ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ನರಕ ಚತುರ್ದಶಿಯ ಕಥೆ

ಸಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ. ಅವನು ಇಡೀ ಭೂಮಿ ಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ, ನೀರಿನ ದ್ವಂದ್ವ ಯುದ್ಧ ಮಾಡಿ ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಸಂರಕ್ಷಿಸಿದ ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ.

ಒಂದೊಳ್ಳೆ ಮಾತು

ಸಾರು ವರ್ಷಗಳ ಹಿಂದೆ ಕೃತಯುಗದಲ್ಲಿ ಹಿರಣ್ಯಾಕ್ಷ ಅನ್ನುವ ರಾಕ್ಷಸನಿದ್ದ. ಅವನು ಇಡೀ ಭೂಮಿ ಯನ್ನು ಸಮುದ್ರದ ನೀರಿನಲ್ಲಿ ಮುಳುಗಿಸಿಬಿಟ್ಟ. ಆಗ ಮಹಾವಿಷ್ಣು ವರಾಹಾವತಾರವನ್ನು ತಾಳಿ, ನೀರಿನ ದ್ವಂದ್ವ ಯುದ್ಧ ಮಾಡಿ ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ಸಂರಕ್ಷಿಸಿದ ಮತ್ತು ಭೂದೇವಿಗೆ ತನ್ನ ಹಳೆಯ ಸ್ಥಾನ ಸಿಗೋ ಹಾಗೆ ಮಾಡಿದ.

ಆದರೆ ಅದೆ ಒಂದು ಕಡೆ ಒಂದು ಹನಿ ಬೆವರು ವರಾಹನ ಮೈಯಿಂದ ಕೆಳಗೆ ಬಿದ್ದೇಬಿಟ್ಟಿ ತಂತೆ. ಆ ಬೆವರಿನಿಂದ ಒಬ್ಬ ಶಕ್ತಿವಂತನಾದ ಯುವಕ ಹುಟ್ಟಿಬಿಟ್ಟನಂತೆ. ಅವನ ಹೆಸರೇ ನರಕ. ತಂದೆ ವರಾಹ, ತಾಯಿ ಭೂದೇವಿ. ಈತ, ಭೂಮಿಯ ಮಗನಾದುದರಿಂದ ‘ಭೌಮಾಸುರ’ ಎಂಬ ಹೆಸರೂ ಉಂಟು.

ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗನಿಗೆ ವೈಷ್ಣವಾಸವನ್ನು ಸಂಪಾದಿಸಿಕೊಟ್ಟಳು. ನರಕಾ ಸುರ ಪ್ರಾಗ್ಜ್ಯೊತಿಷಪುರದಲ್ಲಿ ಅಸುರೇಂದ್ರನೆನಿಸಿದ್ದರೂ, ಭೂಲೋಕದ ಹೆಸರು ಗಳಿಸಿದ್ದ. ನರಕಾ ಸುರನು ದೇವ-ದೇವತೆಗಳಿಂದ ಸಾಕಷ್ಟು ಅದ್ಭುತ ರೀತಿಯ ವರಗಳನ್ನೂ ಪಡೆದು, ಬಹು ಭುಜ ಪರಾಕ್ರಮಿ ಎಂದು ಬೀಗುತ್ತಿದ್ದ.

ಇದನ್ನೂ ಓದಿ: Roopa Gururaj Column: ಚಿಂತೆಯ ಚೀಲ

ಕಾಲ ಉರುಳಿದಂತೆ ಭೂಲೋಕದ ಅಲ್ಲದೆ, ದೇವ ಲೋಕದಲ್ಲೂ ಇವನ ದಾಂಧಲೆ ಅತಿಯಾ ಯಿತು. ದೇವತೆಗಳೆಲ್ಲರೂ ಇವನ ಹಾಗೂ ಇವನ ಸೈನ್ಯದ ದಾಳಿಗೆ ತತ್ತರಿಸತೊಡಗಿದರು. ಈತನೂ ಈತನ ಸ್ನೇಹಿತನಾದ ಮುರಾಸುರನೂ ಇಂದ್ರನಿಗೆ ಪ್ರತಿನಿತ್ಯ ತೊಂದರೆ ಕೊಡುತ್ತಿದ್ದರು. ಇವರು ಶ್ವೇತ ಚ್ಛತ್ರವನ್ನೂ ಸ್ವರ್ಗಲೋಕದ ಮಣಿ ಪರ್ವತವನ್ನೂ ಅಪಹರಿಸಿದರು.

ಇಂದ್ರನ ತಾಯಿ ಅದಿತಿಯ ಕರ್ಣಕುಂಡಲಗಳನ್ನು ಅಪಹರಿಸಿದ ನರಕಾಸುರನ ಹಿಂಸೆಯನ್ನು ತಾಳಲಾರದ ಇಂದ್ರ ದ್ವಾರಕೆಗೆ ಬಂದು ಶ್ರೀಕೃಷ್ಣನಲ್ಲಿ ಮೊರೆಯಿಟ್ಟ. ಕೃಷ್ಣನ ಹೆಂಡತಿ ಸತ್ಯಭಾ ಮೆಗೆ ಇದನ್ನ ಕೇಳಿ ಮಹಾದುಃಖವಾಯಿತು. ಪ್ರಪಂಚಕ್ಕೇ ತಾಯಿಯಾದ ಅದಿತೀದೇವಿಗೆ ಈ ರೀತಿ ಅವಮಾನ ಮಾಡಿದ ನರಕಾಸುರನನ್ನ ಸುಮ್ಮನೆ ಬಿಡಬಾರದು ಅಂತ ಶ್ರೀಕೃಷ್ಣನಿಗೆ ವಿಶೇಷವಾಗಿ ಕೇಳಿಕೊಂಡಳು.

‘ಸರಿ’ ಎಂದು ತಕ್ಷಣವೇ ಮಹಾಗರುಡ ಪಕ್ಷಿಯನ್ನ ಮನದಲ್ಲಿ ನೆನೆದ. ವಿಷ್ಣುವಿನ ವಾಹನವಾದ ಗರುಡ ವಿಷ್ಣುವಿನ ಅವತಾರಿಯಾದ ಶ್ರೀಕೃಷ್ಣ ಕರೆದ ತಕ್ಷಣ ಬಂದ. ಕೃಷ್ಣ ತನ್ನ ಆಯುಧವಾದ ಸುದರ್ಶನ ಚಕ್ರ ಮತ್ತು ಇನ್ನಿತರ ಆಯುಧಗಳನ್ನು ತೆಗೆದುಕೊಂಡು ಗರುಡಪಕ್ಷಿಯನ್ನೇರಿ ಕೂತ. ಸತ್ಯಭಾಮೆ ‘ನಾನೂ ಬರುತ್ತೇನೆ’ ಎಂದು ಹಠ ಹಿಡಿದಳು.

ಸರಿ ಎಂದು ಶ್ರೀಕೃಷ್ಣ ಸತ್ಯಭಾಮಾ ಸಮೇತನಾಗಿ ಪ್ರಾಗ್ಜ್ಯೋತಿಷಪುರಕ್ಕೆ ಹೊರಟೇ ಬಿಟ್ಟ. ಆ ಪುರದ ಸುತ್ತಲೂ ಮುರ ನಿರ್ಮಿಸಿದ್ದ ಬೆಟ್ಟ, ನೀರು, ಬೆಂಕಿ ಹಾಗೂ ಶಸ್ತ್ರಗಳ ಕೋಟೆಯಿತ್ತು. ಮುರಪಾಶ ವನ್ನು ಚಕ್ರಾಯುಧದಿಂದ ನಾಶ ಮಾಡಿ ಪುರಪ್ರವೇಶ ಮಾಡಿದ ಕೃಷ್ಣ ಪಾಂಚ ಜನ್ಯವನ್ನು ಊದಿದ.

ಇದನ್ನು ಕೇಳಿ ನೀರಿನಲ್ಲಿ ಮಲಗಿದ್ದ ಪಂಚಶಿರನಾದ ಮುರ ನಿದ್ದೆಯಿಂದೆದ್ದು ಭಯಂಕರ ವಾಗಿ ಆರ್ಭಟಿಸುತ್ತ ಕೃಷ್ಣನ ಮೇಲೆರಗಿದ. ಒಂದೇ ಸಲಕ್ಕೆ ಕೃಷ್ಣ ಪಂಚಬಾಣಗಳನ್ನು ಬಿಟ್ಟು ಮುರನ ತಲೆಯನ್ನು ಕತ್ತರಿಸಿದ. ಮುರನ ಮರಣವಾರ್ತೆಯನ್ನು ಕೇಳಿದ ಆತನ ಏಳು ಜನ ಮಕ್ಕಳು ಪೀಠಾ ಸುರನೆಂಬ ಸೇನಾಪತಿಯೊಡನೆ ನರಕಾಸುರನ ಅಪ್ಪಣೆಯನ್ನು ಕೇಳಿ ಕೃಷ್ಣನ ಮೇಲೆರಗಿದರು.

ಕೃಷ್ಣ ಅವರನ್ನೂ ತನ್ನ ಚಕ್ರಾ ಯುಧಕ್ಕೆ ಆಹುತಿ ಕೊಟ್ಟ. ಇವರೆಲ್ಲ ಹತರಾದ ಬಳಿಕ ನರಕಾಸುರ ಸೈನ್ಯ ಸಮೇತನಾಗಿ ಕೃಷ್ಣನ ಮೇಲೆ ಎರಗಿ, ಬಹಳವಾಗಿ ಹೋರಾಡಿದ. ಅವನಿಗೆ ತನ್ನ ತಾಯಿ ಯಿಂದ ಮಾತ್ರ ಸಾವು ಎಂದೂ ವರವಿತ್ತು. ಆದ್ದರಿಂದ ಹಿಂದಿನ ಜನ್ಮದಲ್ಲಿ ತನ್ನ ತಾಯಿ ಯಾಗಿದ್ದ ಸತ್ಯಭಾಮೆಯ ಕೈಯಿಂದ ಸತ್ತ.

ನರಕಾಸುರ ತನ್ನ ಕೆಟ್ಟಕಾರ್ಯಗಳಿಗೆ ತುಂಬಾ ಪಶ್ಚಾತ್ತಾಪ ಪಟ್ಟ. ಸಾಯುವ ಮುನ್ನ ಅವನು ಸತ್ಯಭಾಮೆ, ಕೃಷ್ಣರನ್ನ ಒಂದು ವರ ಕೇಳಿದ. ನಾನು ಸತ್ತ ಈ ದಿನ ನರಕಚತುರ್ದಶಿಯೆಂದು ಪ್ರಸಿದ್ಧಿಯಾಗಲಿ ಮತ್ತು ಜಗತ್ತು ದೀಪಗಳಿಂದ ನರಕನ ವಧೆಯನ್ನು ಆಚರಿಸಲಿ ಎಂದು ವರವನ್ನು ಬೇಡಿದ.

ಭೂದೇವಿಯಾದ ಸತ್ಯಭಾಮೆಯು ಮನಕರಗಿ ವರವನ್ನು ಕೊಟ್ಟಳು. ನರಕಾಸುರ ಕಡೆಗೆ ಸತ್ತ. ನರಕನು ಬಂಧಿಸಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಶ್ರೀಕೃಷ್ಣನು ಬಿಡುಗಡೆ ಮಾಡಿದ, ನರಕಾಸುರನ ಮಗ ಭಗದತ್ತನನ್ನ ರಾಜನನ್ನಾಗಿ ಮಾಡಿದ.

ತಕ್ಷಣವೇ ಸತ್ಯ ಭಾಮೆಯ ಸಮೇತ ಗರುಡನ ಮೇಲೇರಿ ಸ್ವರ್ಗದಲ್ಲಿರುವ ಇಂದ್ರನಿಗೆ ಅದಿತಿದೇವಿಯ ಓಲೆ ಗಳನ್ನು ಗೌರವದಿಂದ ಅರ್ಪಿಸಿ ದ್ವಾರಕೆಗೆ ಹಿಂದಿರುಗಿದ. ನರಕಾಸುರನ ಮೇಲಿನ ವಿಜಯ ವನ್ನು ಸಂಭ್ರ ಮಿಸಲು, ಕೃಷ್ಣ ಮತ್ತು ಸತ್ಯಭಾಮಾ ಯುದ್ಧ ಭೂಮಿಯಿಂದ ಮರಳಿ ಬಂದು, ಎಣ್ಣೆ ಸ್ನಾನ ಮಾಡಿ ನಂತರ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಿದರಂತೆ.

ಇದನ್ನೇ ದೀಪಾವಳಿಯ ಮೊದಲ ದಿನ ನಾವೆಲ್ಲರೂ ಎಣ್ಣೆ ಸ್ನಾನ ಮಾಡಿ, ನಂತರ ದೀಪಗಳ ಅಲಂಕಾರದ ಮೂಲಕ ಹಬ್ಬವನ್ನು ಆಚರಿಸಿ, ಕೆಟ್ಟದರ ಮೇಲೆ ಒಳ್ಳೆಯದರ ಗೆಲುವನ್ನು ಸಂಭ್ರಮಿ ಸುತ್ತೇವೆ.

ರೂಪಾ ಗುರುರಾಜ್

View all posts by this author