ? ನಿನಗೂ ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ ಸುಲಭವಾಗಿಯೂ ಇದೆ. ನೀನು ಈ ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ, “ಬಿಡಿಸಿ ಹೇಳಿ ಸ್ವಾಮೀ" ಎಂದು ವಿನಂತಿಸಿದ. ತುಳಸೀದಾಸರು ಹೇಳು ತ್ತಾರೆ- “ನೋಡು, ಇದಕ್ಕೊಂದು ಸುಲಭಸೂತ್ರ ಇದೆ. ಈ ಪ್ರಪಂಚದಲ್ಲಿ ಯಾರದೇ ಹೆಸರಿಗಾದರೂ ಸರಿ ಈ ಸೂತ್ರವನ್ನು ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ ಹೆಸರೇ ಸಿಗುತ್ತದೆ!".

ಇದನ್ನೂ ಓದಿ: Roopa Gururaj Column: ಓದಿ ತಿಳಿದುಕೊಂಡವನಿಗೆ ಮೂರ್ಖತ್ವವಿಲ್ಲ

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ. “ಯಾವುದು ಆ ಸೂತ್ರ?" ಎಂದು ಕೇಳಿದ. ಆಗ ತುಳಸೀ ದಾಸರು ಹೇಳುತ್ತಾರೆ: “ನಾಮ ಚತುರ್ಗುಣ ಪಂಚತತ್ತ್ವ ಮಿಲನ, ತಾಸಾಂ ದ್ವಿಗುಣ ಪ್ರಮಾಣ, ತುಲಸೀ ಅಷ್ಟಸೌಭಾಗ್ಯೇ ಅಂತ ಮೇ ಶೇಷ ರಾಮ ಹೀ ರಾಮ ||". ಅಂದರೆ, ಯಾರದೇ ಹೆಸರಾದರೂ ಸರಿ, ಅದರಲ್ಲಿರುವ ಅಕ್ಷರ ಗಳನ್ನು ಎಣಿಸು. ಅದನ್ನು ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು (ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು ಎಂಟರಿಂದ ಭಾಗಿಸು (ಅಷ್ಟ ಸೌಭಾಗ್ಯ). ಭಾಗಲಬ್ಧ ಎಷ್ಟೇ ಇರಲಿ, ಶೇಷ ಉಳಿಯುವುದು ಎರಡೇ. ಆ ಎರಡು ಅಕ್ಷರಗಳೇ ರಾಮ! ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು ತನ್ನ ಹೆಸರು ನಿರಂಜನ ಎಂದು ನಾಲ್ಕು ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು ಅನ್ವಯಿ ಸಿದ- 4X4=16; 16+5=21; 21X2=42; 42/8 = ಭಾಗಲಬ್ಧ 5. ಶೇಷ 2. ತನ್ನ ಹೆಂಡತಿಯ ಹೆಸರು ನಿರ್ಮಲಾ ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ- 3X4=12; 12+5=17; 17X2=34; 34/8 = ಭಾಗಲಬ್ಧ 4. ಶೇಷ 2. ತನ್ನ ಮಗಳ ಹೆಸರು ನಿಧಿ ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ- 2X4=8; 8+5=13; 13X2=26; 26/8 = ಭಾಗಲಬ್ಧ 3.

ಶೇಷ 2. ತನ್ನ ಪಕ್ಕದ ಮನೆಯವನ ಹೆಸರು ನಿಖಿಲಾನಂದ ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ- 5X4=20; 20+5=25; 25X2=50; 50/8 = ಭಾಗಲಬ್ಧ 6. ಶೇಷ 2. ಹೌದಲ್ವಾ! ಹೆಸರು ಯಾವುದೇ ಇದ್ದರೂ, ಎಷ್ಟು ಅಕ್ಷರಗಳೇ ಇದ್ದರೂ ಕೊನೆಯಲ್ಲುಳಿಯುವುದು ಎರಡಕ್ಷರ ರಾಮ ಮಾತ್ರ! ಭಕ್ತನಿಗೆ ಬಹಳ ಖುಷಿಯಾಯ್ತು. ತುಳಸೀದಾಸರ ಕಾಲಿಗೆರಗಿದ.

ಇವತ್ತು ನನಗೆ ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು ಯಾವಾಗಲೂ ನಾನು ರಾಮನನ್ನೇ ಕಾಣುತ್ತಿ ರುತ್ತೇನೆ ಎಂದು ಅಲ್ಲಿಂದ ಹೊರಟುಹೋದ. ಅಷ್ಟಾಗಿ, ತುಳಸೀದಾಸರು ಹೇಳಿದ ಸೂತ್ರದಲ್ಲಿನ ಸಂಖ್ಯೆಗಳ ಮತ್ತು ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ? ಚತುರ್ಗುಣ= ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು. ಪಂಚತತ್ತ್ವ= ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚಮಹಾಭೂತಗಳು. ದ್ವಿಗುಣ= ಮಾಯೆ ಮತ್ತು ಬ್ರಹ್ಮ. ಅಷ್ಟಸೌಭಾಗ್ಯ= ಅನ್ನ, ಅರ್ಥ, ಪ್ರಭುತ್ವ, ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನ ಜಂಜಾಟ ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ ಕೊನೆಗೂ ಉಳಿಯುವ ಶೇಷ ರಾಮ ಮಾತ್ರ! ಈ ನಿಟ್ಟಿನಲ್ಲಿ ಭಗವಂತನನ್ನು ಪ್ರತಿಯೊಬ್ಬರಲ್ಲೂ ಕಾಣುತ್ತಾ, ಅವನ ಇರುವಿಕೆಯನ್ನು ಅನುಭವಿ ಸುತ್ತಾ, ಇರುವ ನಾಲ್ಕು ದಿನ ಒಳಿತನ್ನು ಮಾಡುತ್ತಾ ಬದುಕಿ ದರೆ, ಜೀವನಕ್ಕೊಂದು ಸಾರ್ಥಕತೆ.

ರೂಪಾ ಗುರುರಾಜ್

View all posts by this author