ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ವಿರಾಟ್‌ ಕೊಹ್ಲಿ- ಡಕ್‌ ಡಕ್‌ ಕರ್‌ ನೇ ಲಗಾ

‘ಕಾಂತಾರ’ ಚಿತ್ರದ ಯಶಸ್ಸಿನ ನಂತರ ಚಿತ್ರಮಂದಿರಗಳಲ್ಲಿ ಯಾವ ಚಿತ್ರವೂ ಸದ್ದು ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಸರಿಯಾದ ಯಾವ ಸಿನಿಮಾಗಳೂ ಬಿಡುಗಡೆ ಆಗುತ್ತಿಲ್ಲ ಎಂದರೂ ತಪ್ಪಿಲ್ಲ. ದೊಡ್ಡ ಹೀರೋಗಳ ಸಿನಿಮಾಗಳ ನಿರ್ಮಾಪಕರು ಸುಮ್ಮನೇ ಕಾಂಪಿಟೇಷನ್ ಯಾಕೆ ಅಂತ ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೆ ಹಾಕಿದರೆ, ಸಣ್ಣ ಪುಟ್ಟ ಚಿತ್ರಗಳ ನಿರ್ಮಾಪಕರು, ‘ಅವರ ಮುಂದೆ ನಾವು ಕಾಂಪಿಟೇಷನ್ ಮಾಡೋಕಾಗುತ್ತಾ?’ ಅಂತ ಸುಮ್ಮನಾಗಿದ್ದಾರೆ.

ತುಂಟರಗಾಳಿ

ಸಿನಿಗನ್ನಡ

‘ಕಾಂತಾರ’ ಚಿತ್ರದ ಯಶಸ್ಸಿನ ನಂತರ ಚಿತ್ರಮಂದಿರಗಳಲ್ಲಿ ಯಾವ ಚಿತ್ರವೂ ಸದ್ದು ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಸರಿಯಾದ ಯಾವ ಸಿನಿಮಾಗಳೂ ಬಿಡುಗಡೆ ಆಗುತ್ತಿಲ್ಲ ಎಂದರೂ ತಪ್ಪಿಲ್ಲ. ದೊಡ್ಡ ಹೀರೋಗಳ ಸಿನಿಮಾಗಳ ನಿರ್ಮಾಪಕರು ಸುಮ್ಮನೇ ಕಾಂಪಿಟೇಷನ್ ಯಾಕೆ ಅಂತ ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೆ ಹಾಕಿದರೆ, ಸಣ್ಣ ಪುಟ್ಟ ಚಿತ್ರಗಳ ನಿರ್ಮಾಪಕರು, ‘ಅವರ ಮುಂದೆ ನಾವು ಕಾಂಪಿಟೇಷನ್ ಮಾಡೋಕಾಗುತ್ತಾ?’ ಅಂತ ಸುಮ್ಮನಾಗಿದ್ದಾರೆ.

ಹಾಗಾಗಿ ಎಂದಿನಂತೆ ಪರಭಾಷಾ ಚಿತ್ರಗಳ ಅಬ್ಬರ ಮುಂದುವರಿಯಲು ಇದು ಸಹಕಾರಿ ಆಗಿದೆ. ಪ್ರೇಮ್ ನಿರ್ದೇಶನ, ಧ್ರುವ ಸರ್ಜಾ ಅಭಿನಯದ ‘ಕೆಡಿ’, ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರ ಗಳಿಗಾಗಿ ಕನ್ನಡ ಪ್ರೇಕ್ಷಕ ಕಾದು ಕುಳಿತಿದ್ದಾನೆ. ಆದರೆ ಅವುಗಳ ಬಿಡುಗಡೆಯ ಕ್ರೇಜ್ ಇನ್ನೂ ಶುರು ಆಗಿಲ್ಲ.

ಇನ್ನು ದರ್ಶನ್ ಅವರಿಗೆ ಜೈಲಿಂದ ಬಿಡುಗಡೆ ಯಾವಾಗ ಅಂತ ಗೊತ್ತಿಲ್ಲದಿದ್ದರೂ ಅವರ ‘ಡೆವಿಲ್’ ಕೂಡಾ ಬಿಡುಗಡೆಯ ಹೊಸ್ತಿಲಲ್ಲಿದೆ. ಆದರೆ ದರ್ಶನ್ ಅವರದ್ದು ಏನಿದ್ದರೂ ಅವರೇ ಹೇಳಿಕೊಳ್ಳು ವಂತೆ ಕೇವಲ ಕರ್ನಾಟಕಕ್ಕೆ ಮೀಸಲಾದ ಚಿತ್ರ. ಹಾಗಾಗಿ ಅದು ನಾಡಿನಿಂದ ಹೊರಗೆ ಸದ್ದು ಮಾಡೋ ಸಾಧ್ಯತೆಗಳಿಲ್ಲ.

ಇದನ್ನೂ ಓದಿ:

ಆದರೆ ‘ಕೆಡಿ’ ಮತ್ತು ‘ಮಾರ್ಕ್’ ಪರಭಾಷೆಯಲ್ಲೂ ಅಬ್ಬರಿಸುವ ಉತ್ಸಾಹ ತೋರಿಸುತ್ತಿವೆ. ಒಟ್ಟಾರೆ, ‘ಕಾಂತಾರ’ ನಂತರ ಬರುವ ಉಳಿದ ಚಿತ್ರಗಳೂ ಕನ್ನಡ ನಾಡಿನಿಂದ ಹೊರಗೆ ಗಪೆಟ್ಟಿಗೆ ದೋಚು ತ್ತವೆ ಅನ್ನೋ ನಂಬಿಕೆಯಲ್ಲಿ ಕನ್ನಡ ಪ್ರೇಕ್ಷಕ ಕಾಯ್ತಾ ಇzನೆ. ಅವನ ನಂಬಿಕೆ ಎಷ್ಟರ ಮಟ್ಟಿಗೆ ನಿಜ ಆಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರ ಹೇಳಬೇಕು.

ಲೂಸ್‌ ಟಾಕ್‌ -ವಿರಾಟ್‌ ಕೊಹ್ಲಿ

ಏನ್ರೀ, ಎರಡು ಮ್ಯಾಚಲ್ಲಿ ಸೊನ್ನೆ ಸುತ್ತಿಬಿಟ್ಟಿದ್ರಿ. ರಿಟೈರ್ ಆಗೋಕೆ ಅಂತ ರೆಡಿ ಆಗಿ ಬಂದಿದ್ರಾ?

- ರೀ, ಹಂಗೆ ಸುಲಭಕ್ಕೆ ಟೈರ್ಡ್, ರಿಟೈರ್ಡ್ ಆಗಲ್ಲ ನಾನು. ಬಲವಂತವಾಗಿ ರಿಟೈರ್ ಮಾಡಿಸಿದ್ರೆ ಅದು ರಿಟೈರ್ಡ್ ‘ಹರ್ಟ್’ ಆಗುತ್ತೆ ಅಷ್ಟೇ.

ಎರಡು ಸೊನ್ನೆ ಸುತ್ತಿದ ಮೇಲೆ, ಅಂತೂ ಕೊನೇ ಮ್ಯಾಚಲ್ಲಿ ಆಡಿಬಿಟ್ರಿ

- ಸೀರೀಸ್ ಕೊನೆ ಮ್ಯಾಚು ಅಂತ ಹೇಳ್ರಿ. ಕೊನೇ ಮ್ಯಾಚು ಅಂದ್ರೆ ಮತ್ತೆ ರಿಟೈರ್ ಆಗಿದ್ದೀನಿ ಅಂತ ಅಂದ್ಕೊತಾರೆ ಜನ

ಸರಿ, ಸರಿ, ಆದ್ರೂ ನಿಮ್ಮ ವಿರುದ್ಧ ಪಿತೂರಿ ನಡೀತಾ ಇದೆ ಅಂತ ಹೇಳ್ತಾ ಇದ್ದಾರಲ್ಲ. ನಿಜನಾ?

- ಇದ್ರೂ ಇರಬಹುದು. ನನ್ನ ಒಳ್ಳೆ ಆಟ ನೋಡಿ ಸಹಿಸೋಕಾಗದೆ, ಕೊಳ್ಳೇಗಾಲಕ್ಕೆ ಹೋಗಿ ಮಾಟ ಮಾಡಿಸೋ ಪ್ರಯತ್ನ ಮಾಡಿದ್ರೂ ಮಾಡಿರಬಹುದು.

ನೇರವಾಗಿ ಕೇಳ್ತೀನಿ, ಗಂಭೀರ್ ನಿಮಗೆ ಅಡ್ಡಗಾಲು ಹಾಕ್ತಾ ಇದ್ದಾರಾ?

- ನಿಮಗೇನ್ ಗೊತ್ತಿಲ್ವ. ಹಳೇ ಕಾಲದಿಂದ ಮೊನ್ನೆಯ ಐಪಿಎಲ್ ವರೆಗೂ ಆವಯ್ಯ ನಂಜೊತೆ ಗಂಭೀರವಾಗಿ ಇದ್ದಿದ್ದು ಯಾವಾಗಾದ್ರೂ ನೋಡಿದ್ದೀರಾ?

ಸರಿ, ಮೊನ್ನೆ ಎರಡು ಸೊನ್ನೆ ಸುತ್ತಿದ ಮೇಲೆ, ಮೂರನೇ ಮ್ಯಾಚಲ್ಲಿ ಆಡೋಕೆ ಬರುವಾಗ ಏನನ್ನಿಸ್ತಾ ಇತ್ತು?

- ಎದೆಯಲ್ಲಿ ‘ಡಕ್’ ‘ಡಕ್’ ಕರ್ ನೇ ಲಗಾ ಅಂತ ಹಾಡು ಕೇಳಿಸ್ತಾ ಇತ್ತು.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಮತ್ತು ಖೇಮುಶ್ರೀ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದ್ ದಿನ ಸರಿ ಇದ್ರೆ ಒಂದ್ ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡೈವೋರ್ಸ್‌ಗೆ ಅಪ್ಲೈ ಮಾಡೋದು ಅಂತ ತೀರ್ಮಾನ ಮಾಡಿದ್ರು. ಹಂಗೇ ಮಾಡಿದ್ರು. ಆದರೆ ಜq ತುಂಬಾ ಸಂಭಾವಿತರು. ಹಾಗಾಗಿ ಜತೆಯಾಗಿ ಬದು ಕೋಕೆ ಇಬ್ಬರಿಗೂ ಒಳ್ಳೆ ಮಾತಿನಲ್ಲಿ ಸಲಹೆ ನೀಡಿದ್ರು. ಆದರೆ ನೋ ಯೂಸ್; ಖೇಮು, ಖೇಮುಶ್ರೀ ಇಬ್ರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜಡ್ಜ್‌ ಇವರಿಬ್ಬರಿಗೂ ಡೈವೋರ್ಸ್ ಕೊಡೋಕೆ ಅನುಮತಿ ಕೊಟ್ರು, ಈಗ ವಿಷಯ ಜೀವನಾಂಶಕ್ಕೆ ಬಂತು. ಖೇಮುಶ್ರೀ “ನಂಗೆ ತಿಂಗಳಿಗೆ 20 ಸಾವಿರ ರುಪಾಯಿ ಜೀವನಾಂಶ ಬೇಕು" ಅಂತ ಪಟ್ಟು ಹಿಡಿದು ಕೂತಳು.

ಖೇಮು “ನನ್ ಕೈಲಿ ಸಾಧ್ಯಾನೇ ಇಲ್ಲ" ಅಂತ ಕೂತ. ಕೊನೆಗೆ ಖೇಮುನ ಒಟ್ಟಾರೆ ಇನ್‌ಕಮ, ಖೇಮುಶ್ರೀಯ ಅವಶ್ಯಕತೆ ಎಲ್ಲವನ್ನೂ ಪರಿಶೀಲಿಸಿದ ಜq ಹೀಗೆ ತೀರ್ಪು ಕೊಟ್ಟರು: “ಎಲ್ಲ ದಾಖಲೆ ಗಳನ್ನು ನೋಡಿ, ಖೇಮುಶ್ರೀಯ ಪರಿಸ್ಥಿತಿಯನ್ನು ಗಮನಿಸಿ ಆಕೆಗೆ ಪ್ರತಿ ತಿಂಗಳು 20 ಸಾವಿರ ರುಪಾಯಿಗಳ ಜೀವನಾಂಶ ಕೊಡಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ".

ಅದನ್ನು ಕೇಳಿದ ಖೇಮು ಫುಲ್ ಖುಷಿಯಾಗಿ ಹೇಳಿದ “ನಿಮ್ದು ಭಾಳಾ ದೊಡ್ ಮನಸು ಸ್ವಾಮಿ, ಸಾಧ್ಯ ಆದ್ರೆ ಅವಳಿಗೆ ನಾನೂ ಆವಾಗಾವಾಗ ಅಲ್ಪ ಸ್ವಲ್ಪ ದುಡ್ ಕೊಡೋಕೆ ಟ್ರೈ ಮಾಡ್ತೀನಿ".

ಲೈನ್‌ಮ್ಯಾನ್

ಫ್ರಿಜ್‌ನಲ್ಲಿ ಡೆಡ್ ಬಾಡಿ ಇಡೋ ಗಂಡ ಹೆಂಡತಿಯರ ಯುದ್ಧ

- ಶೀತಲ ಸಮರ

ಹಳೆ ಗಾದೆ: ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ

- ಹೊಸಗಾದೆ: ಗಂಡ ಹೆಂಡಿರ ಜಗಳ ಕೊಂದು ಮಲಗಿಸುವ ತನಕ

ಕೊಂದು ಫ್ರಿಜ್‌ನಲ್ಲಿ ಇಡುವ ಇವರಿಬ್ಬರ ನಡುವಿನ ಯುದ್ಧ

- ಕೋಲ್ಡ್ ವಾರ್

ಈ ರೀತಿಯ ಕೊಲೆಗಳಿಗೆ ಹೆಸರು

- ಕೋಲ್ಡ್ ಬ್ಲಡೆಡ್ ಮರ್ಡರ್

ಕಲಿಯುಗದ ಜ್ಞಾನೋದಯ

- ಅರ್ಧ ರಾತ್ರಿಯಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಹೋದವನು- ಬುದ್ಧ

- ಚಾನ್ಸ್ ಸಿಕ್ಕರೂ ಹೋಗದವನು- ಬುದ್ದು

ಲೈಫಲ್ಲಿ ಏನೂ ಸಾಧನೆ ಮಾಡಿರದ ತಮ್ಮ ಮಕ್ಕಳನ್ನ ಬಾಲಿವುಡ್ ಮಂದಿ ಹೆಂಗೆ ಬಯ್ತಾರೆ?

- ಆ ಹೀರೋನ ನೋಡಿ ಕಲಿತುಕೋ, ನಿನ್ ವಯಸ್ಸಿಗೆ ಮೂರ್ ಮೂರ್ ಮದ್ವೆ ಆಗಿದ್ದ ಅವ್ನು

ಹಂಗಾದ್ರೆ ಸಲ್ಮಾನ್ ಖಾನ್ ಕಥೆ?

- ಅವ್ನಿಗೆ ಅವ್ನ್ ಅಪ್ಪ-ಅಮ್ಮನೇ ಬಯ್ತಾರೆ: ನಿನ್ ಜೊತೆಗಿದ್ದ ‘ಹುಡಿಗೀರಿಗೆ’ ಮದ್ವೆ ಆಗಿ ಮಕ್ಕಳಾಯ್ತು, ನಿಂದ್ಯಾವಾಗ್ಲೋ?

ಕಿವಿ ಚುಚ್ಚುವವರ ಕೆಲಸಕ್ಕೆ ಏನಂತಾರೆ?

- ಇಯರ್ ರಿಂಗ್ ಏಯ್ಡ್‌

ಡಿಕ್ಷ್‌ನರಿಗೆ ಇನ್ನೊಂದು ಹೆಸರು

- ‘ಅರ್ಥ’ ಶಾಸ್ತ್ರ

ಅಮೆರಿಕಕ್ಕೆ ಸಂಬಂಧಪಟ್ಟ ಸುದ್ದಿ

- ‘ಸ್ಟೇಟ್ಸ್’ ಲೆವೆಲ್ ಸುದ್ದಿ

ಹರಿ ಪರಾಕ್‌

View all posts by this author