ಒಂದೊಳ್ಳೆ ಮಾತು
ವಾರಣಾಸಿಯ ಗಂಗಾತೀರದಲ್ಲಿ ದೇವ ಸ್ವಾಮಿ ಎಂಬ ವೃದ್ಧ ತಪಸ್ವಿಯೊಬ್ಬನಿದ್ದನು. ಆತ ದೀರ್ಘ ಕಾಲದ ಕಠಿಣ ತಪಸ್ಸಿನಿಂದ ‘ಪರಕಾಯ ಪ್ರವೇಶ’ ಸೇರಿದಂತೆ ಅಪಾರ ಸಿದ್ಧಿಗಳನ್ನು ಗಳಿಸಿದ್ದನು. ಆದರೆ ವಯಸ್ಸಾದಂತೆ ಆತನ ಶರೀರ ನಡುಗತೊಡಗಿತು; ಕಣ್ಣುಗಳು ಮಂಕಾದವು, ಕಾಲುಗಳು ಸೋತವು. ಆ ಜರ್ಜರಿತ ವೃದ್ಧಾಪ್ಯದಲ್ಲಿ ಆತನಿಗೆ ತಾನು ಯೌವನದಲ್ಲಿದ್ದಾಗ ಕಳೆದುಕೊಂಡ ಭೋಗ- ಭಾಗ್ಯಗಳ ಮೇಲೆಯೇ ನಿರಂತರ ಗಮನ ಹರಿಯ ತೊಡಗಿತು.
ಅಷ್ಟೊಂದು ತಪಸ್ಸು ಮಾಡಿದ್ದರೂ, ಅಯ್ಯೋ, ಶರೀರದಲ್ಲಿ ಶಕ್ತಿಯಿದ್ದಾಗ ನಾನೇ ನನ್ನೂ ಅನುಭವಿಸ ಲಿಲ್ಲವಲ್ಲ ಎಂಬ ಯೌವನದ ಬಗೆಗಿನ ಅತೃಪ್ತಿ ಆತನನ್ನು ಕಾಡಲಾರಂಭಿಸಿತು. ಒಂದು ದಿನ ಆ ಗಂಗಾತೀರದ ಸುಂದರ ನಾದ ಯುವಕನೊಬ್ಬ ಅಕಾಲಿಕವಾಗಿ ಮರಣ ವನ್ನಪ್ಪಿದನು. ಆತನ ಸಂಬಂಧಿಕರು ಶವವನ್ನು ಚಿತೆಯ ಬಳಿ ತಂದು ರೋಧಿಸುತ್ತಿದ್ದರು. ಇದನ್ನು ಕಂಡ ವೃದ್ಧ ತಪಸ್ವಿಯ ಮನಸ್ಸಿನಲ್ಲಿ ಆಸೆ ಚಿಗುರಿತು.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 10: ಅತೀ ನಾಜೂಕಿನ ಮೂವರು ರಾಜಕನ್ಯೆಯರು
ನನ್ನ ಬಳಿ ಸಿದ್ಧಿಯಿದೆ; ಈ ನಶ್ವರ ಮುದಿದೇಹವನ್ನು ಬಿಟ್ಟು, ಆ ತೇಜಸ್ವಿ ಯುವಕನ ಶರೀರವನ್ನು ಪ್ರವೇಶಿಸಿದರೆ ಮತ್ತೆ ಯೌವನದ ಸುಖವನ್ನು ಅನುಭವಿಸಬಹುದು ಎಂದು ಭಾವಿಸಿ ದನು. ತಕ್ಷಣವೇ ಯೋಗಬಲ ದಿಂದ ತನ್ನ ವೃದ್ಧ ದೇಹವನ್ನು ಪೊರೆಯಂತೆ ತ್ಯಜಿಸಿ, ಆ ಮೃತ ಯುವಕನ ದೇಹವನ್ನು ಹೊಕ್ಕು ಎದ್ದು ಕುಳಿತನು! ಮಗ ಬದುಕಿದನೆಂದು ನೆರೆದವರೆಲ್ಲ ಸಂಭ್ರಮಿಸಿ ದರು. ಆದರೆ ಆ ಯುವದೇಹವನ್ನು ಪ್ರವೇಶಿಸಿದ ಕ್ಷಣದಿಂದಲೇ ಆತನಿಗೆ ಹೊಸ ಬಿಕ್ಕಟ್ಟು ಆರಂಭ ವಾಯಿತು. ಆ ಶರೀರದಲ್ಲಿದ್ದದ್ದು ಪ್ರಚಂಡ ಯೌವನದ ರಕ್ತ, ಕಣ್ಣುಕೋರೈಸುವ ಇಂದ್ರಿಯ ಗಳ ತೀವ್ರತೆ. ಆದರೆ ಆ ತಲೆಯಲ್ಲಿದ್ದದ್ದು ಹತ್ತಾರು ವರ್ಷಗಳ ತಪಸ್ಸು, ತ್ಯಾಗ ಮತ್ತು ಧ್ಯಾನದಿಂದ ಮಾಗಿದ ವೃದ್ಧನ ಜ್ಞಾನ!
ಆ ಯುವ ಶರೀರವು ಭೋಗದ ಕಡೆಗೆ ಎಳೆಯುತ್ತಿದ್ದರೆ, ಅಂತರಂಗದ ಅನುಭವವು ಇವೆಲ್ಲವೂ ಕ್ಷಣಿಕ, ನಶ್ವರ ಎಂದು ಎಚ್ಚರಿಸುತ್ತಿತ್ತು. ಇತ್ತ ಯುವಕ ನಂತೆ ಲೌಕಿಕ ಸುಖವನ್ನು ಮನಸಾರೆ ಅನುಭವಿ ಸಲೂ ಆಗದೆ, ಅತ್ತ ವೃದ್ಧ ತಪಸ್ವಿಯಂತೆ ನಿರ್ಲಿಪ್ತವಾಗಿ ಏಕಾಂತಕ್ಕೆ ಜಾರಲೂ ಆಗದೆ ಆತ ತನ್ನ ನಲುಗಿ ಹೋದನು. ತಾರುಣ್ಯದ ದೇಹವಿದ್ದರೂ ವೃದ್ಧಾಪ್ಯದ ವಿವೇಕ ಆತನನ್ನು ಕಟ್ಟಿಹಾಕಿತ್ತು.
ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾ ದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆ ತಪಸ್ವಿಯ ಈ ಸ್ಥಿತಿಯಲ್ಲಿ ನಿಜವಾದ ಸೋಲು ಯಾರಿಗೆ? ದೇಹದ ಯೌವನಕ್ಕೋ ಅಥವಾ ಮನಸ್ಸಿನ ಜ್ಞಾನಕ್ಕೋ? ಬದುಕಿಗೆ ಇವೆರಡರಲ್ಲಿ ಯಾವುದು ಶ್ರೇಷ್ಠ? ವಿಕ್ರಮಾದಿತ್ಯನು ಉತ್ತರಿಸು ತ್ತಾನೆ: ಇಲ್ಲಿ ಸೋತದ್ದು ಯೌವನದ ಭ್ರಮೆ; ಗೆದ್ದದ್ದು ಜ್ಞಾನದ ಅನುಭವ!
ತಾರುಣ್ಯವೆಂಬುದು ಕೇವಲ ಕಾಲದ ಒಂದು ಹಂತ ಮತ್ತು ಮಾಂಸಖಂಡಗಳ ತಾತ್ಕಾಲಿಕ ಶಕ್ತಿಯಷ್ಟೇ. ಆದರೆ ಮನುಷ್ಯನಿಗೆ ಬದುಕಿನ ನಿಜವಾದ ನೆಲೆ ಸಿಗುವುದು ಅನುಭವದಿಂದ ಮಾಗಿದ ವಿವೇಕ ದಲ್ಲಿ. ಯೌವನದ ದೇಹ ಸಿಕ್ಕರೂ ಆತನಿಗೆ ಶಾಂತಿ ಸಿಗಲಿಲ್ಲ; ಏಕೆಂದರೆ ಜ್ಞಾನದ ಕಣ್ಣು ತೆರೆದ ಮೇಲೆ ಕ್ಷಣಿಕ ಆಕರ್ಷಣೆಗಳು ಸಪ್ಪೆಯಾಗಿ ಬಿಡುತ್ತವೆ. ಬದುಕಿಗೆ ಹೊರಗಿನ ಯೌವನಕ್ಕಿಂತ ಅಂತರಂಗದ ಜ್ಞಾನ ಮತ್ತು ತೃಪ್ತಿಯೇ ಪರ ಮೋಚ್ಛ ಆಸ್ತಿ. ನಾವು ವಯಸ್ಸಾಗುತ್ತಿದ್ದಂತೆ ಅಥವಾ ಬದಲಾ ಗುತ್ತಿರುವ ಕಾಲದಲ್ಲಿ, ಕಳೆದು ಹೋದ ದಿನಗಳ ಬಗ್ಗೆ, ಬಾಹ್ಯ ಸೌಂದರ್ಯದ ಬಗ್ಗೆ ಅಥವಾ ಕೈತಪ್ಪಿದ ಆಡಂಬರಗಳ ಬಗ್ಗೆ ಕೊರಗುತ್ತಿರುತ್ತೇವೆ. ಆದರೆ ವಯಸ್ಸಾಗುವುದು ಎಂದರೆ ಸೋಲಲ್ಲ; ಅದು ಬದುಕಿನ ನೈಜ ಪಾಠಗಳನ್ನು ಕಲಿತು ಮಾಗುವ ಪ್ರಕ್ರಿಯೆ.
ಹೊರಗಿನ ಚರ್ಮದ ಸುಕ್ಕುಗಳಿಗಿಂತ ಮುಖ್ಯ ವಾದದ್ದು ಒಳಗಿನ ಮನಸ್ಸು ಎಷ್ಟು ಪ್ರಬುದ್ಧ ವಾಗಿದೆ ಎಂಬುದು. ಅತಿರೇಕದ ಆಸೆಗಳು ನಮ್ಮನ್ನು ಅತೃಪ್ತಿಯ ಸುಳಿಗೆ ತಳ್ಳುತ್ತವೆ. ಬದುಕಿನ ಪ್ರತಿಯೊಂದು ಹಂತದಲ್ಲೂ ದೊರಕುವ ಅನುಭವವನ್ನು ಗೌರವಿಸಿ, ಅಂತರಂಗದ ವಿವೇಕ ದಲ್ಲಿ ಶಾಂತಿ ಕಂಡುಕೊಳ್ಳುವುದೇ ನಿಜ ವಾದ ಸಾರ್ಥಕ ಬದುಕು. ಆದ್ದರಿಂದ ಬದುಕಿ ರುವಷ್ಟೂ ದಿನ ಕಳೆದುಕೊಂಡದ್ದಕ್ಕಾಗಿ ಕೊರಗದೆ ಬದುಕಿನ ಅನುಭವಗಳು ಕೊಟ್ಟ ಪಾಠಗಳನ್ನು ಸ್ವೀಕರಿಸಿ ವಿವೇಕಿಗಳಾಗೋಣ.