ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaaji Column: ಶ್ರಾವ್ಯಕಾವ್ಯದ ಅರ್ಥವಂತಿಕೆ ಉಳಿಯಬೇಕಾದ ಕ್ಷಣವಿದು...

ಇಡೀ ಲೇಖನವನ್ನು ಓದಿದಾಗ ಅನೇಕ ಜನರು ಭಾವಿಸಿದಂತೆ ತಾಳಮದ್ದಳೆಯ ಕುರಿತಾಗಲೀ, ಯಕ್ಷಗಾನ ದ ವಿಷಯದಲ್ಲಾಗಲೀ ಅದರಲ್ಲಿ ಯಾವ ಪೂರ್ವಗ್ರಹಗಳು ಇದ್ದಂತೆ ಅನಿಸಲಿಲ್ಲ. ಹಾಗೆ ನೋಡಿದರೆ ಸಾಮಾಜಿಕ ಜಾಲತಾಣದಲ್ಲಿ ಯಕ್ಷಗಾನದ ಅಪಸವ್ಯಗಳ ಕುರಿತು ಇದಕ್ಕಿಂತ ಕಟುವಾದ ವಿಮರ್ಶೆಗಳು ಬರುತ್ತಿವೆ.

ತಾಳ-ಮೇಳ

ನಾರಾಯಣ ಯಾಜಿ

ತಾಳಮದ್ದಳೆ ಕಲೆಯನ್ನು ಮೆಚ್ಚಿಕೊಳ್ಳುವ ಅನೇಕರು ಇತ್ತೀಚಿನ ದಿನಗಳಲ್ಲಿ ಕಲಾವಿದರ ಕುರಿತು ‘ವಿಪರೀತ ಎಳೆಯುತ್ತಾರೆ’ ಎಂದು ಆಕ್ಷೇಪಿಸುವುದಿದೆ. ಪ್ರೇಕ್ಷಕರು ಕಿಕ್ಕಿರಿದು ಸೇರುವ ತಾಳಮದ್ದಳೆಯ ಪಾರಂಪರಿಕ ತಾಣಗಳಲ್ಲಿ ಈಚಿನ ದಿನಗಳಲ್ಲಿ ತಾಳಮದ್ದಳೆಯನ್ನು ನೋಡಲು ಬೆರಳೆಣಿಕೆಯ ಪ್ರೇಕ್ಷಕರು ಇರುತ್ತಾರೆ! ಆದರೂ ತಮ್ಮ ಕೊರೆತ ನಿಲ್ಲಿಸದೇ ಮುಂದುವರಿಸುವ ಉಮೇದು ಕೆಲ ಕಲಾವಿದರದ್ದು. ಈ ಬಗ್ಗೆ ಕೇಳಿದರೆ, ‘ಸಾಮಾಜಿಕ ಜಾಲತಾಣದಲ್ಲಿ ಸಾವಿರಗಟ್ಟಲೆ ನೋಡುತ್ತಿದ್ದಾರೆ’ ಎನ್ನುವ ಉತ್ತರ ಸಿಗುತ್ತದೆ.

ವಿಶ್ವೇಶ್ವರ ಭಟ್ಟರ ‘ನೂರೆಂಟು ವಿಶ್ವ’ ಅಂಕಣದಲ್ಲಿ (ಡಿ.25) ಪ್ರಕಟವಾದ “ಇದು ತಾಳಮದ್ದಳೆಯ ‘ಐಟಮ್ ಸಾಂಗ್ ಡಾನ್ಸರ್’ಗಳಂತೆ ಇರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ!" ಲೇಖನವು ಚರ್ಚೆಗಳನ್ನು ಹುಟ್ಟುಹಾಕಿದೆ. ಇದಕ್ಕೆ ಕಾರಣ ಕೆಲದಿನಗಳಿಂದ ನಿರಂತರವಾಗಿ ಪ್ರಕಟವಾಗು ತ್ತಿರುವ ಬಹು ಜನಪ್ರಿಯ ಪ್ರಶ್ನೋತ್ತರ ವಿಭಾಗ ‘ಭಟ್ಟರ್‌ಸ್ಕಾಚ್’ನಲ್ಲಿ ತಾಳಮದ್ದಳೆಯ ಕೆಲ ಕಲಾವಿದರ ಕುರಿತು ಬರುತ್ತಿರುವ ಪ್ರಶ್ನೆ ಮತ್ತು ಅದಕ್ಕೆ ಭಟ್ಟರು ಉತ್ತರಿಸುವ ವಿಧಾನಗಳು.

ಇದಕ್ಕೆ ಬಹಳ ಟೀಕೆ ಮತ್ತು ಕೆಲವೊಂದಿಷ್ಟು ಸಮರ್ಥನೆ ಎರಡನ್ನೂ ಗಮನಿಸಬಹುದು. ಯಕ್ಷಗಾನ ವಲಯದಿಂದಲೇ ಬಂದ ಭಟ್ಟರು ಇದೇಕೆ ಹೀಗೆ ಎನ್ನುವ ಕುತೂಹಲ ಮಾತ್ರ ಎಡೆಬಿಡದೆ ಅನೇಕ ರನ್ನು ಕಾಡುತ್ತಿತ್ತು. ಬಹುಶಃ ಇದಕ್ಕೆಲ್ಲ ಉತ್ತರ ಕೊಡಬೇಕು ಎನ್ನುವ ಕಾರಣಕ್ಕೋ ಏನೋ ಅವರ ಬಹುದೀರ್ಘ ಅಂಕಣ ಬರಹವು ಕ್ರಿಸ್‌ಮಸ್ ದಿನವೇ ಬಂತು.

ಇಡೀ ಲೇಖನವನ್ನು ಓದಿದಾಗ ಅನೇಕ ಜನರು ಭಾವಿಸಿದಂತೆ ತಾಳಮದ್ದಳೆಯ ಕುರಿತಾಗಲೀ, ಯಕ್ಷಗಾನದ ವಿಷಯದಲ್ಲಾಗಲೀ ಅದರಲ್ಲಿ ಯಾವ ಪೂರ್ವಗ್ರಹಗಳು ಇದ್ದಂತೆ ಅನಿಸಲಿಲ್ಲ. ಹಾಗೆ ನೋಡಿದರೆ ಸಾಮಾಜಿಕ ಜಾಲತಾಣದಲ್ಲಿ ಯಕ್ಷಗಾನದ ಅಪಸವ್ಯಗಳ ಕುರಿತು ಇದಕ್ಕಿಂತ ಕಟು ವಾದ ವಿಮರ್ಶೆಗಳು ಬರುತ್ತಿವೆ. ಭಟ್ಟರ ಬರಹದ ವಿರುದ್ಧ ಬಂದ ಟೀಕೆಗಳಲ್ಲಿ ಹೆಚ್ಚಿನವು “ಕೆಲವರು ಅರ್ಥಧಾರಿಗಳಲ್ಲ, ಬೇರೆ ವಿಭಾಗದವರು, ಕೆಲ ಮಹಾನ್ ಅರ್ಥಧಾರಿಗಳ ವಿಷಯ ಬರೆದಿಲ್ಲ" ಎನ್ನುವ ಧಾಟಿಯಲ್ಲಿದ್ದವು.

ಇವೆಲ್ಲವನ್ನೂ ಮೀರಿ ಇಂದು ನಾವು, ‘ಮಾತಿನ ಮಂಟಪವಾದ ತಾಳಮದ್ದಳೆಯಲ್ಲಿ ಸ್ವ-ಅವಲೋಕನ (Swot Analysis) ಮಾಡಿಕೊಳ್ಳಬೇಕಾದ ಅಗತ್ಯವಿದೆಯೇ?’ ಎನ್ನುವುದನ್ನು ಗಂಭೀರ ವಾಗಿ ಆಲೋಚಿಸಬೇಕಾಗಿದೆ. ಸಮಗ್ರ ಲೇಖನದಲ್ಲಿ ತಾಳಮದ್ದಳೆ ಎನ್ನುವ ಕಲೆಯ ವಿಷಯದಲ್ಲಿ ಭಟ್ಟರಿಗಿರುವ ಅಭಿಮಾನ ಮತ್ತು ಕೆಲವು ವ್ಯಕ್ತಿಗಳಿಂದಾಗಿ ಗಂಭೀರವಾದ ವೇದಿಕೆಯಾದ ಈ ಕಲೆಯು ಜಾಳು ಜಾಳಾಗುತ್ತಿರುವ ಕುರಿತಾದ ಆತಂಕ ಎರಡೂ ವ್ಯಕ್ತವಾಗಿವೆ.

ಇದನ್ನೂ ಓದಿ: Narayana Yaji Column: ಭೌಮಸ್ವರ್ಗದಲ್ಲಿ ಸೀತೆಯನ್ನು ಹುಡುಕುವ ಚಿಂತೆ

ಪ್ರಾತಿನಿಧಿಕವಾಗಿ ಕೆಲ ಕಲಾವಿದರ ಹೆಸರನ್ನು ತೆಗೆದುಕೊಂಡಾಗ ‘ಅವರ ಹೆಸರು ಬರಬೇಕಿತ್ತು, ಇವರ ಹೆಸರು ಬಿಟ್ಟುಹೋಯಿತು’ ಎನ್ನುವುದು ಟೀಕಿಸಲು ಒಂದು ನೆಪವೇ ಹೊರತು ಮತ್ತೇನಿಲ್ಲ. ಎಲ್ಲರ ಹೆಸರನ್ನು ಹೇಳಲು ಇದು ಸ್ವಾಗತ ಅಥವಾ ಆಭಾರಮನ್ನಣೆಯ ಭಾಷಣವಲ್ಲ.

“ಯಕ್ಷಗಾನ ಮತ್ತು ತಾಳಮದ್ದಳೆಗಳೆರಡೂ ಕರ್ನಾಟಕದ ಸಾಂಸ್ಕೃತಿಕ ಕಲಾರತ್ನಗಳು ಎನ್ನುತ್ತಲೇ ‘ಶ್ರಾವ್ಯ ಕಾವ್ಯ’ವಾದ ತಾಳಮದ್ದಳೆಯು “ಕೆಲವೇ ಕೆಲವು ಉದ್ಧಟ, ಅವಿವೇಕಿ, ಅಧಿಕ ಪ್ರಸಂಗಿ, ಬಾಯಿ ಚಪಲದ ತಿರಸಟ್ಟು ಅರ್ಥಧಾರಿಗಳಿಂದ ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿದೆ ಯೇನೋ ಎಂಬ ಆತಂಕ ಮೂಡುತ್ತಿರುವುದು ಸುಳ್ಳಲ್ಲ" ಎನ್ನುವುದು ಇಡೀ ಲೇಖನದ ಕೇಂದ್ರ ಬಿಂದು.

ಇದು ಈ ಕ್ಷೇತ್ರದಲ್ಲಿ ತೊಡಗಿರುವ ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ವಿಷಯವೂ ಆಗಿದೆ. ಈ ಕಲೆಯನ್ನು ಮೆಚ್ಚಿಕೊಳ್ಳುವ ಅನೇಕ ಪ್ರೇಕ್ಷಕರು ಇತ್ತೀಚಿನ ದಿನಗಳಲ್ಲಿ ಕಲಾವಿದರ ಕುರಿತು “ವಿಪರೀತ ಎಳೆಯುತ್ತಾರೆ" ಎನ್ನುವ ಆಕ್ಷೇಪವನ್ನು ಎತ್ತುತ್ತಿದ್ದಾರೆ.

V Bhat 251

ಪ್ರೇಕ್ಷಕರು ಕಿಕ್ಕಿರಿದು ಸೇರುವ ತಾಳಮದ್ದಳೆಯ ಪಾರಂಪರಿಕ ತಾಣಗಳಲ್ಲಿ ಈಚಿನ ದಿನಗಳಲ್ಲಿ ತಾಳಮದ್ದಳೆಯನ್ನು ನೋಡಲು ಬೆರಳೆಣಿಕೆಯ ಪ್ರೇಕ್ಷಕರು! ಆದರೂ ತಮ್ಮ ಕೊರೆತ ನಿಲ್ಲಿಸದೇ ಮುಂದುವರಿಸುವ ಉಮೇದು ಕೆಲ ಕಲಾವಿದರದ್ದು.

ಕೇಳಿದರೆ, ‘ಸಾಮಾಜಿಕ ಜಾಲತಾಣದಲ್ಲಿ ಸಾವಿರಗಟ್ಟಲೆ ನೋಡುತ್ತಿದ್ದಾರೆ’ ಎನ್ನುವ ಉತ್ತರ. ಸಾಮಾಜಿಕ ಜಾಲತಾಣ ಹೆಚ್ಚಿನವರಿಗೆ ಟೈಮ್ ಪಾಸ್ ಮಾಡುವ ಹವ್ಯಾಸ. ಬರುತ್ತಾರೆ, ಹೋಗು ತ್ತಾರೆ. ಇದು ನಿಮ್ಮ ಬರಹಕ್ಕೆ ಲಕ್ಷಾಂತರ ವೀಕ್ಷಣೆ ಇದೆ ಎಂದು ‘ಫೇಸ್‌ಬುಕ್’ ತೋರಿಸುತ್ತಿರುವಂತೆ.

ಅಲ್ಲಿನ ಲೈಕ್‌ಗಳು ಗುಣಮಟ್ಟಕ್ಕೆ ಮಾನದಂಡವಾಗುವುದಿಲ್ಲ. ಸಮಯಮಿತಿಯ ತಾಳಮದ್ದಳೆ ಎಂದಿರುವಲ್ಲಿ ಯಾವುದೋ ಎರಡು ಪಾತ್ರಗಳು ವಿಪರೀತವಾಗಿ ಮಾತಾಡಿ ಉಳಿದ ಪಾತ್ರಗಳು ಬರುವಾಗ ಸಮಯ ಮುಗಿದೇ ಹೋಗಿ ಬಿಡುತ್ತದೆ.

ಯಾವುದೇ ಕಲಾಪ್ರಕಾರಗಳಿರಲಿ, ಅದಕ್ಕೆ ಅಂಕುಶವಿರಬೇಕಾಗುತ್ತದೆ. ಅದಿಲ್ಲದಿದ್ದರೆ ಸ್ವಚ್ಛಂದವಾಗಿ ಹರಡಿ ಅನಾಹುತವನ್ನೇ ಉಂಟುಮಾಡುವ ಸಂದರ್ಭಗಳುಂಟು. ಮಹಾಕಾವ್ಯವನ್ನು ವೇದಿಕೆಯ ಮೇಲೆ ತರುವಾಗ ಅದು ಆ ಕಾವ್ಯದ ಪುನರ್-ಓದು ಆಗಿ ಕಥನವೊಂದನ್ನು ಕಟ್ಟುತ್ತಿದ್ದೇವೆ ಎನ್ನುವ ಪ್ರಜ್ಞೆ ಸದಾ ಜಾಗೃತವಾಗಿರಬೇಕಾಗುತ್ತದೆ.

Screenshot_9 R

ಪ್ರತಿಯೊಂದು ಕಥನಕ್ಕೂ ರಸಸ್ಥಾನ ಇರುತ್ತದೆ. ಉದಾಹರಣೆಗೆ ಕೃಷ್ಣ ಸಂಧಾನದಲ್ಲಿ “ಎಲವೋ ಪಾತಕಿ ಬರಿದೇ ಸಾಯದಿರ್" ಎನ್ನುವಲ್ಲಿಂದ “ಧುರಕೆ ಬೆದರುವವನಲ್ಲ ರಾಜ್ಯದ ಹರಣದಾಸೆ ಗಳಿಲ್ಲ" ಎನ್ನುವ ಭಾಗ ಇಡೀ ಪ್ರಕರಣದ ಕೇಂದ್ರಬಿಂದು. ಮೊದಲು ಎಷ್ಟೇ ಚರ್ಚೆ ಮಾಡಲಿ, ಕೊನೆಗೆ ಇಲ್ಲಿಗೆ ತಂದು ಆ ಸನ್ನಿವೇಶ ಪ್ರೇಕ್ಷಕರ ನೆನಪಿನಲ್ಲಿ ಅಚ್ಚೊತ್ತಬೇಕು. ಇದನ್ನು ‘ Instructional objective- IO’ ಎನ್ನುತ್ತಾರೆ, (Psychomotor Skills) ಎಂದು ಕರೆಯುತ್ತಾರೆ.

ಹೆಚ್ಚಿನ ತಾಳಮದ್ದಳೆಗಳಲ್ಲಿ ಘನಘೋರವಾಗಿ ಜಗಳವಾಡುವ ಇಬ್ಬರೂ ಕಲಾವಿದರು ಇದ್ದಕ್ಕಿ ದ್ದಂತೆ ಹೊಂದಾಣಿಕೆಗೆ ಬಂದು ಅವಸರದಲ್ಲಿ ಮುಗಿಸುವುದು ಕಂಡುಬರುತ್ತದೆ. ಇದು ಆಂಗ್ಲ ವಿಮರ್ಶಕ ಟಿ.ಎಸ್.ಎಲಿಯಟ್ ಹೇಳಿದಂತೆ “ಮಾಧ್ಯಮದ ಗೆಲುವಾದರೂ ಕಲೆಯ ಸೋಲಾಗು ತ್ತದೆ".

ಇನ್ನೊಂದು, ಇತ್ತೀಚಿನ ತಾಳಮದ್ದಳೆಗಳಲ್ಲಿ ಕಂಡುಬರುವುದು ಕಥಾಭಾಗದ ವಿಸ್ತಾರಕ್ಕೆ ಖಂಡ ವುಂಟುಮಾಡುವ ವಾಕ್ಪ್ರವಾಹ. ಪಾತ್ರವೊಂದು ಹೇಳಿದ ಪೀಠಿಕೆಗೆ ವಿರುದ್ಧವಾಗಿ ಅದೇ ಪಾತ್ರವನ್ನು ಇನ್ನೋರ್ವ ಕಲಾವಿದರು ಆ ಪ್ರಸಂಗದ ಎರಡನೇ ಭಾಗದಲ್ಲಿ ತನ್ನ ಪ್ರವೇಶದಲ್ಲಿ ಹೇಳುವುದು. ಶೇಣಿಯವರು ಇರುವ ಕೂಟದಲ್ಲಿ ಎಲ್ಲಾ ಕಲಾವಿದರನ್ನು ಕೂಡ್ರಿಸಿ ಪ್ರಸಂಗದ ನಡೆಯನ್ನು ಹೀಗೆ ಎಂದು ವಿಧಿಸಿದಾಗ ಅದನ್ನು ಮೀರುವ ಎದೆಗಾರಿಕೆ ಯಾರಿಗೂ ಇರುತ್ತಿರಲಿಲ್ಲ.

ಕೆರೆಮನೆ ಮಹಾಬಲ ಹೆಗಡೆಯವರು ಪ್ರಸಂಗದ ನಡೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಎದುರಾಳಿಯ ಸಂಭಾಷಣೆ ಸಹ ಅದೇ ದಿಕ್ಕಿನಲ್ಲಿ ಇರಬೇಕಿತ್ತು. ಇಲ್ಲದಿದ್ದರೆ ‘ಪಳ್ದಿರಾಯ’ ಎನ್ನುವ ಬೈಗುಳು ಗ್ಯಾರಂಟಿ. ನೆನಪಿರಲಿ, ಕೆರೆಮನೆಯ ಎಲ್ಲರೂ ತಾಳಮದ್ದಳೆಯಲ್ಲಿಯೂ ಅಷ್ಟೇ ಸಿದ್ಧಿಸಿ ಕೊಂಡವರಾಗಿದ್ದರು.

ಪ್ರಸಂಗದ ನಡೆ ಎನ್ನುವುದು ದೃಶ್ಯಕಾವ್ಯದಲ್ಲಿ ಬೇರೆ, ತಾಳಮದ್ದಳೆಯಂಥ ಶ್ರಾವ್ಯ ಕಾವ್ಯದಲ್ಲಿ ಬೇರೆ ವಿಧ. ಬಯಲಾಟದಲ್ಲಿ ‘ಶ್ರೀರಾಮ ಪಟ್ಟಾಭಿಷೇಕ’ದಲ್ಲಿ ಅಂತಃಪುರದಲ್ಲಿ ಮುಸುಕು ಹಾಕಿ ಮಲಗಿದ ಕೈಕೆಯು ಲಕ್ಷ್ಮಣನ ಹತ್ತಿರ ‘ದಶರಥನೇ ತನ್ನನ್ನು ಕರೆಯಲು ಬರಲಿ’ ಎನ್ನುವ ಸಂದೇಶವನ್ನು ಕಳುಹಿಸುತ್ತಾಳೆ. ಅದನ್ನು ಲಕ್ಷ್ಮಣ ತಂದೆಯನ್ನುದ್ಧೇಶಿಸಿ ರಾಮನಲ್ಲಿ ವಿಷಯ ತಿಳಿಸುತ್ತಾನೆ.

ಕಾವ್ಯಾತ್ಮಕವಾಗಿ ತುಂಬಾ ಮಹತ್ವದ ಭಾಗ ಇದು. ಆಟದಲ್ಲಿ ದಶರಥ ಮಾತಾಡದೇ ಮೌನವಾಗಿ ದೀರ್ಘ ಹೆಜ್ಜೆಯನ್ನು ಇಡುತ್ತಾ ಮ್ಲಾನವದನನಾಗಿ (ಲಕ್ಷ್ಮಣನಿಂತೆಂದು ಪೇಳೆ ಭೂಪಾಲಕನಾಗ ..) ನಿಟ್ಟುಸಿರುಬಿಡುತ್ತಾ ಸಾಗುವಾಗ “ಭರತ ಬರುವ ಮುನ್ನ ಪಟ್ಟವನೇರು" ಎಂದು ರಾಮನಿಗೆ ಹೇಳಿದ ವಾಲ್ಮೀಕಿಯ ಮಾತನ್ನು ನೆನಪಿಸುತ್ತಾನೆ.

ಶಂಭು ಹೆಗಡೆಯವರು ಈ ಭಾಗವನ್ನು ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದರು. ಅದು ಮೌನದ ಅಭಿವ್ಯಕ್ತಿ. ತಾಳಮದ್ದಳೆಯಲ್ಲಿ ಈ ಭಾಗವನ್ನು ಶೇಣಿಯವರು ಅತ್ಯಂತ ಹೃದಯಂಗಮವಾಗಿ ವಿವರಿಸುತ್ತಿದ್ದರು. ಶಂಭು ಹೆಗಡೆಯವರು ತಾಳಮದ್ದಳೆಯಲ್ಲಿ ಇದೇ ಭಾಗವನ್ನು ಅಭಿನಯಿಸು ವಾಗ ಯಾವುದೋ ಅನಾಹುತವನ್ನು ಎದುರಿಸಲಾಗದೇ ಪಲಾಯನ ಮಾಡುವ ರೀತಿಯಲ್ಲಿ ಚಿತ್ರಿಸುತ್ತಿದ್ದರು.

ಶೇಣಿ ಮತ್ತು ಶಂಭು ಹೆಗಡೆ ಇಬ್ಬರದೂ ಮಾರ್ಗವೊಂದೇ ಆದರೂ ವಿಧಾನ ಭಿನ್ನ. ಪರಿಣಾಮ ಮಾತ್ರ ಅನಿರ್ವಚನೀಯ. ಇಬ್ಬರಲ್ಲಿಯೂ ಅಭಿನಯವೆನ್ನುವುದು ಭರತ ಹೇಳಿದ ‘ಬೋಧನೆ ಮತ್ತು ರಂಜನೆ’ಯನ್ನು ಸಾಕ್ಷಾತ್ಕರಿಸಿದ ಹಾದಿ. ಕಲಾವಿದ ಅಭಿನಯಿಸುವಾಗ ತನ್ನ ಮತ್ತು ಪ್ರೇಕ್ಷಕರ ‘ಆವರಣ ಭಂಗವನ್ನು’ ಸಾಧಿಸಬೇಕು.

ಅದನ್ನು ದೈವೀ ಸಿದ್ಧಿ ಮತ್ತು ಮಾನುಷೀ ಸಿದ್ಧಿಗಳ ಮೂಲಕ ಸಾಧಿಸಲಾಗುತ್ತದೆ. ಕಲೆಗಳ ನಿರ್ವ ಚನವೇ (Etimology) ರಸಸೃಷ್ಟಿ. ಇದನ್ನು ಸಾಧಿಸಲಾರದ ತಾಳಮದ್ದಳೆ ಸೋಲುತ್ತಿದೆ ಎನ್ನುವ ಆತಂಕ ಭಟ್ಟರಲ್ಲಿದೆ.

ವಾಚಿಕಾಭಿನಯವೆಂದರೆ ಆಡುವ ಮಾತು ಕಾವ್ಯದ ಒಳತೋಟಿಯನ್ನು ಶೋಧಿಸಬೇಕು. ಹಾಗಾದರೆ ಕಲೆ ಗೆಲ್ಲುತ್ತದೆ. ಕಲಾವಿದ ಕಲೆಯನ್ನು ಗೆಲ್ಲಿಸಿ ತಾನೂ ಗೆಲ್ಲಬೇಕುಕೆಲ ವರ್ಷಗಳ ಹಿಂದೆ, ಮಂಗಳೂ ರಿನ ಸಮೀಪ ನಡೆದ ‘ಭೀಷ್ಮ ವಿಜಯ’ ತಾಳಮದ್ದಳೆಯಲ್ಲಿ, ಗುರು ಪರಶುರಾಮನಿಗೆ ತಾನು ಕಾಶಿ ರಾಜನಲ್ಲಿ ಹೇಳಿಯೇ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ತಂದಿದ್ದೇನೆ ಎಂದ ಚರ್ಚೆ ನೆನಪಾಗು ತ್ತದೆ.

ಇಬ್ಬರು ಪ್ರಸಿದ್ಧ ಕಲಾವಿದರು ಸಾರಾಯಿ ಮಾಡುವ ವಿಧಾನವನ್ನು ಅದನ್ನು ಪಂಚಭೂತಾತ್ಮಕ ತತ್ವಕ್ಕೆ ಹೋಲಿಸಿದ ಸಂಭಾಷಣೆಯನ್ನು ರಸಸಿದ್ಧಾಂತಕ್ಕೆ ಹೋಲಿಸಲಾಗುವುದಿಲ್ಲ. ಸಮಗ್ರ ತಾಳಮದ್ದಳೆ ನೋಡಿದಾಗ ಅದೊಂದು ಸಣ್ಣ ವಿನೋದಕ್ಕಾಗಿ ಬಂದಿರಬಹುದು. ಆದರೆ ಸಾಮಾ ಜಿಕ ಜಾಲತಾಣದಲ್ಲಿ ಅದಷ್ಟೇ ಭಾಗವನ್ನು ತುಂಡರಿಸಿ ಹರಿಬಿಟ್ಟಾಗ ಆಗುವ ಅನಾಹುತಕ್ಕೆ ಕಲಾವಿದರೇ ಅಲ್ಲವೇ ಜವಾಬ್ದಾರಿ. ಶಬ್ದಭಂಡಾರಗಳಲ್ಲಿ ಏನೋ ಒಂದು ಭ್ರಮೆಯನ್ನು ಹುಟ್ಟಿಸ ಬಹುದು.

ಆದರೆ ಪ್ರಸಂಗ ಮುಗಿದ ಮೇಲೆ ಏನು ಹೇಳಿದ ಅಂದರೆ “ಲಾಯ್ಕ ಹೇಳಿದ್ನೋ" ಎನ್ನುವುದಾಗಲೀ ಅಥವಾ “ಎದುರಾಳಿಯ ಬಾಯಿ ಮುಚ್ಚಿಸಿದ" ಎನ್ನುವುದಾಗಲೀ ವಾಚಿಕಾಭಿನಯವಾಗುವುದಿಲ್ಲ. ಕಲಾವಿದ ಅಮೂರ್ತವಾದ ಲೋಕದಿಂದ ಮೂರ್ತವಾದ ಲೋಕಕ್ಕೆ ಆ ಪಾತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಿ ಮತ್ತೆ ಪ್ರೇಕ್ಷಕರನ್ನು ಮೂರ್ತವಾದ ಲೋಕದಿಂದ ಅಮೂರ್ತವಾದ ಲೋಕಕ್ಕೆ ಒಯ್ಯು ತ್ತಾನೆ. ಇದನ್ನೇ ವಿಭಾವ ಅನುಭಾವ ಮತ್ತು ವ್ಯಭಿಚಾರೀ ಭಾವ ಎಂದು ಭರತ ತನ್ನ ನಾಟ್ಯಶಾಸ್ತ್ರ ದಲ್ಲಿ ವಿವರಿಸಿರುವುದು. ವ್ಯಭಿಚಾರೀ ಅಥವಾ ಸಂಚಾರಿ ಭಾವವು ರಸಸೃಷ್ಟಿಯಲ್ಲಿ ಬಹುಮುಖ್ಯ ವಾದ ಪಾತ್ರವನ್ನು ವಹಿಸುತ್ತದೆ.

‘ಲೋಕೋಪದೇಶ, ಆನಂದ, ರಸಾನುಭವ’ ಇವುಗಳನ್ನು ನೀಡುವುದು ಕಲಾವಿದನ ಹೊಣೆಗಾರಿಕೆ. ಯಕ್ಷಗಾನದವರು ಟೀಕೆಯನ್ನು ಸಹಿಸುವವರಲ್ಲ ಎನ್ನುವ ಅಪವಾದವಿದೆ. ಹೆಚ್ಚಿನ ಕಾರ್ಯಕ್ರಮ ಚೆನ್ನಾಗಿಯೇ ಆಗಬಹುದು. ಆದರೆ ದೊಡ್ಡ ಹಡಗಿನಲ್ಲಿರುವ ಸಣ್ಣತೂತಿಗೆ ಅದನ್ನು ಮುಳುಗಿಸುವ ಸಾಮರ್ಥ್ಯವಿರುವಂತೆ, ಕೊಡತುಂಬಿದ ಹಾಲು ಕೆಟ್ಟು ಹೋಗಲು ಸ್ವಲ್ಪ ಹುಳಿಬಿದ್ದರೂ ಸಾಕಾಗು ವಂತೆ ಭಟ್ಟರ ಲೇಖನವನ್ನು ಸ್ವೀಕರಿಸುವುದು ಒಳ್ಳೆಯದು. ಟೀಕೆಯನ್ನು ಎದುರಿಸದಿದ್ದರೆ ಬೆಳೆಯು ವುದಿಲ್ಲ. ನಾಯಕನಿಗೆ ಪ್ರತಿನಾಯಕನಿದ್ದಂತೆ ಕಲಾವಿದನಿಗೆ ಟೀಕಾಕಾರರಿರಬೇಕು.

(ಲೇಖಕರು ಹಿರಿಯ ಸಾಹಿತಿ)