ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ನ ಕೊನೆ ಬಾಣ ಆರೆಸ್ಸೆಸ್‌ ನಿಷೇಧ

ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಪ್ರಚಾರ ಮಾಡಿ ಸಂಘಟನೆ ಕಟ್ಟುವುದಲ್ಲ! ಸ್ವತಃ ಮನೆ ಮನೆಗೆ ಹೋಗಿ, ನೇರ ಭೇಟಿ ಮಾಡಿ ದೇಶ ಕಟ್ಟುವ ಕಾರ್ಯಕ್ಕೆ ತೊಡಗುವುದಾಗಿದೆ. ಸಂಘದ ಇತ್ತೀಚಿನ ಕಾರ್ಯಕ್ರಮಗಳಿಗೆ ನಿಗದಿತವಾಗಿ ಸೇರುವ ಜನರಿಗಿಂತ ಹೆಚ್ಚು ಪಟ್ಟು ಜನ ಭಾಗವಹಿಸಿದ್ದು, ಸ್ವತಃ ಸ್ವಯಂ ಸೇವಕರನ್ನು ದಂಗುಬಡಿಸಿತ್ತು

ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ನ ಕೊನೆ ಬಾಣ ಆರೆಸ್ಸೆಸ್‌ ನಿಷೇಧ

-

ಗಂಟಾಘೋಷ

ನಿಷೇಧಿತ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ಜತೆಗೆ ಚುನಾವಣೆ ಗೆಲ್ಲುವ ಕಾರಣಕ್ಕೆ ಆಂತರಿಕ ಭದ್ರತೆ ಜತೆಗೆ ಕಾಂಗ್ರೆಸ್ ರಾಜಿ ಮಾಡಿಕೊಂಡಿದೆ. ಲಕ್ಷಾಂತರ ಕಾಶ್ಮೀರದ ಹಿಂದೂಗಳ ನರಮೇಧದ ರೂವಾರಿ, ಉಗ್ರ ಯಾಸಿನ್ ಮಲ್ಲಿಕ್‌ಗೆ ಕಾಂಗ್ರೆಸ್ ರಾಜಮರ್ಯಾದೆ ನೀಡುವ ಮೂಲಕ ದೇಶದ ರಕ್ಷಣೆಗೆ ದ್ರೋಹ ಬಗೆದಿದೆ. ಸದಾ ಹಿಂದೂಗಳ ವಿರುದ್ಧ, ದೇಶದ ಹಿತ ಬಯಸುವ ಜನರ ವಿರುದ್ಧ ಯುದ್ಧ ಸಾರುವ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಅ ಜನರೇ ಮಾನಸಿಕವಾಗಿ ನಿಷೇಧಿಸುತ್ತಿದ್ದಾರೆ.

ಶ್ರಮದ ಮೇಲೆ ನಂಬಿಕೆಯಿಟ್ಟು ಸಂಘಟನೆ ಮಾಡುವ ಪ್ರಯತ್ನವೇ ಸಂಘದ ಮೂಲ ಉದ್ದೇಶ ಮತ್ತು ಜೀವಾಳ. ಎಲ್ಲೂ ಪತ್ರಿಕೆ, ಮಾಧ್ಯಮ, ಟಿವಿಗಳಲ್ಲಿ ಜಾಹೀರಾತು ಕೊಡದೆ, ಪ್ರಚಾರಕ್ಕಷ್ಟೇ ಸೀಮಿತಗೊಳ್ಳದೆ, ಮನೆ ಮನೆಗೆ ಹೋಗಿ ದೇಶಭಕ್ತಿ, ಮನುಷ್ಯ ಸಂಬಂಧಗಳ ಬೆಸುಗೆ ಹಾಕುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಮಂತ್ರ. ದೇಶದ ಜನರೂ ಇದಕ್ಕೆ ದನಿಗೂಡಿಸಿದ್ದಾರೆ, ಹೆಗಲು ಗೊಟ್ಟಿದ್ದಾರೆ.

ಸಂಘದ ಕಾರ್ಯಕರ್ತರಿಗೆ ವಸತಿ ಕೊಟ್ಟಿದ್ದಾರೆ. ಕರೆದು ಊಟ ಬಡಿಸಿದ್ದಾರೆ. ಇದು ಜನರ ಸಂಘಟನೆ. ಜನರೇ ಒಪ್ಪಿ ಅಪ್ಪಿಕೊಂಡು ಬೆಳೆಸುತ್ತ ಬರುತ್ತಿರುವ ಹಾಗೂ ನಿಸ್ವಾರ್ಥ ದೇಶ ಸೇವೆಗೆ ಮುಡಿಪಾಗಿರುವ ಒಂದು ಸಮೂಹ. ಸಂಘಟನೆ ನೋಡಿ, ಯಾರಿಗೆ ತಮ್ಮ ರಾಜಕೀಯ ವಿಚಾರಧಾರೆ ಬೆಳೆಸಲು ಸಾಧ್ಯವಾಗುವುದಿಲ್ಲವೋ ಆಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂಷಿಸಲು ಆರಂಭಿಸುತ್ತಾರೆ.

ಇದರಲ್ಲಿ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷವೂ ಒಂದು. ಸಂಘವನ್ನು ತೆಗಳುವುದಕ್ಕೆಂದೇ ಕೆಲವರನ್ನು ಮುಂದೆ ಬಿಟ್ಟಿರುವ ಈ ಪಕ್ಷದಿಂದ, ಕೆಲ ನಾಯಕರ ಹೇಳಿಕೆಗಳಿಂದ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಉದ್ದೇಶವಿದೆ. ನಿಮ್ಮ ಸಿದ್ಧಾಂತ ನಮಗೆ ಹೊಂದುವುದಿಲ್ಲ ಮಾರಾಯ್ರೆ!

ಆದರೆ, ನಿಮ್ಮ ಸಂಘಟನೆಯ ಸೇವಾ ಮನೋಭಾವ, ಸಂಘಟನಾ ಶಕ್ತಿಯ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ಆರ್‌ಎಸ್‌ಎಸ್ ಕಾರ್ಯಕರ್ತರ ಬಳಿ ಸ್ವತಃ ಕಾಂಗ್ರೆಸ್ ಪಕ್ಷದ ಕೆಲ ನಾಯಕರು, ಕಾರ್ಯಕರ್ತರು ಖಾಸಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡ ಉದಾಹರಣೆ ಬೇಕಾದಷ್ಟಿದೆ. ಪಬ್ಲಿಸಿಟಿ ಮಾಡದ ಮತ್ತು ಸ್ವಯಂ ಪ್ರಚಾರ ಇರಬಾರದ ಸಂಘಟನೆ ನಮ್ಮದು ಎಂದು ಆರ್ ಎಸ್‌ಎಸ್ ಮೊದಲಿನಿಂದಲೂ ನಂಬಿಕೊಂಡು ಬಂದಿದೆ.

ಇದನ್ನೂ ಓದಿ: Gururaj Gantihole Column: ಮಹಿಳೆಯರ ಮುಟ್ಟಿನ ಸ್ಥಿತಿ ಈಗ ಇನ್ನೂ ಅಯೋಮಯ

ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಪ್ರಚಾರ ಮಾಡಿ ಸಂಘಟನೆ ಕಟ್ಟುವುದಲ್ಲ! ಸ್ವತಃ ಮನೆ ಮನೆಗೆ ಹೋಗಿ, ನೇರ ಭೇಟಿ ಮಾಡಿ ದೇಶ ಕಟ್ಟುವ ಕಾರ್ಯಕ್ಕೆ ತೊಡಗುವುದಾಗಿದೆ. ಸಂಘದ ಇತ್ತೀಚೀನ ಕಾರ್ಯಕ್ರಮಗಳಿಗೆ ನಿಗದಿತವಾಗಿ ಸೇರುವ ಜನರಿಗಿಂತ ಹೆಚ್ಚು ಪಟ್ಟು ಜನ ಭಾಗವಹಿಸಿದ್ದು, ಸ್ವತಃ ಸ್ವಯಂ ಸೇವಕರನ್ನು ದಂಗುಬಡಿಸಿತ್ತು. ಕಾರಣ ಕೇಳಿದರೆ, ಬ್ಯಾನ್ ಮಾಡ್ತೇವೆ, ನಿಷೇಧ ಮಾಡ್ತೇವೆ ಎಂಬಂತಹ ಮಾತುಗಳು ಜನಸಾಮಾನ್ಯರನ್ನು, ದೇಶಭಕ್ತರನ್ನು Tempt ಮಾಡಿವೆ.

ಇದರ ಜತೆಗೆ ಇಡೀ ಸಂಘಟನೆ ಅಪಾರ ಶಕ್ತಿಯೊಂದಿಗೆ ಮತ್ತಷ್ಟು ಜನರ ಸಕ್ರೀಯತೆಗೆ ಕಾರಣ ವಾಗಿದೆ. ಬೇರೆ ಬೇರೆ ಕಾರಣಗಳಿಂದ ಓಡಾಟದಲ್ಲಿ ಇಲ್ಲದ ಸ್ವಯಂ ಸೇವಕರನ್ನು ಖರ್ಗೆಯವರಂತ ಹವರ ಮಾತುಗಳು ಸಂಘದ ಚಟುವಟಿಕೆಗಳೆಡೆಗೆ ಜೋಡಿಕೊಳ್ಳಲು ಇನ್ನಷ್ಟು ಪ್ರೇರಣೆಯಾಗುತ್ತಿವೆ.

ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗಳು ಸಾವಿರಾರು ಜನರು ನೆರೆದಿದ್ದಂತಹ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಯಾರಾರು ಎಲ್ಲಿ ಬಾಂಬ್ ತಯಾರಿಸುತ್ತಿದ್ದಾರೆಯೋ ಅವರಿಗೆ ಸೆಕ್ಯುರಿಟಿ ಕೊಡ್ತಿದಾರೆ. ಅಲ್ಲಿ ಬಾಂಬ್ ಸ್ಫೋಟ ಆಯ್ತು, ಈ ಸ್ಲಮ್ ಏರಿಯಾದಲ್ಲಿ ಸ್ಫೋಟ ಆಯಿತು. ಹೀಗೆ, ಎಲ್ಲಿ ಸ್ಫೋಟ ಆಗಿದೆಯೋ ಅಲ್ಲ ಅವರಿಗೆ ಸೆಕ್ಯೂರಿಟಿ ಇದೆ. ಆದರೆ ತಮ್ಮ ಮನೆಯ ಊಟ ಮಾಡಿ, ಈ ದೇಶದ ಸೇವೆ ಮಾಡುವವರಿಗೆ ಮಾತ್ರ ಬ್ಯಾನ್.

Gantihoe 16

ಬಹುತೇಕ ಆ ಮನುಷ್ಯನ ಬುದ್ಧಿ ದಿವಾಳಿಯಾಗಿದೆ. ಹುಟ್ಟಾ ಕಾಮಾಲೆ ರೋಗ ಇದ್ದವರು ಕೆಲವರು ಇರುತ್ತಾರೆ. ನಮ್ಮಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ಹೇಳಲಾಗುತ್ತದೆ. ಅವರ ಶತೃ ಗಳಾಗಿದ್ದ ಔರಂಗಜೇಬ್ ಊಟಕ್ಕೆ ಕುಳಿತಾಗ ಊಟದ ತಟ್ಟೆಯಲ್ಲಿ ಕೂಡ ಶಿವಾಜಿ-ಸಂಭಾಜಿ ಮಹರಾಜರ ಪ್ರತಿಬಿಂಬ ಕಾಣಿಸುತ್ತಿತ್ತಂತೆ. ಇದರಂತೆ, ಈ ಮನುಷ್ಯನಿಗೆ ಸಂಘ ಹಾಗೇ ಕಾಣುತ್ತಿತ್ತೆಂದರೆ, ಅವನೇ ಕಣ್ಣು ರಿಪೇರಿ ಮಾಡಿಕೊಳ್ಳಬೇಕು, ತನ್ನ ದೃಷ್ಟಿದೋಷ ತಿದ್ದಿಕೊಳ್ಳಬೇಕು. ಇದು ಸಂಘದ ಸಮಸ್ಯೆಯಲ್ಲ ಎಂದು ತಮ್ಮ ಸ್ಪಷ್ಟ ಮತ್ತು ಪ್ರಖರ ಮಾತುಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಬೆಂಬಲಿಸಿ ಮಾತನಾಡಿದ್ದಾರೆ.

ಕಾಂಗ್ರೆಸ್ ಮನಸ್ಥಿತಿಯನ್ನು ಪರಕೀಯ ಔರಂಗಜೇಬ್‌ಗೆ ಹೋಲಿಸಿದ್ದಾರೆ. ರಾಷ್ಟ್ರಪ್ರೇಮ, ಒಗ್ಗಟ್ಟಿನ ವಿಚಾರಧಾರೆ, ಭಾವೈಕ್ಯತೆ ಸಾರುತ್ತ ಊರಿಂದ ಊರಿಗೆ ಕಾಲ್ನಡಿಗೆ, ಇನ್ಯಾರದೋ ಸೈಕಲ್, ಸ್ಕೂಟರ್ ಹತ್ತಿ ತಾನು ವಹಿಸಿಕೊಂಡ ಕಾರ್ಯದ ಸೇವೆಗೈಯಲು ಸದಾ ಸಿದ್ಧವಾಗಿರುವವನೇ ಸಂಘದ ಸ್ವಯಂ ಸೇವಕನಾಗಿರುತ್ತಾನೆ. ‌

ದೂರದ ಕೇರಳ, ತಮಿಳುನಾಡುಗಳಲ್ಲಿ ಜಲಪ್ರಳಯವಾದರೆ ಅನಾಮಿಕನಂತೆ, ಯಾವ ಪ್ರತಿಫಲಾ ಪೇಕ್ಷೆಗಳೂ ಇಲ್ಲದೆ ಜೀವದ ಹಂಗು ತೊರೆದು ಜನಸೇವೆಗೆ ಕಂಕಣ ಬದ್ಧನಾಗಿರುತ್ತಾನೆ. ಇನ್ನೆಲ್ಲೋ ಸುನಾಮಿಯಾದಾಗ, ಅನ್ನದಾನ, ವಸತಿ ವ್ಯವಸ್ಥೆ, ಬಟ್ಟೆಬರೆ, ರಗ್ಗು-ಜಮಖಾನುಗಳಂತಹ ಅವಶ್ಯಕತೆಗಳನ್ನು ಪೂರೈಸಲು ಮುಂದಾಗುತ್ತಾನೆ. ಇದಕ್ಕಾಗಿ, ಅಹಂ, ಸ್ವಂತಿಕೆ ಬದಿಗಿಟ್ಟು ದಾನಿ ಗಳಲ್ಲಿ ಕೈಯೊಡ್ಡಿ ಹಸಿದವರಿಗೆ ಮುಟ್ಟಿಸುತ್ತಾನೆ. ಇನ್ನೆಲ್ಲೋ ಬಡತನ ಕುಟುಂಬದ ಮಕ್ಕಳಿಗೆ, ಹಾದಿಬೀದಿಬದಿಯ ಮಕ್ಕಳಿಗೆ ವಿದ್ಯಾಭ್ಯಾಸ ದೊರಕಿಸಿಕೊಡಲು ತನ್ನಕೈಲಾದ ಮಟ್ಟಿಗಿನ ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿಸುತ್ತಾನೆ.

ಕಣ ಕಣದಲ್ಲೂ ದೇಶವನ್ನು ಮಾತೆಗೆ ಹೋಲಿಸಿಕೊಂಡು, ಸದಾ ಆಕೆಯ ಸೇವೆಗೆ ಸಿದ್ಧವಾಗಿರುವ ಸ್ವಯಂಸೇವಕನಿಗೆ ಪ್ರಾರಂಭದಿಂದಲೂ ಕಷ್ಟ, ಸಂಕಷ್ಟಗಳು ಎದುರಾಗಿವೆ. ನಿಷೇಧಿಸುವ ಕುರಿತು ಮಾತಾಡಿದವರು ನಿಶ್ಶೇಷವಾಗಿ ಹೋಗಿದ್ದಾರೆ. ಸೂರ್ಯ-ಚಂದ್ರರಿರುವವರೆಗೆ ಶಾಶ್ವತವಾಗಿ ನಿಲ್ಲುವ, ಭಾರತಮಾತೆಯ ಸೇವೆಗೈಯಲು ಸದಾಮುಂದಿರುವ ಸಂಘವನ್ನು ಕಟ್ಟಿ ಹಾಕಲು ಬಂದು ಹೋದವರೆಷ್ಟೋ!

ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಸದಾ ಮೌನಿಯಾಗಿ, ಅಹಂಮಿಕೆಯನ್ನು ತಲೆಗೇರಿಸಿ ಕೊಳ್ಳದೆ ಮತ್ತದೇ ತಾಯಿ ಸೇವೆಗೆ ಮುನ್ನುಗುವ ಛಾತಿ ಸ್ವಯಂ ಸೇವಕನದು! ಅಷ್ಟಕ್ಕೂ ಸಂಘ ನಿಷೇಧಕ್ಕೊಳಗಾಗಿತ್ತು ಎಂದು ಪದೇ ಪದೇ ಹೇಳುತ್ತಿರುವ ಇವರು, ಅದರ ಕಾರಣಗಳನ್ನು ಮಾತ್ರ ಬಾಯಿ ಬಿಡುವುದಿಲ್ಲ. ಹೌದು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮೂರು ಬಾರಿ ನಿಷೇಧಿಸ ಲಾಗಿತ್ತು.

ಮೊದಲ ನಿಷೇಧ(1948): ಮಹಾತ್ಮ ಗಾಂಧಿಯವರ ಹತ್ಯೆಯ ನಂತರ, ನೈಜ ಮತ್ತು ನೇರ ಕಾರಣಗಳಿಲ್ಲದಿದ್ದರೂ, ಆರ್‌ಎಸ್ ಎಸ್‌ನ್ನು ಮೊದಲ ಬಾರಿಗೆ ನಿಷೇಧಿಸಲಾಯಿತು. 1949ರಲ್ಲಿ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು.

ಎರಡನೇ ನಿಷೇಧ(1975-77): ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ರಾಜಕೀಯ ವಿರೋಧವನ್ನು ಹತ್ತಿಕ್ಕುವ ಕ್ರಮವಾಗಿ ಆರ್‌ಎಸ್ ಎಸ್ ಸೇರಿದಂತೆ ಹಲವು ಸಂಘಟನೆಗಳನ್ನು ನಿಷೇಧಿಸಲಾಗಿತ್ತು ಮತ್ತುತುರ್ತುಪರಿಸ್ಥಿತಿ ಹಿಂತೆಗೆದ ನಂತರ ನಿಷೇಧವನ್ನು ತೆಗೆದು ಹಾಕಲಾಯಿತು.

ಮೂರನೇ ನಿಷೇಧ(1992): ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಪಿ.ವಿ. ನರಸಿಂಹರಾವ್ ನೇತೃತ್ವದ ಸರಕಾರವು ಆರ್‌ಎಸ್‌ಎಸ್‌ನ್ನು ಮತ್ತೆ ನಿಷೇಧಿಸಿತು. ಆದರೆ, ನ್ಯಾಯ ಮಂಡಳಿಯ ಮುಂದೆ ಸರಕಾರವು ನಿಷೇಧವನ್ನು ಸಮರ್ಥಿಸಲು ವಿಫಲವಾದ ಕಾರಣ, ಈ ನಿಷೇಧವನ್ನು ರದ್ದುಗೊಳಿಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗ ಸಂಸ್ಥೆಗಳು ತೊಡಗಿಸಿಕೊಂಡಿರುವ ಚಟುವಟಿಕೆಗಳಾದ ಸೇವಾಭಾರತಿ, ವಿದ್ಯಾಭಾರತಿ, ಆರೋಗ್ಯಭಾರತಿ ಮುಂತಾದ ಸಂಘದ ಅಂಗ ಸಂಸ್ಥೆಗಳಿಂದ ದೇಶದ ಯಾವುದೇ ಭಾಗಗಳಲ್ಲಿ ನೈಸರ್ಗಿಕ ವಿಕೋಪಗಳು ಬಂದಾಗ ಸಹಾಯ ಮಾಡುವುದು, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಲಯಗಳನ್ನು ನಡೆಸುವುದು, ಆರೋಗ್ಯದ ಬಗ್ಗೆ ಜಾಗೃತಿ ಶಿಬಿರಗಳನ್ನು ಮಾಡುವುದು, ಜಾತಿ ತಾರತಮ್ಯಗಳನ್ನು ಹೋಗಲಾಡಿಸಿ, ಸಾಮಾಜಿಕ ಸಾಮರಸ್ಯತೆ ಯನ್ನು ಮೂಡಿಸಿವುದು, ಒಂದು ಬಾವಿ, ಒಂದು ಸ್ಮಶಾನ, ಒಂದು ದೇವಾಲಯ ಎಂಬ ಪರಿಕಲ್ಪನೆ ಯ ಮೂಲಕ ಎಲ್ಲರನ್ನುಒಗ್ಗೂಡಿಸಲು ಪ್ರಯತ್ನಿಸುವುದು, ಹಳ್ಳಿಗಳನ್ನು ಸ್ವಾವಲಂಬಿ ಗಳನ್ನಾಗಿಸಲು ಸಾವಯವ ಕೃಷಿ, ಜಲ ಸಂರಕ್ಷಣೆ ಮತ್ತು ಗೋ ಆಧಾರಿತ ಆರ್ಥಿಕತೆಯಂತಹ ಯೋಜನೆಗಳನ್ನು ಉತ್ತೇಜಿಸುವುದರ ಮೂಲಕ, ಸಂಘ ತನ್ನನ್ನು ಕೇವಲ ಸೈದ್ಧಾಂತಿಕ ಸಂಘಟನೆ ಯಾಗಿ ಅಲ್ಲದೆ, ಸಮಾಜದ ತಳಮಟ್ಟದಲ್ಲಿ ಕೆಲಸ ಮಾಡುವ ಒಂದು ಪ್ರಮುಖ ಸಾಮಾಜಿಕ ಶಕ್ತಿಯಾಗಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ಗಾಂಧೀಜಿಯೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳೇ ಸಂಘವನ್ನು ಮೆಚ್ಚಿ ಕೊಂಡ ಉದಾಹರಣೆಗಳು ಸಾಕಷ್ಟಿವೆ. ವಾರ್ಧಾದಲ್ಲಿನ ಆರ್‌ಎಸ್‌ಎಸ್ ಕ್ಯಾಂಪ್‌ಗೆ 1934ರಲ್ಲಿ ಭೇಟಿಕೊಟ್ಟ ಗಾಂಧೀಜಿ, ಅಲ್ಲಿನ ಶಿಸ್ತು, ಸರಳತೆ, ಎಲ್ಲ ಜಾತಿ ಧರ್ಮಗಳನ್ನೊಳಗೊಂಡ, ಅಶ್ಪೃಶ್ಯತೆ ಯಿಲ್ಲದ (Lack of Untouchability) ಎಲ್ಲ ಸ್ವಯಂ ಸೇವಕರ ಕಾರ್ಯ ತತ್ಪರತೆ ನೋಡಿ ತಮ್ಮ ಹರಿಜನ ಪತ್ರಿಕೆಯಲ್ಲಿ 1947ರ ಸಂಚಿಕೆಯಲ್ಲಿ ಬರೆದಿದ್ದಾರೆ.

1947ರ ದಿಲ್ಲಿಯ ಆರ್‌ಎಸ್‌ಎಸ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ವ ಜನಾಂಗವನ್ನು ಸಮಾನತೆಯಲ್ಲಿ ಕಾಣುತ್ತ ಬೆಳೆಯುತ್ತಿರುವ ಸಂಘ ಮತ್ತು ಅದರ ಸೇವಾ ಕಾರ್ಯಗಳು ನನಗೆ ಮಾದರಿ ಮತ್ತು ಸ್ಪೂರ್ತಿಯಾಗಿವೆ ಎಂದಿದ್ದಾರೆ. ಆರ್‌ಎಸ್‌ಎಸ್ ಕೈಗೊಂಡ ನಿರಾಶ್ರಿತರ ಸಭೆ ಯೊಂದರಲ್ಲಿನ ( Refugee Camp) ಕಠಿಣ ಪರಿಶ್ರಮವನ್ನು ನೋಡಿ ಸಹ ಮೆಚ್ಚಿ ಮಾತನಾಡಿದ್ದಾರೆ.

ಭಾರತ ಮತ್ತು ಚೀನಾ ಯುದ್ಧ- 1962ರ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಮಾಡಿದ ಅನನ್ಯ ಸೇವೆಯ ಸಾಧನೆಯು ಇಡೀ ದೇಶಾದ್ಯಂತ ಪ್ರಶಂಸಿಸಲ್ಪಟ್ಟಿತು. ಸೈನಿಕರ ಸಾಮಗ್ರಿ ಸಾಗಾ ಣಿಕೆಗೆ ಮುಂದಾಗಿ ನಿಂತಿತು. ಸೈನ್ಯ ಸಾಗಾಣಿಕೆಗೆ ಇದ್ದ ತತ್ ಕ್ಷಣದ ಅಡೆತಡೆಗಳನ್ನು ನಿರ್ವಹಿಸಿ ಗಡಿ ತಲುಪಲು ನೆರವಾಯಿತು. ಸ್ವಯಂ ಸೇವಕರು ದೇಣಿಗೆ ಸಂಗ್ರಹಿಸಿ, ಆಹಾರ ಸಾಮಗ್ರಿ ಸಮೇತ ಅಗತ್ಯವಿದ್ದ ಸೈನ್ಯವಿಭಾಗಕ್ಕೆ ತಲುಪಿಸಿದ್ದರು.

ರಕ್ತದಾನ ಶಿಬಿರಗಳನ್ನು ಕೂಡಲೇ ಏರ್ಪಡಿಸಿ ಸೈನಿಕರ ಸಹಾಯಕ್ಕೆ ನಿಂತರು. ಇಂತಹ ದೇಶ ಸೇವೆಯ ಭಾಗವಾಗಿದ್ದಕ್ಕೆ ಅಂದಿನ ಪ್ರಧಾನಿ ನೆಹರು 1963ರ ಗಣರಾಜ್ಯೋತ್ಸವ ಪರೇಡಿನಲ್ಲಿ ಆರ್ಎಸ್‌ಎಸ್ ಸ್ವಯಂ ಸೇವಕರನ್ನು ಭಾಗವಹಿಸಲು ಆಹ್ವಾನಿಸಿದ್ದರು. ಸಂಘದಂತೆ ಕಾಂಗ್ರೆಸ್ಸಿನವ ರಿಗೆ ಸಂಘಟನೆ ಮಾಡಲಾಗುತ್ತಿಲ್ಲ.

ಕೈಗೆಟುಕದ ದ್ರಾಕ್ಷಿ ಹುಳಿಯೆಂಬಂತೆ, ಸಂಘವನ್ನು ಬ್ಯಾನ್ ಮಾಡುವ ಮೆಂಟಾಲಿಟಿ ಬೆಳೆಸಿ ಕೊಳ್ಳುತ್ತ ಅದನ್ನು ದ್ವೇಷದ ಭಾಗವಾಗಿ ನೋಡುತ್ತಿರುವುದು ರಾಜಕೀಯ ಉದ್ದೇಶ ಇಟ್ಟುಕೊಂಡು ದೇಶದ ಯಾವುದೋ ಭಾಗದಲ್ಲಿ ಪ್ರಮುಖ ಚುನಾವಣೆಗಳು ಬಂದಾಗಲೆಲ್ಲ ಬ್ಯಾನ್ ಹೇಳಿಕೆ ಗಳನ್ನು ಕಾಂಗ್ರೆಸ್ ಬೆಂಬಲಿತರಿಂದ ಕೊಡಿಸಲಾಗುತ್ತದೆ.

ಕಾಂಗ್ರೆಸ್ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ವೇದಿಕೆಯಲ್ಲಿ ನಾವೆಲ್ಲ ಮೂಲತಃ ಹಿಂದೂ ಗಳೇ ಆಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.ರಾಷ್ಟ್ರೀಯತೆಯ ಭಾವನೆ ಹಳ್ಳಿಹಳ್ಳಿಗಳಿಗೂ ಹರಡುವ ಮೂಲಕ ಜಾಗೃತಿ ಮೂಡುತ್ತಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವ ಪರಿಸ್ಥಿತಿ ಎದುರಾಗಿದೆ.

ಸಂಘದಂತಹ ಬಲಿಷ್ಟ ಸಂಘಟನೆ ಬೇಕು. ಸ್ವತಃ ಸಂಘಟಿಸಲು ಸಾಧ್ಯವಾಗುತ್ತಿಲ್ಲ. ತಾನು ಮಾಡಲಾರ, ಇತರರನ್ನು ಮಾಡಲು ಬಿಡಲಾರ ಎಂಬ ಅಸೂಯೆ ಮನೋಭಾವ ಹೊಂದಿರುವ ರಾಜಕೀಯ ಪಕ್ಷವೊಂದು ಸಂಘವನ್ನು ದೂರುತ್ತಲೇ ಬಂದಿದ್ದು, ಆಗಾಗ ಇಂತಹ ನಿಷೇಽಸುವಿಕೆಯ ಮಾತುಗಳನ್ನಾಡುತ್ತ ಬರುತ್ತಿದೆ. ಇದರ ವಾಸ್ತವಿಕ ಬಣ್ಣ ಇಂದಿನ ತಲೆಮಾರಿನ ಜನತೆಗೂ ಗೊತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದಲ್ಲಿರುವ ಕೆಲ ಮುತ್ಸದ್ಧಿ ನಾಯಕರಿಗೂ ತಿಳಿದಿದೆ.

೧೦೦ ವರ್ಷಗಳ ಅದಮ್ಯ, ಅತ್ಯದ್ಭುತ ಸಾಧನಾ ಹಾದಿಯ ಹಿನ್ನಲೆ ಹೊಂದಿರುವ ಸಂಘವನ್ನು ನಿಷೇಧಿಸುವುದು ಹಾಸ್ಯಾಸ್ಪದವೇ ಸರಿ ಎಂಬುದು ನಿಷೇಧದ ಬಗ್ಗೆ ಮಾತಾಡುವವರಿಗೂ ಗೊತ್ತಿದೆ.

‘ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ,

ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ,

ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ,

ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ,

ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ’

ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ಎಂದೆನ್ನುತ್ತ, ಮತ್ತದೇತಾಧ್ಯಾತ್ಮ ಚಿತ್ತದಿಂದ ಎಲ್ಲರೊಳೊಂದಾಗಿ ಬೆರೆತು, ಎಲೆಮರೆ ಕಾಯಾಗಿ ಬಿಡುವ ಕೋಟ್ಯಂತರ ಸ್ವಯಂಸೇವಕ ಭಾರತಾಂಬೆ ಪಡೆದಿರುವ ಹೆಮ್ಮೆಯ ಪುತ್ರರು ತಾವೆನ್ನುವ ದೃಢ ನಂಬಿಕೆಯಿಂದ ಸಂಘ ಕಾರ್ಯವೇ ರಾಷ್ಟ್ರಕಾರ್ಯ, ಸಂಘಕಾರ್ಯವೇ ಈಶ್ವರಿಕಾರ್ಯ ಎಂದು ದೃಢ ಹೆಜ್ಜೆ ಹಾಕುತ್ತಿದ್ದಾರೆ.

ತೆಗುಳುವರು ತೆಗಳಲಿ, ಹೊಗಳುವರು ಹೊಗಳಲಿ, ಗದ್ದುಗೆ ಮುಕುಟಗಳೆಲ್ಲ ಹಾರಿ, ಬೀರಿ ಬೆದರಿಸಿದರೂ ತನ್ನೀಕಾರ್ಯ ಬಿಡನೆಂಬ ಛಲದಿಂದ, ವಿಶ್ವವೇ ನನ್ನ ಮನೆ. ಇಲ್ಲಿರುವವರೆಲ್ಲ ನನ್ನ ಕುಟುಂಬವೆನ್ನುತ್ತ ವಸುಧೈವ ಕುಟುಂಬಕಂ ತತ್ವದಡಿ ತನ್ನ ಸೇವೆಗೈಯುತ್ತಮೌನ ನಡೆಯ ಧೀಮಂತನಾಗಿ ರುತ್ತಾನೆ ರಾಷ್ಟ್ರ ಕಾರ್ಯದ ಸ್ವಯಂಸೇವಕ!