ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಹೃದಯವನ್ನೇ ಹೆಪ್ಪುಗಟ್ಟಿಸಿ ಸಾವನ್ನು ಗೆಲ್ಲುವ ವುಡ್‌ ಕಪ್ಪೆ

ಉತ್ತರ ಅಮೆರಿಕದಲ್ಲಿರುವ ಅಲಾಸ್ಕಾದಲ್ಲಿ ಚಳಿಗಾಲಗಳು ತೀವ್ರವಾಗಿರುತ್ತವೆ. ಎಷ್ಟರಮಟ್ಟಿಗೆ ಅಂದರೆ, ಹಿಮಪಾತದಿಂದ ಕೂಡಿರುವ (ಅಕ್ಟೋಬರ್-ಮೇ) ತಾಪಮಾನವು ಜಮ್ಮುವಿನ ಮಟ್ಟ ಕ್ಕಿಂತ ಬಹಳ ಕೆಳಗೆ ಇಳಿಯುತ್ತದೆ, ಅಂದರೆ ಸುಮಾರು 50 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು. ಇಂಥ ಕೆಟ್ಟ ಚಳಿಯಲ್ಲಿ ಅಲ್ಲಿರುವ ಒಂದು ಚಿಕ್ಕ ‘ವುಡ್ ಕಪ್ಪೆ’ ಆ ವಿಪರೀತ ಚಳಿಗೆ ತನ್ನನ್ನು ತಾನು ಹೇಗೆ ಬದಲಾಯಿಸಿಕೊಳ್ಳು ತ್ತದೆ ಎನ್ನುವುದೇ ಒಂದು ಸೋಜಿಗದ ವಿಷಯ.

ಒಂದೊಳ್ಳೆ ಮಾತು

ಒಂದು ಹೃದಯವು ತಿಂಗಳುಗಳಷ್ಟು ಕಾಲ ನಿಂತರೂ, ಮತ್ತೆ ಏನೂ ಆಗದಂತೆ ಅದನ್ನು ಹೊತ್ತ ಜೀವ ಜಗತ್ತಿಗೆ ಮರಳಿ ಬರುತ್ತದೆ ಎಂದರೆ ನಂಬಲು ಸಾಧ್ಯವೇ? ಈ ಮಾತನ್ನು ಖಂಡಿತ ಸಾಮಾನ್ಯ ರಾಗಿ ನಮಗೆ ನಂಬಲು ಸಾಧ್ಯವಿಲ್ಲ! ಆದರೆ ಪ್ರಕೃತಿ ತನ್ನ ಅತ್ಯಂತ ಅಸಾಧ್ಯವಾದ ಮಾಯೆಯನ್ನು ಇಂಥ ಚಳಿಯ ಇಟ್ಟುಕೊಂಡಿದೆ. ಇದಕ್ಕೆ ಕೆಳಗಿನ ಈ ನಿದರ್ಶನವನ್ನು ತಾವು ಓದಬೇಕು. ಆಗ ಮಾತ್ರ ನಿಮಗೆ ಮೇಲಿನ ಸಾಲುಗಳು ಚೆನ್ನಾಗಿ ಅರ್ಥವಾಗುತ್ತವೆ.

ಉತ್ತರ ಅಮೆರಿಕದಲ್ಲಿರುವ ಅಲಾಸ್ಕಾದಲ್ಲಿ ಚಳಿಗಾಲಗಳು ತೀವ್ರವಾಗಿರುತ್ತವೆ. ಎಷ್ಟರಮಟ್ಟಿಗೆ ಅಂದರೆ, ಹಿಮಪಾತದಿಂದ ಕೂಡಿರುವ (ಅಕ್ಟೋಬರ್-ಮೇ) ತಾಪಮಾನವು ಜಮ್ಮುವಿನ ಮಟ್ಟ ಕ್ಕಿಂತ ಬಹಳ ಕೆಳಗೆ ಇಳಿಯುತ್ತದೆ, ಅಂದರೆ ಸುಮಾರು 50 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು. ಇಂಥ ಕೆಟ್ಟ ಚಳಿಯಲ್ಲಿ ಅಲ್ಲಿರುವ ಒಂದು ಚಿಕ್ಕ ‘ವುಡ್ ಕಪ್ಪೆ’ ಆ ವಿಪರೀತ ಚಳಿಗೆ ತನ್ನನ್ನು ತಾನು ಹೇಗೆ ಬದಲಾಯಿಸಿಕೊಳ್ಳುತ್ತದೆ ಎನ್ನುವುದೇ ಒಂದು ಸೋಜಿಗದ ವಿಷಯ.

ನಿಜ ಹೇಳಬೇಕೆಂದರೆ ಅದು ಚಳಿಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದಿಲ್ಲ, ಅದು ಚಳಿಯೇ ಆಗುತ್ತದೆ. ನೆಲ ಹೆಪ್ಪುಗಟ್ಟಿದಾಗ, ಕಪ್ಪೆಯ ದೇಹವೂ ಹೆಪ್ಪುಗಟ್ಟುತ್ತದೆ. ಹೃದಯಬಡಿತ ಇಲ್ಲ, ಉಸಿರಿಲ್ಲ, ಚಲನವಲನವೇ ಇಲ್ಲ. ಅದನ್ನು ನೋಡಿದ ಎಂಥವರಿಗೂ ಅದು ಸತ್ತಂತೆಯೇ ಕಾಣು ತ್ತದೆ. ಆದರೆ ಅದರೊಳಗೆ ಸದ್ದಿಲ್ಲದೆ ಒಂದು ಅದ್ಭುತ ನಡೆಯುತ್ತಿರುತ್ತದೆ.

ಇದನ್ನೂ ಓದಿ: Roopa Gururaj Column: ಎದುರುಬದುರಾಗಿರುವ ಜಗನ್ಮೋಹಿನಿ ಕೇಶವಸ್ವಾಮಿ, ಉಮಾ ಕಮಂಡಲೇಶ್ವರ ಸ್ವಾಮಿ ದೇವಾಲಯಗಳು

ಚಳಿಗಾಲದಲ್ಲಿ ಹಿಮಪಾತವಾಗಿ ಅಲ್ಲಿನ ಭೂಮಿಯಲ್ಲಿ ಸಂಪೂರ್ಣವಾಗಿ ಹಿಮದಿಂದ ಜಮ್ಮು ಕಟ್ಟುವ ಮೊದಲು, ಕಪ್ಪೆ ತನ್ನ ದೇಹವನ್ನು ಗ್ಲೂಕೋಸ್‌ನಿಂದ ತುಂಬಿಕೊಳ್ಳುತ್ತದೆ. ಈ ಸಕ್ಕರೆಯು ಕೋಶಗಳನ್ನು ರಕ್ಷಿಸಿ, ಹಿಮದ ಕಣಗಳು ಅವುಗಳನ್ನು ಹರಿದು ಹಾಕುವುದನ್ನು ತಡೆಯುತ್ತದೆ.

ಅಂಗಾಂಗಗಳು ಕಾರ್ಯನಿಲ್ಲಿಸಿ ಸ್ಥಗಿತವಾಗುತ್ತವೆ. ರಕ್ತಸಂಚಾರ ನಿಲ್ಲುತ್ತದೆ. ಎಲ್ಲವೂ, ಬೆಳಕು ಮತ್ತು ಸೂರ್ಯನ ಬಿಸಿಲು ಮರಳು ವುದನ್ನು ಕಾಯುತ್ತವೆ.

ವಸಂತ ಋತು ಅಲ್ಲಿನ ಭೂಮಿಯನ್ನು ಮೃದುವಾಗಿಸುತ್ತಿದ್ದಂತೆ, ಹಿಮವು ಕರಗಲು ಶುರು ವಾಗುತ್ತದೆ. ವುಡ್ ಕಪ್ಪೆಯ ಹೃದಯವು ಮತ್ತೆ ತನ್ನ ಬಡಿತವನ್ನು ಪ್ರಾರಂಭ ಮಾಡುತ್ತದೆ. ಅದರ ಶ್ವಾಸಕೋಶಗಳು ತೆರೆಯುತ್ತವೆ. ಕಪ್ಪೆ ಎಚ್ಚರಗೊಂಡು ಜಿಗಿದು ತನ್ನ ಸಾಮಾನ್ಯ ಜೀವನಕ್ಕೆ ಮರಳು ತ್ತದೆ- ಚಳಿಗಾಲ ಅದರ ಬದುಕಿನಿಂದ ಒಂದು ಋತುವನ್ನು ಕದ್ದಿದ್ದೂ ಕಾಣದಂತೆ.

ಈ ಸೋಜಿಗವನ್ನು ನಾವೆಲ್ಲರೂ ನಂಬಲೇಬೇಕು. ಕಪ್ಪೆಯ ದೇಹದಲ್ಲಿರುವ ನೀರಿನ 2-3 ಪದರಗಳು ಸಂಪೂರ್ಣ ಹೆಪ್ಪುಗಟ್ಟಿ ಹಿಮವೇ ಆಗಿ ಬಿಟ್ಟಿರುತ್ತದೆ. ಈ ರೀತಿ ಸಂಪೂರ್ಣವಾಗಿ ಹಿಮಗಟ್ಟಿ ಶೈತ್ಯ ದಲ್ಲಿ ಇದ್ದು ಬದುಕಿ ಬರುವ ಭೂಮಿಯ ಕೆಲವೇ ಪ್ರಾಣಿಗಳಲ್ಲಿ ಈ ಕಪ್ಪೆಯೂ ಒಂದು.

ಇದರಿಂದ ತಿಳಿದು ಬರುವ ಮತ್ತೊಂದು ರೋಚಕ ವಿಷಯವೇನೆಂದರೆ, ಈ ಕಪ್ಪೆಗಳ ಅಧ್ಯಯನ ದಿಂದ ಭವಿಷ್ಯದಲ್ಲಿ ಮನುಷ್ಯರ ಅಂಗಾಂಗ ಸಂರಕ್ಷಣೆ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲು ನೆರವಾಗಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ.

ಇದು ನಂಬಲಸಾಧ್ಯವಾದರೂ ನಿಜ; ಕೆಲವು ಜೀವಿಗಳು ಚಳಿಯನ್ನು ಕೇವಲ ತಾಳುವುದಲ್ಲ, ಅವು ಮತ್ತೆ ಅದರಿಂದಲೇ ಜನ್ಮ ತಾಳುತ್ತವೆ. ನ್ಯಾಷನಲ್ ಸೈ ಫೌಂಡೇಷನ್, ಜರ್ನಲ್ ಆಫ್‌ ಎಕ್ಸ್‌ ಪರಿಮೆಂಟಲ್ ಬಯಾಲಜಿಯಲ್ಲಿ ಈ ಕಪ್ಪೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಪ್ರಕೃತಿಯ ವೈಪರೀತ್ಯ ವನ್ನು ಸಹಿಸಿಕೊಳ್ಳಲು, ಸಹಿಸಿಕೊಂಡು ಬದುಕುಳಿಯಲು ಈ ಕಪ್ಪೆ, ತನ್ನನ್ನು ತಾನು ಹೇಗೆ ಮಾರ್ಪ ಡಿಸಿಕೊಳ್ಳುತ್ತದೆ ಎನ್ನುವುದೇ ದೊಡ್ಡ ಸೋಜಿಗ.

ಬದುಕಿನಲ್ಲಿ ನಮಗೂ ಕೆಲವು ಬಾರಿ ತಡೆದುಕೊಳ್ಳಲಾಗದಷ್ಟು ಕಷ್ಟಗಳು ಬರುತ್ತವೆ. ಇನ್ನೇನು ಬದುಕನ್ನೇ ಮುಗಿಸಿಕೊಂಡು ಹೊರಟು ಬಿಡಬೇಕು ಎನ್ನುವಷ್ಟು ರೋಸಿ ಹೋಗುತ್ತದೆ. ಆದರೆ ಅಂಥ ಸಮಯದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ‘ಬಂದದ್ದೆಲ್ಲ ಬರಲಿ’ ಎಂದು ಒಮ್ಮೆ ಹೃದಯ ವನ್ನು ಕಲ್ಲು ಮಾಡಿಕೊಂಡು ಬಿಡಿ.

ಆಗ ಎಂಥ ಕಷ್ಟದ ಪರಿಸ್ಥಿತಿಯನ್ನು ಕೂಡ ದಾಟಿ ಹೋಗುವ ಕ್ಷಮತೆ ನಮ್ಮಲ್ಲಿ ಹುಟ್ಟಿ ಬಿಡುತ್ತದೆ. ಹಿಮ ಕರಗಿದ ಮೇಲೆ ಸೂರ್ಯನ ಎಳೆರಶ್ಮಿ ಭೂಮಿಯಲ್ಲಿ ಮತ್ತೆ ಜೀವ ತುಂಬುವಂತೆ, ನಮ್ಮ ಜೀವನದಲ್ಲೂ ಸುಖದ ಕ್ಷಣಗಳು ಬರಲೇಬೇಕು. ಅಲ್ಲಿಯವರೆಗೆ ಕಾಯುವ ದೃಢತೆ, ತಾಳ್ಮೆ, ಅಚಲ ವಾದ ನಂಬಿಕೆ ನಮ್ಮಲ್ಲಿದ್ದಾಗ ಬದುಕಿನ ಎಂಥ ಸವಾಲನ್ನೂ ಎದುರಿಸಿ ನಾವು ಗೆದ್ದು ಬರಲು ಸಾಧ್ಯ...

ರೂಪಾ ಗುರುರಾಜ್

View all posts by this author