ಒಂದೊಳ್ಳೆ ಮಾತು
rgururaj628@gmail.com
ಕುರುಕ್ಷೇತ್ರ ಯುದ್ಧ ಮುಗಿದಿದೆ. ಪಾಂಡವರೇ ಗೆದ್ದಿದ್ದರು. ಕೃಷ್ಣ ಮತ್ತು ವೇದವ್ಯಾಸರ ಸಲಹೆಯಂತೆ ಯುಧಿಷ್ಠಿರ ಅಶ್ವಮೇಧ ಯಾಗ ಮಾಡಲು ತಯಾರಿ ಮಾಡಿಕೊಂಡನು. ಚೈತ್ರಮಾಸದ ಹುಣ್ಣಿಮೆ ದಿನ ಅಶ್ವಮೇಧ ಯಾಗದ ಸಂಕಲ್ಪದೊಂದಿಗೆ ನಾಂದಿ ಪೂಜೆ ಮಾಡಿ, ಕುದುರೆ ಬಿಡುತ್ತಾರೆ.
ರಕ್ಷಣೆ ಮಾಡಲು ಅರ್ಜುನನ ನೇತೃತ್ವದಲ್ಲಿ, ಸೇನೆಯನ್ನು ಕಳಿಸಲಾಯಿತು. ಅರ್ಜುನನು ಕುದುರೆ ಹೋದಲ್ಲ ತನ್ನ ಸೇನೆಯೊಡನೆ ಹಿಂದೆಯೇ ಹೋಗುತ್ತಿದ್ದನು. ಆ ಕಾನನದಲ್ಲಿ ನಡೆಯುತ್ತಿರುವಾಗ, ಭಾರಿ ಬಂಡೆಯ ಮೇಲೆ ಕುದುರೆ ಕಾಲಿಟ್ಟಿತು. ಕಾಲಿಟ್ಟಿದ್ದೊಂದೇ ಮತ್ತೆ ತೆಗೆಯಲು ಕುದುರೆಗೆ ಆಗಲೇ ಇಲ್ಲ. ಆ ಬಂಡೆ ಕುದುರೆ ಕಾಲನ್ನು ಬಲವಾಗಿ ಹಿಡಿದುಕೊಂಡಿತು.
ಸೇನೆಯವರು ಬಂಡೆಯಿಂದ ಕುದುರೆಯ ಕಾಲು ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅರ್ಜುನನಿಗೆ ಇದು ಬಹಳ ಆಶ್ಚರ್ಯವಾಗಿ ಕಂಡಿತು. ಆಗ ಹತ್ತಿರದ ‘ಸೌಭರಿ’ ಮುನಿಗಳ ಆಶ್ರಮ ಕಂಡಿತು ಅವರನ್ನು ಕೇಳಿದಾಗ ಅವರು ಹೀಗೆಂದರು. ಅರ್ಜುನ ಈ ಬಂಡೆಯು ನಿನ್ನ ಆಗಮನ ಕ್ಕಾಗಿಯೇ ಕಾಯುತ್ತಿದೆ. ಇದರ ಹಿಂದೆ ಒಂದು ದೊಡ್ಡ ಕಥೆ ಇದೆ.
ಇದನ್ನೂ ಓದಿ: Roopa Gururaj Column: ಭಾಗವತದ ಮಹತ್ವ ಸಾರಿದ ಶುಕಮುನಿ
ಬಹಳ ಹಿಂದೆ ಇಲ್ಲೇ ಸಮೀಪದಲ್ಲಿ ಉದ್ಧಾಲಕ ಎಂಬ ಒಬ್ಬ ಬ್ರಾಹ್ಮಣನಿದ್ದನು. ಸಂಪ್ರದಾಯ ದವನು, ವೇದ ಪಾರಂಗತನು, ಸಕಲ ಶಾಸ್ತ್ರ ಸಂಪನ್ನನೂ ಆಗಿದ್ದು, ಅತಿಥಿ ಸತ್ಕಾರ ಮಾಡುವು ದರಲ್ಲಿ ಪ್ರಮುಖನಾಗಿದ್ದನು. ಒಮ್ಮೆ ಇವನ ಆಶ್ರಮಕ್ಕೆ ‘ಕೌಂಡಿನ್ಯ’ ಮುನಿಗಳು ಬಂದರು.
ಉದ್ಧಾಲಕನ ಅತಿಥಿ ಸತ್ಕಾರಕ್ಕೆ ಸಂತಸಗೊಂಡ ಅವರು ನೀನೇಕೆ ಒಂದು ಮದುವೆಯಾಗಬಾರದು? ಮದುವೆಯಾದರೆ ನಿನ್ನ ಈ ಕೆಲಸದ ಸಹಾಯಕಳಾಗಿ ಪತ್ನಿ ಜೊತೆಗೆ ಇರುತ್ತಾಳೆ ಎಂದರು. ಉದ್ಧಾಲಕನು, ಕೌಂಡಿನ್ಯರ ಸಲಹೆಯಂತೆ ಹುಡುಗಿಯನ್ನು ನೋಡಿ ವಿವಾಹ ಮಾಡಿಕೊಂಡು ತನ್ನ ಕುಟೀರಕ್ಕೆ ಕರೆತಂದನು. ಈತನು ಮದುವೆಯಾದವಳ ಹೆಸರು ಚಂಡೀ ಎಂದು.
ಹೆಸರಿಗೆ ತಕ್ಕಂತೆ ಏತಿ ಅಂದರೆ ಪ್ರೇತಿ ಎನ್ನುವವಳು. ಚಂಡೀ ವಿಲಕ್ಷಣ ಸ್ವಭಾವದವಳು. ಏನೇ ಹೇಳಿದರೂ ಅದಕ್ಕೆ ತದ್ವಿರುದ್ಧ ಮಾಡುವವಳೆ. ಅವಳ ಗುಣವನ್ನು ಅರಿತ ಉದ್ಧಾಲಕ ಅವಳಿಗೆ ಎಲ್ಲಾ ವಿರುದ್ಧವಾದದ್ದನ್ನೇ ಹೇಳುತ್ತಾ, ಅವಳ ಕೈಲಿ ಸರಿಯಾದ ಕೆಲಸಗಳನ್ನು ಜಾಣತನದಿಂದ ಮಾಡಿಸುತ್ತಾ ಸಂಸಾರ ಮಾಡುತ್ತಿದ್ದನು. ಆದರೆ ಒಂದು ಸಾರಿ ಅವನ ತಂದೆಯ ತಿಥಿ ಕಾರ್ಯ ಬಂದಿತು. ಎಲ್ಲವೂ ಸಾಂಗವಾಗಿ ನೆರವೇರಿತು ಆದರೆ ಕೊನೆಯಲ್ಲಿ ‘ಪಿಂಡಪ್ರದಾನ’ ಮಾಡಬೇಕಾ ಗಿತ್ತು.. ಅವನು ಚಂಡೀಗೆ ನೋಡು ಪಿಂಡವನ್ನು ಹೊರಗೆ ಬಾವಿ ಕಟ್ಟೆ ಬದಿಯಲ್ಲಿ ಇಡಬೇಕು. ಕಾಗೆಗಳು ಬಂದು ತಿನ್ನುತ್ತವೆ,
ತೆಗೆದುಕೊಂಡು ಬಾ ಎಂದನು ಚಂಡೀ ಆ ಪಿಂಡವನ್ನು, ಹೇಳದೆ ಕೇಳದೆ ಹೊರಗೆ ಹೋಗಿ ಹಿತ್ತಲಲ್ಲಿದ್ದ ಗೊಬ್ಬರದ ಗುಂಡಿಗೆ ಬಿಸಾಕಿದಳು. ಇದನ್ನು ನೋಡಿ ಉದ್ಧಾಲಕನ ಉಸಿರು ಕ್ಷಣ ನಿಂತುಹೋಯಿತು. ಎಂದೂ ಇಲ್ಲದ ಸಿಟ್ಟು ಬಂದಿತು. ಅದು ಅಂತಿಂಥ ಸಿಟ್ಟು ಅಲ್ಲ. ಈ ಕಾರ್ಯ ದಲ್ಲಿ ಪಿಂಡಪ್ರದಾನವೇ ಪ್ರಮುಖವಾದದ್ದು ಅದನ್ನೇ ಹಾಳು ಮಾಡಿದಳು, ಇದರಿಂದ ನನ್ನ ತಂದೆಯನ್ನು ಅವಮಾನಿಸಿದಳು, ಅವರನ್ನು ಉಪವಾಸ ಹಾಕಿದಳು ಎಂಬ ಕ್ರೋಧದಿಂದ, ನೀನು ’ಕಗು’ ಎಂದು ಶಾಪ ಕೊಟ್ಟನು. ಆಗ ಚಂಡೀಗೆ ತಪ್ಪಿನ ಅರಿವಾಯಿತು ಕಾಲ ಮೀರಿತ್ತು.
ಅವಳು ಕದಳು ಸ್ವಲ್ಪ ಹೊತ್ತಾದ ಮೇಲೆ ಉದ್ಧಾಲಕನಿಗೆ ತಾನು ಮಾಡಿದ ದುಡುಕುತನದಿಂದ ಹೇಗಾಯಿತಲ್ಲ ಎಂದುಕೊಂಡನು. ತಕ್ಷಣ ಉಪ ಶಾಪ ಕೊಟ್ಟನು. ಮುಂದೆ ಪಾಂಡವರಲ್ಲಿ ಮಧ್ಯಮ ಪಾಂಡವ ಅರ್ಜುನನು ಬಂದು ಈ ಕಲ್ಲನ್ನು ಸ್ಪರ್ಶಿಸಿದ ಕ್ಷಣವೇ ನೀನು ಜೀವ ತಾಳುವೆ ಎಂದನು. ಇಷ್ಟು ಹೇಳಿದ ಸೌಭರಿ ಮಹರ್ಷಿಗಳು ಈಗ ಸಮಯ ಬಂದಿದೆ ಅರ್ಜುನ ಕಲ್ಲನ್ನು ಸ್ಪರ್ಶಿಸು ಎಂದರು.
ಅರ್ಜುನನು ಭಕ್ತಿಯಿಂದ ಪ್ರಾರ್ಥಿಸಿ, ಆ ಕಲ್ಲನ್ನು ಕೈಗಳಿಂದ ಸ್ಪರ್ಶಿಸಿ ನಮಸ್ಕರಿಸಿದನು. ಚಂಡೀಯೂ ಜೀವ ತಾಳಿದಳು. ಅವಳು ಸೌಭರಿ ಮಹರ್ಷಿಗಳಿಗೆ ನಮಸ್ಕರಿಸಿ, ಅರ್ಜುನನಿಗೆ ಕೃತಜ್ಞತೆ ಸಲ್ಲಿಸಿದಳು. ಪತಿ ಉದ್ಧಾಲಕನೊಂದಿಗೆ ಮತ್ತೆ ಸಂಸಾರ ಶುರು ಮಾಡಿ ಬಹಳ ಕಾಲ ಸುಖವಾಗಿದ್ದರು.
ಇಂತಹ ಹಠ ಕೆಲವೊಮ್ಮೆ ನಮ್ಮಲ್ಲೂ ಇರುತ್ತದೆ. ಯಾರು ಏನೇ ಹೇಳಿದರೂ ನಮ್ಮದೇ ನಡೆಯ ಬೇಕು ಎನ್ನುವ ಕೆಟ್ಟ ಹಠ. ಇದರಿಂದ ನಮಗೆ ಕೆಡುಕಾಗುವುದೇ ಹೆಚ್ಚು. ಹಠ ನಮ್ಮನ್ನು ಜೀವನ ದಲ್ಲಿ ಬೆಳೆಸಬೇಕೇ ಹೊರತು, ನಮ್ಮನ್ನೇ ಹಾಳು ಮಾಡುವಷ್ಟು ಇರಬಾರದು. ಮತ್ತೊಬ್ಬರ ಸಂಯಮವನ್ನು ಎಂದಿಗೂ ಅವರ ದೌರ್ಬಲ್ಯ ಎಂದುಕೊಳ್ಳಬೇಡಿ.