ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ಇಬ್ಬರೂ ಋಷಿಗಳ ಆಶ್ರಮದಲ್ಲಿ ವಿದ್ಯಾರ್ಜನೆಗಾಗಿ ನೆಲೆಸಿದ್ದರು. ಋಷಿಗಳು ಹೋಮ ಹವನ, ದೇವರ ಪೂಜೆಯಲ್ಲಿ ಮಗ್ನರಾಗಿದ್ದಾಗ ಈ ತುಂಟ ಸಹೋದರರಿಬ್ಬರೂ ದೇವರ ವಿಗ್ರಹಗಳನ್ನು ಹೊತ್ತು ನೀರಿಗೆ ಎಸೆಯುತಿದ್ದರು. ಮಕ್ಕಳ ಮೇಲಿನ ಪ್ರೀತಿಯಿಂದಾಗಿ, ತಪಸ್ಸಿಗೆ ಅಡ್ಡಿ ಉಂಟಾದರೂ ಕೂಡ ಋಷಿಗಳು ಇವರ ತುಂಟತನಕ್ಕೆ ಶಿಕ್ಷೆ ನೀಡದೆ ಸಹಿಸಿಕೊಳ್ಳುತ್ತಿದ್ದರು.

ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ಒಂದೊಳ್ಳೆ ಮಾತು

rgururaj628@gmail.com

ರಾಮಾಯಣದಲ್ಲಿ ನಳ ಮತ್ತು ನೀಲರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ವಾನರ ಸೇನೆಯಲ್ಲಿ ಪ್ರಮುಖರಾಗಿದ್ದರು. ರಾಮಸೇತುವನ್ನು ನಿರ್ಮಿಸುವುದಲ್ಲೂ ಇಬ್ಬರೂ ಪ್ರಮುಖ ಪಾತ್ರ ವಹಿಸಿದರು. ನಳನು ವಿಶ್ವಕರ್ಮನ ಮಗನೆಂದು ಪರಿಗಣಿಸಲ್ಪಟ್ಟಿದ್ದು, ಸೇತುವೆಯನ್ನು ನಿರ್ಮಿಸು ವಲ್ಲಿ ಪ್ರಮುಖ ವಾಸ್ತುಶಿಲ್ಪಿಯಾಗಿದ್ದನು. ನೀಲನು ಅಗ್ನಿದೇವನ ಪುತ್ರ, ಕಪಿಶ್ರೇಷ್ಠನೆಂಬ ಬಿರುದೂ ಅವನಿಗಿತ್ತು. ಬಾಲ್ಯದಲ್ಲಿ ಅವರಿಬ್ಬರೂ ಋಷಿಗಳಿಂದ ಶಾಪಗ್ರಸ್ತರಾದರು, ಅದು ನಂತರ ವರದಾನ ವಾಗಿ ಪರಿಣಮಿಸಿತು. ನಳ ಮತ್ತು ನೀಲ ತಮ್ಮ ಬಾಲ್ಯದಲ್ಲಿ ತುಂಬಾ ತುಂಟತನ ಮಾಡುತ್ತಿದ್ದರು.

ಇಬ್ಬರೂ ಋಷಿಗಳ ಆಶ್ರಮದಲ್ಲಿ ವಿದ್ಯಾರ್ಜನೆಗಾಗಿ ನೆಲೆಸಿದ್ದರು. ಋಷಿಗಳು ಹೋಮ ಹವನ, ದೇವರ ಪೂಜೆಯಲ್ಲಿ ಮಗ್ನರಾಗಿದ್ದಾಗ ಈ ತುಂಟ ಸಹೋದರರಿಬ್ಬರೂ ದೇವರ ವಿಗ್ರಹಗಳನ್ನು ಹೊತ್ತು ನೀರಿಗೆ ಎಸೆಯುತಿದ್ದರು. ಮಕ್ಕಳ ಮೇಲಿನ ಪ್ರೀತಿಯಿಂದಾಗಿ, ತಪಸ್ಸಿಗೆ ಅಡ್ಡಿ ಉಂಟಾದರೂ ಕೂಡ ಋಷಿಗಳು ಇವರ ತುಂಟತನಕ್ಕೆ ಶಿಕ್ಷೆ ನೀಡದೆ ಸಹಿಸಿಕೊಳ್ಳುತ್ತಿದ್ದರು.

ಆದರೆ ದಿನೇ ದಿನೇ ಇವರ ತುಂಟತನ ಹದ್ದು ಮೀರುತ್ತಿತ್ತು. ಒಂದು ದಿನ ಋಷಿಗಳು ಪರಸ್ಪರ ಸಮಾಲೋಚಿಸಿ, ಈ ಇಬ್ಬರ ಕೈಗಳಿಗೆ ಯಾವುದೇ ವಸ್ತು ಸ್ಪರ್ಶಿಸಿದರೂ, ಅದು ಎಷ್ಟೇ ಭಾರವಾಗಿ ದ್ದರೂ ಅದು ನೀರಿನಲ್ಲಿ ಮುಳುಗಬಾರದು ಎಂದು ಶಾಪದ ರೂಪದಲ್ಲಿ ವರವನ್ನು ನೀಡಿದರು. ಅದಾದ ನಂತರ, ಅವರಿಬ್ಬರೂ ಯಾವುದೇ ವಿಗ್ರಹವನ್ನು ಎತ್ತಿಕೊಂಡು ನೀರಿಗೆ ಎಸೆದರೂ, ಅದು ನೀರಿನ ಮೇಲೆ ತೇಲುತ್ತಲೇ ಇರುತ್ತಿತ್ತು.

ಇದನ್ನೂ ಓದಿ: Roopa Gururaj Column: ಶ್ರೀಕೃಷ್ಣನ ಅಂತ್ಯಕ್ಕೆ ಕಾರಣನಾದ ಜರವ್ಯಾಧ

ಋಷಿಗಳು ಅದನ್ನು ನಂತರ ನೀರಿನಿಂದ ಹೊರತೆಗೆದು ಮತ್ತೆ ಪೂಜೆಗೆ ಪ್ರತಿಷ್ಠಾಪಿಸುತ್ತಿದ್ದರು. ಋಷಿಗಳ ಈ ಶಾಪದಿಂದಾಗಿ ನಳ ಮತ್ತು ನೀಲರು ರಾಮನ ಸೇವೆ ಮಾಡುವಂತಾಯಿತು. ಹನುಮಂತನಿಗೆ ಇವರ ಶಾಪದ ಬಗ್ಗೆ ಚೆನ್ನಾಗಿ ತಿಳಿದಿತ್ತು. ರಾವಣನ ಮೇಲೆ ಯುದ್ಧ ಮಾಡಿ ಸೀತಾಮಾತೆಯನ್ನು ಕರೆ ತರಲು ಲಂಕೆಗೆ ಹೋಗಲು,

ಹನುಮಂತನು ರಾಮನಲ್ಲಿ ವಾನರ ಸೈನ್ಯದಿಂದ ಸೇತುವೆಯನ್ನು ನಿರ್ಮಿಸುವಂತೆ ಕೇಳಿಕೊಂಡನು ಅದನ್ನು ಶ್ರೀ ರಾಮನು ಒಪ್ಪಿಕೊಂಡನು. ಲಂಕೆಗೆ ಹೋಗಲು ದಾರಿ ಮಾಡಿಕೊಡುವಂತೆ ಶ್ರೀರಾಮನು ಸಮುದ್ರವನ್ನು ಪ್ರಾರ್ಥಿಸಿದನು, ನಂತರ ಅವನು ತನ್ನ ಬಿಲ್ಲು ಮತ್ತು ಬಾಣವನ್ನು ಬಳಸಿ ಸಮುದ್ರವನ್ನು ಒಣಗಿಸಿದನು.

ಆಗ ಇದನ್ನು ಕಂಡು ಹೆದರಿದ ಸಮುದ್ರರಾಜನು ಶ್ರೀರಾಮನ ಮುಂದೆ ಪ್ರತ್ಯಕ್ಷನಾದನು. ಸಮುದ್ರ ರಾಜನು ಹೀಗೆ ಮಾಡಿದರೆ ಸಮುದ್ರದಲ್ಲಿರುವ ಜೀವಸಂಕುಲವೆಲ್ಲ ಸಾಯಬೇಕಾಗುತ್ತದೆ. ಅದರ ಬದಲಾಗಿ ಸಮುದ್ರದ ಮೇಲೆ ಕಲ್ಲಿನ ಸೇತುವೆಯನ್ನು ನಿರ್ಮಿಸಿ ಲಂಕೆಗೆ ಹೋಗಬಹುದು ಎಂದು ತಿಳಿಸಿದನು.

ಅವನೇ ಮುಂದುವರೆದು ನಿಮ್ಮ ಸೈನ್ಯದಲ್ಲಿ ವಿಶ್ವಕರ್ಮನ ಇಬ್ಬರು ವಾನರ ಮಕ್ಕಳಿದ್ದಾರೆ, ನಳ ಮತ್ತು ನೀಲ. ಅವರು ಏನೇ ಮುಟ್ಟಿದರೂ ನೀರಿನಲ್ಲಿ ಮುಳುಗುವುದಿಲ್ಲ. ಸಾಗರದ ಮೇಲೆ ಸೇತುವೆ ಕಟ್ಟಲು ನೀವು ಈ ಇಬ್ಬರ ಸಹಾಯ ಪಡೆಯಬಹುದು ಎಂಬ ಸುಳಿವು ಕೊಟ್ಟನು.

ನಳ ನೀಲರು ಮುಟ್ಟಿದ ಕಲ್ಲುಗಳು ನೀರಿನಲ್ಲಿನೋ ತೇಲುತ್ತಿದ್ದವು, ಆದರೆ ಹಾಗೆ ಚದುರಿ ಕೂಡ ಹೋಗುತ್ತಿದ್ದವು. ಆಗ ಹನುಮಂತನು ಕಲ್ಲುಗಳ ಮೇಲೆ ಜೈ ಶ್ರೀ ರಾಮ್ ಎಂದು ಬರೆದು ತೇಲಿ ಬಿಟ್ಟರೆ ಎಲ್ಲವೂ ಒಂದಕ್ಕೊಂದು ಕಚ್ಚಿಕೊಂಡು ಇರುತ್ತವೆ ಎಂದು ನಿರ್ದೇಶಿಸಿದನು. ಅಂತೆಯೇ ವಾನರ ಸೈನ್ಯ ಕಲ್ಲುಗಳನ್ನು ಸಂಗ್ರಹಿಸಿ ನಳ ನೀಲನ ಮುಂದೆ ಹಾಕುತ್ತಿದ್ದರು. ಅವರು ಜೈ ಶ್ರೀ ರಾಮ್ ಎಂದು ಬರೆದು ಸಮುದ್ರಕ್ಕೆ ಎಸೆಯುತ್ತಿದ್ದರು. ಇದೇ ರೀತಿ ಐದೇ ದಿನದಲ್ಲಿ 80 ಮೈಲಿಯ ಸೇತುವೆ ನಿರ್ಮಿಸಲಾಯಿತು. ಅಂತೂ ಋಷಿಗಳು ನೀಡಿದ ಶಾಪವೇ ನಳ ಮತ್ತು ನೀಲರಿಗೆ ವರದಾನ ವಾಯಿತು ಕೆಲವೊಮ್ಮೆ ನಮ್ಮ ಹಿರಿಯರು ನಮ್ಮನ್ನು ತಿದ್ದಲು ನೀಡುವ ಶಿಕ್ಷೆ, ಮುಂದೆ ಜೀವನದಲ್ಲಿ ನಮಗೆ ವರವಾಗಿ ಪರಿಣಮಿಸುತ್ತದೆ.

ಆದ್ದರಿಂದಲೇ ಗುರು ಹಿರಿಯರು ನಮ್ಮನ್ನು ತಿದ್ದಿ ತೀಡಿದಾಗ ಅದನ್ನು ಆಶೀರ್ವಾದವೆಂದು ಪರಿಗಣಿಸಿ ಪಾಲಿಸಬೇಕು. ಹಿರಿಯರ ಶಿಕ್ಷೆಯಲ್ಲೂ ನಮಗೆ ಬದುಕಿನ ಪಾಠವಿರುತ್ತದೆ.