ಮನಿಮೈಂಡೆಡ್
ಹಣ ಹೇಗೆ ಕೆಲಸ ಮಾಡುತ್ತದೆ? ಯಾವ ರೀತಿ ಹಣವನ್ನು ಉಳಿಸಬೇಕು, ಎಷ್ಟು ಸಾಲ ಮಾಡಬೇಕು? ಮ್ಯೂಚುವಲ್ ಫಂಡ್ ಎಂದರೇನು? ಬಂಗಾರದಲ್ಲಿ ಹೂಡಿಕೆಯ ಲಾಭ-ನಷ್ಟಗಳು, ಇಟಿಎಫ್, ಬಾಂಡ್ ಇತ್ಯಾದಿಗಳ ಬಗ್ಗೆ ತಿಳಿಸುವುದಿಲ್ಲ. ಕೇವಲ ಶೇ.27ರಷ್ಟು ಭಾರತೀಯರು ಮಾತ್ರ ಹಣಕಾಸು ಸಾಕ್ಷರರಾಗಿzರೆ ಎನ್ನುತ್ತದೆ ಒಂದು ಸಮೀಕ್ಷೆ.
ಮಾರುಕಟ್ಟೆ ಬಂಡವಾಳ ಮೌಲ್ಯದ ದೃಷ್ಟಿಯಿಂದ ಅಮೆರಿಕ, ಚೀನಾ, ಜಪಾನ್ ನಂತರ ಭಾರತದ ಸ್ಟಾಕ್ ಮಾರ್ಕೆಟ್ ಪ್ರಪಂಚದಲ್ಲಿಯೇ 4ನೇ ಅತಿ ದೊಡ್ಡದು! ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್‌ಇ) ಏಷ್ಯಾದಲ್ಲಿಯೇ ಅತ್ಯಂತ ಹಳೆಯದು. 1875ರಲ್ಲಿಯೇ ಇದರ ಸ್ಥಾಪನೆಯಾಗಿತ್ತು. 1986ರಲ್ಲಿ ಬಿಎಸ್‌ಇ ಬೆಂಚ್ ಮಾರ್ಕ್ ಇಂಡೆಕ್ಸ್ ಸೆನ್ಸೆಕ್ಸ್‌ಗೆ ಚಾಲನೆ ನೀಡಲಾಗಿತ್ತು. ಇದರ ಬಂಡವಾಳ ಮಾರುಕಟ್ಟೆ ಮೌಲ್ಯ 416 ಲಕ್ಷ ಕೋಟಿ ರುಪಾಯಿ.
5647 ಷೇರುಗಳು ನೋಂದಣಿಯಾಗಿವೆ. ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ) ವಿಶ್ವದಲ್ಲಿಯೇ 5ನೇ ದೊಡ್ಡ ಷೇರು ವಿನಿಮಯ ಕೇಂದ್ರ. ಇದು 1992ರಲ್ಲಿ ಆರಂಭವಾಗಿದ್ದು, 2671 ಷೇರುಗಳು ಲಿಸ್ಟ್ ಆಗಿವೆ. ಎನ್‌ಎಸ್‌ಇಯ ಮಾರುಕಟ್ಟೆ ಬಂಡವಾಳ ಮೌಲ್ಯ 447 ಲಕ್ಷ ಕೋಟಿ ರುಪಾಯಿ. ಮ್ಯೂಚುವಲ್ ಫಂಡ್ ಸಿಪ್ ಮೂಲಕವೂ ದೊಡ್ಡ ಮೊತ್ತದ ಹೂಡಿಕೆ ಪ್ರತಿ ತಿಂಗಳೂ ಸ್ಟಾಕ್ ಮಾರ್ಕೆಟ್‌ಗೆ ಹರಿದು ಬರುತ್ತಿದೆ.
2026ರ ಮಾರ್ಚ್‌ನಲ್ಲಿ 32,087 ಕೋಟಿ ರುಪಾಯಿ ಹೂಡಿಕೆಯನ್ನು ಜನ ಮಾಡಿದ್ದರು. ದೇಶದ ಅತ್ಯಂತ ಹಳೆಯ ಮ್ಯೂಚುವಲ್ ಫಂಡ್ ಆಗಿರುವ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ (ಯುಟಿಐ) 1964ರ ಸ್ಥಾಪನೆಯಾಗಿತ್ತು. ಇಷ್ಟೆಲ್ಲ ಇದ್ದರೂ, ಈಗಲೂ ನಮ್ಮ ಜನಸಂಖ್ಯೆಯನ್ನು ಪರಿಗಣಿಸಿದರೆ ಸ್ಟಾಕ್ಸ್ ಮತ್ತು ಮ್ಯೂಚುವಲ್ ಫಂಡ್ʼಗಳಲ್ಲಿ ಹೂಡಿಕೆ ಮಾಡುವವರು ಕಡಿಮೆಯೇ.
2025ರಲ್ಲಿ ಶೇ.9.5ರಷ್ಟು ಭಾರತೀಯರು ಮಾತ್ರ ಸ್ಟಾಕ್ಸ್ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಇನ್ವೆ ಮಾಡುತ್ತಿದ್ದಾರೆ. ಇದರ ಅರ್ಥ ಇವೆರಡೂ ಹೂಡಿಕೆಗಳು ವ್ಯಾಪಕವಾಗಿ ಬೆಳೆಯಲು ಅವಕಾಶ ಇದೆ. ಹೀಗಿದ್ದರೂ, ಭಾರತೀಯರ ವೈಯಕ್ತಿಕ ಹಣಕಾಸು ವಿಚಾರಗಳಿಗೆ ಸಂಬಂಧಿಸಿ 25 ಆಶ್ಚರ್ಯಕರ ಸಂಗತಿಗಳನ್ನು ಪಟ್ಟಿ ಮಾಡಬಹುದು.
ಇದನ್ನೂ ಓದಿ: Keshava Prasad B Column: ಮಧ್ಯಮ ವರ್ಗದ ಜನ ಉಳಿತಾಯ ಮಾಡುತ್ತಿಲ್ಲವೇ ?
ಸಮೀಕ್ಷೆಯೊಂದರ ಪ್ರಕಾರ ನಗರಗಳಲ್ಲಿ ಶೇ.42ರಷ್ಟು ಕುಟುಂಬಗಳು ತಮ್ಮ ಮನೆಯ ಖರ್ಚು ವೆಚ್ಚಗಳ ಲೆಕ್ಕಗಳನ್ನು ಇಟ್ಟುಕೊಳ್ಳುವುದಿಲ್ಲ. ಲಿಖಿತ ಬಜೆಟ್ ಅನ್ನು ಮಾಡುವುದಿಲ್ಲ. ನಾವು ದುಡಿಯುತ್ತೇವೆ, ಸಂಪಾದಿಸಿದ್ದನ್ನು ನಾವೇ ಖರ್ಚು ಮಾಡುತ್ತೇವೆ. ಹೀಗಿರುವಾಗ ಬರೆದಿಡುವುದು, ಖರ್ಚನ್ನು ಪರಿಶೀಲಿಸುವುದು ಏಕೆ ಎಂಬ ಚಿಂತನೆ. ಆದರೂ, ದುಡಿದ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ ಎಂಬ ಮಾತನ್ನೂ ಅವರಿಂದ ಕೇಳಬಹುದು.
ಎಲ್ಲರೂ ಹೀಗೆಯೇ? ಖಂಡಿತ ಅಲ್ಲ. ಭಾರತೀಯರು ಮೊದಲೇ ಉಳಿತಾಯ ಪ್ರಿಯರು. ಒಂದೊಂದು ರುಪಾಯಿಯನ್ನೂ ಲೆಕ್ಕವಿಟ್ಟು ಜೋಪಾನದಿಂದ ಕಾಪಿಟ್ಟು, ಹೂಡಿಕೆ ಮಾಡಿ ಆರ್ಥಿಕ ಪರಿಸ್ಥಿತಿ ಯನ್ನು ಕಾಲಾಂತರದಲ್ಲಿ ಸುಧಾರಿಸಿಕೊಂಡವರು ಅನೇಕ ಮಂದಿ.
ಭಾರತೀಯ ಕುಟುಂಬಗಳಲ್ಲಿ ನೇರವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರು ಕೇವಲ ಶೇ.4 ರಷ್ಟು ಮಂದಿ ಮಾತ್ರ. ಉಳಿದವರು ಎಫ್ʼಡಿ, ಚಿನ್ನ ಅಥವಾ ಸೇವಿಂಗ್ಸ್ ಅಕೌಂಟ್‌ಗಳ ಕಂಫರ್ಟ್ ಝೋನ್‌ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ಹಣದುಬ್ಬರ ಅವರ ಹೂಡಿಕೆಯ ಮೌಲ್ಯವನ್ನು ಕಳೆಯುತ್ತಿರುತ್ತದೆ.
ಸಮೀಕ್ಷೆಗಳ ಶೇ.35ರಷ್ಟು ಪ್ರಕಾರ ಕೌಟುಂಬಿಕ ಉಳಿತಾಯದಲ್ಲಿ ಬ್ಯಾಂಕ್ ಠೇವಣಿಗಳಲ್ಲಿದ್ದರೆ, ಶೇ.13ಕ್ಕಿಂತ ಕಡಿಮೆ ಮ್ಯೂಚುವಲ್ ಫಂಡ್‌ನಲ್ಲಿರುತ್ತದೆ. ಫಿಕ್ಸೆಡ್ ಡೆಪಾಸಿಟ್ ಎನ್ನುವುದೇ ಸುರಕ್ಷಿತ ಎಂಬ ಭಾವನೆ ನೀಡುತ್ತದೆ. ಹೀಗಾಗಿ ಜನಪ್ರಿಯವಾಗಿದೆ. ಆದರೆ ಸತ್ಯವೇನೆಂದರೆ ಅದು ನಿಧಾನವಾಗಿ ಸಂಪತ್ತನ್ನು ಕಳೆಯುತ್ತದೆ.
ಶೇ.90ರಷ್ಟು ಪೋರ್ಟ್ ಪೋಲಿಯೊಗಳಲ್ಲಿ ಚಿನ್ನ, ಎಫ್ʼಡಿ ಮತ್ತು ರಿಯಲ್ ಎಸ್ಟೇಟ್ ಇರುತ್ತದೆ. ಇವೆಲ್ಲವೂ ಬಜೆಟ್ ಮತ್ತು ಪ್ರವೃತ್ತಿಗೆ ಸಂಬಂಧಿಸಿದ್ದು. ಸಾಲ ಮತ್ತು ಇಎಂಐ ವಿಚಾರದಲ್ಲಿ ನೋಡಿ- ಹಲವರ ಶೇ.60ರಷ್ಟು ಆದಾಯ ಮನೆಯ ಸಾಲದ ಇಎಂಐಗೆ ಹೋಗುತ್ತದೆ. ಇಎಂಐ ಈಗ ಮಾಸಿಕ ವೆಚ್ಚ ಎಂಬುದಾಗಿ ಪರಿಗಣನೆಯಾಗಿದೆ. ಕಾರು ಸಾಲ, ಕ್ರೆಡಿಟ್ ಕಾರ್ಡ್ ಸಾಲವೂ ಹೆಚ್ಚು ತ್ತಿದೆ. ಹಲವಾರು ಮಂದಿ ತೆರಿಗೆ ಉಳಿಸಲು ಮಾತ್ರ ಉಳಿತಾಯ ಮಾಡುತ್ತಾರೆ.
ಶೇ.66ರಷ್ಟು ಜನರ ಬಳಿ ಟರ್ಮ್ ಇನ್ಷೂರೆ ಇರುವುದಿಲ್ಲ. ಶೇ.58ರಷ್ಟು ಮಂದಿ ನಿವೃತ್ತಿಯ ಪ್ಲಾನಿಂಗ್ ಅನ್ನು ಮುಂದೂಡುತ್ತಾರೆ. ಶೇ.60ರಷ್ಟು ಜನ ಒಂದೇ ಆದಾಯದ ಮೂಲವನ್ನು ಹೊಂದಿದ್ದಾರೆ. ಶೇ.91 ರಷ್ಟು ಜನ ತೀರಾ ವಿಳಂಬಿಸಿ ಹೂಡಿಕೆ ಮಾಡುತ್ತಾರೆ. ಶೇ.75 ಮಂದಿಯ ಬಳಿ ಎಮರ್ಜೆನ್ಸಿ ಫಂಡ್ ಇರುವುದಿಲ್ಲ. ಬಹುಪಾಲು ಕುಟುಂಬಗಳಲ್ಲಿ ಹಣದ ಬಗ್ಗೆ ಚರ್ಚೆ ಯಾಗುವುದಿಲ್ಲ. ನೂರಕ್ಕೆ ಹತ್ತು ಕುಟುಂಬಗಳು ಮಾತ್ರ ನಿಯಮಿತವಾಗಿ ಹೂಡಿಕೆ ಮಾಡುತ್ತವೆ. ಬ್ಯಾಂಕ್ ಖಾತೆಯ, ಎಫ್ʼಡಿಯ ಹಣ ಇರುತ್ತದೆ.
ಸಾಲವೀಗ ಲೈಫ್ ಸ್ಟೈಲ್‌ನ ಸಾಮಾನ್ಯ ಭಾಗವಾಗಿದೆ. ಆದಾಯದಲ್ಲಿ ಶೇ.37-50ರಷ್ಟು ಮೊತ್ತವು ಇಎಂಐಗೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ಆದಾಯದಲ್ಲಿ ಶೇ.60ರಷ್ಟು ಪಾಲನ್ನೂ ಸಾಲದ ಕಂತುಗಳಿಗೆ ಕಟ್ಟುವವರು ಇzರೆ. ಇತ್ತೀಚಿನ ವರ್ಷಗಳಲ್ಲಿ ಕಾರನ್ನು ಖರೀದಿಸುವುದು ಪ್ರತಿಷ್ಠೆ-ಅಂತಸ್ತಿನ ವಿಚಾರವೂ ಆಗಿರುವುದು ದುರ್ದೈವ.
ಬ್ಯಾಂಕ್ ಬಜಾರ್ ಪ್ರಕಾರ ಮೊದಲ ಸಲ ಕಾರು ಖರೀದಿಸುವ ಶೇ.68ರಷ್ಟು ಮಂದಿ 5-7ವರ್ಷಗಳಿಗೆ ಸಾಲ ಪಡೆದು ಕಾರನ್ನು ಕೊಳ್ಳುತ್ತಾರೆ. ಒಂದು ಸಲ ಕಾರು ಖರೀದಿಸಿದ ಬಳಿಕ ಅದರ ಮೌಲ್ಯ ಇಳಿಯುತ್ತದೆ. ಪ್ರತಿ ತಿಂಗಳೂ ಅದರ ನಿರ್ವಹಣೆಯ ಖರ್ಚು ಜತೆಯಲ್ಲಿರುತ್ತದೆ. ಅನುಕೂಲ ಕ್ಕಿಂತಲೂ ಪ್ರತಿಷ್ಠೆ, ಅಂತಸ್ತು, ಕೀಳರಿಮೆ ನಿವಾರಣೆಯ ಸಲುವಾಗಿ ಕಾರನ್ನು ಖರೀದಿಸುವ ಪ್ರವೃತ್ತಿ ಆರ್ಥಿಕವಾಗಿ ದುಬಾರಿಯಾಗುತ್ತದೆ. ಅನೇಕ ಮಂದಿ ಶ್ರೀಮಂತಿಕೆ ಬರಬೇಕಿದ್ದರೆ ಭ್ರಷ್ಟಾಚಾರ ಅಥವಾ ತಾತ-ಮುತ್ತಾತನ ಕಾಲದಿಂದ ಬಂದಿರುವ ಆಸ್ತಿಪಾಸ್ತಿಗಳು ಇರಬೇಕು ಎಂದು ನಂಬುತ್ತಾರೆ.
ಸಂಪತ್ತಿನ ಗಳಿಕೆಗೆ ಅದೃಷ್ಟ ಬೇಕು ಎಂದು ಭಾವಿಸುವವರೇ ಹೆಚ್ಚು. ಪ್ರಾಮಾಣಿಕರಾಗಿದ್ದೂ ಸಂಪತ್ತು ಗಳಿಸಬಹುದು ಎಂಬುದನ್ನು ನಂಬಲೂ ಕಷ್ಟಪಡುತ್ತಾರೆ. ದೊಡ್ಡ ಸಂಬಳವಿದ್ದರೆ ಬೇಗ ಸಿರಿವಂತರಾಗಬಹುದು ಎನ್ನುವುದು ಅರ್ಧ ಸತ್ಯ. ಸಣ್ಣ ಸಂಬಳ ಪಡೆಯುವವರೂ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವ ಮೂಲಕ ಶ್ರೀಮಂತರಾಗಬಹುದು.
ಮ್ಯೂಚುವಲ್ ಫಂಡ್ ಸಿಪ್ ಮೂಲಕ ಪ್ರತಿ ತಿಂಗಳೂ ಹೂಡಿಕೆ ಮಾಡುವ ಮೂಲಕ ಗುರಿಗಳನ್ನು ಸಾಧಿಸಬಹುದು. ಆದರೆ ಮನಸ್ಸು ಮಾಡಬೇಕು. ಎಷ್ಟೋ ಜನ ವಯಸ್ಸು 45 ಆಗಿದ್ದರೂ ನಿವೃತ್ತಿಯ ಬದುಕಿಗೆ ಪ್ಲಾನ್ ಮಾಡಿರುವುದಿಲ್ಲ. ಇದು ಇಳಿಗಾಲದಲ್ಲಿ ಬದುಕನ್ನು ದುಸ್ತರಗೊಳಿಸಬಲ್ಲುದು.
ಪರಾವಲಂಬನೆಗೆ ಕಾರಣವಾಗುತ್ತದೆ. ಇಂಡಿಯಾ ಸ್ಕಿಲ್ ವರದಿಯ ಪ್ರಕಾರ ಶೇ.42.6ರಷ್ಟು ಮಂದಿ ಪದವೀಧರರು ಮಾತ್ರ ಉದ್ಯೋಗಕ್ಕೆ ಅರ್ಹರು. ಕುಟುಂಬಗಳು ಮಕ್ಕಳ ಪದವಿ ಮುಗಿಯುವ ವೇಳೆಗೆ ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡುತ್ತಿರುತ್ತವೆ. ಆದರೆ, ಜಾಬ್ ಮಾರ್ಕೆಟ್‌ನಲ್ಲಿ ನಿರ್ದಿಷ್ಟ ಕೌಶಲಗಳು ಅಗತ್ಯ ಇರುತ್ತವೆ. ಸಾಕಾಗುವುದಿಲ್ಲ. ಕೇವಲ ಸರ್ಟಿಫೀಕೇಟ್ ಮಾತ್ರ ಮಧ್ಯಮ ವರ್ಗದ ಜನ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಾರೆ. ಅದರಿಂದ ಶೇ.5.5-6.5 ರಷ್ಟು ಆದಾಯ ಸಿಗಬಹುದು. ಎಲ್‌ಐಸಿಯಲ್ಲಿ ಇನ್ವೆ ಮಾಡುತ್ತಾರೆ. ಹೂಡಿಕೆಯ ದೃಷ್ಟಿಯಿಂದ ವಿಮೆ ಅಷ್ಟೊಂದು ಒಳ್ಳೆಯದಲ್ಲ. ಇದರಲ್ಲಿ ಶೇ.4-5ರಷ್ಟು ಆದಾಯ ಸಿಗಬಹುದು.
ಪ್ರಾವಿಡೆಂಟ್ ಮತ್ತು ಪೆನ್ಷನ್ ಫಂಡ್‌ಗಳಲ್ಲಿ ಶೇ.7-8ರಷ್ಟು ದೊರೆಯಬಹುದು. ಆದರೆ ಐತಿಹಾಸಿಕ ಅಂಕಿ ಅಂಶಗಳ ಪ್ರಕಾರ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗೆ ಅಂದಾಜು ಶೇ.12-15ರಷ್ಟು ಆದಾಯ ಪಡೆಯಬಹುದು. ನೇರವಾಗಿ ಸ್ಟಾಕ್‌ಗಳಲ್ಲಿ ಹೂಡಿಕೆಯಿಂದ ದೀರ್ಘಾವಧಿಗೆ ಶೇ.14-18ರಷ್ಟು ಗಳಿಸಬಹುದು ಎನ್ನುತ್ತಿವೆ ವರದಿಗಳು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2023ರ ವರದಿಯ ಪ್ರಕಾರ ಶೇ.80ರಷ್ಟು ಹಣವನ್ನು ಅಲ್ಪ ಬಡ್ಡಿ ಆದಾಯದ ಸಾಧನಗಳಲ್ಲಿ ಜನ ಹೂಡುತ್ತಾರೆ. ಉದಾಹರಣೆಗೆ ಶೇ.7ರಷ್ಟು ಬಡ್ಡಿ ಸಿಗುತ್ತದೆ ಎಂದು ಇಟ್ಟುಕೊಳ್ಳಿ. ಹಣದುಬ್ಬರ ಶೇ.6.50 ರಷ್ಟಿದ್ದರೆ ಉಳಿಯುವುದೆಷ್ಟು? ಕೇವಲ ಶೇ.0.5ರಷ್ಟು ಮಾತ್ರ!
ಬ್ಯಾಂಕ್ ಎಫ್ʼಡಿ, ವಿಮೆ, ಪಿಎಫ್, ಚಿನ್ನದಲ್ಲಿ ಬಹುಪಾಲು ಹೂಡಿಕೆ ನಡೆಯುತ್ತದೆಯಾದರೂ, ಅದರಲ್ಲಿ ಹಣ ಬೆಳೆಯುವುದು ನಿಧಾನ ಎನ್ನುವುದನ್ನು ಚಾರಿತ್ರಿಕ ಅಂಕಿ ಅಂಶಗಳು ಬಿಂಬಿಸುತ್ತವೆ. ಆದರೆ ಮ್ಯೂಚುವಲ್ ಫಂಡ್, ನೇರ ಈಕ್ವಿಟಿಗಳಲ್ಲಿ ಹೂಡಿಕೆಯಲ್ಲಿ ಹಣ ಬೆಳೆಯುತ್ತದೆ ಎಂಬು ದನ್ನು ಇದುವರೆಗೆ ಅಂಕಿ ಅಂಶಗಳು ತೋರಿಸಿವೆ. ಆದರೆ, ಅದರಲ್ಲಿ ಹೂಡಿಕೆ ಮಾಡುತ್ತಿರುವ ಭಾರತೀಯರ ಸಂಖ್ಯೆ ಅತ್ಯಲ್ಪ.
ಈಕ್ವಿಟಿ ಅರ್ಥವಾಗಲ್ಲ ಎಂಬ ಕಾರಣಕ್ಕೆ ಹಲವಾರು ಮಂದಿ ಅದರಲ್ಲಿ ಹೂಡಿಕೆ ಮಾಡಲು ಭಯಪಡುತ್ತಾರೆ. ಎಫ್ʼಡಿ ಮತ್ತು ಎಲ್‌ಐಸಿ ಸುಲಭ ಮತ್ತು ಸೇಫ್ ಎಂಬ ಭಾವನೆ ಅವರಲ್ಲಿರುತ್ತದೆ. ಆದರೆ ಅದೇ ಭ್ರಮೆ ಎಂಬ ಅರಿವು ಮೂಡಬೇಕು. ಇಲ್ಲದಿದ್ದರೆ ಸಮಯ ಓಡುತ್ತಿರುತ್ತದೆ, ಆದರೆ ಹಣ ಬೆಳೆಯುವುದಿಲ್ಲ. ಉದಾಹರಣೆಗೆ 10 ಲಕ್ಷ ರುಪಾಯಿಗಳ ಎಫ್ʼಡಿನಲ್ಲಿ ಶೇ.6ರಷ್ಟು ಬಡ್ಡಿಯಂತೆ 20 ವರ್ಷಗಳಲ್ಲಿ 32 ಲಕ್ಷ ರುಪಾಯಿಗಳಾಗುತ್ತದೆ ಎಂದು ಇಟ್ಟುಕೊಳ್ಳಿ.
ಆದರೆ, ಶೇ.6ರಷ್ಟು ಹಣದುಬ್ಬರದಿಂದ 20 ವರ್ಷದ ಬಳಿಕ 10 ಲಕ್ಷದ ಮೌಲ್ಯ ಗಣನೀಯವಾಗಿ ಸವಕಳಿಯಾಗಿರುತ್ತದೆ. ಆಗ ಅದು ಬೆಳವಣಿಗೆಯಾಗುವುದಿಲ್ಲ. ಶೇ.6ರಷ್ಟು ಬಡ್ಡಿಯಲ್ಲಿ 1 ಲಕ್ಷ ರುಪಾಯಿಗಳನ್ನು 20 ವರ್ಷಕ್ಕೆ ಹೂಡಿದರೆ 32 ಲಕ್ಷ ರುಪಾಯಿ ಸಿಗಬಹುದು. ಆದರೆ ಶೇ.6ರಷ್ಟು ಹಣದುಬ್ಬರದ ಪರಿಣಾಮ 1 ಲಕ್ಷ ರುಪಾಯಿಯ ನಿಜವಾದ ಮೌಲ್ಯ 1.8 ಲಕ್ಷ ರುಪಾಯಿಗೆ ಇಳಿದಿರುತ್ತದೆ.
ಹಾಗಾದರೆ ಇಂಥ ವಿಷಯಗಳು ಎಳೆಯ ವಯಸ್ಸು ಬಿಡಿ, ಹಿರಿಯರಿಗೂ ಏಕೆ ಗೊತ್ತಾಗುವುದಿಲ್ಲ?! ನಮ್ಮ ಶಾಲಾ ಕಾಲೇಜುಗಳಲ್ಲಿ ಬೀಜ ಗಣಿತವನ್ನು ಕಲಿಸುತ್ತಾರೆ. ಭೂಮಿಯ ಪದರಗಳ ಬಗ್ಗೆ ವಿವರಿಸುತ್ತಾರೆ. ಆದರೆ ಹಣ ಹೇಗೆ ಕೆಲಸ ಮಾಡುತ್ತದೆ? ಯಾವ ರೀತಿ ಹಣವನ್ನು ಉಳಿಸಬೇಕು, ಎಷ್ಟು ಸಾಲ ಮಾಡಬೇಕು? ಮ್ಯೂಚುವಲ್ ಫಂಡ್ ಎಂದರೇನು? ಬಂಗಾರದಲ್ಲಿ ಹೂಡಿಕೆಯ ಲಾಭ-ನಷ್ಟಗಳು, ಇಟಿಎಫ್, ಬಾಂಡ್ ಇತ್ಯಾದಿಗಳ ಬಗ್ಗೆ ತಿಳಿಸುವುದಿಲ್ಲ.
ಕೇವಲ ಶೇ.27 ರಷ್ಟು ಭಾರತೀಯರು ಮಾತ್ರ ಹಣಕಾಸು ಸಾಕ್ಷರರಾಗಿದ್ದಾರೆ ಎನ್ನುತ್ತದೆ ಒಂದು ಸಮೀಕ್ಷೆ. ಆದ್ದರಿಂದ ಸಿಪ್ ಎಂದರೆ ಅನೇಕ ಮಂದಿಗೆ ತಿಳಿದಿರುವುದಿಲ್ಲ. ಈಕ್ವಿಟಿ ಎಂದರೇನು ಎಂಬುದು ಗೊತ್ತಿರುವುದಿಲ್ಲ. ಸಿಎಜಿಆರ್, ಎನ್‌ಎವಿ, ಪಿಇ ರೇಶಿಯೊ, ಎಯುಎಂ, ಇಎಲ್ಎಸ್‌ಎಸ್ ಎಂದರೇನು ಎಂಬುದು ನಿಲುಕದ ವಿಚಾರವಾಗುತ್ತದೆ. ಇವೆಲ್ಲದರ ಜತೆಗೆ ಮಿಸ್ ಸೆಲ್ಲಿಂಗ್ ಕೂಡ ನಡೆಯುತ್ತದೆ.
ಯುಲಿಪ್‌ಗಳನ್ನು ಮ್ಯೂಚುವಲ್ ಫಂಡ್‌ಗಳೆಂಬಂತೆ, ವಿಮೆ ಪ್ಲಾನ್‌ಗಳನ್ನು ಹೂಡಿಕೆಯ ಪ್ಲಾನ್ ಗಳೆಂಬಂತೆ ಮಾರಾಟ ಮಾಡುವುದು ಮಿಸ್ ಸೆಲ್ಲಿಂಗ್ ಎನ್ನಿಸುತ್ತದೆ. ಅದರಿಂದ ಇಂಥ ವೈಯಕ್ತಿಕ ಹಣಕಾಸು ವಿಷಯಗಳ ಬಗ್ಗೆ ಚಿಕ್ಕಂದಿನಿಂದಲೇ ತಿಳಿವಳಿಕೆ ಪಡೆಯುವುದು ಅತ್ಯಂತ ಮುಖ್ಯ.