ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gururaj Gantihole Column: ವಿಳಿಂಜಂ ಬಂದರು: ಭಾರತದ ನವ ಸಾಗರ ಶಕ್ತಿ

ಇದೊಂದು ಭಾರತದ ಸಾಗರ ವಲಯದಲ್ಲಿ ಇತಿಹಾಸದ ಹೊಸ ಅಧ್ಯಾಯ ಎನ್ನಬಹುದು. ಪೋರ್ಟ್ ಆಫ್ ಸಿಂಗಪೂರ್, ಕೊಲಂಬೋ, ದುಬೈ(ಜೆಬೆಲ ಅಲಿ), ರೋಟೆರ್‌ಡಾಮ್ ವಿಶ್ವದಲ್ಲಿ ಕೆಲವು ಪ್ರಮುಖ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗಳಾಗಿ ಗುರುತಿಸಿಕೊಂಡಿವೆ. ಭಾರತದ ಸಾಗರ ವ್ಯವಹಾರದಲ್ಲಿದ್ದ ದೊಡ್ಡ ಸಮಸ್ಯೆ, ಭಾರತದ ಕಂಟೇನರ್ ಸರಕುಗಳ ಸುಮಾರು 40%-50% ರಷ್ಟು ವಿದೇಶಿ ಬಂದರುಗಳ ಮೂಲಕವೇ ಸಾಗುತ್ತಿತ್ತು.‌

ವಿಳಿಂಜಂ ಬಂದರು: ಭಾರತದ ನವ ಸಾಗರ ಶಕ್ತಿ

-

ಗಂಟಾಘೋಷ

ವಿಳಿಂಜಂ ಪೋರ್ಟ್ ಕೇವಲ ಕೇರಳದ ಯೋಜನೆಯಲ್ಲ, ಇದು ಭಾರತದ ಸಾಗರ ಮಾಲಾ ಯೋಜನೆಯ ಭವಿಷ್ಯದ ಸಂಕೇತ. ಭಾರತ, ಈಗ ಕೇವಲ ಕರಾವಳಿ ಹೊಂದಿದ ದೇಶವಲ್ಲ, ಬದಲಾಗಿ ಭಾರತ ಒಂದು ಸಾಗರ ಶಕ್ತಿಯಾಗಿದೆ ಎಂಬ ಸಂದೇಶ ಸಾರುವ ಮೊದಲ ಹೆಜ್ಜೆಯಾಗಿದೆ. ವಿಳಿಂಜಂ ಬಂದರು ಯೋಜನೆಯ ಕಲ್ಪನೆ ಹೊಸದಲ್ಲ. ಇದನ್ನು ಮೊದಲ ಬಾರಿಗೆ ತೊಂಬತ್ತರ ದಶಕದಲ್ಲಿ ಚರ್ಚಿಸ ಲಾಯಿತು. ಆದರೆ ಯೋಜನೆ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತು.

ವಿಳಿಂಜಂ ಅಂತರಾಷ್ಟ್ರೀಯ ಸೀ ಏರ್‌ಪೋರ್ಟ್, ಕೇರಳದ ಅತ್ಯಂತ ಮಹತ್ವದ ಅಂತಾ ರಾಷ್ಟ್ರೀಯ ಡೀಪ್-ಸೀ ಪೋರ್ಟ್ ಆಗಿದ್ದು, ಭಾರತದ ಪಾಲಿನ ದೊಡ್ಡ ಗೇಮ್ ಚೇಂಜರ್ ಎಂದು ಕರೆಯಲಾಗುತ್ತಿದೆ.

ಇದೊಂದು ಭಾರತದ ಸಾಗರ ವಲಯದಲ್ಲಿ ಇತಿಹಾಸದ ಹೊಸ ಅಧ್ಯಾಯ ಎನ್ನಬಹುದು. ಪೋರ್ಟ್ ಆಫ್ ಸಿಂಗಪೂರ್, ಕೊಲಂಬೋ, ದುಬೈ(ಜೆಬೆಲ ಅಲಿ), ರೋಟೆರ್‌ಡಾಮ್ ವಿಶ್ವದಲ್ಲಿ ಕೆಲವು ಪ್ರಮುಖ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗಳಾಗಿ ಗುರುತಿಸಿಕೊಂಡಿವೆ. ಭಾರತದ ಸಾಗರ ವ್ಯವಹಾರದಲ್ಲಿದ್ದ ದೊಡ್ಡ ಸಮಸ್ಯೆ, ಭಾರತದ ಕಂಟೇನರ್ ಸರಕುಗಳ ಸುಮಾರು 40%-50%ರಷ್ಟು ವಿದೇಶಿ ಬಂದರುಗಳ ಮೂಲಕವೇ ಸಾಗುತ್ತಿತ್ತು.‌

ವಿದೇಶಿ ಬಂದರು ಬಳಕೆಯ ಪರಿಣಾಮ, ಭಾರತೀಯ ವ್ಯಾಪಾರಿಗಳು ಪ್ರತಿ ಕಂಟೇನರ್‌ಗೆ ಹೆಚ್ಚುವರಿ ಶುಲ್ಕ ಕೊಡಬೇಕಾಗುತ್ತಿತ್ತು. ಸರಕುಗಳು ಮೊದಲು ಬೇರೆ ದೇಶಕ್ಕೆ ಹೋಗಿ ಅಲ್ಲಿ ಮತ್ತೆ ಬೇರೆ ಹಡಗಿಗೆ ಬದಲಾಯಿಸಬೇಕಾಗುತ್ತಿತ್ತು. ಇದು ಅತ್ಯಧಿಕ ಸಮಯ ನಷ್ಟಕ್ಕೆ ಕಾರಣವಾಗಿತ್ತು. ವಿದೇಶಿ ಬಂದರುಗಳ ಮೇಲೆ ಅವಲಂಬನೆಯ ಜೊತೆಗೆ ತಂತ್ರಜ್ಞಾನದ ದುರ್ಬಲತೆಯೂ ಆಗಿತ್ತು.

ಇದು ಭೌಗೋಳಿಕ ರಾಜಕೀಯಕ್ಕೆ ಅಪಾಯ ತಂದೊಡ್ಡುವ ಭೀತಿಗೂ ಕಾರಣವಾಗಿತ್ತೆನ್ನ ಬಹುದು. ಇಲ್ಲಿಂದ ಪಶ್ಚಿಮ ಏಷ್ಯಾ, ಆಫ್ರಿಕಾ, ಯುರೋಪ್ ಸೇರಿದಂತೆ ಎಲ್ಲ ಕಡೆಗೆ ಸಾಗರ ಮಾರ್ಗ ಸುಲಭ ಸಾಗಾಣಿಕೆ ಸಾಧ್ಯವಾಗುತ್ತದೆ. ಈ ಬಂದರು ನಿರ್ಮಾಣದ ಇತಿಹಾಸದ ಬಗ್ಗೆ ಗಮನಿಸಿದಾಗ, ವಿಳಿಂಜಂ ಬಂದರು ಯೋಜನೆಯ ಕಲ್ಪನೆ ಹೊಸದಲ್ಲ. ಇದನ್ನು ಮೊದಲ ಬಾರಿಗೆ ತೊಂಬತ್ತರ ದಶಕದಲ್ಲಿ ಚರ್ಚಿಸಲಾಯಿತು. ಆದರೆ ಯೋಜನೆ ಹಲವು ಕಾರಣ ಗಳಿಂದ ಮುಂದೂಡಲ್ಪಟ್ಟಿತು. ಪರಿಸರ ವಿರೋಧ, ಹಣಕಾಸಿನ ಸಮಸ್ಯೆ, ರಾಜಕೀಯ ಬದಲಾವಣೆಗಳು ಸಹ ಕಾರಣವಾದವು.

ಇದನ್ನೂ ಓದಿ: Gururaj Gantihole Column: ಅನ್ನದಿಂದ ಉದ್ಯಮವರೆಗೆ ಹಬ್ಬಿರುವ ಸಿಎಫ್‌ʼಟಿಆರ್‌ಐ: ಇದು ಭಾರತದ ಭವಿಷ್ಯ !

ಭಾರತೀಯ ಮಹಾಸಾಗರದಲ್ಲಿ ಚೀನಾ ತನ್ನ ಪ್ರಭಾವ ಹೆಚ್ಚಿಸುತ್ತಿದೆ. ಈಗಾಗಲೇ ಅದು ಹಲವು ಬಂದರುಗಳನ್ನು ನಿರ್ಮಿಸಿದೆ. ಉದಾಹರಣೆಗೆ ಹಂಬನ್‌ಟೋಟಾ, ಗ್ವಾದರ್, ಕ್ಯೂಕ್ಪು ಪೋರ್ಟ್ ಮುಂತಾದವುಗಳಿವೆ. ಇದನ್ನು ಸ್ಟ್ರಿಂಗ್ ಆಫ್ ಪರ್ಲ್ ಸ್ಟ್ರಾಟಜಿ ಎಂದು ಕರೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಭಾರತ ತನ್ನ ಸಾಗರ ಸಾಮರ್ಥ್ಯವನ್ನು ಹೆಚ್ಚಿಸಬೇಕಿತ್ತು. ‌

ಅದರ ಭಾಗವಾಗಿ, ವಿಳಿಂಜಂ ಬಂದರು, ಜಿಯೋ ಪೊಲಿಟಿಕ್ಸ್ ಭಾಗವಾಗಿ ಭಾರತೀಯ ಮಹಾಸಾಗರದ ಆಟದ ಮೈದಾನವಾಗಿ ನಿಲ್ಲಬಲ್ಲುದಾಗಿದೆ. ಈ ಸಮುದ್ರ ರಾಜಕೀಯದ ಪ್ರಮುಖ ಭಾಗವಾಗಿದೆ. ಭಾರತದ ಬಹುತೇಕ ಬಂದರುಗಳಿಗೆ ಒಂದು ದೊಡ್ಡ ಸಮಸ್ಯೆ ಯೆಂದರೆ, ಅದು ಡ್ರೆಡ್ಜಿಂಗ್. ಅಂದರೆ ಸಮುದ್ರದ ನೆಲವನ್ನು ತೆಗೆಯಬೇಕು.

ಜವಹರಲಾಲ್ ನೆಹರು ಪೋರ್ಟ್, ಚೆನ್ನೈ ಪೋರ್ಟ್ ಬಂದರುಗಳಲ್ಲಿ ಹಡಗುಗಳು ಸುಲಭ ವಾಗಿ ಬರಲು ನಿರಂತರವಾಗಿ ಡ್ರೆಡ್ಜಿಂಗ್ ಮಾಡಬೇಕು. ಆದರೆ ವಿಳಿಂಜಂನಲ್ಲಿ 18-20 ಮೀಟರ್ ಸಹಜ ಆಳ ಇದೆ. ಇದು ಅತ್ಯಂತ ದೊಡ್ಡ ಕಂಟೇನರ್ ಹಡಗುಗಳಿಗೆ ಸೂಕ್ತ.

ಇಂದಿನ ವಿಶ್ವದ ದೊಡ್ಡ ಕಂಟೇನರ್ ಹಡಗುಗಳು, 18000 TEU, 20,000 TEU, 24,000 TEU ಗಳಷ್ಟಿದ್ದು, ಇವುಗಳನ್ನು Ultra Large Container Vessels (ULCV) ಎಂದು ಕರೆಯುತ್ತಾರೆ. ವಿಳಿಂಜಂ ಬಂದರು ಇವುಗಳನ್ನು ನೇರವಾಗಿ ಸ್ವೀಕರಿಸಬಲ್ಲದು. ಭಾರತಕ್ಕೆ ತನ್ನದೇ ಟ್ರಾನ್ಸ್‌ ಶಿಪ್‌ಮೆಂಟ್ ಬಂದರು ಇರದ ಕಾರಣ, ಪ್ರತಿವರ್ಷ 200 ಮಿಲಿ ಯನ್ ಡಾಲರ್‌ಗಿಂತ ಹೆಚ್ಚು ಹಣ ವಿದೇಶಗಳಿಗೆ ಹೋಗುತ್ತದೆ. ಈ ಹಣವನ್ನು ಪಡೆಯು ತ್ತಿರುವ ಪ್ರಮುಖ ಬಂದರು, ಪೋರ್ಟ್ ಕೊಲಂಬೋ ಆಗಿದೆ.

ಭಾರತದ ಕಂಟೇನರ್ ಸರಕುಗಳ ಸುಮಾರು 60% ಕೊಲಂಬೋ ಮೂಲಕ ಸಾಗುತ್ತಿತ್ತು. ನೀಲಿ ಆರ್ಥಿಕತೆ ಎಂದರೆ, ಸಮುದ್ರದ ಸಂಪನ್ಮೂಲಗಳನ್ನು ಸತತ ಅಭಿವೃದ್ಧಿಗಾಗಿ ಬಳಸುವುದು. ಇದರ ಮುಖ್ಯ ಕ್ಷೇತ್ರಗಳು, ಸಾಗರ ವ್ಯಾಪಾರ, ಮೀನುಗಾರಿಕೆ, ಸಮುದ್ರದ ಖನಿಜಗಳು, ಕರಾವಳಿ ಪ್ರವಾಸೋದ್ಯಮ, ನವೀಕರಿಸಬಹುದಾದ ಸಮುದ್ರ ಇಂಧನ ಗಳಾಗಿವೆ.

Screenshot_3 ಋ

ನೀಲಿ ಆರ್ಥಿಕತೆಯ ಪ್ರಮುಖ ಭಾಗವಾಗಿಯೂ ಈ ಬಂದರು ನಿರ್ಮಾಣಗೊಳ್ಳುತ್ತಿದೆ. ಭಾರತದಲ್ಲಿ ಇನ್ನೂ ಕೆಲವು ಮೆಗಾ ಬಂದರುಗಳು ಅಭಿವೃದ್ಧಿಯಲ್ಲಿವೆ. ವಧವನ್ ಬಂದರು, ಎನಾಯಂ ಬಂದರು, ಪಾರ್ದೀಪ್ ಈ ಬಂದರುಗಳು ಭಾರತದ ಸಾಗರ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಬಂದರುಗಳು ಕೇವಲ ವ್ಯಾಪಾರ ಕೇಂದ್ರಗಳಲ್ಲ. ರಾಷ್ಟ್ರೀಯ ಭದ್ರತೆಯ ಕೇಂದ್ರಗಳೂ ಆಗಿವೆ. ಭಾರತೀಯ ಮಹಾಸಾಗರ ಪ್ರದೇಶದಲ್ಲಿ ಸಾಗರ ಭದ್ರತೆ ಅತ್ಯಂತ ಮಹತ್ವದ ವಿಷಯ. ಈ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರವಹಿಸುವುದು ಭಾರತೀಯ ನೌಕಾಸೇನೆ. ಈ ಬಂದರು ಸಾಗರ ಭದ್ರತಾ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

ತಿರುವನಂತಪುರಂ ಭವಿಷ್ಯದಲ್ಲಿ ಒಂದು ದೊಡ್ಡ ಲಾಜಿಸ್ಟಿಕ್ಸ್ ಕೇಂದ್ರವಾಗಬಹುದು. ಈ ಪ್ರದೇಶದಲ್ಲಿ, ಗೋದಾಮುಗಳು, ಕೈಗಾರಿಕಾ ವಲಯಗಳು, ವ್ಯಾಪಾರ ಕೇಂದ್ರಗಳು ಅಭಿವೃದ್ಧಿಯಾಗಬಹುದು. ಭಾರತದ ಕಂಟೇನರ್ ಸರಕುಗಳ ದೊಡ್ಡ ಭಾಗವನ್ನು ಇತರ ದೇಶಗಳ ಬಂದರುಗಳ ಮೂಲಕವೇ ಜಗತ್ತಿಗೆ ಕಳುಹಿಸಬೇಕಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಅತ್ಯಂತ ತುರ್ತಾಗಿ ಬೇಕಾಗಿದ್ದ ಮೂಲಸೌಕರ್ಯವೇ ಡೀಪ್-ವಾಟರ್ ಟ್ರಾನ್ಸ್‌ ಶಿಪ್‌ಮೆಂಟ್ ಪೋರ್ಟ್.

ಈ ಐತಿಹಾಸಿಕ ಅಗತ್ಯಕ್ಕೆ ಉತ್ತರವಾಗಿ ಉದಯಿಸಿದ ಬಂದರು ಎಂದರೆ, ವಿಳಿಂಜಂ ಅಂತರಾಷ್ಟ್ರೀಯ ಸೀ-ಏರ್‌ಪೋರ್ಟ್. ಇದು ಕೇವಲ ಬಂದರು ಮಾತ್ರವಲ್ಲ. ಭಾರತದ ಸಾಗರ ತಂತ್ರeನದ ಸಂಕೇತ, ಜಿಯೋ ಪೊಲಿಟಿಕಲ್ ಬದಲಾವಣೆಯ ಸೂಚನೆ, ಆರ್ಥಿಕ ಸ್ವಾವಲಂಬನೆಯ ಹೆಜ್ಜೆ, ಹಾಗೂ ಭಾರತೀಯ ಮಹಾಸಾಗರದಲ್ಲಿ ಭಾರತದ ಹೊಸ ಘೋಷಣೆ.

ಟ್ರಾನ್ಸ್‌ಶಿಪ್‌ಮೆಂಟ್ ಎಂದರೆ; ಒಂದು ದೊಡ್ಡ ಹಡಗಿನಿಂದ ಸರಕುಗಳನ್ನು ಇಳಿಸಿ, ಅವು ಗಳನ್ನು ಸಣ್ಣ ಹಡಗುಗಳಲ್ಲಿ ಬೇರೆ ಬೇರೆ ದೇಶಗಳಿಗೆ ಕಳುಹಿಸುವ ವ್ಯವಸ್ಥೆ. ಉದಾಹರಣೆಗೆ, ಅಮೆರಿಕದಿಂದ ದೊಡ್ಡ ಕಂಟೇನರ್ ಹಡಗು ಭಾರತಕ್ಕೆ ಬರುತ್ತದೆ. ಆದರೆ ಅದು ನೇರವಾಗಿ ಮಲೇಷ್ಯಾ, ಶ್ರೀಲಂಕಾ, ಆಫ್ರಿಕಾ, ಮಧ್ಯಪೂರ್ವ ಸೇರಿದಂತೆ ಎಡೆ ಹೋಗುವು ದಿಲ್ಲ. ಅದಕ್ಕೆ ಒಂದು ಕೇಂದ್ರ ಬಂದರು ಬೇಕಾಗುತ್ತದೆ.

ಅಲ್ಲಿ ಸರಕುಗಳನ್ನು ಪುನಃ ಹಂಚಲಾಗುತ್ತದೆ. ಈ ಕೇಂದ್ರವನ್ನು ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಎಂದು ಕರೆಯುತ್ತಾರೆ. ಭಾರತದ ಮೊದಲ ಸ್ವಾಭಾವಿಕ ಡೀಪ್-ವಾಟರ್ ಟ್ರಾನ್ಸ್‌ ಶಿಪ್‌ ಮೆಂಟ್ ಬಂದರು ಆಗಿದೆ. ಇದು ಮೂರು ಕಾರಣಗಳಿಂದ ವಿಶೇಷವಾಗಿದ್ದು...

  1. ಸಹಜವಾಗಿ ಆಳವಾದ ಸಮುದ್ರ: ಇದು ಬಹುತೇಕ ಎಲ್ಲ ಬಂದರುಗಳ ಪ್ರಮುಖ ಸಮಸ್ಯೆಯಾಗಿದೆ. ಅಗತ್ಯಕ್ಕೆ ಬೇಕಾದ ಆಳ ಸಿಗದೇ ಇರುವುದರಿಂದ, ಸಮುದ್ರದ ನೆಲವನ್ನು ಸರಿಯಾದ ಆಳಕ್ಕೆ ಅಗೆಯಬೇಕು (ಡ್ರೆಡ್ಜಿಂಗ್). ವಿಳಿಂಜಂನಲ್ಲಿ ಸಹಜವಾಗಿ 20 ಮೀಟರ್‌ ಗಿಂತ ಹೆಚ್ಚು ಆಳ ಇದೆ. ಇದು ವಿಶ್ವದ ದೊಡ್ಡ ಕಂಟೇನರ್ ಹಡಗುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡುವಂತದ್ದಾಗಿದೆ.
  2. ಅಂತಾರಾಷ್ಟ್ರೀಯ ಸಾಗರ ಮಾರ್ಗಕ್ಕೆ ಹತ್ತಿರ: ವಿಶ್ವದ ಪ್ರಮುಖ ಸಾಗರ ಮಾರ್ಗ ವಾದ ಈಸ್ಟ್-ವೆಸ್ಟ್ ಶಿಪ್ಪಿಂಗ್ ಲೇನ್ ವಿಳಿಂಜಂ ಬಂದರಿಗೆ ಕೇವಲ 10 ನಾಟಿಕಲ್ ಮೈಲು ದೂರದಲ್ಲಿದೆ. ಅಂದರೆ ಹಡಗುಗಳು ತಮ್ಮ ಬರುವಿಕೆಯ ಮಾರ್ಗದಿಂದ ಬಹಳ ದೂರ ತಿರುಗಬೇಕಾಗುವುದಿಲ್ಲ.
  3. ಮೆಗಾ ಕಂಟೇನರ್ ಹಡಗುಗಳಿಗೆ ಸೂಕ್ತ: ಇಂದು ವಿಶ್ವದಲ್ಲಿ 20000 TEU ಸಾಮರ್ಥ್ಯ ದ ಹಡಗುಗಳು ಓಡಾಡುತ್ತಿವೆ. ಅವುಗಳಿಗೆ ದೊಡ್ಡ ಬಂದರು ಬೇಕು. ಇಂತಹ ಸಂದರ್ಭ ದಲ್ಲಿ ವಿಳಿಂಜಂ ಅತ್ಯಂತ ಸೂಕ್ತವಾದ ಬಂದರು ಎನ್ನಬಹುದು. ಜೊತೆಗೆ, ಬಂದರು ಇರುವ ಸ್ಥಳವು ತಿರುವನಂತಪುರಂ ಹತ್ತಿರವಿದ್ದು, ಭಾರತದ ದಕ್ಷಿಣ ತುದಿಯ ಆಯಕಟ್ಟಿನ ಜಾಗದಲ್ಲಿದೆ.

ಅದಾನಿ ಪೋರ್ಟ್ ಆಂಡ್ ಸ್ಪೆಷಲ್ ಎಕಾನಾಮಿಕ್ ಝೋನ್ ಎಂಬ ಭಾರತೀಯ ಕಂಪನಿ ಯು ಈ ಬಂದರು ನಿರ್ಮಾಣದ ಹೊಣೆಗಾರಿಕೆ ಪಡೆದುಕೊಂಡಿತು. ಇದು ಭಾರತದ ಅತಿದೊಡ್ಡ ಖಾಸಗಿ ಬಂದರು ನಿರ್ಮಾಣ ಮತ್ತು ನಿರ್ವಹಣೆ ಸಂಸ್ಥೆಯಾಗಿದೆ. ಪಬ್ಲಿಕ್, ಪ್ರೈವೇಟ್ ಪಾಲುದಾರಿಕೆ ಮಾದರಿಯಲ್ಲಿ ಇದರ ನಿರ್ಮಾಣ ನಡೆಯುತ್ತಿದೆ. ಇದರಲ್ಲಿ ಸರ್ಕಾರ ಮತ್ತು ಖಾಸಗಿ ಕಂಪನಿಗಳು ಒಟ್ಟಾಗಿ ಯೋಜನೆ ನಡೆಸುತ್ತವೆ. ಕೇರಳ ಸರ್ಕಾರವು ಭೂಮಿ ಮತ್ತು ಮೂಲಸೌಕರ್ಯ ಒದಗಿಸಿದರೆ, ಅದಾನಿ ಪೋರ್ಟ್ ಕಂಪನಿಯು ಬಂದರು ನಿರ್ಮಾಣ ಮತ್ತು ಕಾರ್ಯಾಚರಣೆ ಹೊಣೆ ಹೊತ್ತಿದೆ.

ವಿಳಿಂಜಂ ಬಂದರು ಬಂದರು ಸಾಮರ್ಥ್ಯವು ಬಹುತೇಕ ಪ್ರತಿ ವರ್ಷ ಸುಮಾರು 1 ಮಿಲಿಯನ್ TEU ’ 6 ಮಿಲಿಯನ TEU (TEU ಎಂದರೆ, Twenty - foot Equivalent Unit, ಅಂದರೆ ಒಂದು ಸಾಮಾನ್ಯ ಕಂಟೇನರ್ ಎಂದರ್ಥ) ಸಾಮರ್ಥ್ಯದವರೆಗೆ ವಿಸ್ತರಿಸಬಹುದು. ಭಾರತದ ಸಾಗರ ಭವಿಷ್ಯವೆಂದೇ ಜಾಗತಿಕವಾಗಿ ಕರೆಯಬಹುದಾದ ವಿಳಿಂಜಂ ಬಂದರು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ, ಭಾರತವು ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಆಗಬಹುದು, ಸಾಗರ ವ್ಯಾಪಾರದ ವೆಚ್ಚ ಕಡಿಮೆ ಆಗಬಹುದು, ಭಾರತೀಯ ಬಂದರುಗಳ ಸ್ಪರ್ಧಾತ್ಮಕತೆ ಹೆಚ್ಚಬಹುದು, ಇದು ಭಾರತದ ಸಾಗರ ಆರ್ಥಿಕತೆಯ ಹೊಸ ಅಧ್ಯಾಯ.

ಇದೆಲ್ಲದರ ನಡುವೆ ವಿಳಿಂಜಂ ಬಂದರಿನ ಇಂಜಿನಿಯರಿಂಗ್ ಅದ್ಭುತವೆಂದೇ ಹೇಳಬಹು ದಾಗಿದೆ. ಸಮುದ್ರದ ಮೇಲೆ ಬಂದರು ಕಟ್ಟುವುದು ಸುಲಭವಲ್ಲ. ಇದು ಸಾಮಾನ್ಯ ಕಟ್ಟಡ ನಿರ್ಮಾಣವಲ್ಲ. ಇದು ಸಮುದ್ರದ ಸ್ವಭಾವದೊಂದಿಗೆ ಹೋರಾಟ ವಾಗಿದೆ. ವಿಶ್ವದ ಅನೇಕ ಮೆಗಾ ಬಂದರುಗಳ ನಿರ್ಮಾಣದಲ್ಲಿ ಸಾವಿರಾರು ಕೋಟಿ ರು. ವೆಚ್ಚವಾಗಿದೆ. ಆದರೆ ವಿಳಿಂಜಂ ಬಂದರಿನ ನಿರ್ಮಾಣದಲ್ಲಿ ಸಮುದ್ರದ ಅಲೆಗಳ ಶಕ್ತಿ, ಕರಾವಳಿ ಕ್ಷಯ (Coastal Erosion), ಬ್ರೇಕ್‌ವಾಟರ್ ನಿರ್ಮಾಣದಂತಹ ಮೂರು ಮುಖ್ಯ ಸವಾಲುಗಳು ಎದುರಾ ಗಿದ್ದು, ಇವುಗಳನ್ನು ಮೀರಿ ಇದು ನಿರ್ಮಾಣದ ಪೂರ್ಣತೆ ಕಾಣುವ ಕಾತುರತೆ ಯಲ್ಲಿದೆ.

ಈ ಬಂದರಿನ ಅತ್ಯಂತ ಪ್ರಮುಖ ಭಾಗವೆಂದರೆ ಬ್ರೇಕ್ ವಾಟರ್. ಬಂದರಿಗೆ ಬರುತ್ತಿರುವ ದೊಡ್ಡ ಅಲೆಗಳನ್ನು ತಡೆಯುವ ಕಲ್ಲಿನ ಗೋಡೆಗೆ ಬ್ರೇಕ್‌ವಾಟರ್ ಎನ್ನುತ್ತಾರೆ. ಸುಮಾರು 3 ಕಿಲೋಮೀಟರ್ ಉದ್ದದಷ್ಟು ಇಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ ಬಳಸುತ್ತಿರುವ ಕಲ್ಲುಗಳು ಕೆಲವು ಕಡೆ 25-30 ಟನ್ ತೂಕ ಹೊಂದಿವೆ. ಇದು ಭಾರತದ ಇತಿಹಾಸದ ಅತಿ ದೊಡ್ಡ ಬ್ರೇಕ್ ವಾಟರ್ ಯೋಜನೆಗಳಲ್ಲಿ ಒಂದು.

ಸಾಗರಮಾಲಾ ಯೋಜನೆ ಭಾರತ ಸರ್ಕಾರ ಆರಂಭಿಸಿದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ, ಬಂದರು ಅಭಿವೃದ್ಧಿ, ಸಾಗರ ಆರ್ಥಿಕತೆ, ಕರಾವಳಿ ಕೈಗಾರಿಕೆ ಇತ್ಯಾದಿ. ಈ ಯೋಜನೆಯಡಿಯಲ್ಲಿ 800ಕ್ಕೂ ಹೆಚ್ಚು ಯೋಜನೆಗಳು ಅಭಿವೃದ್ಧಿಯಲ್ಲಿವೆ. ಇದರ ಭಾಗವಾಗಿ, ಫೇಸ್ 1ರಲ್ಲಿ 1 ಮಿಲಿಯನ್ TEU ಸಾಮರ್ಥ್ಯ ಹಾಗೂ ಮೂಲ ಬ್ರೇಕ್‌ ವಾಟರ್ ನಿರ್ಮಾಣ.

ಫೇಸ್ 2ರಲ್ಲಿ ಸಾಮರ್ಥ್ಯ 3 ಮಿಲಿಯನ್ TEU ಮತ್ತು ಫೇಸ್ 3 ರಲ್ಲಿ 6 ಮಿಲಿಯನ್ TEU ಸಾಮರ್ಥ್ಯವಿರುವಂತೆ ಈ ಬಂದರು ಮೂರು ಹಂತಗಳಲ್ಲಿ ನಿರ್ಮಾಣವಾಗುತ್ತಿದೆ. ಲಾಜಿಸ್ಟಿಕ್ಸ್ ಹಬ್, ವಾಣಿಜ್ಯ ಕೇಂದ್ರ, ಕೈಗಾರಿಕಾ ವಲಯಗಳು ಬಹುಸ್ತರದಲ್ಲಿ ಅಭಿವೃದ್ಧಿ ಯಾಗಬಲ್ಲವು. ಸಾಗರ ವ್ಯಾಪಾರವೆಂದರೆ ಕೇವಲ ಹಡಗುಗಳ ವಿಷಯವಲ್ಲ. ಇದು ಒಂದು ದೊಡ್ಡ ಲಾಜಿಸ್ಟಿಕ್ಸ್ ವ್ಯವಸ್ಥೆಯಾಗಿದೆ. ಒಂದು ಕಂಟೇನರ್ ಬಂದರಿಗೆ ಬಂದ ನಂತರ, ಕಸ್ಟಮ್ಸ್ ಪ್ರಕ್ರಿಯೆ, ಗೋದಾಮುಗಳು, ರೈಲು ಸಂಪರ್ಕ, ರಸ್ತೆ ಸಂಪರ್ಕ, ಕೈಗಾರಿಕಾ ವಲಯ ಇವೆಲ್ಲವೂ ಅಗತ್ಯ. ಈ ವ್ಯವಸ್ಥೆಯನ್ನು ಬಂದರು ನೇತೃತ್ವದ ಅಭಿವೃದ್ಧಿ ಎಂದು ಕರೆಯು ತ್ತಾರೆ.

ಒಂದು ದೊಡ್ಡ ಬಂದರು ನೂರಾರು ಕೈಗಾರಿಕೆಗಳಿಗೆ ಕಾರಣವಾಗುತ್ತದೆ. ಈ ಬಂದರು ಅಭಿವೃದ್ಧಿಯಾದ ನಂತರ, ಸಾವಿರಾರು ನೇರ ಉದ್ಯೋಗಗಳು, ಲಕ್ಷಾಂತರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು. ಲಾಜಿಸ್ಟಿಕ್ಸ್, ಸಾರಿಗೆ, ವ್ಯಾಪಾರ ಕ್ಷೇತ್ರಗಳು ವೇಗವಾಗಿ ಬೆಳೆಯಬಹುದು.

ಭಾರತವು ಪ್ರಾಚೀನ ಕಾಲದಲ್ಲಿ ಸಾಗರ ವ್ಯಾಪಾರದಲ್ಲಿ ದೊಡ್ಡ ಶಕ್ತಿಯಾಗಿತ್ತು. ಚೋಳರ ಕಾಲದಲ್ಲಿ ಭಾರತೀಯ ನೌಕಾಪಡೆ ದಕ್ಷಿಣ ಪೂರ್ವ ಏಷ್ಯಾದವರೆಗೆ ಸಾಗಿತ್ತು. 21ನೇ ಶತಮಾನದಲ್ಲಿ ಭಾರತ ಮತ್ತೆ ಸಾಗರಶಕ್ತಿಯಾಗುವ ಕನಸು ಕಾಣುತ್ತಿದೆ. ಸಾಗರ ಯೋಜನೆ ಯು ಅಭಿವೃದ್ಧಿ ಭಾರತದ ಕನಸಿನ ಸಂಕೇತವಾಗಿದ್ದು, ಮುಂದಿನ ದಿನಗಳಲ್ಲಿ ವಿಳಿಂಜಂ ಬಂದರು ಸಂಪೂರ್ಣ ಅಭಿವೃದ್ಧಿಯಾದರೆ, ಇದು ದಕ್ಷಿಣ ಏಷ್ಯಾದ ಪ್ರಮುಖ ಟ್ರಾನ್ಸ್‌ಶಿಪ್‌ ಮೆಂಟ್ ಹಬ್, ಭಾರತೀಯ ಮಹಾಸಾಗರದ ಪ್ರಮುಖ ವ್ಯಾಪಾರ ಕೇಂದ್ರ, ಭಾರತದ ಸಾಗರ ಆರ್ಥಿಕತೆಯ ಪ್ರಮುಖ ಆಧಾರಸ್ತಂಭ ಆಗುವುದರಲ್ಲಿ ಅನುಮಾನವಿಲ್ಲ. ಸಮುದ್ರ ಎಂದರೆ ಕೇವಲ ನೀರಿನ ವ್ಯಾಪ್ತಿ ಅಲ್ಲ. ಅದು ವ್ಯಾಪಾರ, ಅದು ತಂತ್ರಜ್ಞಾನ, ಅದು ಜಿಯೋ ಪೊಲಿಟಿಕ್ಸ್, ಅದು ರಾಷ್ಟ್ರಗಳ ಭವಿಷ್ಯ.