Vishweshwar Bhat Column: ಪೈಲಟ್ʼಗಳ ರಹಸ್ಯ ನಿದ್ರೆ
ಪ್ರತಿಯೊಬ್ಬ ಸಿಬ್ಬಂದಿಗೆ ಕಾನೂನುಬದ್ಧ ಕೆಲಸದ ಅವಧಿ ಇರುತ್ತದೆ. ಇದನ್ನು ಮೀರಬಾರದು ಎನ್ನುವ ಕಾರಣಕ್ಕೆ ವಿಮಾನದ ಹಾರಾಟದ ಸಮಯದಲ್ಲಿಯೇ ಸರದಿಯ ಪ್ರಕಾರ ವಿಶ್ರಾಂತಿ ನೀಡಲಾಗುತ್ತದೆ. ವಿಮಾನವು ಆಕಾಶದಲ್ಲಿ ಹಾರಾಡುತ್ತಿರುವಾಗ ಪ್ರತಿಯೊಬ್ಬ ಸಿಬ್ಬಂದಿಗೂ ಯಾವುದೇ ಅಡೆತಡೆಯಿಲ್ಲದ ವಿಶ್ರಾಂತಿ ಅವಧಿಯನ್ನು ಮುಂಚಿತವಾಗಿಯೇ ನಿಗದಿ ಪಡಿಸಲಾಗುತ್ತದೆ.
-
ಸಂಪಾದಕರ ಸದ್ಯಶೋಧನೆ
ದೀರ್ಘಕಾಲದ ವಿಮಾನ ಪ್ರಯಾಣದಲ್ಲಿ ಕ್ಯಾಬಿನ್ ಕ್ರ್ಯೂ (ಪರಿಚಾರಕರು) ಸದಸ್ಯರು ವಿಮಾನದ ಒಳಗೆ ಯಾರಿಗೂ ತಿಳಿಯದಂತೆ ‘ರಹಸ್ಯವಾಗಿ ನಿದ್ರೆ ಮಾಡುತ್ತಾರೆ’ ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇರುತ್ತದೆ. ಆದರೆ ಸತ್ಯ ಏನೆಂದರೆ, ಇದು ರಹಸ್ಯವೇನಲ್ಲ. ದೀರ್ಘಾವಧಿಯ ವಿಮಾನಗಳಲ್ಲಿ ಸಿಬ್ಬಂದಿಗಳ ವಿಶ್ರಾಂತಿಗಾಗಿ ವಿಮಾನದ ವಿನ್ಯಾಸದ ಪ್ರತ್ಯೇಕ ಮತ್ತು ಅಧಿಕೃತ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.
ವಿಶ್ವದ ಅತಿ ದೀರ್ಘ ವಿಮಾನ ಪ್ರಯಾಣಗಳಲ್ಲಿ ವಿಮಾನ ಸಿಬ್ಬಂದಿ ಬಳಸುವ ಈ ವಿಶ್ರಾಂತಿ ಪ್ರದೇಶಗಳು ವಿಮಾನದ ಪ್ರಮಾಣೀಕೃತ ವಿನ್ಯಾಸದ ಭಾಗವಾಗಿರುತ್ತವೆ. ಇವುಗಳನ್ನು ಅಂತಾರಾ ಷ್ಟ್ರೀಯ ವಾಯುಯಾನ ನಿಯಮಗಳ ಅಡಿಯಲ್ಲಿ ನಿರ್ಮಿಸಲಾಗಿರುತ್ತದೆ. ಇಂದಿನ ಕಾಲದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳು ಹತ್ತರಿಂದ ಹದಿನೆಂಟು ಗಂಟೆಗಳವರೆಗೆ ಸತತವಾಗಿ ಹಾರಾಟ ನಡೆಸುತ್ತವೆ.
ಇಷ್ಟು ಸುದೀರ್ಘ ಸಮಯ ಸಿಬ್ಬಂದಿಗಳು ಸತತವಾಗಿ ಜಾಗರೂಕರಾಗಿ ಕೆಲಸ ಮಾಡುವುದು ಅಸಾಧ್ಯ ಮತ್ತು ಅಪಾಯಕಾರಿ. ಈ ಕಾರಣಕ್ಕಾಗಿ ಅಂತಾ ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO), ಯುರೋಪಿಯನ್ ಯೂನಿಯನ್ ಏವಿಯೇ ಷನ್ ಸೇಫ್ಟಿ ಏಜೆನ್ಸಿ (EASA) ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನಂಥ ಸಂಸ್ಥೆಗಳು ವಿಮಾನ ಸಿಬ್ಬಂದಿಗೆ ಕಡ್ಡಾಯ ವಿಶ್ರಾಂತಿಯನ್ನು ನಿಗದಿಪಡಿಸಿವೆ.
ಇದನ್ನೂ ಓದಿ: Vishweshwar Bhat Column: ಲ್ಯಾಂಡಿಂಗ್ ಗೇರ್
ಪ್ರತಿಯೊಬ್ಬ ಸಿಬ್ಬಂದಿಗೆ ಕಾನೂನುಬದ್ಧ ಕೆಲಸದ ಅವಧಿ ಇರುತ್ತದೆ. ಇದನ್ನು ಮೀರಬಾರದು ಎನ್ನುವ ಕಾರಣಕ್ಕೆ ವಿಮಾನದ ಹಾರಾಟದ ಸಮಯದಲ್ಲಿಯೇ ಸರದಿಯ ಪ್ರಕಾರ ವಿಶ್ರಾಂತಿ ನೀಡ ಲಾಗುತ್ತದೆ. ವಿಮಾನವು ಆಕಾಶದಲ್ಲಿ ಹಾರಾಡುತ್ತಿರುವಾಗ ಪ್ರತಿಯೊಬ್ಬ ಸಿಬ್ಬಂದಿಗೂ ಯಾವುದೇ ಅಡೆತಡೆಯಿಲ್ಲದ ವಿಶ್ರಾಂತಿ ಅವಧಿಯನ್ನು ಮುಂಚಿತವಾಗಿಯೇ ನಿಗದಿ ಪಡಿಸಲಾಗುತ್ತದೆ.
ವಿಮಾನ ಸಿಬ್ಬಂದಿಯ ವಿಶ್ರಾಂತಿ ಕೊಠಡಿಗಳು ಪ್ರಯಾಣಿಕರ ಸೀಟುಗಳಂತೆ ಇರುವುದಿಲ್ಲ. ಇವು ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಬೋಯಿಂಗ್ 777, 787 ಮತ್ತು ಏರ್‌ಬಸ್ ಎ-350ರಂಥ ದೊಡ್ಡ ವಿಮಾನಗಳಲ್ಲಿ ಪ್ರಯಾಣಿಕರ ಕ್ಯಾಬಿನ್‌ನ ಮೇಲ್ಭಾಗದಲ್ಲಿ ಅಥವಾ ಕೆಳಭಾಗ ದಲ್ಲಿ ಸಣ್ಣ ಬಂಕ್‌ಗಳನ್ನು ನಿರ್ಮಿಸಲಾಗಿರುತ್ತದೆ. ಈ ಪ್ರದೇಶಗಳು ಪ್ರಯಾಣಿಕರ ಕಣ್ಣಿಗೆ ಬೀಳುವು ದಿಲ್ಲ.
ಇವುಗಳು ಗ್ಯಾಲಿ (ಅಡುಗೆ ಮನೆ) ಅಥವಾ ವಿಮಾನದ ಮುಂಭಾಗ ಮತ್ತು ಹಿಂಭಾಗದ ಸಣ್ಣ ಗುಪ್ತ ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದಾದ ಪ್ರತ್ಯೇಕ ಜಾಗಗಳಾಗಿರುತ್ತವೆ. ಈ ಬಂಕ್‌ಗಳಲ್ಲಿ ಮಲಗಲು ಹಾಸಿಗೆ, ಸುರಕ್ಷತಾ ಬೆಲ್ಟ್ (ಟರ್ಬ್ಯುಲನ್ಸ್ ಸಂದರ್ಭದಲ್ಲಿ ರಕ್ಷಣೆಗಾಗಿ), ಆಮ್ಲಜನಕದ ಮಾಸ್ಕ್, ಬೆಳಕಿನ ವ್ಯವಸ್ಥೆ ಮತ್ತು ಶಬ್ದ ನಿಯಂತ್ರಣ ವ್ಯವಸ್ಥೆ ಇರುತ್ತದೆ.
ಇದು ಸಿಬ್ಬಂದಿಗೆ ಶಾಂತವಾಗಿ ನಿದ್ರೆ ಮಾಡಲು ಅನುವು ಮಾಡಿಕೊಡುತ್ತದೆ. ವಿಮಾನ ಪ್ರಯಾಣ ದಲ್ಲಿ ಸುರಕ್ಷತೆಯೇ ಪ್ರಮುಖ ಆದ್ಯತೆ. ಸಿಬ್ಬಂದಿಗಳು ದಣಿದಿದ್ದರೆ, ತುರ್ತು ಸಂದರ್ಭಗಳಲ್ಲಿ ಅವರು ಸರಿಯಾಗಿ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ವಿಮಾನವು ಇಳಿಯುವಾಗ (ಲ್ಯಾಂಡಿಂಗ್) ಮತ್ತು ಹೊರಡುವಾಗ (ಟೇಕಾಫ್) ಸಿಬ್ಬಂದಿಗಳು ಅತ್ಯಂತ ಜಾಗರೂಕರಾಗಿರಬೇಕು.
ಹಾರಾಟದ ಮಧ್ಯೆ ಸಿಗುವ ವಿಶ್ರಾಂತಿಯು ಈ ಜಾಗರೂಕತೆಯನ್ನು ಕಾಪಾಡಲು ಸಹಾಯ ಮಾಡು ತ್ತದೆ. ದೀರ್ಘಕಾಲದ ಹಾರಾಟವು ಮನುಷ್ಯನ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸರಿದೂಗಿಸಲು ಈ ನಿಗದಿತ ವಿಶ್ರಾಂತಿ ಅತ್ಯಗತ್ಯ. ಯಾವುದೇ ವಿಮಾನಯಾನ ಸಂಸ್ಥೆಯು ಈ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.
ಒಂದು ವೇಳೆ ಸಿಬ್ಬಂದಿಗೆ ಸರಿಯಾದ ವಿಶ್ರಾಂತಿ ಸಿಗದಿದ್ದರೆ, ಅದು ಕಾನೂನು ಬಾಹಿರವಾಗುತ್ತದೆ. ಲಂಡನ್‌ನಿಂದ ಸಿಡ್ನಿ, ಸಿಂಗಾಪುರದಿಂದ ನ್ಯೂಯಾರ್ಕ್ ಅಥವಾ ಆಕ್ಲೆಂಡ್‌ನಿಂದ ದುಬೈ ನಡುವಿನ ವಿಮಾನಗಳು ಹದಿನೆಂಟು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸುತ್ತವೆ.
ಸಿಂಗಾಪುರ- ನ್ಯೂಯಾರ್ಕ್ ಮಧ್ಯೆ ಸುಮಾರು ಹದಿನೆಂಟು ಮುಕ್ಕಾಲು ಗಂಟೆಗಳ ಪ್ರಯಾಣ. ಇಂಥ ವಿಮಾನಗಳಲ್ಲಿ ಎರಡು ಸೆಟ್ ಸಿಬ್ಬಂದಿಗಳು ಇರುತ್ತಾರೆ. ಒಂದು ತಂಡ ಕೆಲಸ ಮಾಡುತ್ತಿದ್ದರೆ, ಇನ್ನೊಂದು ತಂಡ ವಿಶ್ರಾಂತಿ ಪಡೆಯುತ್ತಿರುತ್ತದೆ. ಇಂಥ ಮಾರ್ಗಗಳಲ್ಲಿ ಬಳಸುವ ಏರ್‌ಬಸ್ A 350-900ULR ನಂಥ ವಿಮಾನಗಳಲ್ಲಿ ಅತ್ಯಾಧುನಿಕ ‘ಕ್ರ್ಯೂ ರೆಸ್ಟ್ ಕಂಪಾರ್ಟ್ಮೆಂಟ’ಗಳನ್ನು ಮೊದಲೇ ಅಳವಡಿಸಲಾಗಿರುತ್ತದೆ.
ಈ ಸೌಲಭ್ಯವಿಲ್ಲದೇ ಇಷ್ಟು ದೂರದ ಹಾರಾಟಕ್ಕೆ ಅನುಮತಿ ಸಿಗುವುದಿಲ್ಲ. ಅನೇಕ ಜನರು ಸಾಮಾ ಜಿಕ ಜಾಲತಾಣಗಳಲ್ಲಿ ವಿಮಾನ ಸಿಬ್ಬಂದಿ ಗುಪ್ತ ಜಾಗಗಳಲ್ಲಿ ಮಲಗಿದ್ದಾರೆ ಎಂದು ವಿಡಿಯೋ ಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಇದು ಅವರ ವೃತ್ತಿಜೀವನದ ಮತ್ತು ವಿಮಾನದ ಕಾರ್ಯಾ ಚರಣೆಯ ಒಂದು ಅಧಿಕೃತ ಭಾಗ.