ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mohan Vishwa Column: ಜರ್ಮನಿಯ ಹಿಟ್ಲರ್‌ʼಗೆ ಸ್ವಸ್ತಿಕ್‌ ಸಿಕ್ಕ ಕಥೆ

ವಿಪರ್ಯಾಸವೆಂದರೆ ಜರ್ಮನಿಯ ಕಳ್ಳಸಾಗಾಣೆದಾರನಿಗೆ ದೊರಕಿದ್ದ ಹೂಕುಂಡದ ಮೇಲಿದ್ದ ಈ ಸ್ವಸ್ತಿಕ್ ಚಿಹ್ನೆಯನ್ನು ಹಿಟ್ಲರ್ ತನ್ನ ಸರ್ವಾಧಿಕಾರದ ಬಾವುಟದಲ್ಲಿ ಬಳಸಿಕೊಂಡು ತಾನು ವಶಪಡಿಸಿ ಕೊಂಡ ದೇಶಗಳಲ್ಲಿ ಹಾರಿಸತೊಡಗಿದ. ಜಗತ್ತಿನ ಮಾನವ ಜನಾಂಗದ ಮೇಲೆ ಜರ್ಮನಿಯ ಹಿಡಿತ ಸಾಧಿಸಲು ಹೊರಟ ಹಿಟ್ಲರ್, ತನ್ನ ತಂಡವನ್ನು ಅನೇಕ ದೇಶಗಳಿಗೆ ಅಧ್ಯಯನಕ್ಕಾಗಿ ಕಳುಹಿಸಿದ.

ವೀಕೆಂಡ್‌ ವಿತ್‌ ಮೋಹನ್

ಹಿಟ್ಲರ್ ಕಾಲದಲ್ಲಿ ನಾರ್ಡಿಕ್ ಜನಾಂಗದ ನಾಗರಿಕತೆಯ ಟೊಳ್ಳು ಇತಿಹಾಸವನ್ನು ಯಾವ ಪ್ರಮಾಣದಲ್ಲಿ ಜನರ ತಲೆಗೆ ತುಂಬುವ ಪ್ರಯತ್ನವಾಗಿತ್ತೆಂದರೆ, ಶಾಲೆಗಳಲ್ಲಿ ಮಕ್ಕಳಿಗೆ ನೀವು ‘ಸೂಪರ್‌ಮ್ಯಾನ್’ ಜನಾಂಗಕ್ಕೆ ಸೇರಿದವರೆಂದು ಹೇಳಿಕೊಡಲಾಗುತ್ತಿತ್ತು. ಬೋರ್ಡು ಗಳ ಮೇಲೆ ದೊಡ್ಡದಾಗಿ ಬರೆಯಲಾಗುತ್ತಿತ್ತು.

ಇಂಡಿಯಾನಾ ಜೋ’ ಹಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸಿದ್ದ ಸಿನಿಮಾ. ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡಿದ್ದ ಈ ಚಿತ್ರ ಇಂದಿಗೂ ಕುರ್ಚಿ ತುದಿಯಲ್ಲಿ ಕುಳಿತು ನೋಡಬೇಕಾದ ಕಥೆ ಹೊಂದಿದೆ. ಯೇಸುಕ್ರಿಸ್ತನ ಕಾಲದ ‘ಗ್ರೇಲ್ ಕಪ್’ ಹುಡುಕಿಕೊಂಡು ಕಾಡಿನಲ್ಲಿ ಅಲೆದಾಡುವ ಕಥಾ ಹಂದರದ ಸಿನಿಮಾ ಇದಾಗಿತ್ತು. ಈ ಚಿತ್ರದಲ್ಲಿ ಗ್ರೇಲ್ ಕಪ್ ಹುಡುಕಿಕೊಂಡು ನಾಯಕ ಹೊರಟಂತೆ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಸಹಚರರು 20ನೇ ಶತಮಾನದ ಮೊದಲರ್ಧದಲ್ಲಿ ಜಗತ್ತನ್ನೇ ಸುತ್ತಿದ್ದರು.

ತನ್ನ ಸರ್ವಾಧಿಕಾರಿ ಧೋರಣೆಯ ಮೂಲಕ ಜರ್ಮನಿಯ ಸೈನ್ಯವನ್ನು ಬಳಸಿಕೊಂಡು ಸಿಕ್ಕ ಸಿಕ್ಕ ದೇಶಗಳ ಮೇಲೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಹೊರಟು ವಶಪಡಿಸಿಕೊಳ್ಳುತ್ತಿದ್ದ ಹಿಟ್ಲರ್‌ಗೆ ಅಷ್ಟು ಸಾಕಾಗಿರಲಿಲ್ಲ. ಜರ್ಮನ್ ದೇಶದ ಜನರ ತಲೆಯಲ್ಲಿ ತಾವುಗಳು ಜಗತ್ತಿನ ಮಿಲಿಟರಿ ಸೂಪರ್ ಪವರ್ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಸೂಪರ್ ಪವರ್, ಜಗತ್ತಿನ ಮಾನವ ಜನಾಂಗದ ಸೂಪರ್ ಪವರ್, ಜಗತ್ತಿನ ನಾಗರಿಕತೆಯ ಸೂಪರ್ ಪವರ್ ಆಗಬೇಕೆಂಬ ಆಸೆಯನ್ನು ತುಂಬುವ ಉದ್ದೇಶ ಆತನಿಗಿತ್ತು.

ಆತನ ಆಸೆಗೆ ತಕ್ಕಂತೆ ಕೆಲವು ಜರ್ಮನ್ ಇತಿಹಾಸಕಾರರು ಅನೇಕ ಫ್ಯಾಂಟಸಿ ಕಥೆಗಳ ಮೂಲಕ ಇಲ್ಲದ ಇತಿಹಾಸ ಸೃಷ್ಟಿಸಲು ಮುಂದಾಗಿದ್ದರು. ಜರ್ಮನ್ ಇತಿಹಾಸವನ್ನು ಗಮನಿಸಿದರೆ ಹಿಟ್ಲರ್ ಬರುವುದಕ್ಕಿಂತಲೂ ಮೊದಲು ದೊಡ್ಡ ದೊಡ್ಡ ಯುದ್ದಗಳನ್ನು ಗೆದ್ದ ಉದಾಹರಣೆಗಳಿಲ್ಲ ಅಥವಾ ದೊಡ್ಡ ದೊಡ್ಡ ಯುದ್ಧದಲ್ಲಿ ಭಾಗವಹಿಸಿದ ಉದಾಹರಣೆಗಳೂ ಇಲ್ಲ.

ಹಾಗಾಗಿ ಇತಿಹಾಸವನ್ನು ಹುಡುಕಿ ಬರೆಯುವುದು ಹಿಟ್ಲರ್‌ನ ಉದ್ದೇಶವಾಗಿತ್ತು. ಜರ್ಮನಿಯ ‘ನಾಜಿಗಳು’ ಜಗತ್ತಿನಲ್ಲಿರುವ ಎಲ್ಲಾ ದೇಶಗಳ ನಾಗರಿಕತೆಯ ಸಂಸ್ಥಾಪಕರು ಮತ್ತು ಮೂಲ ನಿವಾಸಿ ಗಳೆಂಬುದನ್ನು ಹಿಟ್ಲರ್ ಇತಿಹಾಸದ ಮೂಲಕ ಸಾಬೀತುಪಡಿಸಲು ಹೊರಟಿದ್ದ. ಅದಕ್ಕಾಗಿ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಅನೇಕ ಪುರಾತತ್ವ ಶಾಸನಗಳು, ಕುರುಹುಗಳನ್ನು ಹುಡುಕುವುದಕ್ಕೆ ತನ್ನ ದೇಶದ ಇತಿಹಾಸಕಾರರನ್ನು ನೇಮಿಸಿದ್ದ.

ಇದನ್ನೂ ಓದಿ: Mohan Vishwa Column: ಸಿಗಲಿಲ್ಲ ಟುಕಡೆ ಗ್ಯಾಂಗ್‌ʼಗೆ ಜಾಮೀನು

1870ರ ಸಮಯದಲ್ಲಿ ಜರ್ಮನ್ ದೇಶದ ವ್ಯಕ್ತಿಯೊಬ್ಬ ಇತರ ದೇಶಗಳಿಂದ ಪುರಾತತ್ವ ಸ್ಥಳಗಳಲ್ಲಿ ದೊರೆತ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಕೆಲಸ ಮಾಡುತ್ತಿದ್ದ. ಕಳ್ಳಸಾಗಣೆ ಮಾಡಿದ ವಸ್ತು ಗಳನ್ನು ನಂತರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ. ಆತ ಒಮ್ಮೆ ಟರ್ಕಿ ದೇಶದಿಂದ ಕಳ್ಳಸಾಗಣೆ ಮಾಡಿದ್ದ ವಸ್ತುಗಳಲ್ಲಿ ಒಡೆದು ಚೂರಾಗಿದ್ದ ಹೂಕುಂಡ ದೊರಕಿತ್ತು. ಅದರ ಮೇಲೆ ‘ಸ್ವಸ್ತಿಕ್’ ಗುರುತಿತ್ತು.

ಸುಮಾರು 10000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿರುವ ಸ್ವಸ್ತಿಕ್ ಚಿಹ್ನೆಯನ್ನು ಸಿಂಧೂ ನಾಗರಿಕತೆಯ ಉತ್ಖನನದ ಸಮಯದಲ್ಲಿ ದೊರಕಿರುವ ಅನೇಕ ಕುರುಹುಗಳಲ್ಲಿ ಕಾಣಬಹುದು. ಹಿಂದೂ ಧರ್ಮ, ಜೈನ ಧರ್ಮ, ಬೌದ್ಧ ಧರ್ಮದಲ್ಲಿ ಈ ಚಿಹ್ನೆಯನ್ನು ಧನಾತ್ಮಕ ಸಮೃದ್ಧಿಯ ಸಂಕೇತದ ಚಿಹ್ನೆಯನ್ನಾಗಿ ಇಂದಿಗೂ ಬಳಸಲಾಗುತ್ತದೆ.

ವಿಪರ್ಯಾಸವೆಂದರೆ ಜರ್ಮನಿಯ ಕಳ್ಳಸಾಗಾಣೆದಾರನಿಗೆ ದೊರಕಿದ್ದ ಹೂಕುಂಡದ ಮೇಲಿದ್ದ ಈ ಸ್ವಸ್ತಿಕ್ ಚಿಹ್ನೆಯನ್ನು ಹಿಟ್ಲರ್ ತನ್ನ ಸರ್ವಾಧಿಕಾರದ ಬಾವುಟದಲ್ಲಿ ಬಳಸಿಕೊಂಡು ತಾನು ವಶಪಡಿಸಿಕೊಂಡ ದೇಶಗಳಲ್ಲಿ ಹಾರಿಸತೊಡಗಿದ. ಜಗತ್ತಿನ ಮಾನವ ಜನಾಂಗದ ಮೇಲೆ ಜರ್ಮನಿ ಯ ಹಿಡಿತ ಸಾಧಿಸಲು ಹೊರಟ ಹಿಟ್ಲರ್, ತನ್ನ ತಂಡವನ್ನು ಅನೇಕ ದೇಶಗಳಿಗೆ ಅಧ್ಯಯನಕ್ಕಾಗಿ ಕಳುಹಿಸಿದ.

ಇಲ್ಲದ ಇತಿಹಾಸವನ್ನು ಸೃಷ್ಟಿಸುವ ಸಲುವಾಗಿ ಅನೇಕರ ಮೇಲೆ ಯುದ್ಧಕ್ಕೆ ಹೊರಟಿದ್ದ. ಸ್ವೀಡನ್ ದೇಶದಲ್ಲಿ ಜರ್ಮನಿಯ ಪುರಾತತ್ವ ವಿಜ್ಞಾನಿಗಳು ಉತ್ಖನನ ನಡೆಸುವ ಸಂದರ್ಭದಲ್ಲಿ ಸಾವಿರಾರು ವರ್ಷಗಳ ಹಳೆಯ ಕೆಲವು ಲಿಪಿಗಳು ಮತ್ತು ಚಿತ್ರಗಳು ಬಂಡೆಯೊಂದರ ಮೇಲೆ ಸಿಕ್ಕಿದ್ದವು. ಆ ಚಿತ್ರ ಗಳನ್ನು ಬಳಸಿಕೊಂಡು, ಇದು ಜರ್ಮನಿಯ ನಾರ್ಡಿಕ್ ಜನಾಂಗದವರು ಬಳಸುತ್ತಿದ್ದರು ಎಂಬ ಇತಿಹಾಸ ಹೇಳಹೊರಟರು.

A Hitler

ಸಾವಿರಾರು ವರ್ಷಗಳ ಹಿಂದೆ ಈಜಿಪ್ಟ್ ಮತ್ತು ಮೆಸಪಟೋಮಿಯಾದಲ್ಲಿ ಸಿಕ್ಕಿದ್ದ ಕುರುಹುಗಳಿ‌ ಗಿಂತಲೂ ಹಳೆಯ ಚಿತ್ರಗಳಿವೆಂದು ಆಧಾರವಿಲ್ಲದ ಕಾಲ್ಪನಿಕ ಕಾದಂಬರಿ ಕಥೆ ಹೇಳಿದಂತೆ ಹೇಳಿದ್ದರು. ನಾರ್ಡಿಕ್ ಮೂಲ ಜನಾಂಗವು ಕ್ರಮೇಣ ‘ಆರ್ಯನ್ ಜನಾಂಗ’ವಾಗಿ ಬದಲಾಯಿತು.

ಆರ್ಯನ್ ಜನಾಂಗ ಜಗತ್ತಿನ ಅನೇಕ ದೇಶಗಳಲ್ಲಿ ನಾಗರಿಕತೆ ಬೆಳೆಸಿದ್ದು, ಹಾಗಾಗಿ ಜರ್ಮನಿ ಜಗತ್ತಿಗೆ ನಾಗರಿಕತೆಯನ್ನು ಹೇಳಿಕೊಟ್ಟಿತೆಂಬ ಟೊಳ್ಳು ಇತಿಹಾಸ ಸೃಷ್ಟಿಸಲು ಹೊರಟ. ತನ್ನ ಸರ್ವಾಧಿಕಾರಿ ಧೋರಣೆಯನ್ನು ಜರ್ಮನ್ನರ ಇತಿಹಾಸವೆಂದು ಬಿಂಬಿಸಲು, ಇಲ್ಲದ ಇತಿಹಾಸ ಸೃಷ್ಟಿಸಲು ಹರಸಾಹಸ ಪಟ್ಟಿದ್ದ ಹಿಟ್ಲರ್.

ಇತಿಹಾಸವನ್ನು ತಿರುಚಿ, ಮುಂದಿನ ಪೀಳಿಗೆಯ ಜಗತ್ತಿನ ನಾಗರಿಕತೆಯ ಸೃಷ್ಟಿಕರ್ತರು ಜರ್ಮನ್ನ ರೆಂದು ಹೇಳುವುದು ಆತನ ಉದ್ದೇಶವಾಗಿತ್ತು. ಪ್ರಾಚೀನ ರೋಮ್ ಮತ್ತು ಗ್ರೀಕ್ ಸಂಸ್ಕೃತಿಗಿಂತಲೂ ಹಿಂದೆಯೇ ನಾರ್ಡಿಕ್ ಜನಾಂಗವಿತ್ತೆಂದು ಸಾಬೀತುಪಡಿಸುವ ಉದ್ದೇಶ ಅವನದ್ದಾಗಿತ್ತು. ಗ್ರೀಸ್ ಮತ್ತು ಇಟಲಿ ದೇಶಗಳು ಯುರೋಪ್ ಖಂಡದ ದಕ್ಷಿಣದಲ್ಲಿದ್ದುದರಿಂದ, ಉತ್ತರದ ಕಡೆಯಿಂದ ಬಂದ ಜರ್ಮನ್ನರು, ರೋಮನ್ನರು ಮತ್ತು ಗ್ರೀಕರಿಗೆ ನಾಗರಿಕತೆಯ ಪಾಠ ಕಲಿಸಿದರೆಂಬ ಭ್ರಮೆ ಯಲ್ಲಿ ಇಲ್ಲದ ಇತಿಹಾಸ ಸೃಷ್ಟಿಸಲು ಹಿಟ್ಲರ್ ಹೊರಟಿದ್ದನೆಂದು ಹೇಳಲಾಗುತ್ತದೆ.

ಆತನ ಸಹಚರರು ಹೇಳಹೊರಟಿದ್ದ ಇತಿಹಾಸಕ್ಕೆ ಎಲ್ಲಿಯೂ ಪುರಾವೆಗಳಿರಲಿಲ್ಲ. ಆತನಿಗೆ ಈ ಯೋಚನೆ ಬರಲು ಕಾರಣರಾದವರು ಜರ್ಮನ್ ದೇಶದೊಳಗಿದ್ದ ಕೆಲ ಬುದ್ಧಿಜೀವಿಗಳು. ಭಾರತ ದೊಳಗೆ ಎಡಚರರು ಸೃಷ್ಟಿಸಿರುವ ಆರ್ಯ ಮತ್ತು ದ್ರಾವಿಡ ಸಿದ್ಧಾಂತಕ್ಕೆ ಇಂದಿಗೂ ಸಣ್ಣದೊಂದು ಪುರಾವೆ ಸಿಕ್ಕಿಲ್ಲ.

ಇಲ್ಲಿಯೂ ಎಡಚರರು, ಆರ್ಯರು ಉತ್ತರದಿಂದ ದಕ್ಷಿಣ ಭಾರತಕ್ಕೆ ಬಂದು ದಾಳಿ ಮಾಡಿದರೆಂಬ ತಲೆ ಬುಡವಿಲ್ಲದ ಇತಿಹಾಸ ಹೇಳುತ್ತಾರೆ. ಜರ್ಮನಿಯ ಬುದ್ಧಿಜೀವಿಗಳು ಆರ್ಯ ಜನಾಂಗದ ಶ್ರೇಷ್ಠತೆಯನ್ನು ಪ್ರತಿಪಾದಿಸಲು ಮತ್ತಷ್ಟು ಸಾಕ್ಷಿಯಿಲ್ಲದ ಇತಿಹಾಸವನ್ನು ಹೇಳಲು ಪ್ರಾರಂಭಿಸಿ ದ್ದರು.

ಜಪಾನ್ ದೇಶದ ‘ಸಮುರಾಯ’ಗಳು ಮತ್ತು ಭಾರತದ ಬ್ರಾಹ್ಮಣರನ್ನು ಜರ್ಮನಿಯ ನಾರ್ಡಿಕ್ ಜನಾಂಗದವರು ಸೃಷ್ಟಿ ಮಾಡಿದರೆಂದು ಹೇಳಿದ್ದರು. ಭಾರತದ ಒಳಗಿರುವ ಎಡಚರ ಬುದ್ಧಿಜೀವಿ ಗಳು ಹಿಟ್ಲರ್ ಕಾಲದಲ್ಲಿದ್ದ ಜರ್ಮನ್ನರ ಬುದ್ದಿಜೀವಿಗಳ ಮಾತನ್ನು ಕೇಳಿ, ಅದೇ ಸಾಕ್ಷ್ಯವಿಲ್ಲದ ಕಥೆಯನ್ನು ಇತಿಹಾಸವೆಂದು ಇಂದಿಗೂ ಹೇಳುತ್ತಿದ್ದಾರೆ.

ಜರ್ಮನಿಯ ಕೆಲ ಬುದ್ಧಿಜೀವಿಗಳು ನಾರ್ಡಿಕ್ ನಾಗರಿಕತೆಯ ಪಳೆಯುಳಿಕೆಗಳನ್ನು ಹುಡುಕಲು 10000 ಕಿಲೋಮೀಟರ್ ದೂರದ ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ ದೇಶಕ್ಕೆ ತೆರಳಿದ್ದರು. ಬೊಲಿವಿಯಾದಲ್ಲಿರುವ ಶಿಲಾಯುಗದ ‘ಟಿವಾನಕು’ ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಸಿಕ್ಕ ಅನೇಕ ಪಳೆಯುಳಿಕೆಗಳನ್ನು ಸಂಗ್ರಹಿಸಿ ಜರ್ಮನ್ ದೇಶಕ್ಕೆ ತಂದಿದ್ದರು.

ಟಿವಾನಕುನಲ್ಲಿರುವ ಉತ್ಖನನ ಸ್ಥಳದಲ್ಲಿ ಕಾಣಸಿಗುವ ಮನುಷ್ಯನ ಆಕೃತಿಯ ಪ್ರತಿಮೆಗಳನ್ನು ನೋಡಿ, ಅವು ನಾರ್ಡಿಕ್ ಜನಾಂಗದ ಜನರನ್ನು ಹೋಲುತ್ತಿವೆ, ಹಾಗಾಗಿ ಜರ್ಮನ್ನರ ನಾಗರಿಕತೆ 10000 ಕಿಲೋಮೀಟರ್ ದೂರವಿರುವ ಬೊಲಿವಿಯಾದಲ್ಲೂ ಇತ್ತೆಂದು ಹೇಳಿದರು. ಅಲ್ಲಿ ಸಿಕ್ಕ ಕಲಾಕೃತಿಯ ಮುಖವನ್ನು ತಾಳೆ ಮಾಡಿ ನೋಡಿದಾಗ ಜರ್ಮನ್ ಪ್ರಜೆಗಳಂತೆ ಕಾಣುತ್ತಾರೆಂಬ ಸಾಕ್ಷ್ಯವಿಲ್ಲದ ಮತ್ತೊಂದು ಕಥೆಯನ್ನು ಹಿಟ್ಲರ್‌ಗೆ ಹೇಳಲು ಹೊರಟಿದ್ದರು.

ಯುರೋಪಿನ ಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ಮಾಡಿ ಪಾರುಪತ್ಯ ಸಾಧಿಸುತ್ತಿದ್ದ ಸರ್ವಾಧಿಕಾರಿ ಹಿಟ್ಲರ್‌ಗೆ, ಇನ್ನು 10000 ಕಿಲೋಮೀಟರ್ ದೂರದ ದಕ್ಷಿಣ ಅಮೆರಿಕಾದ ದೇಶವೊಂದರಲ್ಲಿ ತಮ್ಮವರಿದ್ದಾರೆಂದು ಹೇಳಿದ್ದರೆ ಏನಾಗುತ್ತಿದ್ದಿರಬಹುದೆಂದು ಯೋಚಿಸುವುದು ಕಷ್ಟವೇನಲ್ಲ.

ಹಿಟ್ಲರ್ ಕಾಲದಲ್ಲಿ ನಾರ್ಡಿಕ್ ಜನಾಂಗದ ನಾಗರಿಕತೆಯ ಟೊಳ್ಳು ಇತಿಹಾಸವನ್ನು ಯಾವ ಪ್ರಮಾಣದಲ್ಲಿ ಜನರ ತಲೆಗೆ ತುಂಬುವ ಪ್ರಯತ್ನವಾಗಿತ್ತೆಂದರೆ, ಶಾಲೆಗಳಲ್ಲಿ ಮಕ್ಕಳಿಗೆ ನೀವು ‘ಸೂಪರ್‌ಮ್ಯಾನ್’ ಜನಾಂಗಕ್ಕೆ ಸೇರಿದವರೆಂದು ಹೇಳಿಕೊಡಲಾಗುತ್ತಿತ್ತು. ಬೋರ್ಡುಗಳ ಮೇಲೆ ದೊಡ್ಡದಾಗಿ ಬರೆಯಲಾಗುತ್ತಿತ್ತು.

ಮಕ್ಕಳ ಪಠ್ಯಪುಸ್ತಕದಲ್ಲಿ ಮಕ್ಕಳನ್ನು ಸೂಪರ್‌ಮ್ಯಾನ್ ರೀತಿಯಲ್ಲಿ ತೋರಿಸಲಾಗುತ್ತಿತ್ತು. ಸಣ್ಣ ವಯಸ್ಸಿನಲ್ಲಿ ಮಕ್ಕಳ ತಲೆಯಲ್ಲಿ ಜರ್ಮನ್ ದೇಶದವರೆಂದರೆ ಜಗತ್ತಿಗೆ ನಾಗರಿಕತೆಯನ್ನು ಹೇಳಿ ಕೊಟ್ಟವರು, ಅವರಿಂದಲೇ ರೋಮನ್ನರು ಮತ್ತು ಗ್ರೀಕರು ನಾಗರಿಕತೆಯನ್ನು ಕಲಿತರು ಎಂಬು ದನ್ನು ತುಂಬಲಾಗುತ್ತಿತ್ತು.

ಹಿಟ್ಲರ್ ತನ್ನ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಪಾದಿಸಲು ಸಾಕ್ಷ್ಯವಿಲ್ಲದ ಇತಿಹಾಸವನ್ನು ಸೃಷ್ಟಿಸಲು ಹೊರಟಿದ್ದ. ಸಾಕ್ಷ್ಯಗಳ ಹುಡುಕಾಟಕ್ಕಾಗಿ ಜಗತ್ತಿನ ನಾನಾ ಭಾಗಕ್ಕೆ ತನ್ನ ದೇಶದ ಬುದ್ಧಿಜೀವಿಗಳನ್ನು ಕಳುಹಿಸುತ್ತಿದ್ದ. ಮತ್ತೆ ಕೆಲ ಬುದ್ದಿಜೀವಿಗಳು ಸ್ವತಃ ತಾವೇ ಹಿಟ್ಲರ್ ಬಳಿ ಬಂದು ಹೇಳುತ್ತಿದ್ದರು. ಹಿಟ್ಲರ್ ಕಾಲದಲ್ಲಿ ಜರ್ಮನಿಯಲ್ಲಿದ್ದ ಯಹೂದಿಗಳ ಮಾರಣಹೋಮಕ್ಕೆ ಮುನ್ನುಡಿ ಬರೆಯುವಂಥ ಇತಿಹಾಸವನ್ನು ಅಲ್ಲಿನ ಬುದ್ಧಿಜೀವಿಗಳು ಕಾದಂಬರಿಯ ರೂಪದಲ್ಲಿ ತಯಾರು ಮಾಡಿದ್ದರು. ಜರ್ಮನ್ ದೇಶದಲ್ಲಿದ್ದ ‘ಅಣ್ಣನೆರ್ಬೆ ರಿಸರ್ಚ್ ಸೊಸೈಟಿ’ ಮೂಲಕ ಹಿಟ್ಲರ್ ಅವಧಿಯಲ್ಲಿ ಜಗತ್ತಿನಲ್ಲಿ ಅನೇಕ ಉತ್ಖನನಗಳು ನಡೆದವು.

‘ಹೆನ್ರಿಚ್ ಹಿಮ್ಲರ್’ ಇದರ ಸಂಸ್ಥಾಪಕ. ಹಿಟ್ಲರ್ ನಿರಂತರವಾಗಿ ಮಾಡುತ್ತಿದ್ದ ಯುದ್ಧದ ಇತಿಹಾಸ ವಿಲ್ಲದ, ಜರ್ಮನಿಯ ಹಳೆಯ ಇತಿಹಾಸವನ್ನು ಸೃಷ್ಟಿಸಲು ಈ ಸಂಸ್ಥೆ ಮುಂದಾಗಿತ್ತು. 1934ರಲ್ಲಿ ’ಇoZbಛಿ ಅಜZಜ್ಞಿoಠಿ ಎZಜ್ಝಿ’ ಎಂಬ ಪುಸ್ತಕ ಪ್ರಕಟವಾಯಿತು. ಈ ಪುಸ್ತಕ ಪ್ರಕಟವಾದ ನಂತರ 1935 ಮತ್ತು 1936ರಲ್ಲಿ ಇಟಲಿ ಮತ್ತು - ದೇಶದಲ್ಲಿ ನಾಗರಿಕತೆಯ ಸಂಶೋಧನೆಗಳು ಪ್ರಾರಂಭ ವಾದವು.

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಇಟಲಿ ದೇಶವನ್ನು ಅಳುತ್ತಿದ್ದ ಕಮ್ಯುನಿ ಪಕ್ಷದ ನಾಯಕ ಮುಸ್ಸೋಲಿನಿಗೆ ರೋಮನ್ನರ ಸಾವಿರಾರು ವರ್ಷಗಳ ಇತಿಹಾಸವಿತ್ತು. ಹೆಸರಿಗೆ ಕಮ್ಯು ನಿಸ್ಟ್‌ ಪಕ್ಷದವನಾಗಿದ್ದರೂ ರೋಮನ್ನರ ಇತಿಹಾಸವಿಲ್ಲದೆ ಆಡಳಿತ ನಡೆಸುವುದು ಸುಲಭವಾಗಿರ ಲಿಲ್ಲ. ಆದರೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ಗೆ ದೇಶದ ಸುದೀರ್ಘ ಇತಿಹಾಸವಿರಲಿಲ್ಲ.

ಹಾಗಾಗಿ ಆತ ತನ್ನ ಸರ್ವಾಧಿಕಾರಿ ಧೋರಣೆಗಳನ್ನು ಸರಿಯೆಂದು ಹೇಳಲು ಒಂದು ಇತಿಹಾಸದ ಅವಶ್ಯಕತೆ ಇತ್ತು. ಇಡೀ ಜಗತ್ತು, ಜರ್ಮನ್ ಮೂಲದ ಆರ್ಯನ್ನರು ವಶಪಡಿಸಿಕೊಂಡು ನಾಗರಿಕತೆ ಕಲಿಸಿದ ಕಾಲೊನಿಯಾಗಿತ್ತೆಂಬುದನ್ನು ಹೇಳುವುದು ಹಿಟ್ಲರ್‌ನ ಸ್ಪಷ್ಟ ಉದ್ದೇಶವಾಗಿತ್ತು. ಆ ಸಿದ್ಧಾಂತದ ನೆರವಿನಿಂದ ತಾನು ಜಗತ್ತಿನ ಮೇಲೆ ಯುದ್ಧದ ಮೂಲಕ ಹಿಡಿತ ಸಾಧಿಸುವುದು ಸುಲಭವೆಂದು ಆತ ಭಾವಿಸಿದ್ದ. ಆದರೆ ಆತನ ಉದ್ದೇಶ ಫಲಿಸಲಿಲ್ಲ, ಮರಣ ಹೊಂದಿದ.

ಮೋಹನ್‌ ವಿಶ್ವ

View all posts by this author