ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghav Sharma Nidle Column: ಪಾಸ್ವಾನ್‌ ಭದ್ರಕೋಟೆಯಲ್ಲಿ ಪರಿವರ್ತನೆಗೆ ಮತವೇ ?

ಇಲ್ಲಿ ಯುವಕರನ್ನು ನಿರುದ್ಯೋಗ ಬಾಧಿಸುತ್ತಿದ್ದರೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಕರ್ಯ ಗಳಿಂದ ಜನತೆ ಈಗಲೂ ವಂಚಿತರಾಗಿದ್ದಾರೆ. ಸರಿಯಾದ ಆಸ್ಪತ್ರೆಗಳಿಲ್ಲದೆ, ಎಲ್ಲದಕ್ಕೂ ಪಟನಾವನ್ನೇ ಅವಲಂಬಿಸಬೇಕಾದ ದುಸ್ಥಿತಿಯಿದೆ. ಹಾಜಿಪುರ ವೈಶಾಲಿ ಜಿಗೆ ಒಳಪಟ್ಟಿದ್ದರೂ, ಜಿಲ್ಲಾ ಕೇಂದ್ರ ಹಾಜಿಪುರದ ಇದೆ. ‘ಎಲ್‌ಜೆಪಿ’ ಪಕ್ಷದ ಸ್ಥಾಪಕ ದಿ.ರಾಮ್ ವಿಲಾಸ್ ಪಾಸ್ವಾನ್ ಅವರ ಕರ್ಮಭೂಮಿ ಹಾಜಿಪುರ.

ಗಾಂಧಿ-ಬುದ್ಧ-ಮಹಾವೀರ ನಡೆದಾಡಿದ ರಾಜ್ಯ ಬಿಹಾರ: ಇಲ್ಲಿನ ಜನರು ಈಗ ಬಯಸುತ್ತಿರುವುದಾದರೂ ಏನನ್ನು?

ಬಿಹಾರ ರಾಜಧಾನಿ ಪಟನಾದಿಂದ ಪಕ್ಕದ ವೈಶಾಲಿ ಜಿಲ್ಲೆಯ ಹಾಜಿಪುರಕ್ಕೆ ಹೋಗಬೇಕೆಂದರೆ ೬ ಕಿಮೀ ಉದ್ದದ ಗಾಂಧಿ ಸೇತು ದಾಟಿಯೇ ಹೋಗಬೇಕು. ಉತ್ತರ ಮತ್ತು ದಕ್ಷಿಣ ಬಿಹಾರ ಸಂಪರ್ಕಿಸುವ ಮಹತ್ವದ ಸೇತುವೆ ಇದು. ಕೆಲವೊಮ್ಮೆ ಟ್ರಾಫಿಕ್ ಹೆಚ್ಚಾದರೆ ಗಂಟೆಗಟ್ಟಲೆ ವಾಹನಗಳು ಸೇತುವೆ ಮೇಲೆಯೇ ನಿಂತಿರಬೇಕಾಗುತ್ತದೆ.

ಆದರೆ, ಈಗ ಪಟನಾ ಸುಗಮ ಸಂಚಾರಕ್ಕಾಗಿ ಹೊಸದಾಗಿ ಜಯಪ್ರಕಾಶ ನಾರಾಯಣ (ಜೆಪಿ) ರೈಲ್-ರಸ್ತೆ ಸೇತುವೆ ನಿರ್ಮಾಣಗೊಂಡಿದ್ದು, ಹಾಜಿಪುರಕ್ಕೆ ಇದರ ಮೂಲಕವೂ ತೆರಳಬಹುದಾಗಿದೆ. ಇದು ಭಾರತದ ಎರಡನೇ ಅತಿ ಉದ್ದದ (೪.೫ ಕಿಮೀ) ರೈಲು-ಕಮ್-ರೋಡ್ ಸೇತುವೆಯಾಗಿದೆ. ‌

ರೈಲ್ವೇ ಬ್ರಿಜ್ 2016ರಲ್ಲಿ ಉದ್ಘಾಟನೆಗೊಂಡಿದ್ದರೆ, 2025ರ ಏಪ್ರಿಲ್‌ನಲ್ಲಿ ರಸ್ತೆ ಸೇತುವೆ ಲೋಕಾ ರ್ಪಣೆಗೊಂಡಿದೆ. ಪಟನಾದಲ್ಲಿ ಮೆಟ್ರೋ ಕಾಮಗಾರಿ ಕೂಡ ಭರದಿಂದ ಸಾಗುತ್ತಿದ್ದು, ಬದಲಾವಣೆಗೆ ರಾಜ್ಯ ತೆರೆದುಕೊಂಡಿದೆ. ಗಂಗಾ ನದಿ ದಡದ ಮೆರೈನ್ ಡ್ರೈವ್‌ನಲ್ಲಿ ಸಂಜೆ ವೇಳೆ ಪಟನಾ ನಿವಾಸಿ ಗಳು ವಿಹಾರಕ್ಕೆ ಬರುತ್ತಿದ್ದಾರೆ.

ರಾತ್ರಿ ೧೦ರ ನಂತರವೂ ಪಟನಾ ಜನರು ನಿರಾತಂಕವಾಗಿ ಓಡಾಡುತ್ತಿದ್ದಾರೆ. ೨೦ ವರ್ಷಗಳ ಹಿಂದೆ ಇಂಥ ದೃಶ್ಯ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಪಟನಾದ ಬನ್ಸಿ ವಿಹಾರ್ ಸೌತ್ ಇಂಡಿಯನ್ ಹೊಟೇಲ್‌ನಲ್ಲಿ ‘ವಿಶ್ವವಾಣಿ’ ಜತೆ ಮಾತನಾಡಿದ ಎಂಜಿನಿಯರ್ ರಾಕೇಶ್ ಕುಮಾರ್, ಎನ್‌ಡಿಎ ಮೈತ್ರಿಕೂಟವೇ ಇಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ತಮ್ಮ ಆಶಯಕ್ಕೆ ಈ ಮೇಲಿನ ಅಂಶಗಳನ್ನೇ ಕಾರಣವಾಗಿ ನೀಡಿದರು. ಅಲ್ಲಿ ಮಾತುಕತೆ ಮುಗಿಸಿ, ಜೆಪಿ ಸೇತು ದಾಟಿ ಹಾಜಿಪುರಕ್ಕೆ ತೆರಳುತ್ತಿದ್ದಂತೆ ಮತ್ತದೆ ಹಳೆ ಬಿಹಾರವೇ ಕಣ್ಣ ಮುಂದೆ ಬಂದಂತಾಯಿತು.

ಇದನ್ನೂ ಓದಿ: Raghav Sharma Nidle Column: ಬಿಹಾರ ಗದ್ದುಗೆ ಮೇಲೆ ಯಾದವ- ಮುಸ್ಲಿಂ ಕಣ್ಣು

ಇಲ್ಲಿ ಯುವಕರನ್ನು ನಿರುದ್ಯೋಗ ಬಾಧಿಸುತ್ತಿದ್ದರೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಕರ್ಯ ಗಳಿಂದ ಜನತೆ ಈಗಲೂ ವಂಚಿತರಾಗಿದ್ದಾರೆ. ಸರಿಯಾದ ಆಸ್ಪತ್ರೆಗಳಿಲ್ಲದೆ, ಎಲ್ಲದಕ್ಕೂ ಪಟನಾ ವನ್ನೇ ಅವಲಂಬಿಸಬೇಕಾದ ದುಸ್ಥಿತಿಯಿದೆ. ಹಾಜಿಪುರ ವೈಶಾಲಿ ಜಿಗೆ ಒಳಪಟ್ಟಿದ್ದರೂ, ಜಿಲ್ಲಾ ಕೇಂದ್ರ ಹಾಜಿಪುರದ ಇದೆ. ‘ಎಲ್‌ಜೆಪಿ’ ಪಕ್ಷದ ಸ್ಥಾಪಕ ದಿ.ರಾಮ್ ವಿಲಾಸ್ ಪಾಸ್ವಾನ್ ಅವರ ಕರ್ಮಭೂಮಿ ಹಾಜಿಪುರ. ಇಲ್ಲಿಂದ ೯ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಪಾಸ್ವಾನ್, ಬಹುಪಾಲು ಸರಕಾರಗಳಲ್ಲಿ ಕೇಂದ್ರ ಮಂತ್ರಿಯಾಗಿದ್ದರು.

ಈಗ ಪುತ್ರ ಚಿರಾಗ್ ಪಾಸ್ವಾನ್ ಇದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಮಂತ್ರಿ ಯಾಗಿದ್ದಾರೆ. 2019ರಲ್ಲಿ ರಾಮ್ ವಿಲಾಸ್ ಸೋದರ ಪಶುಪತಿನಾತ್ ಪರಸ್ ಇದೇ ಕ್ಷೇತ್ರದಿಂದ ಸಂಸದರಾಗಿದ್ದರು. ಹಾಗಾಗಿ ಇದು ಪಾಸ್ವಾನ್ ಕುಟುಂಬದ ಭದ್ರಕೋಟೆ. ರಾಮ್ ವಿಲಾಸ್ ನಿಧನದ ನಂತರ ಪಶುಪತಿನಾಥ್ ಮತ್ತು ಚಿರಾಗ್ ಪಾಸ್ವಾನ್ ನಡುವೆ ಪಕ್ಷ ಇಬ್ಭಾಗಗೊಂಡಿತು.

ಅಸಮಾಧಾನದ ಧ್ವನಿ: ಮೋದಿ ಜಿ ತಮ್ಮ ಹನುಮಾನ್ ‘ಚಿರಾಗ್ ಪಾಸ್ವಾನ್’ ಪ್ರತಿನಿಧಿಸುವ ಹಾಜಿಪುರ ಪಟ್ಟಣ ಹೇಗಿದೆ ಎಂಬುದನ್ನು ನೋಡಲು ಒಮ್ಮೆ ಬರಬೇಕು ಎಂದು ಮಾತಿಗಿಳಿದ ಮನೋಜ್ ಕುಮಾರ್ ಕುಶ್ವಾಹ, ಹಾಜಿಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅವಧೇಶ್ ಕುಮಾರ್ ಸಿಂಗ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.

ನಿತೀಶ್-ಮೋದಿ ಬಗ್ಗೆ ನಮಗೆ ಖುಷಿಯಿದೆ, ಆದರೆ ಅವಧೇಶ್ ಸಿಂಗ್ ಕೆಲಸ ಮಾಡುವುದಿಲ್ಲ. ಜೋರಾಗಿ ಮಳೆ ಬಂದಾಗ ಗಂಗಾ ನಾಲೆ ತುಂಬಿ ಹಾಜಿಪುರಕ್ಕೆ ಹರಿದುಬರುತ್ತದೆ. ಮನೆ ಒಳಗೆ ನೀರು. ಜನರಿಗೆ ಸಾಕಾಗಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಜಿಪುರದಲ್ಲಿ ಗಾಂಧಿ ಆಶ್ರಮ ವೊಂದಿದೆ.

ಒಳಭಾಗದಲ್ಲಿ 1961ರಲ್ಲಿ ಆಯ್ಕೆಯಾದ ಬಿಹಾರದ ೨ನೇ ಮುಖ್ಯಮಂತ್ರಿ ದೀಪ್ ನಾರಾಯಣ ಸಿಂಗ್ ಅವರ ಸ್ಮಾರಕವೂ ಇದೆ. ಗಾಂಧೀಜಿಯವರ ಅಸಹಕಾರ ಚಳವಳಿಗೆ ಸಂಬಂಧಿಸಿ ವೈಶಾಲಿ ಮತ್ತು ಹಾಜಿಪುರದ ಆಶ್ರಮದಲ್ಲಿ ಮಹತ್ವದ ಸಭೆಗಳು ನಡೆದಿದ್ದವು. ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ನೆಲೆ ಈ ಹಾಜಿಪುರ. ವಿಪರ್ಯಾಸ ಎಂದರೆ, ಈಗ ಈ ಗಾಂಧಿ ಆಶ್ರಮ ಯಾರಿಗೂ ಬೇಡವಾಗಿದೆ.

ಸುತ್ತಮುತ್ತ ಗಲೀಜು, ಚರಂಡಿ, ಕಸಕಡ್ಡಿಗಳು ತುಂಬಿವೆ. ನಗರ ನಿಗಮ ಕಸ ಇಲ್ಲಿ ಹಾಕಿ ಎಂಬ ದೊಡ್ಡ ಬೋರ್ಡ್ ಹಾಕಿದ್ದರೂ, ತ್ಯಾಜ್ಯ ಹಾಕಲು ಯಾವುದೇ ವ್ಯವಸ್ಥೆ ಇಲ್ಲ. ಗಾಂಧೀಜಿಯ ಸ್ವಚ್ಛತೆ ಪರಿಕಲ್ಪನೆಯನ್ನೇ ಅವಮಾನಿಸುವಂತಿದೆ ಆಶ್ರಮದ ಪರಿಸರ.

‘ನಮ್ಮ ಹಾಜಿಪುರ ಕೂಡ ಸ್ವಚ್ಛವಾಗಬೇಕು’ ಎಂದು ಬಯಸುವ ಮನೋಜ್ ಕುಶ್ವಾಹ, ‘ಕರ್ನಾಟಕ ದವರಾದ ನಿಮಗೆ ಇಲ್ಲಿನ ಗಲೀಜು ನೋಡಿ ವಾಕರಿಕೆ ಬರುತ್ತಿರಬಹುದು. ನಮ್ಮ ಹಣೆಬರಹ ಹೀಗಿದೆ ನೋಡಿ’ ಎಂದು ಆಶ್ರಮದಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುತ್ತಾ ಹತಾಶರಾದರು.ಅಲ್ಲಿಂದ ಹೊರ ಬಂದು ವಾಪಸ್ ಪಟ್ಟಣದೊಳಗೆ ಪ್ರವೇಶಿಸುತ್ತಿದ್ದಂತೆಯೇ ರಸ್ತೆಗಳನ್ನು ತೋರಿಸಿದ ರವೀಂದ್ರ ಪ್ರಸಾದ್, ‘ಹಾಳಾದ ರಸ್ತೆಯೇ ನಮಗೆ ಚುನಾವಣೆ ವಿಷಯ.

ನಾವು ಬದಲಾವಣೆಗೆ ಮತ ಹಾಕುತ್ತಿದ್ದೇವೆ. ಕೇಂದ್ರ ಸಚಿವ ಗಡ್ಕರಿ ಅವರು ದೇಶದೆಡೆ ರಸ್ತೆ ಮಾಡಿರಬಹುದು. ಆದರೆ ನಮ್ಮ ಹಾಜಿಪುರ ಸ್ಥಿತಿ ಕೇಳಬೇಡಿ’ ಎಂದು ಕಿಡಿಕಾರಿದರು. ಗಂಗಾ ನಾಲೆಯಲ್ಲಿ ನೀರು ತುಂಬಿದರಂತೂ ಹಾಜಿಪುರ ನಿವಾಸಿಗಳ ಸ್ಥಿತಿ ಹೇಳತೀರದು.

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅವಧೇಶ್ ಕುಮಾರ್ ವಿರುದ್ಧ ಆರ್‌ಜೆಡಿಯ ದೇವ್ ಕುಮಾರ್ ಚೌರಾಸಿಯಾ ಇಲ್ಲಿ ಕೇವಲ 3000 ಮತಗಳಿಂದ ಸೋತರು. ಅವಧೇಶ್ ಕುಮಾರ್ ಈ ಸಲವೂ ಎನ್ ಡಿಎ ಅಭ್ಯರ್ಥಿ. ಈ ಬಾರಿ ಹೆಚ್ಚಿರುವ ಜನವಿರೋಧಿ ಅಲೆ ನೋಡಿದರೆ ಪಾಸ್ವಾನ್ ಭದ್ರಕೋಟೆ ಹಾಜಿಪುರ ವಿಧಾನಸಭೆ ಕ್ಷೇತ್ರದಲ್ಲಿ ದೇವ್ ಚೌರಾಸಿಯ ಅವರೇ ಗೆಲುವಿನ ನಗೆ ಬೀರಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ವೈಶಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ಆರ್‌ಜೆಡಿ: ಹಾಜಿಪುರದ ಬಳಿಕ ಸಿಗುವ ವೈಶಾಲಿ ಜೈನ ಧರ್ಮದ ೨೪ನೇ ತೀರ್ಥಂಕರ ಮಹಾವೀರರು ಜನಿಸಿದ ನಾಡು. ಇಲ್ಲಿನ ಮಹಾವೀರ ಮಂದಿರ ಜೈನರ ಯಾತ್ರಾಸ್ಥಳ. ಅದೇ ರೀತಿ ಬೌದ್ಧ ಧರ್ಮದ ಗೌತಮ ಬುದ್ಧನ ಕಾರ್ಯಸ್ಥಳವೂ ವೈಶಾಲಿ. ಹೀಗಾಗಿ, ಇಂಡೋನೇಷ್ಯಾ, ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳ ಪ್ರವಾಸಿಗರು ಇಲ್ಲಿಗೆ ಬರುತ್ತಿರು ತ್ತಾರೆ. ಬೌದ್ಧ ಸ್ತೂಪಗಳಿರುವ ಪ್ರವಾಸಿ ಸ್ಥಳಗಳಲ್ಲಿ ಸಣ್ಣಮಟ್ಟಿನ ಅಭಿವೃದ್ಧಿ ಹಾಗೂ ಸ್ವಚ್ಛತೆ ಕಂಡು ಬರುವುದು ಬಿಟ್ಟರೆ ಉಳಿದಂತೆ, ವೈಶಾಲಿಯಲ್ಲಿ ಮೂಲಸೌಕರ್ಯದ್ದೇ ದೊಡ್ಡ ಸಮಸ್ಯೆ. ಹಾಜಿಪುರದಂತೆ, ಗುಣಮಟ್ಟದ ಆಸ್ಪತ್ರೆ, ಕಾಲೇಜುಗಳಿಲ್ಲ ಎನ್ನುವುದು ಜನರ ಗೋಳು. ಇಂತಿಪ್ಪ ವೈಶಾಲಿ ಕ್ಷೇತ್ರದಲ್ಲಿ ಈ ಬಾರಿ ‘ಮಹಾಘಟಬಂಧನ್’ ಅಭ್ಯರ್ಥಿಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ!

‘ಇಂಡಿ’ ಒಕ್ಕೂಟದ ಅಭ್ಯರ್ಥಿ ಘೋಷಣೆಗೆ ಮುನ್ನವೇ ಭೂಮಿಹಾರ್ ಸಮುದಾಯದ ಸಂಜೀವ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಆರ್‌ಜೆಡಿಯಿಂದ ಕುಶ್ವಾಹ ಸಮುದಾಯದ ಅಜಯ್ ಕುಶ್ವಾಹ ಕಣದಲ್ಲಿದ್ದಾರೆ. ಜೆಡಿಯುನ ಸಿದ್ಧಾರ್ಥ್ ಪಟೇಲ್ ಹಾಲಿ ಶಾಸಕ ಮತ್ತು ಎನ್‌ಡಿಎ ಅಭ್ಯರ್ಥಿ. ಅವರು ನಿತೀಶ್ ಕುಮಾರ್ ಪ್ರತಿನಿಧಿಸುವ ಕುರ್ಮಿ ಜನಾಂಗಕ್ಕೆ ಸೇರಿದವರು. ಎಲ್‌ಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಆರ್‌ಜೆಡಿ ಸೇರಿದ ಅಜಯ್ ಕುಶ್ವಾಹಗೆ ಟಿಕೆಟ್ ಕೊಡುವ ಚರ್ಚೆ ಇದ್ದುದರಿಂದಲೇ ಕಾಂಗ್ರೆಸ್ ನ ಸಂಜೀವ್ ಕುಮಾರ್ ಅಭ್ಯರ್ಥಿ ಘೋಷಣೆ ವರೆಗೂ ಕಾಯದೆ ಮೊದಲೇ ನಾಮಪತ್ರ ಸಲ್ಲಿಸಿದರು.

ಜನ ಸುರಾಜ್ ಪಕ್ಷದಿಂದ ಕೂಡ ಭೂಮಿಹಾರ್ ಸಮುದಾಯದ, ನಿವೃತ್ತ ವೈದ್ಯ ಡಾ. ಸುನೀಲ್ ಕುಮಾರ್ ಸಿಂಗ್ ಅಭ್ಯರ್ಥಿ ಆಗಿದ್ದಾರೆ. ಹಾಗಾಗಿ ಮೇಲ್ವರ್ಗದ ಭೂಮಿಹಾರ್ ಮತಗಳ ವಿಭಜನೆ ಎನ್‌ಡಿಎಗೆ ಹಾನಿ ಮಾಡುವ ಲಕ್ಷಣ ಕಾಣುತ್ತಿದೆ.

ಸುಮಾರು 65 ಸಾವಿರದಷ್ಟು ಕುರ್ಮಿ ಜನರಿದ್ದರೂ, 58 ಸಾವಿರ ಯಾದವ, 32 ಸಾವಿರ ಮುಸ್ಲಿಂ, ೨೦ ಸಾವಿರ ನಿಷಾದ್ (ಬೆಸ್ತ) ಸಮುದಾಯದ ಮತಗಳ ಒಗ್ಗೂಡುವಿಕೆ ಮಧ್ಯೆ ಸಂಜೀವ್ ಕುಮಾರ್, ಡಾ. ಸುನೀಲ್ ಕುಮಾರ್ ಸಿಂಗ್ ಎನ್‌ಡಿಎಯ ಭೂಮಿಹಾರ್ ಮತಗಳನ್ನು ಸೆಳೆಯಬಲ್ಲರು.

ಹೀಗಾಗಿ, ಮಹಾಘಟಬಂಧನ್ ನಡುವೆ ಸ್ಪರ್ಧೆ ಏರ್ಪಟ್ಟರೂ, ಕಾಂಗ್ರೆಸ್ ಅಭ್ಯರ್ಥಿ ಭೂಮಿಹಾರ್ ಆಗಿರುವುದರಿಂದ ಆರ್‌ಜೆಡಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ವೈಶಾಲಿಯ ತುರ್ಕಹಿಯಾ ಬಸ್ತಿ ಎಂಬ ಗ್ರಾಮೀಣ ಭಾಗದ ನಿವಾಸಿ ಜಯಪ್ರಕಾಶ್ ಯಾದವ್ ಹೇಳುತ್ತಾರೆ.

ದೊಡ್ಡಪ್ಪನೇ ವೈರಿ: ಇದೆಲ್ಲಕ್ಕಿಂತ ಮುಖ್ಯವಾಗಿ, ಹಿಂದೆ ನಿತೀಶ್ ಸರಕಾರದಲ್ಲಿ ಶಿಕ್ಷಣ ಮತ್ತು ಪರಿಸರ ಮಂತ್ರಿಯಾಗಿದ್ದ ವೃಷಿಣ್ ಪಟೇಲ್ (ಸಿದ್ಧಾರ್ಥ ಪಟೇಲ್ ದೊಡ್ಡಪ್ಪ) ಪಕ್ಷೇತರರಾಗಿ ಇಲ್ಲಿಂದ ಸ್ಪರ್ಧೆ ಮಾಡುತ್ತಿದ್ದಾರೆ. ವೈಶಾಲಿ ಕ್ಷೇತ್ರದಿಂದ ೫ ಬಾರಿ ಶಾಸಕ, ರಾಜ್ಯದಲ್ಲಿ ೩ ಬಾರಿ ಮಂತ್ರಿ ಹಾಗೂ ಒಮ್ಮೆ ಸಂಸದರಾಗಿದ್ದ ವೃಷಿಣ್ ಪಟೇಲ್, 2020ರ ಚುನಾವಣೆಯಲ್ಲಿ ತಮ್ಮ ಸೋದರನ ಪುತ್ರ ಸಿದ್ದಾರ್ಥ ಪಟೇಲ್‌ರನ್ನು ಬೆಂಬಲಿಸಿದ್ದರು. ಆದರೆ, ನಂತರ ಜಮೀನು ವಿವಾದ ಉಂಟಾಗಿದ್ದರಿಂದ ಈ ಬಾರಿ ಸಿzರ್ಥನನ್ನು ಸೋಲಿಸಲೇಬೇಕು ಎಂದು ಚುನಾವಣಾ ಅಖಾಡಕ್ಕಿಳಿ ದಿದ್ದಾರೆ.‌

‘ಜನರಿಗಾಗಿ ನಾನು ನಿಸ್ವಾರ್ಥದಿಂದ ಕೆಲಸ ಮಾಡಿದೆ. ಆದರೆ ಸಿzರ್ಥ ಪಟೇಲ್ ಎಲ್ಲಾ ಕೆಲಸಕ್ಕೂ ಹಣ ತೆಗೆದುಕೊಂಡು ಜನರಿಗೆ ತೊಂದರೆ ಉಂಟು ಮಾಡಿದ್ದಾನೆ’ ಎಂದೇ ಪ್ರಚಾರ ಮಾಡುತ್ತಾ, ಸಿದ್ಧಾರ್ಥರನ್ನು ಸೋಲಿಸಲೇಬೇಕೆಂದು ವೃಷಿಣ್ ಪಟೇಲ್ ಪಣತೊಟ್ಟಿದ್ದಾರೆ.

ಭೂಮಿಹಾರರು ಬದಲಾದ ಬಗೆ: 1990ರ ದಶಕದ ತನಕ ಬಿಹಾರದ ಮೇಲ್ಜಾತಿಯ ಭೂಮಿ ಹಾರರು ಕಾಂಗ್ರೆಸ್ ಜತೆಗಿದ್ದರು. ಆದರೆ, ಮಂಡಲ್ ಆಯೋಗದ ವರದಿ ನಂತರ ಬದಲಾದ ರಾಜಕೀಯ ಚಿತ್ರಣ ಬಿಹಾರದ ಭೂಮಿಹಾರರನ್ನು ನಿಧಾನವಾಗಿ ಬಿಜೆಪಿ ಕಡೆ ಪರಿವರ್ತನೆಯಾಗು ವಂತೆ ಮಾಡಿತು.

1995ರ ನಂತರದಲ್ಲಿ ಭೂಮಿಹಾರ್ ಸಮುದಾಯ ಎನ್‌ಡಿಎ ಮೈತ್ರಿಕೂಟದ ಅತಿದೊಡ್ಡ ಮತಬ್ಯಾಂಕ್ ಆಗಿದೆ. ವೈಶಾಲಿ ವಿಧಾನಸಭೆ ಕೂಡ ಇಂಥದ್ದೇ ಬದಲಾವಣೆಗೆ ಸಾಕ್ಷಿಯಾಗಿ ನಿಂತಿದೆ. 197ರಿಂದ 1992ರ ತನಕ ಭೂಮಿಹಾರರೇ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 1967ರಿಂದ ೩ ಬಾರಿ ಆಯ್ಕೆಯಾದ ಲಲಿತೇಶ್ವರ್ ಶಾಹಿ, ನಂತರದಲ್ಲಿ ಅವರ ಪುತ್ರ ಹೇಮಂತ್ ಶಾಹಿ, ಅವರ ನಿಧನದ ನಂತರ ಶಾಸಕಿಯಾದ ಪತ್ನಿ ವೀಣಾ ಶಾಹಿಗೆ ಭೂಮಿಹಾರರದ್ದೇ ಪೂರ್ಣ ಬೆಂಬಲವಿತ್ತು. ಆದರೆ 1995ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ್ನು ತಿರಸ್ಕರಿಸಿದ ಭೂಮಿಹಾರರು, ಅದೇ ಸಮುದಾಯದ ಜನತಾದಳ ಪಕ್ಷದ ರಾಜ್‌ಕಿಶೋರ್ ಸಿಂಗ್ ಅವರನ್ನು ಆಯ್ಕೆ ಮಾಡಿದರು.

೪ ಎನ್‌ಡಿಎ, ೪ ‘ಇಂಡಿ’ಗೆ

ವೈಶಾಲಿ ಭಾಗದಲ್ಲಿ ವೈಶಾಲಿ ವಿಧಾನಸಭೆ ಜತೆಗೆ ಮಹುವಾ, ಹಾಜಿಪುರ, ಲಾಲ್‌ಗಂಜ್, ಮಹನಾರ್, ರಾಜಾಪರ್ಕ, ಫತೇಪುರ್, ರಾಘವಪುರ ಸೇರಿ ೮ ಕ್ಷೇತ್ರಗಳಿವೆ. ಇದರಲ್ಲಿ ೪ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಉಳಿದ ೪ರಲ್ಲಿ ಮಹಾಘಟಬಂಧನ್ ಶಾಸಕರಿದ್ದಾರೆ.

ತೇಜಸ್ವಿ ಯಾದವ್ ಸ್ಪರ್ಧಿಸುವ ರಾಘವಪುರ ಮತ್ತು ಸೋದರ ತೇಜ್ ಪ್ರತಾಪ್ ಯಾದವ್, ಹೊಸದಾಗಿ ಆರಂಭಿಸಿದ ‘ಜನಶಕ್ತಿ ಜನತಾದಳ’ ಪಕ್ಷದಿಂದ ಸ್ಪರ್ಧಿಸುತ್ತಿರುವ ಮಹುವಾ ಕ್ಷೇತ್ರಗಳೂ ವೈಶಾಲಿ ಜಿಯ ವ್ಯಾಪ್ತಿಯ ಇವೆ. ಸೋದರ ತೇಜಸ್ವಿ ಯಾದವ್ ಸೋಲಬೇಕೆಂದೇ ರಾಘವಪುರ ದಲ್ಲೂ ‘ಜನಶಕ್ತಿ ಜನತಾದಳ ಪಕ್ಷ’ದ ಅಭ್ಯರ್ಥಿಯನ್ನು ತೇಜ್ ಪ್ರತಾಪ್ ಕಣಕ್ಕಿಳಿಸಿದ್ದಾರೆ.

*

ಹಾಜಿಪುರ ಮತ್ತು ಬಿಹಾರದಲ್ಲಿ ಬದಲಾವಣೆ ಬೇಕು. ಯುವಕರ ನಾಯಕತ್ವಕ್ಕಾಗಿ ನನ್ನ ಮತ ಲಾಲ್ಟೇನ"ಗೆ (ಕಂದೀಲು-ಒಈ ಚಿಹ್ನೆ). ಬಿಹಾರಕ್ಕೆ ಮೋದಿ-ನಿತೀಶ್ ಬೇಕಾಗಿಲ್ಲ.

- ಕದಮ್ ರಸೂಲ, ಹಾಜಿಪುರ

ನಾವು ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಜತೆಗಿದ್ದೇವೆ. ಎನ್ಡಿಎ ಬಂದ ಬಳಿಕ ಬಿಹಾರ ಬದಲಾಗಿದೆ. ಇಲ್ಲದಿದ್ದರೆ ಈ ಇಳಿಸಂಜೆ ೬ ಗಂಟೆಗೆ ಮನೆಯಿಂದ ಹೊರಬಂದು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಿರುತ್ತಿತ್ತಾ?

- ಜಗ್ಗು ಪಾಂಡೆ ಮತ್ತು ಮುಸಾಫಿರ್ ಪಾಸ್ವಾನ್

ಹಾಜಿಪುರದ ಹರೌಲಿ ಗ್ರಾಮಸ್ಥರು