ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gururaj Gantihole Column: ಯುಡಿಐಡಿ: ದಿವ್ಯಾಂಗರ ಗುರುತೋ? ಗೌರವವೋ ?

ಯುಡಿಐಡಿ ಯೋಜನೆಯ ಹಿನ್ನೆಲೆ ಗಮನಿಸಿದಾಗ, ಹಿಂದೆ ಭಾರತದಲ್ಲಿ ವಿಶೇಷಚೇತನರಿಗೆ ನೀಡಲಾಗುತ್ತಿದ್ದ ಪ್ರಮಾಣಪತ್ರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿತ್ತು. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿತ್ತು. ಒಂದೇ ವ್ಯಕ್ತಿಗೆ ಹಲವು ಪ್ರಮಾಣಪತ್ರಗಳು, ಸೇವೆಗಳ ದುರುಪಯೋಗ, ನಿಖರ ಡೇಟಾ ಲಭ್ಯವಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಕೊರತೆ ಮುಂತಾದ ಈ ಸಮಸ್ಯೆಗಳನ್ನು ನಿವಾರಿಸಲು, ಭಾರತ ಸರ್ಕಾರವು ಯುಡಿಐಡಿ ಯೋಜನೆಯನ್ನು ಆರಂಭಿಸಿತು.

ಗಂಟಾಘೋಷ

ಹಿಂದೆ ಭಾರತದಲ್ಲಿ ವಿಶೇಷಚೇತನರಿಗೆ ನೀಡಲಾಗುತ್ತಿದ್ದ ಪ್ರಮಾಣಪತ್ರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿದ್ದವು. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿತ್ತು. ಒಂದೇ ವ್ಯಕ್ತಿಗೆ ಹಲವು ಪ್ರಮಾಣಪತ್ರಗಳು, ಸೇವೆಗಳ ದುರುಪ ಯೋಗ, ನಿಖರ ಡೇಟಾ ಲಭ್ಯವಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯದ ಕೊರತೆಯೂ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಿವಾರಿಸಲು, ಭಾರತ ಸರ್ಕಾರವು ಯುಡಿಐಡಿ (ವಿಶೇಷ ಚೇತನರ ವಿಶಿಷ್ಟ ಗುರುತು ಪತ್ರ) ಯೋಜನೆಯನ್ನು ಆರಂಭಿಸಿತು.

ಭಾರತದಲ್ಲಿ ವಿಶೇಷಚೇತನರ ಹಕ್ಕುಗಳು, ಸೌಲಭ್ಯಗಳು ಮತ್ತು ಸಾಮಾಜಿಕ ಒಳಗೊಳ್ಳು ವಿಕೆ (inclusion) ಬಗ್ಗೆ ಕಳೆದ ಕೆಲವು ದಶಕಗಳಲ್ಲಿ ಮಹತ್ತರ ಚರ್ಚೆಗಳು ನಡೆದಿವೆ. ವಿವಿಧ ಸರ್ಕಾರಗಳು ಹಲವು ಯೋಜನೆಗಳ ಮೂಲಕ ವಿಶೇಷಚೇತನರ ಜೀವನಮಟ್ಟ ವನ್ನು ಸುಧಾರಿಸಲು ಪ್ರಯತ್ನಿಸಿವೆ. ಈ ಹಿನ್ನೆಲೆಯಲ್ಲಿ, UDID (Unique Disability ID) ಯೋಜನೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಯುಡಿಐಡಿ ಎಂದರೆ ಪ್ರತಿ ವಿಶೇಷಚೇತನರ ವ್ಯಕ್ತಿಗೆ ನೀಡಲಾಗುವ ಒಂದು ವಿಶಿಷ್ಟ ಗುರುತಿನ ಸಂಖ್ಯೆ (Unique ID), ಇದು ದೇಶಾದ್ಯಂತ ವಿಶೇಷಚೇತನರ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಮತ್ತು ಸೇವೆಗಳನ್ನು ಸುಲಭಗೊಳಿಸುವ ಒಂದು ಮಹತ್ವದ ವ್ಯವಸ್ಥೆಯಾಗಿದೆ.

ಯುಡಿಐಡಿ ಯೋಜನೆಯ ಹಿನ್ನೆಲೆ ಗಮನಿಸಿದಾಗ, ಹಿಂದೆ ಭಾರತದಲ್ಲಿ ವಿಶೇಷಚೇತನರಿಗೆ ನೀಡಲಾಗುತ್ತಿದ್ದ ಪ್ರಮಾಣಪತ್ರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿತ್ತು. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿತ್ತು. ಒಂದೇ ವ್ಯಕ್ತಿಗೆ ಹಲವು ಪ್ರಮಾಣಪತ್ರಗಳು, ಸೇವೆ ಗಳ ದುರುಪಯೋಗ, ನಿಖರ ಡೇಟಾ ಲಭ್ಯವಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಕೊರತೆ ಮುಂತಾದ ಈ ಸಮಸ್ಯೆಗಳನ್ನು ನಿವಾರಿಸಲು, ಭಾರತ ಸರ್ಕಾರವು ಯುಡಿಐಡಿ ಯೋಜನೆಯನ್ನು ಆರಂಭಿಸಿತು.

ಪ್ರತಿ ವಿಶೇಷಚೇತನರ ವ್ಯಕ್ತಿಗೆ ಒಂದೇ ರೀತಿಯ ಯುನಿಕ್ ಐಡಿ ಎಂಬ ರಾಷ್ಟ್ರೀಯ ಗುರುತು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ವಿಶೇಷಚೇತನರ ನಿಖರ ಸಂಖ್ಯೆ ಯನ್ನು ತಿಳಿದುಕೊಳ್ಳಲು ಡಿಜಿಟಲ್ ಡೇಟಾಬೇಸ್ ನಿರ್ಮಾಣವಾಗುತ್ತದೆ.

ಇದನ್ನೂ ಓದಿ: Gururaj Gantihole Column: ವಿಳಿಂಜಂ ಬಂದರು: ಭಾರತದ ನವ ಸಾಗರ ಶಕ್ತಿ

ಸರ್ಕಾರಿ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಸಹಾಯವಾಗುವುದು. ಜೊತೆಗೆ, ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದು ಮತ್ತು ಭ್ರಷ್ಟಾಚಾರ ಕಡಿಮೆ ಮಾಡುವುದು. ಯುಡಿಐಡಿ ಕಾರ್ಡ್ ಒಂದು ಡಿಜಿಟಲ್ ಹಾಗೂ ಭೌತಿಕ ಗುರುತು ಪತ್ರವಾಗಿದೆ. ಇದರಲ್ಲಿ ಹೆಸರು, ವಿಳಾಸ, ಅಂಗವೈಕಲ್ಯದ ಪ್ರಕಾರ, ಪ್ರಮಾಣ (percentage of disability), ವಿಶಿಷ್ಟ ಗುರುತಿನ ಸಂಖ್ಯೆ ಮುಂತಾದ ಮಾಹಿತಿಗಳು ಸೇರಿರುತ್ತವೆ.

ರಾಷ್ಟ್ರೀಯ ಡೇಟಾಬೇಸ್ ಅಂದರೆ, ಎಲ್ಲಾ ವಿಶೇಷಚೇತನರ ಮಾಹಿತಿ ಒಂದೇ ಡೇಟಾ ಬೇಸ್‌ನಲ್ಲಿ ದೊರೆಯುವಂತೆ ಯುಡಿಐಡಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಹೊಂದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಶೇಷಚೇತನರ ಎಲ್ಲಾ ಸೌಲಭ್ಯಗಳಿಗೆ ಒಂದೇ ಕಾರ್ಡ್ ಎಂಬ ರೀತಿಯಲ್ಲಿ ದೇಶಾದ್ಯಂತ ಯಾವ ರಾಜ್ಯ ದಲ್ಲಿದ್ದರೂ ಬಳಸಬಹುದು.

ಭಾರತದಲ್ಲಿ ವಿಶೇಷಚೇತನರ ಒಟ್ಟು ಸಂಖ್ಯೆಯು ಜನಗಣತಿ 2011 ಪ್ರಕಾರ ಸುಮಾರು 2.68 ಕೋಟಿ ವಿಶೇಷಚೇತನರ ಇದ್ದು, ಇದು ದೇಶದ ಜನಸಂಖ್ಯೆಯ 2.21%ರಷ್ಟಿದೆ. ಆದರೆ ನಿಜವಾದ ಸಂಖ್ಯೆ ಈಗ (2025 ಅಂದಾಜು) 3.4 ಕೋಟಿ ಇರಬಹುದು ಎಂದು ಅಂದಾಜಿಸ ಲಾಗಿದೆ.

ಯುಡಿಐಡಿ ಪ್ರಗತಿಯನ್ನು ಗಮನಿಸಿದಾಗ, ಒಟ್ಟು 1.19 ಕೋಟಿ ಯುಡಿಐಡಿ ಕಾರ್ಡ್‌ಗಳು ಬಿಡುಗಡೆಯಾಗಿವೆ. ದೇಶದ ಮಟ್ಟದಲ್ಲಿ 40% ಮಾತ್ರ ಯುಡಿಐಡಿ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟು PwDs -3 ಕೋಟಿಯಷ್ಟಿದ್ದು, ಯುಡಿಐಡಿ ಪಡೆದವರು 1-1.2 ಕೋಟಿ ಎನ್ನಲಾಗಿದೆ. ಇನ್ನೂ 60% ಜನರಿಗೆ ಯುಡಿಐಡಿ ಇಲ್ಲವಾಗಿದೆ.

ಯೋಜನೆಯನ್ನು ಉತ್ತಮವಾಗಿ ಜಾರಿಗೆ ತಂದ ರಾಜ್ಯಗಳತ್ತ ಗಮನಿಸಿದಾಗ, ಉತ್ತಮ ಪ್ರದರ್ಶನ (50% ಮೇಲ್ಪಟ್ಟು) ಕರ್ನಾಟಕ, ತಮಿಳುನಾಡು, ಒಡಿಶಾ, ಮೇಘಾಲಯ ಎಂದು ಗುರುತಿಸಿದ್ದರೆ. ಕಡಿಮೆ ಪ್ರದರ್ಶನ ಎಂದು ಪಶ್ಚಿಮ ಬಂಗಾಳ (ಕೇವಲ 6%) ಎನ್ನಲಾಗಿದೆ. ಉಳಿದಂತೆ ಹಲವಾರು ಉತ್ತರ ರಾಜ್ಯಗಳು 20-30% ಮಾತ್ರ ಪ್ರಗತಿ ಸಾಧಿಸಿವೆ.

11 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ಬಾಕಿ ಇದ್ದು, ಅವುಗಳಲ್ಲಿ 60% ಅರ್ಜಿಗಳು 6 ತಿಂಗಳಿಗೂ ಹೆಚ್ಚು ಕಾಲ ಬಾಕಿಯಾಗೇ ಉಳಿದಿವೆ. ರಾಜ್ಯವಾರು ಸಮಸ್ಯೆಗಳನ್ನು ಗಮನಿಸಿದಾಗ, ಮಹಾ ರಾಷ್ಟ್ರವು 1.9 ಲಕ್ಷ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಉತ್ತರ ಪ್ರದೇಶವು ಅತ್ಯಧಿಕ ಎನ್ನಲಾಗಿದೆ.

ID

ಹಿಮಾಚಲ, ಮಿಜೋರಾಮ್ ರಾಜ್ಯಗಳು 80% ತನಕ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿವೆ ಎಂದು ವರದಿಯಾಗಿದೆ. ಇದಕ್ಕೆಲ್ಲ ಸ್ಥಳೀಯ ಕಾರಣ ಮಾತ್ತು ಸಮಸ್ಯೆಗಳನ್ನು ಹುಡುಕಿ ದಾಗ, ಮೆಡಿಕಲ್ ಬೋರ್ಡ್‌ನಿಂದ ತಡೆಹಿಡಿತ ಹಾಗೂ ಪ್ರಮಾಣೀಕರಣ ನಿಧಾನ, ಡಿಜಿಟಲ್ ವಿಭಾಗೀಕರಣದಲ್ಲಿ ವಿಳಂಬ, ಗ್ರಾಮೀಣ ಜನರಿಗೆ ಆನ್‌ಲೈನ್ ಅರ್ಜಿ ಕಷ್ಟವಾಗುತ್ತಿರು ವುದು, ಜಾಗೃತಿಯ ಕೊರತೆ ಸೇರಿದಂತೆ ಇನ್ನೂ ಕೆಲವು ವಿಶೇಷ ಚೇತನರಿಗೆ ಯುಡಿಐಡಿ ಎಂಬ ವಿಶಿಷ್ಟ ಯೋಜನೆಯ ಪರಿಚಯವೇ ಇಲ್ಲದಿರುವುದು ಕೂಡ ಪೂರ್ಣ ಜಾರಿಗೆ ತೊಂದರೆಯಾಗುತ್ತಿದೆ ಎನ್ನಲಾಗಿದೆ.

ಇಷ್ಟಾಗಿಯೂ ಆಧಾರ್, ಮೆಡಿಕಲ್ ಪ್ರಮಾಣಪತ್ರ, ಪ್ರಮಾಣಪತ್ರಗಳ ದೃಢೀಕರಣ ಹಾಗೂ ನಕಲಿ, ಮೋಸ, ವಂಚನೆಗಳನ್ನು ತಡೆಯುವುದಕ್ಕಾಗಿ ನಡೆಸಲಾಗುತ್ತಿರುವ ಫ್ಯಾಕ್ಟ್ ಚೆಕ್ಕಿಂಗ್ ಕಾರಣದಿಂದಲೂ ವಿಳಂಬ ಎನ್ನಲಾಗಿದೆ. ಇಷ್ಟಾಗಿಯೂ ಯುಡಿಐಡಿ ಇದ್ದರೆ ಮಾತ್ರ ಸಿಗುವ ಪ್ರಮುಖ ಯೋಜನೆಗಳೆಂದು, ADIP ಯೋಜನೆ, (ಉಪಕರಣಗಳು), ವಿಕಲ ಚೇತನ ಪಿಂಚಣಿ, ಸ್ಕಾಲರ್‌ಶಿಪ್, ಜಾಬ್ ರಿಸರ್ವೇಷನ್, ರೈಲು/ಬಸ್ಸುಗಳಲ್ಲಿ ವಿನಾಯ್ತಿ ಮುಂತಾದವುಗಳನ್ನು ಪರಿಗಣಿಸಲಾಗಿದ್ದು, ವಿಶಿಷ್ಟ ಗುರುತಿನ ಸಂಖ್ಯೆ ಇಲ್ಲದ 60% ಜನರು ಈ ಎಲ್ಲಾ ಸೌಲಭ್ಯಗಳಿಂದ ಹೊರಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ವಿಶೇಷಚೇತನರ ಸಂಖ್ಯೆ ಸುಮಾರು 3 ಕೋಟಿಯಷ್ಟಿದ್ದು, ಇದರಲ್ಲಿ ಯುಡಿಐಡಿ ಸಂಖ್ಯೆ ಪಡೆದವರು 1 ಕೋಟಿಯಾಗಿದ್ದರೆ, ಇನ್ನೂ ಸಂಖ್ಯೆ ಹೊಂದಬೇಕಾ ದವರು ಸುಮಾರು 2 ಕೋಟಿ ಎಂದು ಹೇಳಲಾಗುತ್ತಿದೆ. ನಗರ ಮತ್ತು ಹಳ್ಳಿ ಎಂಬೆರಡು ವ್ಯವಸ್ಥೆಗಳು ಸತ್ಯದ ಭಿನ್ನ ಮುಖಗಳು. ಬೆಂಗಳೂರಿನಲ್ಲಿ ಒಂದು ಕ್ಲಿಕ್‌ನಲ್ಲಿ ಯುಡಿಐಡಿ ಅರ್ಜಿ ಹಾಕಬಹುದು ಅಥವಾ ಪಡೆಯಬಹುದು. ಆದರೆ ಯಾದಗಿರಿ ಭಾಗದ ಒಂದು ಹಳ್ಳಿಯ ವಿಶೇಷಚೇತನರ ಈ ಯೋಜನೆ ಪಡೆಯಲು ಒಂದು ದಿನದ ಪ್ರಯಾಣ ಮಾಡ ಬೇಕಿರುತ್ತದೆ. ಸರಿಯಾದ ಇಂಟರ್ನೆಟ್ ಇಲ್ಲ, ಸೂಕ್ತ ಮಾಹಿತಿ ಇಲ್ಲ.

ದಯೆ ಎಂಬುದು ವಿಶೇಷಚೇತನರಿಗೆ ದೊಡ್ಡ ಅಪಮಾನವಾಗಿಯೇ ಕಾಡುತ್ತದೆ. ನಾವು ವಿಶೇಷಚೇತನರನ್ನು ಹೇಗೆ ನೋಡುತ್ತೇವೆ? ಅಯ್ಯೋ ಪಾಪ, ಸಹಾಯ ಮಾಡೋಣ ಎಂಬಂತಹ ಕೆಲ ಮಾತುಗಳು ಸೌಮ್ಯವಾಗಿ ಕೇಳುತ್ತವೆ. ಆದರೆ ಇದು ಒಂದು ಅಪಮಾನ ವೆಂದೇ ಇವರೆಲ್ಲ ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. ಯಾಕೆಂದರೆ ಅವರು ಕೇಳುವುದೇನು ಗೊತ್ತಾ? ನಮಗೆ ಸಮಾನ ಅವಕಾಶ ಕೊಡಿ ಎಂದು.

ಇಂತಹ ಭಾವನಾತ್ಮಕ ವಿಫಲತೆ ಸಂದರ್ಭದಲ್ಲಿ ಯುಡಿಐಡಿ ಅದನ್ನು ಕೊಡಲು ಪ್ರಯತ್ನಿಸುತ್ತದೆ. ಒಂದು ಕೇಸ್ ಸ್ಟಡಿ ಎಂದು ತೆಗೆದುಕೊಂಡಾಗ, ಕಲಬುರಗಿ ಜಿಲ್ಲೆಯ ಒಬ್ಬ ಯುವತಿ. ಅವಳಿಗೆ ಜನ್ಮದಿಂದಲೇ ದೃಷ್ಟಿ ಸಮಸ್ಯೆ. ಅವಳು ಮೂರು ಬಾರಿ ಅರ್ಜಿ ಹಾಕಿದಳು.

ಪ್ರತಿ ಬಾರಿಯೂ, ಡಾಕ್ಯುಮೆಂಟ್ ತಪ್ಪು, ಫೋಟೋ ತಪ್ಪು, ಸಿಗ್ನೇಚರ್ ತಪ್ಪು ಎಂದು ಆಕೆಯನ್ನು ಅಲೆದಾಡಿಸಿದ್ದೇ ಬಂತು. ಆಕೆಗೆ ವಿಶೇಷಚೇತನ ಯೋಜನೆಗೆ ಸೇರುವುದಕ್ಕೇ ಸಮಸ್ಯೆಗಳುಂಟಾದವು. ಬಹುತೇಕವಾಗಿ, ಕಾಗದದ ಕಾಡಿನಲ್ಲಿ ಕಳೆದು ಹೋದ ಜೀವನ ವೆಂಬಂತಾಯಿತು.

ಒಂದು ದಿನ ಅವಳು, ನನ್ನ ಕಣ್ಣು ಕಾಣೋದಿಲ್ಲ ಅನ್ನೋದು ಸಾಕಾಗುವುದಿಲ್ಲವಾ? ಎಂದು ನೊಂದುಕೊಂಡು ಆವೇಶದಿಂದಲೇ ಪ್ರಶ್ನಿಸಿದಳು. ಯುಡಿಐಡಿ ಬಂದ ನಂತರ ಅವಳು ಕಾರ್ಡ್ ಪಡೆದಳು. ಸದ್ಯ ಅವಳ ಜೀವನ ಬದಲಾಗಿದೆಯಾ? ಎಂದರೆ, ಸ್ವಲ್ಪ ಎಂದು ಉತ್ತರಿಸಬಹುದಷ್ಟೆ. ಸಮಾಜ ಬದಲಾಗಿದೆಯಾ? ಎಂದರೆ, ಇಲ್ಲ ಎಂದೇ ಬೇಸರದಿಂದ ಹೇಳಬೇಕಾಗುತ್ತದೆ.

ಇಲ್ಲಿ ತಂತ್ರಜ್ಞಾನ ಎಂಬುದು ರಕ್ಷಕನಾ? ರಾಕ್ಷಸನಾ? ಎಂಬುದೇ ತಾಂತ್ರಿಕ ಕಾಲಘಟ್ಟದಲ್ಲಿ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಯುಡಿಐಡಿ ಎಂಬುದು ಒಂದು ಡಿಜಿಟಲ್ ವ್ಯವಸ್ಥೆ. ಇದರಿಂದ ವೇಗ ಹೆಚ್ಚಾಗಿದೆ, ಭ್ರಷ್ಟಾಚಾರ ಕಡಿಮೆಯಾಗಿದೆ. ಆದರೆ, ಸರ್ವರ್ ಸಮಸ್ಯೆಗಳು, ಡೇಟಾ ಸುರಕ್ಷತೆ ಪ್ರಶ್ನೆಗಳು, ಹ್ಯಾಕಿಂಗ್ ಭೀತಿ ಕಾಡುತ್ತಿವೆ.

ಒಂದು ದಿನ ನಿಮ್ಮ ಡೇಟಾ ಲೀಕ್ ಆಯ್ತು ಅಂದ್ರೆ? ನಿಮ್ಮ ಗೌರವವೇ ಅಪಾಯ ದಲ್ಲಿರುತ್ತದೆ. ಭವಿಷ್ಯ, ಭಯ ಮತ್ತು ಭರವಸೆ ಎಂಬ ಪರಿಕಲ್ಪನೆಯಲ್ಲಿ ಇದನ್ನು ನೋಡಿದಾಗ, ಭವಿಷ್ಯದಲ್ಲಿ ಯುಡಿಐಡಿ ವ್ಯವಸ್ಥೆ ಏನಾಗಬಹುದು? ಎಐ ಆಧಾರಿತ ಸೇವೆಗಳು, ಸ್ವಯಂಚಾಲಿತ ಪಿಂಚಣಿ, ವೈಯಕ್ತಿಕ ನೆರವು ಮುಂತಾದವುಗಳು ಮುನ್ನೆಲೆಗೆ ಬರುತ್ತವೆ.

ಯುಡಿಐಡಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ಒಂದು ಕಾರ್ಡ್ ಸಾಕಾಗುವುದಿಲ್ಲ. ಆದರೆ, ಸಮಾಜದ ಮನೋಭಾವ, ಆಡಳಿತದ ನಿಷ್ಠೆ, ಅರಿವು ಇವು ಬದಲಾಗದಿದ್ದರೆ, ಯುಡಿಐಡಿ ಒಂದು ಗುರುತು ಮಾತ್ರವಾಗಿ ಉಳಿಯಬಲ್ಲದು. ಒಂದು ದೇಶದ ಅಭಿವೃದ್ಧಿ ಅದರ ಜಿಡಿಪಿಯಲ್ಲಿ ಇಲ್ಲ, ಅದರ ಅತಿ ದುರ್ಬಲ ನಾಗರಿಕನ ಗೌರವದಲ್ಲಿದೆ.

ಯುಡಿಐಡಿ ಕೂಗೋದಿಲ್ಲ, ಆದರೆ ಅದು ಹೇಳುತ್ತದೆ. ನಾನು ಇದ್ದೇನೆ, ನನಗೆ ಹಕ್ಕುಗಳಿವೆ, ನಾನು ಸಮಾನ ಎಂದು ಧೈರ್ಯವಾಗಿ ಹೇಳುತ್ತದೆ. ಯೋಜನೆಯ ಪ್ರಯೋಜನಗಳು ಹಲವು. ಸೌಲಭ್ಯಗಳ ಸುಲಭ ಲಭ್ಯತೆ, ಪಿಂಚಣಿ, ವಿದ್ಯಾರ್ಥಿವೇತನ, ಉದ್ಯೋಗ ಯೋಜನೆ ಗಳು. ಸಮಯ ಉಳಿವು, ಒಂದೇ ಕಾರ್ಡ್ ಮೂಲಕ ಎಲ್ಲ ಸೇವೆಗಳು. ಇದರಿಂದಾಗಿ, ಡೇಟಾ ನಿಖರವಾಗಿರುವುದರಿಂದ ಫ್ರಾಡ್ ಕಡಿಮೆ.

ಗೌರವಯುತ ಜೀವನ, ವಿಶೇಷಚೇತನರಿಗೆ ಸಾಮಾಜಿಕ ಗೌರವ ಮತ್ತು ಸ್ವಾಭಿಮಾನ ಬಹಳ ಮುಖ್ಯವಾಗಿವೆ. ಯುಡಿಐಡಿ ಯೋಜನೆ ವಿವಿಧ ಅಂಗವೈಕಲ್ಯಗಳನ್ನು ಒಳಗೊಂಡಿದೆ. ದೃಷ್ಟಿದೋಷ, ಶ್ರವಣ ದೋಷ, ಶಾರೀರಿಕ ಅಂಗವೈಕಲ್ಯ, ಮಾನಸಿಕ ವೈಕಲ್ಯ, ಬುದ್ಧಿ ಮಾಂದ್ಯತೆ ಹಾಗೂ ಬಹು ಅಂಗವೈಕಲ್ಯವನ್ನೂ ಪರಿಗಣಿಸಲಾಗಿದೆ.

ಯೋಜನೆಯು RPWD Act 2016 (Rights of Persons with Disabilities Act) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಾಯ್ದೆ ವಿಶೇಷ ಚೇತನರಿಗೆ ಸಮಾನ ಹಕ್ಕುಗಳನ್ನು ಒದಗಿಸು ತ್ತದೆ. ಈ ಯೋಜನೆ ಡಿಜಿಟಲ್ ಇಂಡಿಯಾ ಮಿಷನ್ ಭಾಗವಾಗಿದೆ. ಇದರ ಮೂಲಕ ಇ-ಗವರ್ನೆನ್ಸ್ ಸುಧಾರಣೆ, ಡಾಟಾ ಆಧಾರಿತ ಪಾಲಿಸಿಗಳು, ಸ್ಮಾರ್ಟ್ ಪಾಲಿಸಿಗಳನ್ನು ಒಳಗೊಂಡಿದ್ದು, ಸಮರ್ಪಕವಾಗಿ ಜಾರಿಗೆ ತರುವುದಾಗಿದೆ.

ಯುಡಿಐಡಿ ಯೋಜನೆಗೆ ಡಿಜಿಟಲ್ ಅeನ, ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಅರಿವು ಕಡಿಮೆ ಇರುವುದು, ಇಂಟರ್ನೆಟ್ ಕೊರತೆ, ವೈದ್ಯಕೀಯ ಸಿಬ್ಬಂದಿ ಕೊರತೆಗಳಂತಹ ಕೆಲವು ಸವಾಲುಗಳಿವೆ. ಇವುಗಳಿಗೆ ಪರಿಹಾರಗಳನ್ನು ಅರಿವು ಅಭಿಯಾನ, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಮೊಬೈಲ್ ಸೇವೆಗಳು, ಗ್ರಾಮೀಣ ಭಾಗದ ಮನೆಬಾಗಿಲಿಗೆ ವೈದ್ಯಕೀಯ ಕ್ಯಾಂಪುಗಳ ಮೂಲಕ ಮಾಹಿತಿ, ಜಾಗೃತಿ ಮೂಡಿಸಬಹುದಾಗಿದೆ.

ಈ ಒಂದು ವಿಶಿಷ್ಟ ಯೋಜನೆ ಕುರಿತಂತೆ ಕರ್ನಾಟಕ ರಾಜ್ಯದ ಒಟ್ಟು ಸ್ಥಿತಿ ಗಮನಿಸಿದಾಗ, ಕರ್ನಾಟಕದಲ್ಲಿ ಯುಡಿಐಡಿ ಕವರೇಜ್ 45-50% (CAG) ರಷ್ಟು ಮಾತ್ರವೇ ಆಗಿದೆ ಎಂಬ ವರದಿಯಾಗಿದೆ. ಅಂದಾಜು ವಿಶೇಷಚೇತನರ 13-15 ಲಕ್ಷಗಳಷ್ಟಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಯುಡಿಐಡಿ ಪಡೆದವರು 6-7 ಲಕ್ಷಗಳಷ್ಟಿದ್ದರೆ, ಇನ್ನೂ 6-8 ಲಕ್ಷ ಜನರು ಬಾಕಿ ಉಳಿದಿದ್ದಾರೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಇನ್ನೂ ಅರ್ಧ ಜನರಿಗೆ ಯುಡಿಐಡಿ ಸಿಕ್ಕಿಲ್ಲ ಎಂಬುದು ಸ್ಪಷ್ಟ ಮಾಹಿತಿ ಎನ್ನಬಹುದು. ಇದನ್ನು 2025ಕ್ಕೆ ಹೊಂದಿಕೊಂಡಂತೆ ಜಿವಾರು ಗಮನಿಸಿದಾಗ, ಅತಿಹೆಚ್ಚು ಜಾಗೃತಿ, ಸೌಕರ್ಯ ಇರುವುದು ಉಡುಪಿ ಜಿಲ್ಲೆ ಹಾಗೂ ಬೆಂಗಳೂರು ನಗರದಲ್ಲಿ ಎಂದು ವರದಿ.

ಮೈಸೂರು ಉತ್ತಮ ಪ್ರಗತಿ ಹೊಂದಿದ್ದರೆ, ಬೆಳಗಾವಿ, ತುಮಕೂರು ಉತ್ತಮ ಪ್ರಗತಿಯಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯು ಉತ್ತಮ ಪ್ರಗತಿಯತ್ತ ಸಾಗುತ್ತಿದೆ. ಮಧ್ಯಮ ಪ್ರದರ್ಶನ ಜಿಲ್ಲೆ ಗಳೆಂದು ಧಾರವಾಡ, ಶಿವಮೊಗ್ಗ, ಹಾಸನ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಪರಿಗಣಿಸಿದ್ದರೆ, ಕಳಪೆ ಪ್ರಗತಿ ಹೊಂದಿರುವ ಜಿಲ್ಲೆಗಳಾಗಿ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ, ಚಿಕ್ಕಬಳ್ಳಾಪುರಗಳನ್ನು ಗುರುತಿಸಲಾಗಿದೆ.

ಇದೆಲ್ಲವನ್ನು ವಿಮರ್ಶಿಸಿದಾಗ, ನಮಗೆ ದೊರೆತ ಮಾಹಿತಿ ಪ್ರಕಾರ, ಇನ್ನೂ ಮಾಡಬೇಕಾದ ಕೆಲಸಗಳು ಬಹಳಷ್ಟಿದ್ದು, ಅವುಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಯುಡಿಐಡಿ ಕ್ಯಾಂಪುಗಳು, ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ವಿಶೇಷಚೇತನರನ್ನು ಗುರುತಿಸುವುದು, PHC ಮಟ್ಟದಲ್ಲಿ ಪ್ರಮಾಣೀಕರಿಸುವುದು, ಮೊಬೈಲ್ ಮೆಡಿಕಲ್ ವ್ಯವಸ್ಥೆ ಮಾಡಿಕೊಳ್ಳುವುದು, ಪಂಚಾಯ್ತಿ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿ ಉಳಿದಿರುವ ಕೆಲಸಗಳೆನ್ನಬಹುದು.

ವಿಶೇಷಚೇತನ ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆಯಿಂದ ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ. ಸರ್ಕಾರದ ಯೋಜನೆಗಳ ಪರಿಣಾಮಕಾರಿತ್ವ ಹೆಚ್ಚಳವಾಗುತ್ತದೆ. ಡೇಟಾ ಆಧಾರಿತ ನೀತಿ ರೂಪಣೆಯಲ್ಲಿ ದತ್ತಾಂಶ ಸಂಗ್ರಹವಾಗುತ್ತದೆ. ಸುಧಾರಣೆ ಗಳಾಗುತ್ತವೆ.

ಕರ್ನಾಟಕದಲ್ಲಿ ಯುಡಿಐಡಿ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿದೆ. ಜಿಸ್ತರದಲ್ಲಿ ಸೇವೆಗಳು, ಎನ್‌ಜಿಓಗಳ ಮೂಲಕ ಸಹಾಯ, ಗ್ರಾಮ ಮಟ್ಟದ ಜಾಗೃತಿಗಳ ಮೂಲಕ ಯೋಜನೆ ಉತ್ತಮ ಫಲಿತಾಂಶ ಕಂಡುಕೊಳ್ಳುತ್ತಿದೆ. ಈ ಯೋಜನೆ ಭವಿಷ್ಯದಲ್ಲಿ, ಎಐ ಆಧಾರಿತ ಸೇವೆಗಳು, ಆರೋಗ್ಯ ಡೇಟಾ ಇಂಟಿಗ್ರೇಷನ್, ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಸರಿಯಾದ ಮಾರ್ಗದ ಮೂಲಕ ಜಾರಿಗೆ ಸಹ ತರಬಹುದಾಗಿದೆ.

ಯುಡಿಐಡಿ ಒಂದು ಉತ್ತಮ ಯೋಜನೆಯಾದರೂ, ಇನ್ನಷ್ಟು ಪರಿಣಾಮಕಾರಿ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿಸಬೇಕು ಮತ್ತು ಪಾರದರ್ಶಕತೆ ಹೆಚ್ಚಿಸಬೇಕು ಎಂಬುದು ಎಲ್ಲ ಯೋಜನೆಗಳು ಬೇಡುವಂತೆ ಇದೂ ಸಹ ಉತ್ತಮವನ್ನು ಬಯಸುತ್ತದೆ. ಅಡೆತಡೆ, ವಿಕಲ್ಪಗಳೇನೇ ಇರಲಿ.

ಯುಡಿಐಡಿ ಯೋಜನೆ ಭಾರತದಲ್ಲಿ ವಿಶೇಷಚೇತನರ ಬದುಕಿನಲ್ಲಿ ಮಹತ್ತರ ಬದಲಾವಣೆ ತರುತ್ತಿದೆ. ಇದು ಕೇವಲ ಒಂದು ಗುರುತು ಪತ್ರವಲ್ಲ, ಇದು ಒಂದು ಸಮಾನತೆ, ಗೌರವ ಮತ್ತು ಹಕ್ಕುಗಳ ಪ್ರತೀಕವಾಗಿದೆ. ಭಾರತವು ಒಂದು ಸಮಾನತೆಯ ಸಮಾಜವಾಗಲು, ಯುಡಿಐಡಿಯಂತಹ ಯೋಜನೆಗಳು ಅಗತ್ಯ. ಒಬ್ಬ ವಿಶೇಷಚೇತನರ ವ್ಯಕ್ತಿಗೆ ಸಹಾಯ ಮಾಡುವುದು ಒಂದು ಸೇವೆಯಲ್ಲ - ಅದು ಒಂದು ಸಾಮಾಜಿಕ ಹೊಣೆಗಾರಿಕೆ. ಯುಡಿಐಡಿ ಯೋಜನೆ ಈ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ.

ಗುರುರಾಜ್ ಗಂಟಿಹೊಳೆ

View all posts by this author